05 ಮಾರ್ಚ್
2019,
ಮಂಗಳವಾರ, ಶಿಲುಬೆಯ ಸಂತ ಜಾನ್ ಜೋಸೆಫ್
ಮಂಗಳವಾರ, ಶಿಲುಬೆಯ ಸಂತ ಜಾನ್ ಜೋಸೆಫ್
ಮೊದಲವಾಚನ:
ಸಿರಾಖ 35: 1-12
ಸಿರಾಖ 35: 1-12
1ಧರ್ಮಶಾಸ್ತ್ರ-ಬಲಿಯರ್ಪಣೆ ಧರ್ಮಶಾಸ್ತ್ರವನ್ನು ಅನುಸರಿಸುವವನು ಕಾಣಿಕೆಗಳನು ಹೆಚ್ಚಾಗಿ ಅರ್ಪಿಸಿದವನಂತೆ ಆಜ್ಞೆಗಳನ್ನು ಕೈಗೊಳ್ಳುವವನು ಶಾಂತಿ ಸಮಾಧಾನದ ಬಲಿಯರ್ಪಿಸಿದವನಂತೆ. 2ಪ್ರತ್ಯುಪಕಾರ ಮಾಡುವವನು ಗೋದಿಹಿಟ್ಟನ್ನು ನೈವೇದ್ಯ ಮಾಡಿದವನಂತೆ ದಾನಧರ್ಮ ಮಾಡುವವನು ಸ್ತುತಿಬಲಿಯನ್ನು ಅರ್ಪಿಸಿದವನಂತೆ. 3ದುಷ್ಟತನವನು ಬಿಟ್ಟುಬಿಡುವುದು, ಸರ್ವೇಶ್ವರನಿಗೆ ಸುಪ್ರೀತ ಅಧರ್ಮವನು ಬಿಟ್ಟುಬಿಡುವುದು ಪಾಪಕ್ಕೆ ಪ್ರಾಯಶ್ಚಿತ್ತ. 4ಸರ್ವೇಶ್ವರನ ಸನ್ನಿಧಿಯನು ಸೇರಬಾರದು ಬರಿಗೈಯಿಂದ, ಇವುಗಳನ್ನೆಲ್ಲ ಮಾಡಬೇಕಾಗಿದೆ ಆತನ ಆಜ್ಞೆಯ ನಿಮಿತ್ತ. 5ಸರ್ವೇಶ್ವರನ ಸನ್ನಿಧಿಯನು ಸೇರಬಾರದು ಬರಿಗೈಯಿಂದ, ಇವುಗಳನ್ನೆಲ್ಲ ಮಾಡಬೇಕಾಗಿದೆ ಆತನ ಆಜ್ಞೆಯ ನಿಮಿತ್ತ.
6ನೀತಿವಂತನ ಅರ್ಪಣೆ ಒಂದು ಅಲಂಕಾರ ಯಜ್ಞವೇದಿಕೆ ಅದರ ಸುವಾಸನೆ ಏರುವುದು ಮಹೋನ್ನತನ ಸನ್ನಿಧಿಗೆ. 7ಸಮರ್ಪಕವಾಗಿರುವುದು ನೀತಿವಂತ ನೀಡುವ ಬಲಿಕಾಣಿಕೆ ಮರೆತುಹೋಗುವುದಿಲ್ಲ ಅದರ ಸ್ಮರಣೆ. 8ಉದಾರದೃಷ್ಟಿಯಿಂದ ಸರ್ವೇಶ್ವರನನು ಮಹಿಮೆಪಡಿಸು ಕಡಿಮೆಮಾಡಬೇಡ ನಿನ್ನ ಕೈಯ ಪ್ರಥಮ ಫಲಗಳನು. 9ಕಾಣಿಕೆ ಕೊಡುವಾಗಲೆಲ್ಲ ಹಸನ್ಮುಖಿಯಾಗಿರು ಸಂತೋಷದಿಂದ ದಶಮಾಂಶವನು ಸಲ್ಲಿಸು. 10ಮಹೋನ್ನತನು ನಿನಗೆ ಕೊಟ್ಟ ಪ್ರಮಾಣಕ್ಕೆ ಕೊಡು ನಿನ್ನ ಕೈ ಗಳಿಸಿದ ಪ್ರಮಾಣಕ್ಕೆ ಸರಿಯಾಗಿ ಒಳ್ಳೇ ದೃಷ್ಟಿಯಿಂದ ಕೊಡು. 11ಏಕೆಂದರೆ ಸರ್ವೇಶ್ವರ ಪ್ರತಿಫಲ ನೀಡುವನು ಏಳ್ಮಡಿಯಾಗಿ ನಿನಗೆ ಕೊಡುವನು. 12ದೈವನೀತಿ ಲಂಚದೋಪಾದಿ ಕಾಣಿಕೆ ತರಬೇಡ, ಆತನು ಅವುಗಳನ್ನು ಅಂಗೀಕರಿಸುವುದಿಲ್ಲ ಅಕ್ರಮವಾದ ಬಲಿಯ ಮೇಲೆ ಮನಸ್ಸಿಡಬೇಡ, ಆತ ನ್ಯಾಯಾಧೀಶ, ಆತನಲ್ಲಿ ಮುಖದಾಕ್ಷಿಣ್ಯವಿಲ್ಲ.
ಕೀರ್ತನೆ 50: 5-6, 7-8, 14, 23
ಸನ್ಮಾರ್ಗ ಹಿಡಿವವನಿಗೆ ತೋರುವೆ ಪರಮ ಜೀವೋದ್ಧಾರವನು
“ಬಲಿ ಮೂಲಕ ಒಡಂಬಡಿಕೆ ಗೈದ ಭಕ್ತರನು ಸಭೆ ಸೇರಿಸಿ ಇಲ್ಲೆನ್ನ ಮುಂದೆ,” ಎನ್ನುತಿಹನು
ದೇವನೇ ಸತ್ಯಸ್ವರೂಪಿ, ನ್ಯಾಯಾಧಿಪತಿ ಇದನು ಸಾರಿ ಹೇಳಲಿ ಆಕಾಶ ಪ್ರಕೃತಿ
“ಎಲೈ ಪ್ರಜೆ ಇಸ್ರಯೇಲ್, ನಾನು ನಿನ್ನ ದೇವರು ಕಿವಿಗೊಟ್ಟು ಆಲಿಸು ನಾನು ನಿನ್ನ ವಿರುದ್ಧ ವಾದಿಸುವುದನು
ನಿನ್ನ ಬಲಿಯರ್ಪಣೆಯನು ನಾ ತಪ್ಪೆಣಿಸುತಿಲ್ಲ ನಿನ್ನ ಮುಂದಿವೆ ಸತತ ನಿನ್ನ ದಹನ ಬಲಿಗಳೆಲ್ಲ
ದೇವರಿಗೆ ಧನ್ಯವಾದವೆ ನಿನ್ನ ಬಲಿಯರ್ಪಣೆಯಾಗಿರಲಿ ಪರಾತ್ಪರನಿಗೆ ಮಾಡಿದ ಹರಕೆಗಳು ಸಮರ್ಪಿತವಾಗಲಿ
ಧನ್ಯವಾದದ ಬಲಿಯನರ್ಪಿಸುವವನೇ ನನಗೆ ಸನ್ಮಾನಿತನು ಸನ್ಮಾರ್ಗ ಹಿಡಿವವನಿಗೆ ತೋರುವೆ ಪರಮ ಜೀವೋದ್ಧಾರವನು
ಶುಭಸಂದೇಶ:
ಮಾರ್ಕ 10: 28-31
ಮಾರ್ಕ 10: 28-31
28ಆಗ ಪೇತ್ರನು ಮುಂದೆ ಬಂದು, ನೋಡಿ, ನಾವು
ಎಲ್ಲವನ್ನೂ ಬಿಟ್ಟುಬಿಟ್ಟು ನಿಮ್ಮನ್ನು ಹಿಂಬಾಲಿಸಿದ್ದೇವಲ್ಲ, ಎಂದನು. 29ಆಗ ಯೇಸು,
ನಾನು ನಿಶ್ಚಯವಾಗಿ ಹೇಳುತ್ತೇನೆ: ಯಾರಾದರೂ ನನ್ನ ನಿಮಿತ್ತ ಹಾಗೂ ಶುಭಸಂದೇಶದ ನಿಮಿತ್ತ ಮನೆಯನ್ನಾಗಲಿ, ಅಣ್ಣತಮ್ಮಂದಿರನ್ನಾಗಲಿ, ಅಕ್ಕತಂಗಿಯರನ್ನಾಗಲಿ, ತಾಯಿಯನ್ನಾಗಲಿ, ತಂದೆಯನ್ನಾಗಲಿ, ಮಕ್ಕಳನ್ನಾಗಲಿ, ಹೊಲಗದ್ದೆಗಳನ್ನಾಗಲಿ ತ್ಯಜಿಸುತ್ತಾನೋ ಅವನು, 30ಈ ಕಾಲದಲ್ಲೇ ಮನೆ, ಅಣ್ಣತಮ್ಮ,
ಅಕ್ಕತಂಗಿ, ತಾಯಿ, ಮಕ್ಕಳು, ಹೊಲಗದ್ದೆ
ಇವೆಲ್ಲವನ್ನೂ ನೂರ್ಮಡಿಯಷ್ಟು ಪಡೆಯುವನು. ಇವುಗಳೊಂದಿಗೆ
ಹಿಂಸೆಯನ್ನೂ ಅನುಭವಿಸಬೇಕಾಗುವುದು; ಅದಲ್ಲದೆ
ಮುಂದಿನ ಲೋಕದಲ್ಲಿ ಅಮರ ಜೀವವನ್ನು ಪಡೆಯುವನು.
31ಆದರೆ ಮೊದಲನೆಯವರಲ್ಲಿ ಅನೇಕರು ಕಡೆಯವರಾಗುವರು; ಕಡೆಯವರಲ್ಲಿ ಅನೇಕರು ಮೊದಲಿನವರಾಗುವರು, ಎಂದರು.
ಚಿಂತನೆ: ಫಲಾಪೇಕ್ಷೆ
ಮಾನವನ ಸಹಜ ಗುಣ. ಈ ಸಹಜ ಗುಣವನ್ನು ಮೀರಿ, ಎಲ್ಲಾ
ಸ್ವಾರ್ಥದ ಎಲ್ಲೆಗಳನ್ನು ದಾಟಿದಾಗ ಮಾತ್ರ ದೇವರಿಗೆ ಮೆಚ್ಚಿಗೆಯಾದವರಾಗಲು ಸಾಧ್ಯ. ಆದನ್ನೇ
ಪ್ರಭು ಇಂದಿನ ಶುಭಸಂದೇಶದಲ್ಲಿ ಸ್ಪಷ್ಟಪಡಿಸುತ್ತಾ ಎಲ್ಲಕ್ಕಿಂತಲೂ ಮಿಗಿಲಾಗಿ ದೇವರನ್ನು
ಪ್ರೀತಿಸುವವನಿಗೆ ಈ ಲೋಕದಲ್ಲಿ ನೂರ್ಮಡಿಯಷ್ಟು ಹಾಗೂ ಮುಂದಿನ ಲೋಕದಲ್ಲಿ ಅಮರ ಜೀವನವೂ
ಲಭಿಸುತ್ತದೆ ಎನ್ನುತ್ತಾರೆ. ಇದು ನಮ್ಮ ವಿಶ್ವಾಸದ ಪ್ರಗತಿಯಿಂದ ಮಾತ್ರ ಸಾಧ್ಯ. ವಿಶ್ವಾಸ
ದೃಢವಾದಷ್ಟು ದೇವರೊಂದಿಗಿನ ಅನುಬಂಧವೂ ಸಹ ಬಲಗೊಳ್ಳುತ್ತದೆ.
ಚಿತ್ರ: ಗೂಗಲ್ ಕೃಪೆ
ಚಿತ್ರ: ಗೂಗಲ್ ಕೃಪೆ
© 'ದನಿ' ಮಾಧ್ಯಮ ಮನೆ
No comments:
Post a Comment