Showing posts with label ಪವಿತ್ರ ಜಪಸರ. Show all posts
Showing posts with label ಪವಿತ್ರ ಜಪಸರ. Show all posts

Sunday, 10 February 2019

ಪವಿತ್ರ ಜಪಸರ







ಜಪಸರದ ರಹಸ್ಯಗಳು 
ಸಂತೋಷದ ರಹಸ್ಯಗಳು 



೧. ಗಬ್ರಿಯೆಲ್ ದೂತನು ಮರಿಯಮ್ಮನವರಿಗೆ ಮಂಗಳವಾರ್ತೆಯನ್ನು ಹೇಳಿದನು. 


೨. ದೇವಮಾತೆಯು ಸಂತ ಎಲಿಸಬೇತರನ್ನು ಸಂಧಿಸಿದರು. 



೩. ಯೇಸು ದನದ ಕೊಟ್ಟಿಗೆಯಲ್ಲಿ ಜನಿಸಿದರು. 




೪. ಯೇಸು ಬಾಲರನ್ನು ದೇವಾಲಯದಲ್ಲಿ ಕಾಣಿಕೆಯಾಗಿ ಒಪ್ಪಿಸಿದರು. 




೫. ಮೂರು ದಿವಸ ಕಾಣದೆಹೋದ ಯೇಸುಬಾಲರು ದೇವಾಲಯದಲ್ಲಿ ಸಿಕ್ಕಿದರು.




ದುಃಖದ ರಹಸ್ಯಗಳು 


೧. ಯೇಸು ಗೆತ್ಸೆಮನಿ ತೋಪಿನಲ್ಲಿ ರಕ್ತದ ಬೆವರನ್ನು ಸುರಿಸಿದರು. 


೨. ಯೇಸುವನ್ನು ಕಲ್ಲಿನ ಕಂಬಕ್ಕೆ ಕಟ್ಟಿ ಚಾಟಿಗಳಿಂದ ಹೊಡೆದರು. 



೩. ಯೇಸುವಿನ ಶಿರಸ್ಸಿಗೆ ಮುಳ್ಳಿನ ಕಿರೀಟವನ್ನು ತೊಡಿಸಿದರು. 



೪. ಯೇಸು ಶಿಲುಬೆಯನ್ನು ಹೊತ್ತುಕೊಂಡು ಕಪಾಲ ಬೆಟ್ಟವನ್ನು ಹತ್ತಿದರು. 



೫. ಯೇಸು ಶಿಲುಬೆಯ ಮೇಲೆ ನಮಗಾಗಿ ಪ್ರಾಣತ್ಯಾಗ ಮಾಡಿದರು. 



ಬೆಳಕಿನ ರಹಸ್ಯಗಳು 



೧. ಯೇಸುಸ್ವಾಮಿ ಜೋರ್ದನ್ ನದಿಯಲ್ಲಿ ದೀಕ್ಷಾಸ್ನಾನ ಪಡೆದರು. 



೨. ಯೇಸುಸ್ವಾಮಿ ಕಾನಾ ನಗರದ ಮದುವೆ ಕೂಟದಲ್ಲಿ ತಮ್ಮ ಮಹಿಮೆಯನ್ನು ಪ್ರಕಟಪಡಿಸಿದರು. 


೩. ಯೇಸುಸ್ವಾಮಿ ಸ್ವರ್ಗಸಾಮ್ರಾಜ್ಯದ ಬಗ್ಗೆ ಸಾರುತ್ತಾ, ಪಾಪದಿಂದ ಮುಕ್ತರಾಗಲು ಕರೆ ನೀಡಿದರು. 



೪. ಯೇಸುಸ್ವಾಮಿ ತಾಬೋರ್ ಬೆಟ್ಟದ ಮೇಲೆ ತಮ್ಮ ದೈವರೂಪ ತೋರಿಸಿದರು.


೫. ಯೇಸುಸ್ವಾಮಿ ಪರಮ ಪ್ರಸಾದವನ್ನು ಸ್ಥಾಪಿಸಿದರು. 


ಮಹಿಮೆಯ ರಹಸ್ಯಗಳು

೧. ಮೃತರಾದ ಯೇಸು ಮೂರನೆಯ ದಿನ ಪುನರುತ್ಥಾನರಾದರು. 


೨. ಪುನರುತ್ಥಾನದ ನಂತರ ನಲ್ವತ್ತನೆಯ ದಿನ ಯೇಸು ಸ್ವರ್ಗಕ್ಕೆ ಆರೋಹಣರಾದರು.

೩. ಪವಿತ್ರಾತ್ಮತು ಪ್ರೇಷಿತರ ಮೇಲೆ ಇಳಿದು ಬಂದರು. 


೪. ದೇವಮಾತೆ ಸ್ವರ್ಗಕ್ಕೆ ಏರಿಸಲ್ಪಟ್ಟರು. 



೫. ದೇವಮಾತೆ ಸ್ವರ್ಗದ ಹಾಗೂ ಸಕಲ ಸಂತರ ರಾಣಿಯಾಗಿ ಕಿರೀಟಧಾರಿಣಿಯಾದರು. 




ಪ್ರತಿಯೊಂದು ರಹಸ್ಯದ ನಂತರ: ಓ ನನ್ನ ಯೇಸುವೇ, ನಮ್ಮ ಪಾಪಗಳನ್ನು ಕ್ಷಮಿಸಿರಿ, ನರಕದ ಬೆಂಕಿಯಿಂದ ನಮ್ಮನ್ನು ಕಾಪಾಡಿರಿ, ವಿಶೇಷವಾಗಿ ನಿಮ್ಮ ದಯೆಯನ್ನು ಅಪೇಕ್ಷಿಸುವ ಎಲ್ಲಾ ಆತ್ಮಗಳನ್ನು ಮೋಕ್ಷರಾಜ್ಯಕ್ಕೆ ಸೇರಿಸಿಕೊಳ್ಳಿರಿ.
ನಮೋ ರಾಣಿಯೇ

ನಮೋ ರಾಣಿಯೇ, ದಯೆಯ ತಾಯಿಯೇ, ನಮ್ಮ ಜೀವವೇ, ಮಾಧುರ್ಯವೇ ಮತ್ತು ನಂಬಿಕೆಯೇ, ಏವೆಯ ಬಹಿಷ್ಕೃತ ಮಕ್ಕಳಾದ ನಾವು ನಿಮಗೆ ಮೊರೆಯಿಡುತ್ತೇವೆ. ಈ ಕಣ್ಣೀರ ಕಣಿವೆಯಲ್ಲಿ ಬಹಳ ಸಂಕಟದಿಂದ ಅತ್ತು ಪ್ರಲಾಪಿಸುತ್ತೇವೆ. ಆದುದರಿಂದ ನಮ್ಮ ಆಶ್ರಯವೇ, ನಿಮ್ಮ ಕೃಪಾಕಟಾಕ್ಷವನ್ನು ನಮ್ಮ ಮೇಲೆ ಇಡಿರಿ. ಮತ್ತು ಈ ದೇಶಾಂತರ ವಾಸವು ತೀರಿದ ಬಳಿಕ ನಿಮ್ಮ ಉದರದ ಧನ್ಯಫಲವಾದ ಯೇಸುವಿನ ದರ್ಶನವನ್ನು ನಮಗೆ ನೀಡಿರಿ. ದಯಾಪರಿಯೇ, ಪ್ರೀತಿಮಯಿಯೇ, ಮಧುರ ಕನ್ಯಾ ಮರಿಯಾ.

ಕ್ರಿಸ್ತರ ವಾಗ್ದಾನಗಳಿಗೆ ನಾವು ಪಾತ್ರರಾಗುವಂತೆ,

ಪರಿಶುದ್ಧ ದೇವಮಾತೆಯೇ, ನಮಗಾಗಿ ಪ್ರಾರ್ಥಿಸಿರಿ.



ಪ್ರಾರ್ಥಿಸೋಣ:

ಸರ್ವಶಕ್ತರೂ ನಿತ್ಯರೂ ಆಗಿರುವ ಸರ್ವೇಶ್ವರಾ, ಮಹಿಮಾಭರಿತ ಕನ್ಯಾಮಾತೆಯಾದ ಮರಿಯಮ್ಮನವರ ಆತ್ಮವನ್ನೂ ಶರೀರವನ್ನೂ ಪವಿತ್ರಾತ್ಮರ ಸಹಕಾರದಿಂದ ನಿಮ್ಮ ಪುತ್ರರಿಗೆ ಯೋಗ್ಯವಾದ ವಾಸಸ್ಥಾನವಾಗಿ ಮಾಡಿದಿರಿ, ಅಂಥ ಪರಿಶುದ್ಧ ಮಾತೆಯನ್ನು ಸಂತೋಷದಿಂದ ಸ್ಮರಿಸಿಕೊಳ್ಳುವ ನಮ್ಮನ್ನು ಅವರ ದಯಾಪರ ಬಿನ್ನಹಗಳ ಮೂಲಕ ಇಹಲೋಕದ ಕೇಡುಗಳಿಂದಲೂ ನಿತ್ಯಮರಣದಿಂದಲೂ ರಕ್ಷಿಸಬೇಕೆಂದು ನಮ್ಮ ಪ್ರಭು ಯೇಸುಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ, ಆಮೆನ್.

ಮರಿಯಮ್ಮನವರ ಮನವಿಮಾಲೆ

ಪ್ರಭುವೇ ದಯೆತೋರಿ

ಕ್ರಿಸ್ತರೇ ದಯೆತೋರಿ

ಪ್ರಭುವೇ ದಯೆತೋರಿ



ಕ್ರಿಸ್ತರೇ ನಮ್ಮನ್ನು ಆಲೈಸಿರಿ

ಕ್ರಿಸ್ರರೇ ನಮ್ಮ ಪ್ರಾರ್ಥನೆಯನ್ನು ಚೆನ್ನಾಗಿ ಆಲೈಸಿರಿ

ಪರಲೋಕದ ಪಿತ ದೇವರೇ, ನಮಗೆ ದಯೆತೋರಿ

ಲೋಕ ರಕ್ಷಕರಾದ ಸುತ ದೇವರೇ, ನಮಗೆ ದಯೆತೋರಿ

ಪವಿತ್ರಾತ್ಮ ದೇವರೇ, ನಮಗೆ ದಯೆತೋರಿ

ಪರಮತ್ರಿತ್ವರಾದ ಏಕದೇವರೇ, ನಮಗೆ ದಯೆತೋರಿ.



ಸಂತ ಮರಿಯಮ್ಮನವರೇ, ನಮಗಾಗಿ ಪ್ರಾರ್ಥಿಸಿರಿ.

ದೇವರ ಪರಿಶುದ್ಧ ತಾಯೇ,

ಕನ್ನಿಕೆಯರಲ್ಲಿ ಮಹಾ ಪರಿಶುದ್ಧ ಕನ್ನಿಕೆಯೇ,

ಕ್ರಿಸ್ತರ ತಾಯೇ,

ಧರ್ಮಸಭೆಯ ತಾಯೇ,

ದೇವಪ್ರಸಾದದ ತಾಯೇ,

ಅತಿ ಪರಿಶುದ್ಧ ತಾಯೇ,

ಅತಿ ವಿರಕ್ತಳಾದ ತಾಯೇ,

ನಿರ್ಮಲವಾದ ತಾಯೇ,

ಕನ್ಯತ್ವವನ್ನು ಕುಂದಿಸದ ತಾಯೇ,

ಪ್ರೀತಿಗೆ ಪಾತ್ರಳಾದ ತಾಯೇ,

ಆಶ್ಚರ್ಯಕರ ತಾಯೇ,

ಒಳ್ಳೆಯ ಆಲೋಚನೆಯ ತಾಯೇ,

ಸೃಷ್ಟಿಕರ್ತರ ತಾಯೇ,

ರಕ್ಷಕರ ತಾಯೇ,

ಅತಿ ಬುದ್ದಿವಂತೆಯಾದ ಕನ್ನಿಕೆಯೇ,

ಪೂಜ್ಯಳಾದ ಕನ್ನಿಕೆಯೇ,

ಸ್ತುತ್ಯಳಾದ ಕನ್ನಿಕೆಯೇ,

ಶಕ್ತಿಯುಳ್ಳ ಕನ್ನಿಕೆಯೇ,

ದಯಾಮಯ ಕನ್ನಿಕೆಯೇ,

ಪ್ರಾಮಾಣಿಕ ಕನ್ನಿಕೆಯೇ,

ನೀತಿಯ ಕನ್ನಡಿಯೇ,

ಜ್ಞಾನದ ಪೀಠವೇ,

ನಮ್ಮ ಸಂತೋಷದ ಬುಗ್ಗೆಯೇ,

ಆಧ್ಯಾತ್ಮಿಕ ಪಾತ್ರೆಯೇ,

ಮಹಿಮಾಭರಿತ ಪಾತ್ರೆಯೇ,

ಅತ್ಯಂತ ಭಕ್ತಿಯುಳ್ಳ ಪಾತ್ರೆಯೇ,

ಗಹನವಾದ ರೋಜಾ ಪುಷ್ಪವೇ,

ಚಿನ್ನದ ಆಲಯವೇ,

ದಾವೀದನ ಉಪ್ಪರಿಗೆಯೇ,

ದಂತದ ಬಾಗಿಲೇ

ಒಡಂಬಡಿಕೆಯ ಪೆಟ್ಟಿಗೆಯೇ,

ಮೋಕ್ಷದ ಬಾಗಿಲೇ

ಉದಯ ಕಾಲದ ನಕ್ಷತ್ರವೇ,

ವ್ಯಾಧಿಸ್ಥರಿಗೆ ಆರೋಗ್ಯವೇ,

ಪಾಪಿಗಳಿಗೆ ಶರಣೇ,

ಕಷ್ಟಪಡುವವರಿಗೆ ಉಪಶಮನವೇ,

ಕ್ರೈಸ್ತರಿಗೆ ಸಹಾಯವೇ,

ದೇವದೂತರ ರಾಣಿಯೇ,

ಪಿತಾಪಿತೃಗಳ ರಾಣಿಯೇ,

ಪ್ರವಾದಿಗಳ ರಾಣಿಯೇ,

ಪ್ರೇಷಿತರ ರಾಣಿಯೇ,

ರಕ್ತಸಾಕ್ಷಿಗಳ ರಾಣಿಯೇ,

ಧರ್ಮಸಾಕ್ಷಿಗಳ ರಾಣಿಯೇ,

ಕನ್ನಿಕೆಯರ ರಾಣಿಯೇ,

ಸಕಲ ಸಂತರ ರಾಣಿಯೇ,

ಜನ್ಮ ಪಾಪವಿಲ್ಲದೆ ಉದ್ಭವಿಸಿದ ರಾಣಿಯೇ,

ಸ್ವರ್ಗರೋಹಣವಾದ ರಾಣಿಯೇ,

ಜಪಮಾಲೆಯ ರಾಣಿಯೇ,

ಕ್ರೈಸ್ತ ಕುಟುಂಬಗಳ ರಾಣಿಯೇ,

ಸಮಾಧಾನದ ರಾಣಿಯೇ,



ಲೋಕದ ಪಾಪಗಳನ್ನು ಪರಿಹರಿಸುವ ದೇವರ ಕುರಿಮರಿಯೇ

ನಮ್ಮನ್ನು ಕ್ಷಮಿಸಿರಿ, ಸ್ವಾಮಿ

ಲೋಕದ ಪಾಪಗಳನ್ನು ಪರಿಹರಿಸುವ ದೇವರ ಕುರಿಮರಿಯೇ

ನಮ್ಮ ಪ್ರಾರ್ಥನೆಯನ್ನು ಚೆನ್ನಾಗಿ ಆಲೈಸಿರಿ ಸ್ವಾಮಿ

ಲೋಕದ ಪಾಪಗಳನ್ನು ಪರಿಹರಿಸುವ ದೇವರ ಕುರಿಮರಿಯೇ

ನಮಗೆ ದಯೆತೋರಿ ಸ್ವಾಮಿ



ಪ್ರಭುವೇ ದಯೆತೋರಿ

ಕ್ರಿಸ್ತರೇ ದಯೆತೋರಿ

ಪ್ರಭುವೇ ದಯೆತೋರಿ

ಕ್ರಿಸ್ತರ ವಾಗ್ದಾನಗಳಿಗೆ ನಾವು ಪಾತ್ರರಾಗುವಂತೆ,

ಪರಿಶುದ್ಧ ದೇವಮಾತೆಯೇ, ನಮಗಾಗಿ ಪ್ರಾರ್ಥಿಸಿರಿ.
ಪ್ರಾರ್ಥಿಸೋಣ:

ಪ್ರಭುವಾದ ದೇವರೇ, ಸದಾ ಕನ್ನಿಕೆಯಾದ ಸಂತ ಮರಿಯಮ್ಮನವರ ಬಿನ್ನಹಗಳ ಮೂಲಕ, ನಿಮ್ಮ ದಾಸರಾದ ನಾವು ಮಾನಸಿಕ ಹಾಗೂ ಶಾರೀರಿಕ ಆರೋಗ್ಯದಿಂದಿರುವಂತೆಯೂ, ಇಹದ ಕಷ್ಟಗಳಿಂದ ಬಿಡುಗಡೆಯಾಗಿ, ಪರದ ನಿತ್ಯಾನಂದವನ್ನು ಸವಿಯುವಂತೆಯೂ ಅನುಗ್ರಹಿಸಿರಿ. ನಮ್ಮ ಪ್ರಭು ಯೇಸುಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ. ಆಮೆನ್.