07
ಮಾರ್ಚ್ 2019
ಗುರುವಾರ, ಸಂತ ಪೆರ್ಪೆತುವಾ ಮತ್ತು ಫೆಲಿಸಿತಾ
ಮೊದಲವಾಚನ:
ಧರ್ಮೋ 30: 15-20
ಧರ್ಮೋ 30: 15-20
15ಮೋಶೆಯು ಜನರಿಗೆ ಹೀಗೆಂದು ಹೇಳಿದನು “ಇಗೋ ನೋಡಿ: ನಾನು ಶುಭವನ್ನೂ ಅಶುಭವನ್ನೂ ಜೀವವನ್ನೂ ಸಾವನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ. 16ನಾನು ಈಗ ನಿಮಗೆ ಬೋಧಿಸುವಂತೆ ನೀವು ನಿಮ್ಮ ದೇವರಾದ ಸರ್ವೇಶ್ವರನನ್ನು ಪ್ರೀತಿಸಿ, ಅವರು ಹೇಳಿದ ಮಾರ್ಗದಲ್ಲಿ ನಡೆದು, ಅವರ ಆಜ್ಞಾವಿಧಿ ನಿರ್ಣಯಗಳನ್ನು ಅನುಸರಿಸಿದರೆ ನೀವು ಬದುಕಿ ಬಾಳುವಿರಿ, ಅಭಿವೃದ್ಧಿಯಾಗುವಿರಿ, ಮತ್ತು ನೀವು ಸ್ವಾಧೀನ ಮಾಡಿಕೊಳ್ಳಲು ಹೋಗುವ ನಾಡಿನಲ್ಲಿ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಆಶೀರ್ವದಿಸುವರು. 17ಆದರೆ ನೀವು ಅವರನ್ನು ಬಿಟ್ಟು, ಅವರ ಮಾತನ್ನು ಕೇಳಲೊಲ್ಲದೆ, ಮೋಸಹೋಗಿ, 18ಇತರ ದೇವರುಗಳನ್ನು ಪೂಜಿಸಿ ಅವಲಂಬಿಸಿದರೆ ನೀವು ಸ್ವಾಧೀನ ಮಾಡಿಕೊಳ್ಳಲು ಜೋರ್ಡನ್ ನದಿಯನ್ನು ದಾಟಿ ಹೋಗುವ ನಾಡಿನಲ್ಲಿ ಬಹುಕಾಲ ಇರದೆ ನಾಶ ಆಗಿ ಹೋಗುವಿರಿ. ಇದನ್ನು ನಾನು ಈಗ ನಿಮಗೆ ಖಂಡಿತವಾಗಿ ತಿಳಿಸುತ್ತೇನೆ. 19ನಾನು ಸಾವು ಜೀವಗಳನ್ನೂ ಶಾಪಾಶೀರ್ವಾದಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ; ಇದಕ್ಕೆ ಭೂಮಿ ಆಕಾಶಗಳೇ ಸಾಕ್ಷಿಗಳಾಗಿರಲಿ; ಆದುದರಿಂದ ನೀವೂ ನಿಮ್ಮ ಸಂತತಿಯವರೂ ಬದುಕಿಬಾಳುವಂತೆ ಜೀವವನ್ನೇ ಆರಿಸಿಕೊಳ್ಳಿ; 20ನಿಮ್ಮ ದೇವರಾದ ಸರ್ವೇಶ್ವರನನ್ನು ಪ್ರೀತಿಸಿ ಅವರ ಮಾತಿಗೆ ವಿಧೇಯರಾಗಿರಿ; ಅವರನ್ನು ಹೊಂದಿಕೊಂಡೇ ಇರಿ. ಸರ್ವೇಶ್ವರ ನಿಮ್ಮ ಪಿತೃಗಳಾದ ಅಬ್ರಹಾಮ್ ಇಸಾಕ್, ಯಕೋಬರಿಗೆ ಪ್ರಮಾಣಮಾಡಿ ಕೊಟ್ಟ ನಾಡಿನಲ್ಲಿ ನೀವು ಬದುಕಿ ಬಾಳುವುದಕ್ಕೂ ಬಹುಕಾಲ ಇರುವುದಕ್ಕೂ ಅವರೇ ಆಧಾರ. ”
ಕೀರ್ತನೆ 1: 1-2, 3, 4, 6
ಪ್ರಭುವಿನಲ್ಲೇ ಭರವಸೆಯಿಟ್ಟು
ನಡೆವಾತನು ಧನ್ಯನು
1ದುರ್ಜನರ ಆಲೋಚನೆಯಂತೆ ನಡೆಯದೆ ಪಾಪಾತ್ಮರ ಪಥದಲಿ ಕಾಲೂರದೆ ಧರ್ಮನಿಂದಕರ ಕೂಟದಲಿ ಕೂರದೆ
2ಪ್ರಭುವಿನ ಧರ್ಮಶಾಸ್ತ್ರದಲಿ ಹರ್ಷಗೊಳ್ಳುವವನಾರೋ - ಅವನೇ
ಧನ್ಯನು ಹಗಲಿರುಳೆನ್ನದೆ ಅದನೆ ಧ್ಯಾನಿಸು ತಿರುವವನಾರೋ - ಅವನೇ
ಧನ್ಯನು
3ನದಿಯ ಬದಿಯಲೇ ಬೆಳೆದಿಹ ಮರದಂತೆ ಸಕಾಲಕೆ ಫಲವೀವ ವೃಕ್ಷದಂತೆ ಎಲೆಬಾಡದೆ ಪಸಿರಿರುವ ತರುವಂತೆ ಸಿಗುವುದು ಅವನ ಕಾರ್ಯಗಳಿಗೆ ಸಫಲತೆ
4ದುರುಳರಾದರೊ ತೂರಿ ಹೋಗುವರು ಬಿರುಗಾಳಿಗೆ ತರಗೆಲೆಯಾಗುವರು
5ಎಂದೇ ನಿಲ್ಲಲಾರರು ದುರುಳರು ನ್ಯಾಯಸ್ಥಾನದಲಿ ಸದಸ್ಯರಾಗರು ಪಾಪಿಗಳು ಸಜ್ಜನರ ಸಂಘದಲಿ
6ಸಜ್ಜನರ ಮಾರ್ಗಕ್ಕಿದೆ ಪ್ರಭುವಿನ ಪಾಲನ ದುರ್ಜನರ ಮಾರ್ಗಕ್ಕಿದೆ ಸಂಪೂರ್ಣ ವಿನಾಶನ
ಶುಭಸಂದೇಶ:
ಲೂಕ 9: 22-25
ಲೂಕ 9: 22-25
22ಇದಲ್ಲದೆ, ನರಪುತ್ರನು
ಕಠಿಣವಾದ ಯಾತನೆಯನ್ನು ಅನುಭವಿಸಬೇಕಾಗಿದೆ. ಸಭಾ ಪ್ರಮುಖರಿಂದಲೂ ಮುಖ್ಯಯಾಜಕರಿಂದಲೂ ಧರ್ಮಶಾಸ್ತ್ರಿಗಳಿಂದಲೂ ಆತನು ತಿರಸ್ಕೃತನಾಗಿ
ಕೊಲ್ಲಲ್ಪಡುವನು.
ಆದರೆ ಮೂರನೇ ದಿನ ಆತನು ಪುನರುತ್ಥಾನ ಹೊಂದುವನು, ಎಂದು ಅವರಿಗೆ ತಿಳಿಸಿದರು.
23ಯೇಸುಸ್ವಾಮಿ ಎಲ್ಲರನ್ನು ನೋಡಿ ಹೇಳಿದ್ದೇನೆಂದರೆ: ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ, ಅವನು ತನ್ನನ್ನು ತಾನೇ ಪರಿತ್ಯಜಿಸಿ, ತನ್ನ ಶಿಲುಬೆಯನ್ನು ಅನುದಿನವೂ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ. 24ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಹಾತೊರೆಯುವವನು ಅದನ್ನು
ಕಳೆದುಕೊಳ್ಳುವನು.
ಆದರೆ ನನ್ನ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು
ನಿತ್ಯಕ್ಕೂ ಉಳಿಸಿಕೊಳ್ಳುವನು. 25ಒಬ್ಬನು ಪ್ರಪಂಚವನ್ನೆಲ್ಲಾ ಗೆದ್ದುಕೊಂಡು ತನ್ನ ಪ್ರಾಣವನ್ನೇ ಕಳೆದುಕೊಂಡರೆ ಅಥವಾ ತೆತ್ತರೆ
ಅವನಿಗೆ ಅದರಿಂದ ಬರುವ ಲಾಭವಾದರೂ ಏನು?
ಸಂತ ಪೇರ್ಪೆತುವ ಮತ್ತು ಸಂತ ಫೆಲಿಸಿತಮ್ಮ
ಇವರು ಚಕ್ರವರ್ತಿ ಸೇವೆರುಸ್ನ ಕಾಲದಲ್ಲಿ ಆಫ್ರಿಕಾ ದೇಶದಲ್ಲಿ ಹಿಂಸಿಸಿ, ಕೊಲ್ಲಲ್ಪಟ್ಟ ಕ್ರೈಸ್ತ ರಕ್ತಸಾಕ್ಷಿಗಳು. ಪೆರ್ಪತಮ್ಮ ತಿಳುವಳಿಕೆ ವುಳ್ಳವರು, ತನ್ನ ತಾಯಿಯಂತೆ ಕ್ರೈಸ್ತಳಾದಳು. ಇವರನ್ನು ಕಂಡ ಆಕೆಯ ತಮ್ಮನು ಕೂಡ ಜ್ಞಾನದೀಕ್ಷೆ ಪಡೆಯಲು ಮುಂದಾದನು. ಇದನ್ನು ಕಂಡ ಅವರ ಅನ್ಯಧರ್ಮದ ತಂದೆ ವಿರೋಧಿಸಿದನು. ಸ್ವಲ್ಪ ದಿನಗಳ ನಂತರ ಪೆರ್ಪೆತುವ ಮತ್ತು ಇಬ್ಬರು ಕೆಲಸದಾಳುಗಳಾದ ಫೆಲಿಸಿತಮ್ಮ ಹಾಗೂ ರೇವೊಕ್ತುಸ್ ರನ್ನು ಕ್ರೈಸ್ತವಿರೋಧಿಗಳು ಬಂಧಿಸಿದರು. ಪೇರ್ಪೆತುವ ಬಂಧಿನ ಮುಂಚೆಯೇ ಜ್ಞಾನಸ್ಥಾನ ಪಡೆದರು ಮತ್ತು ಹೀಗೆ ಪಡೆಯುವಾಗ-ಇವರು ಯಾತನೆಯನ್ನು ಅನುಭವಿಸಲು ತಾಳ್ಮೆ, ಸಹನೆಗಾಗಿ ಪ್ರಾರ್ಥಿಸಿದರು.
ಒಮ್ಮೆ ಆಕೆಯ ತಂದೆ ಬಂದು ಇವಳಲ್ಲಿ ಅಂಗಲಾಚಿ ಕ್ರೈಸ್ತಧರ್ಮವನ್ನು ಬಿಟ್ಟು, ಸೆರೆಮನೆಯಿಂದ ಹೊರಗೆ ಬರುವಂತೆ ಬೇಡಿಕೊಳ್ಳುತ್ತಾನೆ. ಆದರೆ ಆಕೆ ಉತ್ತರವಾಗಿ ನಾವು ಬಾಳುವುದು ನಮ್ಮ ಶಕ್ತಿಯಿಂದಲ್ಲ ಬದಲಾಗಿ ದೇವರ ಶಕ್ತಿಯಿಂದ ಎಂದು ಹೇಳುತ್ತಾಳೆ. ಹೀಗೆ ಪೇರ್ಪೆತುವ, ಆಕೆಯ ಸೇವಕಿಯಾದ ಫೆಲಿಸಿತಮ್ಮ ಮತ್ತು ಅವರ ಸಂಗಡಿಗರನ್ನು ಕರ್ತಾಜ್ನಲ್ಲಿ ಕೊಲ್ಲಲಾಯಿತು. ಸಾಯುವ ಮೊದಲು ಪೇರ್ಪೆತುವ ಹೇಳುವ ಮಾತೆಂದರೆ ವಿಶ್ವಾಸದಲ್ಲಿ ಧೃಢವಾಗಿರಿ, ಮತ್ತು ಒಬ್ಬರನೊಬ್ಬರು ಪ್ರೀತಿಸಿರಿ, ಜೀವನ ಯಾತನೆಗಳು, ನೋವು ನಮಗೆಂದೂ ತಡೆಗೋಡೆಗಳಾಗದೆ ಇರಲಿ. ಇಂದು ಸಂತ ಪೇರ್ಪೆತುವ ಮತ್ತು ಸಂತ ಫೆಲಿಸಿತಮ್ಮ ತಾಯಂದಿರ, ಗರ್ಭಿಣಿಯರ ಪಾಲಕ ಸಂತರಾಗಿದ್ದಾರೆ.
ಚಿತ್ರ: ಗೂಗಲ್ ಕೃಪೆ
ಚಿತ್ರ: ಗೂಗಲ್ ಕೃಪೆ
© 'ದನಿ' ಮಾಧ್ಯಮ ಮನೆ

No comments:
Post a Comment