ಸಾರ್ವಜನಿಕ ಉದ್ದೇಶ: ಮಾನವ ಸಾಗಾಣಿಕೆ, ವೇಶ್ಯಾವಾಟಿಕೆ ಹಾಗೂ ಹಿಂಸಾತ್ಮಕ ಕ್ರಿಯೆಗಳಿಂದಾಗಿ ನಿರಾಶ್ರಿತರಾದವರಿಗೆ ಆಶ್ರಯವನ್ನು ನೀಡಲು ಸರ್ವರೂ ಉದಾರತೆಯಿಂದ ಮುಂದೆ ಬರುವಂತೆ.
07 ಫೆಬ್ರವರಿ 2೦19
ಕೆಂಪು / ಗುರು / ಸಂತ ಗೊನ್ಸಾಲೊ ಗಾರ್ಸಿಯಾ (ರ.ಸಾ) (ಸ್ಮರಣೆ)
1ನೇ ವಾಚನ - ಹಿಬ್ರಿ 12: 18-19, 21-24
ಕೀರ್ತನೆ - 48: 1-3, 8, 9-10
ಶುಭಸಂದೇಶ - ಮಾರ್ಕ 6: 7-13
ವಾಚನಗಳು
ಮೊದಲನೇ ವಾಚನ
ಹಿಬ್ರೀಯರಿಗೆ ಬರೆದ ಪತ್ರದಿಂದ ವಾಚನ
ಹಿಬ್ರಿ 12: 18-19, 21-24
18ನೀವು ಇಸ್ರಯೇಲರಂತೆ ಮುಟ್ಟಬಹುದಾದ ಸೀನಾಯ್ ಬೆಟ್ಟಕ್ಕೆ ಬಂದಿಲ್ಲ. ಅಲ್ಲಿ ಬೆಂಕಿ ಧಗಧಗಿಸುತ್ತಿತ್ತು. ಕಾರ್ಗತ್ತಲು ಕವಿದಿತ್ತು; ಮೋಡದ ಮಬ್ಬು ಮುಸುಕಿತ್ತು; ಬಿರುಗಾಳಿ ಬೀಸುತ್ತಿತ್ತು. 19ಕಹಳೆಗಳು ಮೊಳಗುತ್ತಿದ್ದವು. ಆಗ ಧ್ವನಿಯೊಂದು ಕೇಳಿಬಂತು. ಅದನ್ನು ಕೇಳಿದವರು, ಇನ್ನೆಂದಿಗೂ ಆ ಧ್ವನಿ ತಮ್ಮೊಂದಿಗೆ ಮಾತನಾಡುವುದೇ ಬೇಡವೆಂದು ಕೇಳಿಕೊಂಡರು.
21ಆ ನೋಟ ಎಷ್ಟು ಭಯಂಕರವಾಗಿತ್ತೆಂದರೆ, ಮೋಶೆ ಕೂಡ, “ನಾನು ಭಯದಿಂದ ನಡುಗುತ್ತಿದ್ದೇನೆ,” ಎಂದು ಹೇಳುವಂತಾಯಿತು ! 22ಆದರೆ ನೀವು ಬಂದಿರುವುದು ಸಿಯೋನ್ ಬೆಟ್ಟಕ್ಕೆ, ಜೀವಂತ ದೇವರ ನಗರಕ್ಕೆ; ಸ್ವರ್ಗೀಯ ಜೆರುಸಲೇಮಿಗೆ; ಅಸಂಖ್ಯ ದೇವದೂತರು ಕೂಡಿರುವ ಉತ್ಸವ ಕೂಟಕ್ಕೆ; 23ಸ್ವರ್ಗದಲ್ಲಿ ದಾಖಲೆಯಾಗಿರುವ ಜ್ಯೇಷ್ಠಪುತ್ರನ ಸಭೆಗೆ; ನೀವು ಬಂದಿರುವುದು ಸಕಲ ಮಾನವರ ನ್ಯಾಯ ಮೂರ್ತಿಯಾದ ದೇವರ ಸನ್ನಿಧಿಗೆ; ಸಿದ್ಧಿಗೆ ಬಂದ ಸತ್ಪುರುಷರ ಆತ್ಮಗಳ ಸಮೂಹಕ್ಕೆ; 24ಹೊಸ ಒಡಂಬಡಿಕೆಯ ಮಧ್ಯಸ್ಥರಾದ ಯೇಸುಸ್ವಾಮಿಯ ಬಳಿಗೆ, ಹೇಬೆಲನ ರಕ್ತಕ್ಕಿಂತಲೂ ಅಮೋಘವಾಗಿ ಮೊರೆಯಿಡುವ ಪ್ರೋಕ್ಷಣಾ ರಕ್ತದ ಬಳಿಗೆ ನೀವು ಬಂದಿದ್ದೀರಿ.

ಕೀರ್ತನೆ
ಕೀರ್ತನೆ 48: 2-3ಎಬಿ, 3ಸಿಡಿ-4, 9, 10-11
ನಿನ್ನಚಲ ಪ್ರೀತಿಯನು
ದೇವಾ, ಸ್ಮರಿಸುವೆವು
ನಿನ್ನ ಮಹದಾಲಯದೊಳು
ಅದನು ಧ್ಯಾನಿಸುವೆವು
ಪರಾತ್ಪರನಾದ
ಪ್ರಭುವು ಘನಗಂಭೀರನು
ಪ್ರಪಂಚಕ್ಕೆಲ್ಲ
ರಾಜಾಧಿರಾಜನು
ಜನಾಂಗಗಳನಾತ
ನಮಗಧೀನಪಡಿಸಿಹನು.
ರಾಷ್ಟ್ರಗಳನು
ನಮಗೆ ಪಾದಪೀಠವಾಗಿಸಿಹನು
ಆಯ್ದನಾಡನು
ಸೊತ್ತಾಗಿ
ನೀಡಿದನೆಮಗೆ
ಪ್ರತಿಷ್ಠಿತರು
ನಾವು,
ಆತನೊಲಿದ ಯಕೋಬಿಗೆ.
ನಿನ್ನಚಲ ಪ್ರೀತಿಯನು ದೇವಾ, ಸ್ಮರಿಸುವೆವು
ನಿನ್ನ ಮಹದಾಲಯದೊಳು ಅದನು ಧ್ಯಾನಿಸುವೆವು
ನಿನ್ನ ನಾಮದಂತೆ ನಿನ್ನಾ ಹೊಗಳಿಕೆ ಮುಟ್ಟುತ್ತದೆ ಜಗದ ಎಲ್ಲೆ ಎಲ್ಲೆಗೆ
ದೇವಾ, ನೀತಿಭರಿತ ನಿನ್ನ ಆಳ್ವಿಕೆ.
ಸಿಯೋನ್ ಪಟ್ಟಣಿಗರು ಹರ್ಷಗೊಳ್ಳಲಿ
ಯೆಹೂದ್ಯ ನಗರಗಳು ಆನಂದಪಡಲಿ
ನಿನ್ನ ನ್ಯಾಯವನು ನೆನಪಿಸಿಕೊಳ್ಳಲಿ.
ಶುಭಸಂದೇಶ
ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ
ಮಾರ್ಕ 6: 7-13
7ಅನಂತರ ಯೇಸುಸ್ವಾಮಿ ಸುತ್ತಮುತ್ತಲಿನ ಊರುಗಳಿಗೆ ಹೋಗಿ ಜನರಿಗೆ ಪ್ರಬೋಧಿಸಿದರು. ಇದಲ್ಲದೆ ಹನ್ನೆರಡು ಮಂದಿ ಶಿಷ್ಯರನ್ನು ಕರೆದು ಅವರಿಗೆ ದೆವ್ವಬಿಡಿಸುವ ಅಧಿಕಾರವನ್ನಿತ್ತು, ಅವರನ್ನು ಇಬ್ಬಿಬ್ಬರನ್ನಾಗಿ ಕಳುಹಿಸಿದರು. 8ಕಳುಹಿಸುವಾಗ, ಪ್ರಯಾಣ ದಂಡವೊಂದನ್ನು ಹೊರತು ಇನ್ನೇನನ್ನೂ ತೆಗೆದುಕೊಂಡು ಹೋಗಬೇಡಿ. 9ಬುತ್ತಿ, ಜೋಳಿಗೆ, ಜೇಬಿನಲ್ಲಿ ಹಣ, ಯಾವುದೂ ಬೇಡ. ಪಾದರಕ್ಷೆಯನ್ನು ಮೆಟ್ಟಿಕೊಂಡರೆ ಸಾಕು. ಎರಡು ಅಂಗಿಗಳನ್ನೂ ತೊಟ್ಟುಕೊಳ್ಳಬೇಡಿ, ಎಂದು ಅಪ್ಪಣೆ ಮಾಡಿದರು. 10ಇದಲ್ಲದೆ, ನೀವು ಯಾವುದೇ ಒಂದು ಊರಿಗೆ ಹೋದಾಗ ಆ ಊರನ್ನು ಬಿಡುವವರೆಗೂ ಆತಿಥ್ಯ ನೀಡುವ ಯಾವುದಾದರೂ ಒಂದು ಮನೆಯಲ್ಲೇ ಉಳಿದುಕೊಳ್ಳಿ. 11ಯಾವುದೇ ಊರಿನ ಜನರು ನಿಮ್ಮನ್ನು ಸ್ವಾಗತಿಸದೆಯೂ ನಿಮ್ಮ ಬೋಧನೆಗೆ ಕಿವಿಗೊಡದೆಯೂ ಹೋದರೆ, ಆ ಊರನ್ನು ಬಿಟ್ಟು ಹೋಗುವಾಗ ನಿಮ್ಮ ಪಾದಕ್ಕೆ ಹತ್ತಿದ ಧೂಳನ್ನು ಕೂಡ ಝಾಡಿಸಿಬಿಡಿ. ಅವರ ವಿರುದ್ಧ ಅದು ಸಾಕ್ಷಿಯಾಗಿರಲಿ, ಎಂದರು. 12ಶಿಷ್ಯರು ಹೊರಟು ಹೋಗಿ, ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ, ಎಂದು ಜನರಿಗೆ ಸಾರಿ ಹೇಳಿದರು. 13ದೆವ್ವ ಹಿಡಿದಿದ್ದ ಅನೇಕರಿಂದ ದೆವ್ವಗಳನ್ನು ಹೊರಗಟ್ಟಿದರು. ತೈಲಲೇಪನಮಾಡಿ ಅನೇಕ ರೋಗಿಗಳನ್ನು ಗುಣಪಡಿಸಿದರು.

ಚಿಂತನೆ
ಸೇವಾಕಾರ್ಯ
ಯೇಸುವನ್ನು
ತಮ್ಮ ಸ್ವಂತ ನಾಡಿನ ಜನ ತಾತ್ಸಾರ ಮಾಡಿದಾಗ ಯೇಸು ಇತರ ನಾಡುಗಳಿಗೆ ಹೋಗಿ ಬೋಧನೆಯನ್ನು ಮಾಡುತ್ತಾರೆ.
ಜನ ಸ್ವೀಕರಿಸಲಿ ಬಿಡಲಿ ದೇವರ ಸಾಮ್ರಾಜ್ಯದ ಸಂದೇಶವನ್ನು ಸಾರಲೇಬೇಕಾಗಿತ್ತು. ಆ ಸಾಮ್ರಾಜ್ಯದ ಸ್ಥಾಪನೆಗೆ
ಜನರನ್ನು ಮನಪರಿವರ್ತನೆಗೆ ಕರೆಯಬೇಕಿತ್ತು ಮತ್ತು ಪ್ರೀತಿ, ನ್ಯಾಯದ ಸ್ಥಾಪನೆಯಾಗಬೇಕಿತ್ತು. ಹಾಗಾಗಿ
ಇಂದು ತಮ್ಮ ಶಿಷ್ಯರನ್ನು ಇಬ್ಬಿಬ್ಬರನ್ನಾಗಿ ಕಳುಹಿಸಿಕೊಡುತ್ತಾರೆ. ಕಳುಹಿಸುವ ಮೊದಲು ಯೇಸು ನೀಡಿದ
ಆದೇಶಗಳು ನಮ್ಮನ್ನು ಗಲಿಬಿಲಿಗೊಳಿಸುತ್ತವೆ. ಬುತ್ತಿ, ಜೋಳಿಗೆ, ಹಣ, ತೆಗೆದುಕೊಂಡು ಹೋಗದೆ ಊರೂರು
ಪ್ರಯಾಣ ಮಾಡುವುದಾದರೂ ಹೇಗೆ? ಯೇಸು ನೀಡಿದ ಆದೇಶದ ಅರ್ಥ: ಶಿಷ್ಯರು ದೇವರ ವಾಕ್ಯಕ್ಕೆ ಪ್ರಾಮುಖ್ಯತೆ
ನೀಡಿ, ದೇವಾನುಗ್ರಹದಲ್ಲಿ ನಂಬಿಕೆಯಿಡಬೇಕು. ಲೌಕಿಕ ಚಿಂತನೆಗಳಿಂದ ದೂರವಿದ್ದಾಗ ಮಾತ್ರ ತಮ್ಮ ಸೇವಾಕಾರ್ಯದಲ್ಲಿ
ಯಶಸ್ವಿಯಾಗಲು ಸಾಧ್ಯವೆಂದು ಈ ಮೂಲಕ ತಿಳಿಸುತ್ತಾರೆ.
ಇಂದಿನ ಸಂತರು
ಸಂತ ಗೊನ್ಸಾಲೊ ಗಾರ್ಸಿಯಾ
ಕಥೋಲಿಕ ಧರ್ಮಸಭೆ ಕಂಡಂತಹ ಶ್ರೇಷ್ಠ ಸಂತರಲ್ಲೊಬ್ಬರಾದ ಅಸ್ಸಿಸಿಯ ಸಂತ ಫ್ರಾನ್ಸಿಸರನ್ನು ಹಿಂಬಾಲಿಸಿದ ಫ್ರಾನ್ಸಿಸ್ಕನ್ ಸಭೆಯ ಈ ಸಂತರು ಭಾರತ ದೇಶದ ಪ್ರಥಮ ಸಂತರೆಂಬ ಕೀರ್ತಿಗೆ ಭಾಜನರಾಗಿದ್ದಾರೆ. ಜಪಾನ್ ದೇಶದಲ್ಲಿ ಶುಭಸಂದೇಶವನ್ನು ಸಾರುವಾಗ ಪ್ರಭುಯೇಸುವಿಗಾಗಿ ರಕ್ತಸಾಕ್ಷಿಯಾಗಿ ಮಡಿಯಲು ಸಿಕ್ಕ ಅವಕಾಶವನ್ನು ಸಂತೋಷದಿಂದ ಸ್ವೀಕರಿಸಿದ ಈ ಸಂತರು ತಮ್ಮ ಪ್ರಾಣತ್ಯಾಗ ಮಾಡಲು ಹಿಂಜರಿಯಲಿಲ್ಲ. ಜಪಾನ್ ದೇಶದಲ್ಲಿ ಅಲ್ಲಿನ ಜನರ ಸ್ಥಳೀಯ ಭಾಷೆಯಲ್ಲಿ ಪರಿಣತಿ ಪಡೆದ ಈ ಸಂತರು ತಮ್ಮ ವಾಕ್ಚಾತುರ್ಯ, ಪ್ರತಿಭೆ ಹಾಗೂ ಅಗಾಧ ದೈವವಿಶ್ವಾಸದ ಮೂಲಕ ಧರ್ಮಪ್ರಚಾರ ಕಾರ್ಯವನ್ನು ಅತ್ಯಂತ ಪ್ರಾಮಾಣಿಕತೆಯಿಂದ ನೆರವೇರಿಸಿದರು. ಕ್ರಿಸ್ತೀಯ ಮೌಲ್ಯಗಳಾದ ಶಾಂತಿ, ಪ್ರೀತಿ, ಔದಾರ್ಯ ಹಾಗೂ ಕ್ಷಮೆಯನ್ನು ತಮ್ಮ ನಡೆನುಡಿಯ ಮೂಲಕ ಪ್ರಚುರಪಡಿಸಿದರು. ಪ್ರಾರ್ಥನೆ, ಉಪವಾಸ, ಧ್ಯಾನ ಅವರ ಅನುದಿನದ ಬದುಕಿನ ಅಸ್ತ್ರಗಳಾದವು. ಮಾತೆ ಮರಿಯಮ್ಮನವರಲ್ಲಿ ವಿಶೇಷ ಭಕ್ತಿಯನ್ನು ಹೊಂದಿದ್ದ ಗೊನ್ಸಾಲೊ ಗಾರ್ಸಿಯಾ 1597ರಲ್ಲಿ ಕ್ರೈಸ್ತವಿಶ್ವಾಸಕ್ಕಾಗಿ ಬಲಿಯಾದರು. ತದನಂತರ ಅಲ್ಲಿ ಹೆಚ್ಚು ಜನರು ಕ್ರೈಸ್ತ ಧರ್ಮವನ್ನು ಅಂಗೀಕರಿಸಿದರು. ಕ್ರಿಸ್ತರ ಅನುಯಾಯಿಗಳಾದರು. ’ರಕ್ತಸಾಕ್ಷಿಗಳ ನೆತ್ತರು ಕ್ರೈಸ್ತವಿಶ್ವಾಸದ ಬೀಜ ಮೊಳೆತು ಹೆಮ್ಮರವಾಗಿ ಬೆಳೆಯಲು ಸ್ಫೂರ್ತಿ’ ಎಂಬ ಸಂತ ಟರ್ಟುಲಿಯನ್ ನವರ ಮಾತು ಎಷ್ಟು ಸತ್ಯ ಅಲ್ಲವೇ?

ಚಿತ್ರ: ಗೂಗಲ್ ಕೃಪೆ

No comments:
Post a Comment