12 ಏಪ್ರಿಲ್ 2019

ನೇರಳೆ/ ಶುಕ್ರ / ತಪಸ್ಸುಕಾಲದ ಐದನೇ ವಾರ               
1ನೇ  ವಾಚನ  -  ಯೆರೆ  2೦1೦-13   
ಕೀರ್ತನೆ  -  181-34-56             
ಶುಭಸಂದೇಶ - ಯೊವಾನ್ನ 1೦: 31-42

1ನೇ  ವಾಚನ  -  ಯೆರೆ  2೦:  1೦-13   
10ಸುತ್ತಮುತ್ತಲು ದಿಗಿಲೆಂದರೆ ದಿಗಿಲು ! ‘ಬನ್ನಿ, ಇವರ ಮೇಲೆ ಚಾಡಿ ಹೇಳಿ, ನಾವೂ ಹೇಳುವೆವು ಎಂದು ಗುಸುಗುಟ್ಟುತ್ತಿರುವರು ಬಹು ಜನರು. ‘ಇವನು ಎಡವಿಬೀಳಲಿ, ನಾವು ಹೊಂಚಿ ನೋಡುವೆವು ಎನ್ನುತ್ತಿರುವರು ನನ್ನಾಪ್ತ ಮಿತ್ರರೆಲ್ಲರು. ‘ಇವನು ಸಿಕ್ಕಿಬೀಳಲಿ, ಆಗ ಗೆದ್ದು ಮುಯ್ಯಿತೀರಿಸಿಕೊಳ್ಳುವೆವು.’ ಎಂದುಕೊಳ್ಳುತ್ತಿರುವರು ತಮ್ಮತಮ್ಮೊಳಗೆ11ಆದರೆ ನನ್ನ ಸಂಗಡ ಇರುವರು ಸರ್ವೇಶ್ವರ ಭಯಂಕರ ಶೂರನಂತೆ ನನ್ನ ಹಿಂಸಕರು ಮುಗ್ಗರಿಸಿ ಬೀಳುವರು ಜಯ ಸಾಧಿಸದೆ. ನಾಚಿಕೆಗೆ ಈಡಾಗುವರು ತಮ್ಮ ಯೋಜನೆ ಕೈಗೂಡದೆ ಶಾಶ್ವತ ಅವಮಾನಕ್ಕೆ ಗುರಿಯಾಗುವರು ಎಂದಿಗೂ ಮರೆಯಲಾಗದಂತೆ12ಸರ್ವಶಕ್ತರಾದ ಸರ್ವೇಶ್ವರಾ, ನೀವು ಸತ್ಪುರುಷರನ್ನು ಪರಿಶೋಧಿಸುವರು ಅಂತರಿಂದ್ರಿಯಗಳನ್ನೂ ಅಂತರಾಳವನ್ನೂ ವೀಕ್ಷಿಸುವವರು. ನನ್ನ ವ್ಯಾಜ್ಯವನ್ನು ನಿಮಗೆ ಅರಿಕೆಮಾಡಿರುವೆನು ನನ್ನ ಹಿಂಸಕರಿಗೆ ನೀವು ವಿಧಿಸುವ ಪ್ರತಿದಂಡನೆಯನ್ನು ನಾನು ನೋಡುವಂತೆ ಮಾಡಿ13ಸರ್ವೇಶ್ವರನನ್ನು ಸ್ತುತಿಸಿರಿ, ಸರ್ವೇಶ್ವರನನ್ನು ಸಂಕೀರ್ತಿಸಿರಿ. ಅವರು ಬಡವರ ಪ್ರಾಣವನ್ನು ಬಿಡಿಸಿದ್ದಾರೆ ಕೆಡುಕರ ಕೈಯಿಂದ.

ಕೀರ್ತನೆ  -  18:  1-3,  4-5,  6  
ಇಂಥಾ ದುಸ್ಥಿತಿಯಲಿ ನಾ ಮೊರೆಯಿಟ್ಟೆ ಪ್ರಭುವಿಗೆ / ಪ್ರಾರ್ಥನೆ ಮಾಡಿದೆ  ನನ್ನ ದೇವನಲಿ / ನನ್ನ ಪ್ರಾರ್ಥನೆ ಬಿದ್ದಿತು ಆತನ ಕಿವಿಯಲಿ //  
     
2ಪ್ರಭುವೇ ನನ್ನ ಕಲ್ಲುಕೋಟೆ, ನನಗೆ ವಿಮೋಚಕ / ಆತನೇ ನನ್ನ ದೇವ, ನನ್ನಾಶ್ರಯ ದುರ್ಗ / ಆತನೆನಗೆ ಗುರಾಣಿ, ಗಿರಿ, ರಕ್ಷಣಾಶೃಂಗ //
3ಪ್ರಭು ಸ್ತುತ್ಯಾರ್ಹನು / ಶತ್ರುಗಳಿಂದ ಕಾಪಾಡುವನು, ನಾನವಗೆ ಮೊರೆಯಿಡಲು //
4ನನಗೆ ಸುತ್ತಿಕೊಂಡವು ಮೃತ್ಯುಪಾಶಗಳು / ನಡುಕ ಹುಟ್ಟಿಸಿದ್ದವು ವಿನಾಶಪ್ರವಾಹಗಳು //
5ಆವರಿಸಿಕೊಂಡವು ಪಾತಾಳ ಪಾಶಗಳು | ನನ್ನ ಕಣ್ಮುಂದಿದ್ದವು ಮರಣಕರ ಉರುಲುಗಳು ||
6ಇಂಥಾ ದುಸ್ಥಿತಿಯಲಿ ನಾ ಮೊರೆಯಿಟ್ಟೆ ಪ್ರಭುವಿಗೆ / ಪ್ರಾರ್ಥನೆ ಮಾಡಿದೆ ನನ್ನ ದೇವನಲಿ / ನನ್ನ ಪ್ರಾರ್ಥನೆ ಬಿದ್ದಿತು ಆತನ ಕಿವಿಯಲಿ //
7ಆಗ ಕಂಪಿಸಿತು ಭೂಮಿ ಗಡಗಡನೆ / ಕದಲಿದವು ಬೆಟ್ಟದ ಬುಡಗಳು ಮಿಲಮಿಲನೆ / ಏಕೆನೆ, ಸಿಟ್ಟೇರಿತ್ತು ಆತನಿಗೆ //

ಶುಭಸಂದೇಶ - ಯೊವಾನ್ನ 1೦31-42
31ಆಗ ಯೆಹೂದ್ಯರು, ಅವರತ್ತ ಬೀರಲು ಕಲ್ಲುಗಳನ್ನು ಆಯ್ದುಕೊಂಡರು32ಅದಕ್ಕೆ ಯೇಸು, “ಪಿತನ ಹೆಸರಿನಲ್ಲಿ ನಾನು ಎಷ್ಟೋ ಸತ್ಕಾರ್ಯಗಳನ್ನು ನಿಮ್ಮ ಮುಂದೆ ಮಾಡಿದ್ದೇನೆ. ಇವುಗಳಲ್ಲಿ ಯಾವುದಕ್ಕಾಗಿ ನನ್ನ ಮೇಲೆ ಕಲ್ಲೆಸೆಯಬೇಕೆಂದಿದ್ದೀರಿ?” ಎಂದರು33ಅದಕ್ಕೆ ಯೆಹೂದ್ಯರು, “ನಿನ್ನ ಮೇಲೆ ಕಲ್ಲೆಸೆಯುವುದು ಸತ್ಕಾರ್ಯಕ್ಕಾಗಿ ಅಲ್ಲ, ದೇವದೂಷಣೆಗಾಗಿ. ನೀನು ಮನುಷ್ಯ ಮಾತ್ರನು; ಆದರೂ ನಿನ್ನನ್ನೇ ದೇವರನ್ನಾಗಿ ಮಾಡಿಕೊಳ್ಳುತ್ತಿದೀಯೇ,” ಎಂದು ಉತ್ತರಕೊಟ್ಟರು34ಆಗ ಯೇಸು, “ ‘ನೀವು ದೇವರುಗಳು ಎಂದು ದೇವರೇ ಹೇಳಿರುವ ಮಾತು ನಿಮ್ಮ ಧರ್ಮಶಾಸ್ತ್ರದಲ್ಲಿ ಬರೆದಿದೆಯಲ್ಲವೆ35ದೇವರ ವಾಕ್ಯವನ್ನು ಪಡೆದವರು ದೇವರುಗಳೇ ಎಂದು ಕರೆಯಲಾಗಿದೆ. ಹೀಗೆ ಪವಿತ್ರಗ್ರಂಥದಲ್ಲೇ ಲಿಖಿತವಾಗಿರುವುದು ನಿರರ್ಥಕವೇನೂ ಅಲ್ಲ36ಇಂತಿರುವಲ್ಲಿ, ಪಿತನೇ ಪ್ರತಿಷ್ಠಿಸಿ ಕಳುಹಿಸಿಕೊಟ್ಟವನಾದ ನಾನು, ‘ದೇವರ ಪುತ್ರನಾಗಿದ್ದೇನೆ ಎಂದು ಹೇಳಿಕೊಂಡದ್ದಕ್ಕೆ, ‘ಇವನು ದೇವದೂಷಣೆ ಮಾಡಿದ್ದಾನೆ ಎನ್ನುತ್ತೀರಲ್ಲಾ37ನಾನು ನನ್ನ ಪಿತನ ಕಾರ್ಯಗಳನ್ನು ಮಾಡದಿದ್ದರೆ ನೀವು ನನ್ನನ್ನು ನಂಬಬೇಕಾಗಿಲ್ಲ38ನಾನು ಹಾಗೆ ಮಾಡಿದ್ದೇ ಆದರೆ, ನನ್ನನ್ನು ನಂಬದೆ ಹೋದರೂ ನನ್ನ ಕಾರ್ಯಗಳನ್ನಾದರೂ ನಂಬಿರಿ. ಆಗ ಪಿತನು ನನ್ನಲ್ಲಿಯೂ ನಾನು ಪಿತನಲ್ಲಿಯೂ ಇರುವುದು ನಿಮಗೆ ಅರಿವಾಗುವುದು ಹಾಗೂ ಮನದಟ್ಟಾಗುವುದು,” ಎಂದರು39ಮತ್ತೊಮ್ಮೆ ಯೇಸುವನ್ನು ಬಂಧಿಸಲು ಯೆಹೂದ್ಯರು ಪ್ರಯತ್ನಿಸಿದರು. ಆದರೆ ಯೇಸು ಅವರ ಕೈಯಿಂದ ತಪ್ಪಿಸಿಕೊಂಡರು40ಬಳಿಕ ಯೇಸುಸ್ವಾಮಿ ಜೋರ್ಡನ್ ನದಿಯನ್ನು ದಾಟಿ ಯೊವಾನ್ನನು ಮೊತ್ತ ಮೊದಲು ಸ್ನಾನದೀಕ್ಷೆಯನ್ನು ಕೊಡುತ್ತಿದ್ದ ಸ್ಥಳಕ್ಕೆ ಬಂದು ಅಲ್ಲಿ ತಂಗಿದರು41 ಹಲವರು ಅವರ ಬಳಿಗೆ ಬರತೊಡಗಿದರು. ‘ಯೊವಾನ್ನನು ಒಂದು ಸೂಚಕಕಾರ್ಯವನ್ನೂ ಮಾಡಲಿಲ್ಲ; ಆದರೆ ಇವರ ವಿಷಯವಾಗಿ ಆತ ಹೇಳಿದ್ದೆಲ್ಲವೂ ನಿಜವಾಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು42ಅಲ್ಲಿ ಹಲವರಿಗೆ ಯೇಸುವಿನಲ್ಲಿ ವಿಶ್ವಾಸ ಹುಟ್ಟಿತು.

ಚಿಂತನೆ
‘ನಾನು ದೇವರ ಮಗ/ಮಗಳು’ ಎಂಬ ಭಾವಕ್ಕಿಂತ ’ನಾನು ಪಾಪಿ’ ಎಂಬ ಭಾವನೆಯೇ ಗಾಢವಾಗಿ ನಮ್ಮನ್ನು ಆವರಸಿಕೊಂಡಿರುತ್ತದೆ. ಆದರೆ ಕ್ರಿಸ್ತನಲ್ಲಿ ’ನಾನು ದೇವರ ಪುತ್ರ’ ಎಂಬ ಭಾವನೆ ಆವರಿಸಿಕೊಂಡಿತ್ತು, ಈ ಭಾವದಲ್ಲಿಯೇ ಅವರು ಬೆಳೆದರು. ಯೆಹೂದ್ಯ ಮುಖಂಡರು ಅವರ ಮೇಲೆ ದೇವದೂಷಣೆಯ ಆರೋಪವನ್ನು ಹೊರಿಸಿದರು, ಅವರ ಕಟ್ಟಳೆಗಳ ಪ್ರಕಾರ ದೇವದೂಷಣೆ ಮಾಡಿದವರನ್ನು ಕಲ್ಲೆಸೆದು ಕೊಲ್ಲಬೇಕಿತ್ತು. ಆದರೆ ಯೇಸು ಜೀವಭಯದಿಂದ ಎಂದೂ ತಮ್ಮ ಮನದ ಮಾತನ್ನು ಅದುಮಿಡಲಿಲ್ಲ ಗಟ್ಟಿಯಾದ ದನಿಯಲ್ಲಿ ಬೋಧಿಸಿದರು, ಎಂದೂ ತಮ್ಮ ಸ್ವಂತ ಅಸ್ತಿತ್ವದ ಬಗ್ಗೆ ಯೋಚಿಸದೆ ತಂದೆ ದೇವರಲ್ಲಿ ವಿಶ್ವಾಸವಿಟ್ಟು ಜೀವಭಯವನ್ನು ತೊರೆದು ಬಾಳಿದರು. ಜೀವಭಯ, ಜೀವನದಲ್ಲಿ ಸುಖಸಂತೋಷವನ್ನು ಕಳೆದುಕೊಳ್ಳುವ ಭಯ ನಮ್ಮನ್ನು ಕುಬ್ಜರನ್ನಾಗಿಸುತ್ತದೆ. ಭಯದಲ್ಲಿ ಬಾಳುವವರು ದಿನನಿತ್ಯವೂ ಸಾಯುತ್ತಿರುತ್ತಾರೆ. ವಾಸ್ತವದಲ್ಲಿ ಅವರು ಜೀವಿಸುತ್ತಲೇ ಇಲ್ಲ ಎನ್ನಬಹುದು. ಪ್ರಭು ಯೇಸುವಿನಂತೆ ನಾವು ಜೀವಭಯವನ್ನು ತೊರೆದು ದೇವರ ಮಕ್ಕಳಾಗಿ ಜೀವಿಸುವ ಪ್ರಯತ್ನ ಮಾಡೋಣ. ಪಾಪಪ್ರಜ್ಞೆ ಅವಶ್ಯಕ, ಆದರೆ ದೈವಪ್ರಜ್ಞೆ ಅದನ್ನು ಮೆಟ್ಟಿನಿಲ್ಲಬೇಕು.
- ಫಾದರ್ ಪೀಟರ್ ಚಿನ್ನಪ್ಪ

No comments:

Post a Comment