21 ಏಪ್ರಿಲ್ 2019

ಬಿಳಿ/ಭಾನು/ಪ್ರಭುವಿನ ಪುನರುತ್ಥಾನದ ಪಾಸ್ಖ ಭಾನುವಾರ             
1ನೇ ವಾಚನ - ಪ್ರೇ.ಕಾ 1೦: 34, 37-43               
ಕೀರ್ತನೆ - 118: 1-2, 16, 17: 22-23       
2ನೇ  ವಾಚನ  ಕೊಲೊಸ್ಸೆ  31-4 ಅಥವಾ  1  ಕೊರಿಂಥ  56-8       
ಶುಭಸಂದೇಶ  -ಯೊವಾನ್ನ  2೦1-9    ಅಥವಾ  ಲೂಕ  241-12       

1ನೇ ವಾಚನ - ಪ್ರೇ.ಕಾ 1೦3437-43      
34ಆಗ ಪೇತ್ರನು ಹೀಗೆಂದು ಉಪದೇಶ ಮಾಡಿದನು: “ದೇವರು ಪಕ್ಷಪಾತಿಯಲ್ಲ. ವಿಷಯ ನನಗೆ ಈಗ ಮನದಟ್ಟಾಗಿದೆ37ಇತ್ತೀಚೆಗೆ ಜುದೇಯ ನಾಡಿನಾದ್ಯಂತ ನಡೆದ ಘಟನೆಗಳು ನಿಮಗೆ ತಿಳಿದೇ ಇರಬೇಕು38ಇವು ನಜರೇತಿನ ಯೇಸುವಿಗೆ ಸಂಬಂಧಪಟ್ಟ ವಿಷಯಗಳು. ಸ್ನಾನದೀಕ್ಷೆಯನ್ನು ಮಾಡಿಸಿಕೊಳ್ಳಬೇಕೆಂದು ಯೊವಾನ್ನನು ಬೋಧಿಸಿದ ನಂತರ, ಯೇಸು ತಮ್ಮ ಸೇವಾವೃತ್ತಿಯನ್ನು ಗಲಿಲೇಯದಲ್ಲಿ ಪ್ರಾರಂಭಿಸಿದರು. ಅವರು ಪವಿತ್ರಾತ್ಮರಿಂದಲೂ ದೈವಶಕ್ತಿಯಿಂದಲೂ ಅಭಿಷಿಕ್ತರಾಗಿದ್ದರು. ದೇವರು ತಮ್ಮೊಡನೆ ಇದ್ದುದರಿಂದ ಅವರು ಎಲ್ಲೆಡೆಯಲ್ಲೂ ಒಳಿತನ್ನು ಮಾಡುತ್ತಾ, ಪಿಶಾಚಿಪೀಡಿತರಾದವರನ್ನು ಸ್ವಸ್ಥಪಡಿಸುತ್ತಾ ಸಂಚರಿಸಿದರು39ಅವರು ಯೆಹೂದ್ಯರ ಹಳ್ಳಿ ಪಳ್ಳಿಗಳಲ್ಲೂ ಜೆರುಸಲೇಮಿನಲ್ಲೂ ಎಸಗಿದ ಸಕಲ ಕಾರ್ಯಗಳಿಗೆ ನಾವು ಸಾಕ್ಷಿಗಳು. ಯೆಹೂದ್ಯರು ಯೇಸುವನ್ನು ಶಿಲುಬೆ ಮರಕ್ಕೆ ನೇತುಹಾಕಿ ಕೊಂದರು40ಆದರೆ ದೇವರು ಅವರನ್ನು ಮೂರನೆಯ ದಿನ ಪುನರುತ್ಥಾನಗೊಳಿಸಿ ಪ್ರತ್ಯಕ್ಷರಾಗುವಂತೆ ಮಾಡಿದರು41ಅವರು ಕಾಣಿಸಿಕೊಂಡದ್ದು ಎಲ್ಲಾ ಜನರಿಗೆ ಅಲ್ಲ; ದೇವರಿಂದ ಸಾಕ್ಷಿಗಳಾಗಿ ಆಯ್ಕೆಯಾಗಿದ್ದ ನಮಗೆ. ಅವರು ಪುನರುತ್ಥಾನ ಹೊಂದಿದ ನಂತರ ಅವರೊಡನೆಯೇ ಊಟ ಮಾಡಿದವರು ನಾವು42ಮಾನವರಿಗೆ ಶುಭಸಂದೇಶವನ್ನು ಬೋಧಿಸುವಂತೆಯೂ ಜೀವಂತರಿಗೂ ಹಾಗೂ ಮೃತರಿಗೂ ದೇವರೇ ಅವರನ್ನು ನ್ಯಾಯಾಧಿಪತಿಯನ್ನಾಗಿ ನೇಮಿಸಿದ್ದಾರೆಂದು ರುಜುವಾತುಪಡಿಸುವಂತೆಯೂ ನಮಗೆ ಆಜ್ಞಾಪಿಸಿದ್ದಾರೆ43ಎಲ್ಲಾ ಪ್ರವಾದಿಗಳು ಅವರನ್ನು ಕುರಿತೇ ಸಾಕ್ಷಿ ನೀಡಿದ್ದಾರೆ; ಅವರಲ್ಲಿ ವಿಶ್ವಾಸವಿಡುವ ಪ್ರತಿಯೊಬ್ಬನೂ ಅವರ ನಾಮದ ಶಕ್ತಿಯಿಂದ ಪಾಪಕ್ಷಮೆಯನ್ನು ಪಡೆಯುವನೆಂದು ಪ್ರವಾದನೆಮಾಡಿದ್ದಾರೆ.”

ಕೀರ್ತನೆ - 1181-2161722-23  
ಪ್ರಭುವೇ ನಿಯೋಜಿಸಿದ ದಿನವಿದು /ಹರ್ಷಿಸಿ ಆನಂದಿಸೋಣ ಇಂದು
1 ಸಲ್ಲಿಸಿ ನೀವೆಲ್ಲ ಪ್ರಭುವಿಗೆ ಧನ್ಯವಾದ / ಆತ ಒಳ್ಳೆಯವ, ಆತನ ಪ್ರೀತಿ ಶಾಶ್ವತ //
2ಸಾರಲಿ ಇಸ್ರಯೇಲಿನ ಜನತೆ / 'ಆತನ ಪ್ರೀತಿ ಶಾಶ್ವತ' ಎಂದೆ //
16ವಿಜಯಸಾಧನ ಪ್ರಭುವಿನಾ ಬಲಗೈಯಿಂದ / ಪರಾಕ್ರಮ, ಪ್ರದರ್ಶನವೂ ಅದರಿಂದ //
17ಸಾಯೆನು, ಜೀವದಿಂದಿರುವೆನು ನಾನು / ಪ್ರಭುವಿನ ಕಾರ್ಯಗಳನು ಸಾರುವೆನು //
22ಮನೆಕಟ್ಟುವವರು ಮೂಲೆಗೆಸೆದ ಕಲ್ಲು / ಆಯಿತು ನೋಡು, ಮುಖ್ಯವಾದ ಮೂಲೆಗಲ್ಲು //
23ಪ್ರಭುವಿನಿಂದಲೆ ಆದ ಕಾರ್ಯ / ನಮ್ಮ ಕಣ್ಣಿಗೆ ಅದೆಂತಹ ಆಶ್ಚರ್ಯ! //

2ನೇ  ವಾಚನ  ಕೊಲೊಸ್ಸೆ  3:  1-4    
1ನೀವು ಯೇಸುಕ್ರಿಸ್ತರೊಂದಿಗೆ ಪುನರುತ್ಥಾನ ಹೊಂದಿರುವುದಾದರೆ ಸ್ವರ್ಗೀಯ ವಿಷಯಗಳ ಕಡೆಗೆ ಗಮನಕೊಡಿ. ಕ್ರಿಸ್ತಯೇಸು ಸ್ವರ್ಗದಲ್ಲಿ ದೇವರ ಬಲಗಡೆಯಲ್ಲಿ ಆಸೀನರಾಗಿದ್ದಾರೆ2ನೀವು ಕ್ರಿಸ್ತಯೇಸುವಿನೊಂದಿಗೆ ಮರಣ ಹೊಂದಿರುವುದರಿಂದ ಅವರೊಂದಿಗೆ ನಿಮ್ಮ ಜೀವ ದೇವರಲ್ಲಿ ಮರೆಯಾಗಿದೆ3ನಿಮ್ಮ ಮನಸ್ಸು ಪ್ರಾಪಂಚಿಕ ವಿಷಯಗಳ ಮೇಲೆ ಅಲ್ಲ, ಸ್ವರ್ಗೀಯ ವಿಷಯಗಳ ಮೇಲೆ ಕೇಂದ್ರೀಕೃತವಾಗಿರಲಿ4ಕ್ರಿಸ್ತಯೇಸುವೇ ನಿಮ್ಮ ನೈಜ ಜೀವವಾಗಿದ್ದಾರೆ. ಅವರು ಪುನರಾಗಮಿಸುವಾಗ ನೀವೂ ಸಹ ಅವರ ಮಹಿಮೆಯಲ್ಲಿ ಪಾಲುಗಾರರಾಗಿ ಅವರೊಂದಿಗೆ ಪ್ರತ್ಯಕ್ಷರಾಗುವಿರಿ.

ಶುಭಸಂದೇಶ  -ಯೊವಾನ್ನ  2೦:  1-9    ಅಥವಾ  ಲೂಕ  24:  1-12
1ಅಂದು ಭಾನುವಾರ, ಮುಂಜಾನೆ. ಇನ್ನೂ ಕತ್ತಲಾಗಿತ್ತು. ಮಗ್ದಲದ ಮರಿಯಳು ಸಮಾಧಿಯ ಬಳಿಗೆ ಬಂದಳು. ಸಮಾಧಿಯ ಬಾಗಿಲಿಗೆ ಮುಚ್ಚಲಾಗಿದ್ದ ಕಲ್ಲು ಅಲ್ಲಿಂದ ತೆಗೆದುಹಾಕಿರುವುದನ್ನು ಕಂಡಳು2ಆಗ ಆಕೆ ಸಿಮೋನ ಪೇತ್ರನ ಮತ್ತು ಯೇಸುವಿಗೆ ಆಪ್ತನಾಗಿದ್ದ ಇನ್ನೊಬ್ಬ ಶಿಷ್ಯನ ಬಳಿಗೆ ಓಡಿ ಬಂದು, “ಪ್ರಭುವನ್ನು ಸಮಾಧಿಯೊಳಗಿಂದ ತೆಗೆದುಕೊಂಡು ಹೋಗಿಬಿಟ್ಟಿದ್ದಾರೆ; ಅವರನ್ನು ಎಲ್ಲಿ ಇಟ್ಟಿದ್ದಾರೋ ಗೊತ್ತಿಲ್ಲ,” ಎಂದು ಹೇಳಿದಳು3ಇದನ್ನು ಕೇಳಿ ಪೇತ್ರನೂ ಇನ್ನೊಬ್ಬ ಶಿಷ್ಯನೂ ಸಮಾಧಿಯ ಕಡೆಗೆ ಹೊರಟರು4ಇಬ್ಬರೂ ಓಡಿದರು. ಇನ್ನೊಬ್ಬ ಶಿಷ್ಯನು ಪೇತ್ರನಿಗಿಂತ ಮುಂದೆ ಓಡಿ ಸಮಾಧಿಯನ್ನು ಮೊದಲು ತಲುಪಿದನು5ಅವನು ಬಗ್ಗಿ ನೋಡಿದಾಗ ಅಲ್ಲಿ ನಾರುಬಟ್ಟೆಗಳು ಬಿದ್ದಿರುವುದು ಕಾಣಿಸಿತು. ಆದರೆ ಅವನು ಒಳಗೆ ನುಗ್ಗಲಿಲ್ಲ6ಅವನ ಹಿಂದೆಯೇ ಸಿಮೋನ ಪೇತ್ರನು ಬಂದು ನೆಟ್ಟಗೆ ಸಮಾಧಿಯೊಳಗೆ ನುಗ್ಗಿದನು; ಅಲ್ಲಿ ನಾರುಮಡಿಗಳು ಬಿದ್ದಿರುವುದನ್ನು ಕಂಡನು7ಯೇಸುವಿನ ತಲೆಗೆ ಸುತ್ತಿದ್ದ ಬಟ್ಟೆ, ನಾರುಮಡಿಗಳೊಡನೆ ಇರದೆ, ಅದನ್ನು ಮಡಚಿ ಪ್ರತ್ಯೇಕವಾಗಿ ಇಟ್ಟಿರುವುದನ್ನು ಕಂಡನು8ಸಮಾಧಿಯನ್ನು ಮೊದಲು ತಲುಪಿದ್ದ ಇನ್ನೊಬ್ಬ ಶಿಷ್ಯನೂ ಆಮೇಲೆ ಒಳಗೆ ನುಗ್ಗಿ ನೋಡಿದನು; ನೋಡಿ ನಂಬಿದನು9ಯೇಸು ಸತ್ತ ಮೇಲೆ ಮರಳಿ ಜೀವಂತರಾಗಿ ಎದ್ದುಬರಬೇಕು, ಎಂಬ ಪವಿತ್ರಗ್ರಂಥದ ವಾಕ್ಯ ಅವರಿಗೆ ಅದುವರೆಗೆ ಅರ್ಥವಾಗಿರಲಿಲ್ಲ.

ಚಿಂತನೆ
ಪ್ರಭುಯೇಸುವು ಮೃತರ ದೇವರಲ್ಲ. ಅವರು ಜೀವಂತರ ದೇವರು. ಮೃತ್ಯುವು ಅವರನ್ನು ಅಡಗಿಸಿಡುವುದಕ್ಕಾಗಲಿಲ್ಲ. ಸಾವಿನ ಮೇಲೆ ಜಯವನ್ನು ಸಾಧಿಸಿದ ಮೃತ್ಯುಂಜಯರು ಅವರು.  ಮೃತ್ಯುವನ್ನು ಸೋಲಿಸಿದ ಮೊತ್ತಮೊದಲ ನರಪುತ್ರ ಯೇಸುಕ್ರಿಸ್ತರು. ಪಾತಾಳದ ಯಾವುದೇ ಸಂಕೋಲೆ ಅವರಿಗೆ ಮೂರು ದಿನಗಳಿಗಿಂತ ಹೆಚ್ಚು ಕಾಲ ಮೃತರ ಮಧ್ಯದಲ್ಲಿ ಇಡಲಾಗಲಿಲ್ಲ.  ಅವರು ಸತ್ತು ಮೂರು ದಿನಗಳ ನಂತರ ಪುನರುತ್ಥಾನರಾಗುತ್ತಾರೆ ಮತ್ತು ಪಾಪ ಕತ್ತಲೆಯಿಂದ ವಿಶ್ವದ ಜನತೆಗೆ ಸ್ವರ್ಗಿಯ ಬೆಳಕನ್ನು ದಯಪಾಲಿಸುತ್ತಾರೆ.  ಇದು ದೇವರು ಕರುಣೆಯಿಂದ ಭುವಿಗೆ ಕೊಟ್ಟ ವರವಾಗಿದೆ.
ಮಗ್ದಲದ ಮರಿಯ ಮುಂಚಿತವಾಗಿ ಬೆಳಿಗ್ಗಿನ ಜಾವದಲ್ಲಿ ಯೇಸುವಿನ ಸಮಾಧಿಯನ್ನು ಭೇಟಿ ಮಾಡುತ್ತಾಳೆ ಮತ್ತು ಯೇಸುಸ್ವಾಮಿ ಪುನರುತ್ಥಾನರಾಗಿದ್ದ ಸಮಾಚಾರವನ್ನು ಪ್ರಪ್ರಥಮವಾಗಿ ತಿಳಿಯುತ್ತಾಳೆ.  ಪುನರುತ್ಥಾನರಾದ ಯೇಸುಸ್ವಾಮಿಯ ಮಗ್ದಲದ ಮರಿಯಳ ಮೂಲಕ ಇಡೀ ಸ್ತ್ರೀ ಸಂತಾನಕ್ಕೆ ಪ್ರಾಪ್ತವಾದ ಶ್ರೇಷ್ಠ ಕೊಡುಗೆಯಾಗಿದೆ. ಇದು ಪ್ರಭುವಿನ ಸ್ತ್ರೀ ವರ್ಗಕ್ಕೆ ಪುನರುತ್ಥಾನರಾದ ಕೂಡಲೆ ಕೊಟ್ಟ ಗೌರವ ಮತ್ತು ಒಲುಮೆಯ ಕಾಣಿಕೆಯಾಗಿದೆ.  ಪುನರುತ್ಥಾನರಾದ ಯೇಸುಸ್ವಾಮಿಯ ಜೀವನ ತತ್ವಗಳನ್ನು ಅನುಸರಿಸಿ, ಪ್ರಭುವಿನ ಬಾಳಪಥದಲ್ಲಿ ನಡೆಯಿರಿ.  ಆಮೆನ್.
- ಫಾದರ್ ಪೀಟರ್ ಚಿನ್ನಪ್ಪ

No comments:

Post a Comment