03 ಮಾರ್ಚ್ 2019

03 ಮಾರ್ಚ್ 2019
ಸಾಧಾರಣ ಕಾಲದ ಎಂಟನೇ ಭಾನುವಾರ

ಮೊದಲವಾಚನ: 
ಸಿರಾಖ 27: 4-7
4ಕಾಳನು ಸಾಣಿಸುವಾಗ ಹಿಪ್ಪೆ ಉಳಿಯುವುದು ಜರಡಿಯಲ್ಲಿ ಮನುಷ್ಯನ ಹೊಲೆತನ ಕಂಡುಬರುವುದು ಅವನ ಆಲೋಚನೆಯಲ್ಲಿ5ಕುಂಬಾರನ ಮಡಕೆಯ ಪರೀಕ್ಷೆ ಬೆಂಕಿಯ ಆವಿಗೆಯಿಂದ ಮನುಷ್ಯನ ಪರೀಕ್ಷೆ ಅವನ ಸಂಭಾಷಣೆಯಿಂದ6ಮರದ ಫಲ ತೋರಿಸುವುದು ಅದನ್ನು ಬೆಳೆಯಿಸಿದ ಹದವನ್ನು ಮಾತು ವ್ಯಕ್ತಪಡಿಸುವುದು ಮನಸ್ಸಿನ ಆಲೋಚನೆಯನ್ನು7ಒಬ್ಬನನ್ನು ಹೊಗಳಬೇಡ ಅವನ ಸಂಭಾಷಣೆ ಯನ್ನು ಅಳೆಯುವ ಮೊದಲೇ ಏಕೆಂದರೆ ಅವನ ಸತ್ವಪರೀಕ್ಷೆ ಅಡಗಿರುವುದು ಅದರಲ್ಲೇ.


ಕೀರ್ತನೆ 92: 2-3, 13-14, 15-16
ಹೇ ಪ್ರಭೂ, ನಿನ್ನ ಗುಣಗಾನ ಮಂಗಳಕರ

2: ಪ್ರಾತಃಕಾಲದಲೆ ನಿನ್ನ ಪ್ರೀತಿಯನು ರಾತ್ರಿಕಾಲದಲೆ ನಿನ್ನ ಸತ್ಯತೆಯನು
3: ವರ್ಣಿಸುವುದುಚಿತ ವೀಣಾ ಸ್ವರಮಂಡಲದಿಂದ ಕೊಳಲ ದನಿಯಿಂದ, ಕಿನ್ನರಿಯ ನಾದಸ್ವರದಿಂದ
13: ಅವರಿರುವರು ಪ್ರಭುವಿನಾಲಯದಲೆ ನೆಟ್ಟ ಸಸಿಗಳಂತೆ ನಮ್ಮ ದೇವಾಂಗಳದಿ ಹುಲುಸಾಗಿ ಬೆಳೆವ ಮರಗಳಂತೆ
14: ಫಲಿಸುವರು ಮುಪ್ಪಿನಲೂ, ಶೋಭಿಸುವರು ಪಚ್ಚೆಪಸಿರಂತೆ
15: ಪರಿ ಪಡೆವುದು ಸಾಕ್ಷ್ಯ ಪ್ರಭುವಿನಾ ಸತ್ಯಸಂಧತೆ ಆತನೇ ನನಗೆ ಪೊರೆಬಂಡೆ, ಆತನಲ್ಲಿಲ್ಲ ವಕ್ರತೆ



ಎರಡನೇ ವಾಚನ: 
1ಕೊರಿಂಥ 15: 54-58
54ಅಳಿದುಹೋಗುವಂಥದ್ದು ಅಮರತ್ವವನ್ನೂ ಮತ್ರ್ಯವಾದುದು ಅಮತ್ರ್ಯವನ್ನೂ ಧರಿಸಿಕೊಂಡಾಗ ಪವಿತ್ರಗ್ರಂಥದ ವಾಕ್ಯ ನೆರವೇರುವುದು55ಸಾವಿಗೆ ಸೋಲಾಯಿತು ಜಯವು ಸಂಪೂರ್ಣವಾಯಿತು. ಎಲೈ ಸಾವೇ, ನಿನ್ನ ಜಯವೆಲ್ಲಿ? ಎಲೈ ಸಾವೇ, ನಿನ್ನ ವಿಷಕೊಂಡಿಯೆಲ್ಲಿ56ಪಾಪವೇ ಸಾವಿನ ವಿಷಕೊಂಡಿ. ಪಾಪಕ್ಕೆ ಶಕ್ತ್ಯಾಧಾರ ಶಾಸ್ತ್ರವಿಧಿಗಳೇ57ಆದರೆ ನಮ್ಮ ಪ್ರಭುವಾದ ಯೇಸುಕ್ರಿಸ್ತರ ಮುಖಾಂತರ ನಮಗೆ ಜಯವನ್ನು ದೊರಕಿಸಿಕೊಟ್ಟಿರುವ ದೇವರಿಗೆ ಸ್ತ್ರೋತ್ರ ಸಲ್ಲಲಿ58ನನ್ನ ಪ್ರಿಯ ಸಹೋದರರೇ, ಸ್ಥಿರ ಚಿತ್ತರಾಗಿರಿ, ನಿಶ್ಚಲರಾಗಿರಿ. ಪ್ರಭುವಿನ ಸೇವೆಯಲ್ಲಿ ನೀವು ಪಡುವ ಪ್ರಯಾಸ ಎಂದಿಗೂ ನಿಷ್ಫಲವಾಗದು. ಆದ್ದರಿಂದ ಅವರ ಸೇವೆಯಲ್ಲಿ ನಿರಂತರ ಶ್ರದ್ಧೆಯುಳ್ಳವರಾಗಿರಿ.

ಶುಭಸಂದೇಶ: 
ಲೂಕ 6: 39-45
39ಯೇಸುಸ್ವಾಮಿ ಅವರಿಗೆ ಈ ಸಾಮತಿಯನ್ನೂ ಹೇಳಿದರು: ಕುರುಡನು ಕುರುಡನಿಗೆ ದಾರಿ ತೋರಿಸಲಾದೀತೆ? ಇಬ್ಬರೂ ಹಳ್ಳದಲ್ಲಿ ಬೀಳುವುದಿಲ್ಲವೆ40ಗುರುವಿಗಿಂತ ಶಿಷ್ಯನು ಶ್ರೇಷ್ಠನಲ್ಲ; ಆದರೂ ಪೂರ್ಣ ಶಿಕ್ಷಣ ಪಡೆದ ಪ್ರತಿಯೊಬ್ಬನೂ ಗುರುವಿನಂತೆ ಆಗುವನು41ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ನೋಡದೆ, ಸೋದರನ ಕಣ್ಣಿನಲ್ಲಿರುವ ಅಣುವನ್ನು ಗಮನಿಸುವುದೇಕೆ42ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನೇ ಕಾಣಲಾರದ ನೀನು, 'ತಮ್ಮಾ ತಾಳು, ನಿನ್ನ ಕಣ್ಣಿನಲ್ಲಿರುವ ಅಣುವನ್ನು ತೆಗೆದು ಬಿಡುತ್ತೇನೆ,' ಎಂದು ಸೋದರನಿಗೆ ಹೇಗೆ ಹೇಳಬಲ್ಲೆ? ಎಲೈ ಕಪಟಿಯೇ, ಮೊದಲು ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ತೆಗೆದು ಹಾಕು, ಅನಂತರ ನಿನ್ನ ಸೋದರನ ಕಣ್ಣಿನಲ್ಲಿರುವ ಅಣುವನ್ನು ತೆಗೆದು ಹಾಕಲು ನಿನಗೆ ಕಣ್ಣು ನಿಚ್ಚಳವಾಗಿ ಕಾಣಿಸುವುದುಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ; ಕೆಟ್ಟ ಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ. ಪ್ರತಿಯೊಂದು ಮರದ ಗುಣವನ್ನು ಅದರ ಹಣ್ಣಿನಿಂದ ಗುರುತಿಸಬಹುದು. ಮುಳ್ಳುಗಿಡದಲ್ಲಿ ಅಂಜೂ ಕೀಳುವಂತಿಲ್ಲ. ಮುಳ್ಳುಕಳ್ಳಿಯಲ್ಲಿ ದ್ರಾಕ್ಷಿ ಕೊಯ್ಯುವಂತಿಲ್ಲ. ಒಳ್ಳೆಯವನು ತನ್ನ ಹೃದಯವೆಂಬ ಬೊಕ್ಕಸದಿಂದ ಒಳ್ಳೆಯದನ್ನೇ ಹೊರತರುತ್ತಾನೆ. ಕೆಟ್ಟವನ್ನು ಕೆಟ್ಟ ಬೊಕ್ಕಸದಿಂದ ಕೆಟ್ಟದ್ದನ್ನೇ ಹೊರತರುತ್ತಾನೆ. ಹೃದಯದಲ್ಲಿ ತುಂಬಿರುವುದೇ ಬಾಯಿಮಾತಾಗಿ ತುಳುಕುತ್ತದೆ.

ಚಿಂತನೆ: ಮಾನವರ ಆಲೋಚನೆಗಳು, ಸಂಭಾಷಣೆಗಳು ಹದವಾಗಿರಬೇಕು. ಅವು ಇತರರಿಗೆ ಹಿತವನ್ನುಂಟುಮಾಡಬೇಕು. ಅಗ ಅಲ್ಲಿ ಕಪಟವಿರುವುದಿಲ್ಲ. ಕಪಟತನ ಯಾರುಗೂ ಇಷ್ಟವಿಲ್ಲ ಯಾಕೆಂದರೆ ಅಲ್ಲಿ ನೈಜತೆಯಾಗಲಿ, ಶುದ್ಧ ಪ್ರೀತಿಯಾಗಲಿ ಇರುವುದಿಲ್ಲ. ಎಲ್ಲಿ ನಕಲಿ ಪ್ರೀತಿ ಇದೆಯೇ ಅಲ್ಲಿ ನೈಜತೆ ಮರೆಯಾಗಿ ನಾಟಕೀಯತೆ ಮನೆ ಮಾಡುತ್ತದೆ. ಅಗ ಮಾನವರು ಇತರರ ಶ್ರೇಷ್ಠತೆಯನ್ನು ಮರೆತು ತಾವೇ ಶ್ರೇಷ್ಠವೆನ್ನುತ್ತಾರೆ. ಅಲ್ಲಿ ಕಪಟತನ ಚಿಗುರೊಡೆದು ಮಾನವರು ತಾವೇ ಶ್ರೇಷ್ಠವೆಂದು ತಿಳಿದು ಇತರರ ಶ್ರೇಷ್ಠತೆಯನ್ನು ಮರೆಮಾಡುತ್ತದೆ. ಮಾನವ ಯಾವಾಗ ತನ್ನ ಶ್ರೇಷ್ಠತೆಯನ್ನು ಮರೆತು ಇತರರ ಶ್ರೇಷ್ಠತೆಯನ್ನು ಗುರುತಿಸುತ್ತಾನೋ ಆಗ ಅವನಲ್ಲಿ ಜ್ಞಾನೋದಯವಾಗಿ ಕಪಟತನ ಮರೆಯಾಗುತ್ತದೆ. ಜ್ಞಾನದ ಬೆಳಕು ತೆರೆದುಕೊಳ್ಳುತ್ತದೆ. ಮಾನವರು ಸ್ಥಿರ ಚಿತ್ತರಾಗಿರಬೇಕು. ನಿಶ್ಚಲರಾಗಿರಬೇಕು ನಿಷ್ಕಪಟಿಗಳಾಗಿರಬೇಕು. ಆಗ ಪ್ರಭುವಿನ ನೈಜ ಶಿಷ್ಯರಾಗಲು ಸಾಧ್ಯ!

ಚಿತ್ರಗೂಗಲ್‌ ಕೃಪೆ

© 'ದನಿಮಾಧ್ಯಮ ಮನೆ


No comments:

Post a Comment