ಸಾರ್ವಜನಿಕ ಉದ್ದೇಶ:
ತಮ್ಮ ಜೀವನದ ಹಂಗು ತೊರೆದು,
ಇತರರ ಜೀವವನ್ನು ಉಳಿಸಲು ಯುದ್ದ ಪ್ರದೇಶಗಳಲ್ಲಿ
ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಅವರ
ಸಹಯೋಗಿಗಳಿಗಾಗಿ
1ನೇ ವಾಚನ ಯೆರೆ 11: 18-20
ಕೀರ್ತನೆ 7: 1-2, 8-9, 10-11.
ಶುಭಸಂದೇಶ -ಯೊವಾನ್ನ 7: 40-52
1ನೇ ವಾಚನ ಯೆರೆ 11: 18-20
18ಸರ್ವೇಶ್ವರಸ್ವಾಮಿ ತಿಳಿಸಿದ್ದರಿಂದಲೇ ಶತ್ರುಗಳು ನನಗೆ ವಿರುದ್ಧ ಹೂಡಿದ್ದ ಕುತಂತ್ರವು ನನಗೆ ಗೊತ್ತಾಯಿತು. ಅವರ ಕೃತ್ಯಗಳನ್ನು ನನಗೆ ತೋರಿಸಲಾಯಿತು. 19ನಾನಾದರೋ ವಧೆಗೆ ಒಯ್ಯುವ ಸಾಧು ಕುರಿಯಂತೆ ಇದ್ದೆ. “ಮರವನ್ನು ಫಲಸಹಿತ ನಾಶಪಡಿಸೋಣ, ಜೀವ ಲೋಕದಿಂದ ಇವನನ್ನು ನಿರ್ಮೂಲ ಮಾಡೋಣ. ಅವನ ಹೆಸರೇ ಇಲ್ಲದಂತಾಗಲಿ,” ಎಂದು ಅವರು ಕುಯುಕ್ತಿ ಕಲ್ಪಿಸಿದ್ದರು. ಆದರೆ ನನಗೆ ಅದು ತಿಳಿದಿರಲಿಲ್ಲ. 20ಆಗ ನಾನು, “ಸೇನಾಧೀಶ್ವರರಾದ ಸರ್ವೇಶ್ವರಾ, ನೀವು ಹೃನ್ಮನಗಳನ್ನು ಪರೀಕ್ಷಿಸಿ ನ್ಯಾಯವಾದ ತೀರ್ಪನ್ನು ನೀಡುವವರು. ನೀವು ಅವರಿಗೆ ಮಾಡುವ ಪ್ರತೀಕಾರವನ್ನು ನಾನು ಕಾಣುವೆನು. ನನ್ನ ವ್ಯಾಜ್ಯವನ್ನು ನಿಮ್ಮ ಕೈಗೊಪ್ಪಿಸಿದ್ದೇನೆ,” ಎಂದೆನು.
ಕೀರ್ತನೆ 7: 1-2, 8-9, 10-11.
ನಿನ್ನಾಶ್ರಯವನರಸಿ ಹೇ ಸ್ವಾಮಿ ದೇವಾ, ನಾ ಬಂದಿಹೆನು
2ಇಲ್ಲದಿರೆ ಶತ್ರು ತಿಳಿದಾನು ನನಗೆ ರಕ್ಷಕನಿಲ್ಲವೆಂದು / ಝಲ್ಲನೆ ಸೀಳಿಬಿಟ್ಟಾನು ಸಿಂಹದಂತೆ ಮೇಲೆಬಿದ್ದು //
3ಸ್ವಾಮಿ ದೇವಾ, ನಾನೀಪರಿ ನಡೆದಿರೆ : ಅಕ್ರಮಕ್ಕೆ ಕೈ ಹಾಕಿರೆ /
9ಮಾನವರ ಹೃನ್ಮನವನರಿತಿಹ ಸತ್ಯ ಸ್ವರೂಪಿ ದೇವಾ, / ದುರುಳರ ಕೆಡುಕನಳಿಸಯ್ಯಾ, ಸತ್ಯವಂತರನು ನೀ ಉಳಿಸಯ್ಯಾ /
10ನನಗೆ ರಕ್ಷೆನೀಡುವ ಗುರಾಣಿ, ದೇವನೇ / ನೇರಮನಸ್ಸರಿಗೆ ಸಂರಕ್ಷಣೆ ಆತನೆ //
11ನ್ಯಾಯಕ್ಕನುಸಾರ ತೀರ್ಪನಿಡುವಂಥವನು ದೇವನು / ದುರುಳರ ಮೇಲೆ ದಿನಬಿಡದೆ ಕೋಪವುಳ್ಳವನು ಆತನು //
12ದನ್ನು ಕೇಳಿ ನೆರೆದಿದ್ದವರಲ್ಲಿ ಕೆಲವರು, “ಬರಬೇಕಾಗಿದ್ದ ಪ್ರವಾದಿ ಈತನೇ ಸರಿ,” ಎಂದರು.
41ಇನ್ನೂ ಕೆಲವರು, “ಈತನೇ ಲೋಕೋದ್ದಾರಕ,” ಎಂದರು. ಮತ್ತೆ ಕೆಲವರು, “ಲೋಕೋದ್ಧಾರಕ ಗಲಿಲೇಯದಿಂದ ಬರುವುದುಂಟೇ?
42‘ಆತ ದಾವೀದ ವಂಶಜನು; ಆತನು ಹುಟ್ಟುವುದು ದಾವೀದನ ಊರಾದ ಬೆತ್ಲೆಹೇಮಿನಲ್ಲಿ’ ಎಂದು ಪವಿತ್ರ ಗ್ರಂಥವೇ ಹೇಳಿದೆಯಲ್ಲವೆ?” ಎಂದು ವಾದಿಸಿದರು.
43ಹೀಗೆ ಯೇಸುವನ್ನು ಕುರಿತು ಜನರಲ್ಲಿ ಭಿನ್ನಾಭಿಪ್ರಾಯ ಉಂಟಾಯಿತು.
44ಕೆಲವರಿಗಂತೂ ಯೇಸುವನ್ನು ಹಿಡಿದು ಬಂಧಿಸಬೇಕೆನಿಸಿತು. ಆದರೆ ಯಾರೂ ಅವರ ಮೇಲೆ ಕೈಹಾಕಲಿಲ್ಲ. ವಿಶ್ವಾಸವಿಹೀನ ಮುಖಂಡರು
45ಕಾವಲಾಳುಗಳು ಹಿಂದಿರುಗಿದಾಗ, ಮುಖ್ಯಯಾಜಕರು ಮತ್ತು ಫರಿಸಾಯರು, “ಅವನನ್ನೇಕೆ ನೀವು ಹಿಡಿದು ತರಲಿಲ್ಲ?” ಎಂದು ಕೇಳಿದರು.
46ಅವರು, “ಆತನು ಮಾತನಾಡುವಂತೆ ಯಾರೂ ಎಂದೂ ಮಾತನಾಡಿದ್ದಿಲ್ಲ,” ಎಂದು ಉತ್ತರಿಸಿದರು.
47ಅದಕ್ಕೆ ಫರಿಸಾಯರು, “ಏನು, ನೀವು ಕೂಡ ಅವನಿಗೆ ಮರುಳಾಗಿಬಿಟ್ಟಿರೋ?
48ನಮ್ಮ ಮುಖಂಡರಲ್ಲಾಗಲಿ, ಫರಿಸಾಯರಲ್ಲಾಗಲಿ, ಯಾರಾದರೂ ಅವನನ್ನು ನಂಬಿದ್ದುಂಟೆ?
49ಧರ್ಮಶಾಸ್ತ್ರದ ಗಂಧವೂ ಇಲ್ಲದ ಜನಜಂಗುಳಿ ಶಾಪಗ್ರಸ್ತವಾಗಿದೆ,” ಎಂದರು.
50ಅಲ್ಲಿದ್ದ ಫರಿಸಾಯರಲ್ಲಿ ನಿಕೊದೇಮನು ಒಬ್ಬನು. ಹಿಂದೆ ಯೇಸುವನ್ನು ಕಾಣಲು ಬಂದಿದ್ದವನು ಈತನೇ.
51ಈತನು ಅವರಿಗೆ, “ಒಬ್ಬ ವ್ಯಕ್ತಿಯ ಹೇಳಿಕೆಯನ್ನು ಕೇಳದೆ, ಆತನು ಮಾಡಿರುವುದನ್ನು ಕಂಡುಕೊಳ್ಳದೆ, ಆತನನ್ನು ದೋಷಿಯೆಂದು ನಿರ್ಧರಿಸುವುದು ಶಾಸ್ತ್ರಸಮ್ಮತವೇ?” ಎಂದು ಕೇಳಿದನು.
52ಅದಕ್ಕೆ ಅವರು, “ನೀನೂ ಗಲಿಲೇಯದವನೋ? ಪವಿತ್ರಗ್ರಂಥವನ್ನು ಓದಿ ನೋಡು; ಗಲಿಲೇಯದಿಂದ ಯಾವ ಪ್ರವಾದಿಯೂ ತಲೆಯೆತ್ತುವುದಿಲ್ಲ, ಎಂಬುದು ನಿನಗೇ ಗೊತ್ತಾಗುತ್ತದೆ,” ಎಂದು ಮರುತ್ತರ ಕೊಟ್ಟರು.
53ಬಳಿಕ ಎಲ್ಲರೂ ತಮ್ಮತಮ್ಮ ಮನೆಗಳಿಗೆ ತೆರಳಿದರು.
ಚಿಂತನೆ
ಕ್ರಿಸ್ತನ ಖ್ಯಾತಿ ದಿನೇ ದಿನೇ ವೃದ್ಧಿಸುತ್ತಾ ಹೋದಂತೆ ಅವರನ್ನು ದ್ವೇಷಿಸುವವರ ಸಂಖ್ಯೆಯೂ ಬೆಳೆಯುತ್ತಾ ಹೋಯಿತು. ಇಲ್ಲಿಯವರೆಗೆ ಅವರನ್ನು ಹಿಂಬಾಲಿಸಿದ್ದವರಲ್ಲಿಯೂ ಕೂಡ ’ಈತ ಬರಬೇಕಾದ ಮೆಸ್ಸೀಯನೇ ಅಲ್ಲವೇ’ ಎನ್ನುವ ಗೊಂದಲ ಬೇರೆ. ಕ್ರಿಸ್ತನಿಗಿಂತ ತಮ್ಮ ಧರ್ಮವನ್ನು ಪ್ರೀತಿಸುತ್ತಿದ್ದ ಯೆಹೂದ್ಯರು ಅವರನ್ನು ತಿರಸ್ಕರಿಸುತ್ತಾ ಹೋಗುವುದನ್ನು ಕಾಣಬಹುದು. ಇನ್ನೊಂದೆಡೆ ಆತನ ವಿರೋಧಿಗಳ ಗುಂಪು ವ್ಯವಸ್ಥಿತವಾಗಿ ಕ್ರಿಸ್ತನನ್ನು ದೈವವಿರೋಧಿ, ಧರ್ಮವಿರೋಧಿ ಎಂದು ಬಿಂಬಿಸುವ ಸಂಚನ್ನು ಹೂಡಿದ್ದರು. ಆರಂಭದಲ್ಲಿದ್ದ ಅಸಮಾಧಾನ ಕ್ರಮೇಣ ಅವರನ್ನು ಬಂಧಿಸಿ, ಶಿಕ್ಷಿಸಿ, ಕೊಲ್ಲಿಸುವ ಹಂತದವರೆಗೆ ಹೆಪ್ಪುಗಟ್ಟುತ್ತಾ ಹೋಗುತ್ತದೆ. ಒಂದು ಕಡೆ ಆಕರ್ಷಣೆ, ಮತ್ತೊಂದು ಕಡೆ ಅಭಿಮಾನ, ಮತ್ತೊಂದು ಕಡೆ ಗೊಂದಲ, ಇನ್ನೊಂದೆಡೆ ದ್ವೇಷದ ಭಾವನೆಗಳು ಜನರಲ್ಲಿ ಕಂಡುಬರುತ್ತಿತ್ತು. Might is Right ಎಂಬಂತೆ ಎಲ್ಲರಿಗಿಂತ ಪ್ರಭಾವಶಾಲಿಗಳಾಗಿದ್ದ ಮುಖ್ಯ ಯಾಜಕರು ಮತ್ತು ಫರಿಸಾಯರು ಈ ತಿಕ್ಕಾಟದಲ್ಲಿ ಮೇಲುಗೈ ಸಾಧಿಸುತ್ತಾರೆ. ತಮ್ಮ ಚಾಣಾಕ್ಷತೆ, ಕುತಂತ್ರ ಬುದ್ಧಿ, ಅಧಿಕಾರದ ಪ್ರಭಾವ ಬಳಸಿ ಜನಸಾಮಾನ್ಯರ ಸದ್ದಡಗಿಸುತ್ತಾರೆ. ಕ್ರಿಸ್ತನ ಪರ ನಿಲ್ಲುವವರಿಗೆ ವಿರೋಧಿಗಳು ಅನೇಕ. ಅವನ ಪರ ವಾದಿಸುವವರಿಗೆ ತೊಂದರೆ, ತೊಡಕುಗಳೇ ಹೆಚ್ಚು. ಆದರೆ ನಮ್ಮ ಅನುಕೂಲ ಮತ್ತು ಸುಖ ಸಂತೋಷಕ್ಕೋಸ್ಕರ ಕ್ರಿಸ್ತನಿಗೆ ಮತ್ತು ಅವರ ಮೌಲ್ಯಗಳಿಗೆ ಬೆನ್ನು ಮಾಡಿದರೆ ನಮ್ಮದು ನಕಲಿ ಕ್ರೈಸ್ತ ಜೀವನವಾಗುತ್ತದೆ.
ಫಾ. ಪೀಟರ್ ಚಿನ್ನಪ್ಪ (ಬೆಂಗಳೂರು ಮಹಾಧರ್ಮಕ್ಷೇತ್ರ)
No comments:
Post a Comment