ಸುವಾರ್ತಾ ಪ್ರಸಾರದ ಉದ್ದೇಶ: ಯುವಜನರು, ವಿಶೇಷವಾಗಿ ಲ್ಯಾಟಿನ್ ಅಮೇರಿಕಾದ ಯುವಜನರು ಪೂಜ್ಯ ಕನ್ಯಾ ಮರಿಯಮ್ಮನವರ ಆದರ್ಶವನ್ನು ಅನುಸರಿಸುತ್ತಾ ಪ್ರಭು ಯೇಸುವಿನ ಕರೆಗೆ ಓಗೊಟ್ಟು ಸುವಾರ್ತೆಯ ಆನಂದವನ್ನು ಜಗತ್ತಿನಾದ್ಯಂತ ಪಸರಿಸುವ ಕ್ಷಮತೆಯನ್ನು ಹೊಂದುವುದು.
18 ಜನವರಿ 2019
ಕ್ರೈಸ್ತ ಐಕ್ಯತೆಯ ಸಪ್ತಾಹ : ದಿನಾಂಕ18ರಿಂದ 25ರವರೆಗೆ ಧರ್ಮಸಭೆಯು ಎಲ್ಲಾ ಕ್ರೈಸ್ತ ಪಂಗಡಗಳ ಐಕ್ಯತೆಗಾಗಿ ಪ್ರಾರ್ಥಿಸುತ್ತದೆ. ನಾವು ಧರ್ಮಸಭೆಯೊಂದಿಗೆ ಸೇರಿ ಪ್ರಾರ್ಥಿಸೋಣ.
ಶುಕ್ರವಾರ/ಹಸಿರು/ಸಾಧಾರಣ ಕಾಲದ ಮೊದಲನೇ ವಾರ
1ನೇ ವಾಚನ - ಹಿಬ್ರಿ 4: 1-5, 11
ಕೀರ್ತನೆ - 78: 3-4, 6-8
ಶುಭಸಂದೇಶ - ಮಾರ್ಕ 2: 1-12
ಶುಕ್ರವಾರ/ಹಸಿರು/ಸಾಧಾರಣ ಕಾಲದ ಮೊದಲನೇ ವಾರ
1ನೇ ವಾಚನ - ಹಿಬ್ರಿ 4: 1-5, 11
ಕೀರ್ತನೆ - 78: 3-4, 6-8
ಶುಭಸಂದೇಶ - ಮಾರ್ಕ 2: 1-12
ವಾಚನಗಳು
ಮೊದಲನೇ ವಾಚನ
ಹಿಬ್ರಿಯರಿಗೆ ಬರೆದ ಪತ್ರದಿಂದ ವಾಚನ
ಕೀರ್ತನೆ
ಶ್ಲೋಕ: ಮರೆಯರು ನನ್ನ ಜನರು ನನ್ನ ಮಹತ್ಕಾರ್ಯಗಳನು
3 : ಪೇಳ್ವೆವು ನಾವು ಕೇಳಿ ತಿಳಿದುಕೊಂಡವುಗಳನೆ|
ಪೂರ್ವಜರೆಮಗೆ ತಿಳಿಸಿದ ಸಂಗತಿಗಳನೆ|
ಪ್ರಭುವಿನ ಮಹಿಮೆ ಪರಾಕ್ರಮದ ಪವಾಡಗಳನೆ||
4 : ಮರೆಮಾಡೆವು ಅವರ ಸಂತತಿಯಾದ ನಿಮಗೆ|
ವಿವರಿಸುವೆವು ಮುಂಬರಲಿರುವ ಪೀಳಿಗೆಗೆ||
6 : “ಗೊತ್ತಾಗಲಿ ಇವೆಲ್ಲ ಮುಂದಿನ ತಲೆಮಾರಿಗೆ|
ತಿಳಿಸುತ್ತ ಹೋಗಲಿ ಮಕ್ಕಳು ಮೊಮ್ಮಕ್ಕಳಿಗೆ”||
7 : ಆಗ ತಮ್ಮ ಪ್ರಾಚೀನ ಪೂರ್ವಿಕರಂತೆ ಅವರಾಗರು|
ಮೊಂಡರು, ಅವಿಧೇಯರು, ದೈವದ್ರೋಹಿಗಳು, ಚಪಲಚಿತ್ತರು||
ಶುಭಸಂದೇಶ

ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ
1ಕೆಲವು ದಿನಗಳು ಕಳೆದ ಬಳಿಕ ಯೇಸುಸ್ವಾಮಿ ಮತ್ತೊಮ್ಮೆ ಕಫೆರ್ನವುಮಿಗೆ ಬಂದರು. ಅವರು ಮನೆಯಲ್ಲಿದ್ದಾರೆಂಬ ಸುದ್ದಿ ಹಬ್ಬಿತು. 2ಜನರು ಗುಂಪುಗುಂಪಾಗಿ ಅಲ್ಲಿಗೆ ಬಂದರು. ಇದರಿಂದಾಗಿ ಮನೆಯೊಳಗೆ ಮಾತ್ರವಲ್ಲ, ಹೊರಗಡೆಯೂ ಸ್ಥಳ ಸಾಲದೆ ಹೋಯಿತು. ಯೇಸು ಅಲ್ಲಿ ಸೇರಿದ್ದ ಜನಸ್ತೋಮಕ್ಕೆ ದೇವರ ವಾಕ್ಯವನ್ನು ಬೋಧಿಸತೊಡಗಿದರು. 3ಆಗ ಒಬ್ಬ ಪಾರ್ಶ್ವವಾಯು ರೋಗಿಯನ್ನು ನಾಲ್ವರಿಂದ ಹೊರಿಸಿಕೊಂಡು ಕೆಲವರು ಅಲ್ಲಿಗೆ ಬಂದರು. 4ಜನಸಂದಣಿಯ ನಿಮಿತ್ತ ಅವನನ್ನು ಯೇಸುವಿನ ಸಮೀಪಕ್ಕೆ ಸಾಗಿಸಲು ಸಾಧ್ಯವಾಗಲಿಲ್ಲ. ಆದುದರಿಂದ ಅವರು ಯೇಸು ಇದ್ದ ಮನೆಯ ಮೇಲ್ಛಾವಣಿಯನ್ನು ತೆರೆದು, ದೊಡ್ಡ ಕಿಂಡಿಯೊಂದನ್ನು ಮಾಡಿ, ರೋಗಿಯನ್ನು ಹಾಸಿಗೆಯ ಸಮೇತ ಕೆಳಗಿಳಿಸಿದರು. 5ಯೇಸು ಅವರ ವಿಶ್ವಾಸವನ್ನು ಮೆಚ್ಚಿ ಆ ಪಾರ್ಶ್ವವಾಯು ರೋಗಿಗೆ, ಮಗು, ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ, ಎಂದರು.
6-7ಆಗ, ಅಲ್ಲೇ ಕುಳಿತಿದ್ದ ಧರ್ಮಶಾಸ್ತ್ರಿಗಳಲ್ಲಿ ಕೆಲವರು, ಇವನೇಕೆ ಹೀಗೆ ಮಾತನಾಡುತ್ತಾನೆ? ಇದು ದೇವದೂಷಣೆ! ದೇವರೊಬ್ಬರ ಹೊರತು ಪಾಪಗಳನ್ನು ಕ್ಷಮಿಸಲು ಬೇರೆ ಯಾರಿಂದ ಸಾಧ್ಯ? ಎಂದು ತಮ್ಮ ಮನಸ್ಸಿನಲ್ಲೇ ಆಲೋಚಿಸಿಕೊಳ್ಳುತ್ತಿದ್ದರು. 8ಅವರು ಹೀಗೆ ಯೋಚಿಸುತ್ತಿರುವುದನ್ನು ಯೇಸು ತಕ್ಷಣ ಗ್ರಹಿಸಿಕೊಂಡು ಅವರಿಗೆ, ನೀವು ನಿಮ್ಮ ಮನಸ್ಸಿನಲ್ಲಿ ಹೀಗೆ ಆಲೋಚಿಸುತ್ತಿರುವುದು ಏಕೆ? 9ಈ ಪಾರ್ಶ್ವವಾಯು ರೋಗಿಗೆ, 'ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ,' ಎಂದು ಹೇಳುವುದು ಸುಲಭವೋ ಅಥವಾ ‘ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ' ಎನ್ನುವುದು ಸುಲಭವೋ? 10ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸಲು ನರಪುತ್ರನಿಗೆ ಅಧಿಕಾರವುಂಟೆಂದು ಈ ಮೂಲಕ ನಿಮಗೆ ಖಚಿತವಾಗಬೇಕು, ಎಂದು ಹೇಳಿ, ಆ ಪಾರ್ಶ್ವವಾಯು ರೋಗಿಯನ್ನು ನೋಡಿ, 11ನಾನು ನಿನಗೆ ಆಜ್ಞಾಪಿಸುತ್ತೇನೆ; ಏಳು, ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು, ಎಂದರು. 12ಎಲ್ಲರೂ ನೋಡುತ್ತಿದ್ದ ಹಾಗೆ ಅವನು ಎದ್ದುನಿಂತನು; ತನ್ನ ಹಾಸಿಗೆಯನ್ನು ತಾನೇ ಎತ್ತಿಕೊಂಡು ಹೊರಟುಹೋದನು. ನೆರೆದಿದ್ದ ಎಲ್ಲರೂ ಆಶ್ಚರ್ಯಚಕಿತರಾಗಿ, ಇಂಥ ಕಾರ್ಯವನ್ನು ನಾವು ನೋಡಿದ್ದೇ ಇಲ್ಲ!, ಎಂದು ದೇವರನ್ನು ಕೊಂಡಾಡಿದರು.

ಚಿಂತನೆ
ಪಾಪಕ್ಷಮೆಯ ಅಧಿಕಾರವುಳ್ಳ ಯೇಸು
ಇಂದಿನ ಶುಭಸಂದೇಶದಲ್ಲಿ ಗಮನಿಸಬೇಕಾದ ಅಂಶವೆಂದರೆ, ಮಾರ್ಕನು ಮೊಟ್ಟಮೊದಲ ಬಾರಿಗೆ ಧರ್ಮಶಾಸ್ತ್ರಿಗಳನ್ನು, ಫರಿಸಾಯರನ್ನು ಪರಿಚಯಿಸುತ್ತಿದ್ದಾನೆ. ಇವರು ಯೇಸುವಿನ ಕಾರ್ಯ ಮತ್ತು ಮಾತುಗಳನ್ನು ತೀವ್ರವಾಗಿ ಗಮನಿಸಿ ತಪ್ಪು ಕಂಡು ಹಿಡಿಯುವುದರಲ್ಲಿ ಮಗ್ನರಾಗಿರುತ್ತಾರೆ. ಕೆಲವರು ಪಾರ್ಶ್ವವಾಯು ರೋಗಿಯನ್ನು ಕ್ರಿಸ್ತನ ಬಳಿ ಕರೆತಂದಾಗ ಯೇಸು, ಅವರ ವಿಶ್ವಾಸವನ್ನು ಮೆಚ್ಚಿ ಆ ರೋಗಿಯನ್ನು ಗುಣಪಡಿಸುತ್ತಾರೆ. ``ಮಗೂ, ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ''. ಎಂಬ ಕ್ರಿಸ್ತನ ವಾಕ್ಯವು ಧರ್ಮಶಾಸ್ತ್ರಿಗಳಿಗೆ ಮತ್ತು ಫರಿಸಾಯರಿಗೆ ದೇವದೂಷಣೆಯಂತೆ ಕಂಡುಬರುತ್ತದೆ. ಕ್ರಿಸ್ತ ಆತನನ್ನು ಗುಣಪಡಿಸುವ ಮೊದಲು ಪಾಪಕ್ಷಮೆ ನೀಡಿದ್ದು ಏತಕ್ಕೆ? ಕ್ರಿಸ್ತನ ಕಾಲದಲ್ಲಿ ಬಡತನ ಮತ್ತು ಅನಾರೋಗ್ಯಗಳನ್ನು ಪಾಪದ ಫಲ ಎಂದು ನಂಬುತ್ತಿದ್ದರು. ಹಾಗಾಗಿ ಯೇಸುಕ್ರಿಸ್ತರು ಮೊದಲು ಆತನ ಮಾನಸಿಕ ಕಾಯಿಲೆ ಗುಣಪಡಿಸಿ ಅನಂತರ ದೈಹಿಕ ಕಾಯಿಲೆಯನ್ನು ಗುಣಪಡಿಸುತ್ತಾರೆ. ಆತನ ಪಾಪಗಳನ್ನು ಕ್ಷಮಿಸುವುದರ ಮೂಲಕ ನರಪುತ್ರನಿಗೆ ಪಾಪಗಳನ್ನು ಕ್ಷಮಿಸುವ ಅಧಿಕಾರ ಇದೆ ಎಂಬುದನ್ನು ಬಹಿರಂಗ ಪಡಿಸುತ್ತಾರೆ.
ಚಿತ್ರ: ಗೂಗಲ್ ಕೃಪೆ
© 'ದನಿ' ಮಾಧ್ಯಮ ಮನೆ
© 'ದನಿ' ಮಾಧ್ಯಮ ಮನೆ
ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ
No comments:
Post a Comment