ಸುವಾರ್ತಾ ಪ್ರಸಾರದ ಉದ್ದೇಶ: ಯುವಜನರು, ವಿಶೇಷವಾಗಿ ಲ್ಯಾಟಿನ್ ಅಮೇರಿಕಾದ ಯುವಜನರು ಪೂಜ್ಯ ಕನ್ಯಾ ಮರಿಯಮ್ಮನವರ ಆದರ್ಶವನ್ನು ಅನುಸರಿಸುತ್ತಾ ಪ್ರಭು ಯೇಸುವಿನ ಕರೆಗೆ ಓಗೊಟ್ಟು ಸುವಾರ್ತೆಯ ಆನಂದವನ್ನು ಜಗತ್ತಿನಾದ್ಯಂತ ಪಸರಿಸುವ ಕ್ಷಮತೆಯನ್ನು ಹೊಂದುವುದು.
5 ಜನವರಿ 2019
ಶನಿವಾರ/ಬಿಳಿ/
ಕ್ರಿಸ್ತಜಯಂತಿ ಕಾಲದ ವಾರದ ದಿನ
1ನೇ ವಾಚನ - 1 ಯೊವಾನ್ನ
3: 11-21
ಕೀರ್ತನೆ - 1೦೦: 1-5
ಶುಭಸಂದೇಶ - ಯೊವಾನ್ನ
1: 43-51
ಐಚ್ಛಿಕ ಸ್ಮರಣೆ
- ಸಂತ ಜಾನ್ ನ್ಯೂಮನ್
ವಾಚನಗಳು
ಮೊದಲನೇ ವಾಚನ
ಸಂತ ಯೊವಾನ್ನನು ಬರೆದ ಮೊದಲ ಪತ್ರದಿಂದ ವಾಚನ
11ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು
ಎಂಬುದೇ ಮೊತ್ತಮೊದಲಿನಿಂದಲೂ ನೀವು ಕೇಳಿದ ಸಂದೇಶ. 12ತನ್ನ ಸಹೋದರನನ್ನೇ ಕೊಂದ ಕಾಯಿನನಂತೆ
ನಾವು ಇರಬಾರದು. ಅವನು ಕಡುಕೇಡಿಗನ ಕುವರ. ಅವನು ಕೊಂದುದಾದರೂ ಏಕೆ? ತನ್ನ ಕೃತ್ಯಗಳು ದುಷ್ಟವಾಗಿದ್ದು
ತನ್ನ ಸಹೋದರನ ಕೃತ್ಯಗಳು ಧರ್ಮಿಷ್ಠವಾಗಿದ್ದುದರಿಂದ ಅಲ್ಲವೇ? 13ಸಹೋದರರೇ, ಲೋಕವು ನಿಮ್ಮನ್ನು ದ್ವೇಷಿಸಿದರೆ
ಆಶ್ಚರ್ಯಪಡಬೇಡಿ. 14ನಾವು ನಮ್ಮ ಸಹೋದರರನ್ನು ಪ್ರೀತಿಸುವುದರಿಂದ
ಸಾವಿನಿಂದ ಜೀವಕ್ಕೆ ಸಾಗಿದ್ದೇವೆಂದು ತಿಳಿದಿದ್ದೇವೆ. ಪ್ರೀತಿಸದೆ ಇರುವವನು ಸಾವಿನಲ್ಲೇ ನೆಲೆಸಿರುತ್ತಾನೆ. 15ತನ್ನ ಸಹೋದರರನ್ನು ದ್ವೇಷಿಸುವವನು
ಕೊಲೆಗಾರನೇ ಹೌದು. ಯಾವ ಕೊಲೆಗಾರನಲ್ಲೂ ನಿತ್ಯ ಜೀವ ಇರದೆಂದು ನೀವು ಬಲ್ಲಿರಿ. 16ಕ್ರಿಸ್ತಯೇಸು ನಮಗೋಸ್ಕರ ತಮ್ಮ ಪ್ರಾಣವನ್ನೇ
ತೆತ್ತರು. ಇದರಿಂದ ಪ್ರೀತಿ ಎಂತಹುದೆಂದು ನಾವು ಅರಿತುಕೊಂಡೆವು. ನಾವೂ ಕೂಡ ಸಹೋದರರಿಗಾಗಿ ಪ್ರಾಣಾರ್ಪಣೆ
ಮಾಡಲು ಬದ್ಧರಾಗಿದ್ದೇವೆ. 17ಲೋಕದ ಸುಖಸಂಪತ್ತುಳ್ಳ ಒಬ್ಬನು, ಕುಂದು
ಕೊರತೆಯಲ್ಲಿ ಸಿಲುಕಿರುವ ತನ್ನ ಸಹೋದರನನ್ನು ಕಂಡಾಗಲೂ ಮನಕರಗದಿದ್ದರೆ ಅವನಲ್ಲಿ ದೇವರ ಪ್ರೀತಿ ಹೇಗೆ
ತಾನೇ ನೆಲೆಸೀತು?
18ಪ್ರಿಯಮಕ್ಕಳೇ, ನಾವು ಬರಿಯ ಮಾತಿನಿಂದಾಗಲಿ,
ಬಾಯುಪಚಾರದಿಂದಾಗಲಿ, ಪ್ರೀತಿಸುವವರಾಗಿರಬಾರದು. ನಮ್ಮ ಪ್ರೀತಿ ಸತ್ಯದಲ್ಲೂ ಕೃತ್ಯದಲ್ಲೂ ವ್ಯಕ್ತವಾಗಬೇಕು. 19ಹೀಗೆ ನಾವು ಸತ್ಯಕ್ಕೆ ಸೇರಿದವರು ಎಂಬುದು
ಮನದಟ್ಟಾಗುವುದಲ್ಲದೆ ದೇವರ ಮುಂದೆ ನಮ್ಮ ಮನಸ್ಸು ನೆಮ್ಮದಿಯಿಂದಿರುತ್ತದೆ. 20ಯಾವ ವಿಷಯದಲ್ಲಾದರೂ ನಮ್ಮ ಮನಸ್ಸಾಕ್ಷಿ
ನಮ್ಮನ್ನು ಖಂಡಿಸಿದ್ದೇ ಆದರೆ ಎಲ್ಲವನ್ನೂ ಬಲ್ಲ ದೇವರು ನಮ್ಮ ಮನಸ್ಸಾಕ್ಷಿಗಿಂತಲೂ ದೊಡ್ಡವರೆಂಬುದು
ನಮಗೆ ತಿಳಿದೇ ಇರುತ್ತದೆ. 21ಪ್ರಿಯರೇ, ನಮ್ಮ ಮನಸ್ಸಾಕ್ಷಿ ನಮ್ಮನ್ನು
ಖಂಡಿಸದಿದ್ದರೆ, ನಾವು ದೇವರ ಮುಂದೆ ಧೈರ್ಯದಿಂದಿರಲು ಸಾಧ್ಯವಾಗುತ್ತದೆ.
ಕೀರ್ತನೆ
ಶ್ಲೋಕ: ಭೂನಿವಾಸಿಗಳೇ,
ಜಯಘೋಷಮಾಡಿ ಪ್ರಭುವಿಗೆ|
1
: ಭೂನಿವಾಸಿಗಳೇ, ಜಯಘೋಷಮಾಡಿ ಪ್ರಭುವಿಗೆ||
2
: ಅತಿ ಸಂತೋಷದಿಂದ ಸೇವೆ ಮಾಡಿ ಆತನಿಗೆ|
ಹಾಡುತ, ಪಾಡುತ, ಬನ್ನಿ ಆತನ ಸನ್ನಿಧಿಗೆ||
3
: ಪ್ರಭುವೇ ದೇವರೆಂಬುದನು ಮರೆತುಬಿಡಬೇಡಿ ನೀವು |
ನಮ್ಮ ಸೃಷ್ಟಿಕರ್ತ ಆತನು, ಆತನವರು ನಾವು|
ಆತನ
ಜನ, ಆತನೆ ಮೇಯಿಸುವ ಕುರಿಗಳು, ನಾವು||
4
: ಆತನ ಗೃಹದ್ವಾರವನು ಪ್ರವೇಶಿಸಿ ಧನ್ಯವಾದದೊಂದಿಗೆ|
ಆತನ ಆವರಣದಲಿ ನಿಲ್ಲಿರಿ ಸ್ತುತಿಸ್ತೋತ್ರಗಳೊಂದಿಗೆ|
ಆತನ ನಾಮವನು ಕೊಂಡಾಡಿ ಉಪಕಾರಸ್ಮರಣೆಯೊಂದಿಗೆ||
5
: ಹೌದು, ಪ್ರಭುವೆನಿತೋ ಒಳ್ಳೆಯವನು|
ಇರುವುದಾತನ ಪ್ರೀತಿ ಯುಗಯುಗಕು |
ಆತನ ಸತ್ಯತೆ ತಲತಲಾಂತರಕು
||
ಶುಭಸಂದೇಶ
ಸಂತ ಯೊವಾನ್ನನು ಬರೆದ ಶುಭಸಂದೇಶದಿಂದ ವಾಚನ
ಚಿಂತನೆ
ಸಂಪೂರ್ಣ ಮಾಹಿತಿಯಿಲ್ಲದೆ ಮತ್ತೊಬ್ಬರನ್ನು ಧೋಷಿಸಬೇಡಿ
43ಮರುದಿನ ಯೇಸುಸ್ವಾಮಿ ಗಲಿಲೇಯ ನಾಡಿಗೆ ಹೋಗಲು
ನಿರ್ಧರಿಸಿದರು. ಅವರು ಫಿಲಿಪ್ಪನನ್ನು ಕಂಡು, ನನ್ನೊಡನೆ ಬಾ, ಎಂದು ಕರೆದರು. 44ಅಂದ್ರೆಯ ಮತ್ತು ಪೇತ್ರನಂತೆ ಫಿಲಿಪ್ಪನು ಕೂಡ ಬೆತ್ಸಾಯಿದ ಎಂಬ ಊರಿನವನು. 45ಫಿಲಿಪ್ಪನು ನತಾನಿಯೇಲನನ್ನು ಕಂಡು, ಧರ್ಮಶಾಸ್ತ್ರದಲ್ಲಿ ಮೋಶೆ ಉಲ್ಲೇಖಿಸಿದ ಮತ್ತು ಪ್ರವಾದಿಗಳು
ಪ್ರವಚನ ಮಾಡಿದ ವ್ಯಕ್ತಿಯು ನಮಗೆ ಸಿಕ್ಕಿದ್ದಾರೆ. ಇವರೇ ಜೋಸೆಫನ ಮಗನಾದ ನಜರೇತ್ ಊರಿನ ಯೇಸು,
ಎಂದು ಹೇಳಿದನು. 46ಅದಕ್ಕೆ ನತಾನಿಯೇಲನು, ಏನು? ನಜರೇತಿನಿಂದ ಒಳ್ಳೆಯದೇನಾದರೂ ಬರುವುದು ಉಂಟೆ? ಎಂದು ಕೇಳಲು, ಬಂದು
ನೀನೇ ನೋಡು, ಎಂದು ಫಿಲಿಪ್ಪನು ಉತ್ತರಕೊಟ್ಟನು. 47ತಮ್ಮ ಬಳಿಗೆ ಬರುತ್ತಿದ್ದ ನತಾನಿಯೇಲನನ್ನು ಕಂಡ ಯೇಸು, ಇಗೋ ನೋಡಿ, ನಿಜವಾದ ಇಸ್ರಯೇಲನು,
ಈತನಲ್ಲಿ ಕಪಟವಿಲ್ಲ, ಎಂದು ನುಡಿದರು.
48ನತಾನಿಯೇಲನು, ನನ್ನ ಪರಿಚಯ ನಿಮಗೆ ಹೇಗಾಯಿತು? ಎಂದು ಕೇಳಲು ಯೇಸು, ಫಿಲಿಪ್ಪನು ನಿನ್ನನ್ನು
ಕರೆಯುವ ಮೊದಲೇ ನೀನು ಅಂಜೂರದ ಮರದಡಿ ಇದ್ದಾಗ
ನಾನು ನಿನ್ನನ್ನು ಕಂಡೆ, ಎಂದು ಉತ್ತರ ಕೊಟ್ಟರು. 49ಅದಕ್ಕೆ ನತಾನಿಯೇಲನು ಗುರುದೇವಾ,
ದೇವರ ಪುತ್ರ ನೀವೇ; ಇಸ್ರಯೇಲರ ಅರಸ ನೀವೇ, ಎಂದನು.
50ಆಗ ಯೇಸು, ಅಂಜೂರದ ಮರದಡಿಯಲ್ಲಿ ನಿನ್ನನ್ನು ಕಂಡೆ ಎಂದು ನಾನು ಹೇಳಿದ ಮಾತ್ರಕ್ಕೆ ಇಷ್ಟೊಂದು
ವಿಶ್ವಾಸವೆ? ಇದಕ್ಕೂ ಮಿಗಿಲಾದುವುಗಳನ್ನು ನೀನು ಕಾಣುವೆ, ಎಂದು ನುಡಿದರು. ತಮ್ಮ ಮಾತನ್ನು
ಮುಂದುವರಿಸುತ್ತಾ, 51ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಸ್ವರ್ಗವು ತೆರೆದಿರುವುದನ್ನೂ
ನರಪುತ್ರನ ಮುಖಾಂತರ ದೇವದೂತರು ಏರುವುದನ್ನೂ ಇಳಿಯುವುದನ್ನೂ ನೀವು ಕಾಣುವಿರಿ, ಎಂದು ಹೇಳಿದರು.
ಚಿಂತನೆ
ಸಂಪೂರ್ಣ ಮಾಹಿತಿಯಿಲ್ಲದೆ ಮತ್ತೊಬ್ಬರನ್ನು ಧೋಷಿಸಬೇಡಿ
ನತಾನಿಯೇಲ ಕಾನಾ ಊರಿನವ. ಬಹಳಷ್ಟು ಬೈಬಲ್ ವಿದ್ವಾಂಸಕರು ನತಾನಿಯೇಲನ ಹೆಸರನ್ನು ಬಾರ್ತಾಲೊಮಾಯನ ಹೆಸರಿನೊಂದಿಗೆ ತಾಳೆ ಹಾಕಿ ಇಬ್ಬರೂ ಒಬ್ಬ ವ್ಯಕ್ತಿ ಎಂಬ ತೀರ್ಮಾನಕ್ಕೆ ಬರುತ್ತಾರೆ. ಪಿsಲಿಪ್ಪನು ನತಾನಿಯೇಲನನ್ನು ಕ್ರಿಸ್ತನಿಗೆ ಪರಿಚಯಿಸುತ್ತಾನೆ. ಪ್ರಾರಂಭದಲ್ಲಿ ಈತನು ಕ್ರಿಸ್ತನನ್ನು ವಿಶ್ವಾಸಿಸಲು ಹಿಂಜರಿಯುತ್ತಾನೆ. ಕಾರಣ ಯೆಹೂದ್ಯರ ಪ್ರಕಾರ ಪ್ರವಾದಿಗಳು ಮತ್ತು ರಕ್ಷಕ ಬರುವುದು ಯೂದ ಮತ್ತು ಬೆತ್ಲೆಹೇಮ್ ನಾಡಿನಿಂದ, ಕ್ರಿಸ್ತನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದ ನತಾನಿಯೇಲ ಅವರನ್ನು ರಕ್ಷಕ ಎಂದು ಸ್ವೀಕರಿಸಲು ಹಿಂಜರಿಯುತ್ತಾನೆ. ಆದರೆ ಕ್ರಿಸ್ತನ ಜನನವಾದದ್ದು ಬೆತ್ಲೆಹೇಮಿನಲ್ಲಿ. ಸಂಪೂರ್ಣ ಮಾಹಿತಿಯಿಲ್ಲದೆ ಮತ್ತೊಬ್ಬರನ್ನು ಧೂಷಿಸುವುದು ತೀರ್ಪಿಡುವುದು ಸರಿಯಲ್ಲ ಎಂಬುದನ್ನು ನತಾನಿಯೇಲನಿಂದ ಕಲಿಯಬೇಕಿದೆ.
No comments:
Post a Comment