ಸಾರ್ವಜನಿಕ ಉದ್ದೇಶ: ಮಾನವ ಸಾಗಾಣಿಕೆ, ವೇಶ್ಯಾವಾಟಿಕೆ ಹಾಗೂ ಹಿಂಸಾತ್ಮಕ ಕ್ರಿಯೆಗಳಿಂದಾಗಿ ನಿರಾಶ್ರಿತರಾದವರಿಗೆ ಆಶ್ರಯವನ್ನು ನೀಡಲು ಸರ್ವರೂ ಉದಾರತೆಯಿಂದ ಮುಂದೆ ಬರುವಂತೆ.
13 ಫೆಬ್ರವರಿ 2೦19
ಬುಧವಾರ / ಹಸಿರು / ಸಾಧಾರಣ ಕಾಲದ ಐದನೇ ವಾರ
1ನೇ ವಾಚನ - ಅದಿ 2: 4-9, 15-17
ಕೀರ್ತನೆ - 104, 1-2, 27-30
ಶುಭಸಂದೇಶ - ಮಾರ್ಕ7: 14-23
ಐಚ್ಛಿಕ ಸ್ಮರಣೆ - ಸಂತ ಕ್ಯಾಥರಿನ್
1ನೇ ವಾಚನ - ಅದಿ 2: 4-9, 15-17
ಕೀರ್ತನೆ - 104, 1-2, 27-30
ಶುಭಸಂದೇಶ - ಮಾರ್ಕ7: 14-23
ಐಚ್ಛಿಕ ಸ್ಮರಣೆ - ಸಂತ ಕ್ಯಾಥರಿನ್
ವಾಚನಗಳು
ಮೊದಲನೇ ವಾಚನ
ಆದಿಕಾಂಡದಿಂದ ವಾಚನ
ಆದಿ 2: 4-9, 15-17
5ದೇವರಾದ ಸರ್ವೇಶ್ವರ ಸ್ವಾಮಿ ಪರಲೋಕ - ಭೂಲೋಕಗಳನ್ನು ಸೃಷ್ಟಿ ಮಾಡಿದಾಗ ಯಾವ ಗಿಡಗಳೂ ಭೂಮಿಯಲ್ಲಿ ಇರಲಿಲ್ಲ. ಯಾವ ಬೀಜವೂ ಮೊಳೆತಿರಲಿಲ್ಲ. ಏಕೆಂದರೆ ದೇವರಾದ ಸರ್ವೇಶ್ವರ ಭೂಮಿಯ ಮೇಲೆ ಮಳೆಯನ್ನು ಸುರಿಸಿರಲಿಲ್ಲ. ಭೂಮಿಯನ್ನು ವ್ಯವಸಾಯ ಮಾಡಲು ಮನುಷ್ಯನೂ ಇರಲಿಲ್ಲ. 6ಆದರೂ ಭೂಮಿಯಿಂದ ನೀರು ಉಕ್ಕಿಬಂದು ನೆಲಕ್ಕೆ ನೀರೆರೆಯುತ್ತಿತ್ತು. 7ಹೀಗಿರಲು, ದೇವರಾದ ಸರ್ವೇಶ್ವರ ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದರು. ಆಗ ಮನುಷ್ಯನು ಜೀವಾತ್ಮನಾದನು. 8ಇದಲ್ಲದೆ, ದೇವರಾದ ಸರ್ವೇಶ್ವರ ಪೂರ್ವ ದಿಕ್ಕಿನಲ್ಲಿರುವ ಏದೆನ್ ಪ್ರದೇಶದಲ್ಲಿ ಒಂದು ಉದ್ಯಾನವನವನ್ನು ಮಾಡಿ ತಾವು ರೂಪಿಸಿದ ಮನುಷ್ಯನನ್ನು ಅದರಲ್ಲಿ ಇರಿಸಿದರು. 9ನೋಟಕ್ಕೆ ರಮ್ಯವೂ ಊಟಕ್ಕೆ ರುಚಿಕರವೂ ಆದ ನಾನಾ ತರದ ಮರಗಳನ್ನು ದೇವರಾದ ಸರ್ವೇಶ್ವರ ಅಲ್ಲಿ ಬೆಳೆಯ ಮಾಡಿದರು. ಆ ವನದ ಮಧ್ಯದಲ್ಲಿ ಜೀವದಾಯಕ ವೃಕ್ಷವನ್ನು ಹಾಗು ಒಳಿತು - ಕೆಡಕುಗಳ ಅರಿವನ್ನು ಮೂಡಿಸುವ ವೃಕ್ಷವನ್ನು ಬೆಳೆಯಿಸಿದರು.
15ದೇವರಾದ ಸರ್ವೇಶ್ವರ ಆ ಮನುಷ್ಯನನ್ನು ಕರೆದುಕೊಂಡು ಹೋಗಿ ಏದೆನ್ ವನವನ್ನು ಕೃಷಿ ಮಾಡುವುದಕ್ಕೂ ಕಾಯುವುದಕ್ಕೂ ಅದರಲ್ಲಿ ಬಿಟ್ಟರು. 16ಇದಲ್ಲದೆ, ದೇವರಾದ ಸರ್ವೇಶ್ವರ ಆ ಮನುಷ್ಯನಿಗೆ “ನೀನು ಈ ತೋಟದಲ್ಲಿರುವ ಎಲ್ಲ ಮರಗಳ ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನಬಹುದು. 17ಆದರೆ ಒಳಿತು - ಕೆಡುಕುಗಳ ಅರಿವನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು; ತಿಂದೆಯಾದರೆ, ಅದೇ ದಿನ ಸತ್ತು ಹೋಗುವೆ,” ಎಂದು ವಿಧಿಸಿದರು.

ಕೀರ್ತನೆ
ಕೀರ್ತನೆ
104: 1-2, 27-28, 29-30
ಭಜಿಸು ನನ್ನ
ಮನವೇ, ಭಜಿಸು,
ಪ್ರಭುವನು
ಭಜಿಸು ನನ್ನ ಮನವೇ, ಭಜಿಸು, ಪ್ರಭುವನು
ಪ್ರಭು,
ನನ್ನ ದೇವಾ, ನೀ ಸರ್ವೋತ್ತಮನು
ಮಹಿಮೆ ಪ್ರತಾಪಗಳಿಂದ ಭೂಷಿತನು
ತೊಟ್ಟುಕೊಂಡಿರುವೆ
ಬೆಳಕನೇ ಬಟ್ಟೆಯಂತೆ.
ಸಕಾಲದಲೊದಗಿಸುವೆ
ಆಹಾರವನು
ನಂಬಿಕೊಂಡಿವೆ
ಈ ಜೀವಿಗಳು ನಿನ್ನನು
ನೀ ನೀಡಲು ಕೂಡಿಸಿಟ್ಟುಕೊಳ್ಳುವುವು
ನೀ ಕೈತೆರೆಯಲವು ಸಂತೃಪ್ತಿಪಡೆವುವು.
ಮಣ್ಣುಪಾಲಾಗುವುವು
ನೀನವುಗಳ ಉಸಿರನಡಗಿಸಲು
ನೀ ಉಸಿರನ್ನೂದಲು ಹೊಸದಾಗುವುವು
ಪುನಶ್ಚೇತನಗೊಳ್ಳುವುದು ಜಗವೆಲ್ಲವು.
ಶುಭಸಂದೇಶ
ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ
ಮಾರ್ಕ 7: 14-23
ಮಾರ್ಕ 7: 14-23
14ಅನಂತರ ಯೇಸುಸ್ವಾಮಿ ಜನರ ಗುಂಪನ್ನು ತಮ್ಮ ಬಳಿಗೆ ಕರೆದು, 15ನಾನು ಹೇಳುವುದನ್ನು ನೀವೆಲ್ಲರೂ ಕೇಳಿ ಗ್ರಹಿಸಿಕೊಳ್ಳಿ ಹೊರಗಿನಿಂದ ಮನುಷ್ಯನ ಒಳಗೆ ಹೋಗುವ ಯಾವುದೂ ಅವನನ್ನು ಕಲುಷಿಗೊಳಿಸುವುದಿಲ್ಲ. 16ಮನುಷ್ಯನ ಅಂತರಂಗದಿಂದ ಹೊರಬರುವಂತಹುದೇ ಅವನನ್ನು ಕಲುಷಿತಗೊಳಿಸುತ್ತದೆ. (ಕೇಳುವುದಕ್ಕೆ ಕಿವಿಯುಳ್ಳವನು ಕೇಳಲಿ) ಎಂದರು.
17ಯೇಸು ಜನರ ಗುಂಪನ್ನು ಬಿಟ್ಟು ಮನೆ ಸೇರಿದ ಬಳಿಕ ಶಿಷ್ಯರು, ಅವರ ಬಳಿಗೆ ಬಂದು ಆ ಸಾಮತಿಯ ಅರ್ಥವೇನೆಂದು ಕೇಳಿದರು. 18ಅದಕ್ಕೆ ಅವರು, "ನೀವು ಕೂಡ ಮಂದಮತಿಗಳೋ? ನಿಮಗೂ ಇದು ಅರ್ಥವಾಗದೋ? 19ಹೊರಗಿನಿಂದ ಮನುಷ್ಯನ ಒಳಕ್ಕೆ ಹೋಗುವ ಯಾವುದೂ ಅವನನ್ನು ಕಲುಷಿತಗೊಳಿಸುವುದಿಲ್ಲ. ಅವನು ತಿಂದದ್ದು ಅವನ ಹೃದಯವನ್ನು ಹೊಕ್ಕದೆ, ಹೊಟ್ಟೆಯನ್ನು ಮಾತ್ರ ಸೇರಿ, ಬಳಿಕ ದೇಹದಿಂದ ವಿಸರ್ಜಿತವಾಗುತ್ತದೆ. (ಹೀಗೆ ಆಹಾರ ಪದಾರ್ಥಗಳು ಯಾವುವೂ ಅಶುದ್ಧವಲ್ಲವೆಂದು ಯೇಸು ಸೂಚಿಸಿದರು.) 20ಆದರೆ ಮನುಷ್ಯನ ಅಂತರಂಗದಿಂದ ಹೊರಹೊಮ್ಮುವ ಯೋಚನೆಗಳು ಅವನನ್ನು ಕಲುಷಿತಗೊಳಿಸುತ್ತವೆ. 21ಮಾನವನ ಹೃದಯಾಂತರಾಳದಿಂದ ದುರಾಲೋಚನೆ, ಅನೈತಿಕತೆ, ಕಳ್ಳತನ, ಕೊಲೆ, ವ್ಯಭಿಚಾರ, ಲೋಭ, 22ಕೆಡುಕುತನ, ಮೋಸ, ಭಂಡತನ, ಅಸೂಯೆ, ಅಪದೂರು, ಅಹಂಕಾರ, ಮೂರ್ಖತನ ಮೊದಲಾದವು ಹೊರಬರುತ್ತವೆ. 23ಈ ಎಲ್ಲಾ ಕೇಡುಗಳು ಮಾನವನ ಅಂತರಂಗದಿಂದಲೇ ಉದ್ಭವಿಸಿ, ಅವನನ್ನು ಅಶುದ್ಧ ಮಾಡುತ್ತವೆ," ಎಂದರು.
ಚಿಂತನೆ
ಯೆಹೂದ್ಯ ಮುಖಂಡರ ಶೋಷಣೆ
ಶುಭಸಂದೇಶಕಾರ ಮಾರ್ಕನು ತನ್ನ 7ನೇ ಅಧ್ಯಾಯದಲ್ಲಿ ಯೆಹೂದ್ಯರ ಆರ್ಥಹೀನ ಸಂಪ್ರದಾಯ, ಆಚಾರ-ವಿಚಾರಗಳನ್ನು ತೀವ್ರವಾಗಿ ಖಂಡಿಸುತ್ತಾನೆ. ಯೇಸುವಿನ ಪ್ರತಿಯೊಂದು ಪವಾಡವು ಮತ್ತು ಬೋಧನೆಯು ದೇವರ ಪ್ರೀತಿಯನ್ನೂ ದಯೆಯನ್ನೂ ವ್ಯಕ್ತಪಡಿಸುತ್ತವೆ. ಆದರೆ ಯೆಹೂದ್ಯ ಮುಖಂಡರು ದೇವರ ಹೆಸರಲ್ಲಿ, ಧರ್ಮದ ಹೆಸರಲ್ಲಿ ಜನಸಾಮಾನ್ಯರನ್ನು ಶೋಷಿಸುತ್ತಿದ್ದರು. ಯೆಹೂದ್ಯರ ಪ್ರಕಾರ ಒಬ್ಬ ವ್ಯಕ್ತಿ ಹಲವು ಕಾರಣಗಳಿಗೆ ಅಶುದ್ಧವಾಗುತ್ತಿದ್ದ ಕುಷ್ಠರೋಗಿಯನ್ನಾಗಲಿ ಅಥವಾ ಅವನ ಬಟ್ಟೆಯನ್ನಾಗಲಿ ಸ್ಪರ್ಶಿಸಿದರೆ (ಸಂಖ್ಯಾ 13:4), ಅಶುದ್ಧ ಪ್ರಾಣಿ ಪಕ್ಷಿಗಳ ಸೇವನೆ (ಯಾಜಕ 11) ಹಾಗೂ ದೇಹದ ಗುಪ್ತಾಂಗಗಳಿಗೆ ಸಂಬಂಧಿಸಿದ ಎಲ್ಲಾ ಕ್ರಿಯೆಗಳು ಅಶುದ್ಧ್ದವೆಂದು ಭಾವಿಸಿದ್ದರು. ಈ ರೀತಿಯ ನಿಯಮಗಳಿಗೆ ಯೇಸು ಹೊಸ ಅರ್ಥ ನೀಡುತ್ತಾರೆ. ಬಾಹ್ಯ ಶುದ್ಧತೆಗಿಂತ ಆಂತರಿಕ ಶುದ್ಧತೆಗೆ ನಾವು ಶ್ರಮಿಸಬೇಕೆಂದು ತಿಳಿಸುತ್ತಾರೆ.
ಚಿತ್ರ: ಗೂಗಲ್ ಕೃಪೆ

No comments:
Post a Comment