ಸಾರ್ವಜನಿಕ ಉದ್ದೇಶ: ಮಾನವ ಸಾಗಾಣಿಕೆ, ವೇಶ್ಯಾವಾಟಿಕೆ ಹಾಗೂ ಹಿಂಸಾತ್ಮಕ ಕ್ರಿಯೆಗಳಿಂದಾಗಿ ನಿರಾಶ್ರಿತರಾದವರಿಗೆ ಆಶ್ರಯವನ್ನು ನೀಡಲು ಸರ್ವರೂ ಉದಾರತೆಯಿಂದ ಮುಂದೆ ಬರುವಂತೆ.
27 ಫೆಬ್ರವರಿ 2೦19
ಬುಧವಾರ / ಹಸಿರು / ಸಾಧಾರಣ ಕಾಲದ ಏಳನೇ ವಾರ
1ನೇ ವಾಚನ - ಸಿರಾಖ 4: 11-19
ಕೀರ್ತನೆ - 119: 165, 168, 171-172, 174-175
ಶುಭಸಂದೇಶ - ಮಾರ್ಕ9: 38-40
1ನೇ ವಾಚನ - ಸಿರಾಖ 4: 11-19
ಕೀರ್ತನೆ - 119: 165, 168, 171-172, 174-175
ಶುಭಸಂದೇಶ - ಮಾರ್ಕ9: 38-40
ವಾಚನಗಳು
ಮೊದಲನೇ ವಾಚನ
ಆದಿಕಾಂಡದಿಂದ ವಾಚನ
ಸಿರಾಖ 4: 11-19
11ಸುಜ್ಞಾನವೆಂಬಾಕೆ ಮಕ್ಕಳನ್ನು ಉನ್ನತಿಗೆ ಏರಿಸುವಳು ತನ್ನನ್ನು ಅರಸುವವರನ್ನು ತನಗೇ ವಶಮಾಡಿಕೊಳ್ಳುವಳು. 12ಆಕೆಯನ್ನು ಪ್ರೀತಿಸುವವನು, ಪ್ರೀತಿಸುವುದು ಜೀವವನ್ನೇ ತಡವಿಲ್ಲದೆ ಆಕೆಯನ್ನು ಅರಸುವವನು ಪಡೆವನು ಅಮಿತಾನಂದವನ್ನೇ. 13ಆಕೆಯನ್ನು ಬಿಗಿಯಾಗಿ ಹಿಡಿದುಕೊಳ್ಳುವವನು ಆಗುವನು ಕೀರ್ತಿವಂತ ಅವನು ಹೋದೆಡೆಯಲ್ಲೆಲ್ಲ ಲಭಿಸುವುದವನಿಗೆ ದೇವರ ಆಶೀರ್ವಾದ. 14ಆಕೆಗೆ ಸೇವೆಮಾಡುವವನು ಪರಮಪಾವನನನ್ನು ಸೇವೆ ಮಾಡುತ್ತಾನೆ, ಆಕೆಯನ್ನು ಪ್ರೀತಿಸುವವನನ್ನು ಸರ್ವೇಶ್ವರ ಪ್ರೀತಿಸುತ್ತಾನೆ. 15ಆಕೆಗೆ ಕಿವಿಗೊಡುವವರು ಜನಾಂಗಗಳಿಗೆ ನ್ಯಾಯತೀರಿಸುವರು, ಆಕೆಗೆ ಗಮನಕೊಡುವವರು ಸುರಕ್ಷಿತವಾಗಿ ಬದುಕುವರು. 16ಆಕೆಯನ್ನು ನೆಚ್ಚಿಕೊಂಡಿರುವವನು ಪಡೆಯುವು ಆಕೆಯನ್ನು ಬಾಧ್ಯವಾಗಿ ಆತನ ಪೀಳಿಗೆಯೂ ಆಕೆಯನ್ನು ಇಟ್ಟುಕೊಳ್ಳುವುದು ತನ್ನ ಸ್ವಾಧೀನವಾಗಿ. 17ಪ್ರಾರಂಭದಲ್ಲಿ ಆಕೆ ಮಾನವರೊಂದಿಗೆ ಅಡ್ಡದಿಡ್ಡ ನಡೆಯುವಳು; ಅವನಲ್ಲಿ ಅಳುಕು ಅಂಜಿಕೆಗಳನ್ನು ಹುಟ್ಟಿಸುತ್ತಾ ಸಾಗುವಳು; ಆತ್ಮದ ಬಗ್ಗೆ ನಂಬಿಕೆ ಹುಟ್ಟುವ ತನಕ ಶಿಕ್ಷೆಯಿತ್ತು ಬಾಧಿಸುವಳು; ನೀತಿನಿಯಮಗಳಿಂದ ಆತನನ್ನು ಪರೀಕ್ಷಿಸುವಳು. 18ತದನಂತರ ಅವನನ್ನು ನೇರವಾದ ಮಾರ್ಗಕ್ಕೆ ತಿರುಗಿಸುವಳು ಅವನಲ್ಲಿ ಸಂತೋಷವನ್ನು ಮೂಡಿಸುವಳು ಅವನಿಗೆ ತನ್ನ ಗುಟ್ಟುಗಳನು ತಿಳಿಸುತ್ತಾ ನಡೆಯುವಳು. 19ಆಗಲೂ ಅವನು ಅಡ್ಡದಾರಿ ಹಿಡಿದರೆ, ಅವನನ್ನು ತೊರೆದುಬಿಡುವಳು ತಾನು ಮಾಡಿದ್ದನು ತಾನೇ ಉಣ್ಣಲೆಂದು ಕೈಬಿಟ್ಟುಬಿಡುವಳು.
ಕೀರ್ತನೆ
ಕೀರ್ತನೆ - 119: 165, 168, 171-172, 174-175
ಅತಿ ನೆಮ್ಮದಿಯುಂಟು ನಿನ್ನ ಶಾಸ್ತ್ರಪ್ರಿಯರಿಗೆ
ಅತಿ ನೆಮ್ಮದಿಯುಂಟು ನಿನ್ನ ಶಾಸ್ತ್ರಪ್ರಿಯರಿಗೆ
ವಿಘ್ನಕರವಾದುದೇನೂ ಇರದು
ಅನುಸರಿಸಿದೆ ನಿನ್ನ ನೇಮ ನಿಯಮಗಳನೆಲ್ಲ
ನಿನಗೆ ಬಟ್ಟಬಯಲು ನನ್ನ ನಡತೆಯೆಲ್ಲ
ನನಗೆ ಕಲಿಸಿರುವೆ ನಿನ್ನ ನಿಬಂಧನೆಗಳನು
ನನ್ನ ಬಾಯಿ ಉಸುರಲಿ ನಿನ್ನ ಗುಣಗಾನವನು
ವರ್ಣಿಸಲಿ ನನ್ನ ನಾಲಿಗೆ ನಿನ್ನ ನುಡಿಗಳನು
ನಿನ್ನ ಕೈ ನೀಡಲಿ ನನಗೆ ನೆರವನು
ನನಗೆ ಇಷ್ಟ ನೀನು ನೀಡುವ ಜೀವೋದ್ಧಾರ
ನಿನ್ನ ಧರ್ಮಶಾಸ್ತ್ರ ಎನಗೆ ಸಂತೋಷಕರ
ಉಳಿಸೆನ್ನ ಪ್ರಾಣವನು, ಭಜಿಪೆ ನಿನ್ನನು
ನೀಡಲಿ ಎನಗೆ ನಿನ್ನ ವಿಧಿಗಳು ನೆರವನು
ಶುಭಸಂದೇಶ
ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ
ಮಾರ್ಕ 9: 38-40
38ಯೊವಾನ್ನನು ಯೇಸುಸ್ವಾಮಿಗೆ, ಗುರುವೇ, ಯಾರೋ ಒಬ್ಬನು ತಮ್ಮ ಹೆಸರಿನಲ್ಲಿ ದೆವ್ವ ಬಿಡಿಸುವುದನ್ನು ಕಂಡೆವು. ಅವನು ನಮ್ಮವನಲ್ಲ. ಆದಕಾರಣ ಅವನನ್ನು ತಡೆದೆವು, ಎಂದನು. 39ಅದಕ್ಕೆ ಯೇಸು, ಅವನನ್ನು ತಡೆಯಬೇಡಿ, ನನ್ನ ಹೆಸರಿನಲ್ಲಿ ಅದ್ಭುತ ಮಾಡುವವನು ಮರುಕ್ಷಣವೇ ನನ್ನ ವಿಷಯವಾಗಿ ಅಪಪ್ರಚಾರ ಮಾಡನು. 40ನಮಗೆ ವಿರೋಧಿ ಅಲ್ಲದವನು ನಮ್ಮ ಪರವಾದಿ.
ಚಿಂತನೆ
ನೋಡದೆ ವಿಶ್ವಾಸಿಸಿ
ಯೇಸುವನ್ನು ನೋಡದವರು ಅವರನ್ನು ವಿಶ್ವಾಸಿಸಬಾರದು ಎಂದಲ್ಲ. ಯೇಸುವನ್ನು ನೋಡದೆ ಅವರ ವಾಕ್ಯವನ್ನು ಸಂಪೂರ್ಣವಾಗಿ ವಿಶ್ವಾಸಿಸಿ ಅವರ ಹೆಸರಿನಲ್ಲಿ ಪವಾಡ ಕಾರ್ಯಗಳನ್ನು ಮಾಡುವವನು ಯೇಸುವಿನೊಂದಿಗೆ ಇದ್ದು ಅವರನ್ನು ಚೆನ್ನಾಗಿ ಅರಿತು ಅದ್ಬುತ ಮಾಡುವವನಿಗಿಂತ ಎಷ್ಟೋ ಶ್ರೇಷ್ಟನು. ಪರರ ಒಳ್ಳೆಯ ಕೆಲಸಗಳನ್ನು ಗುರುತಿಸಿ, ಪ್ರೋತ್ಸಾಹಿಸುವುದನ್ನು ನಾವು ಯೇಸುವಿನಿಂದ ಕಲಿಯಬೇಕು. ನಮ್ಮಲ್ಲಿ ಅನೇಕ ಒಳ್ಳೆಯ ಕೆಲಸ ಮಾಡಲೊಲ್ಲರು ಹಾಗೂ ಇತರರು ಮಾಡಿದಾಗ ಸಹಿಸಲೊಲ್ಲರು.
ಚಿತ್ರ: ಗೂಗಲ್ ಕೃಪೆ

No comments:
Post a Comment