ಸಾರ್ವಜನಿಕ ಉದ್ದೇಶ: ಮಾನವ ಸಾಗಾಣಿಕೆ, ವೇಶ್ಯಾವಾಟಿಕೆ ಹಾಗೂ ಹಿಂಸಾತ್ಮಕ ಕ್ರಿಯೆಗಳಿಂದಾಗಿ ನಿರಾಶ್ರಿತರಾದವರಿಗೆ ಆಶ್ರಯವನ್ನು ನೀಡಲು ಸರ್ವರೂ ಉದಾರತೆಯಿಂದ ಮುಂದೆ ಬರುವಂತೆ.
23 ಫೆಬ್ರವರಿ 2೦19
ಶನಿವಾರ / ಕೆಂಪು / ಸಂತ ಪೊಲಿಕಾರ್ಪ್ (ಧರ್ಮಾ ಮತ್ತು ಧ.ಪಂ) (ಸ್ಮರಣೆ)
1ನೇ ವಾಚನ - ಹಿಬ್ರಿ 11: 1-7
ಕೀರ್ತನೆ - 145: 2-5, 10-11
ಶುಭಸಂದೇಶ - ಮಾರ್ಕ 9: 2-13
1ನೇ ವಾಚನ - ಹಿಬ್ರಿ 11: 1-7
ಕೀರ್ತನೆ - 145: 2-5, 10-11
ಶುಭಸಂದೇಶ - ಮಾರ್ಕ 9: 2-13
ವಾಚನಗಳು
ಮೊದಲನೇ ವಾಚನ
ಆದಿಕಾಂಡದಿಂದ ವಾಚನ
ಹಿಬ್ರಿ 11: 1-7
1ವಿಶ್ವಾಸವೆಂಬುದು ನಾವು ನಿರೀಕ್ಷಿಸುವಂಥವುಗಳು ನಮಗೆ ದೊರಕುತ್ತವೆ ಎಂಬ ದೃಢನಂಬಿಕೆ ಹಾಗು ಕಣ್ಣಿಗೆ ಕಾಣದಂಥವುಗಳು ನಿಶ್ಚಯವಾದವು ಎಂಬ ನಿಲುವು ಆಗಿದೆ. 2ನಮ್ಮ ಪೂರ್ವಜರು ದೈವಸಮ್ಮತಿಯನ್ನು ಪಡೆದದ್ದು ವಿಶ್ವಾಸದಿಂದಲೇ; 3ವಿಶ್ವವು ದೇವರ ವಾಣಿಯಿಂದ ಉಂಟಾಯಿತು ಎಂಬುದನ್ನು ಮತ್ತು ಗೋಚರವಾದವುಗಳು ಅಗೋಚರವಾದವುಗಳಿಂದ ಉಂಟಾದವು ಎಂಬುದನ್ನು ವಿಶ್ವಾಸದಿಂದಲೇ ತಿಳಿಯುತ್ತೇವೆ 4ವಿಶ್ವಾಸವಿದ್ದುದರಿಂದಲೇ ಹೇಬೆಲನು ಕಾಯಿನನಿಗಿಂತ ಉತ್ತಮವಾದ ಬಲಿಯನ್ನು ದೇವರಿಗೆ ಸಮರ್ಪಿಸಿದನು. ವಿಶ್ವಾಸದಿಂದಲೇ ತಾನು ಸತ್ಪುರುಷನೆಂದು ಸನ್ಮಾನಿತನಾದನು. ಅವನ ಕಾಣಿಕೆ ತಮಗೆ ಸ್ವೀಕೃತವಾಯಿತೆಂದು ದೇವರೇ ಸಾದರಪಡಿಸಿದರು. ಅವನು ಮೃತನಾಗಿದ್ದರೂ ಅವನ ವಿಶ್ವಾಸದ ಮೂಲಕ ಇಂದಿಗೂ ಮಾತನಾಡುತ್ತಿದ್ದಾನೆ. 5ವಿಶ್ವಾಸವಿದ್ದುದರಿಂದಲೇ ಹನೋಕನು ಮೃತ್ಯುವಿಗೆ ತುತ್ತಾಗದಂತೆ ದೇವರ ಬಳಿಗೆ ಒಯ್ಯಲ್ಪಟ್ಟನು. ದೇವರು ಆತನನ್ನು ಕರೆದುಕೊಂಡಿದ್ದರಿಂದ ಆತನು ಯಾರಿಗೂ ಕಾಣಸಿಗಲಿಲ್ಲ. ಆತನು ಹೀಗೆ ಒಯ್ಯಲ್ಪಡುವುದಕ್ಕೆ ಮುಂಚೆ ದೇವರಿಗೆ ಮೆಚ್ಚುಗೆಯಾಗಿದ್ದನು ಎಂಬುದಕ್ಕೆ ಸಾಕ್ಷ್ಯಾಧಾರವಿದೆ. 6ವಿಶ್ವಾಸವಿಲ್ಲದೆ ದೇವರ ಮೆಚ್ಚುಗೆಗೆ ಪಾತ್ರರಾಗಲು ಯಾರಿಂದಲೂ ಸಾಧ್ಯವಿಲ್ಲ. ದೇವರ ಬಳಿಗೆ ಸಾಗುವವರು, ಅವರ ಅಸ್ತಿತ್ವವನ್ನು ವಿಶ್ವಾಸಿಸಬೇಕು; ಅವರನ್ನು ಅರಸುವವರಿಗೆ ತಕ್ಕ ಪ್ರತಿಫಲ ಸಿಗುವುದೆಂದು ನಂಬಬೇಕು. 7ವಿಶ್ವಾಸವಿದ್ದುದರಿಂದಲೇ ನೋವನು ಕಾಣದೆ ಇದ್ದ ತನ್ನ ಭವಿಷ್ಯದ ಬಗ್ಗೆ ದೇವರಿಂದ ಮುನ್ನೆಚ್ಚರಿಕೆ ಪಡೆದಾಗ ಅದನ್ನು ಲಕ್ಷ್ಯಕ್ಕೆ ತಂದುಕೊಂಡು ಕುಟುಂಬವನ್ನು ರಕ್ಷಿಸಿಕೊಳ್ಳಲು ನಾವೆಯೊಂದನ್ನು ನಿರ್ಮಿಸಿದನು. ಇಡೀ ಜಗತ್ತೇ ದಂಡನೆಗೆ ಗುರಿಯಾಯಿತು. ನೋವನಾದರೋ ತನ್ನ ವಿಶ್ವಾಸದ ಫಲವಾಗಿ ಸತ್ಸಂಬಂಧಕ್ಕೆ ಬಾಧ್ಯಸ್ಥನಾದನು.
ಕೀರ್ತನೆ
ಕೀರ್ತನೆ 145: 2-5, 10-11
ಪುನಶ್ಚೇತನಗೊಳಿಸುವನು ನನ್ನ ಪ್ರಾಣವನಾತ
ಹೊಗಳುವೆನು ನಾ ದಿನದಿನವೂ ನಿನ್ನನು
ಭಜಿಸುವೆನೆಂದೆಂದಿಗೂ ನಿನ್ನ ಹೆಸರನು
ಹೊಗಳುವೆನು ನಾ ದಿನದಿನವೂ ನಿನ್ನನು
ಭಜಿಸುವೆನೆಂದೆಂದಿಗೂ ನಿನ್ನ ಹೆಸರನು
ಪ್ರಭು ಮಹಾತ್ಮನು, ಸ್ತುತ್ಯರ್ಹನು
ಆತನ ಮಹಿಮೆ ಅಗಮ್ಯವಾದದು
ತಲೆಮಾರು ತಲೆಮಾರಿಗೆ ನುತಿಸುವುದು ನಿನ್ನ ಕಾರ್ಯಗಳನು
ತಿಳಿಸುವುದು ಪ್ರಭು, ನೀ ಮಾಡಿದೆಲ್ಲಾ ಮಹತ್ಕಾರ್ಯಗಳನು
ಧ್ಯಾನಿಸುವೆನು ನಿನ್ನ ಅದ್ಭುತಕಾರ್ಯಗಳನು
ನಿನ್ನ ಮಹೋನ್ನತ ಮಹಿಮಾಪ್ರಭಾವವನು
ಪ್ರಭು, ನಿನ್ನನು ಸ್ತುತಿಪುದು ಸೃಷ್ಟಿಯೆಲ್ಲವು
ಕೊಂಡಾಡುವುದು ನಿನ್ನನು ಭಕ್ತ ಸಮೂಹವು
ಪ್ರಸಿದ್ಧಪಡಿಸುವರು ನಿನ್ನ ರಾಜ್ಯದ ಮಹತ್ವವನು
ವರ್ಣಿಸುವರವರು ನಿನ್ನ ಶಕ್ತಿ ಸಾಮಥ್ರ್ಯವನು
ಆತನ ಮಹಿಮೆ ಅಗಮ್ಯವಾದದು
ತಲೆಮಾರು ತಲೆಮಾರಿಗೆ ನುತಿಸುವುದು ನಿನ್ನ ಕಾರ್ಯಗಳನು
ತಿಳಿಸುವುದು ಪ್ರಭು, ನೀ ಮಾಡಿದೆಲ್ಲಾ ಮಹತ್ಕಾರ್ಯಗಳನು
ಧ್ಯಾನಿಸುವೆನು ನಿನ್ನ ಅದ್ಭುತಕಾರ್ಯಗಳನು
ನಿನ್ನ ಮಹೋನ್ನತ ಮಹಿಮಾಪ್ರಭಾವವನು
ಪ್ರಭು, ನಿನ್ನನು ಸ್ತುತಿಪುದು ಸೃಷ್ಟಿಯೆಲ್ಲವು
ಕೊಂಡಾಡುವುದು ನಿನ್ನನು ಭಕ್ತ ಸಮೂಹವು
ಪ್ರಸಿದ್ಧಪಡಿಸುವರು ನಿನ್ನ ರಾಜ್ಯದ ಮಹತ್ವವನು
ವರ್ಣಿಸುವರವರು ನಿನ್ನ ಶಕ್ತಿ ಸಾಮಥ್ರ್ಯವನು
ಶುಭಸಂದೇಶ
ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ
ಮಾರ್ಕ 9: 2-13
2ಆರು ದಿನಗಳ ಬಳಿಕ ಪೇತ್ರ, ಯಕೋಬ ಮತ್ತು ಯೊವಾನ್ನ ಇವರನ್ನು ಮಾತ್ರ ತಮ್ಮೊಡನೆ ಕರೆದುಕೊಂಡು ಯೇಸುಸ್ವಾಮಿ ಎತ್ತರವಾದ ಒಂದು ಬೆಟ್ಟಕ್ಕೆ ಹೋದರು. ಅಲ್ಲಿ ಆ ಶಿಷ್ಯರ ಕಣ್ಣೆದುರಿಗೇ ಯೇಸು ರೂಪಾಂತರ ಹೊಂದಿದರು. 3ಆಗ ಅವರ ಉಡುಪು ಅತ್ಯಂತ ಶುಭ್ರವಾಗಿ ಹೊಳೆಯಿತು. ಜಗದ ಯಾವ ಅಗಸನಿಂದಲೂ ಮಡಿಮಾಡಲಾಗದಷ್ಟು ಅದು ಬಿಳುಪಾಯಿತು. 4ಮೋಶೆ ಮತ್ತು ಎಲೀಯ ಪ್ರತ್ಯಕ್ಷರಾಗಿ ಯೇಸುವಿನೊಡನೆ ಮಾತನಾಡುತ್ತಿದ್ದುದು ಶಿಷ್ಯರಿಗೆ ಕಾಣಿಸಿತು. 5ಆಗ ಪೇತ್ರನು ಯೇಸುವಿಗೆ, ಗುರುದೇವಾ, ನಾವು ಇಲ್ಲೇ ಇರುವುದು ಒಳ್ಳೆಯದು; ಅಪ್ಪಣೆಯಾಗಲಿ, ಮೂರು ಗುಡಾರಗಳನ್ನು ಕಟ್ಟುವೆವು; ತಮಗೊಂದು, ಮೋಶೆಗೊಂದು ಮತ್ತು ಎಲೀಯನಿಗೊಂದು, ಎಂದನು. 6ಪೇತ್ರನಿಗೆ ತಾನು ಏನು ಹೇಳುತ್ತಿದ್ದೇನೆಂದೇ ತಿಳಿಯಲಿಲ್ಲ. ಶಿಷ್ಯರು ಅಷ್ಟು ಭಯಭ್ರಾಂತರಾಗಿದ್ದರು! 7ಅಷ್ಟರಲ್ಲಿ ಮೇಘವೊಂದು ಅವರನ್ನು ಆವರಿಸಿತು. ಅದರೊಳಗಿಂದ, ಈತನು ನನ್ನ ಪುತ್ರ, ನನಗೆ ಪರಮಪ್ರಿಯನು, ಈತನ ಮಾತಿಗೆ ಕಿವಿಗೊಡಿ, ಎಂಬ ವಾಣಿ ಕೇಳಿಸಿತು. 8ತಕ್ಷಣ, ಶಿಷ್ಯರು ಸುತ್ತಲೂ ನೋಡಲು ತಮ್ಮೊಂದಿಗೆ ಯೇಸುವೊಬ್ಬರನ್ನೇ ಹೊರತು ಬೇರೆ ಯಾರನ್ನೂ ಕಾಣಲಿಲ್ಲ. 9ಅನಂತರ ಯೇಸು ಮತ್ತು ಅವರ ಶಿಷ್ಯರು ಬೆಟ್ಟದಿಂದ ಇಳಿದುಬರುವಾಗ, ನರಪುತ್ರನು ಸತ್ತು ಪುನರುತ್ಥಾನಹೊಂದುವ ತನಕ ನೀವು ಕಂಡದ್ದನ್ನು ಯಾರಿಗೂ ಹೇಳಬೇಡಿ, ಎಂದು ಆಜ್ಞಾಪಿಸಿದರು. 10ಅಂತೆಯೇ ಶಿಷ್ಯರು ಇದನ್ನು ಯಾರಿಗೂ ಹೇಳಲಿಲ್ಲ; ಆದರೂ 'ಸತ್ತು ಪುನರುತ್ಥಾನ ಹೊಂದುವುದು' ಎಂದರೆ ಏನು? ಎಂದು ತಮ್ಮತಮ್ಮೊಳಗೆ ಚರ್ಚಿಸಿಕೊಂಡರು. 11ಅನಂತರ, ಎಲೀಯನು ಮೊದಲು ಬರಬೇಕಾದುದು ಅಗತ್ಯವೆಂದು ಶಾಸ್ತ್ರಜ್ಞರು ಹೇಳುತ್ತಾರಲ್ಲಾ, ಅದು ಹೇಗೆ? ಎಂದು ಶಿಷ್ಯರು ಯೇಸುವನ್ನು ಕೇಳಿದರು. 12ಅದಕ್ಕೆ ಅವರು, 'ಎಲೀಯನು ಮೊದಲು ಬಂದು ಎಲ್ಲವನ್ನೂ ಸಜ್ಜುಗೊಳಿಸುವನೆಂಬುದೇನೋ ನಿಜ. ಆದರೂ ನರಪುತ್ರನು ಜನರಿಂದ ತೀವ್ರಯಾತನೆಯನ್ನು ಅನುಭವಿಸಿ ಅವರಿಂದ ತಿರಸ್ಕೃತನಾಗಬೇಕು,' ಎಂದು ಪವಿತ್ರಗ್ರಂಥದಲ್ಲಿ ಬರೆದಿದೆಯಲ್ಲವೆ; ಇದು ಹೇಗೆ? 13ಆದರೆ ನಾನು ನಿಮಗೆ ಹೇಳುವುದೇನೆಂದರೆ, 'ಎಲೀಯನು ಬಂದಾಗಿದೆ; ಆತನ ವಿಷಯವಾಗಿ ಮೊದಲೇ ಬರೆದಿರುವಂತೆ ಜನರು ತಮ್ಮ ಇಚ್ಛಾನುಸಾರ ಆತನನ್ನು ಹಿಂಸಿಸಿದ್ದೂ ಆಗಿದೆ', ಎಂದರು.
ಚಿಂತನೆ
ಯೇಸುವೇ ಲೋಕ ರಕ್ಷಕರು
ಬೈಬಲ್‌ನಲ್ಲಿ ಪರ್ವತ ಅಥವಾ ಬೆಟ್ಟಕ್ಕೆ ಒಂದು ವಿಶಿಷ್ಠ ಸ್ಥಾನವಿದೆ. ದೇವರು ತಮ್ಮ ಮಹಿಮೆಯನ್ನು ಪರ್ವತಗಳ ಮೇಲೆ ಪ್ರಕಟಿಸುವುದರೊಂದಿಗೆ ಅನೇಕ ಪ್ರಮುಖ ಘಟನೆಗಳು ಪರ್ವತಗಳ ಮೇಲೆ ನಡೆದಿವೆ. ಯೇಸು ಇಂದು ಪರ್ವತದ ಮೇಲೆ ರೂಪಾಂತರಗೊಳ್ಳುತ್ತಾರೆ. ಯೇಸುವಿನ ರೂಪಾಂತರವು ಅವರ ಮರಣ, ಪುನರುತ್ಥಾನದ ಬಗ್ಗೆ ಮುನ್ಸೂಚನೆಯನ್ನು ನೀಡುತ್ತದೆ. ಈ ಘಟನೆಯಿಂದ ಪ್ರಭು ಯೇಸುವೇ ಲೋಕ ರಕ್ಷಕರು ಎಂದು ಶಿಷ್ಯರು ತಿಳಿದುಕೊಳ್ಳುತ್ತಾರೆ. ಈ ಘಟನೆಯು ಅವರ ಜೀವನದಲ್ಲಿ ಭರವಸೆಯನ್ನು ಮೂಡಿಸುತ್ತದೆ. ಈತನು ನನ್ನ ಪುತ್ರನು, ನನಗೆ ಪರಮ ಪ್ರಿಯನು'' ಎಂಬ ವಾಣಿ ಶಿಷ್ಯರಲ್ಲಿ ವಿಶ್ವಾಸವನ್ನು ಮೂಡಿಸಿತು. ತಮ್ಮ ರೂಪಾಂತರದಿಂದ ಯೇಸು ತಮ್ಮ ಶಿಷ್ಯರನ್ನು ವಿಶ್ವಾಸದಲ್ಲಿ ದೃಢಪಡಿಸುತ್ತಾರೆ. ಶಿಲುಬೆಯಿಂದಲೇ ಮುಕ್ತಿ, ಶಿಲುಬೆಯ ಮರಣ ಅಂತ್ಯವಲ್ಲ, ಅದರ ನಂತರ ಮಹಿಮಾ ಪದವಿ ಇದೆ ಎಂಬುದನ್ನು ತೋರ್ಪಡಿಸುತ್ತಾರೆ.
ಸಂತ ಪೊಲಿಕಾರ್ಪ್ (ಕ್ರಿಸ್ತಶಕ 156)
ಯೇಸುವಿನೊಡನೆ ಒಡನಾಡಿಯಾಗಿದ್ದ ಶುಭಸಂದೇಶಕ ಸಂತ ಯೊವಾನ್ನರ ಶಿಷ್ಯರಾದ ಪೊಲಿಕಾರ್ಪ್ ತಮ್ಮ ದೃಢವಾದ ವಿಶ್ವಾಸಕ್ಕಾಗಿ ಹಲವು ಹಿಂಸೆಗಳನ್ನು ಅನುಭವಿಸಿದರು. ಪ್ರಾರ್ಥನಾ ಜೀವಿಯಾಗಿದ್ದ ಇವರ ಪ್ರಾರ್ಥನಾ ಶಕ್ತಿ ಹೇಗಿತ್ತೆಂದರೆ ತಮಗೆ ಬೆಂಕಿಯಿಂದಲೇ ಸಾವು ಎಂಬ ಸೂಚನೆ ಬಂದಿದೆ ಎನ್ನುತ್ತಿದ್ದರು. ಅವರು ಪಡೆದ ಸೂಚನೆಗೆ ಅನುಗುಣವಾಗಿಯೇ ಕೊನೆಗೆ ಮರಣದಂಡನೆಯನ್ನು ಅನುಭವಿಸಿದರು. ಪ್ರಾರ್ಥನೆಯಲ್ಲೇ ಜೀವನದ ಹಲವು ರಹಸ್ಯಗಳನ್ನು ಅರಿತುಕೊಂಡ ಈ ಸಂತರು ಜನರಿಗೆ ಎಲ್ಲಾ ರೀತಿಯಲ್ಲೂ ನೆರವು ನೀಡುತ್ತ ಅವರ ಬದುಕಿನ ಹೊರೆಯನ್ನು ಹೊರಲು ಸಹಾಯ ಮಾಡಿದರು. ಅವರ ಮಾರ್ಗದರ್ಶನವನ್ನು ಅರಸಿ ಬಂದ ಪ್ರತಿಯೊಬ್ಬ ವ್ಯಕ್ತಿಯು ದೈವಾನುಗ್ರಹದಿಂದ ತುಂಬಿ ತುಳುಕಲು ಕಾರಣಕರ್ತರಾದರು.
ಇಂದಿನ ಸಂತರು
ಸಂತ ಪೊಲಿಕಾರ್ಪ್ (ಕ್ರಿಸ್ತಶಕ 156)
ಯೇಸುವಿನೊಡನೆ ಒಡನಾಡಿಯಾಗಿದ್ದ ಶುಭಸಂದೇಶಕ ಸಂತ ಯೊವಾನ್ನರ ಶಿಷ್ಯರಾದ ಪೊಲಿಕಾರ್ಪ್ ತಮ್ಮ ದೃಢವಾದ ವಿಶ್ವಾಸಕ್ಕಾಗಿ ಹಲವು ಹಿಂಸೆಗಳನ್ನು ಅನುಭವಿಸಿದರು. ಪ್ರಾರ್ಥನಾ ಜೀವಿಯಾಗಿದ್ದ ಇವರ ಪ್ರಾರ್ಥನಾ ಶಕ್ತಿ ಹೇಗಿತ್ತೆಂದರೆ ತಮಗೆ ಬೆಂಕಿಯಿಂದಲೇ ಸಾವು ಎಂಬ ಸೂಚನೆ ಬಂದಿದೆ ಎನ್ನುತ್ತಿದ್ದರು. ಅವರು ಪಡೆದ ಸೂಚನೆಗೆ ಅನುಗುಣವಾಗಿಯೇ ಕೊನೆಗೆ ಮರಣದಂಡನೆಯನ್ನು ಅನುಭವಿಸಿದರು. ಪ್ರಾರ್ಥನೆಯಲ್ಲೇ ಜೀವನದ ಹಲವು ರಹಸ್ಯಗಳನ್ನು ಅರಿತುಕೊಂಡ ಈ ಸಂತರು ಜನರಿಗೆ ಎಲ್ಲಾ ರೀತಿಯಲ್ಲೂ ನೆರವು ನೀಡುತ್ತ ಅವರ ಬದುಕಿನ ಹೊರೆಯನ್ನು ಹೊರಲು ಸಹಾಯ ಮಾಡಿದರು. ಅವರ ಮಾರ್ಗದರ್ಶನವನ್ನು ಅರಸಿ ಬಂದ ಪ್ರತಿಯೊಬ್ಬ ವ್ಯಕ್ತಿಯು ದೈವಾನುಗ್ರಹದಿಂದ ತುಂಬಿ ತುಳುಕಲು ಕಾರಣಕರ್ತರಾದರು.
ಚಿತ್ರ: ಗೂಗಲ್ ಕೃಪೆ


No comments:
Post a Comment