ಅಂತಿಮ ಪ್ರಾರ್ಥನೆ

ಕ್ರಿಸ್ತನ ಸಮಷ್ಟಿ ದೃಷ್ಟಿಯನ್ನು ಅನಾವರಣ ಮಾಡಿದ ಈ ಆಧ್ಯಾತ್ಮಿಕ ಪ್ರಾರ್ಥನೆ / ಪ್ರಯಾಣ ಇಲ್ಲಿಗೆ ಕೊನೆಕೊಳ್ಳುವುದಿಲ್ಲ. ಇಲ್ಲಿ ನಡೆದುದ್ದು ಪ್ರಯಾಣದ ವೇಳೆ ಕ್ರಿಸ್ತನಲ್ಲಿದ್ದ ಆತ್ಮದೃಷ್ಟಿಯ ಸಾಕ್ಷಾತ್ಕಾರ ಮಾತ್ರ. ಕ್ರಿಸ್ತನ ಮನೋದೃಷ್ಟಿಯನ್ನು ನಾವು ನಮ್ಮ ಬದುಕಿನಲ್ಲಿ ರೂಢಿಸಿಕೊಳ್ಳಬೇಕು. ಬದುಕಿನ ಪ್ರತಿಯೊಂದು ನೀರ್ಣಾಯಕ ಹಾಗೂ ಇಕ್ಕಟ್ಟುಗಳ ಸಂದರ್ಭದಲ್ಲಿ ಕ್ರಿಸ್ತ ತೋರಿದ ಪ್ರತಿಕ್ರಿಯೆಗಳನ್ನು ನಮ್ಮದಾಗಿಸಿಕೊಳ್ಳುತ್ತಾ ಮತ್ತೊಬ್ಬ ಕ್ರಿಸ್ತನಂತೆ ಈ ಜಗತ್ತಿನಲ್ಲಿ ಬಾಳಬೇಕು. ಹೌದು, ಇದು ಹೇಳಿದಷ್ಟು ಸುಲಭವಲ್ಲ. ಈ ಒಂದು ಕಾರ್ಯಸಾಧನೆಗೆ ಅಚಲ ವಿಶ್ವಾಸಬೇಕು, ದೇವರ ಕೃಪೆ ಬೇಕು. ಆದ್ದರಿಂದ ದೇವರ ಕೃಪೆಗಳಿಗಾಗಿ ಪ್ರಾರ್ಥಿಸೋಣ. ಆಮೆನ್.

No comments:

Post a Comment