ಸುವಾರ್ತಾ ಪ್ರಸಾರದ ಉದ್ದೇಶ: ಯುವಜನರು, ವಿಶೇಷವಾಗಿ ಲ್ಯಾಟಿನ್ ಅಮೇರಿಕಾದ ಯುವಜನರು ಪೂಜ್ಯ ಕನ್ಯಾ ಮರಿಯಮ್ಮನವರ ಆದರ್ಶವನ್ನು ಅನುಸರಿಸುತ್ತಾ ಪ್ರಭು ಯೇಸುವಿನ ಕರೆಗೆ ಓಗೊಟ್ಟು ಸುವಾರ್ತೆಯ ಆನಂದವನ್ನು ಜಗತ್ತಿನಾದ್ಯಂತ ಪಸರಿಸುವ ಕ್ಷಮತೆಯನ್ನು ಹೊಂದುವುದು.
13 ಜನವರಿ 2019
ಭಾನುವಾರ/ಬಿಳಿ/ ಪ್ರಭುವಿನ ಸ್ನಾನದೀಕ್ಷೆಯ ಮಹೋತ್ಸವ
1ನಿಮ್ಮ ದೇವರು ಇಂತೆನ್ನುತ್ತಾರೆ: "ಸಂತೈಸಿ, ನನ್ನ ಜನರನ್ನು ಸಂತೈಸಿರಿ. 2ಜೆರುಸಲೇಮಿನೊಡನೆ ಪ್ರೀತಿಯಿಂದ ಮಾತನಾಡಿ; ಅದರ ಊಳಿಗತನ ಮುಗಿಯಿತೆನ್ನಿ; ತಕ್ಕ ಪ್ರಾಯಶ್ಚಿತ್ತವಾಗಿದೆ ಅದು ಗೈದ ದೋಷಕೆ ಸರ್ವೇಶ್ವರ ಸ್ವಾಮಿಯಿಂದಲೇ ಅದರ ಎಲ್ಲಾ ಪಾಪಕೃತ್ಯಗಳಿಗೆ ಇಮ್ಮಡಿ ಶಿಕ್ಷೆಯಾಗಿದೆ ಎಂದು ಕೂಗಿ ಹೇಳಿ ಆ ನಗರಿಗೆ, 3"ಇಗೋ, ಈ ವಾಣಿಯನ್ನು ಕೇಳಿ: "ಸರ್ವೇಶ್ವರಸ್ವಾಮಿಗೆ ಮಾರ್ಗವನ್ನು ಸಿದ್ದಮಾಡಿ ಅರಣ್ಯದಲ್ಲಿ ನಮ್ಮ ದೇವರಿಗೆ ರಾಜಮಾರ್ಗವನ್ನು ಸರಾಗಮಾಡಿ ಅಡವಿಯಲ್ಲಿ. 4ತುಂಬಬೇಕು ಎಲ್ಲ ಹಳ್ಳಕೊಳ್ಳಗಳನ್ನು, ಮಟ್ಟಮಾಡಬೇಕು ಎಲ್ಲ ಬೆಟ್ಟಗುಡ್ಡಗಳನ್ನು. ನೆಲಸಮಮಾಡಬೇಕು ದಿಬ್ಬದಿಣ್ಣೆಗಳನು ಸಮತಲಗೊಳಿಸಬೇಕು ತಗ್ಗುಮುಗ್ಗಾದ ಸ್ಥಳಗಳನ್ನು. 5ಗೋಚರವಾಗುವುದಾಗ ಸರ್ವೇಶ್ವರಸ್ವಾಮಿಯ ಮಹಿಮೆಯು, ಮಾನಲರೆಲ್ಲರೂ ಅದನ್ನು ಕಾಣುವರು. ಒಟ್ಟಿಗೆ, ಸರ್ವೇಶ್ವರಸ್ವಾಮಿಯೇ ಇದನ್ನು ಬಾಯಾರೆ ನುಡಿದಿದ್ದಾರೆ."
9ಪರ್ವತವನ್ನೇರು ಶುಭಸಂದೇಶಕಳಾದ ಸಿಯೋನೇ, ಧ್ವನಿಯೇರಿಸು, ಶುಭವಾರ್ತೆ ಸಾರಬಲ್ಲ ಜೆರುಸಲೇಮೇ, ಧ್ವನಿಯೇರಿಸು, ನಿರ್ಭಯದಿಂದ ಏರಿಸು; 'ಇಗೋ, ನಿಮ್ಮ ದೇವರು' ಎಂದು ಜೂದ ನಗರಗಳಿಗೆ ಸಾರು. 10ಇಗೋ, ಬರುತಿಹನು ಸ್ವಾಮಿ ಸರ್ವೇಶ್ವರ ಶೂರನಂತೆ ರಾಜ್ಯವಾಳುವನು ತನ್ನ ಭುಜಬಲದಿಂದಲೇ. ಇಗೋ, ಶ್ರಮಕ್ಕೆ ತಕ್ಕ ಪ್ರತಿಫಲ ಆತನ ಕೈಯಲ್ಲಿದೆ ಆತ ಜಯಿಸಿದ ಪರಿವಾರ ಆತನ ಮುಂದಿದೆ. 11ಆತ ಮೇಯಿಸುವನು ತನ್ನ ಮಂದೆಯನ್ನು ಕುರುಬನ ಹಾಗೆ ಮರಿಗಳನ್ನು ಕೈಗೆ ಎತ್ತಿಕೊಳ್ಳುವನು, ಅಪ್ಪಿಕೊಳ್ಳುವನು ಎದೆಗೆ ನಡೆಸುವನು ಹಾಲೂಡಿಸುವ ಕುರಿಗಳನ್ನು ಮೆಲ್ಲಗೆ.
ಕೀರ್ತನೆ
ಚಿಂತನೆ
ಕರ್ತರ ಸ್ನಾನದೀಕ್ಷೆಯ ಹಬ್ಬ
1ನೇ ವಾಚನ - ಯೆಶಾಯ 4೦: 1-5, 9-11
ಕೀರ್ತನೆ - 1೦4: 1-4, 24-25, 27-3೦
2ನೇ ವಾಚನ - ತೀತ 2: 11-14, 3: 4-7
ಶುಭಸಂದೇಶ - ಲೂಕ 3: 15-16, 21-22
ವಾಚನಗಳು
ಮೊದಲನೇ ವಾಚನ
ಯೆಶಾಯ ಪ್ರವಾದಿಯ ಗ್ರಂಥದಿಂದ ವಾಚನ
9ಪರ್ವತವನ್ನೇರು ಶುಭಸಂದೇಶಕಳಾದ ಸಿಯೋನೇ, ಧ್ವನಿಯೇರಿಸು, ಶುಭವಾರ್ತೆ ಸಾರಬಲ್ಲ ಜೆರುಸಲೇಮೇ, ಧ್ವನಿಯೇರಿಸು, ನಿರ್ಭಯದಿಂದ ಏರಿಸು; 'ಇಗೋ, ನಿಮ್ಮ ದೇವರು' ಎಂದು ಜೂದ ನಗರಗಳಿಗೆ ಸಾರು. 10ಇಗೋ, ಬರುತಿಹನು ಸ್ವಾಮಿ ಸರ್ವೇಶ್ವರ ಶೂರನಂತೆ ರಾಜ್ಯವಾಳುವನು ತನ್ನ ಭುಜಬಲದಿಂದಲೇ. ಇಗೋ, ಶ್ರಮಕ್ಕೆ ತಕ್ಕ ಪ್ರತಿಫಲ ಆತನ ಕೈಯಲ್ಲಿದೆ ಆತ ಜಯಿಸಿದ ಪರಿವಾರ ಆತನ ಮುಂದಿದೆ. 11ಆತ ಮೇಯಿಸುವನು ತನ್ನ ಮಂದೆಯನ್ನು ಕುರುಬನ ಹಾಗೆ ಮರಿಗಳನ್ನು ಕೈಗೆ ಎತ್ತಿಕೊಳ್ಳುವನು, ಅಪ್ಪಿಕೊಳ್ಳುವನು ಎದೆಗೆ ನಡೆಸುವನು ಹಾಲೂಡಿಸುವ ಕುರಿಗಳನ್ನು ಮೆಲ್ಲಗೆ.
ಕೀರ್ತನೆ
ಶ್ಲೋಕ: ಭಜಿಸು ನನ್ನ ಮನವೇ, ಭಜಿಸು, ಪ್ರಭುವನು
1: ಭಜಿಸು ನನ್ನ ಮನವೇ, ಭಜಿಸು, ಪ್ರಭುವನು|
ಪ್ರಭು, ನನ್ನ ದೇವಾ, ನೀ ಸರ್ವೋತ್ತಮನು|
ಮಹಿಮೆ ಪ್ರತಾಪಗಳಿಂದ ಭೂಷಿತನು||
2: ತೊಟ್ಟುಕೊಂಡಿರುವೆ ಬೆಳಕನೇ ಬಟ್ಟೆಯಂತೆ|
ಹರಡಿಸಿರುವೆ ಆಗಸವನು ಗುಡಾರದಂತೆ||
3: ನಿರ್ಮಿಸಿರುವೆ ನಿನ್ನ ಭವನವನು ಜಲದ ಮೇಲೆ|
ಮಾಡುವೆ ಸಂಚಾರ ಮಾರುತನ ರೆಕ್ಕೆಗಳ ಮೇಲೆ |
ನಿನಗೆ ರಥವಾಹನಗಳು ಆ ಮುಗಿಲು ಮೋಡಗಳೇ||
4: ಗಾಳಿಗಳೇ ನಿನಗೆ ದೂತರುಗಳು|
ಅಗ್ನಿಜ್ವಾಲೆಗಳೇ ಆಳುಗಳು||
24: ಸೃಜಿಸಿರುವೆ ಎಲ್ಲವನು ಸುಜ್ಞಾನದಿಂದ|
ಜಗವೆಲ್ಲ ತುಂಬಿದೆ ನಿನ್ನ ಸೃಷ್ಟಿಯಿಂದ||
25: ಸಮುದ್ರವಿದೊ ಎಷ್ಟು ಅಪಾರ, ಅದೆಷ್ಟು ವಿಶಾಲ|
ಅದರಲ್ಲಿರುವ ಸಣ್ಣ-ದೊಡ್ಡ ಜೀವಿಗಳಿಗೆ ಲೆಕ್ಕವಿಲ್ಲ ||
27: ಸಕಾಲದಲೊದಗಿಸುವೆ ಆಹಾರವನು|
ನಂಬಿಕೊಂಡಿವೆ ಈ ಜೀವಿಗಳು ನಿನ್ನನು||
28: ನೀ ನೀಡಲು ಕೂಡಿಸಿಟ್ಟುಕೊಳ್ಳುವುವು|
ನೀ ಕೈತೆರೆಯಲವು ಸಂತೃಪ್ತಿಪಡೆವುವು||
29: ತಲ್ಲಣಗೊಳ್ಳುವುವು ನೀ ಮುಖ ಮರೆಮಾಡಿಕೊಳ್ಳಲು|
ಮಣ್ಣುಪಾಲಾಗುವುವು ನೀನವುಗಳ ಉಸಿರನಡಗಿಸಲು||
30: ನೀ ಉಸಿರನ್ನೂದಲು ಹೊಸದಾಗುವುವು|
ಪುನಶ್ಚೇತನಗೊಳ್ಳುವುದು ಜಗವೆಲ್ಲವು||

ಎರಡನೇ ವಾಚನ
ಸಂತ ಪೌಲನು ತೀತನಿಗೆ ಬರೆದ ಪತ್ರದಿಂದ ವಾಚನ
11ಎಲ್ಲಾ ಮಾನವರ ಜೀವೋದ್ಧಾರಕ್ಕಾಗಿಯೇ ದೇವರ ಅನುಗ್ರಹವು ಪ್ರಕಟವಾಗಿದೆ. 12-13ನಾವು ಭಕ್ತಿಹೀನ ನಡತೆಯನ್ನೂ ಪ್ರಾಪಂಚಿಕ ವ್ಯಾಮೋಹಗಳನ್ನೂ ವಿಸರ್ಜಿಸಿ, ಈ ಲೋಕದಲ್ಲಿ ವಿವೇಕಿಗಳಾಗಿಯೂ ಪ್ರಾಮಾಣಿಕರಾಗಿಯೂ ಭಕ್ತರಾಗಿಯೂ ಜೀವಿಸಬೇಕೆಂದು ಅದು ನಿಮಗೆ ಭೋಧಿಸುತ್ತದೆ. ಅಲ್ಲದೆ, ಮಹೋನ್ನತ ದೇವರು ಮತ್ತು ನಮ್ಮ ಉದ್ಧಾರಕ ಯೇಸುಕ್ರಿಸ್ತರು ಮಹಿಮಾರೂಪದಲ್ಲಿ ನಮಗೆ ಪ್ರತ್ಯಕ್ಷವಾಗುವ ಸೌಭಾಗ್ಯವನ್ನುನಾವು ಎದುರುನೋಡಬೇಕೆಂದು ಅದು ಕಲಿಸುತ್ತದೆ. 14ಯೇಸುಕ್ರಿಸ್ತರು ನಮ್ಮನ್ನು ಸಕಲ ಅಪರಾಧಗಳಿಂದ ವಿಮೋಚಿಸಿ, ಪರಿಶುದ್ಧರನ್ನಾಗಿಸಿ ಸತ್ಕಾರ್ಯಗಳಲ್ಲಿ ಆಸಕ್ತರಾದ ಒಂದು ಜನಾಂಗವನ್ನಾಗಿ ಮಾಡಿದರು. ನಮ್ಮನ್ನು ತಮ್ಮ ಸ್ವಂತದವರನ್ನಾಗಿಸಿಕೊಳ್ಳಲೆಂದು ತಮ್ಮನ್ನೇ ನಮಗಾಗಿ ಸಮರ್ಪಿಸಿಕೊಟ್ಟರು.
4ಹೀಗಿರುವಾಗ, ಜಗದ ರಕ್ಷಕರಾದ ದೇವರ ದಯೆಯೂ ಅವರ ಜನಪ್ರೇಮವೂ ಪ್ರಕಟವಾದವು. 5ಆಗ ಅವರೇ ನಮ್ಮನ್ನು ಉದ್ಧರಿಸಿದರು. ನಮ್ಮ ಸ್ವಂತ ಪುಣ್ಯಕಾರ್ಯಗಳು ನಮಗೆ ಈ ಉದ್ಧಾರವನ್ನು ತರಲಿಲ್ಲ. ಪುನರ್ಜನ್ಮವನ್ನು ಸೂಚಿಸುವ ಸ್ನಾನ ಹಾಗೂ ನೂತನ ಜೀವವನ್ನೀಯುವ ಪವಿತ್ರಾತ್ಮ ಈ ಮೂಲಕ ಅವರೇ ನಮ್ಮನ್ನು ಕರುಣೆಯಿಂದ ಉದ್ಧಾರಮಾಡಿದರು. 6ಪವಿತ್ರಾತ್ಮರನ್ನು ನಮ್ಮ ಉದ್ಧಾರಕ ಯೇಸುಕ್ರಿಸ್ತರ ಮುಖಾಂತರ ದೇವರು ನಮಗೆ ಧಾರಾಳವಾಗಿ ಅನುಗ್ರಹಿಸಿದ್ದಾರೆ.
ಶುಭಸಂದೇಶ
ಸಂತ ಲೂಕನು ಬರೆದ ಶುಭಸಂದೇಶದಿಂದ ವಾಚನ
15ಈ ಯೊವಾನ್ನನೇ ಎಲ್ಲರು ಎದುರು ನೋಡುತ್ತಾ ಇರುವ ಅಭಿಷಿಕ್ತನಾದ ಲೋಕೋದ್ಧಾರಕ ಆಗಿರಬಹುದೇ ಎಂದು ಜನರು ತಮ್ಮ ಮನಸ್ಸಿನಲ್ಲೇ ಆಲೋಚಿಸುತ್ತಿದ್ದರು. 16ಅದಕ್ಕೆ ಉತ್ತರವಾಗಿ ಯೊವಾನ್ನನು, ನಾನು ನಿಮಗೆ ನೀರಿನಿಂದ ಸ್ನಾನದೀಕ್ಷೆ ಕೊಡುತ್ತಿದ್ದೇನೆ. ಆದರೆ ನನಗಿಂತಲೂ ಶಕ್ತರೊಬ್ಬರು ಬರುತ್ತಾರೆ. ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಅರ್ಹನಲ್ಲ; ಅವರು ನಿಮಗೆ ಪವಿತ್ರಾತ್ಮ ಅವರಿಂದಲೂ ಅಗ್ನಿಯಿಂದಲೂ ದೀಕ್ಷಾಸ್ನಾನ ಕೊಡುವರು.
21ಜನರೆಲ್ಲರು ಸ್ನಾನದೀಕ್ಷೆ ಪಡೆಯುತ್ತಾ ಇದ್ದರು. ಯೇಸುಸ್ವಾಮಿಯೂ ಬಂದು ಸ್ನಾನದೀಕ್ಷೆ ಪಡೆದು ಪ್ರಾರ್ಥಿಸುತ್ತಿರಲು ಆಕಾಶವು ತೆರೆಯಿತು. 22ಆಗ ಪವಿತ್ರಾತ್ಮ ಸಶರೀರವಾಗಿ ಒಂದು ಪಾರಿವಾಳದ ರೂಪದಲ್ಲಿ ಯೇಸುವಿನ ಮೇಲೆ ಇಳಿದರು. ಅಲ್ಲದೆ, ನೀನೇ ನನ್ನ ಪುತ್ರ; ನನಗೆ ಪರಮಪ್ರಿಯನು, ನನ್ನ ಅಪಾರ ಮೆಚ್ಚುಗೆಗೆ ಪಾತ್ರನು, ಎಂಬ ದೈವವಾಣಿ ಕೇಳಿಸಿತು.

ದೀಕ್ಷಾಸ್ನಾನ ಕ್ರೈಸ್ತ ಜೀವನದ ತಳಹದಿ. ದೀಕ್ಷಾಸ್ನಾನದಲ್ಲಿ ನವ ಜನ್ಮ ಪಡೆಯುತ್ತೇವೆ. ಅದು ನಮ್ಮ ಆಧ್ಯಾತ್ಮಿಕ ಜೀವನಕ್ಕೆ ನಾಂದಿಯೂ, ಇತರ ಸಂಸ್ಕಾರಗಳನ್ನು ಸ್ವೀಕರಿಸಲು ದ್ವಾರವು ಆಗಿದೆ. ಈ ಸಂಸ್ಕಾರವು ನಮ್ಮನ್ನು ಕ್ರಿಸ್ತನೊಂದಿಗೆ ಬಂಧಿಸುತ್ತದೆ. ಪರಮತ್ರಿತ್ವ ಕುಟುಂಬದ ಸದಸ್ಯತ್ವಕ್ಕೆ ಅರ್ಹತೆಯನ್ನು ಕಲ್ಪಿಸುತ್ತದೆ. ನಮ್ಮನ್ನು ಧರ್ಮಸಭೆಯ ಸಕ್ರಿಯ ಸದಸ್ಯರನ್ನಾಗಿ ಮಾಡುತ್ತದೆ. ಒಮ್ಮೆ ಸ್ವೀಕರಿಸಿದರೆ ಶಾಶ್ವತ ಮುದ್ರೆಯಾಗಿ ಉಳಿಯುವಂತಹ ಈ ಸಂಸ್ಕಾರವು ಮಾನವನನ್ನು ಜನ್ಮಪಾಪದಿಂದ ವಿಮೋಚನೆ ಮಾಡುತ್ತದೆ.
ಕ್ರಿಸ್ತನಿಗೆ ದೀಕ್ಷಾಸ್ನಾನದ ಅಗತ್ಯವಿತ್ತೆ? ಅದರ ಉದ್ದೇಶವೇನಾಗಿತ್ತು?
ಪ್ರಭು ಕ್ರಿಸ್ತರ ಸ್ನಾನಾದೀಕ್ಷೆಯ ಹಬ್ಬದೊಂದಿಗೆ ಕ್ರಿಸ್ತ ಜಯಂತಿಯ ಕಾಲವು ಮುಕ್ತಾಯಗೊಳ್ಳುತ್ತದೆ. ದೀಕ್ಷಾಸ್ನಾನ ಒಂದು ಮಹತ್ತರ ಘಟನೆ. ಮೊದಲ ಬಾರಿಗೆ ಬಹಿರಂಗವಾಗಿ ಪರಮತ್ರಿತ್ವದ ಮೂರು ವ್ಯಕ್ತಿಗಳನ್ನು ಒಟ್ಟಾಗಿ ಕಾಣುತ್ತೇವೆ. ತಂದೆ ದೇವರು ಯೇಸುವನ್ನು ``ಈತನೇ ನನ್ನ ಮಗ, ನನಗೆ ಪರಮ ಪ್ರಿಯನು'' ಎಂದು ಜಗಕ್ಕೆಲ್ಲಾ ಸಾರಿದ ದಿನ. ದೀಕ್ಷಾಸ್ನಾನದಿಂದ ಕ್ರಿಸ್ತನ ವೈಯಕ್ತಿಕ ಜೀವನ ಮುಕ್ತಾಯವಾಗುತ್ತದೆ ಹಾಗೂ ಬಹಿರಂಗ ಜೀವನದ ಪ್ರಾರಂಭವೂ ಆಗುತ್ತದೆ. ನಮ್ಮ ಪಾಪಗಳ ನಿಮಿತ್ತ, ನಮ್ಮ ಉದ್ದಾರಕ್ಕಾಗಿ, ದೇವರಾಗಿದ್ದವರು ಸಾಮಾನ್ಯ ಮನುಷ್ಯರೊಂದಿಗೆ ಕ್ರಿಸ್ತನಾಗಿ ಗುರುತಿಸಿಕೊಳ್ಳುತ್ತಾರೆ. ಯೇಸುಕ್ರಿಸ್ತರ ದೀಕ್ಷಾಸ್ನಾನದಿಂದ ನಮ್ಮ ದೀಕ್ಷಾಸ್ನಾನಕ್ಕೆ ಒಂದು ಅರ್ಥ ಬರುತ್ತದೆ, ದೃಢತೆ ಲಭ್ಯವಾಗುತ್ತದೆ. ಸಾಮಾನ್ಯ ಯುವಕನಂತಿದ್ದ ಯೇಸುಕ್ರಿಸ್ತರು ದೇವರ ಮಗ ಎಂಬುದಾಗಿ ಸಾರಿದ ದಿನ. ಕ್ರಿಸ್ತ ಜಗಕ್ಕೆ ಬಂದ ಉದ್ದೇಶವೇನು ಎಂಬುದನ್ನು ಸಾರಿದ ದಿನ, ಪವಿತ್ರಾತ್ಮರಿಂದ ಶಕ್ತಿ ಪಡೆದುಕೊಂಡ ದಿನ.
ಕರ್ತರ ದೀಕ್ಷಾಸ್ನಾನ ಹಬ್ಬದಂದು ನಮ್ಮ ದೀಕ್ಷಾಸ್ನಾನದ ವಾಗ್ದಾನಗಳನ್ನು ನವೀಕರಿಸೋಣ. ನಾವು ದೇವರ ಮಕ್ಕಳು, ಕ್ರಿಸ್ತೇಸುವಿನ ಸಹೋದರ ಸಹೋದರಿಯರು, ಧರ್ಮಸಭೆಯ ಪ್ರಜೆಗಳು, ಸ್ವರ್ಗಕ್ಕೆ ಬಾಧ್ಯಸ್ಥರು, ಪವಿತ್ರಾತ್ಮರ ಆಲಯ ಎಂಬುದನ್ನು ಮರೆಯದಿರೋಣ.

ಇಂದಿನ ಸಂತರು
ಸಂತ ಹಿಲರಿ(ಕಾಲ:ಸು. 310-ಸು. 367)
ಸಂತ ಹಿಲರಿಯವರು, ಫ್ರಾನ್ಸ್‌ನ ಪೊಯ್ಟಿಯರ್ಸ್‌ನಲ್ಲಿ ಧರ್ಮಾಧ್ಯಕ್ಷರಾಗಿದ್ದವರು. ಇವರನ್ನು “ಏರಿಯನ್ನರ ಸುತ್ತಿಗೆ” ಎಂದು ಕರೆಯುತ್ತಿದ್ದರು. ಇವರ ಪುಣ್ಯದಿನವನ್ನು ಜನವರಿ 13 ರಂದು ಆಚರಿಸಲಾಗುತ್ತದೆ.ಳ
ಸಂತ ಹಿಲರಿಯವರ ತಂದೆ, ತಾಯಿಗಳಿಬ್ಬರೂ ಕ್ರೈಸ್ತರಲ್ಲದಿದ್ದರೂ, ಸಮಾಜದಲ್ಲಿ ಉತ್ತಮ ಸ್ಥಾನ ಹೊಂದಿದ್ದವರು. ಹಾಗಾಗಿ, ಹಿಲರಿಯವರಿಗೆ ಗ್ರೀಕ್ ವಿದ್ಯಾಭ್ಯಾಸ ಮಾಡಲು ಅವಕಾಶ ಚೆನ್ನಾಗಿ ಒದಗಿ ಬಂರುತ್ತದೆ. ನಂತರ, ಇವರು ನವಪ್ಲೇಟೋನಿಸ್ಮ್ ತೊರೆದು, ಹಳೆ ಹಾಗೂ ಹೊಸ ಒಡಂಬಡಿಕೆಗಳನ್ನು ಅಧ್ಯಯನ ಮಾಡಿ, ತಮ್ಮ ಪತ್ನಿ ಮತ್ತು ಪುತ್ರಿಯೊಡನೆ ಕ್ರೈಸ್ತರಾಗುತ್ತಾರೆ. (ಅವರ ಮಗಳು, ಆಬ್ರಾ ಸಹ ಮುಂದೆ ಸಂತಳ ಪಟ್ಟಕ್ಕೇರುತ್ತಾರೆ)
ಪೊಯ್ಟಿಯರ್ಸ್‌ನ ಕ್ರೈಸ್ತರು ಹಿಲರಿಯವರನ್ನು ತುಂಬಾ ಗೌರವಿಸಿ, ಅವರನ್ನು ತಮ್ಮ ಧರ್ಮಾಧ್ಯಕ್ಷರನ್ನಾಗಿ ಸ್ವೀಕರಿಸುತ್ತಾರೆ. ಆಗ ಚಾಲ್ತಿಯಲ್ಲಿದ್ದ ಏರಿಯನ್ನರ ಪಾಖಂಡ ತತ್ವಗಳನ್ನು ಹಿಲರಿಯವರು ಕಟುವಾಗಿ ವಿರೋಧಿಸಿ, ಏರಿಯನ್ನರು ಧರ್ಮವಿರೋಧಿಗಳೆಂದು ಸಾರಿ, ಅವರನ್ನು ಬಹಿಷ್ಕರಿಸುತ್ತಾರೆ.
ಇದೇ ಸಮಯದಲ್ಲಿ ಏರಿಯನ್ನರು ತಮ್ಮ ವಿರೋಧಿಗಳ ಮೇಲೆ ಜರುಗಿಸುತ್ತಿದ್ದ ಹಿಂಸಾಚಾರಗಳ ಬಗ್ಗೆ ಹಿಲರಿಯವರು ಪ್ರತಿಭಟಿಸಿ, ಆಗಿನ ಚಕ್ರವರ್ತಿ ದ್ವಿತೀಯ ಕಾನ್‌ಸ್ಟಾಂಟಿನ್‌ರವರಿಗೆ ಪತ್ರ ಬರೆಯುತ್ತಾರೆ. ಮೊದಮೊದಲು, ಇವರಿಗೆ ಯಶಸ್ಸು ದಕ್ಕದೆ ಇದ್ದರೂ, 356ರಲ್ಲಿ ಚಕ್ರವರ್ತಿಯು ಒಂದು ಸಭೆಯನ್ನು ಕರೆದು, ಈ ವಿವಾದವನ್ನು ಬಗೆಹರಿಸಲು ತೊಡಗುತ್ತಾರೆ. ಆದರೆ ನಂತರದ ತೀರ್ಪು, ಹಿಲರಿಯವರಿಗೆ ವಿರೋಧವಾಗಿ ಪರಿಣಮಿಸಿ, ಅವರನ್ನು ಫ್ರಿಜಿಯಾಗೆ ಗಡಿಪಾರು ಮಾಡಲಾಗುತ್ತದೆ. ಇದಕ್ಕೆ ಕಾರಣಗಳೇನು ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ.
ನಾಲ್ಕು ವರ್ಷಗಳ ಕಾಲ ತನ್ನ ದೇಶದಿಂದ ದೂರವಿದ್ದ ಹಿಲರಿಯವರು, ಅಲ್ಲಿಯೂ ಒಳ್ಳೇ ಯಾಜಕರೆನಿಸಿಕೊಂಡು ಎರಡು ಬಹುಮುಖ್ಯ ಹೊತ್ತಗೆಗಳನ್ನು ಹೊರತರುತ್ತಾರೆ. ಅವರು ಏರಿಯನ್ನರನ್ನು ಸಾಕಷ್ಟು ಖಂಡನೆ ಮಾಡಿಲ್ಲವೆಂಬ ದೂರೇನೋ ಇತ್ತು ಪರಮತ್ರಿತ್ವದಲ್ಲಿ ಹಿಲರಿಯವರಿಗೆ ಅಪಾರ ನಂಬಿಕೆಯಿತ್ತು. ಏರಿಯನ್ನರು ಪ್ರತಿಪಾದಿಸುತ್ತಿದ್ದ, “ಕ್ರಿಸ್ತನು ದೇವರ ಮಗನಲ್ಲ. ಅವರೂ ಸೃಷ್ಟಿಸಲ್ಪಟ್ಟವರೆ” ಎಂಬ ತರ್ಕವನ್ನು ಹೊಂದಿದ್ದವರೆಲ್ಲರೂ ಕ್ರಿಸ್ತವಿರೋಧಿಗಳೆಂದು ಹಿಲರಿಯವರು ಖಂಡಿಸುತ್ತಿದ್ದರು. ವಾಟ್ಸನ್ ಎಂಬುವವರು ಹಿಲರಿಯವರನ್ನು ಸಮರ್ಥಿಸುತ್ತಾರಾದರೂ, "ಅನೇಕ ಕ್ರಿಸ್ತವಿರೋಧಿಗಳಿದ್ದಾರೆ. ಅವರು, ಭಕ್ತಿಯ ಹೊದಿಕೆ ಹೊದ್ದು ಸುವಾರ್ತೆಯನ್ನು ತಪ್ಪಾಗಿ ಬೋಧಿಸಿ, ಇತರರ ಮನಸ್ಸುಗಳನ್ನು ಕೆಡಿಸುತ್ತಿದ್ದಾರೆ. ನಂಬಿಕೆಯನ್ನು ಹಿಂಸಾಚಾರದ ಮೂಲಕ ಹೇರಲು ಪ್ರಯತ್ನಿಸುತ್ತಿದ್ದಾರೆ. ಲೋಕವು, ಅವರನ್ನು ಪ್ರೀತಿಸುತ್ತಿದೆ. ಲೋಕವು ಇವರನ್ನು ದ್ವೇಷಿಸಿದ್ದರೆ, ಅವರು, ಕ್ರಿಸ್ತನಿಗೆ ಸೇರಿದವರೆಂದು ಸಾಕ್ಷಿಯಾಗುತ್ತಿತ್ತು” ಎಂದು ಅವರು ಹೇಳಿದ್ದಾರೆ.
ಗಡಿಪಾರಿನ ಅವಧಿಯಲ್ಲಿ ಧರ್ಮಾಧಿಕಾರಿಗಳ ಸಮಾಲೋಚನಾ ಸಭೆ(ಸಿನಾಡ್)ಗೆ ಹಿಲರಿಯವರು ಹಾಜರಾಗಿದ್ದರೂ ಚಕ್ರವರ್ತಿಯರೊಡನೆ ಮಾತನಾಡಲು, ಹಾಗೂ ಸಭೆಯಲ್ಲಿ ಮಾತನಾಡಲು ಅವರಿಗೆ ಅನುಮತಿ ದೊರಕುವುದಿಲ್ಲ.
ಮುಂದೆ, ಜೂಲಿಯನ್ನರು ಚಕ್ರವರ್ತಿಯಾದಾಗ, ಅವರು, ಹಿಲರಿಯವರನ್ನು ಮೊದಲಿದ್ದ ಧರ್ಮಕ್ಷೇತ್ರಕ್ಕೆ ಕಳುಹಿಸುತ್ತಾರೆ. ಅಲ್ಲಿನ ಯಾಜಕರಿಗೆ, ಅವರ ಪಾಪನಿವೇದನಾಕ್ರಮವು, ಏರಿಯನ್ನರ ಸಂಪ್ರದಾಯವನ್ನೇ ಎತ್ತಿ ತೋರಿಸುತ್ತಿದೆ ಎಂದು ಹಿಲರಿ ತಿಳಿಸುತ್ತಾರೆ. ಆಗಿದ್ದ ವಿಶ್ವಾಸಸೂತ್ರವನ್ನೂ ಖಂಡಿಸುತ್ತಾರೆ.
ಮುಂದೆ ಹಿಲರಿಯವರ ಪ್ರೋತ್ಸಾಹದಿಂದ ಮಾರ್ಟಿನ್‌ರವರು, ಒಂದು ಸನ್ಯಾಸಿಮಠವನ್ನು ಸ್ಥಾಪಿಸುತ್ತಾರೆ. ಚಕ್ರವರ್ತಿ ವ್ಯಾಲಂಟಿಯನ್‌ರಿಗೆ ಅತಿ ಸಮೀಪರಾಗಿದ್ದ ಮಿಲಾನ್ ಧರ್ಮಾಧ್ಯಕ್ಷರನ್ನು ಕಪಟಿಗಳೆಂದು ಹೇಳಿ, ಅವರ ಮೇಲೆ ದೋಷಾರೋಪಣೆಯನ್ನು ಹಿಲರಿಯವರು ಮಾಡುತ್ತಾರೆ. ಆಗ, ಚಕ್ರವರ್ತಿಯು ಅವರನ್ನು ಕರೆಸಿ, ಹಿಲರಿಯವರಲ್ಲಿ ತಕ್ಕ ಆಧಾರಗಳನ್ನು ಕೇಳುತ್ತಾರೆ. ಹಿಲರಿಯವರು ಅದಕ್ಕೆ ಸಮರ್ಪಕವಾದ ಉತ್ತರ ನೀಡುತ್ತಾರೆ.
ಇವರು ಹೊರತಂದ ಪುಸ್ತಕಗಳಲ್ಲಿ ಸ್ವತಂತ್ರ ಚಿಂತನೆ ಸಾಕಷ್ಟಿದೆ. ಮತ್ತಾಯರ ಸುವಾರ್ತೆಯ ಹಾಗೂ ದಾವೀದನ ಕೀರ್ತನೆಗಳ ವ್ಯಾಖ್ಯಾನವನ್ನು ಲ್ಯಾಟಿನ್ ಭಾಷೆಯಲ್ಲಿ ಇವರು ಬರೆದಿದ್ದಾರೆ. ಅನೇಕ ಕ್ರೈಸ್ತ ಕೀರ್ತನೆಗಳು, ಇವರ ಲೇಖನಿಯಿಂದ ಹೊಮ್ಮಿಬಂದಿವೆ. ಇವರು, “4ನೇ ಶತಮಾನದ ಲ್ಯಾಟಿನ್ ಭಾಷೆಯ ಪ್ರಮುಖ ಕ್ರೈಸ್ತಸಾಹಿತಿ’’ ಎಂದು ಹೆಸರಾಗಿದ್ದಾರೆ. ಒಂಬತ್ತನೆಯ ಪೋಪ್ ಪಯಸ್‌ರವರು ಸಂತ ಹಿಲರಿಯವರ ಪ್ರೌಢಿಮೆಯನ್ನು ಗುರುತಿಸಿ ಪ್ರೋತ್ಸಾಹಿಸುತ್ತಾರೆ.
ಸಂತ ಹಿಲರಿಯವರನ್ನು, “ನ್ಯಾಯವಾದಿಗಳ ಪೋಷಕ ಸಂತರು” ಎಂದು ಭಾವಿಸಲಾಗಿದೆ. ಇವರ ಚಿಹ್ನೆ – ಮೂರು ಪುಸ್ತಕಗಳು ಮತ್ತು ಒಂದು ಗರಿಯ ಲೇಖನಿ.
ಭಕ್ತರು, ಹಿಲರಿಯವರಲ್ಲಿ ಮಾಡುವ ಪ್ರಾರ್ಥನೆ ಹೀಗಿದೆ;
"ಪೊಯ್ಟಿಯರ್ಸ್‌ನ ಸಂತ ಹಿಲರಿಯವರೆ, ಗಡಿಪಾರಾದರೂ ಕುಗ್ಗದೆ, ಆ ಸಮಯದಲ್ಲಿ, ಅಧ್ಯಯನ, ಬರಹಗಳನ್ನು ಮಾಡಿದಿರಿ! ನಮ್ಮ ಸ್ವಂತ ಜೀವಿತದಲ್ಲಿಯೂ ದುಃಖ, ಸಂಕಟಗಳಿಂದ ಒಳ್ಳೆಯದನ್ನು ಪಡೆದು, ವಿಪತ್ತುಗಳನ್ನು ಅವಕಾಶಗಳೆಂದು ಭಾವಿಸಲು, ನಮ್ಮ ನಂಬಿಕೆಯನ್ನು ಹಂಚಿಕೊಳ್ಳಲು ಸಹಾಯಮಾಡಿ. ಆಮೆನ್”
ಚಿತ್ರಗಳು : ಗೂಗಲ್ ಕೃಪೆ

No comments:
Post a Comment