ಸಾರ್ವಜನಿಕ ಉದ್ದೇಶ: ಮಾನವ ಸಾಗಾಣಿಕೆ, ವೇಶ್ಯಾವಾಟಿಕೆ ಹಾಗೂ ಹಿಂಸಾತ್ಮಕ ಕ್ರಿಯೆಗಳಿಂದಾಗಿ ನಿರಾಶ್ರಿತರಾದವರಿಗೆ ಆಶ್ರಯವನ್ನು ನೀಡಲು ಸರ್ವರೂ ಉದಾರತೆಯಿಂದ ಮುಂದೆ ಬರುವಂತೆ.
08 ಫೆಬ್ರವರಿ 2೦19
ಶುಕ್ರವಾರ / ಹಸಿರು / ಸಾಧಾರಣ ಕಾಲದ ನಾಲ್ಕನೇ ವಾರ
1ನೇ ವಾಚನ - ಹಿಬ್ರಿ 13: 1-8 ಕೀರ್ತನೆ - 27: 1, 3, 5, 8-9
ಶುಭಸಂದೇಶ - ಮಾರ್ಕ 6: 14-29
ಐಚ್ಛಿಕ ಸ್ಮರಣೆ - ಸಂತ ಜೆರೊಮ್ ಎಮಿಲಿಯಾನಿ (ಯಾ) ಸಂತ ಜೋಸೆಫಿನ್ ಬಖ್ಖೀಟ (ಕನ್ಯೆ)

ವಾಚನಗಳು
ಮೊದಲನೇ ವಾಚನ
ಹಿಬ್ರೀಯರಿಗೆ ಬರೆದ ಪತ್ರದಿಂದ ವಾಚನ
ಹಿಬ್ರಿ 13: 1-8
1ಸೋದರ ಪ್ರೀತಿಯಲ್ಲಿ ನೆಲೆಯಾಗಿ ನಿಲ್ಲಿರಿ. 2ಅತಿಥಿಸತ್ಕಾರ ಮಾಡುವುದನ್ನು ಮರೆಯದಿರಿ. ಅದನ್ನು ಮಾಡುವಾಗ ಅರಿಯದೆ ಕೆಲವರು ದೇವದೂತರನ್ನೇ ಉಪಚರಿಸಿದ್ದಾರೆ. 3ಸೆರೆಯಲ್ಲಿರುವವರನ್ನು ಸ್ಮರಿಸಿಕೊಳ್ಳಿ. ಅವರ ಸಂಗಡ ನೀವೂ ಸೆರೆಯಲ್ಲಿರುವಂತೆ ಭಾವಿಸಿಕೊಳ್ಳಿ. ಅನ್ಯಾಯಕ್ಕೆ ಒಳಗಾಗಿರುವವರನ್ನು ಜ್ಞಾಪಕದಲ್ಲಿಟ್ಟುಕೊಳ್ಳಿ. ಅನ್ಯಾಯಕ್ಕೆ ಒಳಗಾಗಬಲ್ಲ ದೇಹವೊಂದು ನಿಮಗೂ ಸಹ ಇದೆಯಲ್ಲವೇ? 4ವಿವಾಹಬಂಧನವನ್ನು ಎಲ್ಲರೂ ಗೌರವಿಸಲಿ; ದಂಪತಿಗಳ ಸಂಬಂಧವು ನಿಷ್ಕಳಂಕವಾಗಿರಲಿ. ಕಾಮುಕರೂ ವ್ಯಭಿಚಾರಿಗಳೂ ದೇವರ ನ್ಯಾಯತೀರ್ಪಿಗೆ ಗುರಿಯಾಗುತ್ತಾರೆ. 5ಹಣದಾಶೆಗೆ ಬಲಿಯಾಗಬೇಡಿ. ನಿಮಗೆ ಇರುವುದರಲ್ಲಿಯೇ ತೃಪ್ತರಾಗಿರಿ. “ಎಂದೆಂದಿಗೂ ನಾನು ನಿನ್ನ ಕೈಬಿಡಲಾರೆ; ತ್ಯಜಿಸಲಾರೆ,” ಎಂದು ದೇವರೇ ಹೇಳಿದ್ದಾರೆ. 6ಆದ್ದರಿಂದ, “ಸರ್ವೇಶ್ವರ ನನಗೆ ಸಹಾಯಕ, ನಾನು ಭಯಪಡೆನು; ಮಾನವನು ನನಗೇನು ಮಾಡಬಲ್ಲನು?” ಎಂದು ನಾವು ಧೈರ್ಯದಿಂದ ಹೇಳಲು ಸಾಧ್ಯ. 7ದೇವರ ವಾಕ್ಯವನ್ನು ನಿಮಗೆ ಹೇಳಿಕೊಟ್ಟ ಹಿಂದಿನ ಸಭಾನಾಯಕರನ್ನು ಮರೆಯಬೇಡಿ. ಅವರು ಹೇಗೆ ಬಾಳಿದರು, ಎಂಥ ಮರಣವನ್ನು ಪಡೆದರು ಎಂಬುದನ್ನು ಕುರಿತು ಆಲೋಚಿಸಿರಿ. ಅವರ ವಿಶ್ವಾಸ ನಿಮಗೆ ಆದರ್ಶವಾಗಿರಲಿ.
8ಯೇಸುಕ್ರಿಸ್ತರು, ನಿನ್ನೆ ಇದ್ದ ಹಾಗೆಯೇ ಇಂದೂ ಎಂದೆಂದೂ ಇದ್ದಾರೆ.

ಕೀರ್ತನೆ
ಕೀರ್ತನೆ
27: 1, 3, 5, 8-9
ನನಗೆ ಬೆಳಕು,
ನನಗೆ ರಕ್ಷೆ,
ನನ್ನ ಬಾಳಿಗಾಧಾರ
ಪ್ರಭುವೆ
ನನಗೆ ಬೆಳಕು, ನನಗೆ ರಕ್ಷೆ, ಪ್ರಭುವೆ ನಾನಾರಿಗೂ ಅಳುಕೆನು
ನನ್ನ ಬಾಳಿಗಾಧಾರ ಪ್ರಭುವೆ ನಾನಾರಿಗೂ ಅಂಜೆನು.
ಸೇನೆ ಸಮೇತ ಶತ್ರು ಬಂದರೂ ಎದೆಗುಂದೆನು
ಸಮರಕ್ಕೆರಗಿದರೂ ನಾ ಭರವಸೆಯಿಂದಿರುವೆನು.
ಕೇಡುಕಾಲದಲ್ಲಿ
ಅವಿತಿಸಿಡುವನು
ನನ್ನನ್ನು
ತನ್ನ ಗುಡಾರದಲಿ ಇರಿಸುವನು ಮರೆಯಾಗಿ
ಗರ್ಭಗುಡಿಯಲಿ, ಸುರಕ್ಷಿತ ಶಿಖರದಲಿ.
“ಅರಸೆನ್ನ ಮುಖದರುಶನವನು”, ಎಂದೆ ನೀನು
“ಅರಸುವೆನು ಅದನೆ”, ಎಂದು ಮರುನುಡಿದೆ ನಾನು
ವಿಮುಖನಾಗಬೇಡ
ಪ್ರಭು,
ಕೋಪದಿಂದೆನ್ನ
ತಳ್ಳಬೇಡಯ್ಯಾ
ರಕ್ಷಕದೇವಾ,
ಎನಗೆ ಸಹಾಯಕಾ, ದಾಸನ ಕೈಬಿಡಬೇಡಯ್ಯಾ.
ಶುಭಸಂದೇಶ
ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ
ಮಾರ್ಕ 6: 14-29
14ಇಷ್ಟರಲ್ಲಿ ಯೇಸುಸ್ವಾಮಿಯ ಹೆಸರು ಮನೆಮಾತಾಯಿತು. ಅದು ಹೆರೋದ ಅರಸನ ಕಿವಿಗೂ ಬಿತ್ತು. ಯೇಸುವಿನ ವಿಚಾರವಾಗಿ ಕೆಲವರು, ಮಡಿದ ಸ್ನಾನಿಕ ಯೊವಾನ್ನನೇ ಮರಳಿ ಜೀವಂತವಾಗಿ ಬಂದಿದ್ದಾನೆ; ಆದುದರಿಂದಲೇ ಮಹತ್ಕಾರ್ಯಗಳನ್ನು ಮಾಡುವ ಶಕ್ತಿ ಇವನಿಗಿದೆ, ಎನ್ನುತ್ತಿದ್ದರು. 15ಇನ್ನು ಕೆಲವರು, 'ಈತನೇ ಎಲೀಯನು' ಎಂದೂ ಮತ್ತೆ ಕೆಲವರು, ಪ್ರಾಚೀನ ಪ್ರವಾದಿಗಳಂತೆ ಈತನೂ ಒಬ್ಬ ಪ್ರವಾದಿ, ಎಂದೂ ಹೇಳುತ್ತಿದ್ದರು. 16ಇದನ್ನೆಲ್ಲಾ ಕೇಳಿದ ಹೆರೋದನು, ಹೌದು, ನಾನು ಶಿರಚ್ಛೇದನ ಮಾಡಿದ ಯೊವಾನ್ನನೇ ಮರಳಿ ಜೀವಂತನಾಗಿ ಬಂದಿದ್ದಾನೆ, ಎಂದನು.
17ಹೆರೋದನು ತಾನು ಇಟ್ಟುಕೊಂಡಿದ್ದ ಹೆರೋದಿಯಳ ನಿಮಿತ್ತ ಯೊವಾನ್ನನನ್ನು ಸೆರೆಹಿಡಿಸಿ ಬಂಧನದಲ್ಲಿರಿಸಿದ್ದನು. ಹೆರೋದಿಯಳು ಹೆರೋದನ ಸಹೋದರ ಫಿಲಿಪ್ಪನ ಧರ್ಮಪತ್ನಿ. ಆದರೂ ಹೆರೋದನು ಆಕೆಯನ್ನು ಹೆಂಡತಿಯಾಗಿ ಇಟ್ಟುಕೊಂಡಿದ್ದನು. 18ಈ ಕಾರಣ ಯೊವಾನ್ನನು, ನಿನ್ನ ಸಹೋದರನ ಪತ್ನಿಯನ್ನು ನೀನು ಇಟ್ಟುಕೊಂಡಿರುವುದು ನ್ಯಾಯವಲ್ಲ, ಎಂದು ಪದೇಪದೇ ಅವನನ್ನು ಎಚ್ಚರಿಸುತ್ತಿದ್ದನು. 19ಇದರ ನಿಮಿತ್ತ ಹೆರೋದಿಯಳು ಯೊವಾನ್ನನ ಮೇಲೆ ಹಗೆಯಿಟ್ಟು ಆತನನ್ನು ಕೊಲ್ಲಿಸಬೇಕು ಎಂದಿದ್ದಳು. ಆದರೆ ತನ್ನ ಸೇಡನ್ನು ತೀರಿಸಿಕೊಳ್ಳಲು ಅವಳಿಂದಾಗಿರಲಿಲ್ಲ. 20ಏಕೆಂದರೆ, ಯೊವಾನ್ನನು ಸಂತನು ಹಾಗೂ ಸತ್ಪುರುಷನು ಎಂದು ಹೆರೋದನು ಅರಿತು, ಆತನಿಗೆ ಭಯಪಟ್ಟು ಯಾವ ಅಪಾಯವೂ ಆತನಿಗೆ ಬಾರದಂತೆ ನೋಡಿಕೊಳ್ಳುತ್ತಿದ್ದನು. ಯೊವಾನ್ನನು ಹೇಳುತ್ತಿದ್ದ ಮಾತುಗಳನ್ನು ಕೇಳಿದಾಗಲೆಲ್ಲಾ ಹೆರೋದನ ಮನಸ್ಸು ಅಲ್ಲೋಲ ಕಲ್ಲೋಲವಾಗುತ್ತಿತ್ತು. ಆದರೂ ಆತನ ಮಾತುಗಳನ್ನು ಕಿವಿಗೊಟ್ಟು ಕೇಳುತ್ತಿದ್ದನು. 21ಕಡೆಗೊಮ್ಮೆ, ಹೆರೋದಿಯಳಿಗೆ ಅನುಕೂಲವಾದ ಸಂದರ್ಭ ಒದಗಿತು. ಹೆರೋದನು ತನ್ನ ಹುಟ್ಟುಹಬ್ಬದ ದಿನಾಚರಣೆಯಂದು, ಆಸ್ಥಾನಿಕರಿಗೂ ಸೇನಾಧಿಪತಿಗಳಿಗೂ ಗಲಿಲೇಯ ಪ್ರಾಂತ್ಯದ ಪ್ರಮುಖರಿಗೂ ಔತಣಕೂಟವನ್ನು ಏರ್ಪಡಿಸಿದನು.
22ಆ ಸಮಾರಂಭದಲ್ಲಿ ಹೆರೋದಿಯಳ ಮಗಳು ಔತಣಶಾಲೆಗೆ ಬಂದು ನರ್ತನ ಮಾಡಿದಳು. ಹೆರೋದನೂ ಅವನ ಜೊತೆಯಲ್ಲಿ ಭೋಜನಕ್ಕೆ ಕುಳಿತಿದ್ದ ಅತಿಥಿಗಳೂ ಅದನ್ನು ಬಹಳವಾಗಿ ಮೆಚ್ಚಿಕೊಂಡರು. 23ಆಗ ಅರಸ ಹೆರೋದನು ಅವಳಿಗೆ, ನಿನಗೆ ಏನು ಬೇಕಾದರೂ ಕೇಳು, ಕೊಡುತ್ತೇನೆ ಎಂದನು. ನೀನು ಏನು ಕೇಳಿಕೊಂಡರೂ ಸರಿ, ನನ್ನ ರಾಜ್ಯದಲ್ಲಿ ಅರ್ಧವನ್ನು ಕೇಳಿಕೊಂಡರೂ ಅದನ್ನು ನಿನಗೆ ಕೊಡುತ್ತೇನೆ, ಎಂದು ಪ್ರಮಾಣ ಮಾಡಿದನು. 24ಅವಳು ತನ್ನ ತಾಯಿಯ ಬಳಿಗೆ ಹೋಗಿ, ಅಮ್ಮಾ, ನಾನು ಏನನ್ನು ಕೇಳಿಕೊಳ್ಳಲಿ? ಎಂದು ವಿಚಾರಿಸಿದಳು. ಸ್ನಾನಿಕ ಯೊವಾನ್ನನ ತಲೆಯನ್ನು ಕೇಳು, ಎಂದು ಆಕೆ ಮಗಳನ್ನು ಪ್ರೇರೇಪಿಸಿದಳು.
25ಕೂಡಲೆ ಅವಳು ಅರಸನ ಬಳಿಗೆ ಧಾವಿಸಿ, ಸ್ನಾನಿಕ ಯೊವಾನ್ನನ ತಲೆಯನ್ನು ಇದೀಗಲೇ ಒಂದು ತಟ್ಟೆಯಲ್ಲಿ ತರಿಸಿಕೊಡಿ; ಇದೇ ನನ್ನ ಬೇಡಿಕೆ, ಎಂದು ಕೇಳಿಕೊಂಡಳು. 26ಅರಸನಿಗೆ ಅತೀವ ದುಃಖವಾಯಿತು. ಆದರೂ ಅತಿಥಿಗಳೆಲ್ಲರ ಮುಂದೆ ತಾನು ಮಾಡಿದ ಪ್ರಮಾಣದ ನಿಮಿತ್ತ ಅವಳ ಕೋರಿಕೆಯನ್ನು ನಿರಾಕರಿಸಲಾಗಲಿಲ್ಲ. 27ಆದುದರಿಂದ ಅವನು ಒಬ್ಬ ಪಹರೆಯವನನ್ನು ಕರೆದು, ಕೂಡಲೇ ಯೊವಾನ್ನನ ತಲೆಯನ್ನು ತರಬೇಕೆಂದು ಅವನಿಗೆ ಆಜ್ಞೆಮಾಡಿ ಕಳುಹಿಸಿದನು.
28ಪಹರೆಯವನು ಸೆರೆಮನೆಗೆ ಹೋಗಿ ಯೊವಾನ್ನನ ತಲೆಯನ್ನು ಕತ್ತರಿಸಿ, ಅದನ್ನು ತಟ್ಟೆಯಲ್ಲಿ ಇಟ್ಟು ಹುಡುಗಿಗೆ ತಂದುಕೊಟ್ಟನು. ಅವಳು ಅದನ್ನು ತನ್ನ ತಾಯಿಗೆ ಕೊಟ್ಟಳು. 29ಇದನ್ನು ಕೇಳಿದ ಯೊವಾನ್ನನ ಶಿಷ್ಯರು ಅಲ್ಲಿಗೆ ಬಂದು ಶವವನ್ನು ತೆಗೆದುಕೊಂಡು ಹೋಗಿ ಸಮಾಧಿಮಾಡಿದರು.

ಚಿಂತನೆ
ದ್ವೇಷದ ಮಹಿಳೆ
ಇಂದಿನ
ಶುಭಸಂದೇಶದಲ್ಲಿ ಕಾಣಸಿಗುವ ಮೂರು ವ್ಯಕ್ತಿಗಳು ಸ್ನಾನಿಕ ಯೊವಾನ್ನ, ಹೆರೋದ ಮತ್ತು ಹೆರೋದಿಯಳು. ಸ್ನಾನಿಕ
ಯೊವಾನ್ನ ದೇವರ ಸ್ವರವಾಗಿದ್ದ, ಅನ್ಯಾಯ, ಅನೀತಿಯನ್ನು ಧೈರ್ಯದಿಂದ ಖಂಡಿಸಿದ. ಹೆರೋದ ಒಬ್ಬ ಕ್ರೂರಿ,
ಅಂಜುಬುರುಕ ಹಾಗೂ ಸಮಯದ ಗೊಂಬೆಯಾಗಿದ್ದ. ಒಮ್ಮೆ ರೋಮಿಗೆ ಹೋಗಿದ್ದಾಗ ಫಿಲಿಪ್ಪನ ಹೆಂಡತಿ ಹೆರೋದಿಯಳ
ಪ್ರೀತಿಯಲ್ಲಿ ಸಿಲುಕಿಕೊಂಡ. ಹೆರೋದಿಯಳನ್ನು ಮದುವೆಯಾಗಲು ತನ್ನ ಹೆಂಡತಿಯಿಂದ ವಿಚ್ಛೇದನ ಪಡೆದುಕೊಂಡಿದ್ದ.
ಯೆಹೂದ್ಯರ ನಿಯಮದ ಪ್ರಕಾರ ರಕ್ತಸಂಬಂಧಿಗಳಲ್ಲಿ ಮದುವೆಯಾಗುವುದು ನಿಷಿದ್ಧವಾಗಿತ್ತು (ಯಾಜಕ ಕಾಂಡ
18:6-18). ಹೆರೋದಿಯಾಳು
ಒಬ್ಬ ಅಪ್ರಮಾಣಿಕ, ನಿಷ್ಠೆಯಿಲ್ಲದ ಹೆಂಡತಿಯಾಗಿದ್ದಳು, ದುರಾಸೆ ಮತ್ತು ದ್ವೇಷದ ಮಹಿಳೆ ಹಾಗೂ ಕೆಟ್ಟ
ತಾಯಿಯಾಗಿದ್ದಳು. ಕುತಂತ್ರದಿಂದ ಸ್ನಾನಿಕ ಯೊವಾನ್ನನ ಮರಣಕ್ಕೆ ಕಾರಣವಾದಳು. ಈ ಮೂವರು ವ್ಯಕ್ತಿಗಳಲ್ಲಿ
ಸ್ನಾನಿಕ ಯೊವಾನ್ನ ನಮ್ಮ ಆದರ್ಶವಾಗಬೇಕು.
ಇಂದಿನ ಸಂತರು
ಸಂತ ಜೋಸ್ಫಿನ್ ಮಾರ್ಗರೇಟ್ (1869-1947)
ಇವರು ಸುಡಾನ್ ದೇಶದಲ್ಲಿ ಜನಿಸಿದ ಜೀತದಾಳು. ಆದರೆ ತಮ್ಮ ಮುಂದಿನ ಬದುಕಿನಲ್ಲಿ ಒಬ್ಬ ಧಾರ್ಮಿಕ ಸಹೋದರಿಯಾಗಿ ವ್ರತವನ್ನು ಸ್ವೀಕರಿಸಿದರು. ತಮ್ಮ ಹನ್ನೊಂದನೇ ವಯಸ್ಸಿನಲ್ಲಿರುವಾಗಲೇ ಅರಬ್ ದೇಶದ ಮಾನವ ಜೀತದಾಳು ವರ್ತಕರಿಂದ ಅಪಹರಿಸಲ್ಪಟ್ಟರು. ಆದುದರಿಂದಲೇ ಅವರು ಅರಬ್ ಭಾಷೆಯ ಹೆಸರಾದ ’ಬಕಿತಾ’ ಎಂಬ ಹೆಸರನ್ನು ಇಟ್ಟುಕೊಂಡಿದ್ದಾರೆ. ಇದರ ಅರ್ಥ ’ಅದೃಷ್ಟಶಾಲಿ’. ಧಾರ್ಮಿಕ ಜೀವನವನ್ನು ದೇವರ ಕೊಡುಗೆಯಾಗಿ ಸ್ವೀಕರಿಸಿದ ಈ ಮಹಾ ಸಂತರು ಕ್ರಿಸ್ತರು ನಡೆದ ಪರಿಪೂರ್ಣತೆಯ ಹಾದಿಯಲ್ಲಿ ಸಾಗಲು ಉತ್ಸುಕರಾಗಿದ್ದರು. ಪ್ರಾರ್ಥನೆ, ದೇವರ ವಾಕ್ಯ ಮತ್ತು ದಿವ್ಯ ಬಲಿಪೂಜೆಯಲ್ಲಿ ಅವರ ಬದುಕಿನ ಸಾರ್ಥಕತೆಯನ್ನು ಕಂಡುಕೊಳ್ಳಲು ಪ್ರಯತ್ನಿಸಿದರು. ಪ್ರಭುಯೇಸುವಿನ ಸೇವಾಮನೋಭಾವವನ್ನು ಅವರ ಜೀವನದಲ್ಲಿ ಪ್ರೇರಣೆಯಾಗಿಸಿಕೊಂಡು ದೇವರ ಹಾಗೂ ಜನಸಾಮಾನ್ಯರ ಸೇವೆಯಲ್ಲಿ ತಮ್ಮನ್ನೇ ತಾವು ಸಂಪೂರ್ಣವಾಗಿ ತೊಡಗಿಸಿಕೊಂಡರು. ಬಡತನ, ಪಾವಿತ್ರ್ಯತೆ, ಹಾಗೂ ವಿಧೇಯತೆಯ ಮೌಲ್ಯಗಳಿಗೆ ಬದ್ಧರಾಗಿ ಬಾಳಿದ ಈ ಸಂತರ ಆದರ್ಶ ಸದಾಕಾಲಕ್ಕೂ ಅನುಕರಣೀಯ.

ಚಿತ್ರ: ಗೂಗಲ್ ಕೃಪೆ

No comments:
Post a Comment