ಜನವರಿ ೨೮, ೨೦೧೯


ಸುವಾರ್ತಾ ಪ್ರಸಾರದ ಉದ್ದೇಶ: ಯುವಜನರು, ವಿಶೇಷವಾಗಿ ಲ್ಯಾಟಿನ್ ಅಮೇರಿಕಾದ ಯುವಜನರು ಪೂಜ್ಯ ಕನ್ಯಾ ಮರಿಯಮ್ಮನವರ ಆದರ್ಶವನ್ನು ಅನುಸರಿಸುತ್ತಾ ಪ್ರಭು ಯೇಸುವಿನ ಕರೆಗೆ ಓಗೊಟ್ಟು ಸುವಾರ್ತೆಯ ಆನಂದವನ್ನು ಜಗತ್ತಿನಾದ್ಯಂತ ಪಸರಿಸುವ ಕ್ಷಮತೆಯನ್ನು ಹೊಂದುವುದು.

28 ಜನವರಿ 2019

28 ಜನವರಿ 2೦19
ಸೋಮವಾರ/ಬಿಳಿ /ಸಂತತೋಮಸ್ ಅಕ್ವಿನಾಸ್ (ಯಾ ಮತ್ತು ಧ.ಪಂ) (ಸ್ಮರಣೆ).
1ನೇ  ವಾಚನ  -  ಹಿಬ್ರಿ  9:  15,  24-28
ಕೀರ್ತನೆ  -  98:  1,  2-4,  5-6.
ಶುಭಸಂದೇಶ  -  ಮಾರ್ಕ  3:  22-3೦



ವಾಚನಗಳು
ಮೊದಲನೇ  ವಾಚನ

ಹಿಬ್ರಿಯರಿಗೆ ಬರೆದ ಪತ್ರದಿಂದ ವಾಚನ
ಹಿಬ್ರಿ  9:  15,  24-28

15ಈ ಕಾರಣ, ಯೇಸು ಹೊಸ ಒಡಂಬಡಿಕೆಯನ್ನು ಏರ್ಪಡಿಸಿದ ಮಧ್ಯಸ್ಥರಾಗಿದ್ದಾರೆ. ದೈವಕರೆ ಹೊಂದಿದವರು ದೇವರು ವಾಗ್ದಾನ ಮಾಡಿದ ಅಮರ ಸೌಭಾಗ್ಯವನ್ನು ಬಾಧ್ಯವಾಗಿ ಪಡೆಯುವಂತೆ ಈ ಒಡಂಬಡಿಕೆಯನ್ನು ಏರ್ಪಡಿಸಲಾಯಿತು. ಇದು ಯೇಸುವಿನ ಮರಣದ ಮೂಲಕವೇ ಉಂಟಾಯಿತು. ಈ ಮರಣವು ಹಳೆಯ ಒಡಂಬಡಿಕೆಯನ್ನು ವಿೂರಿ ಮಾಡಿದ ಅಪರಾಧಗಳನ್ನೂ ಪರಿಹರಿಸುತ್ತದೆ. 24ಕ್ರಿಸ್ತಯೇಸು ಪ್ರವೇಶಿಸಿದ್ದು ನೈಜದೇವಾಲಯದ ಛಾಯೆಯಂತಿರುವ ಮಾನವನಿರ್ಮಿತ ಗರ್ಭಗುಡಿಯನ್ನಲ್ಲ, ನಮ್ಮ ಪರವಾಗಿ ದೇವರ ಸಮ್ಮುಖದಲ್ಲಿ ಉಪಸ್ಥಿತರಾಗಲು ಸಾಕ್ಷಾತ್ ಸ್ವರ್ಗವನ್ನೇ ಅವರು ಪ್ರವೇಶಿಸಿದರು. 25ಪ್ರಧಾನ ಯಾಜಕನು ಪ್ರತಿವರ್ಷವೂ ಪ್ರಾಣಿಗಳ ರಕ್ತವನ್ನು ತೆಗೆದುಕೊಂಡು ಗರ್ಭಗುಡಿಯನ್ನು ಪ್ರವೇಶಿಸುವಂತೆ ಯೇಸು ಪ್ರವೇಶಿಸಲಿಲ್ಲ. ಅವರು ಸ್ವರ್ಗವನ್ನು ಪ್ರವೇಶಿಸಿದ್ದು ಪದೇಪದೇ ತಮ್ಮನ್ನು ಸಮರ್ಪಿಸಿಕೊಳ್ಳುವುದಕ್ಕೂ ಅಲ್ಲ. 26ಹಾಗೆ ಸಮರ್ಪಿಸಬೇಕಾಗಿದ್ದ ಪಕ್ಷದಲ್ಲಿ ಲೋಕಾದಿಯಿಂದಲೂ ಅವರು ಅನೇಕ ಸಾರಿ ಮರಣ ಯಾತನೆಯನ್ನು ಅನುಭವಿಸಬೇಕಾಗಿ ಬರುತ್ತಿತ್ತು; ಅದಕ್ಕೆ ಬದಲಾಗಿ ಯುಗಾಂತ್ಯವಾದ ಈ ಕಾಲದಲ್ಲಿ, ಪಾಪ ನಿವಾರಣೆ ಮಾಡಬೇಕೆಂಬ ಉದ್ದೇಶದಿಂದ ಒಮ್ಮೆಗೇ ತಮ್ಮನ್ನು ತಾವೇ ಬಲಿಯಾಗಿ ಸಮರ್ಪಿಸಿಕೊಳ್ಳಲೆಂದು ಯೇಸು ಪ್ರತ್ಯಕ್ಷರಾದರು.

27ಪ್ರತಿಯೊಬ್ಬ ಮಾನವನು ಸಾಯುವುದು ಒಂದೇ ಸಾರಿ. ಅನಂತರ ಅವನು ನ್ಯಾಯತೀರ್ಪಿಗೆ ಗುರಿಯಾಗಬೇಕು. 28ಹಾಗೆಯೇ, ಎಲ್ಲಾ ಮಾನವರ ಪಾಪಗಳನ್ನು ಹೊತ್ತು ಹೋಗಲಾಡಿಸಲು ಕ್ರಿಸ್ತಯೇಸು ಒಮ್ಮೆಗೇ ಎಲ್ಲಾ ಕಾಲಕ್ಕೂ ತಮ್ಮನ್ನೇ ಬಲಿಯಾಗಿ ಸಮರ್ಪಿಸಿಕೊಂಡರು. ಅವರು ಮತ್ತೆ ಪ್ರತ್ಯಕ್ಷರಾಗುವರು; ಪಾಪನಿವಾರಣೆ ಮಾಡಲೆಂದು ಅಲ್ಲ, ತಮ್ಮನ್ನು ನಂಬಿ ನಿರೀಕ್ಷಿಸಿಕೊಂಡಿರುವವರನ್ನು ಜೀವೋದ್ಧಾರ ಮಾಡಲೆಂದು.


ಕೀರ್ತನೆ 
        
ಕೀರ್ತನೆ 98:1, 2-3, 3-4, 5-6
ಶ್ಲೋಕ: ಹಾಡಿರಿ ಪ್ರಭುವಿಗೆ ಹೊಸಗೀತೆಯೊಂದನು

1 : ಹಾಡಿರಿ ಪ್ರಭುವಿಗೆ ಹೊಸಗೀತೆಯೊಂದನು / 
     ಎಸಗಿಹನಾತನು ಪವಾಡಕಾರ್ಯಗಳನು / 
     ಗಳಿಸಿತಾತನ ಕೈ ಪೂತಭುಜ ಗೆಲುವನು //

2 : ಪ್ರಕಟಿಸಿಹನಾ ಪ್ರಭು ತನ್ನ ಮುಕ್ತಿವಿಧಾನವನು / 
     ರಾಷ್ಟ್ರಗಳಿಗೆ ತೋರಿಸಿಹನು ಜೀವೋದ್ಧಾರಕಾ ಶಕ್ತಿಯನು //

3 : ಕಂಡು ಬಂದಿತು ಜಗದ ಎಲ್ಲೆಎಲ್ಲೆಗೆ / 
     ನಮ್ಮ ದೇವ ಸಾಧಿಸಿದ ಜಯಗಳಿಕೆ /
     ಸ್ಮರಿಸಿಕೊಂಡನಾ ಪ್ರಭು ತನ್ನ ಪ್ರೀತಿಯನು / 
     ಇಸ್ರಯೇಲ್ ಕುಲದ ಬಗ್ಗೆ ತನ್ನ ಸತ್ಯತೆಯನು //

4 : ಭೂನಿವಾಸಿಗಳೇ, ಮಾಡಿರಿ ಜಯಕಾರ ಪ್ರಭುವಿಗೆ / 
     ಮುದದಿ ಹಾಡಿರಿ, ಮಾಡಿರಿ ಸುಮಧುರ ಭಜನೆ //

5 : ಪ್ರಭುವನು ಸ್ತುತಿಸಿರಿ ಕಿನ್ನರಿಯೊಂದಿಗೆ / 
     ಭಜಿಸಿರಿ ಆತನನು ವಾದ್ಯಮೇಳದೊಂದಿಗೆ //

6 : ಊದಿರಿ ಕೊಂಬನು, ತುತೂರಿಯನು / 
     ಉದ್ಘೋಷಿಸಿರಿ ಪ್ರಭು ರಾಜನನು //



ಶುಭಸಂದೇಶ

ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ
28 ಮಾರ್ಕ 3: 22-30

22ಇದಲ್ಲದೆ, ಜೆರುಸಲೇಮಿನಿಂದ ಬಂದಿದ್ದ ಧರ್ಮಶಾಸ್ತ್ರಿಗಳು, ಇವನನ್ನು ಬೆಲ್ಜೆಬೂಲನು ಹಿಡಿದಿದ್ದಾನೆ; ದೆವ್ವಗಳ ಒಡೆಯನ ಶಕ್ತಿಯಿಂದಲೇ ಇವನು ದೆವ್ವಬಿಡಿಸುತ್ತಾನೆ, ಎನ್ನುತ್ತಿದ್ದರು. 23ಆಗ ಯೇಸು ಅವರನ್ನು ತಮ್ಮ ಹತ್ತಿರಕ್ಕೆ ಕರೆದು ಸಾಮತಿಗಳ ಮೂಲಕ ಮಾತನಾಡತೊಡಗಿದರು: ಸೈತಾನನು ಸೈತಾನನನ್ನು ಹೊರದೂಡುವುದು ಹೇಗೆ ತಾನೇ ಸಾಧ್ಯ? 24ಒಂದು ರಾಜ್ಯದ ಪ್ರಜೆಗಳು ತಮ್ಮತಮ್ಮೊಳಗೆ ಕಚ್ಚಾಡುವುದಾದರೆ ಆ ರಾಜ್ಯ ಉಳಿಯದು. 

25ಒಂದು ಕುಟುಂಬದ ಸದಸ್ಯರು ತಮ್ಮ ತಮ್ಮೊಳಗೆ ಕಚ್ಚಾಡುವುದಾದರೆ ಆ ಕುಟುಂಬ ಬಾಳದು. 26: ಅದರಂತೆಯೇ ಸೈತಾನನ ಪಕ್ಷದವರು ಪರಸ್ಪರ ವಿರೋಧಿಗಳಾದರೆ ಅವನ ರಾಜ್ಯ ಉಳಿಯದು; ಅದು ಅಳಿದು ಹೋಗುವುದು. 27ಒಬ್ಬನು ಬಲಿಷ್ಠನ ಮನೆಯನ್ನು ನುಗ್ಗಿ ಅವನನ್ನು ಕಟ್ಟಿಹಾಕದೆ ಅವನ ಸೊತ್ತನ್ನು ಸೂರೆಮಾಡಲಾಗದು. ಮೊದಲು ಅವನನ್ನು ಕಟ್ಟಬೇಕು. ಬಳಿಕ ಅವನ ಮನೆಯನ್ನು ಕೊಳ್ಳೆಹೊಡಯಬೇಕು. 28ನಿಶ್ಚಯವಾಗಿ ನಿಮಗೆ ಹೇಳುತ್ತೇನೆ; ಮನುಷ್ಯರು ಮಾಡುವ ಎಲ್ಲಾ ಪಾಪಗಳಿಗೂ ಆಡುವ ಎಲ್ಲಾ ದೇವದೂಷಣೆಗಳಿಗೂ ಕ್ಷಮೆ ದೊರಕಬಹುದು. 29ಆದರೆ ಪವಿತ್ರಾತ್ಮ ಅವರನ್ನು ದೂಷಿಸುವವನಿಗೆ ಮಾತ್ರ ಕ್ಷಮೆ ದೊರಕದು. ಅಂಥವನ ಪಾಪ ಶಾಶ್ವತವಾದುದು, ಎಂದರು. 30(ದೆವ್ವ ಹಿಡಿದಿದೆ ಎಂದು ತಮ್ಮನ್ನು ಕೆಲವರು ನಿಂದಿಸುತ್ತಿದ್ದುದರಿಂದ ಯೇಸು ಹೀಗೆ ಹೇಳಿದರು). 

ಚಿಂತನೆ
ಸಂತ ಥಾಮಸ್ ಅಕ್ವಿನಾಸ್

ಅಕ್ವಿನೊ ನಗರದ ಶ್ರೀಮಂತ ಲಾಂಡಲ್ಫ್ ದಂಪತಿಗಳಿಗೆ ಕ್ರಿ.ಶ. 1226ರಲ್ಲಿ ಹುಟ್ಟಿದ ಕೊನೆಯ ಮಗ ಥಾಮಸ್. ಬಾಲಕ ಥಾಮಸ್ ಅಕ್ವಿನಾಸ್ ಪ್ರತಿಭಾವಂತ. ತನ್ನ ಜೀವನ ಭವಿಷ್ಯವನ್ನು ನಿರ್ಧರಿಸುವ ಪ್ರಾಯಸ್ಥನಾದಾಗ ಥಾಮಸ್ ಬೆನೆಡಿಕ್ಟೈನ್ ಆಶ್ರಮ ಬಿಟ್ಟು ಲೌಕಿಕವಾದ ಎಲ್ಲವನ್ನೂ ತ್ಯಜಿಸಿ ಡೊಮಿನಿಕನ್ ಸಭೆಯನ್ನು ಸೇರಲು ನಿರ್ಧರಿಸುತ್ತಾರೆ. ತನ್ನ ಹದಿನೇಳನೇ ವಯಸ್ಸಿ(1243)ನಲ್ಲಿ ನೇಪಲ್ಸಿನ ಡೊಮಿನಕನ್ ಸಭೆ ಸೇರುತ್ತಾರೆ. ಮನೆಯವರ ವಿರೋಧವನ್ನು ಎದುರಿಸಿ ಗುರುದೀಕ್ಷೆಯನ್ನು ಸ್ವೀಕರಿಸುತ್ತಾರೆ. 31ನೇ ವುಯಸ್ಸಿಗೆ ಡಾಕ್ಟರೇಟ್ ಪದವಿಯನ್ಮೂ ಪಡೆಯುತ್ತಾರೆ.
`ಕಥೋಲಿಕ ಧರ್ಮಶಾಸ್ತ್ರದ ರಾಜಕುಮಾರ' ಎಂದೇ ಖ್ಯಾತರಾದ ಥಾಮಸ್ ಅಕ್ವಿನಾಸರು ಕ್ರಿಸ್ತನ ಬೋಧನೆಯ  ಹಿನ್ನೆಲೆಯಲ್ಲಿ ಅರಿಸ್ಟಾಟಲ್‌ನ ವ್ಯವಸ್ಥೆಯನ್ನು ವಿಮರ್ಶಿಸಿದ ಮೊದಲ ಪಂಡಿತ. ಕ್ರೈಸ್ತ ದೈವ ಶಾಸ್ತ್ರ ಮತ್ತು ತತ್ವ ಶಾಸ್ತ್ರದ ಸಾರಾಂಶವಾದ `ಸುಮ್ಮ ಥಿಯೊಲಾಜಿಕಾ' ಎಂಬ ಮೇರು ಗ್ರಂಥ ಅವರ ಆಳವಾದ ಅಧ್ಯಯನದ ಫಲಶೃತಿ. ಪರಮಪ್ರಸಾದದ ಅಪ್ರತಿಮ ಭಕ್ತ. `ಓ ಎಂಥಾ ದಿವ್ಯ ಸಂಸ್ಕಾರ' ಗೀತೆಯ ರಚನಕಾರ. ಮಾರ್ಚ್ 7, 1274ರಲ್ಲಿ ಕೊನೆಯುಸಿರೆಳೆದ ಇವರನ್ನು 1323ರಲ್ಲಿ ಜಗದ್ಗುರು 5ನೇ ಭಕ್ತಿನಾಥರು ``ಧರ್ಮಸಭೆಯ ಪಂಡಿತ' ಎಂದು ಘೋಷಿಸಿ ಅವರನ್ನು ಸಂತ ಪದವಿಗೇರಿಸುತ್ತಾರೆ. ಸಂತ ಥಾಮಸ್ ಅಕ್ವಿನಾಸ್ ವಿಶ್ವವಿದ್ಯಾಲಯಗಳ ಶಿಕ್ಷಕರ ಹಾಗೂ ಅಧ್ಯಯನ ಶೀಲ ವಿದ್ಯಾರ್ಥಿಗಳ ಪಾಲಕ ಸಂತರಾಗಿದ್ದಾರೆ.

ಇಂದಿನ ಸಂತರು

ಸ೦ತ ತೋಮಸ್ ಆಕ್ವಿನಾಸ್, ಧರ್ಮಸಭೆಯ ಪ೦ಡಿತ (1225-1274)
ಅಕ್ವಿನಾಸ್ ಪಟ್ಟಣದ ನ್ಯಾಡ್೦ಡೊಲ್ಫ್೦ ಹಾಗೂ ತಿಯೋಡೋರಾ ದ೦ಪತಿಗಳ ಕೊನೆಪುತ್ರ ತೋಮಸ್ ತನ್ನ 5ನೇ ವಯಸ್ಸಿನಲ್ಲಿ ಬೆನೆಡಿಕ್ಟ್ ಮಠಕ್ಕೆ ಸೇರಿ ತನ್ನ ಎಲ್ಲಾ ವಿದ್ಯಾಭ್ಯಾಸ ಮುಗಿಸಿ 11 ನೇ ವಯಸ್ಸಿನಲ್ಲಿ ನೆಪಲ್ಸ್ ವಿಶ್ವವಿದ್ಯಾನಿಲಯದಲ್ಲಿ ಪದವಿ ಮುಕ್ತಾಯ ಮಾಡಿ, ತನ್ನ 18 ನೇ ವಯಸ್ಸಿನಲ್ಲಿ ಡೋಮಿನಿಕನ್ ಸಭೆಗೆ ಭರ್ತಿಯಾಗಲು ಆಪೇಕ್ಷಿಸಲು, ಆತನ ಸ೦ಬ೦ಧಿ ಚಕ್ರವರ್ತಿ 2 ನೇ ಫ್ರೆಡರಿಕ್ ಹಾಗೂ ಕುಟು೦ಬದವರು ಅದನ್ನು ವಿರೋಧಿಸಿ, ತೋಮಸ್ ನನ್ನು ಸುಮಾರು 2 ವರ್ಷ, ತಮ್ಮ ಅರಮನೆಯಲ್ಲಿ ಸೆರೆಮನೆಯಲ್ಲಿಟ್ಟಿದರು. ಸ೦ಧರ್ಭದಲ್ಲಿ ಆತನ ತ೦ಗಿ ಅನುಕ೦ಪದಿ೦ದ, ಆತನಿಗೆ ಒ೦ದು ಪವಿತ್ರಗ್ರ೦ಥವನ್ನು ಹಾಗೂ ತತ್ವಶಾಸ್ತ್ರದ ಕೆಲ ಪುಸ್ತಕವನ್ನು ನೀಡಿ ಸ೦ತೈಸಿದಳು.

ಕೆಲದಿನಗಳ ನ೦ತರ ಡೊಮಿನಿಕನ್ ಗುರುಗಳು, ಅ೦ತಸ್ತಿನ ಮೇಲಿದ್ದ ಸೆರೆಮನೆಯಿ೦ದ, ತೋಮಸನನ್ನು ಒ೦ದು ಬುಟ್ಟಿಯಲ್ಲಿರಿಸಿ, ತಪ್ಪಿಸಿಕೊಳ್ಳಲು ಸಹಕರಿಸಿದರು. ಅಲ್ಲಿ೦ದ ಆತ ಕೋಲೋನ್ ಹಾಗೂ ಪ್ಯಾರಿಸ್ ಪಟ್ಟಣಗಳಲ್ಲಿದ್ದ. ತನ್ನ ಉನ್ನತ ಶಿಕ್ಷಣ ಮುಗಿಸಿ, ಸ೦ತ ಆಲ್ಬರ್ಟ್ರ ಸಹಕಾರದಿ೦ದ, ಧರ್ಮಪಾ೦ಡಿತ್ಯವನ್ನು ಮುಕ್ತಾಯಗೊಳಿಸಿ, ಗುರು ದೀಕ್ಷೆಯನ್ನು ಸ್ವೀಕರಿಸಿದರು. ತದನ೦ತರ ಪ್ಯಾರಿಸ್ ವಿಶ್ವವಿದ್ಯಾನಿಲಯದಲ್ಲಿ ತನ್ನ ಶಿಕ್ಷಣ ಪ್ರಾಧ್ಯಾಪಕರಾಗಿ ತನ್ನ ವೃತ್ತಿಯನ್ನು ಮು೦ದುವರಿಸಲು, ಸಾವಿರಾರು ವಿದ್ಯಾರ್ಥಿಗಳ ಆಕರ್ಷಣೆ, ಅಲ್ಲವೇ ಅವರ ಪ್ರೇರಕರಾಗಿ, ಅವರಲ್ಲಿ ವಿದ್ಯಾಭ್ಯಾಸದ ಮಹತ್ವವನ್ನು ಹಾಗೂ ಅಗತ್ಯತೆಯನ್ನು ಮೂಡಿಸಿದರು.

ತೋಮಸರನ್ನುಎ೦ಜೆಲಿಕ್ ಡಾಕ್ಟರ್ಎ೦ದೂಕಥೋಲಿಕ್ ಸಭೆಯ ದೈವಶಾಸ್ತ್ರದ ಯುವಕುಮಾರಎ೦ದು ಹೆಸರಾದರು. ಗ್ರೀಕ್- ಅರಿಸ್ಟಾಟಲ್ ತತ್ವಶಾಸ್ತ್ರವನ್ನು ಕ್ರೈಸ್ತ ಭೋಧನಾನುಗುಣವಾಗಿ ವ್ಯಾಖ್ಯಾನಿಸಿದರು ಹಾಗೂ ಅರ್ಥವಿವರಣೆ ನೀಡಿದರು. ತನ್ನ 49ನೇ ವರ್ಷಗಳಲ್ಲಿ ಸುಮಾರು 60 ಪಾ೦ಡಿತ್ಯಪೂರ್ಣ ಪುಸ್ತಕಗಳನ್ನು ಬರೆದರು. ಅವುಗಳಲ್ಲಿ ಚಾರಿತ್ರಿಕಸುಮ್ಮಾ ತಿಯಲೋಜಿಕ’ (summa theologica) ಕ್ರೈಸ್ತ ಧರ್ಮದ ತಿರುಳನ್ನು, ತತ್ವಶಾಸ್ತ್ರ ಮತ್ತು ದೈವಶಾಸ್ತ್ರದೊ೦ದಿಗೆ ವರ್ಣಿಸಿರುವ, ಮಹಾಗ್ರ೦ಥ. ಕ್ರೈಸ್ತ ಧರ್ಮದ ರಸ-ರಹಸ್ಯಗಳನ್ನು, ಪಾ೦ಡಿತ್ಯದ ಮೂಲಕ ಎಲ್ಲಾ ವಿಷಯಗಳನ್ನು ಅರ್ಥೈಸಿಕೊಳ್ಳುವ೦ತೆ ಮ೦ಡಿಸಿದ ತೋಮಸ್, ದೈವಸ೦ಬ೦ಧ-ಸ೦ಧರ್ಭ-ಜ್ಞಾನಾರ್ಜನೆ ವಿಜ್ಞಾನವನ್ನು ತಿಳಿಸಿದರು. ಧ್ಯಾನ-ಮೌನ-ಪ್ರಾರ್ಥನೆ-ದೈವಾನುಗ್ರಹ ಎಲ್ಲಾ ಜ್ಞಾನದ ಬುನಾದಿ, ದೈವ ಕೃಪೆಯು ಎಲ್ಲಾ ಜ್ಞಾನಗಳ ಉಗಮ ಎ೦ದು ತಿಳಿಸಿದರು. ತೋಮಸ್ ಗಿದ್ದ ಜ್ಞಾನ-ವಿದ್ಯಾ ಬಯಕೆ. ಕೆಲವೊಮ್ಮೆ ತಮ್ಮ ಊಟ-ಉಪಚಾರ-ವಿಶ್ರಾ೦ತಿಯನ್ನು ಮರೆಯುವಷ್ಟಿತ್ತು. ಪವಿತ್ರಗ್ರ೦ಥದ ವ್ಯಾಖ್ಯಾನವನ್ನು ಉಪವಾಸ, ಪ್ರಾರ್ಥನೆ, ಧ್ಯಾನದಲ್ಲಿ ಅರ್ಥೈಸಿಕೊಳ್ಳುತ್ತಿದ್ದರು. ಅವರಿಗಿದ್ದ ಪರಮ ಪ್ರಸಾದದ ಪ್ರೀತಿ-ವಿಶ್ವಾಸವನ್ನು ಕ್ರಿಸ್ತನ ಶರೀರ ಹಾಗೂ ಎ೦ಥ ದಿವ್ಯ ಸ೦ಸ್ಕಾರ (Tantum Ergo) ಎ೦ಬ ಕಾವ್ಯಗಳ ಮುಖಾ೦ತರ ವ್ಯಕ್ತಪಡಿಸಿದರು. ಇದು ಜಗದ್ಗುರುಗಳ ಅಪ್ಪಣೆಯಿ೦ದ ರಚಿಸಲಾಗಿತ್ತು. ಕೊನೆಗೆ ತೋಮಸ್ ಲೊಯೊನ್ಸ್ ಶೃಂಗಸಭೆಗೆ ತೆರಳುತ್ತಿರುವಾಗ ದೈವಾಧೀನರಾದರು. 22ನೇ ಪೋಪ್ ಜಾನ್ 1323 18 ನೇ ಜುಲೈ ಅವರನ್ನು ಸ೦ತ ಪದವಿಗೇರಿಸಿದರು ಹಾಗೂ 5 ನೇ ಭಕ್ತಿನಾಥರು ತೋಮಸರನ್ನು 11 ನೇ ಏಪ್ರಿಲ್ 1567ರಲ್ಲಿ ಧರ್ಮಸಭೆಯ ಪ೦ಡಿತ ಎ೦ದು ಘೋಷಿಸಿದರು. ಅ೦ತೆಯೇ ತೋಮಸ್ ಕಥೋಲಿಕ್ ಧರ್ಮ ವಿಶ್ವವಿದ್ಯಾನಿಲಯಗಳ ಪಾಲಕ ಎ೦ದು ಹೆಸರುಗಳಿಸಿದರು

ಚಿತ್ರ: ಗೂಗಲ್ಕೃಪೆ
© 'ದನಿ' ಮಾಧ್ಯಮ ಮನೆ


ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ


No comments:

Post a Comment