ಸಾರ್ವಜನಿಕ ಉದ್ದೇಶ: ಮಾನವ ಸಾಗಾಣಿಕೆ, ವೇಶ್ಯಾವಾಟಿಕೆ ಹಾಗೂ ಹಿಂಸಾತ್ಮಕ ಕ್ರಿಯೆಗಳಿಂದಾಗಿ ನಿರಾಶ್ರಿತರಾದವರಿಗೆ ಆಶ್ರಯವನ್ನು ನೀಡಲು ಸರ್ವರೂ ಉದಾರತೆಯಿಂದ ಮುಂದೆ ಬರುವಂತೆ.
18 ಫೆಬ್ರವರಿ 2೦19
ಭಾನುವಾರ / ಹಸಿರು / ಸಾಧಾರಣ ಆರನೇ ಭಾನುವಾರ
1ನೇ ವಾಚನ - ಆದಿಕಾಂಡ 4: 1-15, 25
ಕೀರ್ತನೆ - 50:1, 8, 16-17, 20-21
ಶುಭಸಂದೇಶ - ಮಾರ್ಕ 8:11-13
1ನೇ ವಾಚನ - ಆದಿಕಾಂಡ 4: 1-15, 25
ಕೀರ್ತನೆ - 50:1, 8, 16-17, 20-21
ಶುಭಸಂದೇಶ - ಮಾರ್ಕ 8:11-13
ವಾಚನಗಳು
ಮೊದಲನೇ ವಾಚನ
ಆದಿಕಾಂಡದಿಂದ ವಾಚನ
ಆದಿಕಾಂಡ 4: 1-15, 25
1ಆದಾಮನು ತನ್ನ ಹೆಂಡತಿಯ ಜೊತೆ ಕೂಡಲು ಆಕೆ ಗರ್ಭಿಣಿಯಾಗಿ ಕಾಯಿನನನ್ನು ಹೆತ್ತಳು. “ಸರ್ವೇಶ್ವರಸ್ವಾಮಿಯ ಅನುಗ್ರಹದಿಂದ ಒಂದು ಗಂಡು ಮಗುವನ್ನು ಪಡೆದಿದ್ದೇನೆ” ಎಂದಳು. 2ತರುವಾಯ ಅವನ ತಮ್ಮನಾದ ಹೇಬೆಲನಿಗೆ ಜನ್ಮವಿತ್ತಳು. ಹೇಬೆಲನು ಕುರಿಗಾಹಿಯಾದನು; ಕಾಯಿನನು ವ್ಯವಸಾಯಗಾರನಾದನು. 3ಕ್ರಮೇಣ ಕಾಯಿನನು ತಾನು ಬೆಳೆಸಿದ ಫಸಲಲ್ಲಿ ಕೆಲವನ್ನು ತಂದು ಸರ್ವೇಶ್ವರ ಸ್ವಾಮಿಗೆ ಕಾಣಿಕೆಯಾಗಿ ಸಮರ್ಪಿಸಿದನು. 4ಅಂತೆಯೇ, ಹೇಬೆಲನು ತನ್ನ ಹಿಂಡಿನಿಂದ ಚೊಚ್ಚಲ ಕುರಿಗಳನ್ನು ಕಾಣಿಕೆಯಾಗಿ ತಂದು ಅವುಗಳ ಕೊಬ್ಬನ್ನು ಸಮರ್ಪಿಸಿದನು. 5ಸರ್ವೇಶ್ವರ ಹೇಬೆಲನನ್ನೂ ಅವನ ಕಾಣಿಕೆಯನ್ನೂ ಮೆಚ್ಚಿಕೊಂಡರು; ಆದರೆ ಕಾಯಿನನನ್ನೂ ಅವನ ಕಾಣಿಕೆಯನ್ನೂ ಮೆಚ್ಚಲಿಲ್ಲ. ಇದರಿಂದ ಕಾಯಿನನು ಕಡುಗೋಪಗೊಂಡನು; ಅವನ ಮುಖ ಸಿಂಡರಿಸಿತು. 6ಆಗ ಸರ್ವೇಶ್ವರ ಕಾಯಿನನಿಗೆ, “ಕೋಪವೇಕೆ? ಮುಖ ಸಿಂಡರಿಸಿದೆ ಏಕೆ? 7ನೀನು ಒಳಿತನ್ನು ಮಾಡಿದ್ದರೆ ತಲೆ ಎತ್ತುತ್ತಿದ್ದೆ; ಕೆಡುಕನ್ನು ಮಾಡಿದ್ದರಿಂದ ಪಾಪವು ಹೊಸ್ತಿಲಲ್ಲಿ ಹೊಂಚು ಹಾಕುತ್ತಿದೆ; ಅದು ನಿನ್ನನ್ನು ಬಯಸುತ್ತಿದೆ. ನೀನು ಅದನ್ನು ಜಯಿಸಬೇಕು,” ಎಂದರು.
8ಬಳಿಕ ಕಾಯಿನನು ತಮ್ಮ ಹೇಬೆಲನಿಗೆ, “ಹೊಲಕ್ಕೆ ಹೋಗೋಣ ಬಾ”, ಎಂದು ಕರೆದನು. ಅವರಿಬ್ಬರೂ ಅಲ್ಲಿಗೆ ಬಂದಾಗ ಕಾಯಿನನು ತಮ್ಮನ ಮೇಲೆ ಬಿದ್ದು ಅವನನ್ನು ಕೊಂದನು. 9“ನಿನ್ನ ತಮ್ಮನೆಲ್ಲಿ?” ಎಂದು ಸರ್ವೇಶ್ವರ ಕೇಳಿದಾಗ “ನಾನರಿಯೆ, ನನ್ನ ತಮ್ಮನಿಗೆ ನಾನೇನು ಕಾವಲುಗಾರನೋ?” ಎಂದು ಕಾಯಿನನು ಉತ್ತರ ಕೊಟ್ಟನು. 10ಆಗ ಸರ್ವೇಶ್ವರ, “ನೀನು ಎಂಥ ಕೃತ್ಯ ಎಸಗಿದೆ? ಪ್ರತೀಕಾರಕ್ಕಾಗಿ ನೆಲದಿಂದ ನಿನ್ನ ತಮ್ಮನ ರಕ್ತ ಕೂಗಿ ನನಗೆ ಮೊರೆಯಿಡುತ್ತಿದೆ, ಕೇಳು. 11ನಿನ್ನ ಕೈ ಸುರಿಸಿದ ನಿನ್ನ ತಮ್ಮನ ರಕ್ತವನ್ನು ಕುಡಿದ ಈ ನೆಲದಿಂದಾಗಿ ನೀನು ಶಾಪಗ್ರಸ್ತನು; ತಿರಸ್ಕøತನು. 12ಇದನ್ನು ನೀನು ವ್ಯವಸಾಯ ಮಾಡಿದರೂ ಇನ್ನು ಮುಂದೆ ಇದು ಫಲ ಕೊಡುವುದಿಲ್ಲ. ನೆಲೆಯಿಲ್ಲದೆ ನೀನು ಲೋಕದಲ್ಲಿ ಅಲೆಮಾರಿಯಾಗಿರಬೇಕು,” ಎಂದರು. 13ಅದಕ್ಕೆ ಕಾಯಿನನು, “ಸರ್ವೇಶ್ವರಾ, ಈ ಶಿಕ್ಷೆ ನನ್ನಿಂದ ಸಹಿಸಲಾಗದಷ್ಟು ಕಠಿಣ. 14ಈ ನಾಡಿನಿಂದ ನನ್ನನ್ನು ಹೊರದೂಡುತ್ತಿರುವಿರಿ, ತಮ್ಮ ಸಾನ್ನಿಧ್ಯ ನನಗಿನ್ನು ದೊರಕದು; ನೆಲೆ ಇಲ್ಲದ ನಾನು ಲೋಕದಲ್ಲಿ ಅಲೆಮಾರಿಯಾಗಿರಬೇಕು; ಕಂಡ ಕಂಡವರೆಲ್ಲರು ನನ್ನನ್ನು ಕೊಲ್ಲುವರು,” ಎಂದು ಹೇಳಿದನು. 15ಅದಕ್ಕೆ ಸರ್ವೇಶ್ವರ, “ಇಲ್ಲ, ಕಾಯಿನನ ಪ್ರಾಣವನ್ನು ತೆಗೆದವನಿಗೆ ಏಳ್ಮಡಿ ದಂಡನೆ ಆಗುವುದು,” ಎಂದು ಹೇಳಿ, ಅವನನ್ನು ಕಂಡವರು ಕೊಲ್ಲದಂತೆ ಅವನ ಮೇಲೆ ಒಂದು ಗುರುತನ್ನು ಇಟ್ಟರು.
25ಆದಾಮ್ ಮತ್ತು ಅವನ ಹೆಂಡತಿಗೆ ಮತ್ತೊಂದು ಗಂಡುಮಗು ಆಯಿತು. ಆಕೆ, “ಕಾಯಿನನು ಕೊಂದುಹಾಕಿದ ಹೇಬೆಲನಿಗೆ ಬದಲಾಗಿ ದೇವರು ನನಗೆ ಬೇರೆ ಸಂತಾನವನ್ನು ಅನುಗ್ರಹಿಸಿದ್ದಾರೆ,” ಎಂದುಕೊಂಡು ಅವನಿಗೆ “ಸೇತ್” ಎಂದು ನಾಮಕರಣ ಮಾಡಿದಳು.

ಕೀರ್ತನೆ
ಕೀರ್ತನೆ 50: 1 , 8, 16ಬಿಸಿ-17, 20-21
ಪರಾತ್ಪರನಿಗೆ ಮಾಡಿದ ಹರಕೆಗಳು ಸಮರ್ಪಿತವಾಗಲಿ
ದೇವಾಧಿದೇವನಾದ
ಪ್ರಭುವಿನ
ನುಡಿ ಇಡೀ ಜಗಕೆ
ಆತನ ಸನ್ನಿಧಿಗೆ ಕರೆ, ಪೂರ್ವದಿಂದ ಪಶ್ಚಿಮದವರೆಗೆ
ನಿನ್ನ ಬಲಿಯರ್ಪಣೆಯನು ನಾ ತಪ್ಪೆಣಿಸುತಿಲ್ಲ
ನಿನ್ನ ಮುಂದಿವೆ ಸತತ ನಿನ್ನ ದಹನ ಬಲಿಗಳೆಲ್ಲ.
“ನನ್ನ ವಿಧಿಗಳ ಪಠಿಸುವ ಹಕ್ಕು ನಿಮಗೆಂತು?
ನನ್ನ ನಿಬಂಧನೆಗಳ ನೀವು ಜಪಿಸುವುದೆಂತು?”
ನನ್ನ ಮಾತುಗಳನು ನೀವು ತಾತ್ಸಾರ ಮಾಡುತ್ತೀರಿ
ನನ್ನ ತಿದ್ದುಪಾಟುಗಳನು ನೀವು ಧಿಕ್ಕರಿಸುತ್ತೀರಿ.
ಸೋದರನಿಗೆ
ವಿರುದ್ಧ ಸುಳ್ಳಾಡಲು ಕೂರುತ್ತೀರಿ
ಒಡಹುಟ್ಟಿದವರಿಗೆ
ಎದುರಾಗಿ ಚಾಡಿಹೇಳುತ್ತೀರಿ
ನೀವಿದನ್ನೆಲ್ಲ
ಮಾಡಿದರೂ ನಾ ಮೌನಿಯೆನ್ನುವಿರಾ?
ನಾ ಕೂಡ ನಿಮ್ಮಂಥವನು ಎಂದುಕೊಂಡಿರಾ?
ನಿಮ್ಮ ದುಷ್ಟತನವನು ಕಣ್ಮುಂದೆಯಿಡುವೆನು
ನೀವು ಅಪರಾಧಿಗಳೆಂದು ಸ್ಥಾಪಿಸದೆ ಬಿಡೆನು.
ಶುಭಸಂದೇಶ
ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ
ಮಾರ್ಕ 8:11-13
111ಫರಿಸಾಯರು ಯೇಸುಸ್ವಾಮಿಯ ಬಳಿಗೆ ಬಂದು, ಅವರೊಡನೆ ತರ್ಕಮಾಡಿ, ಅವರನ್ನು ಪರೀಕ್ಷಿಸುವ ಉದ್ದೇಶದಿಂದ: “ನೀನು ದೇವರಿಂದ ಬಂದವನೆಂಬುದನ್ನು ಸೂಚಿಸಲು ಒಂದು ಅದ್ಭುತವನ್ನು ಮಾಡಿತೋರಿಸು,” ಎಂದು ಕೇಳಿದರು. 12ಇದನ್ನು ಕೇಳಿ ಯೇಸು, ಮನಸ್ಸಿನಲ್ಲೇ ನೊಂದುಕೊಂಡು, ನಿಟ್ಟುಸಿರಿಟ್ಟು, “ಈ ಪೀಳಿಗೆ ಅದ್ಭುತವನ್ನು ಸಂಕೇತವಾಗಿ ಅಪೇಕ್ಷಿಸುವುದೇಕೆ? ಇದಕ್ಕೆ ಅಂಥ ಯಾವ ಸಂಕೇತವನ್ನು ಕೊಡಲಾಗದು, ಇದು ಖಂಡಿತ,” ಎಂದರು. 13ಅನಂತರ ಯೇಸು ಅವರನ್ನು ಬಿಟ್ಟು, ದೋಣಿಯನ್ನು ಹತ್ತಿ ಸರೋವರದ ಆಚೆದಡಕ್ಕೆ ಹೊರಟುಹೋದರು.
ಚಿಂತನೆ
ಕೋಪ
ಇಂದಿನ ಮೊದಲನೆಯ ವಾಚನದಲ್ಲಿ ಕಾಯಿನ ಮತ್ತು ಏಬೆಲನ ಬಗ್ಗೆ ಓದುತ್ತೇವೆ. ಏಬೆಲನ ಕಾಣಿಕೆಯನ್ನು ದೇವರು ಸ್ವೀಕರಿಸಿದರು ಕಾರಣ ಆತ ಉತ್ತಮವಾದ ಕಾಣಿಕೆಯನ್ನು ಶುದ್ಧ ಮನಸ್ಸಿನಿಂದ ಅರ್ಪಿಸಿದ. ಕಾಯಿನನ ಕಾಣಿಕೆಯನ್ನು ದೇವರು ಮೆಚ್ಚಲಿಲ್ಲ, ಹಾಗಾಗಿ ಕಾಯಿನ ತನ್ನ ಸ್ವಂತ ತಮ್ಮನ ಮೇಲೆ ಕೋಪಗೊಂಡ, ಕೋಪದಿಂದ ತನ್ನ ಸ್ವಂತ ತಮ್ಮನನ್ನೇ ಕೊಲೆಮಾಡಿದ.
ಕಾಯಿನನಂತೆ ಅನೇಕ ಬಾರಿ ನಾವು ಕೂಡ ಇತರರ ಮೇಲೆ ಕೋಪಗೊಳ್ಳುತ್ತೇವೆ. ಕಛೇರಿಯಲ್ಲಿ ಸಹೋದ್ಯೋಗಿಗಳು ಬಡ್ತಿ ಪಡೆದಾಗ, ಶಾಲೆಯಲ್ಲಿ ಸ್ನೇಹಿತರು ಉತ್ತಮ ಅಂಕ ಗಳಿಸಿದಾಗ, ಬೇರೆಯವರು ಪ್ರಶಂಸೆ ಗಳಿಸಿದಾಗ ನಮಗೆ ಕೋಪ ಬರುವುದು ಸಹಜ. ಕಾಯಿನ ಉತ್ತಮ ಕಾಣಿಕೆ ಅರ್ಪಿಸಿದ್ದಿದ್ದರೆ ದೇವರು ಆತನನ್ನು ಮೆಚ್ಚಿಕೊಳ್ಳುತ್ತಿದ್ದರು. ನಾವು ಶ್ರಮಪಟ್ಟು ದುಡಿದರೆ ನಮಗೂ ಪ್ರತಿಫಲ ಉಂಟು. ಕೋಪ ಬಹಳ ಕೆಟ್ಟದ್ದು ಅದಕ್ಕಾಗಿ ಯೇಸು ನುಡಿಯತ್ತಾರೆ. ತನ್ನ ಸಹೋದರ? ಮೇಲೆ ಕೋಪಗೊಳ್ಳುವ ಪ್ರತಿಯೊಬ್ಬನೂ ನ್ಯಾಯ ತೀರ್ಪಿಗೆ ಈಡಾಗುವನೆಂದು (ಮತ್ತಾಯ 5:22).
ಇಂದಿನ ಸಂತರು
ಕುರಿಯಾಕೋಸ್ ಎಲಿಯಾಸ್ ಚಾವರ, ಯಾಜಕಭಾರತ ದೇಶದಲ್ಲಿ ’ದೇವರ ಸ್ವಂತ ನಾಡು’ ಎಂದು ಪ್ರಖ್ಯಾತಿ ಪಡೆದಿರುವ ಕೇರಳದಲ್ಲಿ 18೦5ರಲ್ಲಿ ಜನಿಸಿದ ಇವರು ವರ್ಷಗಳು ಉರುಳಿದಂತೆ ದೈವಭಕ್ತಿಯಲ್ಲಿ ಪ್ರವರ್ಧಿಸುತ್ತ ಸಿಎಮ್ಐ ಧಾರ್ಮಿಕ ಸಭೆಯನ್ನು ಸೇರಿದರು. ಈ ಧಾರ್ಮಿಕ ಸಂಸ್ಥೆ ಸಿರೋ ಮಲಬಾರ್ ಧರ್ಮಸಭೆಯ ಆಧ್ಯಾತ್ಮಿಕ ನವೀಕರಣಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿದೆ. ದೈವವಾಕ್ಯವನ್ನು ಆಳವಾಗಿ ಅರಿತುಕೊಂಡು, ಜನರೆಲ್ಲರಿಗೆ ಭೋಧಿಸುತ್ತ ಅವರಲ್ಲಿ ದೈವವಾಕ್ಯದ ಭಕ್ತಿಯನ್ನು ಹೆಚ್ಚಿಸುವಲ್ಲಿ ಅವಿರತ ಶ್ರಮಿಸಿದರು. ಕುಟುಂಬಗಳನ್ನು ಕಟ್ಟುವುದರ ಮುಖಾಂತರ ಧೃಡವಾದ ಕ್ರೈಸ್ತ ಸಮುದಾಯವನ್ನು ನಿರ್ಮಿಸಲು ಸಾಧ್ಯ ಎಂಬ ಸತ್ಯವನ್ನು ಮನಗಂಡ ಈ ಸಂತರು ಆ ಒಂದು ವಿಶೇಷ ಕಾರ್ಯಕ್ಕಾಗಿ ತಮ್ಮ ಸಾಕಷ್ಟು ಸಮಯ ಹಾಗೂ ಶಕ್ತಿಯನ್ನು ವಿನಿಯೋಗಿಸಿದರು. ಮಕ್ಕಳ ವಿದ್ಯಾಭ್ಯಾಸಕ್ಕೆ ವಿಶೇಷ ಮಹತ್ವ ನೀಡಿದ ಸಂತ ಚಾವರ ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿದರು. ದೇವರ ಅನಂತ ಆಶೀರ್ವಾದದಿಂದ ಅನೇಕ ಆಧ್ಯಾತ್ಮಿಕ ಪುಸ್ತಕಗಳನ್ನು ಬರೆದು ದೈವಿಕ ಚಿಂತನೆಯನ್ನು ಎಲ್ಲೆಡೆ ಪಸರಿಸಲು ಯಶಸ್ವಿಯಾದರು. ಅವರ ಮಾದರಿ ಕ್ರೈಸ್ತ ಜೀವನದಿಂದ ನಮ್ಮ ಬದುಕಲ್ಲೂ ಬದಲಾವಣೆಯ ಹೊಸ ಗಾಳಿ ಬೀಸಲಿ.
ಚಿತ್ರ: ಗೂಗಲ್ ಕೃಪೆ

No comments:
Post a Comment