ಬಿಳಿ/ಶನಿ/ಬಿಳಿ/ ಪಾಸ್ಖ ಹಬ್ಬದ ಜಾಗರಣೆ ಪೂಜೆ
1ನೇ ವಾಚನ - ಆದಿ 1: 1 - 2: 2
ಅಥವಾ (1: 1, 26: 31)
ಕೀರ್ತನೆ - 33: 4-7,
12-13, 2೦, 22
2ನೇ ವಾಚನ - ಆದಿ 22: 1-18 (ಅಥವಾ 22:
1-2, 9,
1೦-13, 15-18)
ಕೀರ್ತನೆ - 16: 5, 8-1೦, 11
3 ವಾಚನ: ವಿಮೋ 14: 15-15: 1
ಕೀರ್ತನೆ - ವಿಮೋ 15: 1-7, 17-18
4 ವಾಚನ ಯೆಶಾಯ 54: 5-14
ಕೀರ್ತನೆ - 3೦: 3-5,1೦-11, 12
5 ವಾಚನ ಯೆಶಾಯ 55: 1-11
ಕೀರ್ತನೆ - ಯೆಶಾಯ 12: 2-6
6 ವಾಚನ ಬಾರೂ 3: 9-15, 32-37, 4: 1-4
ಕೀರ್ತನೆ - 19: 7-1೦
7 ವಾಚನ ಯೆಜೆ 36: 16-28
ಕೀರ್ತನೆ - 42: 2, 4:
43: 3-4
8 ವಾಚನ ರೋಮ 6: 3-11
ಕೀರ್ತನೆ - 118: 1-2,
16, 17, 22-23
ಶುಭಸಂದೇಶ - ಲೂಕ 24: 1-12
ಈ ವರ್ಷ ಸಂತ ಅನ್ಸೆಲ್ಮ್ ಸ್ಮರಣೆ ಇರುವುದಿಲ್ಲ
1ನೇ ವಾಚನ ವಾಚನ ರೋಮ 6: 3-11
3ಕ್ರಿಸ್ತಯೇಸುವಿನವರಾಗಲು
ದೀಕ್ಷಾಸ್ನಾನ ಹೊಂದಿರುವ ನಾವು, ಅವರ ಮರಣದಲ್ಲಿ ಪಾಲುಗಾರರಾಗಲು ದೀಕ್ಷಾಸ್ನಾನ ಪಡೆದೆವು ಎಂಬುದು ನಿಮಗೆ ತಿಳಿಯದೆ? 4ಹೀಗಿರಲಾಗಿ, ದೀಕ್ಷಾಸ್ನಾನ ಮಾಡಿಸಿಕೊಂಡಾಗ ಅವರ ಮರಣದಲ್ಲಿ ಪಾಲುಗಾರರಾದ ನಮಗೆ ಅವರೊಡನೆ ಸಮಾಧಿಯೂ ಆಯಿತು. ಆದುದರಿಂದ ತಂದೆಯ ಮಹಿಮಾಶಕ್ತಿಯಿಂದ ಕ್ರಿಸ್ತಯೇಸು ಮರಣದಿಂದ ಪುನರುತ್ಥಾನ ಹೊಂದಿದಂತೆಯೇ ನಾವು ಸಹ ಹೊಸ ಜೀವವನ್ನು ಹೊಂದಿ ಬಾಳುತ್ತೇವೆ. 5ಅವರು ಮರಣ ಹೊಂದಿದಂತೆ ನಾವೂ ಅವರೊಂದಿಗೆ ಐಕ್ಯವಾಗಿ ಮರಣವನ್ನು ಹೊಂದುತ್ತೇವೆ. ಅಂತೆಯೇ, ಅವರು ಪುನರುತ್ಥಾನ ಆದಂತೆ ನಾವೂ ಅವರೊಡನೆ ಐಕ್ಯವಾಗಿ ಪುನರುತ್ಥಾನ ಹೊಂದುತ್ತೇವೆ. 6ನಮಗೆ ತಿಳಿದಿರುವಂತೆ ಪಾಪಾಧೀನವಾದ ನಮ್ಮ ಸ್ವಭಾವವು ನಾಶವಾಗುವಂತೆಯೂ ಇನ್ನು ಮುಂದೆ ನಾವು ಪಾಪಕ್ಕೆ ದಾಸರಾಗಿರದಂತೆಯೂ ಯೇಸುಕ್ರಿಸ್ತರೊಡನೆ ನಮ್ಮ ಹಳೆಯ ಸ್ವಭಾವವನ್ನು ಶಿಲುಬೆಗೆ ಜಡಿಯಲಾಗಿದೆ. 7ಹೀಗೆ ಸತ್ತವನು ಪಾಪಬಂಧದಿಂದ ಬಿಡುಗಡೆ ಹೊಂದಿದವನು. 8ಕ್ರಿಸ್ತ ಯೇಸುವಿನೊಂದಿಗೆ ನಾವು ಮರಣ ಹೊಂದಿದ್ದರೆ ಅವರೊಡನೆ ನಾವೂ ಜೀವಿಸುತ್ತೇವೆ; ಇದೇ ನಮ್ಮ ವಿಶ್ವಾಸ. 9ಯೇಸುಕ್ರಿಸ್ತರನ್ನು ಮರಣದಿಂದ ಎಬ್ಬಿಸಲಾಯಿತು ಎಂಬುದನ್ನು ನಾವು ಬಲ್ಲೆವು. ಆದ್ದರಿಂದ ಅವರು ಇನ್ನು ಎಂದಿಗೂ ಸಾಯುವುದಿಲ್ಲ; ಸಾವಿಗೆ ಅವರ ಮೇಲೆ ಯಾವ ಅಧಿಕಾರವೂ ಇಲ್ಲ. 10ಏಕೆಂದರೆ, ಅವರು ಪಾಪದ ಪಾಲಿಗೆ ಒಂದೇ ಸಾರಿಗೆ ಮಾತ್ರವಲ್ಲ, ಎಂದೆಂದಿಗೂ ಸತ್ತವರು. ಅವರು ಈಗ ಜೀವಿಸುವುದು ದೇವರಿಗಾಗಿಯೇ. 11ಅಂತೆಯೇ ನೀವೂ ಸಹ ಪಾಪದ ಪಾಲಿಗೆ ಸತ್ತವರೆಂದೂ ದೇವರಿಗಾಗಿ ಮಾತ್ರ ಯೇಸುಕ್ರಿಸ್ತರಲ್ಲಿ ಜೀವಿಸುವವರೆಂದೂ ಪರಿಗಣಿಸಿರಿ.
ಕೀರ್ತನೆ : 104:1-2,5-6,10,12-14,24,35
ನೀ ಉಸಿರನ್ನೂದಲು ಹೊಸದಾಗುವುವು ಪುನಶ್ಚೇತಗೊಳ್ಳುವುದು ಜಗವೆಲ್ಲವು
1ಭಜಿಸು ನನ್ನ ಮನವೇ,ಭಜಿಸು, ಪ್ರಭುವನು /
ಪ್ರಭು, ನನ್ನ ದೇವಾ, ನೀ ಸರ್ವೋತ್ತಮನು / ಮಹಿಮೆ ಪ್ರತಾಪಗಳಿಂದ ಭೂಷಿತನು //
2 ಟ್ಟುಕೊಂಡಿರುವೆ ಬೆಳಕನೇ ಬಟ್ಟೆಯಂತೆ / ಹರಡಿಸಿರುವೆ
ಆಗಸವನು ಗುಡಾರದಂತೆ //
5ಬುವಿಯನು ತಳಹದಿಯ ಮೇಲೆ ಸ್ಥಾಪಿಸಿರುವೆ /ಅದೆಂದಿಗೂ ಕದಲದಂತೆ ಮಾಡಿರುವೆ //
6ಅದಕ್ಕೆ ಹೊದಿಸಿರುವೆ ಸಾಗರವೆಂಬ ವಸ್ತ್ರವನು / ಆ ಜಲರಾಶಿಗಳು ಮುಳುಗಿಸಿವೆ ಬೆಟ್ಟಗಳನು //
10ಬುಗ್ಗೆಗಳು ಚಿಮ್ಮಿ ಓಡಮಾಡುವೆ ತಗ್ಗುಗಳಲಿ /ನದಿಗಳ ಹರಿಯಮಾಡುವೆ ಗುಡ್ಡಗಳ ನಡುವೆಯಲಿ //
12ಅವುಗಳ ಅರುಗಲ್ಲೇ ಇವೆ ಹಕ್ಕಿಗಳ ಗೂಡುಗಳು / ಕೇಳುತಿವೆ ಕೊಂಬೆಗಳಿಂದಾ ಪಕ್ಷಿಗಳ ಕಲರವಗಳು //
13ಮಲೆಗಳ ಮೇಲೆ ಮಳೆಗರೆಯುವೆ ಗಗನದಿಂದ / ತೃಪ್ತಿಗೊಂಡಿದೆ ಪೃಥ್ವಿಯು ನಿನ್ನ ಕೃಪೆ ಗಳಿಂದ //
14ಮೊಳೆಸುವೆ ಹುಲ್ಲನ್ನು ದನಕರುಗಳಿಗೋಸ್ಕರ / ಬೆಳೆಸುವೆ ಪೈರನು ನರಮಾನವರಿಗೋಸ್ಕರ //
24ಸೃಜಿಸಿರುವೆ ಎಲ್ಲವನು ಸುಜ್ಞಾನದಿಂದ / ಜಗವೆಲ್ಲ ತುಂಬಿದೆ ನಿನ್ನ ಸೃಷ್ಟಿಯಿಂದ //
35 ದಹಿಸಿಹೋಗಲಿ ಧರೆಯಿಂದ ದುಷ್ಟರು / ನಿರ್ಮೂಲವಾಗಲಿ ಸಕಲ ದುರುಳರು /
ಪ್ರಭುವನು ನನ್ನ ಮನ ಸ್ತುತಿಸಲಿ / ಪ್ರಭುವಿಗೆ ಸ್ತುತಿಸ್ತೋತ್ರವಾಗಲಿ //
ಶುಭಸಂದೇಶ - ಲೂಕ 24: 1-12
1ಭಾನುವಾರ ಮುಂಜಾನೆ ಆ ಮಹಿಳೆಯರು ತಾವು ಸಿದ್ಧಮಾಡಿದ್ದ ಸುಗಂಧ ದ್ರವ್ಯಗಳನ್ನು ತೆಗೆದುಕೊಂಡು ಸಮಾಧಿಯ ಬಳಿಗೆ ಬಂದರು. 2ಸಮಾಧಿಯ ದ್ವಾರಕ್ಕೆ ಮುಚ್ಚಿದ್ದ ಕಲ್ಲು ಅಲ್ಲಿಂದ ಉರುಳಿ ಬಿದ್ದಿತ್ತು. 3ಒಳಕ್ಕೆ ಪ್ರವೇಶಿಸಿ ನೋಡಿದಾಗ ಪ್ರಭು ಯೇಸುವಿನ ಪಾರ್ಥಿವ ಶರೀರ ಕಾಣಲಿಲ್ಲ. 4ಅವರು ತಬ್ಬಿಬ್ಬಾಗಿ ಅಲ್ಲೇ ನಿಂತರು. ಆಗ ತೇಜೋಮಯವಾದ ಉಡುಪನ್ನು ಧರಿಸಿದ್ದ ಇಬ್ಬರು ವ್ಯಕ್ತಿಗಳು ಫಕ್ಕನೆ ಅಲ್ಲೇ ಕಾಣಿಸಿಕೊಂಡರು. 5ಮಹಿಳೆಯರು ಭಯಭ್ರಾಂತರಾದರು. ಅವರ ದೃಷ್ಟಿ ನೆಲನಾಟಿತು. ಆಗ ಆ ವ್ಯಕ್ತಿಗಳು, “ಸಜೀವವಾಗಿರುವವರನ್ನು ಸತ್ತವರ ಮಧ್ಯೆ ಹುಡುಕುವುದೇನು? ಅವರು ಇಲ್ಲಿಲ್ಲ; ಪುನರುತ್ಥಾನ ಹೊಂದಿದ್ದಾರೆ. 6ಗಲಿಲೇಯದಲ್ಲಿದ್ದಾಗಲೇ ಅವರು ನಿಮಗೆ, 7‘ನರಪುತ್ರನು ಪಾಪಿ ಮಾನವರ ಕೈವಶವಾಗಿ, ಶಿಲುಬೆಯ ಮರಣಕ್ಕೀಡಾಗಿ, ಮೂರನೆಯ ದಿನ ಪುನರುತ್ಥಾನ ಹೊಂದಬೇಕಾಗಿದೆ,’ ಎಂದು ತಿಳಿಸಿದ್ದನ್ನು ಮರೆತು ಬಿಟ್ಟಿರೋ?” ಎಂದರು. 8ಆಗ ಆ ಮಹಿಳೆಯರಿಗೆ ಯೇಸುಸ್ವಾಮಿಯ ಆ ಮಾತುಗಳು ಜ್ಞಾಪಕಕ್ಕೆ ಬಂದವು. 9ಅವರು ಸಮಾಧಿಯಿಂದ ಹಿಂದಿರುಗಿ ಹೋಗಿ ನಡೆದುದೆಲ್ಲವನ್ನು ಹನ್ನೊಂದು ಮಂದಿ ಶಿಷ್ಯರಿಗೂ ಮತ್ತಿತರರಿಗೂ ತಿಳಿಸಿದರು. 10ಆ ಮಹಿಳೆಯರ ಹೆಸರುಗಳು: ಮಗ್ದಲದ ಮರಿಯಳು, ಯೊವಾನ್ನಳು ಮತ್ತು ಯಕೋಬನ ತಾಯಿಯಾದ ಮರಿಯಳು. ಇವರಲ್ಲದೆ, ಇವರ ಸಂಗಡ ಇದ್ದ ಇತರ ಮಹಿಳೆಯರೂ ಪ್ರೇಷಿತರಿಗೆ ಈ ಸುದ್ದಿಯನ್ನು ತಿಳಿಸಿದರು. 11ಪ್ರೇಷಿತರಾದರೋ ಇದೆಲ್ಲ ಕಟ್ಟುಕತೆಯೆಂದು ಭಾವಿಸಿ ನಂಬದೆ ಹೋದರು. 12ಆದರೆ ಪೇತ್ರನು ಎದ್ದು ಸಮಾಧಿಯ ಬಳಿಗೆ ಧಾವಿಸಿದನು. ಸಮಾಧಿಯೊಳಕ್ಕೆ ಬಗ್ಗಿ ನೋಡಿದಾಗ, ಶವಕ್ಕೆ ಸುತ್ತಿದ್ದ ನಾರುಮಡಿ ವಸ್ತ್ರಗಳು ಮಾತ್ರ ಅಲ್ಲಿ ಬಿದ್ದಿರುವುದನ್ನು ಕಂಡನು. ಇವೆಲ್ಲಾ ಎಷ್ಟೋ ಆಶ್ಚರ್ಯಕರವಾಗಿದೆ ಎಂದುಕೊಂಡು ಹಿಂದಿರುಗಿದನು.
ಚಿಂತನೆ
ಪಾಸ್ಕ
ಜಾಗರಣೆ
ಕ್ರಿಸ್ತನ
ಬರಿದಾದ ಸಮಾಧಿ ಕ್ರೈಸ್ತ ವಿಶ್ವಾಸಕ್ಕೆ ಬುನಾದಿ. ಸಾವಿಗೆ ಕ್ರಿಸ್ತನನ್ನು ಬಂಧಿಸಿಡುವುದು ಸಾಧ್ಯವಾಗಲಿಲ್ಲ,
ಸಮಾಧಿಗೆ ಕ್ರಿಸ್ತನನ್ನು ಹಿಡಿದಿಟ್ಟುಕೊಳ್ಳಲಾಗಲಿಲ್ಲ. ಸಾವಿಗೆ ಸೋಲಾಯ್ತು, ಜಯವು ಸಂಪೂರ್ಣವಾಯಿತು.
ಎಲೈ ಸಾವೇ, ನಿನ್ನ ಜಯವೆಲ್ಲಿ? ಎಲೈ ಸಾವೇ ನಿನ್ನ ವಿಷಕೊಂಡಿಯೆಲ್ಲಿ? (೧ಕೊರಿಂಥ ೧೫:೫೫) ಎಂಬ ಜಯಗೀತೆ
ಘಂಟಾಘೋಷವಾಗಿ ಮೊಳಗಿದೆ. ಕ್ರಿಸ್ತಯೇಸು ತಾವು ನುಡಿದಂತೆ ಪುನರುತ್ಥಾನರಾಗಿದ್ದಾರೆ ನಮ್ಮೆಲ್ಲರಿಗೂ
ಜೀವದಾತರಾಗಿದ್ದಾರೆ.
ಕ್ರಿಸ್ತನ
ಪುನರುತ್ಥಾನ ಒಂದು ಅನುಭವ ಎಂಬುದನ್ನು ಮರೆಯಬಾರದು. ಪುನರುತ್ಥಾನರಾದ ಕ್ರಿಸ್ತಯೇಸು ತಮ್ಮ ಪ್ರೇಷಿತರಲ್ಲಿ
ಒಬ್ಬೊಬ್ಬರನ್ನೂ ವಿಭಿನ್ನ ರೀತಿಯಲ್ಲಿ ಈ ಅಪೂರ್ವ ಅನುಭವಕ್ಕೊಳಪಡಿಸಿದರು. ಪೇತ್ರನಿಗೆ, ತೋಮನಿಗೆ,
ಎಮ್ಮಾವುಸ್ ಗ್ರಾಮದ ಹಾದಿಯಲ್ಲಿ ನಡೆದು ಹೋಗುತ್ತಿದ್ದ ಶಿಷ್ಯರಿಗೆ, ಹೀಗೆ ಒಬ್ಬೊಬ್ಬರನ್ನೂ ಒಂದೊಂದು
ವಿಧದಲ್ಲಿ ಸಂಧಿಸಿ ತಮ್ಮ ಪುನರುತ್ಥಾನದ ಸತ್ಯ ಸಂದೇಶವನ್ನು ಅವರ ಹೃದಯಗಳಿಗೆ ದಾಟಿಸಿದರು. ಶಿಲುಬೆಯ
ಮೇಲೆ ಜಡಿಯಲ್ಪಟ್ಟಿದ್ದ ತಮ್ಮ ಕೈಕಾಲುಗಳ ಗಾಯವನ್ನು, ಈಟಿಯಿಂದ ತಿವಿಯಲ್ಪಟ್ಟಿದ್ದ ತಮ್ಮ ಪಕ್ಕೆಯನ್ನು
ಅವರ ಮುಂದೆ ತೆರೆದಿಟ್ಟು ’ಅವಿಶ್ವಾಸಿಗಳಾಗಿರಬೇಡಿ ವಿಶ್ವಾಸಿಸಿರಿ’ ಎಂದರು. ವಿಶ್ವದ ಮೂಲೆ ಮೂಲೆಗೂ
ಸಾಗಿ ಜನರ ಹೃದಯಗಳಲ್ಲಿ ವಿಶ್ವಾಸದ ಬೆಳಕನ್ನು ಹೊತ್ತಿಸಬೇಕಿದ್ದ ಅವರ ಹೃದಯಗಳನ್ನು ಸ್ವತಃ ತಾವೇ ಬೆಳಗಿಸಿದರು.
ಅತ್ಯಂತ ಪ್ರಭಾವಶಾಲಿಯಾದ ಇಂತಹ ಅನುಭವದಿಂದಲೇ ಪ್ರೇಷಿತರು ಮಾನವ ಕಲ್ಪನೆಗೂ ಮೀರಿದ ಪುನರುತ್ಥಾನದ
ರಹಸ್ಯವನ್ನು ವಿಶ್ವದೆಲ್ಲೆಡೆ ಸಾರಿದರು.
ಪುನರುತ್ಥಾನ
ಒಂದು ಐತಿಹಾಸಿಕ ಘಟನೆ ಮಾತ್ರವಲ್ಲ, ಕೇವಲ ಅದೊಂದು ಘಟನೆ ಮಾತ್ರವೇ ಆಗಿದ್ದರೆ ಕಾಲಗರ್ಭದಲ್ಲಿ ಹುದುಗಿಹೋಗುತ್ತಿತ್ತು.
ಇದೊಂದು ಹೃದಯವನ್ನು ಜಾಗೃತಗೊಳಿಸುವ, ಬದುಕನ್ನು ಪರಿವರ್ತಿಸುವ ಗಾಢವಾದ ಅನುಭವವಾಗಿರುವುದರಿಂದ ಒಬ್ಬರಿಂದ
ಒಬ್ಬರಿಗೆ ಹರಡುತ್ತಾ ಸಾಗಿದೆ. ನಮ್ಮ ವೈಯಕ್ತಿಕ ಜೀವನದ ಸನ್ನಿವೇಶಗಳಲ್ಲೂ ಪುನರುತ್ಥಾನ ನಮ್ಮಲ್ಲಿ
ಭರವಸೆಯನ್ನು ತುಂಬುತ್ತವೆ, ಸಂದಿಗ್ಧತೆಯ ಸಮಯದಲ್ಲಿ ನಮ್ಮ ಬದುಕಿಗೆ ಮಾರ್ಗ ಸೂಚಿಯಾಗುತ್ತದೆ. ಇದೇ
ನಂಬಿಕೆಯಲ್ಲಿ ಕ್ರಿಸ್ತಾನುಭವಕ್ಕೆ ನಮ್ಮ ಹೃದಯಗಳನ್ನು ತೆರೆಯೋಣ.
ಫಾದರ್ ಪೀಟರ್ ಚಿನ್ನಪ್ಪ
No comments:
Post a Comment