ಹಾಡು
ಪ್ರಾರಂಭ
ಪ್ರಾರ್ಥನೆ:
ದೀಕ್ಷಾಸ್ನಾನದಲ್ಲಿ ನೀವು ಅವರೊಂದಿಗೆ
ಸಮಾಧಿಯಾದಿರಿ. ಕ್ರಿಸ್ತ ಯೇಸುವನ್ನು ಮೃತರ ಮಧ್ಯದಿಂದ ದೇವರು ತಾವೇ ಎಬ್ಬಿಸಿದರು. ಈ ದೇವರ
ಶಕ್ತಿಯಲ್ಲಿ ನೀವು ವಿಶ್ವಾಸವಿಟ್ಟಿರುವುದರಿಂದ ದೀಕ್ಷಾಸ್ನಾನದಲ್ಲಿಯೇ ನಿಮ್ಮನ್ನು ಕ್ರಿಸ್ತಯೇಸುವಿನೊಂದಿಗೆ
ಎಬ್ಬಿಸಲಾಯಿತು. (ಕೊಲೊಸ್ಸೆಯವರಿಗೆ ಬರೆದ ಪತ್ರ 2:12)
ಉತ್ತರ:
ಅವರೂ ನಿಜವಾಗಿಯೂ ಪುನರುತ್ಥಾನಗೊಂಡಿದ್ದಾರೆ ಅಲ್ಲೆಲೂಯ
ಪೀಠಿಕೆ
ಯೋವಾನ 2: 19 “ಈ ದೇವಾಲಯವನ್ನು
ಕೆಡವಿ ಬಿಡಿ, ಮೂರು ದಿನದಲ್ಲಿ ಅದನ್ನು ಪುನಹ ಎಬ್ಬಿಸುವೆನು”. ಪ್ರಭು ಯೇಸು ಹೇಳಿದ್ದು ತಮ್ಮ
ದೇಹವೆಂಬ ದೇಗುಲವನ್ನು ಕುರಿತು. ಅಂತೆಯೇ ಸತ್ತ ನಂತರ ಮೂರನೇಯ ದಿನ ಪುನರುತ್ಥಾನ ಹೊಂದಿದರು.
ಇದುವೇ ನಮ್ಮ ವಿಶ್ವಾಸ, ಇದುವೇ ನಮ್ಮ ಕ್ರೈಸ್ತ ವಿಶ್ವಾಸದ ತಳಹದಿ. ಪ್ರಭುಕ್ರಿಸ್ತರು
ಪುನರುತ್ಥಾನ ಗೊಂಡಿದ್ದಾರೆ ಆದ್ದರಿಂದ ಎಲ್ಲರೂ ಸಂಭ್ರಮಿಸೋಣ . ಅವರನ್ನು ಈ ಪವಿತ್ರ
ಸಂಸ್ಕಾರದಲ್ಲಿ ಸ್ಮರಿಸಿಕೊಂಡು ಬಾಳಲು ಈ ಆರಾಧನೆ ನಮಗೆ ಸಹಕಾರಿಯಾಗಲಿ. ಕ್ಷಣಕಾಲ ನಮ್ಮ
ಕಣ್ಣುಗಳನ್ನು ಮುಚ್ಚಿ ರೊಟ್ಟಿಯ ರೂಪದಲ್ಲಿ ಇರುವ ಪ್ರಭು ಕ್ರಿಸ್ತರನ್ನು ಆರಾಧಿಸೋಣ.
ಶ್ಲೋಕ
ಎಲ್ಲರು
: ಪ್ರಭುವೇ ನಿಯೋಜಿಸಿದ ದಿನವಿದು / ಹರ್ಷಿಸಿ ಆನಂದಿಸೋಣ ಇಂದು //
ಜಯಘೋಷ, ಹರ್ಷಸುನಾದ ಸಜ್ಜನರ
ಬಿಡಾರದಿಂದ /ಪರಾಕ್ರಮ, ಪ್ರದರ್ಶನ ಪ್ರಭುವಿನ ಬಲಗೈಯಿಂದ //
ವಿಜಯಸಾಧನ ಪ್ರಭುವಿನಾ ಬಲಗೈಯಿಂದ
/ಪರಾಕ್ರಮ, ಪ್ರದರ್ಶನವೂ ಅದರಿಂದ //
ಎಲ್ಲರು
: ಪ್ರಭುವೇ ನಿಯೋಜಿಸಿದ ದಿನವಿದು / ಹರ್ಷಿಸಿ ಆನಂದಿಸೋಣ ಇಂದು //
ಸಾಯೆನು, ಜೀವದಿಂದಿರುವೆನು ನಾನು /
ಪ್ರಭುವಿನ ಕಾರ್‍ಯಗಳನು ಸಾರುವೆನು //
ಗುರಿಪಡಿಸಿಹನು ಎನ್ನನು ಪ್ರಭು ಕಠಿಣ
ಶಿಕ್ಷೆಗೆ / ಆದರೂ ಗುರಿಮಾಡಲಿಲ್ಲ ಎನ್ನನು ಮರಣಕೆ //
ಎಲ್ಲರು
: ಪ್ರಭುವೇ ನಿಯೋಜಿಸಿದ ದಿನವಿದು / ಹರ್ಷಿಸಿ
ಆನಂದಿಸೋಣ ಇಂದು //
ತೆರೆಯಿರಿ ಎನಗೆ ನೀತಿದ್ವಾರಗಳನು /
ಒಳನುಗ್ಗಿ ಹೊಗಳುವೆನು ಪ್ರಭುವನು //
ಇದುವೇ ದ್ವಾರ ಪ್ರಭುವಿನ ಮಂದಿರಕೆ
/ಇದುವೇ ಪ್ರವೇಶಮಾರ್ಗ ಸಜ್ಜನರಿಗೆ //
ಎಲ್ಲರು
: ಪ್ರಭುವೇ ನಿಯೋಜಿಸಿದ ದಿನವಿದು / ಹರ್ಷಿಸಿ ಆನಂದಿಸೋಣ ಇಂದು //
ಸದುತ್ತರ ಪಾಲಿಸಿದ ಪ್ರಭೂ, ನಿನಗೆ
ವಂದನೆ / ಉದ್ಧಾರ ಮಾಡಿದೆ, ನಿನಗೆ ಕೃತಜ್ಞತಾವಂದನೆ //
ಮನೆಕಟ್ಟುವವರು ಮೂಲೆಗೆಸೆದ ಕಲ್ಲು /
ಆಯಿತು ನೋಡು, ಮುಖ್ಯವಾದ ಮೂಲೆಗಲ್ಲು //
ಎಲ್ಲರು
: ಪ್ರಭುವೇ ನಿಯೋಜಿಸಿದ ದಿನವಿದು / ಹರ್ಷಿಸಿ ಆನಂದಿಸೋಣ ಇಂದು //
ಪ್ರಭುವಿನಿಂದಲೆ ಆದ ಈ ಕಾರ್ಯ /ನಮ್ಮ
ಕಣ್ಣಿಗೆ ಅದೆಂತಹ ಆಶ್ಚರ್ಯ! //ಪ್ರಭುವೇ ನಿಯೋಜಿಸಿದ ದಿನವಿದು /ಹರ್ಷಿಸಿ ಆನಂದಿಸೋಣ ಇಂದು //
ಎಲ್ಲರು
: ಪ್ರಭುವೇ ನಿಯೋಜಿಸಿದ ದಿನವಿದು / ಹರ್ಷಿಸಿ ಆನಂದಿಸೋಣ ಇಂದು //
----
*
ಶಿಲುಬೆಗೇರಿಸಿದ ಜನರನ್ನೇ
ಕ್ಷಮಿಸಿದ ಯೇಸುವೆ!
- ನಮಗೆ ದಯೆತೋರಿ
*ಶಿಲುಬೆಯ ಮೇಲಿನಿಂದ ಕಳ್ಳನನ್ನು ಕ್ಷಮಿಸಿದ ಯೇಸುವೆ! - ನಮಗೆ ದಯೆತೋರಿ
* ನಮ್ಮೆಲ್ಲರನ್ನೂ ಪ್ರೀತಿಸಿ, ಕ್ಷಮಿಸುವ ಯೇಸುವೆ! - ನಮಗೆ ದಯೆತೋರಿ
* ನಮ್ಮನ್ನು ಕೈಬಿಡದೇ ಕಷ್ಟ ಗಳಲ್ಲಿ ಮುನ್ನಡೆಸುವ ಯೇಸುವೆ! - ನಮಗೆ ದಯೆತೋರಿ
* ಪುನರುತ್ಥಾನದ ಮೂಲಕ ಪಾಪವನ್ನು ವಿನಾಶ ಮಾಡಿದ ಯೇಸುವೆ! - ನಮಗೆ ದಯೆತೋರಿ
* ಪುನರುತ್ಥಾನದ ನಂತರ ಎಲ್ಲಾ ಶಿಷ್ಯರಿಗೂ ದರ್ಶನವನ್ನು ನೀಡಿದ ಯೇಸುವೆ! - ನಮಗೆ ದಯೆತೋರಿ
* ಪುನರುತ್ಥಾನದ ಮೂಲಕ ಸಾವನ್ನು ಜಯಿಸಿದ ಯೇಸುವೆ! - ನಮಗೆ ದಯೆತೋರಿ
* ಪುನರುತ್ಥಾನದ ಮೂಲಕ ನಿತ್ಯಜೀವವನ್ನು ದಯಪಾಲಿಸಿದ ಯೇಸುವೆ! - ನಮಗೆ ದಯೆತೋರಿ
*ಶಿಲುಬೆಯ ಮೇಲಿನಿಂದ ಕಳ್ಳನನ್ನು ಕ್ಷಮಿಸಿದ ಯೇಸುವೆ! - ನಮಗೆ ದಯೆತೋರಿ
* ನಮ್ಮೆಲ್ಲರನ್ನೂ ಪ್ರೀತಿಸಿ, ಕ್ಷಮಿಸುವ ಯೇಸುವೆ! - ನಮಗೆ ದಯೆತೋರಿ
* ನಮ್ಮನ್ನು ಕೈಬಿಡದೇ ಕಷ್ಟ ಗಳಲ್ಲಿ ಮುನ್ನಡೆಸುವ ಯೇಸುವೆ! - ನಮಗೆ ದಯೆತೋರಿ
* ಪುನರುತ್ಥಾನದ ಮೂಲಕ ಪಾಪವನ್ನು ವಿನಾಶ ಮಾಡಿದ ಯೇಸುವೆ! - ನಮಗೆ ದಯೆತೋರಿ
* ಪುನರುತ್ಥಾನದ ನಂತರ ಎಲ್ಲಾ ಶಿಷ್ಯರಿಗೂ ದರ್ಶನವನ್ನು ನೀಡಿದ ಯೇಸುವೆ! - ನಮಗೆ ದಯೆತೋರಿ
* ಪುನರುತ್ಥಾನದ ಮೂಲಕ ಸಾವನ್ನು ಜಯಿಸಿದ ಯೇಸುವೆ! - ನಮಗೆ ದಯೆತೋರಿ
* ಪುನರುತ್ಥಾನದ ಮೂಲಕ ನಿತ್ಯಜೀವವನ್ನು ದಯಪಾಲಿಸಿದ ಯೇಸುವೆ! - ನಮಗೆ ದಯೆತೋರಿ
ಶುಭಸಂದೇಶದ ವಾಚನ: (ಯೊವ್ವಾನ 11:25)
ಚಿಂತನೆ:
ಕ್ರಿಸ್ತನ
ಪುನರುತ್ಥಾನ ಒಂದು ಕಲ್ಪನೆಯಲ್ಲ. ಅದು ಕಟ್ಟು
ಕಥೆಯೂ ಅಲ್ಲ. ಅದು ನಮ್ಮ ಗಾಢವಾದ ವಿಶ್ವಾಸ. ಯೇಸುಸ್ವಾಮಿ ಸತ್ತ ಮೂರನೆಯ ದಿನ ಪುನರುತ್ಥಾನ
ಹೊಂದಿದವರು. ಅವರಲ್ಲಿ ವಿಶ್ವಾಸವಿಟ್ಟು ಸತ್ತವರು ಪುನ: ಜೀವಂತ ಎದ್ದು ಬರುವರು ಎಂಬ ಅಚಲ ನಂಬಿಕೆ
ನಮ್ಮದು. ಯೇಸುವಿನ ಪುನರುತ್ಥಾನವೆಂಬುವುದು ಅತ್ಮವು
ಭೌತಿಕ ನಿಧನದ ನಂತರ ಹೊಸ ದೇಹದಲ್ಲಿ ಹೊಸ ಜೀವನವನ್ನು ಕಂಡುಕೊಳ್ಳುವ ಧಾರ್ಮಿಕ ಅಥವಾ
ತತ್ವಶಾಸ್ತ್ರೀಯ ಸಿದ್ಧಾಂತವಾದ ಪುನರ್ಜನ್ಮವಲ್ಲ. ಅದು ಲಾಸರನಂತೆ ಪುನರುಜ್ಜೀವನ ಪಡೆದು ಮತ್ತೊಮ್ಮೆ
ಸತ್ತ ಪುನರ್ಜೀವವಲ್ಲ. ಯೇಸುವಿನ ಪುನರುತ್ಥಾನಕ್ಕೂ ಲಾಜರಸನನ್ನು ಪುನಃ ಜೀವಂತಗೊಳಿಸಿದುದಕ್ಕೂ
ವ್ಯತ್ಯಾಸವಿದೆ. ಲಾಜರಸನ ದೇಹ ಸಾವಿಗೀಡಾಗುವಂತಹದು. ಆದರೆ ಸತ್ತವರ ಮಧ್ಯದಿಂದ ಪುನಃ
ಜೀವಂತಗೊಳಿಸಲ್ಪಟ್ಟ ಕ್ರಿಸ್ತ ಮತ್ತೆಂದೂ ಸಾಯುವವನಲ್ಲ ಎಂದು ನಮಗೆ ತಿಳಿದಿದೆ. ಸಾವಿಗೆ ಅವನ
ಮೇಲೆ ಇನ್ನು ಅಧಿಕಾರವಿಲ್ಲ (ರೋಮನ್ಸ್). ಈ ಪುನರುತ್ಥಾನಕ್ಕೆ ಪ್ರಮುಖ ಆಧಾರವೇ ಯೇಸುವಿನ
ಪುನರುತ್ಥಾನ. ಪುನರುತ್ಥಾನವೆಂಬುವುದು ನಮ್ಮ ನಶ್ವರತೆಯನ್ನು ಕಳೆದುಕೊಂಡು ಮಹಿಮಾ ರೂಪವನ್ನು
ಪಡೆಯುವುದು, ಸ್ವರ್ಗದ ಜೀವವನ್ನು ಪಡೆಯುವುದು ಮತ್ತು ಬದುಕಿನ ಪರಿಪೂರ್ಣತೆಯನ್ನು
ದೊರಕಿಸಿಕೊಳ್ಳುವುದು. ಆದ್ದರಿಂದ ಪುನರುತ್ಥಾನವೆಂಬುವುದು ಕ್ರೈಸ್ತ ವಿಶ್ವಾಸ, ವಿಶ್ವಾಸದ
ಬುನಾದಿ, ಧರ್ಮದ ಜೀವಾಳ.
ಪುನರುತ್ಥಾನವನ್ನು ಸಮಾಜಿಕ
ದೃಷ್ಟಿಯಿಂದ ಕಂಡಾಗ, ಅದು ಒಂದು ಸತ್ಯದ ಗೆಲ್ಲುವು, ಸಮಾಜಿಕ ಕಾಳಜಿಯ ಮುಂದುವರಿಕೆ. ಕ್ರಿಸ್ತ
ಅನ್ಯಾಯದ ವಿರುದ್ಧ ಸಿಡಿದೆದ್ದು, ಬಡವರನ್ನು ದುರ್ಬಲರನ್ನು ಶೋಷಿಸುತ್ತಿದ್ದ ಧಾರ್ಮಿಕ ಹಾಗು
ರಾಜಕೀಯ ಮುಖಂಡರನ್ನು ಖಂಡಿಸಿದ. ಕೊನೆಗೆ ಮುಖಂಡರ ಕ್ರೂರತೆಗೆ ಶಿಲುಬೆಯಲ್ಲಿ ಬಲಿಯಾದರೂ, ಅವನು
ಸಾಯಲಿಲ್ಲ. ಸಾವಿರಾರು ಜನರಲ್ಲಿ ನ್ಯಾಯದ ಧ್ವನಿಯಾದ, ಸಮಾನತೆಯ ಬೀಜಗಳಾಗಿ ಪುಟ್ಟಿದೆದ್ದ. 2000
ಸಾವಿರ ವರ್ಷಗಳಾದರೂ ಸಾವಿರಾರು ಮಾನವೀಯತೆಯ ಹೃದಯಗಳಲ್ಲಿ ನ್ಯಾಯದ ಮಿಡಿತನಾಗಿರುವ ಕ್ರಿಸ್ತ
ನಮ್ಮಲ್ಲೆರ ಜೀವಂತ ಕ್ರಿಸ್ತ.
ವೈಯಕ್ತಿವಾಗಿ ಪುನರುತ್ಥಾ ನ
ನಮ್ಮಲ್ಲಿ ಹೊಸತನ ತರುವ ಹಬ್ಬ. ಹತಾಶೆಗೊಂಡಾಗ ಆಶಾಕಿರಣವಾಗುವ ಹಬ್ಬ. ಕಷ್ಟ ಬಂದಾಗ ಧೈರ್ಯದಿಂದ
ಎದುರಿಸಲು ಭರವಸೆಯನ್ನು ತುಂಬಿಸುವಂತಹ ಹಬ್ಬ.
ಪುನರುತ್ಥಾನ ಕೇವಲ ಒಂದು ಆಚರಣೆಯಾಗದೆ ಕಲಿಕೆಯ ಆದರ್ಶವಾಗಲಿ, ಈಗೆ ಪುನರುತ್ಥಾನ
ಆದರ್ಶವಾದಾಗ ಪುನರುತ್ಥಾನಗೊಂಡ ಕ್ರಿಸ್ತ ನಮ್ಮೊಳಗೆ ಹೊಸಮುಖ, ಹೊಸಜೀವ, ಹೊಸ ಉತ್ಸಾಹ ತುಂಬುವರು.
ಇದೇ ನಿಜವಾದ ಪುನರುತ್ಥಾನ. ಇದನ್ನೆ ಕ್ರಿಸ್ತ ಸಾಧಿಸಿದ್ದು.
ಪ್ರಾರ್ಥನೆಗಳು:
1. ಕ್ರಿಸ್ತನ ಪುನರುತ್ಥಾನ ನಮ್ಮ
ಕಲ್ಪಿತ ಸಿದ್ಧಾಂತವಲ್ಲ. ಅದು ಕ್ರೈಸ್ತ ಧರ್ಮದ ವಿಶ್ವಾಸದ ಸಾರವೆಂಬ ಸ್ವಷ್ಟತೆ, ಅನುಭವ
ನಮಗಾಗಲೆಂದು ಪ್ರಾರ್ಥಿಸೋಣ
ಉತ್ತರ:
ಪುನರುತ್ಥಾನಿ ಪ್ರಭು ಯೇಸುವೇ ನಮ್ಮ ಪ್ರಾರ್ಥನೆಯನ್ನು ಆಲಿಸಿರಿ
2. ಪುನರುತ್ಥಾಕ್ಕೆ ನಿಜವಾದ ಆಧಾರ ಯೇಸುಕ್ರಿಸ್ತ.
ಕ್ರಿಸ್ತರಲ್ಲಿ ವಿಶ್ವಾಸವಿಟ್ಟು ನಾವು ಕೂಡ ಕ್ರಿಸ್ತನಂತೆ ಬಾಳಿ ಅವರ ಪುನರುತ್ಥಾನದಲ್ಲಿ
ಭಾಗಿಯಾಗುವ ಸೌಭಾಗ್ಯವು ನಮಗೆ ಸಿಗಲೆಂದು ಪ್ರಾರ್ಥಿಸೋಣ
ಉತ್ತರ:
ಪುನರುತ್ಥಾನಿ ಪ್ರಭು ಯೇಸುವೇ ನಮ್ಮ ಪ್ರಾರ್ಥನೆಯನ್ನು ಆಲಿಸಿರಿ
3. ಸತ್ಯದ ಜೀವನ ನಡೆಸಿದಾಗ ನಾವು ಕೂಡ
ಸತ್ಯದ ಬೀಜಗಳಾಗಿ ಅಮರತ್ವವನ್ನು ಪಡೆಯುತ್ತೇವೆ ಎಂಬ ನಂಬಿಕೆ ನಮ್ಮಲ್ಲಿ ದೃಢವಾಗಲೆಂದು
ಪ್ರಾರ್ಥಿಸೋಣ
ಉತ್ತರ:
ಪುನರುತ್ಥಾನಿ ಪ್ರಭು ಯೇಸುವೇ ನಮ್ಮ ಪ್ರಾರ್ಥನೆಯನ್ನು ಆಲಿಸಿರಿ
4. ಬದುಕಲಿ ನೊಂದು ಬದುಕುವ ಆಸೆಯನ್ನೇ
ಕಳೆದುಕೊಂಡಗ ಕ್ರಿಸ್ತನ ಪುನರುತ್ಥಾನವು ನಮಗೆ ಹೊಸ ಉತ್ಸಾಹ, ಅರ್ಥವನ್ನು ನೀಡುವ ಆದರ್ಶವಾಗಲೆಂದು
ಪ್ರಾರ್ಥಿಸೋಣ
ಉತ್ತರ:
ಪುನರುತ್ಥಾನಿ ಪ್ರಭು ಯೇಸುವೇ ನಮ್ಮ ಪ್ರಾರ್ಥನೆಯನ್ನು ಆಲಿಸಿರಿ
ಅಂತಿಮ
ಪ್ರಾರ್ಥನೆ
ಪ್ರಭುವಿನ
ಪುನರುತ್ಥಾನದ ಮಹಿಮೆಯಿಂದ ಬೆಳಗಿಸುವ ದೇವರೇ, ನಮ್ಮ ವಿಶ್ವಾಸವನ್ನು ದೃಢಕರಿಸಿ, ನಾವು
ಆತ್ಮದಲ್ಲೂ, ಶರೀರದಲ್ಲೂ ನವೀಕರಣ ಹೊಂದಿ ನಿಮಗೆ ತದೇಕ ಚಿತ್ತದಿಂದ ಸೇವೆ ಸಲ್ಲಿಸುವಂತೆ
ಅನುಗ್ರಹಿಸಿರಿ. ಈತನಕ ನಾವು
ಮಾಡಿದ ಈ
ಆರಾಧನೆಯು ನಮ್ಮ
ಬರಲಿರುವ ದಿನಗಳಿಗೆ
ಮಾರ್ಗದರ್ಶನವನ್ನು ನೀಡಲಿ.
ನಮ್ಮ ಪ್ರಭುವೂ ನಿಮ್ಮ ಪುತ್ರರೂ ಆಗಿರುವ ಯೇಸು ಕ್ರಿಸ್ತರ ಮುಖಾಂತರ
ನಿಮ್ಮನ್ನು ಪ್ರಾರ್ಥಿಸುತ್ತೇವೆ. ಆಮೆನ್
No comments:
Post a Comment