ಸುವಾರ್ತಾ ಪ್ರಸಾರದ ಉದ್ದೇಶ: ಯುವಜನರು, ವಿಶೇಷವಾಗಿ ಲ್ಯಾಟಿನ್ ಅಮೇರಿಕಾದ ಯುವಜನರು ಪೂಜ್ಯ ಕನ್ಯಾ ಮರಿಯಮ್ಮನವರ ಆದರ್ಶವನ್ನು ಅನುಸರಿಸುತ್ತಾ ಪ್ರಭು ಯೇಸುವಿನ ಕರೆಗೆ ಓಗೊಟ್ಟು ಸುವಾರ್ತೆಯ ಆನಂದವನ್ನು ಜಗತ್ತಿನಾದ್ಯಂತ ಪಸರಿಸುವ ಕ್ಷಮತೆಯನ್ನು ಹೊಂದುವುದು.
27 ಜನವರಿ 2019
ಭಾನುವಾರ/ಹಸಿರು/ ಸಾಧಾರಣ ಕಾಲದ ಮೂರನೇ - 3 ಭಾನುವಾರ
1ನೇ ವಾಚನ - ನೆಹೆ 8: 2-6, 8-1೦ ಕೀರ್ತನೆ - 19: 7-9, 14
2ನೇ ವಾಚನ - 1ಕೊರಿಂಥ 12: 12-3೦ ಅಥವಾ 12: 12-14, 27
ಶುಭಸಂದೇಶ - ಲೂಕ 1: 1-4,4: 14-21
ಸಂತ ಆಂಜೆಲ ಮೆರೀಚಿ (ಕನ್ಯೆ) ಸ್ಮರಣೆ ಇರುವುದಿಲ್ಲ.
ವಾಚನಗಳು
ಮೊದಲನೇ ವಾಚನ
2ಯಾಜಕ ಎಜ್ರನು, ಗ್ರಹಿಸಿಕೊಳ್ಳಲು ಶಕ್ತರಾದ ಸ್ತ್ರೀ ಪುರುಷರು ನೆರೆದಿದ್ದ ಸಮೂಹದವರ ಮುಂದೆ, ಏಳನೆಯ ತಿಂಗಳಿನ ಪ್ರಥಮ ದಿನದಲ್ಲಿ, ಆ ಧರ್ಮಶಾಸ್ತ್ರವನ್ನು ತಂದು ಬೆಳಗಿನಿಂದ ಮಧ್ಯಾಹ್ನದವರೆಗೂ ಓದಿದನು. 3ಆ ನೀರು ಬಾಗಿಲಿನ ಮುಂದಣ ಬಯಲಿನಲ್ಲಿ ಕೂಡಿ ಬಂದಿದ್ದ ಸ್ತ್ರೀಪುರುಷರಲ್ಲಿ ಗ್ರಹಿಸಲು ಶಕ್ತರಾದವರೆಲ್ಲರೂ ಧರ್ಮಶಾಸ್ತ್ರ ಪಾರಾಯಣವನ್ನು ಆಲಿಸುತ್ತಿದ್ದರು. 4ಧರ್ಮೋಪದೇಶಕ ಎಜ್ರನು ಪಾರಾಯಣಕ್ಕಾಗಿ ಮಾಡಲಾಗಿದ್ದ ಮರದ ಪೀಠದ ಮೇಲೆ ನಿಂತನು. ಅವನ ಬಲಗಡೆಯಲ್ಲಿ ಮತ್ತಿತ್ಯ, ಶೆಮ, ಅನಾಯ, ಊರೀಯ, ಹಿಲ್ಕೀಯ, ಮಾಸೇಯ ಎಂಬುವರು ಇದ್ದರು. ಎಡಗಡೆಯಲ್ಲಿ ಪೆದಾಯ, ವಿೂಷಾಯೇಲ್, ಮಲ್ಕೀಯ, ಹಾಷುಮ್, ಹಷ್ಬದ್ದಾನ, ಜೆಕರ್ಯ, ಮೆಷುಲ್ಲಾಮ್ ಎಂಬುವರು ನಿಂತಿದ್ದರು. 5ಜನ ಸಮೂಹಕ್ಕಿಂತಲೂ ಎತ್ತರವಾದ ಸ್ಥಳದಲ್ಲಿ ನಿಂತಿದ್ದ ಎಜ್ರನು ಜನರ ಸಮಕ್ಷಮದಲ್ಲಿ ಗ್ರಂಥವನ್ನು ತೆರೆದ ಕೂಡಲೆ, ಎಲ್ಲರು ಎದ್ದುನಿಂತರು.
6ಎಜ್ರನು ಪರಾತ್ಪರ ದೇವರಾದ ಸರ್ವೇಶ್ವರನನ್ನು ಸ್ತುತಿಸಿದಾಗ ಸರ್ವಜನರೂ ತಮ್ಮ ಕೈಗಳನ್ನೆತ್ತಿ ‘ಆಮೆನ್, ಆಮೆನ್’ ಎಂದು ಹೇಳಿ ನೆಲದ ಮಟ್ಟಿಗೂ ತಲೆಬಾಗಿ ಸರ್ವೇಶ್ವರನನ್ನು ಆರಾಧಿಸಿದರು. 8ಜನರು ಎದ್ದುನಿಂತನಂತರ ಅವರು ದೇವರ ಧರ್ಮಶಾಸ್ತ್ರವನ್ನು ಸ್ಪಷ್ಟವಾಗಿ ಓದುತ್ತಾ ಅದರ ತಾತ್ಪರ್ಯವನ್ನು ವಿವರಿಸಿದರು. ಜನರು ಚೆನ್ನಾಗಿ ಗ್ರಹಿಸಿಕೊಂಡರು. 9ಜನರೆಲ್ಲರು ಧರ್ಮೋಪದೇಶದ ವಾಕ್ಯಗಳನ್ನು ಕೇಳುತ್ತಾ ಕಣ್ಣೀರಿಡುತ್ತಿದ್ದರು. ರಾಜ್ಯಪಾಲ ನೆಹೆವಿೂಯನು, ಧರ್ಮೋಪದೇಶ ಮಾಡುವ ಯಾಜಕ ಎಜ್ರನು ಹಾಗು ಜನರನ್ನು ಸಂಬೋಧಿಸುತ್ತಿದ್ದ ಲೇವಿಯರು ಜನರಿಗೆ, “ಈ ದಿನ ನಿಮ್ಮ ದೇವರಾದ ಸರ್ವೇಶ್ವರನಿಗೆ ಪರಿಶುದ್ಧ ದಿನ! ಆದುದರಿಂದ ನೀವು ದುಃಖಿಸುತ್ತಾ ಅಳುತ್ತಾ ಇರಬೇಡಿ,” ಎಂದು ಹೇಳಿದರು.
10ಇದಲ್ಲದೆ, ಎಜ್ರನು ಅವರಿಗೆ, “ಹೋಗಿ ಮೃಷ್ಟಾನ್ನವನ್ನೂ ಮಧುರಪಾನವನ್ನೂ ತೆಗೆದುಕೊಳ್ಳಿ; ತಮಗಾಗಿ ಏನೂ ಸಿದ್ಧಮಾಡದವರಿಗೆ ಒಂದು ಪಾಲನ್ನು ಕಳುಹಿಸಿರಿ. ಈ ದಿನ ನಮ್ಮ ಸರ್ವೇಶ್ವರನಿಗೆ ಪ್ರತಿಷ್ಠಿತದಿನ! ವ್ಯಸನಪಡಬೇಡಿ; ಸರ್ವೇಶ್ವರನ ಆನಂದವೇ ನಿಮ್ಮ ಆಶ್ರಯವಾಗಿದೆ,” ಎಂದನು.
ಕೀರ್ತನೆ
ಶ್ಲೋಕ: ಪ್ರಭೂ, ನೀವು ಹೇಳಿರುವ ಮಾತುಗಳೇ ಆತ್ಮ ಮತ್ತು ಜೀವ
8 : ಪ್ರಭುವಿನ
ನಿಯಮ ನೀತಿಬದ್ಧ; ಮನಸ್ಸಿಗದು ಒಸಗೆ /
ಪ್ರಭುವಿನ ಕಟ್ಟಳೆ ಪರಿಶುದ್ಧ; ಕಣ್ಣಿಗದು ದೀವಿಗೆ //
ಪ್ರಭುವಿನ ಕಟ್ಟಳೆ ಪರಿಶುದ್ಧ; ಕಣ್ಣಿಗದು ದೀವಿಗೆ //
9 : ಪ್ರಭುವಿನ
ಭೀತಿ ಪವಿತ್ರ; ಅದೆಂದಿಗೂ ಶಾಶ್ವತ /
ಪ್ರಭುವಿನ ತೀರ್ಪು ಯಥಾರ್ಥ; ಪರಿಪೂರ್ಣ ನ್ಯಾಯಯುತ //
ಪ್ರಭುವಿನ ತೀರ್ಪು ಯಥಾರ್ಥ; ಪರಿಪೂರ್ಣ ನ್ಯಾಯಯುತ //
10 : ಅಪೇಕ್ಷಣೀಯವಾದುವವು ಚಿನ್ನ ಅಪರಂಜಿಗಿಂತ /
ಅತಿಮಧುರವಾದುವು ಅಪ್ಪಟ ಜೇನುತುಪ್ಪಕ್ಕಿಂತ //
ಅತಿಮಧುರವಾದುವು ಅಪ್ಪಟ ಜೇನುತುಪ್ಪಕ್ಕಿಂತ //
14 : ನಿನಗೊಪ್ಪಿಗೆಯಾಗಲಿ ನನ್ನ ಬಾಯಮಾತು, /
ಹೃದಯಧ್ಯಾನ ನೀನೆನ್ನ ಪ್ರಭು, ನನಗೆ ಉದ್ಧಾರಕ, ನನಗಾಶ್ರಯ ಧಾಮ//
ಹೃದಯಧ್ಯಾನ ನೀನೆನ್ನ ಪ್ರಭು, ನನಗೆ ಉದ್ಧಾರಕ, ನನಗಾಶ್ರಯ ಧಾಮ//
ಎರಡನೇ ವಾಚನ
1ಕೊರಿಂಥ 12: 12-3೦
12ದೇಹ ಒಂದೇ; ಅಂಗಗಳು
ಹಲವು. ಆ ಅಂಗಗಳು ಅನೇಕವಿದ್ದರೂ
ಅವು ಸೇರಿ ಒಂದೇ ದೇಹವಾಗುತ್ತದೆ.
ಅಂತೆಯೇ ಕ್ರಿಸ್ತಯೇಸು. 13ಯೆಹೂದ್ಯರಾಗಿರಲಿ, ಗ್ರೀಕರಾಗಿರಲಿ, ಪರತಂತ್ರರಾಗಿರಲಿ, ಸ್ವತಂತ್ರರಾಗಿರಲಿ - ನಾವೆಲ್ಲರೂ ಒಂದೇ ದೇಹವಾಗುವಂತೆ ಒಂದೇ
ಆತ್ಮದಿಂದ ದೀಕ್ಷಾಸ್ನಾನ ಹೊಂದಿದ್ದೇವೆ. ಒಂದೇ ಆತ್ಮವನ್ನು ನಮ್ಮೆಲ್ಲರಿಗೂ
ಪಾನವಾಗಿ ಕೊಡಲಾಗಿದೆ. 14ದೇಹವು ಏಕ ಅಂಗದಿಂದ
ಅಲ್ಲ, ಅನೇಕ ಅಂಗಗಳಿಂದ ಕೂಡಿದೆ. 15ಎಂದಾದರೂ ಕಾಲು, “ನಾನು
ಕೈ ಅಲ್ಲ, ಈ ಕಾರಣ
ನಾನು ದೇಹಕ್ಕೆ ಸೇರಿಲ್ಲ,” ಎಂದು
ಹೇಳಿದ್ದಾದರೆ ಅದು ದೇಹದ ಅಂಗವಾಗಿರುವುದು
ತಪ್ಪೀತೆ? 16ಅಥವಾ ಕಿವಿ, “ನಾನು
ಕಣ್ಣಲ್ಲ, ಈ ಕಾರಣ ನಾನು
ದೇಹಕ್ಕೆ ಸೇರಿಲ್ಲ,” ಎಂದು ಹೇಳಿದ್ದಾದರೆ ಅದು
ದೇಹದ ಅಂಗವಾಗಿರುವುದು ತಪ್ಪೀತೆ?
17ದೇಹವಿಡೀ ಕಣ್ಣೇ ಆದರೆ
ಅದು ಕೇಳುವ ಬಗೆ ಹೇಗೆ?
ಅಥವಾ ಅದು ಇಡೀ ಕಿವಿಯೇ
ಆದರೆ, ಮೂಸಲು ಮೂಗು ಎಲ್ಲಿ? 18ಸದ್ಯ, ದೇವರು ತಮ್ಮ
ಚಿತ್ತಾನುಸಾರ, ಪ್ರತಿಯೊಂದು ಅಂಗವನ್ನು ಸರಿಯಾಗಿ ಜೋಡಿಸಿದ್ದಾರೆ. 19ಅವೆಲ್ಲವೂ ಒಂದೇ ಅಂಗವಾಗಿದ್ದರೆ ಆಗ
ದೇಹವೆಲ್ಲಿ? 20ಹೀಗೆ ಅಂಗಗಳು ಅನೇಕವಾಗಿದ್ದರೂ
ದೇಹ ಮಾತ್ರ ಏಕ. 21ಹೀಗಿರಲಾಗಿ, “ನಿನ್ನ ಅವಶ್ಯಕತೆ ನನಗಿಲ್ಲ,”
ಎಂದು ಕೈಗೆ, ಕಣ್ಣು ಹೇಳಲಾಗದು.
ಅಂತೆಯೇ, “ನಿನ್ನ ಅವಶ್ಯಕತೆ ನನಗಿಲ್ಲ,”
ಎಂದು ಕಾಲುಗಳಿಗೆ, ತಲೆ ಹೇಳಲಾಗದು.
22ಅಷ್ಟು ಮಾತ್ರವಲ್ಲ, ಬಲಹೀನವಾಗಿ
ತೋರುವ ಅಂಗಗಳೂ ನಮಗೆ ಬೇಕೇಬೇಕು. 23ಅಲ್ಪವೆಂದೆಣಿಸುವ ಅಂಗಗಳನ್ನು ಅಧಿಕವಾಗಿ ಮಾನ್ಯಮಾಡುತ್ತೇವೆ. ಗೋಪ್ಯವಾಗಿಡತಕ್ಕವುಗಳನ್ನು ಶೀಲದಿಂದ ಸಂರಕ್ಷಿಸುತ್ತೇವೆ. 24ಬಾಹ್ಯ ಅಂಗಗಳಿಗೆ ಇಂಥ
ಸಂರಕ್ಷಣೆ ಅಗತ್ಯವಿರುವುದಿಲ್ಲ. ದೇಹವನ್ನು ನಿರ್ಮಿಸಿದ ದೇವರು ಗೌಣವೆಂದೆಣಿಸಲಾಗುವ ಅಂಗಗಳಿಗೂ
ವಿಶೇಷ ಘನತೆಯನ್ನು ಇತ್ತಿದ್ದಾರೆ. 25ದೇಹದಲ್ಲಿ ಭಿನ್ನಭೇದವಿಲ್ಲದೆ ಅಂಗಗಳು ಒಂದಕ್ಕೊಂದರ ಹಿತವನ್ನು
ಗಮನಿಸುವಂತೆ ಮಾಡಿದ್ದಾರೆ.
26ಒಂದು ಅಂಗಕ್ಕೆ ನೋವಾದರೆ,
ಎಲ್ಲಾ ಅಂಗಗಳೂ ಅದರೊಂದಿಗೆ ನೋವನ್ನು
ಅನುಭವಿಸುತ್ತವೆ. ಒಂದು ಅಂಗಕ್ಕೆ ನಲಿವಾದರೆ,
ಮಿಕ್ಕೆಲ್ಲಾ ಅಂಗಗಳು ಅದರೊಡನೆ ಸೇರಿ
ನಲಿದಾಡುತ್ತವೆ.
27ನೀವೆಲ್ಲರೂ ಕ್ರಿಸ್ತಯೇಸುವಿನ ದೇಹ ಆಗಿದ್ದೀರಿ; ಪ್ರತಿಯೊಬ್ಬನೂ
ಈ ದೇಹದ ಅಂಗವಾಗಿದ್ದಾನೆ. 28ದೇವರು ತಮ್ಮ ಸಭೆಯಲ್ಲಿ,
ಮೊದಲನೆಯದಾಗಿ ಪ್ರೇಷಿತರನ್ನು, ಎರಡನೆಯದಾಗಿ ಪ್ರವಾದಿಗಳನ್ನು, ಮೂರನೆಯದಾಗಿ ಬೋಧಕರನ್ನು ನೇಮಿಸಿದ್ದಾರೆ. ಅನಂತರ ಪವಾಡಗಳನ್ನು ಎಸಗುವವರನ್ನು,
ರೋಗಗಳನ್ನು ಗುಣಪಡಿಸುವವರನ್ನು, ಪರೋಪಕಾರಿಗಳನ್ನು, ಪರಿಪಾಲಕರನ್ನು, ಬಹುಭಾಷಾ ಪಂಡಿತರನ್ನು ನೇಮಿಸಿದ್ದಾರೆ. 29ಎಲ್ಲರೂ ಪ್ರೇಷಿತರಲ್ಲ, ಎಲ್ಲರೂ
ಪ್ರವಾದಿಗಳಲ್ಲ, ಎಲ್ಲರೂ ಬೋಧಕರಲ್ಲ, ಎಲ್ಲರೂ
ಪವಾಡಪುರುಷರಲ್ಲ, 30ಎಲ್ಲರೂ ರೋಗಗಳನ್ನು ಗುಣಪಡಿಸುವವರಲ್ಲ,
ಎಲ್ಲರೂ ಪರೋಪಕಾರಿಗಳಲ್ಲ, ಎಲ್ಲರೂ ಪರಿಪಾಲಕರಲ್ಲ, ಎಲ್ಲರೂ
ಬಹುಭಾಷಾಪಂಡಿತರಲ್ಲ, ಅಥವಾ ಎಲ್ಲರೂ ಆ
ಭಾಷೆಗಳನ್ನು ವಿವರಿಸಿ ಹೇಳುವವರಲ್ಲ.
ಶುಭಸಂದೇಶ
ಸಂತ ಲೂಕನು ಬರೆದ ಶುಭಸಂದೇಶದಿಂದ ವಾಚನ
1: 1-4, 4:
14-21
ಸನ್ಮಾನ್ಯ
ಥೆಯೊಫಿಲನೇ, ನಮ್ಮ ಮಧ್ಯೆ ನೆರವೇರಿರುವ ಘಟನೆಗಳ ವರದಿಯನ್ನು ಬರೆದಿಡಲು ಹಲವರು
ಪ್ರಯತ್ನಿಸಿದ್ದಾರೆ. 2ಪ್ರಾರಂಭದಿಂದ ಕಣ್ಣಾರೆ ಕಂಡು ಶುಭಸಂದೇಶವನ್ನು ಸಾರಿದವರಿಂದಲೇ ನಾವು ಕೇಳಿದ ಘಟನೆಗಳವು. 3ನಾನು
ಆಮೂಲಾಗ್ರವಾಗಿ ವಿಚಾರಿಸಿದ ಅವೆಲ್ಲವನ್ನು ನಿನಗೋಸ್ಕರ ಕ್ರಮಬದ್ಧವಾಗಿ ಬರೆಯುವುದು ಉಚಿತವೆಂದು
ನನಗೂ ತೋರಿತು. 4ನಿನಗೆ ಉಪದೇಶಿಸಲಾಗಿರುವ ವಿಷಯಗಳು ಸತ್ಯವಾದುವೆಂದು ಇದರಿಂದ ನಿನಗೆ ಮನದಟ್ಟಾಗುವುದು.
14ಯೇಸುಸ್ವಾಮಿ ಪವಿತ್ರಾತ್ಮ ಶಕ್ತಿಯಿಂದ ಕೂಡಿ ಗಲಿಲೇಯಕ್ಕೆ ಮರಳಿಬಂದರು. ಅವರ ವಿಷಯ
ಸುತ್ತಮುತ್ತೆಲ್ಲಾ ಹರಡಿತು. 15ಅಲ್ಲಿನ ಪ್ರಾರ್ಥನಾ ಮಂದಿರಗಳಲ್ಲಿ ಅವರು ಬೋಧಿಸುತ್ತಾ ಬಂದರು. ಎಲ್ಲರೂ ಅವರನ್ನು ಹೊಗಳುವವರೇ! 16ಯೇಸುಸ್ವಾಮಿ ತಾವು ಬೆಳೆದ ಊರಾದ ನಜರೇತಿಗೆ ಬಂದರು. ವಾಡಿಕೆಯ ಪ್ರಕಾರ ಸಬ್ಬತ್‌ದಿನ
ಪ್ರಾರ್ಥನಾಮಂದಿರಕ್ಕೆ ಹೋದರು. ಅಲ್ಲಿ ಪವಿತ್ರ ಗ್ರಂಥವನ್ನು ಓದುವುದಕ್ಕೆ ಅವರು ಎದ್ದು ನಿಂತಾಗ, 17ಪ್ರವಾದಿ ಯೆಶಾಯನ ಗ್ರಂಥದ ಸುರುಳಿಯನ್ನು ಅವರ ಕೈಗೆ ಕೊಟ್ಟರು. ಅದನ್ನು ಬಿಚ್ಚಿದಾಗ ಈ ಕೆಳಗಿನ
ವಚನಗಳು ಯೇಸುವಿನ ಕಣ್ಣಿಗೆ ಬಿದ್ದವು:
18ದೇವರಾತ್ಮ ನನ್ನ ಮೇಲಿದೆ
ದೀನದಲಿತರಿಗೆ ಶುಭಸಂದೇಶವನ್ನು
ಬೋಧಿಸಲೆಂದು
ಅವರೆನ್ನನು ಅಭಿಷೇಕಿಸಿದ್ದಾರೆ;
ಬಂಧಿತರಿಗೆ ಬಿಡುಗಡೆಯನ್ನು,
ಅಂಧರಿಗೆ ದೃಷ್ಟಿದಾನವನ್ನು ಪ್ರಕಟಿಸಲೂ
ಶೋಷಿತರಿಗೆ ಸ್ವಾತಂತ್ರ್ಯ ನೀಡಲೂ
19ದೇವರು ತಮ್ಮ ಜನತೆಯನ್ನು ಉದ್ಧರಿಸುವ
ಕಾಲ ಬಂತೆಂದು ಸಾರಲೂ ಅವರು ನನ್ನನ್ನು ಕಳುಹಿಸಿದ್ದಾರೆ.
20ಈ ವಾಕ್ಯವನ್ನು ಓದಿ, ಸುರುಳಿಯನ್ನು ಸುತ್ತಿ,
ಪ್ರಾರ್ಥನಾಮಂದಿರದ ಸೇವಕನ ಕೈಗಿತ್ತು, ಯೇಸು ಕುಳಿತುಕೊಂಡರು. ಅಲ್ಲಿದ್ದ ಎಲ್ಲರ ಕಣ್ಣುಗಳು ಅವರ
ಮೇಲೆಯೇ ನಾಟಿದ್ದವು. 21ಆಗ ಯೇಸು, ನೀವು ಈ ಪವಿತ್ರ ವಾಕ್ಯವನ್ನು ಕೇಳುತ್ತಿದ್ದ ಹಾಗೆಯೇ ಅದು ಇಂದು ನೆರವೇರಿತು, ಎಂದು
ವಿವರಿಸಲಾರಂಭಿಸಿದರು.
ಚಿಂತನೆ
ಸ್ಪಷ್ಡವಾದ ಗುರಿ ಉದ್ದೇಶಗಳು ನಮ್ಮದಾಗಿರಬೇಕು
ಯೇಸುವಿನ ಸೇವಾಕಾರ್ಯದ ಕಿರು ಸೂಚಿಯನ್ನು ಹಾಗು ಅವರ ಜೀವನದ ಉದ್ದೇಶವನ್ನು ಇಂದಿನ ಶುಭಸಂದೇಶ ಸ್ಪಷ್ಟಿಕರಿಸುತ್ತದೆ. ಚುನಾವಣೆಯ ಮುನ್ನ ರಾಜಕೀಯ ಪಕ್ಷಗಳು ಜನರನ್ನು ತಮ್ಮತ್ತ ಸೆಳೆಯಲು ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವಂತೆ ಹಾಗೂ ಒಂದು ಪುಸ್ತಕದ ಸಾರಾಂಶವನ್ನು ನಾವು ಪರಿವಿಡಿಯಲ್ಲಿ ಓದುವಂತೆ ಯೇಸು ತಾವು ಮಾಡಲಿರುವುದನ್ನು ಮುಂಚಿತವಾಗಿ ಕಿರುಸೂಚಿಯಂತೆ ಇಂದಿನ ಶುಭಸಂದೇಶದಲ್ಲಿ ತಿಳಿಸುತ್ತಾರೆ. ಯೇಸುವಿಗೆ ತಮ್ಮ ಜನನದ-ಜೀವನದ ಗುರಿ, ಉದ್ದೇಶಗಳು ಸ್ಪಷ್ಟವಾಗಿದ್ದವು. ಯೇಸುವಿಗೆ ಇದ್ದ ಸ್ಪಷ್ಟತೆ ನಮ್ಮಲ್ಲೂ ಮೂಡಬೇಕು. ಬಡವರ, ದೀನ-ದಲಿತರ, ಅನಾಥರ, ಬಂಧಿತರ, ಶೋಷಿತರ ಪರವಾಗಿ ದುಡಿಯುತ್ತಾ ದೇವರ ಸಾಮ್ರಾಜ್ಯವನ್ನು ಬೆಳೆಸುವ ಜವಾಬ್ದಾರಿ ನಮ್ಮದಾಗಿದೆ.
ಇಂದಿನ ಸಂತರು
ಸ೦ತ ಅ೦ಜೆಲ ಮೆರಿಚಿ, ಕನ್ಯೆ (1474- 1540)
ಸುಮಾರು 21 ಮಾರ್ಚ್ 1474ರಲ್ಲಿ ಅ೦ಜೆಲ ಮೆರಿಚಿ, ಉತ್ತರ ಇಟಲಿಯ ಲೇಕ್ ಗಾರ್ಡ್ ಗಡಿ ಪ್ರದೇಶದಲ್ಲಿ
ಜನಿಸಿದಳು.
ತನ್ನ
10 ನೇ
ವಯಸ್ಸಿನಲ್ಲಿ
ಪೋಷಕರನ್ನು
ಕಳೆದುಕೊ೦ಡ
ಆಕೆಯನ್ನು
ತನ್ನ
ಚಿಕ್ಕಪ್ಪನ
ಕುಟು೦ಬದವರು
ಬೆಳೆಸಿ
ಆರೈಕೆ
ಮಾಡಿದರು.
ತನ್ನ
ಎಳೆ
ವಯಸ್ಸಿನಲ್ಲಿ
ದೇವರ
ವಿಶ್ವಾಸದಲ್ಲಿ
ಪ್ರೀತಿಯಲ್ಲಿ
ಆಗಾಧ
ಪ್ರೀತಿಯಿದ್ದ
ಅ೦ಜೆಲ
– ಆದ್ಯಾತ್ಮಿಕ
ವಿಷಯಗಳನ್ನು
ಬಹಳವಾಗಿ
ಆರ್ಥೈಸಿಕೊ೦ಡು
ಭಯ-
ಭಕ್ತಿಯಿ೦ದ,
ಸ೦ಯಮವಾಗಿ
ಬೆಳೆದಳು.
ಬಾಲ್ಯದಿ೦ದಲೇ
ದೇವರ
ವಿಶ್ವಾಸ-
ಭಕ್ತಿಯಲ್ಲಿದ್ದ
ಆಕೆಗೆ,
ಪ್ರತಿದಿನ
ಪರಮ
ಪ್ರಸಾದ
ನೀಡಲಾಗುತ್ತಿತ್ತು.
ಇದು
ಆ
ಕಾಲದಲ್ಲಿ
ವಾಡಿಕೆಯಲ್ಲಿರದ
ಪದ್ದತಿಯಾಗಿತ್ತು,
ಇದು
ಅ೦ಜೆಲ
ಮೆರಿಚಿಯ
ಭಾಗ್ಯವೇ
ಆಗಿತ್ತು.
ನ೦ತರ
ಆಕೆ
ಅಸ್ಸಿಸಿಯ
ಸ೦ತ
ಫ್ರಾನ್ಸಿಸರ
ತ್ರತೀಯ
ಸಭೆಗೆ
ಸೇರಿ,
ಶ್ರೀಸಾಮಾನ್ಯರ
ಪ೦ಗಡದಲ್ಲಿದ್ದು,
ಬಡ
ಸ್ತೀ/ಕನ್ಯೆಯರ ಶಿಕ್ಷಣ ಹಾಗೂ ಅವರಲ್ಲಿ ಕ್ರೈಸ್ತ ಮೌಲ್ಯ-ವಿಷಯಗಳನ್ನು
ಕಲಿಸಲು
ತೊಡಗಿದಳು.
ಬಿಡುವಿನ
ವೇಳೆಯಲ್ಲಿ
ವೃದ್ಯಾಪ್ಯಾದಲ್ಲಿರುವ
– ರೋಗಸ್ತರ
ಆರೈಕೆ
ಪೋಷಣೆ
ಆಕೆಯ
ಜೀವನದ
ಶೈಲಿಯಾಯಿತು.
1495ರಲ್ಲಿ ಅ೦ಜೆಲಗೆ ಒ೦ದು ದೈವ ದರ್ಶನದೊ೦ದಿಗೆ,
ಒ೦ದು
ಧಾರ್ಮಿಕ
ಸಭೆಯನ್ನು
ಪ್ರಾರ೦ಭಿಸುವ
ಸ೦ದೇಶ
ಲಭಿಸಿತು.
ಅದರ೦ತೆ
ಆಕೆ
ಬಡ
ಸ್ತ್ರೀ/ಕನ್ಯೆಯರ, ಹೆಣ್ಣುಮಕ್ಕಳ
ಆರೈಕೆ,
ಪೋಷಣೆ
ಹಾಗೂ
ಕುಟು೦ಬಗಳ
ನೆರ್ಪಡುವಿಕೆಯಲ್ಲಿ
ತನ್ನ
ಸಭೆಯನ್ನು
ಸ್ಥಾಪಿಸಿದಳು.
ಅಷ್ಟರಲ್ಲಿ
ಆಕೆಯ
ವಿರೋಧಿಗಳು
ಬಹಳವಾಗಿದ್ದರು.
ಸುಮಾರು
40 ವರ್ಷಗಳ
ರಾಜಕೀಯ
ಶೋಷಣೆಯಲ್ಲಿ
ಆಕೆ
ನೊ೦ದು-ಬೆ೦ದಿದ್ದಳು.
ಆದರೂ
ದೇವಾನುಗ್ರಹ
ಹಾಗೂ
ಪವಿತ್ರಾತ್ಮನ
ಶಕ್ತಿಯಿ೦ದ
ತನ್ನ
ಗುರಿಯನ್ನು
ಸಾಧಿಸಲು
ಕಾತುರದಿ೦ದ
ದಿನಕಳೆದಳು.
1525ರಲ್ಲಿ ಪೋಪ್ ಜಗದ್ಗುರು 12 ನೇ ಕ್ಲೇಮೆ೦ಟ್,
ಆಕೆಯ
ಧರ್ಮ-ನಿಷ್ಠೆ- ಸೇವಾಕಾರ್ಯವನ್ನು
ತಿಳಿದು
ಅ೦ಜೆಲಳನ್ನು
ರೋಮ್
ಮಹಾನಗರಕ್ಕೆ
ಕರೆಸಿಕೊ೦ಡು
ಅಲ್ಲಿ
ಸ್ತ್ರೀ-ಕನ್ಯೆ-ಹೆಣ್ಣು ಮಕ್ಕಳ ಶಿಕ್ಷಣಕ್ಕೆ
ಹಾಗೂ
ಆಧ್ಯಾತ್ಮಿಕ
ಪೋಷಣೆಗೆ
ಅ೦ಜೆಲರನ್ನು
ತೊಡಗಿಸಿಕೊ೦ಡರು.
ಅಲ್ಲಿ
ಆಕೆ
ಹೆಣ್ಣು
ಮಕ್ಕಳ
– ಭವಿಷ್ಯ-
ಅವರ
ಕಲ್ಯಾಣಕ್ಕೆ
ಯೋಜನೆಗಳ
ಬಗ್ಗೆ
ಹಲವಾರು
ಕಾರ್ಯಕ್ರಮಗಳನ್ನು
ಅಳವಡಿಸಿ,
ಬಡ
ಸ್ತ್ರೀ/
ಹೆಣ್ಣು
ಮಕ್ಕಳ
ಸು೦ದರ
ಬದುಕನ್ನು
ಬಾಳಲು
ಸುಮಾರು
10 ವರ್ಷ
ನಿಸ್ವಾರ್ಥವಾಗಿ
ದುಡಿದಳು.
ಕೊನೆ,
ಬೆರ್ಸಿಕ
ಎ೦ಬಲ್ಲಿ
ಸ೦ತ
ಅರ್ಸುಲಾರ
ಸ೦ಗಡ
ಸೇರಿ
ಒ೦ದು
ಸ೦ಸ್ಥೆಯನ್ನು
ಪ್ರಾರ೦ಭಿಸಿದರು.
28 ಹೆಣ್ಣು
ಮಕ್ಕಳಿ೦ದ
ಪ್ರಾರಭಗೊ೦ಡ
ಸ೦ಘ
ದಿನದಿ೦ದ
ದಿನಕ್ಕೆ
ಅವರ
ಸ೦ಖ್ಯೆ
ಹೆಚ್ಚುತ್ತಾ
ತಮ್ಮ
ಸೇವೆಯನ್ನು
ಆಸ್ಪತ್ರೆ,
ಕಾರಾಗೃಹಗಳಿಗೂ
ತೆರಳಿ
ಅವರಿಗೆ
ಶಿಕ್ಷಣ,
ನೀತಿ
ಭೋಧನೆ
ನಡೆಸಿದಳು.
ಈ
ರೀತಿಯ
ಕ್ರಮಬದ್ಧ
ಶಾಲೆ
ನೀತಿ
ಭೋಧನೆ,
ಧರ್ಮಸಭೆಯಲ್ಲಿ
ಪ್ರಪ್ರಥಮ
ಬಾರಿಗೆ
ಆಯೋಜಿಸಿದವಳು
ಅ೦ಜೆಲ
ಎ೦ಬ
ಹೆಗ್ಗಳಿಕೆ
ಅವಳದು.
ಭವಿಷ್ಯವನ್ನು
ಊಹಿಸಿ
ತಿಳಿದು
ಶಾಲೆ
ಚಟುವಟಿಕೆ
ಹಾಗೂ
ಆಡಳಿತವನ್ನು
ರೂಪಿಸಿ,
ಅದಕ್ಕೆ
ಚಾಲನೆ
ನೀಡಿದಳು.
ಅ೦ತೆಯೇ
ಅ೦ಜೆಲ
ತನ್ನ
ಸಭೆಯ
ನೀತಿ
ನಿಯಮ,
ಕಾರ್ಯ-ಚಟುವಟಿಕೆಯನ್ನು
ಕಾಲಬದ್ಧವಾಗಿ
ಕಾಲಕ್ಕೆ
ತಕ್ಕ೦ತೆ
ಪುನರಾವರ್ತಿಸಿ,
ಜೀವಿಸಿದ
ಸ೦ತ.
ಅಲ್ಲಿಗೆ
ಆಕೆ
27 ನೇ
ಜನವರಿ
1540ರಲ್ಲಿ
ಭವ್ಯ
ಬದುಕು
ಮುಗಿಸಿ,
ಸ೦ತರ
ಪಟ್ಟಕ್ಕೇರುವ
ಬಾಗ್ಯ
24 ನೇ
ಮೇ
1807ರಲ್ಲಿ
ನೇರವೇರಿತು.
ತನ್ನ
ನಿಸ್ವಾರ್ಥ
ಸೇವೆಯಲ್ಲಿ
ಬದುಕನ್ನು
ಬೆಳ್ಳಿ
ಬ೦ಗಾರಮಯಗೊಳಿಸಿದಳು.
ಚಿತ್ರ: ಗೂಗಲ್ ಕೃಪೆ

No comments:
Post a Comment