ಸಾರ್ವಜನಿಕ ಉದ್ದೇಶ: ಮಾನವ ಸಾಗಾಣಿಕೆ, ವೇಶ್ಯಾವಾಟಿಕೆ ಹಾಗೂ ಹಿಂಸಾತ್ಮಕ ಕ್ರಿಯೆಗಳಿಂದಾಗಿ ನಿರಾಶ್ರಿತರಾದವರಿಗೆ ಆಶ್ರಯವನ್ನು ನೀಡಲು ಸರ್ವರೂ ಉದಾರತೆಯಿಂದ ಮುಂದೆ ಬರುವಂತೆ.
11 ಫೆಬ್ರವರಿ 2೦19
ಸೋಮವಾರ / ಬಿಳಿ /ಲೂರ್ದು ಮಾತೆಯ (ಸ್ಮರಣೆ)
1ನೇ ವಾಚನ - ಯೆಶಾಯ 66: 10-14
ಕೀರ್ತನೆ - ಜೂಡಿ 13: 18-19
ಶುಭಸಂದೇಶ - ಮಾರ್ಕ 6:53-56
1ನೇ ವಾಚನ - ಯೆಶಾಯ 66: 10-14
ಕೀರ್ತನೆ - ಜೂಡಿ 13: 18-19
ಶುಭಸಂದೇಶ - ಮಾರ್ಕ 6:53-56
ವಾಚನಗಳು
ಮೊದಲನೇ ವಾಚನ
ಆದಿಕಾಂಡದಿಂದ ವಾಚನ
ಆದಿಕಾಂಡ 1:1-19
1ಆದಿಯಲ್ಲಿ ದೇವರು ಪರಲೋಕ-ಭೂಲೋಕವನ್ನು ಸೃಷ್ಟಿಮಾಡಿದರು. 2ಭೂಮಿ ನಿರಾಕಾರವಾಗಿಯೂ ಬರಿದಾಗಿಯೂ ಇತ್ತು. ಆದಿ ಸಾಗರದ ಮೇಲೆ ಕಗ್ಗತ್ತಲು ಕವಿದಿತ್ತು. ದೇವರಾತ್ಮ ಜಲರಾಶಿಯ ಮೇಲೆ ಚಲಿಸುತ್ತಿತ್ತು. 3ಆಗ ದೇವರು, “ಬೆಳಕಾಗಲಿ” ಎನ್ನಲು ಬೆಳಕಾಯಿತು. 4ದೇವರ ಕಣ್ಣಿಗೆ ಅದು ಚೆನ್ನಾಗಿ ಕಂಡಿತು. ಅವರು ಬೆಳಕನ್ನೂ ಕತ್ತಲೆಯನ್ನೂ ಬೇರೆಬೇರೆ ಮಾಡಿ ಬೆಳಕಿಗೆ ಹಗಲೆಂದೂ ಕತ್ತಲೆಗೆ ಇರುಳೆಂದೂ ಹೆಸರಿಟ್ಟರು. 5ಹೀಗೆ ಬೈಗೂ ಬೆಳಗೂ ಆಗಿ ಮೊದಲನೆಯ ದಿನವಾಯಿತು. 6ಬಳಿಕ ದೇವರು, “ಜಲರಾಶಿಯ ನಡುವೆ ವಿಸ್ತಾರವಾದ ಒಂದು ಗುಮ್ಮಟವು ಉಂಟಾಗಲಿ, ಅದು ಕೆಳಗಿನ ನೀರನ್ನೂ ಮೇಲಿನ ನೀರನ್ನೂ ಬೇರೆ ಬೇರೆ ಮಾಡಲಿ,” ಎಂದರು. ಹಾಗೆಯೇ ಆಯಿತು. 7ಹೀಗೆ ದೇವರು ವಿಸ್ತಾರವಾದ ಗುಮ್ಮಟವೊಂದನ್ನು ಮಾಡಿ ಕೆಳಗಿದ್ದ ನೀರನ್ನು ಮೇಲಿದ್ದ ನೀರಿನಿಂದ ವಿಂಗಡಿಸಿದರು. 8ದೇವರು ಆ ಗುಮ್ಮಟಕ್ಕೆ “ಆಕಾಶ” ಎಂದು ಹೆಸರಿಟ್ಟರು. ಹೀಗೆ ಬೈಗೂ ಬೆಳಗೂ ಆಗಿ ಎರಡನೆಯ ದಿನ ಆಯಿತು. 9ಅನಂತರ ದೇವರು, “ಆಕಾಶದ ಕೆಳಗಿರುವ ನೀರೆಲ್ಲ ಒಂದೇ ಸ್ಥಳದಲ್ಲಿ ಕೂಡಿಕೊಳ್ಳಲಿ; ಒಣ ನೆಲವು ಕಾಣಿಸಿಕೊಳ್ಳಲಿ,” ಎಂದರು. ಹಾಗೆಯೇ ಆಯಿತು.
10ದೇವರು ಒಣನೆಲಕ್ಕೆ “ಭೂಮಿ” ಎಂದೂ ಜಲರಾಶಿಗೆ “ಸಮುದ್ರ” ಎಂದೂ ಹೆಸರಿಟ್ಟರು. ದೇವರ ಕಣ್ಣಿಗೆ ಅದೂ ಚೆನ್ನಾಗಿ ಕಂಡಿತು. 11ತರುವಾಯ ದೇವರು, “ಭೂಮಿಯಲ್ಲಿ ಸಸ್ಯಗಳನ್ನೂ - ಎಲ್ಲ ತರದ ದವಸಧಾನ್ಯ, ಹಣ್ಣು ಹಂಪಲು ಇವುಗಳನ್ನು ಬಿಡುವ ಗಿಡಮರ ಬಳ್ಳಿಗಳನ್ನೂ ಬೆಳೆಯಿಸಲಿ,” ಎಂದರು. ಅದು ಹಾಗೆಯೇ ಆಯಿತು. 12ಭೂಮಿಯಲ್ಲಿ ಸಸ್ಯಗಳು ಬೆಳೆದವು; ಎಲ್ಲ ತರದ ದವಸಧಾನ್ಯಗಳನ್ನೂ ಹಣ್ಣು ಹಂಪಲುಗಳನ್ನೂ ಬಿಡುವ ಗಿಡಮರ ಬಳ್ಳಿಗಳು ಕಾಣಿಸಿಕೊಂಡವು. ದೇವರ ಕಣ್ಣಿಗೆ ಅವು ಚೆನ್ನಾಗಿ ಕಂಡವು. 13ಹೀಗೆ ಬೈಗೂ ಬೆಳಗೂ ಆಗಿ ಮೂರನೆಯ ದಿನವಾಯಿತು.
14ಅದಾದನಂತರ ದೇವರು, “ಹಗಲು ಇರುಳುಗಳನ್ನು ಬೇರೆಬೇರೆ ಮಾಡಲು, ಋತು ಕಾಲಗಳನ್ನೂ ದಿನಸಂವತ್ಸರಗಳನ್ನೂ ಸೂಚಿಸಲು, ಹಾಗು 15ಭೂಮಿಗೆ ಬೆಳಕನ್ನೀಯಲು, ಆಕಾಶ ದೀಪಗಳು ಉಂಟಾಗಲಿ,” ಎಂದರು. ಹಾಗೆಯೇ ಆಯಿತು. 16ಹಗಲನ್ನಾಳುವುದಕ್ಕೆ ಸೂರ್ಯನನ್ನೂ ಇರುಳನ್ನಾಳುವುದಕ್ಕೆ ಚಂದ್ರನನ್ನೂ, ಹೀಗೆ ಎರಡು ದೀವಿಗೆಗಳನ್ನು ಸೃಷ್ಟಿಮಾಡಿದರು. ಅದು ಮಾತ್ರವಲ್ಲ, ನಕ್ಷತ್ರಗಳನ್ನೂ ಅವರು ಸೃಷ್ಟಿ ಮಾಡಿದರು. 17ಆ ದೀವಿಗೆಗಳನ್ನು ಆಕಾಶದಲ್ಲಿ ಇಟ್ಟು ಭೂಮಿಗೆ ಬೆಳಕನ್ನೀಯುವಂತೆ ಮಾಡಿದರು. ಹಾಗೂ 18ಹಗಲಿರುಳುಗಳನ್ನು ಆಳುವುದಕ್ಕೂ, ಬೆಳಕನ್ನೂ ಕತ್ತಲನ್ನೂ ಬೇರೆಬೇರೆ ಮಾಡುವುದಕ್ಕೂ ಅವುಗಳನ್ನು ನೇಮಿಸಿದರು. ದೇವರ ಕಣ್ಣಿಗೆ ಅದೂ ಚೆನ್ನಾಗಿ ಕಂಡಿತು. 19ಹೀಗೆ ಬೈಗೂ ಬೆಳಗೂ ಆಗಿ ನಾಲ್ಕನೆಯ ದಿನ ಆಯಿತು.

ಕೀರ್ತನೆ
ಕೀರ್ತನೆ 104: 12, 5-6, 10-12, 24, 35
ಸ್ವಾಮಿದೇವ ಸಂತೋಷಿಸಲಿ ತನ್ನ ಸುಕೃತ್ಯಗಳಿಗಾಗಿ
ಭಜಿಸು ನನ್ನ ಮನವೇ, ಭಜಿಸು, ಪ್ರಭುವನು
ಪ್ರಭು, ನನ್ನ ದೇವಾ, ನೀ ಸರ್ವೋತ್ತಮನು
ಮಹಿಮೆ ಪ್ರತಾಪಗಳಿಂದ ಭೂಷಿತನು
ತೊಟ್ಟುಕೊಂಡಿರುವೆ ಬೆಳಕನೇ ಬಟ್ಟೆಯಂತೆ
ಹರಡಿಸಿರುವೆ ಆಗಸವನು ಗುಡಾರದಂತೆ.
ಭುವಿಯನು ತಳಹದಿಯ ಮೇಲೆ ಸ್ಥಾಪಿಸಿರುವೆ
ಅದೆಂದಿಗೂ
ಕದಲದಂತೆ ಮಾಡಿರುವೆ
ಅದಕ್ಕೆ ಹೊದಿಸಿರುವೆ ಸಾಗರವೆಂಬ ವಸ್ತ್ರವನು
ಆ ಜಲರಾಶಿಗಳು ಮುಳುಗಿಸಿವೆ ಬೆಟ್ಟಗಳನು.
ಬುಗ್ಗೆಗಳು
ಚಿಮ್ಮಿ ಓಡಮಾಡುವೆ ತಗ್ಗುಗಳಲಿ
ನದಿಗಳ ಹರಿಯಮಾಡುವೆ ಗುಡ್ಡಗಳ ನಡುವೆಯಲಿ
ಅವುಗಳ ಅರುಗಲ್ಲೇ ಇವೆ ಹಕ್ಕಿಗಳ ಗೂಡುಗಳು
ಕೇಳುತಿವೆ
ಕೊಂಬೆಗಳಿಂದಾ
ಪಕ್ಷಿಗಳ ಕಲರವಗಳು.
ಸೃಜಿಸಿರುವೆ
ಎಲ್ಲವನು ಸುಜ್ಞಾನದಿಂದ
ಜಗವೆಲ್ಲ ತುಂಬಿದೆ ನಿನ್ನ ಸೃಷ್ಟಿಯಿಂದ
ಪ್ರಭುವನು
ನನ್ನ ಮನ ಸ್ತುತಿಸಲಿ
ಪ್ರಭುವಿಗೆ
ಸ್ತುತಿಸ್ತೋತ್ರವಾಗಲಿ.
ಶುಭಸಂದೇಶ
ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ
ಮಾರ್ಕ 6:53-56
ಮಾರ್ಕ 6:53-56
53ಅವರೆಲ್ಲರು ಸರೋವರವನ್ನು ದಾಟಿ ಗೆನಸರೇತ್ ಊರಿನ ದಡ ಸೇರಿದರು. 54ಅವರು ದೋಣಿಯನ್ನು ಕಟ್ಟಿ, ಅದರಿಂದ ಇಳಿದ ಕೂಡಲೇ ಅಲ್ಲಿಯ ಜನರು ಯೇಸುಸ್ವಾಮಿಯ ಗುರುತು ಹಚ್ಚಿದರು. ಒಡನೆ ಸುತ್ತಮುತ್ತಲೆಲ್ಲಾ ಓಡಾಡಿ, ರೋಗಿಗಳನ್ನು ಹಾಸಿಗೆಗಳ ಸಹಿತ ಹೊತ್ತುಕೊಂಡು, ಯೇಸು ಎಲ್ಲೆಲ್ಲಿ ಇದ್ದಾರೆಂದು ಕೇಳಿದರೋ ಅಲ್ಲೆಲ್ಲಾ ಹೋಗತೊಡಗಿದರು. 55ಯೇಸು ಹಳ್ಳಿಗಳಿಗಾಗಲಿ ಪಟ್ಟಣಪಾಳೆಯಗಳಿಗಾಗಲಿ ಹೋದಾಗಲೆಲ್ಲಾ ಜನರು ರೋಗಿಗಳನ್ನು ಅಲ್ಲಿಯ ಸಂತೆಬೀದಿ ಚೌಕಗಳಿಗೆ ಕರೆ ತರುತ್ತಿದ್ದರು. 56ಅವರ ಉಡುಪಿನ ಅಂಚನ್ನಾದರೂ ಮುಟ್ಟಗೊಡಿಸಬೇಕೆಂದು ಯೇಸುವನ್ನು ಬೇಡಿಕೊಳ್ಳುತ್ತಿದ್ದರು. ಹಾಗೆ ಮುಟ್ಟಿದವರೆಲ್ಲರೂ ಗುಣಹೊಂದುತ್ತಿದ್ದರು.
ಚಿಂತನೆ
ಲೂರ್ದು ಮಾತೆಯ ಹಬ್ಬ
ಇಂದು ಲೂರ್ದು ಮಾತೆಯ ಹಬ್ಬ 1858ರ ಫೆಬ್ರವರಿ 11 ರಿಂದ ಜುಲೈ 16ರ ಅಂತರದಲ್ಲಿ ಮಾತೆ ಮರಿಯಳು 14 ವರ್ಷದ ಬರ್ನಡೆಟ್ ಎಂಬ ಬಾಲಕಿಗೆ 18 ಬಾರಿ ದರ್ಶನ ನೀಡುತ್ತಾರೆ. ಫ್ರಾನ್ಸ್ ದೇಶದ ಲೂರ್ದುನಗರದ ಮಸಬಿಯೆಲ್ ಎಂಬ ಗುಹೆಯೊಂದರಲ್ಲಿ ದೇವಮಾತೆಯು ಕಾಣಿಸಿಕೊಳ್ಳುತ್ತಾರೆ. ಮಾತೆ ಮರಿಯಳು ಬೆರ್ನಡೆಟ್ಟಳಿಗೆ ಮಾಡಿದ ಕೋರಿಕೆಯಂತೆ ಈ ಗುಹೆಯ ಬಂಡೆಯ ಮೇಲೆ ಒಂದು ಬ??ಲಿಕಾ ಕಟ್ಟಲಾಯಿತು. 1901ರಲ್ಲಿ ಜಪಸರ ಮಾತೆ ದೇವಾಲಯದ ನಿರ್ಮಾಣವಾಗುತ್ತೆ. 1907ರ ಫೆಬ್ರವರಿ 11ರಂದು ಲೂರ್ದುಮಾತೆ ಹಬ್ಬವನ್ನು ಆಚರಿಸುವ ಪದ್ದತಿಯನ್ನು ವಿಶ್ವಧರ್ಮಸಭೆಗೆ ಅಂದಿನ ಜಗದ್ಗುರು 10ನೇ ಭಕ್ತಿನಾಥರು ಆರಂಭಿಸಿದರು. ವಿಶ್ವದ ಬೇರೆಬೇರೆ ಸ್ಥಳಗಳಿಂದ ಪ್ರತಿವರ್ಷ ಲಕ್ಷಾಂತರ ಯಾತ್ರಿಕರು ಲೂರ್ದು ನಗರಕ್ಕೆ ಬರುತ್ತಾರೆ ಮತ್ತು ಮಾತೆ ಮರಿಯಳಲ್ಲಿ ತಮ್ಮ ಹರಕೆ, ಕೋರಿಕೆಗಳನ್ನು ಸಲ್ಲಿಸುತ್ತಾರೆ. ಲೂರ್ದು ಮಾತೆಯ ಮಧ್ಯಸ್ಥಿಕೆಯಿಂದ ಸಾವಿರಾರು ರೋಗಿಗಳು ಸೌಖ್ಯ ಪಡೆಯುತ್ತಿದ್ದಾರೆ. ಬರ್ನಡೆಟ್ಳಿಗೆ ಲೂರ್ದು ಮಾತೆ ನೀಡಿದ ಸಂದೇಶ, ಪಾಪಿಗಳಿಗಾಗಿ ಪ್ರಾರ್ಥಿಸಿ, ಜಪಸರ ಪ್ರಾರ್ಥಿಸಿ ಮತ್ತು ತಾನು ಅಮಲೋದ್ಬವ ಮಾತೆಯೆಂದು.ನಾವು ಹೊಸ ಮನುಷ್ಯರಾಗಿ ಮಾರ್ಪಾಡಾಗಬೇಕಿದೆ.
ಇಂದಿನ ಸಂತರು
ಲೂರ್ದು ಮಾತೆಯ ಸ್ಮರಣೆಕಾಲಕಾಲಕ್ಕೆ ಮಾತೆಮರಿಯಮ್ಮನವರ ದರ್ಶನ ಪಡೆಯುವ ಸೌಭಾಗ್ಯ ಕಥೋಲಿಕ ಧರ್ಮಸಭೆಗೆ ಸಿಕ್ಕಿದೆ. ಆಕೆ ಪ್ರತೀ ದರ್ಶನದಲ್ಲೂ ಒಂದೊಂದು ವಿಶೇಷ ಸಂದೇಶವನ್ನು ಜಗತ್ತಿಗೆ ಶ್ರುತಪಡಿಸಿದ್ದಾರೆ. ಈ ಸತ್ಯವನ್ನು ನಿರೂಪಿಸಲು ಸಾಕ್ಷ್ಯಾಧಾರಗಳೂ ಇವೆ. 1858ರ ಫೆಬ್ರವರಿ 11ರಿಂದ ಜುಲೈ 16ರ ಅಂತರದಲ್ಲಿ ಮಾತೆ ಮೇರಿ ಹದಿನಾಲ್ಕು ವರ್ಷದ ಮರಿಯ ಬರ್ನದೆತ್ ಎಂಬ ಹುಡುಗಿಗೆ 18 ಬಾರಿ ಕಾಣಿಸಿಕೊಂಡರು. ದಕ್ಷಿಣ ಫ್ರಾನ್ಸ್ನ ಲೂರ್ದು ನಗರದ ಮ್ಯಾಸಬೆಲ್ಲೆ ಎಂಬ ಗುಹೆಯೊಂದರಲ್ಲಿ ದೇವಮಾತೆಯ ಈ ದರ್ಶನಗಳಾದವು. ಮಾತೆ ಮೇರಿ ಸಂತ ಬರ್ನದೆತ್ತಳಿಗೆ ಮಾಡಿದ ಕೋರಿಕೆಂತೆ ಈ ಗುಹೆಯ ಬಂಡೆಯ ಮೇಲೆ ಒಂದು ಬೆಸಿಲಿಕಾ ಕಟ್ಟಲಾಯಿತು. ಅನೇಕರು ಲೂರ್ದು ಮಾತೆಯ ಮಧ್ಯಸ್ಥಿಕೆಯಿಂದ ರೋಗಗಳಿಂದ ಗುಣಮುಖರಾಗಿದ್ದಾರೆ. ಅದಕ್ಕೆ ಕಾರಣ ದೇವಮಾತೆ ಅಲ್ಲಿ ಒಮ್ಮೆ ದರ್ಶನ ನೀಡಿದರು ಎಂಬ ಕಾರಣಕ್ಕಲ್ಲ ಬದಲಾಗಿ ಇಂದಿಗೂ ಅಲ್ಲಿ ನೆಲೆಸಿದ್ದಾರೆ ಎಂಬ ಕಾರಣಕ್ಕೆ. ಅಲ್ಲಿ ಬಂದು ವಿಶ್ವಾಸದಿಂದ ಪ್ರಾರ್ಥಿಸಿದ ಸಾಕಷ್ಟು ಭಕ್ತಾದಿಗಳು ಅದ್ಭುತಗಳನ್ನು ಕಂಡಿದ್ದಾರೆ. ಸೌಖ್ಯವನ್ನು ಪಡೆದಿದ್ದಾರೆ. ನೆಮ್ಮದಿಯನ್ನು ಕಂಡುಕೊಂಡಿದ್ದಾರೆ. ಕಾನಾ ಊರಿನ ವಿವಾಹದ ಸಂದರ್ಭದಲ್ಲಿ ದ್ರಾಕ್ಷಾರಸದ ಕೊರತೆಯನ್ನು ನೀಗಿಸಿದ ಮಾತೆ ನಮ್ಮ ಕಷ್ಟ-ನೋವುಗಳನ್ನು ದೂರವಾಗಿಸಲಿ.
ಚಿತ್ರ: ಗೂಗಲ್ ಕೃಪೆ

No comments:
Post a Comment