ಸಾರ್ವಜನಿಕ ಉದ್ದೇಶ: ಮಾನವ ಸಾಗಾಣಿಕೆ, ವೇಶ್ಯಾವಾಟಿಕೆ ಹಾಗೂ ಹಿಂಸಾತ್ಮಕ ಕ್ರಿಯೆಗಳಿಂದಾಗಿ ನಿರಾಶ್ರಿತರಾದವರಿಗೆ ಆಶ್ರಯವನ್ನು ನೀಡಲು ಸರ್ವರೂ ಉದಾರತೆಯಿಂದ ಮುಂದೆ ಬರುವಂತೆ.
25 ಫೆಬ್ರವರಿ 2೦19
ಸೋಮವಾರ / ಹಸಿರು / ಸಾಧಾರಣ ಕಾಲದ ಏಳನೇ ವಾರ
1ನೇ ವಾಚನ - ಸಿರಾಖ 1:1-10
ಕೀರ್ತನೆ - 93: 1-2, 5
ಶುಭಸಂದೇಶ - ಮಾರ್ಕ 9: 14-29
1ನೇ ವಾಚನ - ಸಿರಾಖ 1:1-10
ಕೀರ್ತನೆ - 93: 1-2, 5
ಶುಭಸಂದೇಶ - ಮಾರ್ಕ 9: 14-29
ವಾಚನಗಳು
ಮೊದಲನೇ ವಾಚನ
ಆದಿಕಾಂಡದಿಂದ ವಾಚನ
ಸಿರಾಖ 1:1-10
1‘ಸುಜ್ಞಾನ’ ಎಂಬುದೆಲ್ಲವೂ ಬರುವುದು ಸರ್ವೇಶ್ವರನಿಂದಲೆ ನಿತ್ಯಕ್ಕೂ ಅದಿರುವುದು ಆತನ ಬಳಿಯಲ್ಲೇ. 2ಎಣಿಸಬಲ್ಲವನಾರು ಕಡಲ ಮರಳಿನ ಕಣಗಳನು ಮಳೆಯ ಹನಿಗಳನು, ಅನಂತಕಾಲದ ದಿನಗಳನು? 3ಅಳೆಯಬಲ್ಲವನಾರು ಆಕಾಶದ ಎತ್ತರವನು, ಭೂಮಿಯ ಉದ್ದಗಲವನು, ಪಾತಾಳದ ಆಳವನು? ಅಂತೆಯೇ ಸುಜ್ಞಾನದ ನೆಲೆಯನು? 4ಸೃಷ್ಟಿಯಾಯಿತು ಸುಜ್ಞಾನ ಸಕಲಕ್ಕೂ ಮೊದಲೇ ವಿವೇಚನಾಗ್ರಹಿಕೆ ಕಾಲಕ್ಕೆ ಮುಂಚೆಯೇ. 5ಉನ್ನತ ಸ್ವರ್ಗದ ದೇವರ ವಾಣಿಯೇ ಸುಜ್ಞಾನದ ಮೂಲ ಆತನ ಶಾಶ್ವತವಾದ ಆಜ್ಞೆಗಳೇ ಅದರ ಮಾರ್ಗ. 6ಬಯಲಾಯಿತೆ ಸುಜ್ಞಾನದ ಮೂಲ ಯಾರಿಗಾದರೂ? ಅರಿತಿರುವರೆ ಅದರ ಭವ್ಯ ಕಲ್ಪನೆಗಳನು ಯಾರಾದರೂ? 7ಪ್ರಕಟವಾಯಿತೆ ಸುಜ್ಞಾನದ ಅರಿವು ಯಾರಿಗಾದರೂ? ಗ್ರಹಿಸಿರುವರೆ ಅದರ ಮಾರ್ಗಗಳನು ಯಾರಾದರೂ? 8ಸುಜ್ಞಾನಿ ಒಬ್ಬನಿಹನು; ಆತನು ಅತ್ಯಂತ ಭಯಂಕರನು ಆತನೇ ಸಿಂಹಾಸನಾರೂಢನಾಗಿರುವ ಸರ್ವೇಶ್ವರನು.
9ಸುಜ್ಞಾನವನ್ನು ನಿರ್ಮಿಸಿದಾಗ ಸರ್ವೇಶ್ವರನೇ ಅದನ್ನು ವೀಕ್ಷಿಸಿ ತೂಕಮಾಡಿದಾತ ಆತನೇ ಅದನ್ನು ಸುರಿಸಿದನು ಸಮಸ್ತ ಸೃಷ್ಟಿ ಕಾರ್ಯಗಳ ಮೇಲೆ. 1೦ಸಕಲ ಜೀವಿಗಳಲಿ ನೆಲೆಸುವುದದು ಆತನ ಇಚ್ಛೆಯಂತೆ ದಯಪಾಲಿಸಿರುವನದನ್ನು ಹೇರಳವಾಗಿ ಆತನನ್ನು ಪ್ರೀತಿಸುವವರಿಗೆ. ದೇವರಲ್ಲಿ ಭಯಭಕ್ತಿ

ಕೀರ್ತನೆ
ಕೀರ್ತನೆ - 93: 1-2, 5
ವಹಿಸಿಹನು ಪ್ರಭು, ರಾಜ್ಯಾಧಿಕಾರವನು
ಧರಿಸಿಹನು ಘನತೆಯ ವಸ್ತ್ರ ಲಾಂಛನವನು
ತೊಟ್ಟಿಹನು ಶೌರ್ಯವೆಂಬ ನಡುಕಟ್ಟನು
ಸ್ಥಿರಪಡಿಸಿಹನು ಕದಲದಂತೆ ಜಗವನು
ನಿನ್ನ ಸಿಂಹಾಸನ ಸ್ಥಿರ ಆದಿಯಿಂದ
ನೀನಿರುವೆ ಪ್ರಭು ಅನಾದಿಯಿಂದ
ನಿನ್ನ ಆಜ್ಞೆಗಳು ಪ್ರಭು, ಸುಸ್ಥಿರ
ನಿನ್ನ ಆಲಯಕೆ ಪವಿತ್ರತೆ ಅರ್ಹ
ಯುಗಯುಗಾಂತರಕೂ ಅದು ಅರ್ಹ
ಧರಿಸಿಹನು ಘನತೆಯ ವಸ್ತ್ರ ಲಾಂಛನವನು
ತೊಟ್ಟಿಹನು ಶೌರ್ಯವೆಂಬ ನಡುಕಟ್ಟನು
ಸ್ಥಿರಪಡಿಸಿಹನು ಕದಲದಂತೆ ಜಗವನು
ನಿನ್ನ ಸಿಂಹಾಸನ ಸ್ಥಿರ ಆದಿಯಿಂದ
ನೀನಿರುವೆ ಪ್ರಭು ಅನಾದಿಯಿಂದ
ನಿನ್ನ ಆಜ್ಞೆಗಳು ಪ್ರಭು, ಸುಸ್ಥಿರ
ನಿನ್ನ ಆಲಯಕೆ ಪವಿತ್ರತೆ ಅರ್ಹ
ಯುಗಯುಗಾಂತರಕೂ ಅದು ಅರ್ಹ
ಶುಭಸಂದೇಶ
ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ
ಮಾರ್ಕ 9: 14-29
ಯೇಸುಸ್ವಾಮಿಯು, ಪೇತ್ರ, ಯಕೋಬ ಮತ್ತು ಯೊವಾನ್ನರೊಂದಿಗೆ ಬೆಟ್ಟದಿಂದ ಇಳಿದು ಬಂದಾಗ 14ಉಳಿದ ಶಿಷ್ಯರ ಸುತ್ತಲೂ ಜನರು ದೊಡ್ಡ ಗುಂಪಾಗಿ ನೆರೆದಿರುವುದನ್ನು, ಧರ್ಮಶಾಸ್ತ್ರಿಗಳು ಇವರೊಡನೆ ವಾದಿಸುತ್ತಿರುವುದನ್ನು ಕಂಡರು. 15ನೆರೆದಿದ್ದ ಜನರು ಯೇಸುವನ್ನು ಕಂಡೊಡನೆ ಆಶ್ಚರ್ಯಪಟ್ಟು ಓಡಿಬಂದು, ಅವರಿಗೆ ನಮಸ್ಕರಿಸಿದರು. 16ಯೇಸುಸ್ವಾಮಿ, ನಿಮ್ಮ ವಾಗ್ವಾದ ಏನು? ಎಂದು ಕೇಳಿದರು. 17ಆ ಗುಂಪಿನಲ್ಲಿದ್ದ ಒಬ್ಬನು, ಬೋಧಕರೇ, ನನ್ನ ಮಗನನ್ನು ತಮ್ಮ ಬಳಿಗೆಂದು ಕರೆತಂದೆ. 18ಅವನಿಗೆ ಒಂದು ಮೂಕದೆವ್ವ ಹಿಡಿದಿದೆ. ಅವನ ಮೇಲೆ ಅದು ಬಂದಾಗಲೆಲ್ಲ ಅವನನ್ನು ನೆಲಕ್ಕೆ ಅಪ್ಪಳಿಸುತ್ತದೆ. ಅವನು ನೊರೆಕಾರುತ್ತಾ ಹಲ್ಲು ಕಡಿದುಕೊಳ್ಳುತ್ತಾನೆ. ಆಗ ಅವನ ದೇಹವೆಲ್ಲಾ ಮರಗಟ್ಟಿದಂತಾಗುತ್ತದೆ. ಆ ದೆವ್ವವನ್ನು ಬಿಡಿಸಬೇಕೆಂದು ತಮ್ಮ ಶಿಷ್ಯರನ್ನು ಕೇಳಿಕೊಂಡೆ. ಆದರೆ, ಅದು ಅವರಿಂದಾಗಲಿಲ್ಲ, ಎಂದನು.
19ಇದನ್ನು ಕೇಳಿ ಯೇಸು, ಅಯ್ಯೋ, ವಿಶ್ವಾಸವಿಲ್ಲದ ಪೀಳಿಗೆಯೇ, ಇನ್ನೆಷ್ಟು ಕಾಲ ನಿಮ್ಮೊಂದಿಗಿರಲಿ! ಇನ್ನೆಷ್ಟು ಕಾಲ ನಿಮ್ಮನ್ನು ಸಹಿಸಿಕೊಳ್ಳಲಿ! ಅವನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿ ಎಂದರು.
20ಆಗ ಆ ಹುಡುಗನನ್ನು ಯೇಸುವಿನ ಬಳಿಗೆ ಕರೆತಂದರು. ಯೇಸುವನ್ನು ನೋಡಿದಾಕ್ಷಣ ಆ ದೆವ್ವ ಹುಡುಗನನ್ನು ನೆಲಕ್ಕೆ ಅಪ್ಪಳಿಸಿ ಒದ್ದಾಡಿಸಿತು. ಹುಡುಗ ಹೊರಳಾಡುತ್ತಾ ನೊರೆ ಕಾರಿದನು. 21ಯೇಸು, ಇವನಿಗೆ ಎಷ್ಟು ದಿನದಿಂದ ಹೋಗಾಗುತ್ತಿದೆ? ಎಂದು ಹುಡುಗನ ತಂದೆಯನ್ನು ವಿಚಾರಿಸಿದರು. ಅದಕ್ಕೆ ಅವನು ಬಾಲ್ಯದಿಂದಲೇ ಹೀಗಾಗುತ್ತಿದೆ; ಇದಲ್ಲದೆ ದೆವ್ವವು ಇವನನ್ನು ಕೊಲ್ಲಬೇಕೆಂದು ಪದೇ ಪದೇ ಬೆಂಕಿಗೂ ನೀರಿಗೂ ದೂಡಿದೆ; 22ತಮ್ಮಿಂದ ಏನಾದರೂ ಸಾಧ್ಯವಾದರೆ, ನಮ್ಮ ಮೇಲೆ ದಯವಿಟ್ಟು ಸಹಾಯಮಾಡಿ, ಎಂದು ಯೇಸುವನ್ನು ಬೇಡಿಕೊಂಡನು.
23ಅದಕ್ಕೆ ಯೇಸು, 'ಸಾಧ್ಯವಾದರೆ' ಎನ್ನುತ್ತೀಯಲ್ಲಾ? ದೇವರಲ್ಲಿ ವಿಶ್ವಾಸ ಇಡುವವನಿಗೆ ಎಲ್ಲವೂ ಸಾಧ್ಯ!" ಎಂದರು.
24ಆಗ ಆ ಬಾಲಕನ ತಂದೆ, ನಾನು ವಿಶ್ವಾಸಿಸುತ್ತೇನೆ, ನನ್ನ ವಿಶ್ವಾಸದಲ್ಲಿ ಕೊರತೆಯಿದ್ದರೆ ನೆರವು ನೀಡಿ, ಎಂದು ಯೇಸುವಿಗೆ ಮೊರೆಯಿಟ್ಟನು. 25ಜನಸಂದಣಿ ಬೆಳೆಯುತ್ತಿರುವುದನ್ನು ಕಂಡ ಯೇಸು, ಆ ದೆವ್ವವನ್ನು ಗದರಿಸಿ, ಎಲೈ, ಕಿವುಡು ಮೂಕ ದೆವ್ವವೇ, ಇವನನ್ನು ಬಿಟ್ಟುತೊಲಗು; ಇನ್ನೆಂದಿಗೂ ಇವನೊಳಗೆ ಪ್ರವೇಶಿಸಕೂಡದೆಂದು ನಿನಗೆ ಆಜ್ಞಾಪಿಸುತ್ತೇನೆ, ಎಂದರು. 26ದೆವ್ವವು ಚೀರುತ್ತಾ, ಹುಡುಗನನ್ನು ವಿಲವಿಲನೆ ಒದ್ದಾಡಿಸಿ, ಕೊನೆಗೆ ಬಿಟ್ಟುಹೋಯಿತು. ಹುಡುಗನು ಶವದಂತಾದನು. ಅಲ್ಲಿದ್ದವರಲ್ಲಿ ಅನೇಕರು 'ಹುಡುಗ ಸತ್ತುಹೋದ,' ಎಂದುಕೊಂಡರು. 27ಆದರೆ ಯೇಸು ಅವನ ಕೈಹಿಡಿದು ಎತ್ತಲು ಅವನು ಎದ್ದು ನಿಂತನು. 28ಅಂದು ಯೇಸುಸ್ವಾಮಿ ಮನೆಗೆ ಬಂದಾಗ, ಶಿಷ್ಯರು ಪ್ರತ್ಯೇಕವಾಗಿ ಅವರ ಬಳಿಗೆ ಬಂದು, ಆ ದೆವ್ವವನ್ನು ಹೊರಗಟ್ಟಲು ನಮ್ಮಿಂದೇಕೆ ಆಗಲಿಲ್ಲ? ಎಂದು ಕೇಳಿದರು. 29ಅದಕ್ಕೆ ಯೇಸು, ಈ ಬಗೆಯ ದೆವ್ವವನ್ನು ಹೊರಗಟ್ಟಲು ಪ್ರಾರ್ಥನೆಯೇ ಹೊರತು ಬೇರೆ ಮಾರ್ಗವಿಲ್ಲ, ಎಂದರು.

ಚಿಂತನೆ
ಸೈತಾನನ್ನು ಜಯಿಸಲು ಪ್ರಾರ್ಥನೆಯಿಂದ ಸಾಧ್ಯ
ದೆವ್ವ ಪೀಡಿತ ವ್ಯಕ್ತಿಯನ್ನು ಗುಣಪಡಿಸುವ ಮೂಲಕ ಯೇಸು ಎರಡು ಆಂಶಗಳನ್ನು ನಮಗೆ ತಿಳಿಯಪಡಿಸುತ್ತಾರೆ. ಮೊದಲನೆಯದಾಗಿ, ದೇವರನ್ನು ವಿಶ್ವಾಸಿಸಿದರೆ ಸರ್ವವನ್ನು ಸಾಧಿಸಬಹುದು. ಎರಡನೆಯದಾಗಿ, ಪ್ರಾರ್ಥನೆಯಿಲ್ಲದೆ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ವಿಶ್ವಾಸದಿಂದ ಪ್ರಾರ್ಥಿಸಿದರೆ ಎಲ್ಲವೂ ಸಾಧ್ಯ. ಇಡೀ ಘಟನೆಯು ಹೇಗೆ ಸೈತಾನನ ಶಕ್ತಿಯು ಒಬ್ಬ ವ್ಯಕ್ತಿಯನ್ನು ಹಿಂಸಿಸಿ, ಪೀಡಿಸುತ್ತದೆ ಮತ್ತು ದೇವರ ಶಕ್ತಿಯು ಹೇಗೆ ಸೈತಾನನ ಮೇಲೆ ಜಯಗಳಿಸುತ್ತದೆ ಎಂಬುದನ್ನು ತೋರ್ಪಡಿಸುತ್ತಿದೆ. ಪ್ರಾರ್ಥನೆಯಿಂದ ಸೈತಾನನ್ನು ಜಯಿಸಲು ಸಾಧ್ಯ ಎಂಬ ಅಂಶವನ್ನು ಯೇಸು ತಮ್ಮ ಶಿಷ್ಯರಿಗೆ ಮನದಟ್ಟು ಮಾಡುತ್ತಾರೆ.
ಚಿತ್ರ: ಗೂಗಲ್ ಕೃಪೆ

No comments:
Post a Comment