ಸಾರ್ವಜನಿಕ ಉದ್ದೇಶ: ಮಾನವ ಸಾಗಾಣಿಕೆ, ವೇಶ್ಯಾವಾಟಿಕೆ ಹಾಗೂ ಹಿಂಸಾತ್ಮಕ ಕ್ರಿಯೆಗಳಿಂದಾಗಿ ನಿರಾಶ್ರಿತರಾದವರಿಗೆ ಆಶ್ರಯವನ್ನು ನೀಡಲು ಸರ್ವರೂ ಉದಾರತೆಯಿಂದ ಮುಂದೆ ಬರುವಂತೆ.
04 ಫೆಬ್ರವರಿ 2೦19
ಸೋಮವಾರ / ಕೆಂಪು / ಸಂತ ಜಾನ್ ದಿ ಬ್ರಿಟ್ಟೊ ಯಾ ಮತ್ತು ರ.ಸಾ (ಸ್ಮರಣೆ)
1ನೇ ವಾಚನ - 1 ಕೊರಿಂಥ 9: 19-29
ಕೀರ್ತನೆ - 67: 1-2, 3-4, 5-6
ಶುಭಸಂದೇಶ - ಯೊವಾನ್ನ 12: 20-32
1ನೇ ವಾಚನ - 1 ಕೊರಿಂಥ 9: 19-29
ಕೀರ್ತನೆ - 67: 1-2, 3-4, 5-6
ಶುಭಸಂದೇಶ - ಯೊವಾನ್ನ 12: 20-32
ವಾಚನಗಳು
ಮೊದಲನೇ ವಾಚನ
ಹಿಬ್ರಿಯರಿಗೆ ಬರೆದ ಪತ್ರದಿಂದ ವಾಚನ
ಹಿಬ್ರಿಯರಿಗೆ 11: 32-40
32ಇನ್ನೂ ಹೇಳಬೇಕೇ? ಗಿಡಿಯೋನ್, ಬಾರಾಕ್, ಸಂಸೋನ್, ಯೆಪ್ತಾಹ, ದಾವೀದ, ಸಮುವೇಲ ಇವರನ್ನೂ ಇತರ ಪ್ರವಾದಿಗಳನ್ನೂ ಕುರಿತು ಹೇಳಬೇಕಾದರೆ ನನಗೆ ಸಮಯ ಸಾಲದು. 33ಇವರು ವಿಶ್ವಾಸದಿಂದಲೇ ರಾಜ್ಯಗಳನ್ನು ಗೆದ್ದರು; ನ್ಯಾಯನೀತಿಯಿಂದ ಆಳಿದರು; ದೇವರಿಂದ ವಾಗ್ದಾನಗಳನ್ನು ಪಡೆದರು; ಸಿಂಹಗಳ ಬಾಯನ್ನು ಬಂಧಿಸಿದರು. 34ಅಗ್ನಿಜ್ವಾಲೆಯನ್ನು ಆರಿಸಿದರು; ಖಡ್ಗದ ಬಾಯಿಂದ ತಪ್ಪಿಸಿಕೊಂಡರು; ಬಲಹೀನರಾಗಿದ್ದರೂ ಬಲಿಷ್ಠರಾದರು; ಯುದ್ಧದಲ್ಲಿ ಪರಾಕ್ರಮಶಾಲಿಗಳಾದರು; ಶತ್ರುಗಳ ಸೈನ್ಯವನ್ನು ಸದೆಬಡಿದರು. 35ವಿಶ್ವಾಸದಿಂದಲೇ ಮಹಿಳೆಯರು ಮೃತರಾಗಿದ್ದ ತಮ್ಮವರನ್ನು ಮರಳಿ ಜೀವಂತರಾಗಿ ಪಡೆದರು.
ಕೆಲವರು ಇದಕ್ಕಿಂತ ಶ್ರೇಷ್ಠವಾದ ಪುನರುತ್ಥಾನವನ್ನು ಪಡೆಯುವ ಉದ್ದೇಶದಿಂದ ಬಿಡುಗಡೆಯನ್ನು ನಿರಾಕರಿಸಿ ಹಿಂಸೆಬಾಧೆಗಳಿಗೆ ತುತ್ತಾಗಿ ಮರಣವನ್ನಪ್ಪಿದರು 36ಇನ್ನೂ ಕೆಲವರು ಹಾಸ್ಯ ಪರಿಹಾಸ್ಯ, ಏಟುಪೆಟ್ಟು, ಸೆರೆಸಂಕಲೆಗಳನ್ನು ಅನುಭವಿಸಿದರು. 37ಮತ್ತೆ ಕೆಲವರನ್ನು ಜನರು ಕಲ್ಲೆಸೆದು ಕೊಂದರು; ಗರಗಸದಿಂದ ಸೀಳಿ ಸಾಯಿಸಿದರು; ಖಡ್ಗದಿಂದ ಕಡಿದುಹಾಕಿದರು. ಇನ್ನೂ ಕೆಲವರು ನಿರ್ಗತಿಕರಾಗಿ ಕುರಿ ಮೇಕೆಗಳ ಚರ್ಮಗಳನ್ನು ಹೊದ್ದುಕೊಂಡು ಅಲೆದಾಡಿದರು. ಬಡತನಕ್ಕೂ ಹಿಂಸೆಬಾಧೆಗಳಿಗೂ ಕಷ್ಟಸಂಕಟಗಳಿಗೂ ಈಡಾದರು; 38ಇಂಥವರಿಗೆ ಈ ಲೋಕ ತಕ್ಕ ಸ್ಥಳವಾಗಿರಲಿಲ್ಲ. ಈ ಕಾರಣದಿಂದ, ಅವರು ಕಾಡು ಬೆಟ್ಟಗಳಲ್ಲೂ ಗುಹೆ ಕಣಿವೆಗಳಲ್ಲೂ ತಲೆಮರೆಸಿಕೊಂಡಿದ್ದರು.
39ಇವರೆಲ್ಲರೂ ವಿಶ್ವಾಸವುಳ್ಳವರಾದುದರಿಂದಲೇ ಸಜ್ಜನರೆಂದು ಹೆಸರುವಾಸಿಯಾದರು. ಆದರೂ ದೇವರು ವಾಗ್ದಾನಮಾಡಿದ ಸತ್ಫಲಗಳನ್ನು ಸವಿಯಲಿಲ್ಲ.
40ಏಕೆಂದರೆ ದೇವರು ನಮ್ಮೆಲ್ಲರಿಗೋಸ್ಕರ, ಶ್ರೇಷ್ಠವಾದ ಯೋಜನೆಯೊಂದನ್ನು ರೂಪಿಸಿ, ನಮ್ಮೊಡನೆಯೇ ಅಂದಿನ ವಿಶ್ವಾಸಿಗಳೂ ಸಿದ್ಧಿಗೆ ಬರಬೇಕೆಂದು ಸಂಕಲ್ಪಿಸಿದರು.

ಕೀರ್ತನೆ
ಕೀರ್ತನೆ
31: 20, 21, 22, 23, 24
ಪ್ರಭುವಿಗಾಗಿ ಕಾದಿಹ
ಜನರೆ, ನಿಮಗಿರಲಿ
ಅಭಯ
ಧೈರ್ಯದಿಂದಿರಲಿ ನಿರುತ
ನಿಮ್ಮೆಲ್ಲರ ಹೃದಯ
ಪಾರುಮಾಡುವುದವರನು ನಿನ್ನ ಸಾನ್ನಿಧ್ಯ ಸೆರಗು,
ಜನರೊಳಸಂಚಿನಿಂದ ದೂರವಿಡುವುದವರನು ನಿನ್ನಾಸರೆಯು,
ವ್ಯಾಜ್ಯ ಮಾಡುವ ಜಿಹ್ವೆಯಿಂದ.
ಜನರೊಳಸಂಚಿನಿಂದ ದೂರವಿಡುವುದವರನು ನಿನ್ನಾಸರೆಯು,
ವ್ಯಾಜ್ಯ ಮಾಡುವ ಜಿಹ್ವೆಯಿಂದ.
ಮುತ್ತಿಗೆಗೆ
ತುತ್ತಾದ ನಗರದೊಳಿಂದೆನ್ನ
ಅಚ್ಚರಿಯಿಂದ
ರಕ್ಷಿಸಿದೊಡೆಯನಿಗೆ
ನಮನ.
ದೇವರಿಂದ ದೂರನಾದೆಯೆಂಬ ದಿಗಿಲೇರಲು
ಅಕ್ಕರೆಯಿಂದ
ನೀ ಕಿವಿಗೊಟ್ಟೆ ನಾ ಮೊರೆಯಿಡಲು.
ಪ್ರಭುವಿನ
ಭಕ್ತರೇ,
ಪ್ರೀತಿಸಿ
ನೀವಾತನನು
ಅಧಿಕಾಧಿಕವಾಗಿ
ಶರಣರನು ರಕ್ಷಿಸಿ, ಸೊಕ್ಕಿನವರನು ಶಿಕ್ಷಿಸುವ ನಾತ ಸರಿಯಾಗಿ.
ಪ್ರಭುವಿಗಾಗಿ
ಕಾದಿಹ ಜನರೆ, ನಿಮಗಿರಲಿ ಅಭಯ
ಧೈರ್ಯದಿಂದಿರಲಿ
ನಿರುತ ನಿಮ್ಮೆಲ್ಲರ ಹೃದಯ.
ಶುಭಸಂದೇಶ
ಸಂತ ಯೊವಾನ್ನನು ಬರೆದ ಶುಭಸಂದೇಶದಿಂದ ವಾಚನ
ಯೊವಾನ್ನ 12: 20-32
20ಧಣಿಗಿಂತಲೂ ದಾಸನು ದೊಡ್ಡವನಲ್ಲವೆಂದು ನಾನು ನಿಮಗೆ ಹೇಳಿದ್ದನ್ನು ನೆನಪಿಗೆ ತಂದುಕೊಳ್ಳಿ. ಅವರು ನನ್ನನ್ನು ಹಿಂಸೆಗೆ ಗುರಿಮಾಡಿದಂತೆ ನಿಮ್ಮನ್ನೂ ಹಿಂಸೆಗೆ ಗುರಿಮಾಡುವರು. ನನ್ನ ಬೋಧನೆಯ ಮಾತನ್ನು ಅವರು ಅನುಸರಿಸಿ ನಡೆದರೆ ನಿಮ್ಮ ಬೋಧನೆಯ ಮಾತನ್ನೂ ಅನುಸರಿಸಿ ನಡೆಯುವರು. 21ನೀವು ನನ್ನವರಾದುದರಿಂದ ಅವರು ನಿಮ್ಮನ್ನು ಹೀಗೆ ಕಾಣುವರು. ಏಕೆಂದರೆ ನನ್ನನ್ನು ಕಳುಹಿಸಿದಾತನನ್ನು ಅವರು ಅರಿಯರು. 22ನಾನು ಬಂದು ಅವರಿಗೆ ಬೋಧನೆ ಮಾಡದೆ ಹೋಗಿದ್ದರೆ ಅವರು ಪಾಪದೋಷಿಗಳು ಎಂದು ಹೇಳಲಾಗುತ್ತಿರಲಿಲ್ಲ. ಆದರೆ ಈಗ ಅವರ ದೋಷಕ್ಕೆ ಯಾವ ನೆಪವನ್ನೂ ಒಡ್ಡುವಂತಿಲ್ಲ. 23ನನ್ನ ಮೇಲೆ ದ್ವೇಷ ಇದ್ದವನಿಗೆ ನನ್ನ ಪಿತನ ಮೇಲೆಯೂ ದ್ವೇಷ ಇದೆ. 24ಬೇರೆ ಯಾರೂ ಮಾಡದ ಮಹತ್ತಾದ ಕಾರ್ಯಗಳನ್ನು ನಾನು ಅವರ ನಡುವೆ ಮಾಡದೆ ಹೋಗಿದ್ದರೆ ಅವರು ಪಾಪದೋಷಿಗಳೆಂದು ಹೇಳಲಾಗುತ್ತಿರಲಿಲ್ಲ. ಆದರೆ ಅವರು ನನ್ನ ಕಾರ್ಯಗಳನ್ನು ನೋಡಿಯೂ ಸಹ ನನ್ನ ಮೇಲೆ ಹಾಗು ನನ್ನ ಪಿತನ ಮೇಲೆ ದ್ವೇಷ ಬೆಳೆಸಿದ್ದಾರೆ.
25ನಿಷ್ಕಾರಣವಾಗಿ ಅವರು ನನ್ನನ್ನು ದ್ವೇಷಿಸಿದರು ಎಂದು ಅವರ ಧರ್ಮಶಾಸ್ತ್ರದಲ್ಲೇ ಬರೆದಿರುವುದು ಹೀಗೆ ನೆರವೇರಿದೆ. 26ಪಿತನಿಂದ ಹೊರಡುವ ಸತ್ಯಸ್ವರೂಪಿಯಾದ ಪವಿತ್ರಾತ್ಮರನ್ನು ನಿಮ್ಮ ಪೋಷಕರನ್ನಾಗಿ ನಾನು ಪಿತನಿಂದಲೇ ಕಳುಹಿಸುವೆನು. ಅವರು ಬಂದು ನನ್ನ ಪರವಾಗಿ ಸಾಕ್ಷಿ ನೀಡುವರು. 27ಮೊತ್ತ ಮೊದಲಿನಿಂದಲೂ ನನ್ನ ಸಂಗಡ ಇದ್ದ ನೀವು ಕೂಡ ನನ್ನನ್ನು ಕುರಿತು ಸಾಕ್ಷಿ ನೀಡುವವರಾಗಿದ್ದೀರಿ.
ಚಿಂತನೆ
ಸಂತ
ಜಾನ್ ದೆ ಬ್ರಿಟ್ಟೋ
ಜಾನ್
ದೆ ಬ್ರಿಟ್ಟೋ ಶ್ರೀಮಂತ ಮನೆತನದ ಹುಡುಗ. ಚಿಕ್ಕ ವಯಸ್ಸಿನಿಂದಲೂ ಸಂತ ಫ್ರಾನ್ಸಿಸ್ ಕ್ಸೇವಿಯರ್‌ರವರ
ಆದರ್ಶವನ್ನು ಪಾಲಿಸಿ ಬೆಳೆದವ. 15ನೇ ವಯಸ್ಸಿನಲ್ಲಿ ಯೇಸುಸಭೆಗೆ ಸೇರ್ಪಡೆಯಾಗಿ ಗುರುದೀಕ್ಷೆ ಸ್ವೀಕರಿಸುತ್ತಾರೆ.
1673ರಲ್ಲಿ ಹದಿನಾರು ಜನ ಯೇಸುಸಭೆ ಗುರುಗಳೊಂದಿಗೆ ಗೋವಾ ಕಡೆ ಪ್ರಯಾಣ ಹೊರಡುತ್ತಾರೆ ಹಾಗೂ ಅನೇಕ
ವರ್ಷ ದಕ್ಷಿಣ ಭಾರತದಲ್ಲಿ ಶುಭಸಂದೇಶ ಪ್ರಚಾರ ಮಾಡುತ್ತಾರೆ. ದಕ್ಷಿಣ ಭಾರತದ ಮಧುರೈ ಮಿಷನ್‌ನ ಮೇಲ್ವಿಚಾರಕರಾಗಿ
ಬಂದ ಜಾನ್ ದೆ ಬ್ರಿಟ್ಟೋ ಹಲವು ಹಿಂಸೆ ಬಾಧೆಗಳನ್ನು ಅನುಭವಿಸುತ್ತಾರೆ ಮತ್ತು ತಮ್ಮ ತ್ಯಾಗ, ಪರಿಶ್ರಮ,
ಶ್ರದ್ಧೆಯಿಂದ ದಕ್ಷಿಣ ಭಾರತದಲ್ಲಿ ಹಲವರು ಕ್ರೈಸ್ತ ಧರ್ಮ ಸ್ವೀಕರಿಸುವಂತೆ ಮಾಡುತ್ತಾರೆ. 1693ರ
ಫೆಬ್ರವರಿ 4ರಂದು ಜಾನ್‌ರವರು ರಕ್ತಸಾಕ್ಷಿಯಾಗುತ್ತಾರೆ. ಸಾವಿನ ಬಲಿಪೂಜೆಯಲ್ಲಿ ಅವರ
ತಾಯಿ ಶೋಕತಪ್ತರಾಗಿ
ಸರಳ ಉಡುಗೆಯನ್ನು ಉಡದೆ, ಹಬ್ಬದ ಸಂಭ್ರಮ ಸೂಚಿಸುವ ಅಲಂಕಾರದಲ್ಲಿ ಭಾಗವಹಿಸುತ್ತಾರೆ. 1947ರಲ್ಲಿ
ಜಗದ್ಗುರು 12ನೇ ಭಕ್ತಿನಾಥರು ಅವರನ್ನು ಸಂತರೆಂದು ಘೋಷಿಸುತ್ತಾರೆ. ಭಾರತವನ್ನು ಪ್ರೀತಿಸಿ, ಇಲ್ಲಿ
ಕ್ರಿಸ್ತನ ಸುವಾರ್ತೆ ಸಾರಿದ ಜಾನ್ ರವರಿಗೆ ಭಾರತದ ಕ್ರೈಸ್ತರು
ಸದಾ ಚಿರಋಣಿಯಾಗಿರಬೇಕು.
ಇಂದಿನ ಸಂತರು
ಸಂತ ಜಾನ್ ದೆ ಬ್ರಿಟ್ಟೋ (ಕ್ರಿಸ್ತಶಕ 1647-1693)
ಪೋರ್ಚುಗಲ್‌ನ ಈ ಮಹಾಸಂತರು ಲಿಸ್ಬನ್ನಲ್ಲಿ ಜನಿಸಿದರು. ತಮ್ಮ ತಾಯಿಯ ಹರಕೆಯಂತೆ 15ನೇ ವಯಸ್ಸಿಗೆ ಇವರು ಯೇಸುಸಭೆಯನ್ನು ಸೇರಿ ಗುರುದೀಕ್ಷೆಯನ್ನು ಸ್ವೀಕರಿಸಿದರು. ದಕ್ಷಿಣ ಭಾರತದ ಮಧುರೈ ಮಿಷನ್ನಿನ ಮೇಲ್ವಿಚಾರಕರಾಗಿ ಬಂದ ಇವರು ಹಲವು ಹಿಂಸೆ ಬಾಧೆಗಳನ್ನು ಅನುಭವಿಸಿ ಅನೇಕರಿಗೆ ದೀಕ್ಷಾಸ್ನಾನವನ್ನು ನೀಡಿದರು. ಇವರ ನೇರವಾದ ಬೋಧನೆಯಿಂದ ಕುಪಿತಗೊಂಡ ಅರಸನೊಬ್ಬನಿಂದ ಶಿರಚ್ಛೇದನವಾಗುತ್ತದೆ. ’ನನ್ನನ್ನು ಹಿಂಬಾಲಿಸಲು ಇಚ್ಚಿಸುವವನು ತನ್ನ ಶಿಲುಬೆಯನ್ನು ಹೊತ್ತು ನನ್ನನ್ನು ಹಿಂಬಾಲಿಸಲಿ’ ಎಂಬ ಪ್ರಭುಯೇಸುವಿನ ಆದೇಶಕ್ಕೆ ಅನುಸಾರವಾಗಿ, ಶುಭಸಂದೇಶ ಪ್ರಸಾರ ಕಾರ್ಯದಲ್ಲಿ ತಮ್ಮನ್ನೇ ಸಕ್ರಿಯವಾಗಿ ತೊಡಗಿಸಿಕೊಂಡ ಸಂತ ಜಾನ್ ದೆ ಬ್ರಿಟ್ಟೋ ಅದೇ ಶುಭಸಂದೇಶದ ನಿಮಿತ್ತ ಬಂದಂತಹ ಕಷ್ಟಗಳನ್ನು ’ಪ್ರಭುಯೇಸು ತನ್ನ ಜೊತೆಗಿದ್ದಾರೆ’ ಎಂಬ ಅಚಲ ವಿಶ್ವಾಸ ಹಾಗೂ ಧೈರ್ಯದಿಂದ ಎದುರಿಸುತ್ತಾರೆ. ಅವರಿಗೆ ಆ ಧೈರ್ಯ ಬಂದಿದ್ದೇ ಅವರು ಕ್ರೈಸ್ತ ಮೌಲ್ಯಗಳಿಗೆ ತೋರಿದ ಬದ್ಧತೆಯಿಂದ. ಕ್ರಿಸ್ತರ ಮೇಲೆ ನಮಗಿರುವ ಪ್ರೀತಿ ನಮ್ಮ ಸತ್ಕಾರ್ಯಗಳ ಮುಖಾಂತರ ಅನಾವರಣಗೊಂಡರೆ ಕ್ರೈಸ್ತ ಬದುಕು ಸುಂದರ ಹಾಗೂ ಸಾರ್ಥಕ.

ಚಿತ್ರ: ಗೂಗಲ್ ಕೃಪೆ

No comments:
Post a Comment