ಸಾರ್ವಜನಿಕ ಉದ್ದೇಶ: ಮಾನವ ಸಾಗಾಣಿಕೆ, ವೇಶ್ಯಾವಾಟಿಕೆ ಹಾಗೂ ಹಿಂಸಾತ್ಮಕ ಕ್ರಿಯೆಗಳಿಂದಾಗಿ ನಿರಾಶ್ರಿತರಾದವರಿಗೆ ಆಶ್ರಯವನ್ನು ನೀಡಲು ಸರ್ವರೂ ಉದಾರತೆಯಿಂದ ಮುಂದೆ ಬರುವಂತೆ.
06 ಫೆಬ್ರವರಿ 2೦19
ಬುಧವಾರ / ಕೆಂಪು / ಪಾಲ್‌ಮೀಕಿ ಮತ್ತು ಸಂಗಡಿಗರು (ರ.ಸಾ)
1ನೇ ವಾಚನ - ಹಿಬ್ರಿ 12: 4-7, 11-15
ಕೀರ್ತನೆ - 103: 1-2, 13-14, 17-18
ಶುಭಸಂದೇಶ - ಮಾರ್ಕ 6: 1-6
1ನೇ ವಾಚನ - ಹಿಬ್ರಿ 12: 4-7, 11-15
ಕೀರ್ತನೆ - 103: 1-2, 13-14, 17-18
ಶುಭಸಂದೇಶ - ಮಾರ್ಕ 6: 1-6
ವಾಚನಗಳು
ಮೊದಲನೇ ವಾಚನ
ಹಿಬ್ರೀಯರಿಗೆ ಬರೆದ ಪತ್ರದಿಂದ ವಾಚನ
ಹಿಬ್ರಿ 12: 4-7, 11-15
4ಪಾಪದ ವಿರುದ್ಧ ನೀವು ಕೈಗೊಂಡ ಹೋರಾಟದಲ್ಲಿ ನಿಮ್ಮ ರಕ್ತವನ್ನೇ ಸುರಿಸುವ ಸ್ಥಿತಿಗೆ ನೀವಿನ್ನೂ ಬಂದಿಲ್ಲ. 5ಮಕ್ಕಳಿಗೆ ಹೇಳುವಂತೆ ದೇವರು ನಿಮಗೆ ಹೇಳಿರುವ ಎಚ್ಚರಿಕೆಯ ಮಾತನ್ನು ನೀವು ಮರೆತುಬಿಟ್ಟಿರೋ? “ಸುಕುಮಾರಾ, ಸರ್ವೇಶ್ವರ ಕೊಡುವ ಶಿಕ್ಷೆಯನ್ನು ತಾತ್ಸಾರ ಮಾಡದಿರು ಅವರು ನಿನ್ನನ್ನು ದಂಡಿಸುವಾಗ ಧೈರ್ಯಗೆಡದಿರು 6ಸರ್ವೇಶ್ವರ ತಾವು ಪ್ರೀತಿಸುವವನನ್ನು ಶಿಕ್ಷಿಸುವರು; ತಮಗೆ ಮಗನೆಂದು ಬರಮಾಡಿ.” 7ಶಿಸ್ತಿಗಾಗಿ ಶಿಕ್ಷೆಯನ್ನು ಸಹಿಸಿಕೊಳ್ಳಬೇಕು. ದೇವರು ನಿಮ್ಮನ್ನು ಮಕ್ಕಳಂತೆ ನೋಡಿಕೊಳ್ಳುತ್ತಾರೆ. ತಂದೆಯಿಂದ ಶಿಕ್ಷೆಯನ್ನು ಪಡೆಯದ ಮಗನಿದ್ದಾನೆಯೇ?
11ಯಾವ ಶಿಕ್ಷೆಯಾದರೂ ತಕ್ಷಣಕ್ಕೆ ಸಿಹಿಯಾಗಿರದೆ ಕಹಿಯಾಗಿಯೇ ಇರುತ್ತದೆ. ಹೀಗೆ ಶಿಸ್ತಿನ ಕ್ರಮಕ್ಕೆ ಒಳಗಾದವರು ಮುಂದಕ್ಕೆ ನ್ಯಾಯನೀತಿಯನ್ನೂ ಶಾಂತಿಸಮಾಧಾವನ್ನೂ ಪ್ರತಿಫಲವಾಗಿ ಪಡೆಯುತ್ತಾರೆ. 12ಆದ್ದರಿಂದ, ಜೋತುಬೀಳುವ ನಿಮ್ಮ ಕೈಗಳನ್ನು ಮೇಲೆತ್ತಿ, ಕುಸಿದುಬೀಳುವ ನಿಮ್ಮ ಮೊಣಕಾಲುಗಳನ್ನು ಚೇತರಿಸಿಕೊಳ್ಳಿ. 13ನೀವು ಹಿಡಿದಿರುವ ಹಾದಿಯನ್ನು ಸರಿಪಡಿಸಿಕೊಳ್ಳಿ. ಆಗ ಕುಂಟುವ ಕಾಲು ಉಳುಕದೆ ವಾಸಿಯಾಗುತ್ತದೆ. 14ಎಲ್ಲರೊಂದಿಗೂ ಶಾಂತಿಸಮಾಧಾನದಿಂದಿರಲು ಪ್ರಯತ್ನಿಸಿರಿ; ಪರಿಶುದ್ಧತೆಯನ್ನು ಅರಸಿರಿ; ಪರಿಶುದ್ಧತೆಯಿಲ್ಲದೆ ಯಾರೂ ದೇವರನ್ನು ಕಾಣುವಂತಿಲ್ಲ. 15ನಿಮ್ಮಲ್ಲಿ ಯಾರೂ ದೇವರ ಅನುಗ್ರಹವನ್ನು ಕಳೆದುಕೊಳ್ಳದಂತೆ ಎಚ್ಚರಿಕೆಯಾಗಿರಿ. ಯಾವ ವಿಷದ ಬೇರೂ ನಿಮ್ಮಲ್ಲಿ ತಲೆದೋರಿ, ಅಸಮಾಧಾನವನ್ನು ಹುಟ್ಟಿಸಿ, ಸಭೆಯನ್ನು ಕೆಡಿಸದಂತೆ ನೋಡಿಕೊಳ್ಳಿ.

ಕೀರ್ತನೆ
ಕೀರ್ತನೆ
103: 1-2, 13-14, 17-18
ಭಯಭಕ್ತರಿಗೆ ಪ್ರಭುವಿನ
ಪ್ರೀತಿಯಾದರೋ
ಯುಗಯುಗಾಂತರಕು
ಭಜಿಸು ನನ್ನ ಮನವೇ, ಭಜಿಸು ಪ್ರಭುವನು
ನನ್ನ ಅಂತರಂಗವೇ, ಭಜಿಸು ಆತನನು
ನೆನೆ ಆತನ ಪರಮಪಾವನ ನಾಮವನು
ಭಜಿಸು ನನ್ನ ಮನವೇ, ಭಜಿಸು ಪ್ರಭುವನು
ಮರೆಯದಿರು
ಆತನ ಉಪಕಾರಗಳೊಂದನು.
ತಂದೆ ಕರುಣೆ ತೋರಿಸುವಂತೆ ಮಕ್ಕಳಿಗೆ
ಕನಿಕರಿಸುವನಾತ
ತನಗೆ ಅಂಜುವವರಿಗೆ
ಏಕೆನೆ,
ನಮ್ಮ ಸ್ವಭಾವವನು ಆತನು ಬಲ್ಲ
ನಾವು ಹುಡಿಮಣ್ಣೆಂದವನಿಗೆ ತಿಳಿದಿದೆಯಲ್ಲಾ.
ಭಯಭಕ್ತರಿಗೆ
ಪ್ರಭುವಿನ
ಪ್ರೀತಿಯಾದರೋ
ಯುಗಯುಗಾಂತರಕು
ಅವರ ಮಕ್ಕಳ ಮಕ್ಕಳಿಗೆ ಆತನ ನೀತಿಯು ತಲತಲಾಂತರಕು
ಅಂತೆಯೇ ಆತನ ನಿಬಂಧನೆಗಳನು ಕೈಗೊಳ್ಳುವವರಿಗೆ
ಆತನ ವಿಧಿನಿಯಮಗಳು ನೆನಪಿನಲ್ಲಿಟ್ಟು ನಡೆವವರಿಗೆ.
ಶುಭಸಂದೇಶ
ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ
ಮಾರ್ಕ 6: 1-6
1ಯೇಸುಸ್ವಾಮಿ ಅಲ್ಲಿಂದ ಹೊರಟು ತಮ್ಮ ಸ್ವಂತ ಊರಿಗೆ ಹೋದರು. ಶಿಷ್ಯರು ಅವರನ್ನು ಹಿಂಬಾಲಿಸಿದರು. 2ಸಬ್ಬತ್ ದಿನ ಅಲ್ಲಿಯ ಪ್ರಾರ್ಥನಾಮಂದಿರದಲ್ಲಿ ಉಪದೇಶ ಮಾಡತೊಡಗಿದರು. ಕಿಕ್ಕಿರಿದು ನೆರೆದಿದ್ದ ಜನರು ಯೇಸುವಿನ ಬೋಧನೆಯನ್ನು ಕೇಳಿ ಬೆರಗಾದರು. ಇದೆಲ್ಲಾ ಇವನಿಗೆ ಎಲ್ಲಿಂದ ಬಂದಿತು? ಇವನು ಪಡೆದಿರುವ ಜ್ಞಾನವಾದರೂ ಎಂಥಾದ್ದು? ಇವನಿಂದ ಮಹತ್ಕಾರ್ಯಗಳು ಆಗುವುದಾದರೂ ಹೇಗೆ? 3ಇವನು ಆ ಬಡಗಿಯಲ್ಲವೆ? ಮರಿಯಳ ಮಗನಲ್ಲವೆ? ಯಕೋಬ, ಯೋಸೆ, ಯೂದ ಮತ್ತು ಸಿಮೋನ ಇವರ ಸಹೋದರನಲ್ಲವೆ? ಇವನ ಸಹೋದರಿಯರು ಇಲ್ಲಿಯೇ ವಾಸಮಾಡುತ್ತಿಲ್ಲವೆ? ಎಂದು ಹೇಳುತ್ತಾ ಯೇಸುವನ್ನು ತಾತ್ಸಾರ ಮಾಡಿದರು. 4ಆಗ ಯೇಸು, ಪ್ರವಾದಿಗೆ ಬೇರೆ ಎಲ್ಲಿಯಾದರೂ ಗೌರವ ದೊರಕೀತು. ಆದರೆ ಸ್ವಗ್ರಾಮದಲ್ಲಿ, ಸ್ವಜನರಲ್ಲಿ, ಸ್ವಗೃಹದಲ್ಲಿ ಗೌರವ ದೊರಕದು, ಎಂದರು. 5ಕೆಲವು ರೋಗಿಗಳ ಮೇಲೆ ಕೈಗಳನ್ನಿರಿಸಿ ಅವರನ್ನು ಗುಣಪಡಿಸಿದ್ದನ್ನು ಬಿಟ್ಟರೆ ಇನ್ನಾವ ಮಹತ್ತಾದ ಕಾರ್ಯಗಳನ್ನೂ ಅವರು ಅಲ್ಲಿ ಮಾಡಲಾಗಲಿಲ್ಲ. 6ಆ ಜನರ ಅವಿಶ್ವಾಸವನ್ನು ಕಂಡು ಯೇಸುವಿಗೆ ಬಹಳ ಅಚ್ಚರಿಯಾಯಿತು.

ಚಿಂತನೆ
ತಾತ್ಸಾರದ ನೋವು
ತಾತ್ಸಾರದ ನೋವು
ಯೇಸುಸ್ವಾಮಿಯನ್ನು
ತಮ್ಮ ಸ್ವಂತ ಊರಿನಲ್ಲಿ ಸ್ವಂತ ಜನರೇ ತಾತ್ಸಾರ ಮಾಡುತ್ತಾರೆ. ತಾತ್ಸಾರ ಮಾಡುವುದು ಎಂದರೆ ಅವರನ್ನು
ಕಡೆಗಣಿಸುತ್ತಾರೆ, ಅವಮಾನ ಮಾಡುತ್ತಾರೆ. ಜೀವನದಲ್ಲಿ ಇತರರಿಂದ ತಾತ್ಸಾರಕ್ಕೆ, ಅವಮಾನಕ್ಕೆ ಗುರಿಯಾಗದವರು
ಯಾರಿದ್ದಾರೆ? ವಿಶ್ವದ ಪ್ರಸಿದ್ದ ನಾಯಕರಾಗಿದ್ದ ಅಬ್ರಹಾಮ್ ಲಿಂಕನ್ ಕೂಡ ತಾತ್ಸಾರಕ್ಕೆ ಒಳಗಾಗಿದ್ದರು.
ಸೇವೆಯ ಮೂರ್ತಿ ಮದರ್ ತೆರೇಸ ಕೂಡ ಅವಮಾನಕ್ಕೆ ಗುರಿಯಾಗಿದ್ದರು. ಯೇಸು ಕೂಡ ಇದಕ್ಕೆ ಹೊರತಾಗಲಿಲ್ಲ.
ಅನೇಕ ಬಾರಿ ಯೇಸುವನ್ನು ಅವಮಾನಕ್ಕೆ, ತಾತ್ಸಾರಕ್ಕೆ ಗುರಿಮಾಡುವುದನ್ನು ಶುಭಸಂದೇಶದಲ್ಲಿ ಕಾಣುತ್ತೇವೆ.
ಆದರೆ ಯೇಸು ಧೃತಿಗೆಡಲಿಲ್ಲ ಧೈರ್ಯದಿಂದ ಎಲ್ಲವನ್ನೂ ಎದುರಿಸಿದರು. ನಮ್ಮ ಜೀವನದಲ್ಲೂ ಕೂಡ ಅನೇಕ ಬಾರಿ
ನಮ್ಮ ಸ್ನೇಹಿತರು, ಬಂಧುಗಳು ನಮ್ಮನ್ನು ತಾತ್ಸಾರ ಮಾಡಬಹುದು. ನಿರಾಶೆಗೆ ಒಳಗಾಗದೆ ಧೈರ್ಯದಿಂದ, ಛಲದಿಂದ
ಅವರನ್ನು ಎದುರಿಸುವುದನ್ನು ಕ್ರಿಸ್ತನಿಂದ ಕಲಿಯಬೇಕಿದೆ. ತಾತ್ಸಾರದ ನೋವನ್ನು ಅನುಭವಿಸಿರುವ ನಾವು
ಮತ್ತೊಬ್ಬರನ್ನು ತಾತ್ಸಾರ ಮಾಡದೆ ಜೀವಿಸಲು ಪ್ರಯತ್ನಿಸೋಣ.
ಇಂದಿನ ಸಂತರು
ಸಂತ ಪೌಲ್ ಮಿಕಿ (ಕ್ರಿಸ್ತಶಕ 1562-1597)
ಇವರು ಜಪಾನ್ ದೇಶದ ಟೌನುಕುಮಾಡದಲ್ಲಿ ಜನಿಸಿದರು. ಯೇಸುಸಭೆಯ ಗುರುಗಳಿಂದ ವಿದ್ಯಾಭ್ಯಾಸವನ್ನು ಪಡೆದರು. ಅನಂತರ ಯೇಸುಸಭೆಯನ್ನು ಸೇರಿ ಪ್ರಸಿದ್ಧ ಪ್ರಬೋಧಕರಾಗಿ ಹೆಸರುವಾಸಿಯಾದರು. ಆದರೆ ಕೆಲವೇ ವರ್ಷಗಳಲ್ಲಿ ಇವರನ್ನು ಹಾಗೂ ಕಥೋಲಿಕರನ್ನು ಬಂಧಿಸಿ ಸೆರೆಮನೆಗೆ ತಳ್ಳಿ ಒತ್ತಾಯಪೂರ್ವಕವಾಗಿ ಕೈಟೋದಿಂದ ನಾಗಸಾಕಿವರೆಗೂ ನಡೆಸಿಕೊಂಡು ಹೋಗಿ ಶಿಲುಬೆಗೇರಿಸಲಾಯಿತು. ’ಶಿಲುಬೆಯೇ ನಿನ್ನ ಮಾರ್ಗ, ಮುಂದೆ ನಡೆಯುವಾಗ ಹಿಂದೆ ನೋಡದಿರು ಯೇಸುವೇ ಜೀವದಾತ’ ಎಂಬ ಗೀತೆಯ ಸಾಲುಗಳು ಪ್ರತಿಧ್ವನಿಸುವ ಸತ್ಯವೇ ಇದು; ನಮ್ಮಲ್ಲಿನ ವಿಶ್ವಾಸದ ಸತ್ವ ಪರೀಕ್ಷೆಗೊಳಗಾಗುವುದೇ ಹಿಂಸೆ ಹಾಗೂ ಸಂಕಷ್ಟಗಳ ಸಮಯದಲ್ಲಿ. ಆದರೂ ತನ್ನ ತಪ್ಪಿಲ್ಲದಿದ್ದರೂ ನಮಗಾಗಿ ಶಿಲುಬೆ ಹೊತ್ತು ಸಹನೆಯ, ಕ್ಷಮೆಯ ಸಂದೇಶವನ್ನು ಸಾರಿದ ಪ್ರಭುಯೇಸು ಈ ನಮ್ಮ ಶಿಲುಬೆಯ ಹಾದಿಯಲ್ಲಿ ಜೊತೆಗಿರುತ್ತಾರೆ. ನಮ್ಮನ್ನು ಕೈ ಹಿಡಿದು ಮುನ್ನಡೆಸುತ್ತಾರೆ ಎಂಬ ಅಚಲ ಭರವಸೆಯೊಂದಿಗೆ ಮುಂದೆ ಸಾಗೋಣ. ಈ ಪಯಣದಲ್ಲಿ ನಾವು ಸೋತಾಗ ಪ್ರಭುಯೇಸು ಹೊತ್ತ ಶಿಲುಬೆ ಸಂತ ಪೌಲ್ ಮಿಕಿ ಮತ್ತು ಅವರ ಸಂಗಡಿಗರಿಗೆ ಬಲ ನೀಡಿದಂತೆ ನಮಗೂ ಶಕ್ತಿ ಹಾಗೂ ಸ್ಪೂರ್ತಿಯನ್ನು ನೀಡುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.

ಚಿತ್ರ: ಗೂಗಲ್ ಕೃಪೆ
ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿಡಿ

No comments:
Post a Comment