Tuesday, 11 June 2019

12 ಜೂನ್ 2೦19

ಹಸಿರು/ಬುಧ/ ಸಾಧಾರಣ ಕಾಲದ ಹತ್ತನೇ ವಾರ        
1ನೇ  ವಾಚನ  -  2  ಕೊರಿಂಥ  34-11 
ಕೀರ್ತನೆ  -  985-9             
ಶುಭಸಂದೇಶಮತ್ತಾಯ  517-19    

1ನೇ  ವಾಚನ  -  2  ಕೊರಿಂಥ  3:  4-11 
4 : ಕ್ರಿಸ್ತಯೇಸುವಿನ ಮುಖಾಂತರ ನಮಗೆ ದೇವರಲ್ಲಿ ಇಂಥ ಭರವಸೆ ಇರುವುದರಿಂದಲೇ ಇದನ್ನು ಹೇಳುತ್ತಿದ್ದೇವೆ.
5 : ನಮ್ಮ ಸ್ವಂತ ಶಕ್ತಿಯಿಂದಲೇ ಏನನ್ನೋ ಸಾಧಿಸಿಬಿಟ್ಟಿದ್ದೇವೆ ಎಂದು ಹೇಳಿಕೊಳ್ಳುವ ಸಾಮಥ್ರ್ಯ ನಮಗಿಲ್ಲ. ನಮ್ಮ ಸಾಮಥ್ರ್ಯವೆಲ್ಲ ದೇವರಿಂದಲೇ ಬಂದುದು.
6 : ನಮಗೆ ಹೊಸ ಒಡಂಬಡಿಕೆಯ ಸೇವಕರಾಗುವಂಥ ಸಾಮಥ್ರ್ಯವನ್ನು ನೀಡಿದವರು ದೇವರೇ. ಈ ಒಡಂಬಡಿಕೆ ಲಿಖಿತ ಶಾಸನಕ್ಕೆ ಸಂಬಂಧಿಸಿದ್ದಲ್ಲ, ಪವಿತ್ರಾತ್ಮರಿಗೆ ಸಂಬಂಧಿಸಿದ್ದು, ಲಿಖಿತವಾದುದು ಮೃತ್ಯುಕಾರಕವಾದುದು; ಪವಿತ್ರಾತ್ಮ ಸಂಬಂಧವಾದುದು ಸಜ್ಜೀವದಾಯಕವಾದುದು.
7 : ಕಲ್ಲಿನ ಮೇಲೆ ಕೊರೆಯಲಾದ ಶಾಸನ ಪ್ರಕಟವಾದಾಗ ದೇವರ ಮಹಿಮೆ ಕಾಣಿಸಿಕೊಂಡಿತು. ಆಗ ಮೋಶೆಯ ಮುಖವನ್ನು ಆವರಿಸಿದ್ದ ಪ್ರಭೆ ಕುಂದಿಹೋಗುವಂಥದ್ದಾಗಿದ್ದರೂ ಆ ಪ್ರಭೆಯಿಂದಾಗಿ ಆತನ ಮುಖವನ್ನು ದಿಟ್ಟಿಸಿ ನೋಡಲು ಇಸ್ರಯೇಲರಿಗೆ ಆಗಲಿಲ್ಲ.
8 : ಮೃತ್ಯುಕಾರಕವಾದ ಈ ಶಾಸನ ಅಷ್ಟು ಮಹಿಮೆಯಿಂದ ಕೂಡಿತ್ತಾದರೆ ಪವಿತ್ರಾತ್ಮ ಚೈತನ್ಯದಿಂದ ಕೂಡಿದ ಸೇವೆಯು ಇನ್ನೆಷ್ಟು ಮಹಿಮೆಯಿಂದ ಕೂಡಿರಬೇಕು?
9 : ದಂಡನೆಗೆ ಗುರಿಮಾಡುವ ಈ ಶಾಸನ ಸೇವೆ ಇಷ್ಟು ಮಹಿಮೆಯಿಂದ ಕೂಡಿದ್ದಾದರೆ, ಸದ್ಧರ್ಮಿಗಳೆಂದು ನಿರ್ಣಯಿಸುವ ಸೇವೆ ಇನ್ನೆಷ್ಟು ಮಹಿಮೆಯಿಂದ ಕೂಡಿರಬೇಕು?
10 : ಈ ಸೇವೆಯ ಅಪರಿಮಿತ ಮಹಿಮೆಯ ಮುಂದೆ ಹಿಂದಿನ ಶಾಸನದ ಮಹಿಮೆ ಇಲ್ಲದಂತಾಗಿದೆ.
11 : ಅಳಿದು ಹೋಗುವಂಥದ್ದೇ, ಅಷ್ಟು ಮಹಿಮೆಯಿಂದ ಕೂಡಿತ್ತಾದರೆ, ಶಾಶ್ವತವಾಗಿ ಉಳಿಯುವಂಥದ್ದು ಮತ್ತೆಷ್ಟು ಮಹಿಮೆಯಿಂದ ಕೂಡಿರಬೇಕು?

ಕೀರ್ತನೆ  -  98:  5-9    
ಪರಮ ಪಾವನನು ನಮ್ಮ ಸ್ವಾಮಿ ದೇವನು
5 : ಪರಮ ಪಾವನನು ನಮ್ಮ ಸ್ವಾಮಿ ದೇವನು / ಹೊಗಳಿರಿ, ಆತನ ಪಾದಪೀಠಕೆ ಅಡ್ಡಬೀಳಿರಿ ನೀವೆಲ್ಲರು //
6 : ಪ್ರಭುವಿನ ಯಾಜಕರು, ಮೋಶೆ ಮತ್ತು ಆರೋನನು / ಸಮುವೇಲನು ಸಹ ಆತನ ಶರಣರಲಿ ಒಬ್ಬನು / ಪ್ರಾರ್ಥಿಸಲು ಇವರು, ಪ್ರಭುವು ಸದುತ್ತರಿಸಿದನು //
7 : ಮೇಘಸ್ತಂಭದಲಿದ್ದು ಅವರೊಡನೆ ಮಾತಾಡಿದನು / ಕೈಗೊಂಡರು ಅವರು ಆತನಿತ್ತ ವಿಧಿನಿಯಮಗಳನು //
8 : ಸ್ವಾಮಿ ದೇವಾ, ನೀನವರಿಗೆ ಸದುತ್ತರ ಪಾಲಿಸಿದೆ / ತಪ್ಪನು ದಂಡಿಸಿದೆಯಾದರೂ ಕ್ಷಮಿಸುವ ದೇವನಾಗಿದ್ದೆ //
9 : ಘನಪಡಿಸಿರೆಮ್ಮ ಸ್ವಾಮಿ ದೇವನನು / ಶ್ರೀಪರ್ವತದಲಿ ವಂದಿಸಿ ಆತನನು / ಪರಮಪವಿತ್ರನು ಆ ನಮ್ಮ ದೇವನು //

ಶುಭಸಂದೇಶ-  ಮತ್ತಾಯ  5:  17-19    
17 : "ಮೋಶೆಯ ಧರ್ಮಶಾಸ್ತ್ರವನ್ನಾಗಲಿ, ಪ್ರವಾದಿಗಳ ಪ್ರವಚನಗಳನ್ನಾಗಲಿ ರದ್ದು ಮಾಡಲು ನಾನು ಬಂದೆನೆಂದು ತಿಳಿಯಬೇಡಿ. ರದ್ದು ಮಾಡಲು ಅಲ್ಲ, ಅವುಗಳನ್ನು ಸಿದ್ಧಿಗೆ ತರಲು ಬಂದಿದ್ದೇನೆ.
18 : ಭೂಮ್ಯಾಕಾಶಗಳು ಉಳಿದಿರುವ ತನಕ ಧರ್ಮಶಾಸ್ತ್ರವೆಲ್ಲ ನೆರವೇರುವುದೇ ಹೊರತು ಅದರಲ್ಲಿ ಒಂದು ಚಿಕ್ಕ ಅಕ್ಷರವಾಗಲಿ, ಚುಕ್ಕೆಯಾಗಲಿ ನಿರರ್ಥಕವಾಗದೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.
19 : ಹೀಗಿರುವಲ್ಲಿ, ಅದರ ಆಜ್ಞೆಗಳಲ್ಲಿ ಅತಿ ಚಿಕ್ಕದೊಂದನ್ನು ವಿೂರುವವನು, ವಿೂರುವಂತೆ ಜನರಿಗೆ ಬೋಧಿಸುವವನು, ಸ್ವರ್ಗಸಾಮ್ರಾಜ್ಯದಲ್ಲಿ ಅತ್ಯಲ್ಪನೆಂದು ಪರಿಗಣಿತನಾಗುವನು; ಧರ್ಮಶಾಸ್ತ್ರವನ್ನು ಪಾಲಿಸುವವನು, ಪಾಲಿಸುವಂತೆ ಜನರಿಗೆ ಬೋಧಿಸುವವನು, ಸ್ವರ್ಗಸಾಮ್ರಾಜ್ಯದಲ್ಲಿ ಮಹಾತ್ಮನೆಂದು ಪರಿಗಣಿತನಾಗುವನು.

ಚಿಂತನೆ
ಯಹೂದ್ಯರಿಗೆ ಧರ್ಮಶಾಸ್ತ್ರದ ಆಚರಣೆ ಬಹಳ ಪ್ರಧಾನವಾಗಿತ್ತು. ಪ್ರಭು ಕ್ರಿಸ್ತನ ಜೀವನ ಶೈಲಿ, ಅವರ ಬೋಧನಾಲಹರಿ ಯಹೂದ್ಯರಿಗೆ ಕಿರಿಕಿರಿಯಾಗಿತ್ತು; ಏಕೆಂದರೆ ಕ್ರಿಸ್ತ ಅವರಿಗೆ ಬರಿ ಧರ್ಮಶಾಸ್ತ್ರದ ಆಚರಣೆ ಸಾಲದು, ಬದಲಾಗಿ ಅನುಸರಣೆ ಬೇಕು. ಸರ್ವರೂ ದೇವರ ಮಕ್ಕಳು ಎಂಬ ಒಳಅರಿವಿಗೆ ತೆರೆದು್ಕೊಳ್ಳಬೇಕು. ಪರರನ್ನು ಅಂಗಿಕರಿಸಿ ಪ್ರೀತಿಸಬೇಕು. ಇವು ಆದರ್ಶಗಳಾಗಿ ಇತರರಿಗೆ ಮಾದರಿಯಾಗಬೇಕು. ಆದರೆ ಯಹೂದ್ಯರು ಪ್ರಭು ಯೇಸು ಧರ್ಮಶಾಸ್ತ್ರವನ್ನು ಅನುಸರಿಸುವುದಿಲ್ಲವೆಂದು ಅವರನ್ನು ದಿಕ್ಕರಿಸಲು ಆರಂಭಿಸಿದರು. ಅಂಥವರಿಗೆ ಯೇಸು ನಾನು ಬಂದಿರುವುದು ಧರ್ಮಶಾಸ್ತ್ರವನ್ನು ಸಿದ್ಧಿಗೆ ತರಲು ರದ್ದು ಮಾಡಲು ಅಲ್ಲವೆಂದು ಹಾಗೂ ನೈಜ ಧರ್ಮಶಾಸ್ತ್ರರದ ಅನುಸರಣೆ ಸ್ವರ್ಗಸಾಮ್ರಾಜ್ಯಕ್ಕೆ ಕರೆದ್ಯೂಯುತ್ತದೆ ಎನ್ನತ್ತಾರೆ. ಆದರೆ ಯಾರು ಅದನ್ನು ಸರಿಯಾಗಿ ಬೋಧಿಸುವುದಿಲ್ಲವೂ ಅವರು ಸ್ವರ್ಗಸಾಮ್ರಾಜ್ಯದಿಂದ ವಂಚಿತರಾಗುತ್ತಾರೆ ಎನ್ನುತ್ತಾರೆ.

No comments:

Post a Comment