ಹಸಿರು/ ಶನಿ/ ಸಾಧಾರಣ ಕಾಲದ ಹದಿಮೂರನೇ ವಾರ
1ನೇ ವಾಚನ - ಆದಿ 27: 1-5, 15-29.
ಕೀರ್ತನೆ - 135: 1-6,
ಶುಭಸಂದೇಶ - ಮತ್ತಾಯ 9: 14-17
ಐಚ್ಛಿಕ ಸ್ಮರಣೆ - ಸಂತ ಮರಿಯ ಗೊರೆಟ್ಟಿ, (ಕ ಮತ್ತು ರ.ಸಾ)
1ನೇ ವಾಚನ - ಆದಿ 27: 1-5, 15-29.
ಕೀರ್ತನೆ - 135: 1-6,
ಶುಭಸಂದೇಶ - ಮತ್ತಾಯ 9: 14-17
ಐಚ್ಛಿಕ ಸ್ಮರಣೆ - ಸಂತ ಮರಿಯ ಗೊರೆಟ್ಟಿ, (ಕ ಮತ್ತು ರ.ಸಾ)
1ನೇ ವಾಚನ - ಆದಿ 27: 1-5, 15-29.
1 : ಇಸಾಕನಿಗೆ ಮುಪ್ಪಿನಿಂದ ಕಣ್ಣು ಕಾಣಲಾರದಷ್ಟು ಮಬ್ಬಾಯಿತು. ಅವನು ತನ್ನ ಹಿರಿಯ ಮಗ ಏಸಾವನನ್ನು ಕರೆದು, “ಮಗನೇ,” ಎನ್ನಲು ಏಸಾವನು, “ಇಗೋ, ಇಲ್ಲೇ ಇದ್ದೇನೆ,” ಎಂದನು.
2 : ಇಸಾಕನು ಅವನಿಗೆ, “ನೋಡು, ನಾನು ಮುದುಕನಾಗಿಬಿಟ್ಟೆ. ಯಾವಾಗ ಸಾಯುತ್ತೇನೋ ಗೊತ್ತಿಲ್ಲ;
3 : ಆದುದರಿಂದ ನಿನ್ನ ಆಯುಧಗಳನ್ನೂ ಬಿಲ್ಲುಬತ್ತಳಿಕೆಗಳನ್ನೂ ತೆಗೆದುಕೊಂಡು ಕಾಡಿಗೆ ಹೋಗು; ಬೇಟೆಯಾಡಿ ಬೇಟೆಯ ಮಾಂಸವನ್ನು ತೆಗೆದುಕೊಂಡು ಬಾ;
4 : ಅದರಿಂದ ನನಗಿಷ್ಟವಾಗಿರುವ ಸವಿಯೂಟವನ್ನೂ ಅಣಿಮಾಡಿ ಬಡಿಸು. ಸಾವು ಬರುವುದಕ್ಕೆ ಮುಂಚೆ ನಾನು ನಿನ್ನನ್ನು ಮನಸಾರೆ ಆಶೀರ್ವದಿಸುತ್ತೇನೆ,” ಎಂದು ಹೇಳಿದನು.
5 : ಇಸಾಕನು ತನ್ನ ಮಗ ಏಸಾವನಿಗೆ ಹೇಳಿದ ಮಾತು ರೆಬೆಕ್ಕಳ ಕಿವಿಗೆ ಬಿದ್ದಿತು. ಏಸಾವನು ಬೇಟೆಯಾಡಲು ಕಾಡಿಗೆ ಹೋಗಿದ್ದಾಗ,
15 : ತನ್ನ ಹಿರಿಯ ಮಗ ಏಸಾವನ ಬಟ್ಟೆಗಳಲ್ಲಿ ಶ್ರೇಷ್ಠವಾದವು ಮನೆಯಲ್ಲಿ ಆಕೆಯ ವಶದಲ್ಲಿದ್ದವು. ಅವುಗಳನ್ನು ತೆಗೆದು ಕಿರಿಯ ಮಗ ಯಕೋಬನಿಗೆ ತೊಡಿಸಿದಳು.
16 : ಮೇಕೆಮರಿಗಳ ಚರ್ಮವನ್ನು ಅವನ ಕೈಗಳಿಗೂ ನುಣುಪಾದ ಕೊರಳಿಗೂ ಸುತ್ತಿದಳು.
17 : ತಾನು ಸಿದ್ಧ ಮಾಡಿದ್ದ ಸವಿಯೂಟವನ್ನು ಸುಟ್ಟಿದ್ದ ರೊಟ್ಟಿಯನ್ನೂ ತನ್ನ ಮಗ ಯಕೋಬನ ಕೈಗೆ ಕೊಟ್ಟಳು.
18 : ಯಕೋಬನು ತಂದೆಯ ಬಳಿಗೆ ಹೋಗಿ, “ಅಪ್ಪಾ” ಎಂದು ಕರೆದನು. ತಂದೆಯು, “ಏನು ಮಗನೇ, ನೀನು ಯಾವ ಮಗನು?” ಎಂದು ಕೇಳಿದನು.
19 : ಯಕೋಬನು; “ನಾನೇ ನಿಮ್ಮ ಹಿರಿಯ ಮಗ ಏಸಾವನು; ನಿಮ್ಮ ಅಪ್ಪಣೆಯಂತೆ ಮಾಡಿಕೊಂಡು ಬಂದಿದ್ದೇನೆ. ಎದ್ದು ಕುಳಿತುಕೊಂಡು ನಾನು ತಂದಿರುವ ಬೇಟೆಮಾಂಸವನ್ನು ಊಟಮಾಡಿ ನನ್ನನ್ನು ಆಶೀರ್ವದಿಸಿ,” ಎಂದು ಹೇಳಿದನು.
20 : ಇಸಾಕನು, “ಏನು ಮಗನೇ, ಇಷ್ಟು ಬೇಗನೆ ಬೇಟೆ ಹೇಗೆ ಸಿಕ್ಕಿತು?” ಎಂದು ಕೇಳಿದನು. ಯಕೋಬನು, “ನಿಮ್ಮ ದೇವರಾದ ಸರ್ವೇಶ್ವರ ಅದನ್ನು ನನ್ನೆದುರಿಗೆ ಬರಮಾಡಿದರು,” ಎಂದನು.
21 ಆಗ ಇಸಾಕನು ಅವನಿಗೆ, “ಮಗನೇ, ಹತ್ತಿರಕ್ಕೆ ಬಾ; ನೀನು ನನ್ನ ಮಗನೋ ಅಲ್ಲವೋ, ಎಂದು ಮುಟ್ಟಿ ತಿಳಿದುಕೊಳ್ಳಬೇಕು,” ಎಂದನು.
22 : ಯಕೋಬನು ಹತ್ತಿರಕ್ಕೆ ಬಂದಾಗ ತಂದೆ ಇಸಾಕನು ಅವನನ್ನು ಮುಟ್ಟಿ ನೋಡಿ, “ಸ್ವರವೇನೋ ಯಕೋಬನ ಸ್ವರ; ಆದರೆ ಕೈ ಏಸಾವನ ಕೈ”, ಎಂದುಕೊಂಡನು.
24 : ಯಕೋಬನ ಕೈಗಳು ಅವನ ಅಣ್ಣನ ಕೈಗಳಂತೆ ರೋಮಮಯವಾಗಿ ಇದ್ದುದರಿಂದ ಇಸಾಕನು ಅವನ ಗುರುತನ್ನು ತಿಳಿಯಲಾರದೆ ಅವನನ್ನು ಆಶೀರ್ವದಿಸಿದನು.
24 : ಆದರೂ ಮರಳಿ, “ನೀನು ನಿಶ್ಚಯವಾಗಿ ನನ್ನ ಮಗ ಏಸಾವನೋ” ಎಂದು ಕೇಳಿದನು. ಯಕೋಬನು “ಹೌದು,” ಎಂದು ಉತ್ತರ ಕೊಟ್ಟನು. ಆಗ ಇಸಾಕನು, “ಊಟಮಾಡಲು ಆ ಬೇಟೆ ಮಾಂಸವನ್ನು ತಂದು ಬಡಿಸು. ಆಮೇಲೆ ನಿನ್ನನ್ನು ಆಶೀರ್ವದಿಸುತ್ತೇನೆ,” ಎಂದನು. ಅಂತೆಯೇ ಯಕೋಬನು ಹತ್ತಿರಕ್ಕೆ ತಂದು ಬಡಿಸಿದಾಗ ಇಸಾಕನು ಊಟಮಾಡಿದನು; ಕೊಟ್ಟ ದ್ರಾಕ್ಷಾರಸವನ್ನು ಕುಡಿದನು.
25 : ಆಗ ಇಸಾಕನು, “ಊಟಮಾಡಲು ಆ ಬೇಟೆ ಮಾಂಸವನ್ನು ತಂದು ಬಡಿಸು. ಆಮೇಲೆ ನಿನ್ನನ್ನು ಆಶೀರ್ವದಿಸುತ್ತೇನೆ,” ಎಂದನು. ಅಂತೆಯೇ ಯಕೋಬನು ಹತ್ತಿರಕ್ಕೆ ತಂದು ಬಡಿಸಿದಾಗ ಇಸಾಕನು ಊಟಮಾಡಿದನು; ಕೊಟ್ಟ ದ್ರಾಕ್ಷಾರಸವನ್ನು ಕುಡಿದನು.
26 : ಬಳಿಕ ಅವನ ತಂದೆ ಇಸಾಕನು, “ಮಗನೇ, ಹತ್ತಿರ ಬಂದು ನನಗೆ ಮುತ್ತು ಕೊಡು,” ಎಂದನು. ಅವನು ಹತ್ತಿರ ಬಂದು ಮುದ್ದಿಟ್ಟಾಗ
27 : ಇಸಾಕನು ಅವನ ಉಡುಗೆತೊಡಿಗೆಗಳ ಸುವಾಸನೆಯನ್ನು ಮೂಸಿ ನೋಡಿ, ಅವನಿಗೆ ಹೀಗೆಂದು ಆಶೀರ್ವಾದ ಮಾಡಿದನು - “ನನ್ನ ಸುಕುಮಾರನಿಂದೇಳುವ ಸುವಾಸನೆ ಸರ್ವೇಶ್ವರನಾಶೀರ್ವದಿಸಿದ ಮೊಗೆನೆಲದ ಸುವಾಸನೆಯಂತಿದೆ.
28 : ದಯಪಾಲಿಸಲಿ ದೇವ ನಿನಗೆ ಆಗಸದ ಮಂಜನು, ಸಾರವುಳ್ಳ ಹೊಲವನು ಅನುಗ್ರಹಿಸಲಿ ಹೇರಳ ದವಸ ಧಾನ್ಯವನು, ದ್ರಾಕ್ಷಾರಸವನು.
29 : ಸೇವೆಗೈಯಲಿ ನಿನಗೆ ಹೊರನಾಡುಗಳು ಅಡ್ಡಬೀಳಲಿ ನಿನಗೆ ಹೊರಜನಾಂಗಗಳು. ಒಡೆಯನಾಗು ಸೋದರರಿಗೆ ಅಡ್ಡಬೀಳಲಿ ತಾಯಕುಡಿ ನಿನಗೆ ಶಾಪವಿರಲಿ ನಿನ್ನನ್ನು ಶಪಿಸುವವರಿಗೆ ಆಶೀರ್ವಾದವು ನಿನ್ನನ್ನು ಹರಸುವವರಿಗೆ!”
ಕೀರ್ತನೆ - 135: 1-6,
1 : ಅಲ್ಲೆಲೂಯ / ಭಜಿಸಿರಿ, ಪ್ರಭುವಿನ ಶ್ರೀನಾಮವನು / ಭಜಿಸಿರಿ ಪ್ರಭುವಿನ ದಾಸರೆ, ಆತನನು
2 : ಕೀರ್ತಿಸಿರಿ ಪ್ರಭುವನು ಆತನ ಮಂದಿರದಲ್ಲಿರುವವರೇ / ನಮ್ಮ ದೇವಾಲಯದ ಪ್ರಾಕಾರದಲ್ಲಿಹ ಸೇವಕರೇ
3 : ಪ್ರಭು ಒಳ್ಳೆಯವನು, ಆತನಿಗೆ ಸ್ತುತಿಸ್ತೋತ್ರ / ಆತನ ನಾಮವನು ಸ್ತುತಿಸಿರಿ, ಅದು ಮನೋಹರ
4 : ಆಯ್ದುಕೊಂಡನಾತ ಯಕೋಬ್ಯ ವಂಶವನು / ಸ್ವಕೀಯ ಜನರನ್ನಾಗಿ ಇಸ್ರಯೇಲರನು
5 : ಗೊತ್ತೆನಗೆ ನಮ್ಮ ಪ್ರಭು ಘನವಂತನೆಂದು / ಸಕಲ ದೇವರುಗಳಿಗಿಂತಲು ಉನ್ನತನೆಂದು
6 : ಮಾಡುವನು ಪ್ರಭು ತನಗಿಷ್ಟ ಬಂದುದನು / ಭೂಮ್ಯಾಕಾಶ, ಸಮುದ್ರ ಸಾಗರದೊಳು
ಶುಭಸಂದೇಶ - ಮತ್ತಾಯ 9: 14-17
14 : ಬಳಿಕ ಯೊವಾನ್ನನ ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದರು. “ನಾವೂ ಫರಿಸಾಯರೂ ಉಪವಾಸ ವ್ರತವನ್ನು ಕೈಗೊಳ್ಳುತ್ತೇವೆ. ಆದರೆ ನಿಮ್ಮ ಶಿಷ್ಯರು ಏಕೆ ಹಾಗೆ ಮಾಡುವುದಿಲ್ಲ?" ಎಂದು ಪ್ರಶ್ನೆ ಹಾಕಿದರು.
15 : ಅದಕ್ಕೆ ಯೇಸು, "ಮದುವಣಿಗನು ಜೊತೆಯಲ್ಲಿ ಇರುವಷ್ಟು ಕಾಲ ಅವನ ಆಪ್ತರು ದುಃಖಪಡುವುದುಂಟೇ? ಮದುವಣಿಗನು ಅವರಿಂದ ಅಗಲಬೇಕಾಗುವ ಕಾಲವು ಬರುವುದು; ಆಗ ಅವರು ಉಪವಾಸ ಮಾಡುವರು.
16 : "ಹಳೆಯ ಅಂಗಿಗೆ ಹೊಸ ಬಟ್ಟೆಯ ತೇಪೆಯನ್ನು ಯಾರೂ ಹಾಕುವುದಿಲ್ಲ. ಏಕೆಂದರೆ ಹೊಸ ತೇಪೆಯು ಹಳೆಯ ಅಂಗಿಯನ್ನು ಹಿಂಜುವುದರಿಂದ ಹರಕು ಹೆಚ್ಚಾಗುತ್ತದೆ.
17 : ಅಂತೆಯೇ ಹಳೆಯ ಬುದ್ದಲಿಗಳಲ್ಲಿ ಹೊಸ ಮದ್ಯವನ್ನು ತುಂಬಿಡುವುದಿಲ್ಲ. ತುಂಬಿಟ್ಟರೆ ಬುದ್ದಲಿಗಳು ಬಿರಿಯುತ್ತವೆ, ಮದ್ಯವು ಚೆಲ್ಲಿ ಹೋಗುತ್ತದೆ; ಬುದ್ದಲಿಗಳೂ ಹಾಳಾಗುತ್ತವೆ. ಹೊಸ ಮದ್ಯವನ್ನು ಹೊಸ ಬುದ್ದಲಿಗಳಲ್ಲೇ ತುಂಬಿಡುತ್ತಾರೆ. ಆಗ ಎರಡೂ ಉಳಿಯುತ್ತವೆ," ಎಂದರು.
ಚಿಂತನೆ
( ಕನ್ನಡ ಬೈಬಲ್ ಡೈರಿ ಎಂಬ ಪುಸ್ತಕದಿಂದ)
ಮರಿಯ ಗೊರೆಟ್ಟಿ ಅತೀ ಚಿಕ್ಕ ವಯಸ್ಸಿನ ಸಂತಳೆಂದು ಘೋಷಿತಳಾಗಿದ್ದಾರೆ. ಹುಟ್ಟಿದ್ದು1890ರಲ್ಲಿ. ಕೊಲೆಗೀಡಾಗಿದ್ದು 1902ರಲ್ಲಿ. ಕೇವಲ 11 ವರ್ಷ ಪ್ರಾಯದಲ್ಲೇ ಆಕೆ ತನ್ನ ವಿಶ್ವಾಸಕ್ಕೆ, ಪಾವಿತ್ರತೆಗೆ ದಕ್ಕೆಯಾಗದಂತೆ ಕಾಮಾತುರನಾಗಿದ್ದ ಅಲಸ್ಸಾಂದ್ರೋನ ಇಚ್ಛೆಗೆ ವಿರೋಧಮಾಡಿ, ಆತನಿಂದ 14 ಬಾರಿ ಚೂರಿಯ ಇರಿತಕ್ಕೊಳಗಾಗಿ ಮರಣ ಹೊಂದಿದಳು. 1950ರಲ್ಲಿ ಆಕೆಯನ್ನು ಸಂತ ಕನ್ಯೆಯೆಂದು ಘೋಷಣೆ ಮಾಡಲಾಯಿತು. ಅಲಸ್ಸಾಂದ್ರೂ ತನ್ನ ಪಾಪಕ್ಕೆ ಪ್ರಾಯಶ್ಚಿತವಾಗಿ 27 ವರ್ಷ ಸೆರೆಮನೆವಾಸ ಮಾಡಿದ, ಮರಿಯಳ ತಾಯಿಯ ಬಳಿ ಕ್ಷಮಾಪಣೆ ಬೇಡಿದ, ಅನಂತರ ಧಾರ್ಮಿಕ ಸಹೋದರನಾದ.
No comments:
Post a Comment