Sunday, 8 September 2019

ಪರಮ ಪ್ರಸಾದಕ್ಕೆ ಆರಾಧನೆ



ಪರಲೋಕದಿಂದ ಇಳಿದುಬಂದ ಜೀವಂತ ರೊಟ್ಟಿಯು
ನಾನೇ; ರೊಟ್ಟಿಯನ್ನು ತಿನ್ನುವ ಯಾವೊಬ್ಬನೂ
ಸಾವಿಗೀಡಾಗನು; ನಾನು ಕೊಡುವ ರೊಟ್ಟಿಯು ನನ್ನ
ಮಾಂಸವೇ; ಅದನ್ನು ನಾನು ಲೋಕದ ಜೀವಕ್ಕಾಗಿ
ಕೊಡುವೆನು
(ಯೊವಾನ್ನ 6:51)

ಪರಮಪ್ರಸಾದಕ್ಕೆ ಪವಿತ್ರ ಗಂಟೆ ಆರಾಧನೆ
ಮೊದಲನೆಯ ಭಾಗ
ಆರಾಧನೆ ಸುತ್ತಿ ಸಲ್ಲಲಿ
1.ಆರಾಧನೆ ಸ್ತುತಿ ಸಲ್ಲಲಿ ನಿತ್ಯ ದೇವಾ
ಭಕ್ತಿಲಿ ಶರಣೆನ್ನ ಸಲ್ಲಿಪೆ ನಿತ್ಯವೂ ದೇವಾ
ನೀನೆನ್ನ ಪ್ರಭು 
ನೀನೆನ್ನ ನಿಧಿ, ನೀನೇ ಎನ್ನಯ ಸರ್ವಸ್ವ
2.ಪಾಡುತ ಸ್ತುತಿಗಳ ಉನ್ನತದಲ್ಲಿ ದೇವಾ
ವಂದನೆ ಅರ್ಪಿಪೆ ನಿನ್ನಯ ಚರಣಕೆ ದೇವಾ
ನೀನೆನ್ನ ಪ್ರಭು
ನೀನೆನ್ನ ನಿಧಿ, ನೀನೇ ಎನ್ನಯ ಸರ್ವಸ್ವ
3.ಪಾಪವಂ ಮನ್ನಿಸಿ ಕರುಣಾಕರ ದೇವಾ
ಕೃಪೆಯನ್ನು ನೀಡೆಂದು ಬೇಡ್ವೆವು ನಿತ್ಯವೂ ದೇವಾ
ನೀನೆನ್ನ ಪ್ರಭು
ನೀನೆನ್ನ ನಿಧಿ, ನೀನೇ ಎನ್ನಯ ಸರ್ವಸ್ವ

ಪವಿತ್ರ ಗಂಟೆಯ ವೇಳೆಯನ್ನು ಸಮರ್ಪಿಸುವ ಪಾರ್ಥನೆ

 ಅತ್ಯುನ್ನತ ಮಧುರ ಯೇಸುವೇ! ಗೆತ್ಸಮನಿ ತೋಪಿನಲ್ಲಿ ನೀವು ಅನುಭವಿಸಿದ ಹೇಳಲಸಾಧ್ಯವಾದ ಸಂಕಟಕ್ಕಾಗಿ ನನ್ನ ಪುಟ್ಟ ಹೃದಯದ ಸ್ನೇಹದಿಂದ ಸಮಯದಲ್ಲಿ ನಿಮ್ಮೊಂದಿಗೆ ಎಚ್ಚರವಾಗಿದ್ದು ನಿಮ್ಮನ್ನು ಉಪಸಮಿಸಲು ಇಚ್ಛಿಸುತ್ತೇನೆ. ನಿಮ್ಮ ಯಾತನೆಯಲ್ಲಿ ನೀವು ಅನುಭವಿಸಿದ ಹೇಳಲಸಾಧ್ಯವಾದ ಕಷ್ಟ ಸಂಕಟಗಳಿಗೆ ಕಾರಣವಾಗಿದ್ದ ನನ್ನ ಪಾಪಗಳನ್ನು ಮಾತ್ರವಲ್ಲದೆ ನನ್ನನ್ನೂ, ನನಗೆ ಸೆರಿಸುವ ಸಕಲವನ್ನೂ ಮರೆತುಬಿಡಲು ಆಶಿಸುತ್ತೇನೆ. ಸಮಯದಲ್ಲಿ ನಿಮಗೆ ಕಷ್ಟವನ್ನು ಕೊಟ್ಟ ನಾನು, ಸಮಯದಲ್ಲಿ ನಿಮಗೆ ಉಪಶಮನ ನೀಡಲು ಆಶಿಸುತ್ತೇನೆ. ಧರ್ಮಸಭೆಯ ಜಯಕ್ಕಾಗಿಯೂ, ಪಾಪಿಗಳು ಮನ ತಿರುಗುವದಕ್ಕಾಗಿಯೂ, ನೀವು ಸುರಿಸಿದ ರಕ್ತದ ಬೆವರಿಗಾಗಿಯೂ, ಪಟ್ಟ ಕಷ್ಟ ನಿಷ್ಟೂರಗಳಿಗಾಗಿಯೂ, ಮರಣಕ್ಕಾಗಿಯೂ ನಿಂದೆ ಪರಿಹಾರವನ್ನು, ಪರಿಶುದ್ಧ ಕಾಲವನ್ನು ನಿಮಗೆ ಒಪ್ಪಿಕೊಡುತ್ತೇನೆ.
ಕಹಿಯಾದ ಪಾತ್ರೆಯ ದೇವದೂತರೇ! ಪರಿಶುದ್ಧ ಕಾಲವನ್ನು ನನ್ನ ಯೇಸುವಿನ ಪವಿತ್ರ ಹೃದಯಕ್ಕೆ ಉಪಶಮನ ನೀಡಲು ಅವರ ನಾಮವನ್ನು ಪ್ರಪಂಚದ ಎಲ್ಲಾ ದಿಕ್ಕುಗಳಲ್ಲಿ ಹರಡಲೂ ಉಪಯೋಗಿಸುವಂತೆ ನಮಗೆ ನೆರವು ನೀಡಿರಿ

ಪರಮ ಪ್ರಸಾದದಲ್ಲಿರುವ ಯೇಸುವಿಗೆ ಆರಾಧನೆ

ಯೇಸುವೇ, ನನ್ನ ಪ್ರಭುವೇ, ನನ್ನ ದೇವರೇ, ದೇವಕುಮಾರರೇ, ಕನ್ಯಾಮರಿಯಮ್ಮನವರ ಪುತ್ರರೇ, ನೀವು ಇಲ್ಲಿ ಚಿತ್ತೈಸಿರುವರೆಂದು ವಿಶ್ವಾಸಿಸಿ ನಿಮ್ಮನ್ನು ಆರಾಧಿಸುತ್ತೇನೆಬಿಳುಪಾದ ಪರಿಶುದ್ಧ ರೊಟ್ಟಿಯ ಮರೆಯಲ್ಲಿ, ಸಂಪೂರ್ಣ ಮಹಿಮೆಯುಳ್ಳ ನೀವು ಮನುಷ್ಯಾವತಾರದಲ್ಲಿ ಪ್ರತ್ಯಕ್ಷರಾಗಿದ್ದಿರೆಂದು ವಿಶ್ವಾಸಿಸಿ ನಿಮ್ಮನ್ನು ಆರಾಧಿಸುತ್ತೇನೆನಿಮ್ಮ ದೇವದೂತರ ಪರಿವಾರಗಳೊಂದಿಗೆ ಸೇರಿ ಸಾಷ್ಟಾಂಗವಾಗಿ ಬಿದ್ದು ನಿಮಗೆ ಸ್ತುತಿಸ್ತೋತ್ರಗಳನ್ನು ಸಲ್ಲಿಸುತ್ತೇನೆ. ನಿಮ್ಮನ್ನು ಸುತ್ತಿಕೊಂಡಿರುವ ಸಂತ ಭಕ್ತರೊಂದಿಗೆ ಒಟ್ಟುಗೂಡಿ ಬಡದಾಸನಾದ  ನಾನು ನಿಮ್ಮನ್ನು ಆರಾಧಿಸುತ್ತೇನೆನಿಮ್ಮ ಪರಿಶುದ್ಧ ಮಾತೆಯಾದ ಮರಿಯಮ್ಮನವರೊಡಗೂಡಿ ಸಾಷ್ಟಾಂಗವಾಗಿ ಬಿದ್ದು ನಮಸ್ಕರಿಸುತ್ತೇನೆನನ್ನ ಪ್ರಭು ಯೇಸುವೇ! ನಿಮ್ಮ ಸ್ನೇಹದ ದಿವ್ಯ ಸಂಸ್ಕಾರದಲ್ಲಿ ಪ್ರಸನ್ನರಾಗಿರುವಿರೆಂದು ವಿಶ್ವಾಸಿಸಿ ಆರಾಧಿಸುತ್ತೇನೆ.
ನಂಬಿಕೆ ಪ್ರಕರಣ
ನನ್ನ ಪ್ರಭುವೇ! ನನ್ನ ದೇವರೇ! ನೀವು ನಿರಂತರವಾಗಿ ಕಲ್ಪಿಸಿದ ಸಕಲವನ್ನೂ ವಿಶ್ವಾಸಿಸುತ್ತೇನೆ. ಪಾಪಿಯೂ ಅಪಾತ್ರನೂ ಅದ ನನ್ನ ಮೇಲೆ ತಮಗಿರುವ ಅಪಾರವಾದ ಪ್ರೀತಿಯನ್ನು ವಿಸ್ವಾಸಿಸುವುದಕ್ಕಿಂತಲೂ ಕಷ್ಟವಾದದ್ದು ಬೇರೊಂದಿಲ್ಲ. ಆದರೆ ನನ್ನ ಪ್ರಭುವೇ, ಇದನ್ನು ವಿಶ್ವಾಸಿಸುತ್ತೇನೆ.
ಎಲ್ಲರು : ಯೇಸುವಿನ ಪೂಜ್ಯ ಹೃದಯವೇ, ನನ್ನ ನಂಬಿಕೆಯನ್ನೆಲ್ಲಾ ತಮ್ಮಲ್ಲಿರಿಸುತ್ತನೆ.
ಒಬ್ಬ : ನನ್ನ ಮೇಲೆ ತಮಗಿರುವ ಸ್ನೇಹವು ಅಲ್ಪಕಾಲದ ಸ್ನೇಹವಲ್ಲವೆಂದೂ ತಾವು ನಿತ್ಯ ಕಾಲದಿಂದ ನನ್ನನ್ನು ಸ್ನೇಹಿಸುತ್ತಿದ್ದೀರೆಂದೂ ವಿಶ್ವಾಸಿಸುತ್ತೇನೆ.
ಎಲ್ಲರು : ಯೇಸುವಿನ ಪೂಜ್ಯ ಹೃದಯವೇ, ನನ್ನ ನಂಬಿಕೆಯನ್ನೆಲ್ಲಾ ತಮ್ಮಲ್ಲಿರಿಸುತ್ತನೆ.
ಒಬ್ಬ : ನನ್ನ ಮೇಲೆ ತಮಗಿರುವ ಪ್ರೀತಿ ಒಬ್ಬ ತಾಯಿ ತನ್ನ ಮಗುವಿನ ಮೇಲೆ ಇರಿಸಿರುವ ಪ್ರೀತಿಗಿಂತಲೂ ಮಿಗಿಲಾದುದೆಂದು ವಿಶ್ವಾಸಿಸುತ್ತೇನೆ.
ಎಲ್ಲರು : ಯೇಸುವಿನ ಪೂಜ್ಯ ಹೃದಯವೇ, ನನ್ನ ನಂಬಿಕೆಯನ್ನೆಲ್ಲಾ ತಮ್ಮಲ್ಲಿರಿಸುತ್ತನೆ.
ಒಬ್ಬ : ನನ್ನ ಜೀವಮಾನದಲ್ಲಿ ಸಂಭವಿಸಲಿರುವ ಸಕಲವನ್ನೂ ತಾವೇ ವಾತ್ಸಲ್ಯದೊಂದಿಗೆ ವಿವೇಕದೊಂದಿಗೆ ಮೊದಲೇ ನಿರ್ಣಯಿಸಿರುವುದನ್ನು ನಾನು ಅರಿತು ವಿಶ್ವಾಸಿಸುತ್ತೇನೆ.
ಎಲ್ಲರು : ಯೇಸುವಿನ ಪೂಜ್ಯ ಹೃದಯವೇ, ನನ್ನ ನಂಬಿಕೆಯನ್ನೆಲ್ಲಾ ತಮ್ಮಲ್ಲಿರಿಸುತ್ತನೆ.
ಒಬ್ಬ : ನೀವು ವರ್ಜಿಸುವ ಯಾವ ಸುಖ ಸಂತೋಷಗಳನ್ನೂ ಆಶಿಲಾರೆನು. ಏಕಂದರೆ, ನನಗೆ ಯಾವುದರಲ್ಲಿ ಒಳಿತು ಕೆಡುಕು ಇದೆ ಎಂಬುದನ್ನು ತಾವು ಅರಿತಿರುವಿರಿ.
ಎಲ್ಲರು : ಯೇಸುವಿನ ಪೂಜ್ಯ ಹೃದಯವೇ, ನನ್ನ ನಂಬಿಕೆಯನ್ನೆಲ್ಲಾ ತಮ್ಮಲ್ಲಿರಿಸುತ್ತನೆ.
ಒಬ್ಬ : ಎಲ್ಲ ಕಾರ್ಯಗಳಲ್ಲೂ ದೇವರ ಚಿತ್ತವು ನೆರವೇರಲಿ ಎಂದು ನಾನು ಯಾವಾಗಲೂ ಪ್ರಾರ್ಥಿಸುತ್ತೇನೆ.
ಎಲ್ಲರು : ಯೇಸುವಿನ ಪೂಜ್ಯ ಹೃದಯವೇ, ನನ್ನ ನಂಬಿಕೆಯನ್ನೆಲ್ಲಾ ತಮ್ಮಲ್ಲಿರಿಸುತ್ತನೆ.
ಒಬ್ಬ : ನಾನು ನನಗೆ ಸಂಭವಿಸುವ ಎಲ್ಲಾ ಸಂತೋಷಗಳನ್ನು ಧೈರ್ಯವುಳ್ಳ ಮನದೊಂದಿಗೆ ಸ್ವೀಕರಿಸುವ ಹಾಗೆ ನನ್ನ ಬಾಳಿನ ಕಷ್ಟ ತೊಂದರೆಗಳೆಲ್ಲವನ್ನೂ ಅಂಗೀಕರಿಸುತ್ತೇನೆ.
ಎಲ್ಲರು : ಯೇಸುವಿನ ಪೂಜ್ಯ ಹೃದಯವೇ, ನನ್ನ ನಂಬಿಕೆಯನ್ನೆಲ್ಲಾ ತಮ್ಮಲ್ಲಿರಿಸುತ್ತನೆ.
ಒಬ್ಬ : ನಾನು ಯಾವ ಕಾರ್ಯವನ್ನಾದರೂ ಕುರಿತು ಯೋಚಿಸಿ ವ್ಯಸನವನ್ನಾಗಲಿ ಸಂತೋಷವನ್ನಾಗಲಿ ಪಡಲಾರೆನು.
ಎಲ್ಲರು : ಯೇಸುವಿನ ಪೂಜ್ಯ ಹೃದಯವೇ, ನನ್ನ ನಂಬಿಕೆಯನ್ನೆಲ್ಲಾ ತಮ್ಮಲ್ಲಿರಿಸುತ್ತನೆ.
ಒಬ್ಬ : ನಾನು ಎಷ್ಟು ಬಲಹೀನನೂ, ಪಾಪಿಯೂ ಆಗಿದ್ದರೂ ನಿಮ್ಮ ದಯಾಳತ್ವವನ್ನು ಕುರಿತು ಎಂದಿಗೂ ಅಪನಂಬಿಕೆ ಪಡಲಾರೆನು.
ಎಲ್ಲರು : ಯೇಸುವಿನ ಪೂಜ್ಯ ಹೃದಯವೇ, ನನ್ನ ನಂಬಿಕೆಯನ್ನೆಲ್ಲಾ ತಮ್ಮಲ್ಲಿರಿಸುತ್ತನೆ.
ಒಬ್ಬ : ನನ್ನ ಎಲ್ಲಾ ತಂತ್ರ ಶೋಧನೆಗಳಲ್ಲಿಯೂ
ಎಲ್ಲರು : ಯೇಸುವಿನ ಪೂಜ್ಯ ಹೃದಯವೇ, ನನ್ನ ನಂಬಿಕೆಯನ್ನೆಲ್ಲಾ ತಮ್ಮಲ್ಲಿರಿಸುತ್ತನೆ.
ಒಬ್ಬ : ನನ್ನ ಎಲ್ಲ ಬಲಹೀನ ಸಮಯಗಳಲ್ಲಿಯೂ
ಎಲ್ಲರು : ಯೇಸುವಿನ ಪೂಜ್ಯ ಹೃದಯವೇ, ನನ್ನ ನಂಬಿಕೆಯನ್ನೆಲ್ಲಾ ತಮ್ಮಲ್ಲಿರಿಸುತ್ತನೆ.
ಒಬ್ಬ : ನನ್ನ ಎಲ್ಲಾ ಕಷ್ಟ ಸಂಕಟಗಳಲ್ಲಿಯೂ
ಎಲ್ಲರು : ಯೇಸುವಿನ ಪೂಜ್ಯ ಹೃದಯವೇ, ನನ್ನ ನಂಬಿಕೆಯನ್ನೆಲ್ಲಾ ತಮ್ಮಲ್ಲಿರಿಸುತ್ತನೆ.
ಒಬ್ಬ : ನನ್ನ ಎಲ್ಲಾ ಆಶಾಪಾಶಗಳಲ್ಲಿಯೂ
ಎಲ್ಲರು : ಯೇಸುವಿನ ಪೂಜ್ಯ ಹೃದಯವೇ, ನನ್ನ ನಂಬಿಕೆಯನ್ನೆಲ್ಲಾ ತಮ್ಮಲ್ಲಿರಿಸುತ್ತನೆ.
ಒಬ್ಬ: ನನ್ನ ಎಲ್ಲ ದುಃಖ ದುರಿತಗಳಲ್ಲಿಯೂ
ಎಲ್ಲರು : ಯೇಸುವಿನ ಪೂಜ್ಯ ಹೃದಯವೇ, ನನ್ನ ನಂಬಿಕೆಯನ್ನೆಲ್ಲಾ ತಮ್ಮಲ್ಲಿರಿಸುತ್ತನೆ.
ಒಬ್ಬ : ನನ್ನ ಪ್ರತಿಯೊಂದು ಜಯ ಅಪಜಯಗಳಲ್ಲಿಯೂ
ಎಲ್ಲರು : ಯೇಸುವಿನ ಪೂಜ್ಯ ಹೃದಯವೇ, ನನ್ನ ನಂಬಿಕೆಯನ್ನೆಲ್ಲಾ ತಮ್ಮಲ್ಲಿರಿಸುತ್ತನೆ.
ಒಬ್ಬ: ನನ್ನ ಎಲ್ಲ ಅಧ್ಯೆರ್ಯಗಳಲ್ಲಿಯೂ
ಎಲ್ಲರು : ಯೇಸುವಿನ ಪೂಜ್ಯ ಹೃದಯವೇ, ನನ್ನ ನಂಬಿಕೆಯನ್ನೆಲ್ಲಾ ತಮ್ಮಲ್ಲಿರಿಸುತ್ತನೆ.
ಒಬ್ಬ : ನನ್ನ ಬಾಳಿನಲ್ಲಿಯೂ ಸಾವಿನಲ್ಲಿಯೂ
ಎಲ್ಲರು : ಯೇಸುವಿನ ಪೂಜ್ಯ ಹೃದಯವೇ, ನನ್ನ ನಂಬಿಕೆಯನ್ನೆಲ್ಲಾ ತಮ್ಮಲ್ಲಿರಿಸುತ್ತನೆ.
ಒಬ್ಬ : ಈಗಲೂ ಸದಾ ಕಾಲಕ್ಕೂ
ಎಲ್ಲರು : ಯೇಸುವಿನ ಪೂಜ್ಯ ಹೃದಯವೇ, ನನ್ನ ನಂಬಿಕೆಯನ್ನೆಲ್ಲಾ ತಮ್ಮಲ್ಲಿರಿಸುತ್ತನೆ.

ಪ್ರಾರ್ಥನೆ
ಪ್ರಭುವೇ, ನಾನು ಅಂಧಕಾರದಲ್ಲಿರುವುದು ನಿಮ್ಮ ಚಿತ್ತವಾಗಿದ್ದರೆ, ನಿಮಗೆ ಸ್ತುತಿಯಾಗಲಿ. ನಾನು ಪ್ರಕಾಶದಲ್ಲಿರುವುದು ತಮ್ಮ ಚಿತ್ತವಾದರೆ ತಮಗೆ ಅಧಿಕಾಧಿಕವಾಗಿ ಸ್ತುತಿಯಾಗಲಿ. ನನ್ನನ್ನು ಆದರಿಸುವುದು ತಮ್ಮ ಚಿತ್ತವಾಗಿದ್ದರೆ ನಿಮಗೆ ಸ್ತುತಿಯಾಗಲಿ. ನಾನು ಕಷ್ಟದುಃಖಗಳಿಗೆ ಒಳಗಾಗುವುದು ತಮ್ಮ ಚಿತ್ತವಾದರೆ ನಿಮಗೆ ಸದಾಸ್ತುತಿಯಾಗಲಿ.
ಎಲ್ಲಾ ಪಾಪ ಸಮಯಗಳಿಂದ ನೀವು ನನ್ನನ್ನು ತಪ್ಪಿಸದ್ದೇ ಆದರೆ ನಾನು ಸಾವಿಗೂ, ನರಕಕ್ಕೂ ಹೆದರೆನು. ಆದುದರಿಂದ ತಾವು ನನ್ನನ್ನು ತಳ್ಳಿಬಿಡದೆ ಕಾಪಾಡಿರಿ. ನನ್ನನ್ನು ಹಿಂಬಾಲಿಸಿ ಬರುವ ಯಾವ ಉಪದ್ರವಗಳೂ ನನ್ನನ್ನು ಬಾಧಿಸಲಾರವು. ಏಕೆಂದರೆ, ಎಲ್ಲಾ ಕಾರ್ಯಗಳಲ್ಲಿಯೂ ಯೇಸುವಿನ ಪೂಜ್ಯ ಹೃದಯವೇ, ನನ್ನ ನಂಬಿಕೆಯನ್ನೆಲ್ಲಾ ತಮ್ಮಲ್ಲಿರುಸುತ್ತೇನೆ.

ಸಂತ ಮಾರ್ಗರೀತ ಮರಿಯಮ್ಮನವರ ನಂಬಿಕೆ ಪ್ರಾರ್ಥನೆ
ಸ್ನೇಹಮಯವಾದ ಪೂಜ್ಯ ಹೃದಯವೇ! ನನ್ನ ನಂಬಿಕೆಯನ್ನೆಲ್ಲಾ ತಮ್ಮಲ್ಲಿರಿಸುತ್ತೇನೆ. ಏಕೆಂದರೆ ನನ್ನ ಬಲಹೀನತ್ವವು ನನ್ನನ್ನು ಭಯಪಡಿಸುವುದಾದರು ನಿಮ್ಮ ದಯಾಳತ್ವವು ಸಕಲವನ್ನೂ ಕೊಡುವುದೆಂಬ ನಂಬಿಕೆ ನನಗೆ ಇದೆ.
ಯೇಸುವೇ, ನನ್ನ ಪ್ರಭುವೇ, ನನ್ನ ರಕ್ಷಕರೇ, ಸದಾಕಾಲದಲ್ಲಿಯೂ ಸರ್ವ ಕಾಲದಲ್ಲಿಯೂ ಎಲ್ಲಕ್ಕಿಂತಲೂ ಮೇಲಾಗಿ ನನ್ನ ನಂಬಿಕೆಯನ್ನು ತಮ್ಮಲ್ಲಿರಿಸುತ್ತೇನೆ.
ನನ್ನ ಪ್ರಭುವೇ, ನಿಮ್ಮನ್ನು ವಿಶ್ವಾಸಿಸುತ್ತೇನೆ; ಏಕೆಂದರೆ, ನೀವು ಸತ್ಯ ಸ್ವರೂಪಿಯಾಗಿದ್ದೀರಿ. ನಿಮ್ಮಲ್ಲಿ ನಂಬಿಕೆಯಿಡುತ್ತೇನೆ. ಏಕೆಂದರೆ ನೀವು ಅನಂತ ದಯೆಯುಳ್ಳವರಾಗಿದ್ದೀರಿ.
ಪ್ರಭುವೇ, ನಿಮ್ಮನ್ನು ಸ್ನೇಹಿಸುತ್ತೇನೆ: ಏಕೆಂದರೆ, ನೀವು ಅನಂತ ದಯೆಯುಳ್ಳವರಾಗಿದ್ದೀರಿ.
ನಿಮ್ಮ ಮೇಲಿರುವ ಪ್ರೀತಿಯಿಂದ ನಾನು ನನ್ನಂತೆಯೇ ಬೇರೆಯವರನ್ನು ಸ್ನೇಹಿಸುತ್ತೇನೆ. ಯೇಸುವಿನ ಪೂಜ್ಯ ಹೃದಯವೇ, ನನ್ನ ನಂಬಿಕೆಯನ್ನೆಲ್ಲಾ ತಮ್ಮಲ್ಲಿಸುತ್ತೇನೆ.

ಎರಡನೇ ಭಾಗ
(ಹಾಡು)
ಪರಮ ಪ್ರಸಾದದಲ್ಲಿರುವ ಯೇಸುವಿಗೆ ನಿಂದೆ ಪರಿಹಾರ ಪ್ರಾರ್ಥನೆ
ಅತಿ ಮಧುರವಾದ ಯೇಸುವೇ! ಇಹಲೋಕದಲ್ಲಿ ನಿಮ್ಮ ಮೇಲೆ ಹೊರಿಸಿರುವ ಲೆಕ್ಕವಿಲ್ಲದ ದ್ರೋಹಗಳಿಗೂ ನಿಂದೆಗಳಿಗೂ ಪರಿಹಾರವಾಗಿ ತಿಳಿವಳಿಕೆಯುಳ್ಳ ಎಲ್ಲಾ ಸೃಷ್ಟಿಗಳ ಹೃದಯಗಳ ಮೂಲಕ ನಿಮಗೆ ಸ್ತುತಿ ಸೋತ್ರವನ್ನು ಸಲ್ಲಿಸುತ್ತೇನೆ.
ಒಬ್ಬ : ನಿಮ್ಮ ಪ್ರತಿಯೊಂದು ನಿಟ್ಟುಸಿರಿಗೂ
ಎಲ್ಲರೂ : ನಾನು ನಿಮ್ಮನ್ನು ಆರಾಧಿಸುತ್ತೇನೆ.
ಒಬ್ಬ : ನೀವು ಸುರಿಸಿದ ಒಂದೊಂದು ತೊಟ್ಟು ಕಣ್ಣೀರಿಗೂ
ಎಲ್ಲರೂ : ನಾನು ನಿಮ್ಮನ್ನು ಆರಾಧಿಸುತ್ತೇನೆ.
ಒಬ್ಬ : ನೀವು ಅನುಭವಿಸಿದ ಒಂದೊಂದು ಸಂಕಟಕ್ಕೂ
ಎಲ್ಲರೂ : ನಾನು ನಿಮ್ಮನ್ನು ಆರಾಧಿಸುತ್ತೇನೆ.
ಒಬ್ಬ : ನಿಮ್ಮ ಯಾತನೆಯಲ್ಲಿ ನೀವು ಸುರಿಸಿದ ಒಂದೊಂದು ತೊಟ್ಟು ರಕ್ತಕ್ಕೂ
ಎಲ್ಲರೂ : ನಾನು ನಿಮ್ಮನ್ನು ಆರಾಧಿಸುತ್ತೇನೆ.
ಒಬ್ಬ : ನೀವು ಅನುಭವಿಸಿದ ಒಂದೊಂದು ಚಾಟಿಯ ಪೆಟ್ಟಿಗೂ
ಎಲ್ಲರೂ : ನಾನು ನಿಮ್ಮನ್ನು ಆರಾಧಿಸುತ್ತೇನೆ.
ಒಬ್ಬ : ನೀವು ಬಲಹೀನರಾಗಿ ಕರಡು ಮುರುಡಾದ ಹಾದಿಯಲ್ಲಿ ನಡೆದು ಹೋದಾಗ ಇಟ್ಟಿ ಒಂದೊಂದು ಹೆಜ್ಜೆಗೂ
ಎಲ್ಲರೂ : ನಾನು ನಿಮ್ಮನ್ನು ಆರಾಧಿಸುತ್ತೇನೆ.
ಒಬ್ಬ : ನಿಮ್ಮನ್ನು ಕ್ರೂರವಾಗಿ ಹೊಡೆದಾಗ ನಿಮ್ಮ ಮೇಲೆ ಉಂಟಾದ ಒಂದೊಂದು ಗಾಯಕ್ಕೂ
ಎಲ್ಲರೂ : ನಾನು ನಿಮ್ಮನ್ನು ಆರಾಧಿಸುತ್ತೇನೆ.
ಒಬ್ಬ : ನಿಮ್ಮ ಶಿರಸ್ಸನ್ನು ಚುಚ್ಚಿ ಬಾಧಿಸಿದ ಒಂದೊಂದು ಮುಳ್ಳಿಗೂ
ಎಲ್ಲರೂ : ನಾನು ನಿಮ್ಮನ್ನು ಆರಾಧಿಸುತ್ತೇನೆ.
ಒಬ್ಬ: ಪರಿಶುದ್ಧ, ಸುಂದರ ಹಾಗೂ ಪವಿತ್ರವಾದ ನಿಮ್ಮ ಪೂಜ್ಯ ಮುಖಕ್ಕೆ ಒಂದೊಂದು ಬಾರಿ ಉಗುಳಿದ್ದಕ್ಕೂ
ಎಲ್ಲರೂ : ನಾನು ನಿಮ್ಮನ್ನು ಆರಾಧಿಸುತ್ತೇನೆ.
ಒಬ್ಬ: ನಿಮ್ಮನ್ನು ಬಿಗಿದ ಒಂದೊಂದು ಕಟ್ಟಿಗೂ
ಎಲ್ಲರೂ : ನಾನು ನಿಮ್ಮನ್ನು ಆರಾಧಿಸುತ್ತೇನೆ.
ಒಬ್ಬ : ನಿಮಗೆ ಮಾಡಿದ ಒಂದೊಂದು ನಿಂದೆ ಪರಿಹಾಸ್ಯಕ್ಕೂ
ಎಲ್ಲರೂ : ನಾನು ನಿಮ್ಮನ್ನು ಆರಾಧಿಸುತ್ತೇನೆ.
ಒಬ್ಬ : ನಿಮ್ಮ ಮೇಲೆ ಹೊರಿಸಿದ ಒಂದೊಂದು ಸುಳ್ಳು ಅಪರಾಧಕ್ಕೂ
ಎಲ್ಲರೂ : ನಾನು ನಿಮ್ಮನ್ನು ಆರಾಧಿಸುತ್ತೇನೆ.
ಒಬ್ಬ: ನಿಮಗೆ ವಿರೋಧವಾಗಿ ಹೇಳಿದ ಒಂದೊಂದು ಸುಳ್ಳುಸಾಕ್ಷಿಗೂ
ಎಲ್ಲರೂ : ನಾನು ನಿಮ್ಮನ್ನು ಆರಾಧಿಸುತ್ತೇನೆ.
ಒಬ್ಬ : ನಿಮ್ಮ ಮೇಲೆ ಹೇಳಿದ ಒಂದೊಂದು ತೀರ್ಪಿಗೂ
ಎಲ್ಲರೂ : ನಾನು ನಿಮ್ಮನ್ನು ಆರಾಧಿಸುತ್ತೇನೆ.

ನನ್ನ ಪ್ರಭುವೇ! ನನ್ನ ಜೀವಮಾನ ಕಾಲದಲ್ಲಿ ಹೇಳುವ ಸಾವಿರಾರು ಸ್ತುತಿಗಳನ್ನು ಆಗಾಗ್ಗೆ ಸಂತೋಷದಿಂದ ಪುನರಾವರ್ತನೆ ಮಾಡಿ ನಿಮ್ಮನು ಸ್ತುತಿಸುತ್ತೇನೆ.
ಪ್ರಪಂಚದ ಎಲ್ಲಾ ಬಲಿಪೀಠಗಳ ಪರಮ ಪ್ರಸಾದದಲ್ಲಿ ಪ್ರಸನ್ನವಾಗಿರುವ ಯೇಸುವಿನ ಪವಿತ್ರ ಹೃದಯಕ್ಕೆ ಒಂದೊಂದು ನಿಮಿಷವೂ ಇಹಲೋಕದ ಅಂತ್ಯದವರೆಗೂ ಮಹಿಮೆ, ಪ್ರೀತಿ, ಸ್ತುತಿ ಸ್ತೋತ್ರ ಸಲ್ಲಲಿ

ಪರಿಶುದ್ಧ ಪರನ ಪ್ರಸಾದದ 33 ಮಣಿ ಮಾಲೆ
ಸ್ವರೂಪದ ಮೇಲೆ: ನನ್ನ ಯೇಸುವೇ! ನಾನು ಈಗ ನಿಮ್ಮನ್ನು ಪರಮಪ್ರಸಾದದಲ್ಲಿ ಸ್ವೀಕರಿಸಲಾಗದ ನಿಮಿತ್ತ ಆಧ್ಯಾತ್ಮಿಕವಾಗಿ ನನ್ನ ಹೃದಯದಲ್ಲಿ ಆಗಮಿಸಿ ನಿತ್ಯಕ್ಕೂ ಅದು ನಿಮಗೆ ಸ್ವಂತವಾಗಿರುವಂತೆ ಮಾಡಿರಿ.
ಮಣಿಗಳ ಮೇಲೆ: ಪರಮ ಪ್ರಸಾದದಲ್ಲಿ ಚಿತ್ತೈಸಿ ಬಂದಿರುವ ನನ್ನ ಯೇಸುವೇ!
ಎಲ್ಲರು : ನನ್ನ ಮೇಲೆ ದಯೆತೋರಿ.
ಪರಿಶುದ್ಧ ರೊಟ್ಟಿಯೇ, ದೈವಿಕ ರೊಟ್ಟಿಯೇ, ನಿಮಗೆ ಸದಾ ಸುತ್ತಿ ಸ್ತೋತ್ರಗಳು ಸಲ್ಲಲ್ಲಿ.

ಪರಮ ಪ್ರಸಾದದ ಮೇಲೆ ಇರಬೇಕಾದ ಪ್ರೀತಿ
ಅತಿ ಮಧುರ ಯೇಸುವೇ, ನಿಮ್ಮ ಪೂಜ್ಯ ಪೀಠದ ಮುಂದೆ ನನ್ನ ಹೃದಯವು ಸ್ನೇಹ ಜ್ವಾಲೆಯಿಂದ ಉರಿಯುವ ದೀಪವಾಗಲಿ!
ಮಹಾಪ್ರಿಯ ಯೇಸುವೇ! ನಾನು ನಿಮ್ಮನ್ನು ಮುಖಾಮುಖಿಯಾಗಿ ದರ್ಶಿಸಿ ಸದಾಕಾಲಕ್ಕೂ ನಿಮ್ಮ ಮಡಿಲಿನಲ್ಲಿದ್ದುಕೊಂಡು ವಿಶ್ರಾಂತಿ ಪಡೆಯುವುದು ಯಾವಾಗ?

ಅತ್ಯಂತ ಪ್ರೀತಿಭರಿತವಾದ ಪ್ರಭುವೇ! ನಿಮ್ಮ ಪ್ರಿಯ ಸಂಸ್ಕಾರದ ಸರಪಣಿಯಿಂದ ನನ್ನನ್ನು ಬಂಧಿಸಿರಿ. ಪಾರಿವಾಳದ ಹಾಗೆ ರೆಕ್ಕೆಗಳು ನನಗೆ ಇದ್ದಿದ್ದರೆ, ! ಎಷ್ಟೋ ಸಂತೋಷದಿಂದ ಹಾರಿ ಹೋಗಿ ನನ್ನ ಯೇಸುವಿನ ಪವಿತ್ರ ಹೃದಯದಲ್ಲಿ ಸದಾಕಾಲಕ್ಕೂ ವಿಶ್ರಾಂತಿ ಹೊಂದುತ್ತಿದ್ದೆನು!
ಪ್ರೇಮದ ಸರಪಣಿಯಿಂದ ಬಂಧಿಸಲ್ಪಟ್ಟಿರುವ ದಿವ್ಯ ಯೇಸುವೇ, ನಿರ್ಭಾಗ್ಯವಾದ ನನ್ನ ಹೃದಯವನ್ನು ನಿಮ್ಮ ಪವಿತ್ರ ಪೀಠದ ಕೆಳಗಿರಿಸಿ ಪ್ರೀತಿಯಿಂದ ಬಂಧಿಸಿರಿ.
ಮಹಾ ಪ್ರಿಯ ಯೇಸುವೇ, ತಮಗಾಗಿಯೇ ನೀವು ನನ್ನ ಹೃದಯವನ್ನು ಸೃಷ್ಟಿಸಿರುವುದರಿಂದ ಪವಿತ್ರ ಪೆಟ್ಟಿಗೆಯೊಳಗಿರುವ ನಿಮ್ಮ ದಿವ್ಯ ಹೃದಯದೊಂದಿಗೆ ಅದನಿಟ್ಟು ಮರೆಮಾಡಿರಿ.
ಸುಗುಣಭರಿತ ದಿವ್ಯ ಪ್ರಭುವೇ, ನನ್ನ ಹೃದಯವು ಕ್ಷೀಣವಾಗಿ ಬಲಹೀನವಾಗಿರುವುದರಿಂದ ನಿಮ್ಮ ಪವಿತ್ರ ಹೃದಯದೊಳಗೆ ಪ್ರವೇಶಿಸಿ ವಿಶ್ರಾಂತಿ ಹೊಂದಲು ನಿಮ್ಮ ಕೃಪೆಯನ್ನು ದಯಪಾಲಿಸಿರಿ.
ಯೇಸುವೇ, ಅಂತರಂಗದಲ್ಲಿರುವ ನಿಮ್ಮ ಸ್ನೇಹದ ರಹಸ್ಯಗಳನ್ನು ನನಗೆ ತಿಳಿಸಿರಿ. ಪರಮ ಪ್ರಸಾದದಲ್ಲಿ ವಾಸಿಸುವ ಯೇಸುವನ್ನು ಪ್ರಪಂಚವು ಚೆನ್ನಾಗಿ ತಿಳಿದುಕೊಂಡದ್ದೇ ಆದರೆ ಇಹಲೋಕವು ಅಧಿಕ ಸಮೀಪವಾಗಿ ಗೋಚರಿಸುತ್ತದೆ.
ಮಹಾ ಪವಿತ್ರ ಪರಮ ಪ್ರಸಾದಕ್ಕೆ ಯುಗಯುಗಾಂತರಕ್ಕೂ ಸ್ತುತಿ ಸ್ತೋತ್ರಗಳು ಸಲ್ಲಲಿ! ಕನ್ಯಾ ಮರಿಯಮ್ಮನವರೇ! ಪರಿಶುದ್ಧ ಪರಮ ಪ್ರಸಾದದಲ್ಲಿರುವ ನಮ್ಮ ಪ್ರಭುವಿನ ತಾಯೇ! ಕ್ರೈಸ್ತ ಭಕ್ತರ ಮಹಿಮೇಯೇ! ಧರ್ಮಸಭೇಯ ಸಂತೋಷವೇ! ನಮಗಾಗಿ ಪ್ರಾರ್ಥಿಸಿರಿ.
ಭಕ್ತವಿಶ್ವಾಸಿಗಳೆಲ್ಲರೂ ಪ್ರತಿದಿನವೂ ಪರಮ ಪ್ರಸಾದವನ್ನು ಸ್ವೀಕರಿಸಲು ಯೋಗ್ಯರಾಗಿರುವ ಹಾಗೆ ಅವರಲ್ಲಿ ಪರಿಶುದ್ಧ ಪರಮ ಪ್ರಸಾದದ ಮೇಲೆ ಭಕ್ತಿಯು ಹೆಚ್ಚು ಹೆಚ್ಚಾಗಿ ಉದ್ಭವಿಸುವಂತೆ ಮಾಡಿರಿ.
ಯೇಸುಸ್ವಾಮಿ ಸಂತ ಮರಿಯ ಮಾಗ್ದಲೇನಮ್ಮನವರಿಗೆ ದರ್ಶನವಾಗಿ ಇಗೋ! ಮನುಷ್ಯರನ್ನು ಪ್ರೀತಿಸುವ ಹೃದಯವನ್ನು ನೋಡು. ಆದರೆ ಮುಸುಷ್ಯನಾದರೋ ಪ್ರೀತಿಗೆ ಬದಲಾಗಿ ತಮ್ಮ ಪಾಪ ಮತ್ತು ಆಕ್ರಮಗಳಿಂದ ನನ್ನ ಹೃದಯವನ್ನು ನೋಯಿಸುತ್ತಿದ್ದಾರೆ. ನೀನಾದರೂ ಇದಕ್ಕೆ ಪರಿಹಾರವನ್ನು ಮಾಡಲು ಪ್ರಯತ್ನಿಸುವೆಯಾ? ಎಂಬುದಾಗಿ ಕೇಳಿದರು.
ಮೂರನೇ ಭಾಗ
ಹಾಡು : ಯೇಸುವೇ ಸ್ತೋತ್ರ
ಪ್ರಾರ್ಥಿಸೋಣ
ನನ್ನ ಪ್ರಭುವೇ, ನನ್ನ ದೇವರೇ, ನಿಮ್ಮ ಹೆಸರಿನಲ್ಲಿ ಕೇಳುವುದನೆಲ್ಲಾ ಪಿತನಲ್ಲಿ ಕೊಡುವಿರೆಂದು ನೀವು ವಚನಿಸಿದ್ದೀರಿ. ನಿಜವಾದ ದೇವರ ವಾಗ್ದಾನದ ಮೇಲೆ ನಂಬಿಕೆಯನ್ನಿಟ್ಟು ಈಗ ನನಗೆ ಬೇಕಾದುದನ್ನೆಲ್ಲಾ ನಮ್ಮ ಪರಲೋಕದ ಪಿತ ದೇವರಲ್ಲಿ ಕೇಳುತ್ತೇನೆ. ಅವುಗಳನ್ನು ನಮ್ಮ ಒಳಿತಿಗಾಗಿಯೂ ನಿಮ್ಮ ಅತ್ಯಂತ ಮಹಿಮೆಗಾಗಿಯೂ ಇರುವಂತೆ ನಿಮ್ಮ ಹೆಸರಿನಲ್ಲಿ ಕೇಳುತ್ತೇವೆ. ಅದನ್ನು ನಮಗೆ ಪಡೆದುಕೊಡಿರಿ.
(ನಮಗೆ ಅವಶ್ಯಕವಾದ ವರವನ್ನು ಕೇಳುವುದು)
ಫಲಭರಿತ ಪ್ರಾರ್ಥನೆ
ಕಷ್ಟಗಳನ್ನು ಕಳುಹಿಸಿ ಅವು ಫಲಕಾರಿಯಾಗುವಂತೆ ಮಾಡುವ ಸರ್ವವಲ್ಲಭರಾದ ಸರ್ವೇಶ್ವರಾ, ನಮ್ಮ ದೀನ ಕೋರಿಕೆಗೆ ಕಿವಿಗೊಡಿರಿ. ಮರಣದ ಪರಿಯಂತರವೂ ನಿಮಗೆ ಪ್ರಾಮಾಣಿಕವಾಗಿ ನಡೆಯಲು ಅವಶ್ಯಕವಾದ ವರಪ್ರಸಾದಗಳನ್ನು ನಮಗೆ ದಯಪಾಲಿಸಿರಿ. ಮತ್ತು ನಿಮ್ಮ ಪೂಜ್ಯ ಚಿತ್ತಕ್ಕೆ ಯಾವಾಗಲೂ ವಿಧೇಯರಾಗಿ ನಡೆಯಲು ಸಾಕಾಷ್ಟು ಶಕ್ತಿಯನ್ನು ಪರಿಶುದ್ಧ ದೇವಮಾತೆಯ ಮುಖಾಂತರ ನಮಗೆ ದಯಪಾಲಿಸಿರಿ.
ಮಹಾ ನೀತಿಯೂ, ಅತ್ಯುನ್ನತನೂ, ಮಹಾ ಪೂಜ್ಯವೂ ಆದ ನಿಮ್ಮ ಚಿತ್ತವು ಸರ್ವ ಕಾರ್ಯಗಳಲ್ಲಿಯೂ ನೇರವೇರಿ, ಯುಗಯುಂಗಾತರವೂ ಮಹಿಮೆಯನ್ನು ಹೊಂದಲಿ.
ಮಹಾ ಮಧುರವಾದ ಯೇಸುವೇ! ನೀವು ನನಗೆ ನ್ಯಾಯಾಧೀಶರಾಗಿರದೆ ನನ್ನ ರಕ್ಷಕರಾಗಿರಿ.
ಕ್ಷಮಿಸಿರಿ, ಪ್ರಭುವೇ, ನಿಮ್ಮ ಜನರ ಪಾಪಗಳನ್ನು ಕ್ಷಮಿಸಿರಿ ಎಂದೆಂದಿಗೂ ನಮ್ಮ ಮೇಲೆ ಕೋಪಿಸಿಕೊಳ್ಳಬೇಡಿ.
ಪವಿತ್ರಾತ್ಮರಾದ ಸರ್ವೇಶ್ವರಾ, ನಮ್ಮಲ್ಲಿಗೆ ಬನ್ನಿರಿ. ನಿಮ್ಮ ವಿಶ್ವಾಸಿಗಳ ಹೃದಯವನ್ನು ನಿಮ್ಮ ಸ್ನೇಹಾಗ್ನಿಯಿಂದ ತುಂಬಿಸಿ ಹೊತ್ತಿ ಉರಿಯುವಂತೆ ಮಾಡಿರಿ.
ಅತಿ ಮಧುರವುಳ್ಳ ಯೇಸುವೇ, ನನ್ನಲ್ಲಿ ವಿಶ್ವಾಸ, ನಂಬಿಕೆ, ದೇವಸ್ನೇಹವೆಂಬ ಪುಣ್ಯಗಳನ್ನು ಅಧಿಕರಿಸಿ ನನಗೆ ಶಾಂತವೂ, ಪಾಶ್ಚಾತ್ತಾಪವೂ ಉಳ್ಳ ಹೃದಯವನ್ನು ದಯಪಾಲಿಸಿರಿ.
ನಮ್ಮ ಮೇಲಿರುವ ಸ್ನೇಹದಿಂದ ಪರಮ ಪ್ರಸಾದದಲ್ಲಿ ಹೊತ್ತಿ ಉರಿಯುತ್ತಿರುವ ಯೇಸುವಿನ ಪವಿತ್ರ ಹೃದಯವೇ, ನಮ್ಮ ಹೃದಯವು ನಿಮ್ಮ ಸ್ನೇಹದಿಂದ ಹೊತ್ತಿ ಉರಿಯುವಂತೆ ಮಾಡಿರಿ.
ನಿಮ್ಮ ಹೆಸರಿನಲ್ಲಿ ನಮಗೆ ಉಪಕಾರ ಮಾಡುವ ಸರ್ವರಿಗೂ ನಿತ್ಯ ಸಂಭಾವನೆಯನ್ನು ದಯಪಾಲಿಸಿರಿ
ನನ್ನ ಯೇಸುವೇ, ನನ್ನ ಮೇಲೆ ದಯೆತೋರಿ
ಹಾಡು : ಸ್ನೇಹ ಪ್ರೀತಿ ಎಲ್ಲಿದೆಯೋ

ಒಳ್ಳೆಯ ಮರಣಕ್ಕಾಗಿ ಪ್ರಾರ್ಥನೆ
ಪ್ರಭು ಯೇಸುಕ್ರಿಸ್ತರೇ, ಕರುಣಾಭರಿತ ತಂದೆಯೇ, ದಯಾಪರ ಸರ್ವೇಶ್ವರಾ, ದಾಸನಾದ ನಾನು ಅತ್ಯಂತ ಮನಸ್ತಾಪದೊಂದಿಗೆ ಕಣ್ಣೀರಿಟ್ಟು ಪ್ರಲಾಪಿಸಿ, ನಿಮ್ಮ ಪೂಜ್ಯ ಸನ್ನಿಧಿಯಲ್ಲಿ ನಿಂತಿರುತ್ತೇನೆ. ದಾಸನಾದ ನನಗೆ ಒಳ್ಳೆಯ ಮರಣವೂ ಕರುಣಾಭರಿತ ತೀರ್ಪು ದೊರಕುವಂತೆ ನಿಮ್ಮ ಕೃಪೆಯನ್ನು ನೀಡಬೇಕೆಂದು ದೈನ್ಯದಿಂಧ ಪ್ರಾರ್ಥಿಸಿತ್ತೇನೆ.
ಮೃತರಿಗಾಗಿ ಪ್ರಾರ್ಥನೆ
- ಸ್ವಾಮಿ, ಮೃತರಿಗೆ ನಿತ್ಯ ವಿಶ್ರಾಂತಿಯನ್ನು ದಯಪಾಲಿಸಿರಿ.
- ನಿತ್ಯ ಜ್ಯೋತಿಯು ಅವರ ಮೇಲೆ ಪ್ರಕಾಶಿಸಲಿ.
ಯಾಜಕರಿಗಾಗಿಯೂ ಇತರರಿಗಾಗಿಯೂ ಪ್ರಾರ್ಥನೆ
ಯಾಜಕರಿಗೆಲ್ಲಾ ಯಾಜಕರಾದ ಯೇಸುವೇ, ದೇವರ ಪ್ರತಿನಿಧಿಗಳಾದ ಯಾಜಕರನ್ನು ರಕ್ಷಿಸಿರಿ. ಪ್ರತಿ ದಿನವೂ ದಿವ್ಯ ಬಲಿಪೂಜೆಯಲ್ಲಿ ನಿಮ್ಮ ಪೂಜ್ಯ ಶರೀರವನ್ನು ಮುಟ್ಟುವ ಭಾಗ್ಯ ಹೊಂದಿದ ಅವರ ಪೂಜ ಹಸ್ತಗಳನ್ನೂ, ನಿಮ್ಮ ಪವಿತ್ರ ರಕ್ತದಿಂದ ತೇವವಾಗಿ ರಕ್ತಮಯವಾದ ಅವರ ತುಟಿನಾಲಿಗೆಗಳನ್ನೂ, ಗುರತ್ವದ ಲಾಂಛನೆಯಿಂದ ಮುದ್ರಿಸಲಾಗಿರುವ ಅವರ ಹೃದಯಗಳನ್ನೂ ಪವಿತ್ರವಾಗರಿಸಲು ಕೃಪೆ ನೀಡಿರಿ. ಅವರು ಆತ್ಮರಕ್ಷಣೆಗಾಗಿ ಪಡುವ ಕಷ್ಟಗಳಿಗೆ ಪ್ರತಿಫಲವನ್ನು ದೊರಕಿಸಿ ಆಶಿರ್ವದಿಸಿರಿ.
ನಮ್ಮ ಜಗದ್ಗುರುಗಳನ್ನು ನಿಮ್ಮ ಪುಜ್ಯ ಹೃದಯದ ಆಶ್ರಯದಲ್ಲಿರಿಸಿಕೊಳ್ಳಿರಿ. ಅವರ ಶರೀರಕ್ಕೂ ಬೇಕಾದ ನೆರವನ್ನು ನೀಡಿರಿ.
ಎಲ್ಲಾ ಧರ್ಮಾಧಕ್ಷರು, ಯಾಜಕರು, ಸನ್ಯಾಸಿಗಳು ಸನ್ಯಾಸಿಯರು ಸಕಲ ಗೃಹಸ್ಥರು ಧರ್ಮಸಭೇಯ ಅಭ್ಯುದಯಕ್ಕಾಗಿ ಕೈಗೊಂಡಿರುವ ಹೋರಾಟದಲ್ಲಿ ಜಯಹೊಂದಲೂ ವಿರಕ್ತತ್ವದ ವ್ರತದಲ್ಲಿ ದೃಢವಾಗಿರಲೂ ಆಶೀರ್ವದಿಸಿರಿ.
ಉಪದೇಶಕರೂ ಉಪಾಧ್ಯಾಯರೂ ಬೋಧಕರೂ ಉತ್ತಮ ಬೋಧನೆಗಳನ್ನು ನೀಡಲು ಆಶೀರ್ವದಿಸಿರಿ.
ದೇವಾಲಯವಿಲ್ಲದ ಸ್ಥಳಗಳಲ್ಲಿ ವಾಸಿಸುವವವರ ಮೇಲೂ ಪ್ರಯಾಣಿಕರ ಮೇಲೂ ವ್ಯಾದಿಷ್ಟರ ಮೇಲೂ ತಮ್ಮ ದಯೆಯನ್ನು  ತೋರಿ ಅಶೀರ್ವದಿಸಿರಿ.
ಕೃತಜ್ಞತಾ ಸ್ತುತಿ
ಒಬ್ಬ : ನನ್ನ ದೇವರೇ, ನೀವು ನನಗೆ ದಯಪಾಲಿಸಿದ ಎಲ್ಲಾ ವರಪ್ರಸಾದಗಳಿಗಾಗಿಯೂ
ಎಲ್ಲರು : ನಾನು ನಿಮಗೆ ನಮಸ್ಕರಿಸುತ್ತೇನೆ.
ಒಬ್ಬ : ನನ್ನನ್ನು ಸೃಷ್ಟಿಸಿದುದಕ್ಕಾಗಿ ನನ್ನ ಪೂರ್ಣ ಹೃದಯದೊಂದಿಗೆ
ಎಲ್ಲರು : ನಾನು ನಿಮಗೆ ನಮಸ್ಕರಿಸುತ್ತೇನೆ.
ಒಬ್ಬ : ನನ್ನ ಬಾಳಿನಲ್ಲಿ ನನಗೆ ದಯಪಾಲಿಸಿದ ಎಲ್ಲಾ ಸಂತೋಷಗಳಿಗಾಗಿ, ಕಷ್ಟಗಳಿಗಾಗಿ.
ಎಲ್ಲರು : ನಾನು ನಿಮಗೆ ನಮಸ್ಕರಿಸುತ್ತೇನೆ.
ಒಬ್ಬ : ನನ್ನ ಪ್ರಭುವೇ, ನನ್ನ ದೇವರೇ, ನನ್ನನ್ನು ಸದಕಾಲವೂ ಸುರಕ್ಷಿತವಾಗಿ ಕಾದುಕೊಂಡಿರುವುದಕ್ಕಾಗಿಯೂ
ಎಲ್ಲರು : ನಾನು ನಿಮಗೆ ನಮಸ್ಕರಿಸುತ್ತೇನೆ.
ಒಬ್ಬ : ಪಶ್ಚಾತ್ತಾಪವೆಂಬ ದಿವ್ಯ ಸಂಸ್ಕಾರದ ಮೂಲಕ ಅತಿ ಸುಲಭವಾಗಿ ಆಗಾಗ್ಗೆ ನನ್ನ ತಪ್ಪುಗಳನ್ನು ಕ್ಷಮಿಸಿದುದಕ್ಕಾಗಿಯೂ
ಎಲ್ಲರು : ನಾನು ನಿಮಗೆ ನಮಸ್ಕರಿಸುತ್ತೇನೆ.
ಒಬ್ಬ : ಮಹಿಮೆಯೊಂದಿಗೆ ಪೂಜ್ಯ ದಿವ್ಯ ಬಲಿ ಪೂಜೆಯಲ್ಲಿ ಪಿತನಿಗೆ ತಮ್ಮನ್ನು ತಾವೇ ಒಪ್ಪಿಸಿ ಕೊಟ್ಟದ್ದಕ್ಕಾಗಿಯೂ
ಎಲ್ಲರು : ನಾನು ನಿಮಗೆ ನಮಸ್ಕರಿಸುತ್ತೇನೆ.
ಒಬ್ಬ : ನನ್ನ ಅಸಡ್ಡೆತನದ ಅಹ್ವಾನಕ್ಕೆ ಬದಲಾಗಿ ಸ್ವರ್ಗದಿಂದ ಪವಿತ್ರ ಪರಮ ಪ್ರಸಾದದ ಮಾರ್ಗವಾಗಿ ನನ್ನಲ್ಲಿ ಬಂದುದಕ್ಕಾಗಿಯೂ
ಎಲ್ಲರು : ನಾನು ನಿಮಗೆ ನಮಸ್ಕರಿಸುತ್ತೇನೆ.
ಒಬ್ಬ : ಬಲಿಪೀಠದ ಪೂಜ್ಯ ಸಂಸ್ಕಾರದಲ್ಲಿ ತಾಳ್ಮೆಯಿಂದ ನನಗಾಗಿ ಕಾದುಕೊಂಡಿರುವುದಕ್ಕಾಗಿಯೂ
ಎಲ್ಲರು : ನಾನು ನಿಮಗೆ ನಮಸ್ಕರಿಸುತ್ತೇನೆ.
ಒಬ್ಬ : ನನ್ನ ಯೇಸುವೇ ನೀವು ನನಗಾಗಿ ಜೀವಿಸಿ, ಶ್ರಮಿಸಿ, ಮರಣ ಹೊಂದಿದುದಕ್ಕಾಗಿಯೂ
ಎಲ್ಲರು : ನಾನು ನಿಮಗೆ ನಮಸ್ಕರಿಸುತ್ತೇನೆ.
ಒಬ್ಬ : ನಿಮ್ಮ ಅತ್ಯಂತ ಸ್ನೇಹಕ್ಕಾಗಿಯೂ
ಎಲ್ಲರು : ನಾನು ನಿಮಗೆ ನಮಸ್ಕರಿಸುತ್ತೇನೆ.
ಒಬ್ಬ: ಪ್ರಭುವೇ, ನಾನು ಸದಾಕಾಲವೂ ನಿಮ್ಮ ಸನ್ನಿಧಿಯಲ್ಲಿ ಸ್ತುತಿ ಸ್ತೋತ್ರಗಳನ್ನು ಸಲ್ಲಿಸಿಕೊಂಡು ಆನಂದದಿಂದಿರುವಂತೆ ಸ್ವರ್ಗದಲ್ಲಿ ನನಗೆ ಒಂದು ಸ್ಥಳವನ್ನು ಕಾದಿಸಿರುವುದಕ್ಕಾಗಿಯೂ
ಎಲ್ಲರು : ನಾನು ನಿಮಗೆ ನಮಸ್ಕರಿಸುತ್ತೇನೆ.
ಒಬ್ಬ : ನೀವು ನನ್ನನ್ನು ಅಧಿಕ ಪ್ರೀತಿ ವಾತ್ಸಲ್ಯಗಳಿಂದ ಹಾಗೂ ಮಮತೆಯಿಂದ ನಡೆಸಿಕೊಂಡು ಬಂದಿದ್ದೀರಿ. ನಾನು ನೆನಸಿದ ಮೇರೆಗೆ ನಿಮಗೆ ಕೃತಜ್ಞನೆಯನ್ನು ಸಲ್ಲಿಸಲು ಸಾಧ್ಯವಿಲ್ಲದೆ ನಿಮ್ಮ ಸಹಾಯದಿಂದ, ನನ್ನ ಮುಂದಿನ ಜೀವನವೇ ಒಂದು ದೀರ್ಘ ಕೃತಜ್ಞತಾಮಯವಾದ ಜೀವನವಾಗಿರುವಂತೆಯೂ ನೀವು ನಮಗೆ ಧಾರಾಳವಾಗಿ ದಯಪಾಲಿಸಿದ ಎಲ್ಲಾ ಪ್ರೀತಿಮಯ ವರಗಳಿಗಾಗಿಯೂ ಕೃತಜ್ಞತೆಯನ್ನು ಸಲ್ಲಿಸಲು ಹೃದಯಗಳಲ್ಲೆಲ್ಲಾ ಶ್ರೇಷ್ಠವಾದ ಹೃದಯ ಹೊಂದಿರುವವರೂ ನಿಮ್ಮ ಪೂಜ್ಯ ಮಾತೆಯೂ ಆದ ಕನ್ಯಾಮರಿಯಮ್ಮನವರನ್ನು ದ್ಯೆನ್ಯವಾಗಿ ಪ್ರಾರ್ಥಿಸುತ್ತೇನೆ.
(ಮೂರು ಬರಿ ನಮೋ ಮರಿಯಾ ಪ್ರಾರ್ಥನೆ ಹೇಳುವುದು)


ನಾಲ್ಕನೆಯ ಭಾಗ
ಹಾಡು : ಶಾಂತ ಹೃದಯರೂ, ದೀನ ಹೃದಯರೂ ಆದ ಯೇಸುವೇ

ಯೇಸುವಿನ ಪವಿತ್ರ ಹೃದಯಕ್ಕೆ ನಿಂದೆ ಪರಿಹಾರ

ಯೇಸುವಿನ ಪವಿತ್ರ ಹೃದಯವೇ, ನಿಮಗೆ ಎಡೆಬಿಡದೆ ಮಾಡುವ ನಿಂದೆ ಅವಮಾನಗಳಿಗೆ ಪರಿಹಾರವಾಗಿ, ನಿಮ್ಮಲ್ಲಿ ನಮ್ಮ ಸ್ನೇಹ ಪ್ರಾಮಾಣಿಕತೆಯನ್ನು ಅಧಿಕರಿಸಿ, ನಮ್ಮ ಅರ್ಪಣೆಯನ್ನು ನವೀಕರಿಸಲು ಇಗೋ! ನಿಮ್ಮ ಸನ್ನಿಧಿಗೆ ಬಂದು ಸೇರಿದ್ದೇವೆ.
ಇದಕ್ಕಾಗಿ ನಾವು ನಿಮಗೆ ಬಹಿರಂಗವಾಗಿ ಕೊಡುವ ಪ್ರಮಾಣವಚನಗಳು ಯಾವುದೆಂದರೆ:
ಯೇಸುವಿನ ಪೂಜ್ಯ ಹೃದಯವೇ, ನಿಮ್ಮ ದೈವಿಕ ರಹಸ್ಯಗಳು ಎಷ್ಟು ಹೆಚ್ಚಾಗಿ ದೂಷಿಸಲಾಗುತ್ತವೋ, ನಾವು ಅವುಗಳನ್ನು ಅಷ್ಟು ಹೆಚ್ಚಾಗಿ ವಿಶ್ವಾಸಿಸುತ್ತೇವೆ.
ಮಾನವ ಕುಲದ ಏಕ ನಂಬಿಕೆಯೇ, ಪರಿಶುದ್ಧ ಜೀವನದಲ್ಲಿ ನಮಗಿರುವ ವಿಶ್ವಾಸವನ್ನು ನಾಶಮಾಡಲು ಎಷ್ಟು ಅಧಿಕವಾಗಿ ವಿರೋಧಿಗಳು ಶ್ರಮಿಸುತ್ತಾರೋ ಅಷ್ಟು ಅಧಿಕವಾಗಿ ನಾವು ನಿಮ್ಮ ಪೂಜ್ಯ ಹೃದಯದಲ್ಲಿ ನಂಬಿಕೆಯನ್ನು ಇಡುತ್ತೇವೆ.
ಮಿತಿಯಿಲ್ಲದ ಸ್ನೇಹಭರಿತ ಯೇಸುವಿನ ಪೂಜ್ಯ ಹೃದಯವೇ, ನಿಮ್ಮ ವಾಗ್ದಾನಗಳನ್ನು ಆತ್ಮಗಳು ಎಷ್ಟು ಅಧಿಕವಾಗಿ ತಿರಸ್ಕರಿಸುತ್ತವೋ ಅಷ್ಟು ಅಧಿಕವಾಗಿ ನಾವು ಅವುಗಳನ್ನು ಸ್ವೀಕರಿಸುತ್ತೇವೆ.
ಯೇಸುವಿನ ಪೂಜ್ಯ ಹೃದಯವೇ, ಶತ್ರುಗಳು ನಿಮ್ಮನ್ನು ಎಷ್ಟು ಅಧಿಕವಾಗಿ ವಿರೋಧಿಸುತ್ತಾರೋ, ಅಷ್ಟು ಅಧಿಕವಾಗಿ ನಾವು ನಿಮ್ಮನ್ನು ಸ್ನೇಹಿಸುತ್ತೇವೆ.
ಯೇಸುವಿನ ಮಹಾ ಪರಿಶುದ್ಧ ಹೃದಯವೇ, ನಿಂದಕರು ನಿಮ್ಮ ದಿವ್ಯ ಆಜ್ಞೆಗಳನ್ನು ಎಷ್ಟು ಅಧಿಕವಾಗಿ ಮರೆತು , ಮೀರಿ, ತಿರಸ್ಕರಿಸುತ್ತಾರೋ, ಅಷ್ಟು ಅಧಿಕವಾಗಿ ಅವುಗಳನ್ನು ಅನುಸರಿಸುತ್ತೇನೆ.
ದಯಾ ಸಂಪನ್ನರಾದ ಯೇಸುವಿನ ಪೂಜ್ಯ ಹೃದಯವೇ, ನಿಂದಕರು ನಿಮ್ಮ ದಿವ್ಯ ಸಂಸ್ಕಾರಗಳನ್ನು ಎಷ್ಟರಮಟ್ಟಿಗೆ ನಿಂದಿಸಿ ಅಲಕ್ಷಿಸುತ್ತಾರೋ, ಅಷ್ಟರಮಟ್ಟಿಗೆ ಪೂಜ್ಯತೆಯೊಂದಿಗೂ ವಂದನೆಯೊಂದಿಗೂ ದೇವರನ್ನು ನವಉ ಸ್ವೀಕರಿಸುತ್ತೇವೆ.
ಸಕಲ ಪುಣ್ಯಗಳಿಗೆ ಆದರ್ಶವಾಗಿರುವ ಪೂಜ್ಯ ಹೃದಯವೇ, ಆರಾಧನೆಗೆ ಯೋಗ್ಯವಾದ ನಿಮ್ಮ ಲಕ್ಷಣಗಳನ್ನು ಎಷ್ಟು ಅಧಿಕವಾಗಿ ಪಾಪಿಗಳು ಮರೆತು ಅಲಕ್ಷಿಸುತ್ತಾರೋ, ಅಷ್ಟು ಅಧಿಕವಾಗಿ ನಾವು ಅವುಗಳನ್ನು ಅಭ್ಯಾಸಿಸಲು ಪ್ರಯತ್ನಿಸುವೆವು.
ಆತ್ಯಪ್ರಿಯರಾಧ ಯೇಸುವಿನ ಪೂಜ್ಯ ಹೃದಯವೇ, ಅತ್ಮಗಳನ್ನು ಕೆಡಿಸಲು ಎಷ್ಟು ಅಧಿಕವಾಗಿ ಸೈತಾನರು ಪ್ರಯತ್ನಿಸುತ್ತವೋ, ಅಷ್ಟು ಅಧಿಕವಾಗಿ ನಾವು ಆತ್ಮಗಳನ್ನು ರಕ್ಷಿಸಲು ಆಶೆಯುಳ್ಳವರಾಗಿರುತ್ತೇವೆ.
ಯೇಸುವಿನ ಪವಿತ್ರ ಹೃದಯವೇ, ಇಹಲೋಕದಲ್ಲಿ ನಾವು ನಿಮ್ಮ ಪ್ರೇಷಿತರಾಗಿ ಪ್ರಕಾಶಿಸಲೂ ಅನಂತ ಕಾಲದಲ್ಲಿ ನಿಮ್ಮ ಮುಕುಟದಂತೆ ಪ್ರಕಾಶಿಸಲು ಬೇಕಾದ ದೃಡತೆಯನ್ನು ಶಕ್ತಿಯನ್ನೂ ಹೊಂದಲು ನಿಮ್ಮ ವರಗಳನ್ನು ದಯಪಾಲಿಸಿರಿ.
ಯೇಸುವಿನ ಮಧುರವಾದ ಪವಿತ್ರ ಹೃದಯವೇ, ದಾಸರಾದ ನಾವು ಯಾವಾಗಲೂ ಅಧಿಕಾಧಿಕವಾಗಿ ತಮ್ಮನ್ನು ಸ್ನೇಹಿಸಲು ಅನುಗ್ರಹ ಮಾಡಿರಿ.
ಯೇಸುವಿನ ಪೂಜ್ಯ ಹೃದಯವೇ, ಪಾಪಿಗಳನ್ನು ಪರಿವರ್ತಿಸಿರಿ. ಮರಣ ಹೊಂದಿದವರ ಮೇಲೆ ದಯವಾಗಿರಿ. ಶುದ್ಧೀಕರಣ ಸ್ಥಳದಲ್ಲಿರುವ ಆತ್ಮಗಳ ಮೇಲೆ ದಯವಾಗಿದ್ದು, ಅವರಿಗೆ ಬಿಡುಗಡೆಯನ್ನು ದಯಪಾಲಿಸಿರಿ.
ಯೇಸುವಿನ ಮಧುರವಾದ ಪವಿತ್ರ ಹೃದಯವೇ, ನಿಮ್ಮ ರಾಜ್ಯ ಬರಲಿ.
ಯೇಸುವಿನ ಪೂಜ್ಯ ಹೃದಯದ ಪ್ರಾರ್ಥನೆ
ಒಬ್ಬ : ನಮ್ಮ ಚಿಂತೆಗಳನ್ನೆಲ್ಲಾ ಹೊತ್ತ ಯೇಸುವಿನ ಪೂಜ್ಯ ಹೃದಯವೇ
ಎಲ್ಲರು: ನನ್ನನ್ನು ದೃಢಪಡಿಸಿರಿ.
ಒಬ್ಬ : ನಮಗೆ ಕಳುಹಿಸುವುದಕ್ಕೆ ಮುಂಚೆಯೇ ನಮ್ಮ ಕ್ಲೇಶಗಳೆಲ್ಲವನ್ನೂ ಸಹಿಸಿಕೊಂಡಿರುವ ಯೇಸುವಿನ ಪೂಜ್ಯ ಹೃದಯವೇ,
ಎಲ್ಲರು : ನನಗೆ ಸಹಾಯ ಮಾಡಿರಿ.
ಒಬ್ಬ : ಕಷ್ಟದಿಂದ ನರಳುತ್ತಿರುವವರ ಮೇಲೆ ಕನಿಕರವಿರಿಸಿದ ಯೇಸುವಿನ ಪೂಜ್ಯ ಹೃದಯವೇ,
ಎಲ್ಲರು : ನನ್ನ ಮೇಲೆ ದಯವಾಗಿರಿ.
ಒಬ್ಬ : ನಿಮ್ಮ ಸಂಕಟಗಳಲ್ಲಿ ಜ್ಯೋತಿಯಂತೆ ಬೆಳಗಿದ ಯೇಸುವಿನ ಪೂಜ್ಯ ಹೃದಯವೇ,
ಎಲ್ಲರು: ಸಂಕಟಗಳಿಂದ  ನಾನು ಪರಿಶುದ್ಧನಾಗಲು ನನಗೆ ಕೃಪೆಯನ್ನು ಕರುಣಿಸಿ.
ಒಬ್ಬ : ನಿಮ್ಮ ಬಾಧೆಗಳ ಮಧ್ಯದಲ್ಲೂ ಆತ್ಮಗಳ ಮೇಲೆ ಗಮನವಿರಿಸಿದ್ದ ಯೇಸುವಿನ ಪೂಜ್ಯ ಹೃದಯವೇ,
ಎಲ್ಲರು: ನನ್ನ ಬಾಧೆಗಳಲ್ಲಿ ನನ್ನನ್ನು ತ್ಯಾಗಿಯಾಗಿ ಮಾಡಿರಿ.
ಒಬ್ಬ : ಲಾಜರನ ಸಮಾಧಿಯ ಬಳಿ ಕಣ್ಣೀರಿಟ್ಟ ಯೇಸುವಿನ ಪೂಜ್ಯ ಹೃದಯವೇ,
ಎಲ್ಲರು : ದು: ಪಡುವರಿಗೆ ಉಪಶಮನವಾಗಿರಿ.
ಒಬ್ಬ : ವಿಧವೆಯ ಕಣ್ಣೀರಿಗೆ ದಯೆತೋರಿಸಿದ ಯೇಸುವಿನ ಪೂಜ್ಯ ಹೃದಯವೇ,
ಎಲ್ಲರು : ಆಳುವವರ ಮಳೇ ದಯವಾಗಿರಿ.
ಒಬ್ಬ: ಮಗ್ದಲದ ಮರಿಯಮ್ಮನಿಗಿತ್ತ ಹಿಂಸೆಯನ್ನು ಕಂಡು ನೊಂದ ಯೇಸುವಿನ ಪೂಜ್ಯ ಹೃದಯವೇ,
ಎಲ್ಲರು : ಅಳುವವರ ಮೇಲೆ ದಯವಾಗಿರಿ.
ಒಬ್ಬ : ಬಾಧೆಯನ್ನು ಸದಾ ಕಣ್ಣ ಮುಂಭಾಗದಲ್ಲಿರಿಸಿದ ಯೇಸುವಿನ ಪೂಜ್ಯ ಹೃದಯವೇ,
ಎಲ್ಲರು: ನಮ್ಮ ಬಾಧೆಗಳನ್ನು ನಿಮ್ಮೊಂದಿಗೆ ಒಟ್ಟುಗೂಡಿಸಲು ನಮಗೆ ಕಲಿಸಿರಿ.
ಒಬ್ಬ : ಗೆತ್ಸಮನಿ ತೋಟದಲ್ಲಿ ಮರಣಾವಸ್ಥೆಪಟ್ಟ ಯೇಸುವಿನ ಪೂಜ್ಯ ಹೃದಯವೇ,
ಎಲ್ಲರು : ನಮ್ಮ ಜೀವಮಾನದ ಸಂಕಟಗಳಲ್ಲಿ ನಮ್ಮನ್ನು ದೃಢಪಡಿಸಿರಿ.
ಒಬ್ಬ : ನಮ್ಮ ಬುದ್ದಿಗೆ ಎಟುಕದ ನಿಮ್ಮ ಬಾಧೆಗಳನನ್ನು ನಾವು ಮೋಕ್ಷದಲ್ಲಿ ಕಂಡರಿತು ಸ್ನೇಹಿಸುವಂತೆ ಮಾಡಿದ ಯೇಸುವಿನ ಪೂಜ್ಯ ಹೃದಯವೇ,
ಎಲ್ಲರು : ನಿಮ್ಮ ಮಹಿಮೆಗಾಗಿ ನಿಮ್ಮೊಡನೆ ಕಷ್ಟಪಡಲು ನಮಗೆ ಅವಕಾಶ ನೀಡಿರಿ.
ಒಬ್ಬ : ಶಿಲುಬೆಯ ಮೇಲಿರುವಾಗ ಕಷ್ಟದಿಂದಲೂ, ಸ್ನೇಹದಿಂದಲೂ ತತ್ತರಿಸಿದ ಯೇಸುವಿನ ಪೂಜ್ಯ ಹೃದಯವೇ,
ಎಲ್ಲರು : ನಮ್ಮ ಸಂಕಟಗಳಲ್ಲಿ ನಮ್ಮನ್ನು ನಿಮ್ಮ ಬಳಿಗೆ ಸೆಳೆದು ಕಡೆಯವರೆಗೆ ಅವುಗಳಲ್ಲಿ ಪ್ರಾಮಾಣಿಕವಾಗಿರುವಂತೆ ಮಾಡಿರಿ.
ಒಬ್ಬ : ಯೇಸುವಿನ ಮಧುರವಾದ ಪೂಜ್ಯ ಹೃದಯವೇ,
ಎಲ್ಲರು: ನನ್ನ ಸ್ನೇಹವಾಗಿರಿ.
ಒಬ್ಬ : ಪರಮ ಪ್ರಸಾದದಲ್ಲಿ ನಮ್ಮ ಸ್ನೇಹದ ನಿಮಿತ್ತ ಹತ್ತಿ ಉರಿಯುವ ಯೇಸುವಿನ ಪೂಜ್ಯ ಹೃದಯವೇ,
ಎಲ್ಲರು: ನಿಮ್ಮ ಸ್ನೇಹದಿಂದ ನಮ್ಮ ಹೃದಯಗಳು ಹತ್ತಿ ಉರಿಯುವಂತೆ ಮಾಡಿರಿ.

ಯೇಸುವಿನ ಪೂಜ್ಯ ಹೃದಯಕ್ಕೆ ಮಾನವ ಕುಲವನ್ನು ಒಪ್ಪಿಸಿಕೊಡಲು ಪೋಪ್ ಜಗದ್ಗುರುಗಳು ನೀಡಿದ ಪ್ರಾರ್ಥನೆ
ಅತ್ಯಂತ ಮಧುರವಾದ ಯೇಸುವೇ, ಮನುಕುಲದ ರಕ್ಷಕರೇ, ನಿಮ್ಮ ಪೀಠದ ಮುಂದೆ ಬಂದು ಸೇರಿಸುವ ನಮ್ಮನ್ನು ಕಟಾಕ್ಷಿಸಿರಿ. ನಾವು ನಿಮಗೆ ಸ್ವಂತವಾದವರು. ನಿಮಗೆ ಸ್ವಂತವಾಗಿಯೇ ಇರಲು ಆಶಿಸುತ್ತೇವೆ. ಇನ್ನೂ ಅಧಿಕ ಐಕ್ಯತೆಯಿಂದ ನಿಮ್ಮೊಡನೆ ಒಂದುಗೂಡುವ ಹಾಗೆ, ನಮ್ಮಲ್ಲಿ ಒಬ್ಬೊಬ್ಬರೂ ಮನಃಪೂರ್ವಕವಾಗಿ ನಮ್ಮನ್ನು ದಿನ ನಿಮ್ಮ ಪವಿತ್ರ ಹೃದಯಕ್ಕೆ ಒಪ್ಪಿಸಿಕೊಡುತ್ತೇವೆ.
ಸ್ವಾಮಿ, ಮನುಷ್ಯರಲ್ಲಿ ಅನೇಕರು ನಿಮ್ಮನ್ನು ಒಂದು ಕಾಲಕ್ಕೂ ಅರಿತುಕೊಂಡದ್ದೇ ಇಲ್ಲ; ಬೇರೆ ಅನೇಕರು ನಿಮ್ಮ ಆಜ್ಞೆಗಳನ್ನು ನಿಂದಿಸಿ, ತೃಣೀಕರಿಸಿ ನಿಮ್ಮನ್ನು ಬೇಡವೆಂದು ತಳ್ಳಿಬಿಟ್ಟರು. ಮಹಾ ಕೃಪೆಯುಳ್ಳ ಯೇಸುವೇ, ಅಂಥವರೆಲ್ಲರ ಮೇಲೆ ದಯೆತೋರಿ; ಅವರೆಲ್ಲರನ್ನೂ ನಿಮ್ಮ ಪೂಜ್ಯ ಹೃದಯದ ಬಳಿಗೆ ಎಳೆದುಕೊಳ್ಳಿರಿ. ಪ್ರಭುವೇ, ನಿಮ್ಮನ್ನು ಬಿಟ್ಟು ಒಂದು ಕಾಲಕ್ಕೂ ಆಗಲದೆ, ಯಾವಾಗಲೂ ಪ್ರಾಮಾಣಿಕರಾದ ವಿಶ್ವಾಸಿಗಳಿಗೆ ಮಾತ್ರವೇ ಅಲ್ಲದೆ, ನಿಮ್ಮನ್ನು ವರ್ಜಿಸಿ ಆಗಲಿ ಹೋದ ದುಂದುಗಾರ ಮಕ್ಕಳಿಗೂ ಸಹ ನೀವು ದಯೆ ತೋರಿದಿರಿ. ಇವರೆಲ್ಲರೂ ಹಸಿವಿನಿಂದಲೂ ಕಷ್ಟ ಕಾರ್ಪಣ್ಯದಿಂದಲೂ ಸಾಯದಂತೆ, ತಮ್ಮ ತಂದೆಯ ಮನೆಗೆ ಶೀಘ್ರವಾಗಿ ಬಂದು ಸೇರುವಂತೆ ಕೃಪೆ ನೀಡಿರಿ. ಅಬದ್ಧ ಅಸತ್ಯಗಳಿಂದ ವಂಚಿತರಾದವರಿಗೂ, ವಿರೋಧದಿಂದ ದೂರವಾಗಿ ಇರುವವರಿಗೂ ರಾಯರಾಗಿರಿ. ಎಲ್ಲೆಲ್ಲಿಯೂ ಒಬ್ಬರೇ ಕುರಿಗಾಹಿ, ಒಂದೇ ಮಂದೆ ಇರುವಂತೆ, ಇವರೆಲ್ಲರನ್ನೂ ಸತ್ಯದ ಕರೆಗೂ ವಿಶ್ವಾಸದ ಐಕ್ಯತೆಗೂ ಕರೆದು ಸೇರಿಸ ಕರುಣಿಸಿರಿ
ಪ್ರಭುವೇ, ನಿಮ್ಮ ಧರ್ಮಸಭೆಯನ್ನು ಅಪಾಯದಿಂದ ಪರಿಪಾಲಿಸಿರಿ. ಅದಕ್ಕೆ ದೃಢವಾದ ಬುನಾದಿಯನ್ನು ದಯಪಾಲಿಸಿರಿ. ಸಕಲ ದೇಶಗಳ ಮುಖಂಡರಿಗೂ ನ್ಯಾಯ ನೀತಿಯನ್ನೂ ಶಾಂತಿ ಸಮಾಧಾನವನ್ನೂ ಕರುಣಿಸಿರಿ. ಭೂಮಿಯಲ್ಲಿ ಒಂದು ದಿಕ್ಕಿನಿಂದ ಬೇರೊಂದು ದಿಕ್ಕಿನವರೆಗೆ ಎಲ್ಲರೂ ಏಕ ಕಂಠದಿಂದ ಎಡೆಬಿಡದೆ, ನಮಗೆ ಅತ್ಮರಕ್ಷಣೆಯನ್ನು ತಂದ ಪವಿತ್ರ ಹೃದಯಕ್ಕೆ ಸ್ತುತಿಯುಂಟಾಗಲಿ, ಮಹಿಮೆ ಗೌರವಗಳು ಸದಾಕಾಲವೂ ಉಂಟಾಗಲಿ ಎಂಬ ಸ್ತುತಿಯ ಶಬ್ದದಿಂದ ಕೊಂಡಾಡಲಿ, ಆಮೆನ್
ಹಾಡು : ಎಂಥಾ ದಿವ್ಯ ಸಂಸ್ಕಾರ
ಎಂಥಾ ದಿವ್ಯ ಸಂಸ್ಕಾರ
ಬಾಗಿ ವಂದಿಸೋಣ
ಹಳೆಯಾಜ್ಞೆ ಹೊಸ ವಿಧಿಗೆ
ಎಡೆತಿತ್ತು ನಿಂತಿದೆ;
ಇಂದ್ರಿಯಾತೀತವಾದ್ದನ್ನು
ವಿಶ್ವಾಸವು ತೋರಲಿ.
ಪಿತನಿಗೂ ಸುತನಿಗೂ
ಈರ್ವರಿಂದೊರಡುವ
ಪವಿತ್ರಾತ್ಮರವರಿಗೂ
ಸ್ತುತಿ ಜಯಮಂಗಳ
ಸಮಪ್ರಭೆ, ಗೌರವವೂ
ಮಹಿಮೆಯೂ ಸಲ್ಲಲಿ, ಆಂಮೆನ್
ಗುರು: ಪರದಿಂದ ಅವರಿಗೆ ಮನ್ನವನ್ನು ಕೊಟ್ಟರಿ.
ಎಲ್ಲರು: ಅದು ಸರ್ವ ಸವಿಯಿಂದ ಕೂಡಿತ್ತು.
ಪ್ರಾರ್ಥಿಸೋಣ
ಪ್ರಭುವೇ, ಅದ್ಭುತಕರವಾದ ಸಂಸ್ಕಾರವನ್ನು ನಿಮ್ಮ ಶಿಲುಬೆಯ ಮರಣದ ಸ್ಮಾರಕವಾಗಿ ಬಿಟ್ಟಿದ್ದೀರಿ; ನಾವು ನಿಮ್ಮ ಶರೀರ ಮತ್ತು ರಕ್ತದ ಪರಮ ರಹಸ್ಯವನ್ನು ಆರಾಧಿಸಿ, ಆದರಿಂದ ನಿಮ್ಮ ರಕ್ಷಣೆಯ ಫಲವನ್ನು ಅನುಭವಿಸುವಂತೆ ಮಾಡಿರಿ. ಪಿತ ದೇವರೊಂದಿಗೆ ಪವಿತ್ರಾತ್ಮರ ಐಕ್ಯದಲ್ಲಿ ಯುಗಯುಗಾಂತರಕ್ಕೂ ಜೀವಿಸಿ ಆಳುವ ನಿಮ್ಮನ್ನು ಪ್ರಾರ್ಥೀಸುತ್ತೇವೆ. ಆಮೆನ್.
ದೈವಸ್ತುತಿಗಳು
1.    ದೇವರಿಗೆ ಸ್ತುತಿಯಾಗಲಿ
2.      ಅವರ ಪವಿತ್ರ ನಾಮಕ್ಕೆ ಸ್ತುತಿಯಾಗಲಿ
3.      ನಿಜ ದೇವರೂ ನಿಜ ಮನುಷ್ಯರೂ ಆಗಿರುವ ಯೇಸುಕ್ರಿಸ್ತರಿಗೆ ಸ್ತುತಿಯಾಗಲಿ
4.      ಯೇಸುವಿನ ನಾಮಕ್ಕೆ ಸ್ತುತಿಯಾಗಲಿ
5.      ಅವರ ಅತಿ ಪವಿತ್ರ ಹೃದಯಕ್ಕೆ ಸ್ತುತಿಯಾಗಲಿ
6.      ಅವರ ಅತಿ ಅಮೂಲ್ಯವಾದ ರಕ್ತಕ್ಕೆ ಸ್ತುತಿಯಾಗಲಿ
7.      ಬಲಿಪೀಠದ ಪರಮ ಪ್ರಸಾದದಲ್ಲಿರುವ ಯೇಸುವಿಗೆ ಸ್ತುತಿಯಾಗಲಿ
8.     ನಮ್ಮ ಪರವಾಗಿ ಬಿನ್ನಯಿಸುವ ಪವಿತ್ರಾತ್ಮರಿಗೆ ಸ್ತುತಿಯಾಗಲಿ
9.     ದೇವರ ಮಹಾತಾಯಿಯೂ ಅತಿ ಪರಿಶುದ್ಧರೂ ಆಗಿರುವ ಮರಿಯಮ್ಮನವರಿಗೆ ಸ್ತುತಿಯಾಗಲಿ
10. ಇವರ ಅತಿ ಪವಿತ್ರ ಅಮಲೋದ್ಭವಕ್ಕೆ ಸ್ತುತಿಯಾಗಲಿ
11. ಇವರ ಮಹಿಮಾಭರಿತ ಸ್ವರ್ಗ ಸ್ವೀಕಾರಕ್ಕೆ ಸ್ತುತಿಯಾಗಲಿ
12. ಕನ್ನಿಕೆಯೂ ಮಾತೆಯೂ ಆಗಿರುವ ಮರಿಯಮ್ಮನವರ ನಾಮಕ್ಕೆ ಸ್ತುತಿಯಾಗಲಿ
13. ಇವರ ಅತಿ ಪರಿಶುದ್ಧ ಪತಿಯಾದ ಸಂತ ಜೋಸೆಫರಿಗೆ ಸ್ತುತಿಯಾಗಲಿ
14. ತಮ್ಮ ದೂತರಲ್ಲಿಯೂ ಸಂತರಲ್ಲಿಯೂ ದೇವರಿಗೆ ಸ್ತುತಿಯಾಗಲಿ


No comments:

Post a Comment