ಡಿಸೆಂಬರ್ 5/ 2019
ಆಗಮನ ಕಾಲದ ಮೊದಲನೆಯ ಗುರುವಾರ
ಮೊದಲನೇ ವಾಚನ ಯೆಶಾಯ 26:1-6
ಕೀರ್ತನೆ:118:1, 8-9, 19-21, 25-27
ಶುಭಸಂದೇಶ : ಮತ್ತಾಯ 7:21, 24-27
ಮೊದಲನೇ ವಾಚನ ಯೆಶಾಯ 26:1-6
ಶುಭಸಂದೇಶ : ಮತ್ತಾಯ 7:21, 24-27
ಚಿಂತನೆ
ಆಗಮನ ಕಾಲದ ಮೊದಲನೆಯ ಗುರುವಾರ
ಮೊದಲನೇ ವಾಚನ ಯೆಶಾಯ 26:1-6
ಕೀರ್ತನೆ:118:1, 8-9, 19-21, 25-27
ಶುಭಸಂದೇಶ : ಮತ್ತಾಯ 7:21, 24-27
ಮೊದಲನೇ ವಾಚನ ಯೆಶಾಯ 26:1-6
1 : ಕಾಲ ಬರುವುದು; ಆಗ ಹಾಡುವರು ಜುದೇಯ ನಾಡಿನಲ್ಲಿ ಈ ಗೀತೆಯನು: ನಮಗಿದೆ ಸುಭದ್ರ ನಗರ, ದೇವರೇ ಅದರ ದುರ್ಗ, ಪ್ರಾಕಾರ.
2 : ತೆರೆಯಿರಿ ನಗರ ದ್ವಾರಗಳನು, ಪ್ರವೇಶಿಸಲಿ ವಿಶ್ವಾಸವುಳ್ಳ ಸಜ್ಜನರು.
3 : ನಿನ್ನ ನೆಚ್ಚಿದವರಿಗೆ, ಸ್ಥಿರ ಚಿತ್ತವುಳ್ಳವರಿಗೆ, ಚಿರಶಾಂತಿಯ ನೀ ನೀಡುವೆ.
4 : ಶಾಶ್ವತ ಆಶ್ರಯಗಿರಿ, ಸ್ವಾಮಿ ಸರ್ವೇಶ್ವರನೇ, ಸತತ ಭರವಸೆಯಿಡಿರಿ ಆತನಲ್ಲೇ.
5 : ತಗ್ಗಿಸುವನಾತ ಎತ್ತರದಲಿ ವಾಸಿಸುವವರನು, ಕೆಡವಿ, ನೆಲಸಮಮಾಡಿ, ಧೂಳಾಗಿಸುವನು ಅವರು ವಾಸಮಾಡುವಾ ಉನ್ನತ ನಗರವನು.
6 : ಈಡಾಗುವುದದು ಕಾಲತುಳಿತಕೆ ದೀನದಲಿತರ ಪಾದತುಳಿತಕೆ.
ಕೀರ್ತನೆ:118:1, 8-9, 19-21, 25-27
ಪ್ರಭುವಿನ ನಾಮದಲಿ ಬರುವವನಿಗೆ ಜಯಮಂಗಳ
ಪ್ರಭುವಿನ ನಾಮದಲಿ ಬರುವವನಿಗೆ ಜಯಮಂಗಳ
8 : ಮನುಜರಲಿ ಭರವಸೆಯಿಡುವುದಕ್ಕಿಂತ / ಪ್ರಭುವನು ಆಶ್ರಯಿಸಿಕೊಳ್ಳುವುದು ಹಿತ //
9 : ರಾಜರಲಿ ಭರವಸೆಯಿಡುವುದಕ್ಕಿಂತ / ಪ್ರಭುವನು ಆಶ್ರಯಿಸಿಕೊಳ್ಳುವುದು ಹಿತ //
19 : ತೆರೆಯಿರಿ ಎನಗೆ ನೀತಿದ್ವಾರಗಳನು / ಒಳನುಗ್ಗಿ ಹೊಗಳುವೆನು ಪ್ರಭುವನು //
20 : ಇದುವೇ ದ್ವಾರ ಪ್ರಭುವಿನ ಮಂದಿರಕೆ / ಇದುವೇ ಪ್ರವೇಶಮಾರ್ಗ ಸಜ್ಜನರಿಗೆ //
21 : ಸದುತ್ತರ ಪಾಲಿಸಿದ ಪ್ರಭೂ, ನಿನಗೆ ವಂದನೆ / ಉದ್ಧಾರ ಮಾಡಿದೆ, ನಿನಗೆ ಕೃತಜ್ಞತಾವಂದನೆ //
25 : ರಕ್ಷಿಸು ಪ್ರಭೂ, ರಕ್ಷಿಸು ದಯವಿಟ್ಟು / ಸುಕ್ಷೇಮ ನೀಡು ಪ್ರಭು ಕರುಣೆಯಿಟ್ಟು //
26 : ಪ್ರಭುವಿನ ನಾಮದಲಿ ಬರುವವನಿಗೆ ಜಯಮಂಗಳ / ಪ್ರಭುವಿನ ಮಂದಿರದಲ್ಲಿಹ ನಮ್ಮಿಂದ ಶುಭಮಂಗಳ //
27 : ಪ್ರಭುವೆ ದೇವನು, ನಮ್ಮ ಮೇಲೆ ಜ್ಯೋತಿಯನು ಬೆಳಗಿದವನು / ಪ್ರದಕ್ಷಿಣೆ ಮಾಡಿರಿ, ಬಲಿಪೀಠದ ಸುತ್ತ, ಹಿಡಿದು ರೆಂಬೆಗಳನು //
21 : "ನನ್ನನ್ನು "ಸ್ವಾವಿೂ, ಸ್ವಾವಿೂ," ಎನ್ನುವ ಪ್ರತಿಯೊಬ್ಬನೂ ಸ್ವರ್ಗಸಾಮ್ರಾಜ್ಯವನ್ನು ಪ್ರವೇಶಿಸನು. ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತಾನುಸಾರ ನಡೆಯುವವನು ಮಾತ್ರ ಅದನ್ನು ಪ್ರವೇಶಿಸುವನು.
24 : "ನನ್ನ ಈ ಮಾತನ್ನು ಕೇಳಿ ಅದರಂತೆ ನಡೆಯುವ ಪ್ರತಿಯೊಬ್ಬನೂ ಬಂಡೆಯ ಮೇಲೆ ಮನೆ ಕಟ್ಟಿಕೊಂಡ ಬುದ್ದಿವಂತನನ್ನು ಹೋಲುತ್ತಾನೆ.
25 : ಮಳೆ ಬಿತ್ತು, ನೆರೆ ಬಂತು, ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು. ಆದರೂ ಅದು ಬೀಳಲಿಲ್ಲ. ಕಾರಣ ಅದರ ಅಡಿಗಟ್ಟು ಬಂಡೆಯ ಮೇಲಿತ್ತು.
26 : ನನ್ನ ಈ ಮಾತುಗಳನ್ನು ಕೇಳಿಯೂ ಅದರಂತೆ ನಡೆಯದ ಪ್ರತಿಯೊಬ್ಬನೂ ಮರಳಿನ ಮೇಲೆ ಮನೆ ಕಟ್ಟಿಕೊಂಡ ಬುದ್ದಿಹೀನನನ್ನು ಹೋಲುತ್ತಾನೆ.
27 : ಮಳೆ ಬಿತ್ತು, ನೆರೆ ಬಂತು, ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು; ಅದು ಕುಸಿದು ಬಿತ್ತು. ಅದಕ್ಕಾದ ಪತನವೋ ಅಗಾಧ!"
ಚಿಂತನೆ
ಯೇಸುವಿನ ಮಾತುಗಳನ್ನು ಆಲಿಸುವುದರಿಂದ ಆತನ ಶಿಷ್ಯರಾಗಲು ಸಾಧ್ಯವಿಲ್ಲ ಬದಲಾಗಿ ಅದನ್ನು ಪಾಲಿಸುವುದರಿಂದ. ಇಸ್ರಯೇಲರಿಗೆ ಸರ್ವೇಶ್ವರ ಸ್ವಾಮಿಯೇ ಆಶ್ರಯದುರ್ಗ ಅಥವ ಬಂಡೆ ಯಾಗಿದ್ದರು. ಸರ್ವೇಶ್ವರನನ್ನು ಬಂಡೆಗೆ ಹೋಲಿಸಿದ್ದರು ಇಸ್ರಯೇಲರು. ಕಾರಣ ಯುದ್ದದ ಸಂದರ್ಭದಲ್ಲಿ ಬಂಡೆಗಳ ಹಿಂದೆ ಆಶ್ರಯ ಪಡೆದಿದ್ದರು. ಆದರೆ ಅವರಲ್ಲಿ ನಿಷ್ಠೆ, ಭಕ್ತಿ ಇರಲಿಲ್ಲ. ಕೇವಲ ಬಾಯಲಷ್ಟೇ ಸರ್ವೇಶ್ವರ ನಮ್ಮ ದೇವರು ಎಂದು ಘೋಷಿಸಿದರೇ ಹೋರತು ಸ್ವಾಮಿ ನಿಷ್ಠೆ ಇರಲಿಲ್ಲ. ಹಾಗಾಗಿ ಯೇಸು 'ಸ್ವಾಮಿ, ಸ್ವಾಮಿ ಎನ್ನುವವರೆಲ್ಲಾ ಸ್ವರ್ಗ ಸಾಮ್ರಾಜ್ಯಕ್ಕೆ ಯೋಗ್ಯರಲ್ಲ. ಬಂಡೆಯಂಥ ಆಚಲ ವಿಶ್ವಾಸ ಬೇಕು ಹಾಗೂ ತಮ್ಮ ನಡೆನುಡಿಯಲ್ಲಿ ದೇವರಿಗೆ ಸಾಕ್ಷಿಯಾಗಿ ಜೀವಿಸಬೇಕೆಂದು ಬಯಸುತ್ತಾರೆ.
No comments:
Post a Comment