ಮಾರ್ಚ್ 14, 2020 ಶನಿವಾರ [ನೇರಳೆ]
ಮೊದಲ ವಾಚನ: ವಿiÁಕ 7.14-15, 18-20
ಕೀರ್ತನೆ 103:1-4, 9-12. ಶ್ಲೋಕ.8
ಪ್ರಭು ದಯಾಳು, ಕೃಪಾಪೂರ್ಣನು,
ಸಹನಶೀಲನು, ಪ್ರೀತಿಮಯನು
ಶುಭಸಂದೇಶ: ಲೂಕ 15.1-3, 11-32
-----------------------------ಮೊದಲ ವಾಚನ: ವಿiÁಕ 7.14-15, 18-20
14 : ಸರ್ವೇಶ್ವರಾ, ನಿಮ್ಮ ಮಂದೆಗೆ ಸೇರಿದ ಜನರನ್ನು ಕುರಿಗಾಹಿಯಂತೆ ಪರಿಪಾಲಿಸಿರಿ. ನಿಮ್ಮ ಸ್ವಾಸ್ತ್ಯವಾಗಿ, ಮಂದೆಯಾಗಿ ಇರುವಂಥ ಜನರು, ಸುತ್ತಮುತ್ತಲು ಫಲವತ್ತಾದ ಹಸಿರು ಭೂಮಿಯಿದ್ದರೂ ಮರಳುಗಾಡಿನಲ್ಲಿ ಪ್ರತ್ಯೇಕವಾಗಿ ಜೀವಿಸುತ್ತಿರುವರು. ಪೂರ್ವಕಾಲದಲ್ಲಿದ್ದಂತೆ, ಈಗ ಅವರು ಬಾಷಾನ್ ಮತ್ತು ಗಿಲ್ಯಾದ್ ನಾಡುಗಳಿಗೆ ತೆರಳಿ ಪೋಷಣೆ ಪಡೆಯಲಿ.
15 : ಈಜಿಪ್ಟ್ ದೇಶದಿಂದ ನಮ್ಮನ್ನು ಹೊರತಂದ ದಿನಗಳಲ್ಲಿ ನೀವು ಮಾಡಿದ ಮಹತ್ಕಾರ್ಯಗಳನ್ನು ಮರಳಿ ಮಾಡಿತೋರಿಸಿರಿ.
16 : ಅನ್ಯ ರಾಷ್ಟ್ರಗಳು ಇವನ್ನು ನೋಡಿ ಅವುಗಳ ಮುಂದೆ ತಮ್ಮ ಶಕ್ತಿಸಾಮಥ್ರ್ಯ ಏನೂ ಇಲ್ಲವೆಂದು ನಾಚಿಕೆಪಟ್ಟು ಬಾಯಮೇಲೆ ಕೈಯಿಟ್ಟುಕೊಳ್ಳುವರು; ಅವರ ಕಿವಿ ಕಿವುಡಾಗುವುದು.
17 : ನೆಲದ ಮೇಲೆ ಹರಿದಾಡುವ ಹಾವುಹಲ್ಲಿಗಳಂತೆ ಅವರು ಮಣ್ಣು ಮುಕ್ಕುವರು; ಗಡಗಡನೆ ನಡುಗುತ್ತಾ ಬಿಲದಿಂದ ಈಚೆ ಬರುವರು. ಸರ್ವೇಶ್ವರ ಎಂಬ ನಮ್ಮ ದೇವರಾದ ನಿಮ್ಮ ಕಡೆಗೆ ಭಯಭಕ್ತಿಯಿಂದ ತಿರುಗಿಕೊಳ್ಳುವರು.
18 : ನಿಮ್ಮಂಥ ದೇವರು ಯಾರಿದ್ದಾರೆ? ತಮ್ಮ ಸ್ವಂತ ಜನರಲ್ಲಿ ಅಳಿದುಳಿದವರ ಅಪರಾಧಗಳನ್ನು ಲೆಕ್ಕಿಸದೆ, ಅವರ ದ್ರೋಹಗಳನ್ನು ಕ್ಷಮಿಸುವಂಥ ದೇವರು ಯಾರಿದ್ದಾರೆ? ನೀವು ನಿತ್ಯಕ್ಕೂ ಕೋಪಿಷ್ಠರಾಗಿರದೆ ಕರುಣೆ ತೋರಿಸುವುದರಲ್ಲೇ ಸಂತುಷ್ಟರಾಗುವಿರಿ.
19 : ಮತ್ತೊಮ್ಮೆ ನಮಗೆ ದಯೆತೋರಿ. ನಮ್ಮ ಅಪರಾಧಗಳನ್ನು ಅಳಿಸಿಬಿಡಿ; ಅವನ್ನು ತುಳಿದು ಸಮುದ್ರದ ತಳಕ್ಕೆ ತಳ್ಳಿಬಿಡಿ.
20 : ಪುರಾತನ ಕಾಲದಲ್ಲಿ ನಮ್ಮ ಪಿತೃಗಳಿಗೆ ಪ್ರಮಾಣಮಾಡಿದಂತೆ ಯಕೋಬ ವಂಶದವರಿಗೆ ನಂಬಿಕಸ್ಥರಾಗಿರಿ. ಅಬ್ರಹಾಮನ ವಂಶದವರಿಗೆ ಪ್ರೀತಿಪರರಾಗಿರಿ.
------------------------------------
ಕೀರ್ತನೆ 103:1-4, 9-12. ಶ್ಲೋಕ.8
ಪ್ರಭು ದಯಾಳು, ಕೃಪಾಪೂರ್ಣನು,
ಸಹನಶೀಲನು, ಪ್ರೀತಿಮಯನು
1 : ಭಜಿಸು ನನ್ನ ಮನವೇ, ಭಜಿಸು ಪ್ರಭುವನು / ನನ್ನ ಅಂತರಂಗವೇ, ಭಜಿಸು ಆತನನು / ನೆನೆ ಆತನ ಪರಮಪಾವನ ನಾಮವನು //
2 : ಭಜಿಸು ನನ್ನ ಮನವೇ, ಭಜಿಸು ಪ್ರಭುವನು / ಮರೆಯದಿರು ಆತನ ಉಪಕಾರಗಳೊಂದನು //
3 : ಮನ್ನಿಸುವನಾತ ನನ್ನ ದೋಷಗಳನು / ವಾಸಿಮಾಡುವನು ನನ್ನ ರೋಗಗಳನು //
4 : ಉಳಿಸುವನು ಪಾತಾಳದ ಕೂಪದಿಂದ ನನ್ನನು / ಮುಡಿಸುವನೆನಗೆ ದಯದಾಕ್ಷಿಣ್ಯದ ಮುಕುಟವನು //
9 : ಆತನು ಸದಾ ತಪ್ಪು ಹುಡುಕುವವನಲ್ಲ / ನಿತ್ಯಕು ಕೋಪ ಇಟ್ಟುಕೊಳ್ಳುವವನಲ್ಲ //
10 : ನಮ್ಮ ಪಾಪಗಳಿಗೆ ತಕ್ಕಂತೆ ಆತ ವರ್ತಿಸಲಿಲ್ಲ / ನಮ್ಮ ಅಪರಾಧಗಳಿಗೆ ತಕ್ಕಹಾಗೆ ದಂಡಿಸಲಿಲ್ಲ //
11 : ಆಕಾಶಮಂಡಲವು ಭೂಮಿಯಿಂದೆಷ್ಟೋ ಉನ್ನತ / ದೈವಭಯವುಳ್ಳವರಿಗೆ ಆತನ ಕೃಪೆ ಅಷ್ಟೇ ಸನ್ನುತ //
12 : ಪಡುವಣದಿಂದ ಮೂಡಣವೆಷ್ಟೋ ದೂರ / ದೂಡಿದನಾತ ನಮ್ಮ ಪಾಪಗಳನು ಅಷ್ಟು ದೂರ // 13 ತಂದೆ ಕರುಣೆ ತೋರಿಸುವಂತೆ ಮಕ್ಕಳಿಗೆ /
----------------------------------------
1 : ಯೇಸುಸ್ವಾಮಿಯ ಉಪದೇಶವನ್ನು ಕೇಳಲು ಎಲ್ಲಾ ಸುಂಕದವರೂ ಪಾಪಿಗಳೂ ಬರುತ್ತಿದ್ದರು.
2 : ಇದನ್ನು ಕಂಡ ಫರಿಸಾಯರು ಮತ್ತು ಧರ್ಮಶಾಸ್ತ್ರಿಗಳು, “ಈ ಮನುಷ್ಯ ಪಾಪಿಗಳನ್ನು ಬರಮಾಡಿಕೊಳ್ಳುತ್ತಾನೆ; ಅವರೊಡನೆ ಊಟಮಾಡುತ್ತಾನೆ,” ಎಂದು ಗೊಣಗಿದರು.
3 : ಆ ಸಂದರ್ಭದಲ್ಲಿ ಯೇಸು ಈ ಸಾಮತಿಯನ್ನು ಹೇಳಿದರು:
11 : ಯೇಸುಸ್ವಾಮಿ ಮುಂದುವರಿಸುತ್ತಾ ಈ ಸಾಮತಿಯನ್ನು ಹೇಳಿದರು: “ಒಬ್ಬಾತನಿಗೆ ಇಬ್ಬರು ಮಕ್ಕಳಿದ್ದರು.
12 : ಅವರಲ್ಲಿ ಕಿರಿಯವನು ‘ಅಪ್ಪಾ, ಆಸ್ತಿಯಲ್ಲಿ ನನಗೆ ಬರಬೇಕಾದ ಪಾಲನ್ನು ಕೊಟ್ಟುಬಿಡು,’ ಎಂದು ಕೇಳಿದ. ತಂದೆ ಅವರಿಬ್ಬರಿಗೂ ಆಸ್ತಿಯನ್ನು ಹಂಚಿಕೊಟ್ಟ.
13 : ಕೆಲವು ದಿವಸಗಳಾದ ಮೇಲೆ ಕಿರಿಯ ಮಗ ತನ್ನ ಆಸ್ತಿಯನ್ನೆಲ್ಲಾ ಮಾರಿ, ಬಂದ ಹಣವನ್ನು ತೆಗೆದುಕೊಂಡು ಮನೆಬಿಟ್ಟು ಹೋದ. ದೂರದೇಶಕ್ಕೆ ಹೋಗಿ, ದುಂದು ಜೀವನ ನಡೆಸಿ ಹಣವನ್ನೆಲ್ಲಾ ಪೋಲು ಮಾಡಿಬಿಟ್ಟ.
14 : ಹೀಗೆ ಅವನು ಎಲ್ಲವನ್ನು ಹಾಳುಮಾಡಿಕೊಂಡಮೇಲೆ ಆ ದೇಶದಾದ್ಯಂತ ಘೋರವಾದ ಕ್ಷಾಮ ತಲೆದೋರಿತು.
15 : ನಿರ್ಗತಿಕನಾದ ಅವನು ಹೋಗಿ, ಆ ದೇಶದ ನಿವಾಸಿಯೊಬ್ಬನನ್ನು ಆಶ್ರಯಿಸಿದ. ಆತ ಇವನನ್ನು ಹಂದಿ ಮೇಯಿಸಲು ತನ್ನ ರೊಪ್ಪಗಳಿಗೆ ಕಳುಹಿಸಿದ.
16 : ಅಲ್ಲಿ ಹಂದಿ ತಿನ್ನುತ್ತಿದ್ದ ಕಾಳುಗಳನ್ನಾದರೂ ತಿಂದು ಹಸಿವನ್ನು ನೀಗಿಸಿಕೊಳ್ಳಲು ಹಂಬಲಿಸಿದ. ಆದರೆ ಅದನ್ನೂ ಅವನಿಗೆ ಯಾರೂ ಕೊಡಲಿಲ್ಲ.
17 : ಆಗ ಅವನಿಗೆ ಬುದ್ಧಿ ಬಂದಿತು. ‘ನನ್ನ ತಂದೆಯ ಮನೆಯಲ್ಲಿ ಎಷ್ಟೋ ಮಂದಿ ಕೂಲಿಯಾಳುಗಳಿಗೆ ತಿಂದು ತೇಗುವಷ್ಟು ಆಹಾರವಿದೆ. ನಾನಾದರೋ ಇಲ್ಲಿ ಹಸಿವಿನಿಂದ ಸಾಯುತ್ತಾ ಇದ್ದೇನೆ.
18 : ನಾನು ಇದೀಗಲೇ ಹೊರಟು, ತಂದೆಯ ಬಳಿಗೆ ಹೋಗಿ, ‘ಅಪ್ಪಾ, ದೇವರಿಗೂ ನಿಮಗೂ ವಿರುದ್ಧವಾಗಿ ಪಾಪಮಾಡಿದ್ದೇನೆ; ನಿಮ್ಮ ಮಗನು ಎನಿಸಿಕೊಳ್ಳುವ ಯೋಗ್ಯತೆಯೂ ನನಗಿಲ್ಲ;
19 : ನನ್ನನ್ನು ನಿಮ್ಮ ಮನೆಯ ಕೂಲಿಯಾಳುಗಳಲ್ಲಿ ಒಬ್ಬನನ್ನಾಗಿ ಇಟ್ಟುಕೊಳ್ಳಿ ಎಂದು ಬೇಡಿಕೊಳ್ಳುತ್ತೇನೆ,’ ಎಂದುಕೊಂಡ.
20 : ಅಂತೆಯೇ ಎದ್ದು ತಂದೆಯ ಬಳಿಗೆ ಹೊರಟ. “ಮಗನು ಇನ್ನೂ ಅಷ್ಟುದೂರದಲ್ಲಿ ಇರುವಾಗಲೇ ತಂದೆ ನೋಡಿದ. ಆತನ ಹೃದಯ ಕನಿಕರದಿಂದ ಕರಗಿಹೋಯಿತು. ಓಡಿಹೋಗಿ, ಮಗನನ್ನು ಬಿಗಿಯಾಗಿ ತಬ್ಬಿಕೊಂಡು ಮುತ್ತಿಟ್ಟ.
21 : ಆದರೂ ಮಗನು, ‘ಅಪ್ಪಾ, ದೇವರಿಗೂ ನಿಮಗೂ ವಿರುದ್ಧವಾಗಿ ಪಾಪಮಾಡಿದ್ದೇನೆ; ನಿಮ್ಮ ಮಗನೆನಿನಿಸಿಕೊಳ್ಳುವ ಯೋಗ್ಯತೆಯೂ ನನಗಿಲ್ಲ’ ಎಂದ.
22 : ತಂದೆಯಾದರೋ ಆಳುಗಳನ್ನು ಕರೆದು, ‘ಅತ್ಯುತ್ತಮವಾದ ಅಂಗಿಯನ್ನು ತಕ್ಷಣವೇ ತಂದು ಇವನಿಗೆ ಉಡಿಸಿರಿ. ಬೆರಳಿಗೆ ಉಂಗುರವನ್ನು ತೊಡಿಸಿರಿ, ಕಾಲಿಗೆ ಪಾದರಕ್ಷೆಯನ್ನು ಮೆಟ್ಟಿಸಿರಿ;
23 : ಕೊಬ್ಬಿಸಿದ ಪ್ರಾಣಿಯನ್ನು ತಂದು ಕೊಯ್ಯಿರಿ; ಹಬ್ಬ ಮಾಡೋಣ, ಆನಂದಿಸೋಣ.
24 : ಏಕೆಂದರೆ, ಈ ನನ್ನ ಮಗ ಸತ್ತುಹೋಗಿದ್ದ, ಈಗ ಬದುಕಿ ಬಂದಿದ್ದಾನೆ. ತಪ್ಪಿ ಹೋಗಿದ್ದ, ಈಗ ಸಿಕ್ಕಿದ್ದಾನೆ,’ ಎಂದು ಹೇಳಿದ. ಒಡನೆಯೇ ಹಬ್ಬದ ಸಡಗರ ತೊಡಗಿತು.
25 : “ಇತ್ತ ಹೊಲಕ್ಕೆ ಹೋಗಿದ್ದ ಹಿರಿಯ ಮಗ ಹಿಂದಿರುಗಿ ಮನೆಯನ್ನು ಸಮೀಪಿಸುವಾಗ ಗಾನ, ನರ್ತನಗಳ ಶಬ್ದವು ಅವನ ಕಿವಿಗೆ ಬಿತ್ತು.
26 : ಮನೆಯಲ್ಲೇನು ವಿಶೇಷ?’ ಎಂದು ಒಬ್ಬ ಆಳನ್ನು ಕರೆದು ವಿಚಾರಿಸಿದ.
27 : ‘ನಿಮ್ಮ ತಮ್ಮ ಬಂದಿದ್ದಾರೆ; ಅವರು ಮರಳಿ ಸುರಕ್ಷಿತವಾಗಿ ಬಂದುದಕ್ಕಾಗಿ ಕೊಬ್ಬಿಸಿದ ಪ್ರಾಣಿಯನ್ನು ನಿಮ್ಮ ತಂದೆ ಕೊಯ್ಯಿಸಿದ್ದಾರೆ,’ ಎಂದು ಆಳು ತಿಳಿಸಿದ.
28 : ಇದನ್ನು ಕೇಳಿದ ಹಿರಿಯ ಮಗನಿಗೆ ಸಿಟ್ಟು ಬಂದಿತು. ಮನೆಯೊಳಕ್ಕೆ ಕಾಲಿಡಲೂ ಒಪ್ಪಲಿಲ್ಲ. ತಂದೆಯೇ ಹೊರಗೆ ಬಂದು ಬೇಡಿಕೊಂಡಾಗ
29 : ಅವನು, ‘ನೋಡಿ, ನಾನು ಇಷ್ಟು ವರ್ಷಗಳಿಂದ ನಿಮಗೆ ಗುಲಾಮನಂತೆ ಸೇವೆ ಮಾಡುತ್ತಿದ್ದೇನೆ. ನಿಮ್ಮ ಮಾತನ್ನು ಎಂದೂ ಮೀರಿಲ್ಲ; ಆದರೂ ನಾನು ನನ್ನ ಸ್ನೇಹಿತರೊಡನೆ ಹಬ್ಬಮಾಡಲು ಒಂದು ಆಡುಮರಿಯನ್ನು ಕೂಡ ನೀವು ಕೊಟ್ಟಿಲ್ಲ.
30 : ಆದರೆ ನಿಮ್ಮ ಆಸ್ತಿಪಾಸ್ತಿಯನ್ನೆಲ್ಲಾ ವೇಶ್ಯೆಯರಿಗೆ ಸುರಿದ ಈ ನಿಮ್ಮ ಮಗ ಬಂದದ್ದೇ ಕೊಬ್ಬಿಸಿದ ಪ್ರಾಣಿಯನ್ನು ಕೊಯ್ಯಿಸಿದ್ದೀರಿ!’ ಎಂದು ವಾದಿಸಿದ.
31 : ಆಗ ತಂದೆ ಅವನಿಗೆ, ‘ಮಗನೇ, ನೀನು ಯಾವಾಗಲೂ ನನ್ನ ಸಂಗಡ ಇದ್ದೀ; ನನ್ನ ಸರ್ವಸ್ವವೂ ನಿನ್ನದೇ ಆಗಿದೆ.
32 : ಈ ನಿನ್ನ ತಮ್ಮ ನಮ್ಮ ಪಾಲಿಗೆ ಸತ್ತುಹೋಗಿದ್ದ, ಈಗ ಬದುಕಿಬಂದಿದ್ದಾನೆ. ತಪ್ಪಿ ಹೋಗಿದ್ದ, ಈಗ ಸಿಕ್ಕಿದ್ದಾನೆ. ಆದುದರಿಂದ ನಾವು ಹಬ್ಬಮಾಡಿ ಆನಂದಿಸುವುದು ಸಹಜವಲ್ಲವೇ?’ ಎಂದನು.”
-----------------------------
ಯೇಸು ಸ್ವಾಮಿ ಹೇಳಿದ ಸಾಮತಿಗಳಲ್ಲಿ ಬಹಳ ಇಷ್ಟವಾಗುವ, ಪದೇ ಪದೇ ಕೇಳಬೇಕುನ್ನುವ ಸಾಮತಿ ಇದು. ಈ ಸಾಮತಿಯಲ್ಲಿ ತಂದೆಯನ್ನು ದೇವರಿಗೆ, ಕಿರಿಯ ಮಗನನ್ನು ಸುಂಕದವರಿಗೆ, ವೇಶ್ಯೆಯರಿಗೆ, ಪಾಪಿಷ್ಠರಿಗೆ, ಹಿರಿಯಮಗನನ್ನು ಫÀರಿಸಾಯರಿಗೆ, ಧರ್ಮಶಾಸ್ತ್ರಿಗಳಿಗೆ ಹೋಲಿಸಲಾಗಿದೆ. ಲೂಕ ಶುಭಸಂದೇಶ ಅಧ್ಯಾಯ 15ರಲ್ಲಿ ಮೂರು ಸಾಮತಿಗಳ ಉಲ್ಲೇಖವಿದೆ. ಕಳೆದು ಹೋದ ಕುರಿ, ಕಳೆದು ಹೋದ ನಾಣ್ಯ ಮತ್ತು ದುಂದುಗಾರ ಮಗನ ಸಾಮತಿ. ಯೇಸು ಉದ್ದೇಶ ಪೂರ್ವಕವಾಗಿಯೇ ಈ ಸಾಮತಿಗಳನ್ನು ಹೇಳುತ್ತಾರೆ. ಕಳೆದು ಹೋದ ಕುರಿ ಮತ್ತು ನಾಣ್ಯ ಸಿಕ್ಕಿದಾಗ ಎಲ್ಲರು ಸಂತೋಷದಿಂದ ಆಚರಿಸಿದರು. ಆದರೆ ಕಳೆದು ಹೋದ ಮಗ ತಿರುಗಿ ಬಂದಾಗ ಹಿರಿಯ ಮಗ ಆತನನ್ನು ಸ್ವೀಕರಿಸಲು ಸಿದ್ಧವಿಲ್ಲ. ಇದರ ತಾತ್ಪರ್ಯ ಸುಂಕವಸೂಲಿಯವರು, ಪಾಪಿಗಳು ಮನತಿರುಗಿ ಬಂದಾಗ ಧಾರ್ಮಿಕ ನಾಯಕರೆನಿಸಿಕೊಂಡಿದ್ದ ಫÀರಿಸಾಯರು ಮತ್ತು ಧರ್ಮಶಾಸ್ತ್ರಿಗಳು ಅವರನ್ನು ಕ್ಷಮಿಸದೇ ಹೋದರು. ಅವರಲ್ಲಿ ಕ್ಷಮಿಸುವ ಉದಾರತೆ ಇರಲಿಲ್ಲ. ಯೇಸು ಬಂದಿದ್ದು ಪಾಪಿಗಳ ಉದ್ಧಾರಕ್ಕಾಗಿ ಎಂಬುದನ್ನು ಈ ಸಾಮತಿಯ ಮೂಲಕ ತಿಳಿಸುತ್ತಾರೆ.
----------------------------
ಓಡಿಹೋಗಿ ಮಗನನ್ನು
ಬಿಗಿಯಾಗಿ ತಬ್ಬಿಕೊಂಡು ಮುತ್ತಿಟ್ಟ........
ಚಿಂತನೆ
ಕಳೆದುಹೋದ ನಾಣ್ಯ,
ಕಳೆದುಹೋದ ಕುರಿ ಹಾಗೂ ದುಂದುಗಾರನ ಮಗನ ಸಾಮತಿಗಳನ್ನು ನಾವು ಅನೇಕ ಬಾರಿ ಕೇಳಿದ್ದೇವೆ ಮತ್ತು
ಓದಿದ್ದೇವೆ. ನಾವು ಈ ಸಾಮತಿಗಳಲ್ಲಿ ಕಳೆದುಹೋದ ವಸ್ತು ಅಥವಾ ಪಾಪಿಷ್ಟ ಮಗನ ಮೇಲೆ ಗಮನ
ಕೇಂದ್ರೀಕರಿಸುತ್ತಾ, ಸಾಮತಿಯಲ್ಲಿ ಬರುವ ಕುರಿಗಾಹಿ ಅಥವಾ ತಂದೆಯನ್ನು ಮರೆತುಬಿಡುತ್ತೇವೆ. ಈ
ಸಾಮತಿಗಳ ಮೂಲ ತಿರುಳು ದೇವರ ಅಪರಿಮಿತ ಕರುಣೆ ಮತ್ತು ಕ್ಷಮೆಯನ್ನು ವ್ಯಕ್ತಪಡಿಸುತ್ತವೆ.
ಆದ್ದರಿಂದ ಈ ಸಾಮತಿಗಳನ್ನು ’ದಯಾವಂತ ತಂದೆ’ ಎಂದು ಕರೆದರೆ ಸೂಕ್ತವೆನಿಸುತ್ತದೆ. ನಾವು ದೇವರಿಂದ
ಎಷ್ಟೇ ದೂರ ಹೋದರೂ, ಅವರ ಪ್ರೀಯನ್ನು, ಕ್ಷಮೆಯನ್ನು ಅನುಭವಿಸಲು, ಮತ್ತೆ ಮತ್ತೆ ಆನೇಕ
ಅವಕಾಶಗಳನ್ನು ನೀಡುತ್ತಾರೆ
ಮಂಥನ
ಪ್ರತಿನಿತ್ಯ ದೇವರು
ನೀಡುವ ಅವಕಾಶಗಳನ್ನು ಹೇಗೆ ಉಪಯೋಗಿಸುತ್ತದ್ದೇವೆ?
ನೀವು ಮಾಡಿದ ಯಾವುದೇ
ತಪ್ಪಿಗಿಂತಲೂ ದೇವರ ದಯೆ ದೊಡ್ಡದಾಗಿದೆ - ಅನಾಮಧೇಯ
-------------------------
No comments:
Post a Comment