ಹದಿಮೂರನೆಯ ಸ್ಥಳ

ಪ್ರಭು ಯೇಸುವಿನ ದಿವ್ಯ ಶರೀರವನ್ನು ಅವರ ತಾಯಿಯ ಮಡಿಲಲ್ಲಿ ಇಡುತ್ತಾರೆ


ಒಬ್ಬ: ಸ್ವಾಮಿ ಯೇಸುವೇ, ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ, ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು ರಕ್ಷಿಸಿದ್ದೀರಿ.

ದೇವರ ವಾಕ್ಯ: ಹಾದು ಹೋಗುವವರೇ, ನಿಮಗಿಲ್ಲವೆ ನನ್ನ ಚಿಂತೆ? ಈ ಪರಿ ಸಂಕಟವನ್ನು ನೀವೆಲ್ಲಾದರೂ ನೋಡಿದ್ದುಂಟೆ? ಹರಿಯುತ್ತಿದೆ ಕಂಬನಿ ಧಾರೆಧಾರೆಯಾಗಿ ಕಣ್ಗಳಿಂದ; ವೈರಿಗಳು ಗೆದ್ದು, ನನ್ನ ಕುವರರು ಬಿದ್ದು ಹೋಗಿರುವುದರಿಂದ (ಪ್ರಲಾಪಗಳು ೧: ೧೨, ೧೬) ‘ಅದಕ್ಕೆ ಅವಳು ನನ್ನನ್ನು ನವೊಮಿ ಎಂದು ಕರೆಯಬೇಡಿ; ‘ಮಾರಾ ಎಂದು ಕರೆಯಿರಿ. ಏಕೆಂದರೆ ಸರ್ವಶಕ್ತ ದೇವರು ನನ್ನನ್ನು ಬಹಳ ದುಃಪಡಿಸಿದ್ದಾರೆ. (ರೂತಳು ೧: ೨೦)

ಶ್ಲೋಕ: ಕೆನ್ನೆ ಮೇಲೆ ನೋಡಿ, ಕಣ್ಣೀರ ಕೋಡಿ
ಪ್ರತಿಶ್ಲೋಕ: ಆಕೆಯನ್ನು ಸಂತೈಸುವವರೇ ಇಲ್ಲ (ಪ್ರಲಾಪಗಳು ೧: ೨)

 ಧ್ಯಾನ
(ಮಹಾ ಧರ್ಮಾಧ್ಯಕ್ಷ ಆಸ್ಕರ್ ರೊಮೇರೊ)
ತಪಸ್ಸು ಕಾಲದಲ್ಲಿ ಯಾತನೆಯ ಗೀಳಿಗೆ ಒಳಗಾಗಿ ಯಾರೂ ಪ್ರಾಯಶ್ಚಿತ್ತ ಮಾಡುವುದಿಲ್ಲ. ನಾವು ಯಾತನೆಗೆ ಒಳಗಾಗಬೇಕೆಂದು ದೇವರು ನಮ್ಮನ್ನು ಉಂಟು ಮಾಡಲಿಲ್ಲ. ನಮ್ಮ ಉಪವಾಸ, ಪ್ರಾಯಶ್ಚಿತ್ತ ಹಾಗೂ ಪ್ರಾರ್ಥನೆಗೆ ಅತ್ಯುತ್ತಮವಾದ ಒಂದು ನಿರ್ದಿಷ್ಟ ಗುರಿ ಇದೆ. ಈ ಮೂಲಕ ನಾವು ನಮ್ಮನ್ನೇ ಗೆದ್ದುಕೊಂಡು ಪಾಸ್ಕ ಪುನರುತ್ಥಾನದೆಡೆಗೆ ಸಾಗುತ್ತೇವೆ. ಪುನರುತ್ಥಾನದ ಪ್ರಭು ಯೇಸು ನಮ್ಮಿಂದ ಬೇರ್ಪಟ್ಟು ಇರುವವರಲ್ಲ. ತಪಸ್ಸು ಕಾಲದಲ್ಲಿ ನಾವು, ಅವರೊಂದಿಗೆ ಹೊಸ ಬಾಳಿಗೆ ಎದ್ದೇಳಲು, ಹಾಗೂ ಮೂಲಕ ಹೊಸ ವ್ಯಕ್ತಿಗಳಾಗಲು ಸಿದ್ಧತೆಯನ್ನು ಮಾಡುತ್ತೇವೆ. ಇಂದು ನಮ್ಮ ದೇಶಕ್ಕೆ ಬೇಕಾಗಿರುವುದು ಇದೇ. ಹೊಸ ವ್ಯವಸ್ಥೆ ಬೇಕು ಇಂದು ನಮ್ಮ ದೇಶಕ್ಕೆ ಬೇಕಾಗಿರುವುದು ಇದೇ. ಹೊಸ ವ್ವವಸ್ಥೆಯನ್ನು ಸಿದ್ಧಿಗೆ ತರಲು ಹೊಸ ವ್ಯಕ್ತಿಗಳ ಅಗತ್ಯ ದೇಶಕ್ಕೆ ಇದೆ. ನಮ್ಮ ಜೀವನವನ್ನೇ ನಾವು ಈ ಹೊಸ ವ್ಯವಸ್ಥೆಗೆ ಮುಡಿಪಾಗಿಡಬೇಕು. (ಆಸ್ಕರ್ ರೋಮೇರೊ, ದ ವಯಲೆನ್ಸ್ ಆಫ್ ಲವ್, ಪುಟ ೧೮೭)

ಪ್ರಾರ್ಥಿಸೋಣ: ಪ್ರಭು ಯೇಸುಕ್ರಿಸ್ತರೇ, ನಿಮ್ಮ ಮರಣವು ನಮ್ಮನ್ನು ಸಾವಿನ ವಿಷಕೊಂಡಿಯಿಂದ ಪಾರು ಮಾಡಿತು. ನಿಮ್ಮ ಶಿಷ್ಯರಾದ ನಾವೆಲ್ಲರೂ ನಿಮ್ಮನ್ನು ವಿಶ್ವಾಸಿಸಿ, ನೀವು ತೋರಿಸಿದ ದಾರಿಯಲ್ಲಿ ಸಾಗುತ್ತಾ ಶಾಂತಿಯಿಂದ ನಿಮ್ಮ ಸಾನ್ನಿಧ್ಯಕ್ಕೆ ಬಂದು ಸೇರುವಂತೆ ಹಾಗೂ ನಿಮ್ಮ ಪುನರುತ್ಥಾನದಲ್ಲಿ ಭಾಗಿಯಾಗುವಂತೆ ಕರುಣಿಸಿರಿ. ಯುಗಯುಗಾಂತರಕ್ಕೂ ಜೀವಿಸಿ ಆಳುವ ನಿಮ್ಮನ್ನು ಪ್ರಾರ್ಥಿಸುತ್ತೇವೆ. ಆಮೆನ್.

ಪರಿಶುದ್ಧರೂ ಸರ್ವಶಕ್ತರೂ ಅಮರರೂ ಆಗಿರುವ ದೇವರೇ, ನನ್ನ ಮೇಲೆ ದಯೆ ತೋರಿರಿ.


 ನೋಡಿ  ಹದಿನಾಲ್ಕನೆಯ  ಸ್ಥಳ

No comments:

Post a Comment