ಪ್ರಭು ಯೇಸುವನ್ನು ಶಿಲುಬೆಗೆ ಜಡಿಯುತ್ತಾರೆ
ಒಬ್ಬ: ಸ್ವಾಮಿ ಯೇಸುವೇ, ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ,
ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು
ರಕ್ಷಿಸಿದ್ದೀರಿ.
ದೇವರ ವಾಕ್ಯ: ಬಳಿಕ ಯೇಸುವನ್ನು ಗೊಲ್ಗೊಥ ಎಂಬ ಸ್ಥಳಕ್ಕೆ
ಕರೆದುಕೊಂಡು ಬಂದರು. ಗೊಲ್ಗೊಥ ಎಂದರೆ ಕಪಾಲ ಸ್ಥಳ ಎಂದು ಅರ್ಥ. ಅಲ್ಲಿ ರಕ್ತಬೋಳ ಮಿಶ್ರಿತ ದ್ರಾಕ್ಷಾರಸವನ್ನು
ಯೇಸುವಿಗೆ ಕೊಟ್ಟರು. ಆದರೆ ಅದನ್ನು ಅವರು ಕುಡಿಯಲಿಲ್ಲ. (Repeated from
previous station)
ಕೊನೆಗೆ ಅವರನ್ನು ಶಿಲುಬೆಗೆ ಏರಿಸಿದರು. ಅಲ್ಲದೆ
ಯೇಸುವಿನ ಬಲಗಡೆ ಒಬ್ಬನು, ಎಡಗಡೆ ಒಬ್ಬನು, ಹೀಗೆ ಇಬ್ಬರು ಕಳ್ಳರನ್ನು ಅವರ ಸಂಗಡ ಶಿಲುಬೆಗೇರಿಸಿದರು.
ಹೀಗೆ ‘ಅವರನ್ನು ದ್ರೋಹಿಗಳ ಸಾಲಿನಲ್ಲಿ ಸೇರಿಸಿದರು’ ಎಂಬ ಪವಿತ್ರ ಗ್ರಂಥದ ವಾಕ್ಯವು ನೆರವೇರಿತು
(ಮಾರ್ಕ ೧೫: ೨೨-೨೩, ೨೭-೨೮)
ಶ್ಲೋಕ: ಕುತ್ತಿವೆ ನನ್ನ ಕೈಗಳು ಮೇಣ್ ಕಾಲುಗಳು
ಪ್ರತಿಶ್ಲೋಕ: ಹಿಗ್ಗುತಿಹರು ದುರುಗುಟ್ಟಿ ನೋಡೆನ್ನನು (ಕೀರ್ತನೆ
೨೨: ೧೭)
ಧ್ಯಾನ
(ಮಹಾ ಧರ್ಮಾಧ್ಯಕ್ಷ ಆಸ್ಕರ್ ರೊಮೇರೊ)
ಯಾರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಇಚ್ಚಿಸುತ್ತಾರೋ - ಈ ಬೈಬಲ್ ವಾಕ್ಯದಂತೆ ಬಾಳುವವರು, ಅಂದರೆ ಪರಿಸ್ಥಿತಿಗೆ
ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳುವವರು, ಹೊಣೆಗಾರಿಕೆ ಬೇಡವೆನ್ನುವವರು, ತೊಂದರೆ ತಾಪತ್ರಯ ಇಲ್ಲದ
ಜೀವನವನ್ನು ಅಪೇಕ್ಷಿಸುವವರು, ಎಲ್ಲರ ಸಹಕಾರ ಅಗತ್ಯವಾಗಿ ಬೇಕಾಗಿರುವ ಸಂದರ್ಭದಲ್ಲಿ ದೂರ ಉಳಿಯಲು
ಬಯಸುವವರು - ಇಂಥವರು
ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ. ಭೋಗ ವಿಲಾಸದ ಜೀವನ, ಯಾತನೆ ಇಲ್ಲದ ಬದುಕು, ತೊಂದರೆ ತಾಪತ್ರಯ ಇಲ್ಲದ ಬಾಳು,
ಸರಾಗವಾಗಿ ಸಾಗುವ ಜಡತ್ವದ ಸ್ಥಿತಿ, ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗಿರುವರೊಂದಿಗೆ
ನಿಕಟ ಸಂಪರ್ಕದ ಬದುಕು-ಇಂತಹವರಿಗೆ ಯಾವ ಕೊರತೆಯೂ ಇಲ್ಲ. ಎಲ್ಲವೂ ಇದೆ. ಆದರೆ ಇದರಿಂದ ಅವರಿಗೆ ಸಿಗುವ
ಲಾಭವಾದರೂ ಏನು? ಅವರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ. ಆದರೆ ಯಾರು ನನ್ನ ಮೇಲಿನ ಪ್ರೀತಿಯಿಂದ
ತಮ್ಮನ್ನೇ ಬರಿದು ಮಾಡಿಕೊಂಡು ಜನತೆಯೊಂದಿಗೆ ಒಂದಾಗಿ ಬಾಳುತ್ತಾರೆ, ಬಡವರೊಂದಿಗೆ ಅವರ ಕಷ್ಟ ಸಂಕಟದಲ್ಲಿ
ಭಾಗಿಯಾಗುತ್ತಾರೆ ಹಾಗೂ ಅವರೊಂದಿಗೆ ಒಂದಾಗಿ ಅವರ ನೋವು, ಅವಮಾನವನ್ನು ತಮ್ಮದೇ ಎಂದು ತಿಳಿದುಕೊಳ್ಳುತ್ತಾರೆ-ಅವರು ತಮ್ಮ ಪ್ರಾಣವನ್ನು ರಕ್ಷಿಸಿಕೊಳ್ಳುತ್ತಾರೆ.
ಏಕೆಂದರೆ ನನ್ನ ತಂದೆಯು ಅವರಿಗೆ ಸಂಭಾವನೆಯನ್ನು ನೀಡುತ್ತಾರೆ. ಸಹೋದರ ಸಹೋದರಿಯರೇ, ದೇವರ ವಾಕ್ಯವು
ಇಂದು ನಮಗೆ ಇಂತಹ ಬಾಳಿಗೆ ಕರೆ ನೀಡುತ್ತಿದೆ. ಕ್ರೈಸ್ತ ಜೀವನ ಎಂತಹ ಸಾರ್ಥಕ ಜೀವನ! ಇದೇ ಆಗಿದೆ ನನ್ನ
ದೃಢ ನಂಭಿಕೆ (ಆಸ್ಕರ್ ರೋಮೇರೊ, ದ ವಯಲೆನ್ಸ್ ಆಫ್ ಲವ್, ಪುಟ ೧೨೭)
ಪ್ರಾರ್ಥಿಸೋಣ: ಪ್ರಭು ಯೇಸುಕ್ರಿಸ್ತರೇ, ನೀವು ಪ್ರೀತಿಸುವ ನಿಮ್ಮ
ಕರಗಳನ್ನು ಗಟ್ಟಿಯಾದ ಮರದ ಶಿಲುಬೆಯ ಮೇಲೆ ಚಾಚಿ ಪ್ರತಿಯೊಬ್ಬರನ್ನೂ ನಿಮ್ಮ ರಕ್ಷಣೆಯ ಅಪ್ಪುಗೆಯೊಳಗೆ
ಸೇರಿಸ ಕರುಣಿಸುತ್ತೀರಿ. ನಮ್ಮೆಲ್ಲರನ್ನು ನಿಮ್ಮ ಆತ್ಮದಿಂದ ಅಭಿಷೇಕಿಸಿ, ಆ ಮೂಲಕ
ನಾವು ಪ್ರೀತಿಸುವ ನಮ್ಮ ಕರಗಳನ್ನು ಚಾಚುತ್ತಾ ನಿಮ್ಮನ್ನು ಅರಿಯದೆ ಇರುವವರಿಗೆ ನಿಮ್ಮ ಜ್ಞಾನವನ್ನು
ನೀಡುವ ಸಾಧನಗಳಾಗುವಂತಾಗಲಿ. ಹೀಗೆ ಅವರು ನಿಮ್ಮನ್ನು ಪ್ರಾರ್ಥಿಸಲಿ. ಆಮೆನ್.
ಪರಿಶುದ್ಧರೂ
ಸರ್ವಶಕ್ತರೂ ಅಮರರೂ ಆಗಿರುವ ದೇವರೇ, ನನ್ನ ಮೇಲೆ ದಯೆ ತೋರಿರಿ.
ನೋಡಿ ಹನ್ನೆರಡನೆಯ ಸ್ಥಳ

No comments:
Post a Comment