ಯೇಸು ಶೋಕಭರಿತ ಪೂಜ್ಯ ಮಾತೆಯನ್ನು ಎದುರುಗೊಳ್ಳುತ್ತಾರೆ
ಒಬ್ಬ: ಸ್ವಾಮಿ ಯೇಸುವೇ, ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ,
ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು
ರಕ್ಷಿಸಿದ್ದೀರಿ.
ದೇವರ ವಾಕ್ಯ: ‘ಎಲೈ ಜೆರುಸಲೇಮ್ ಯುವತಿಯೇ,
ನಿನಗೆ ಏನು ಹೇಳಲಿ? ನಿನ್ನನ್ನು ಯಾವುದಕ್ಕೆ ಹೋಲಿಸಲಿ? ಸಿಯೋನ್ ಕನ್ಯೆಯೇ, ನಿನ್ನನ್ನು ಹೇಗೆ ಸಂತೈಸಲಿ?
ಸಂತೈಸುವ ಸಾಮತಿಯನ್ನು ಎಲ್ಲಿಂದ ತರಲಿ? ನಿನಗೊದಗಿರುವ ನಾಶ ಸಾಗರದಂತೆ ಅಪಾರ, ನಿನ್ನನ್ನು ಸ್ವಸ್ಥಗೊಳಿಸಲು
ಯಾರಿಂದ ತಾನೆ ಸಾಧ್ಯ? (ಪ್ರಲಾಪಗಳು ೨: ೧೩)
‘ದುಃಖಿಗಳು ಭಾಗ್ಯವಂತರು: ದೇವರು ಅವರನ್ನು ಸಂತೈಸುವರು’ (ಮತ್ತಾಯ ೫: ೪)
‘ಸರ್ವೆಶ್ವರನೇ ನಿನಗೆ ನಿತ್ಯ ಜ್ಯೋತಿ, ನಿನ್ನ
ದುಃಖ ದಿನಗಳಿಗಿದೆ
ಸಮಾಪ್ತಿ(ಯೆಶಾಯ ೬೦: ೨೦)
ಶ್ಲೋಕ: ದುಃಖವೆಂಬ ಅಲಗೊಂದು ನಿನ್ನ ಅಂತರಂಗವನ್ನು ಸೀಳುವುದು
(ಲೂಕ ೨: ೩೫)
ಪ್ರತಿಶ್ಲೋಕ: ನಿನ್ನ ಹೃದಯವು ತೀವ್ರವಾದ ನೋವಿನಿಂದ ತುಂಬುವುದು
ಧ್ಯಾನ
(ಮಹಾ ಧರ್ಮಾಧ್ಯಕ್ಷ ಆಸ್ಕರ್ ರೊಮೇರೊ)
ಪೂಜ್ಯ ಕನ್ಯಾಮರಿಯಮಮ್ಮನವರು ಬಡತನ, ದೀನತೆ ಹಾಗೂ
ಹೆಜ್ಜೆ ಹೆಜ್ಜೆಗೂ ದೇವರನ್ನು ಅವಲಂಬಿಸಿ ನಡೆಯುವ ಸದ್ಗುಣಗಳಿಂದ ಶೋಭಿತರಾಗಿದ್ದಾರೆ ಎಂದು ಪವಿತ್ರ
ಬೈಬಲ್ ಅವರ ಬಗ್ಗೆ ನಮಗೆ ತಿಳಿಸುತ್ತದೆ. ಲ್ಯಾಟಿನ್ ಅಮೇರಿಕಾದಲ್ಲಿ ಅವರು ತೋರಿಸುವ ಮಾತೃ ಸಹಜ ಕಾಳಜಿಯು
ಖಂಡಿತವಾಗಿಯೂ ರೆಡ್ ಇಂಡಿಯನ್ಸ್, ಬಹಿಷ್ಕೃತರು ಹಾಗೂ ಬಡವರಿಗೆ ಸಲ್ಲಬೇಕು. ಇಲ್ಲಿ ಅವರು ಬಡತನಕ್ಕೆ
ಮುಖಾಮುಖಿಯಾಗುತ್ತಾರೆ. ಈ ಬಡತನವು ದೇವರಿಗಾಗಿ ಹಂಬಲಿಸುವ ಹಾಗೂ ಸ್ವಾತಂತ್ರ್ಯದ ಸಂತೋಷವನ್ನು ಸವಿಯುವ
ಮನೋಭಾವದಲ್ಲಿ ವ್ಯಕ್ತವಾಗುತ್ತದೆ. ಬಡತನದಲ್ಲಿದೆ ವಿಮೋಚನೆ. ಬಡತನದಲ್ಲಿದೆ ಸಹೋದರ ಸಹೋದರಿಯರ ಜೊತೆಗೂಡಿ
ಬಾಳುವ ಭಾಗ್ಯ, ಬಡತನದಲ್ಲಿದೆ ಪರಸ್ಪರ ಆಧಾರಸ್ತಂಭವಾಗಿ ಒಬ್ಬರಿಗೊಬ್ಬರು ನೆರವಾಗುವ ಅವಕಾಶ. ಪೂಜ್ಯ
ಕನ್ಯಾಮರಿಯಮ್ಮನವರು ಈ
ದಿಸೆಯಲ್ಲಿ ಲ್ಯಾಟಿನ್ ಅಮೇರಿಕಾಕ್ಕೆ ದಾರಿದೀಪವಾಗುತ್ತಾರೆ. ಹಾಗೂ ಇಂತಹ ಧರ್ಮಸಭೆಯು ಇಲ್ಲಿ ಪ್ರಸ್ತುತವಾಗುತ್ತದೆ.
(ಆಸ್ಕರ್ ರೋಮೇರೊ, ದ ವಯಲೆನ್ಸ್ ಆಫ್ ಲವ್, ಪುಟ ೨೨)
ಪ್ರಾರ್ಥಿಸೋಣ: ದಯಾಮಯ ದೇವರೇ, ನಿಮ್ಮ ಕುಮಾರರ ಯಾತನೆಯಲ್ಲಿ ದುಃಖವೆಂಬ
ಅಲಗೊಂದು ಅವರ ತಾಯಿ ಪೂಜ್ಯ ಕನ್ಯಾಕುಮಾರಿಯಮ್ಮನರ ಅಂತರಂಗವನ್ನು ಸೀಳುವಂತೆ ಅಪೇಕ್ಷಿಸಿದಿರಿ. ನಿಮ್ಮ
ಧರ್ಮಸಭೆಯು ಅವರಂತೆ ಪ್ರಭು ಯೇಸುವಿನ ಯಾತನೆಯಲ್ಲಿ
ಪಾಲ್ಗೊಂಡು ಅವರ ಪುನರುತ್ಥಾನದ ಮಹಿಮೆಯಲ್ಲಿ ಭಾಗವಹಿಸುವಂತೆ ದಯಪಾಲಿಸಿರಿ. ಯುಗಯುಗಾಂತರಕ್ಕೂ
ಜೀವಿಸಿ ಆಳುವ ನಿಮ್ಮನ್ನು ಪ್ರಾರ್ಥಿಸುತ್ತೇವೆ. ಆಮೆನ್.

No comments:
Post a Comment