ಪ್ರಭು ಯೇಸುವಿನ ಬಟ್ಟೆಗಳನ್ನು ಕಳಚುತ್ತಾರೆ
ಒಬ್ಬ: ಸ್ವಾಮಿ ಯೇಸುವೇ, ನಿಮ್ಮನ್ನು ಆರಾಧಿಸಿ, ನಮಸ್ಕರಿಸಿ,
ನಿಮಗೆ ಕೃತಜ್ಞತಾ ಸ್ತೋತ್ರವನ್ನು ಮಾಡುತ್ತಿದ್ದೇವೆ.
ಎಲ್ಲ: ಏಕೆಂದರೆ ನಿಮ್ಮ ಪವಿತ್ರ ಶಿಲುಬೆಯಿಂದ ಲೋಕವನ್ನು
ರಕ್ಷಿಸಿದ್ದೀರಿ.
ದೇವರ ವಾಕ್ಯ: ಅವರೆಲ್ಲರೂ ಗೊಲ್ಗೊಥ ಎಂಬ ಸ್ಥಳಕ್ಕೆ ಬಂದು ಸೇರಿದರು (ಗೊಲ್ಗೊಥ ಎಂದರೆ ‘ಕಪಾಲ ಸ್ಥಳ ಎಂದು
ಅರ್ಥ) ಅಲ್ಲಿ ಕಹಿ ಬೆರೆಸಿದ ದ್ರಾಕ್ಷಾರಸವನ್ನು ಯೇಸುವಿಗೆ ಕುಡಿಯಲು ಕೊಟ್ಟರು. ಶಿಲುಬೆಗೇರಿಸಿದ
ಬಳಿಕ ಉಡುಪಿಗಾಗಿ ಸೈನಿಕರು ಚೀಟುಹಾಕಿ ತಮ್ಮ ತಮ್ಮೊಳಗೆಯೇ ಹಂಚಿಕೊಂಡರು. ನನ್ನ ಉಡುಗೆಗಳನ್ನು ಹಂಚಿಕೊಂಡರು,
ನನ್ನ ಅಂಗಿಗೋಸ್ಕರ ಚೀಟು ಹಾಕಿದರು ಎಂಬ ಪವಿತ್ರ ಗ್ರಂಥದ ವಾಕ್ಯ ಹೀಗೆ ನೆರವೇರಿತು. (ಮತ್ತಾಯ ೨೭:
೩೩-೩೫, ಕೀರ್ತನೆ ೨೨: ೧೮)
ಶ್ಲೋಕ: ಅವರು ನನಗೆ ಕಹಿರಸವನ್ನು ಕೊಟ್ಟರು
ಪ್ರತಿಶ್ಲೋಕ: ಬಾಯಾರಿದ ನನಗೆ ಅವರು ಹುಳಿರಸವನ್ನು ಕೊಟ್ಟರು
ಧ್ಯಾನ
(ಮಹಾ ಧರ್ಮಾಧ್ಯಕ್ಷ ಆಸ್ಕರ್ ರೊಮೇರೊ)
ಶುಭಸಂದೇಶ ಪ್ರಸಾರದಿಂದ ಪ್ರೇರಣೆಯನ್ನು ಪಡೆದ
ಒಂದು ಕ್ರೈಸ್ತ ಸಮುದಾಯವು. ಶುಭಸಂದೇಶ ಪ್ರಸಾರ ಕಾರ್ಯದಲ್ಲಿ ಮಗ್ನವಾಗುತ್ತದೆ. ದೀಪವನ್ನು ಹಚ್ಚುವುದು
ಬೆಳಕನ್ನು ಕೊಡಲು. ಯಾರೂ ದೀಪವನ್ನು ಹಚ್ಚಿ ಬಟ್ಟಲ ಕೆಳಗೆ ಬಚ್ಚಿಡುವುದಿಲ್ಲ. ಎಲ್ಲರಿಗೂ ಬೆಳಕನ್ನು
ಕೊಡುವಂತೆ ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರೆ. ಇದೇ ರೀತಿ ನಿಜವಾದ ಒಂದು ಕ್ರೈಸ್ತ ಸಮುದಾಯವು
ಇರಬೇಕು. ಈ ಸಮುದಾಯಕ್ಕೆ ಸೇರಿದ ಮಹಿಳೆಯರೂ ಪುರುಷರೂ ಪ್ರಭು ಯೇಸುವಿನಲ್ಲಿ ಹಾಗೂ ಅವರ ಶುಭಸಂದೇಶದಲ್ಲಿ
ಸತ್ಯದ ಮಾರ್ಗವನ್ನು ಅರಿತುಕೊಂಡು, ಆ ಮಾರ್ಗದಲ್ಲಿ ನಡೆಯುತ್ತಾರೆ. ಅಲ್ಲದೆ ಪರಸ್ಪರ ನಿಕಟ ಬಾಂಧವ್ಯದಿಂದ
ಇನ್ನೂ ಹೆಚ್ಚು ಶಕ್ತರಾಗಿ ಈ ದಾರಿಯನ್ನು ಕ್ರಮಿಸುತ್ತಾರೆ. ಹೀಗೆ ಇಲ್ಲಿ ವೈಯಕ್ತಿಕ ಹಾಗೂ ಸಾಮುದಾಯಿಕ
ಪರಿವರ್ತನೆ ಸಾಧ್ಯವಾಗುತ್ತದೆ. ಇದೊಂದು ದೇವರನ್ನು ಆಶ್ರಯಿಸಿ ಅವರಲ್ಲಿ ವಿಶ್ವಾಸವಿಡುವ ಕುಟುಂಬವಾಗುತ್ತದೆ.
ಈ ಕುಟುಂಬದಲ್ಲಿರುವ ಸಹೋದರರು ಹಾಗೂ ಸಹೋದರಿಯರು ಬಲಹೀನತೆಯ ಕ್ಷಣದಲ್ಲಿ ಪರಸ್ಪರ ಒಬ್ಬರಿಗೊಬ್ಬರು ಧೈರ್ಯ ತುಂಬುವವರಾಗುತ್ತಾರೆ ಏಕೆಂದರೆ ಅವರು ಪರಸ್ಪರ ನೆರವು,
ಪ್ರೀತಿ, ನಂಬಿಕೆಯಿಂದ ಬಾಳುತ್ತಾ ಬೆಳಕನ್ನು ನೀಡುವ ಆದರ್ಶ ವ್ಯಕ್ತಿಗಳಾಗಿರುತ್ತಾರೆ (ಆಸ್ಕರ್ ರೋಮೇರೊ,
ದ ವಯಲೆನ್ಸ್ ಆಫ್ ಲವ್, ಪುಟ ೯೭)
ಪ್ರಾರ್ಥಿಸೋಣ: ನಮ್ಮ ರಕ್ಷಕರಾಗಿರುವ ನಿಮ್ಮ ಕುಮಾರರು ತಮ್ಮ ದೇಹವನ್ನು
ಚಾಟಿಯೇಟಿನ ಬಾಧೆಗೆ ಹಾಗೂ ತಮ್ಮ ಮುಖವನ್ನು ಉಗುಳಿನ ಅವಮಾನಕ್ಕೆ ಒಪ್ಪಿಸಿದರು. ಪ್ರಸ್ತುತ ಕಾಲದ ಎಲ್ಲಾ
ಯಾತನೆಗಳನ್ನು ನಾವು ಸಂತೋಷದಿಂದ ಒಪ್ಪಿಕೊಳ್ಳುತ್ತಾ, ಮಹಿಮೆಯ ಭರವಸೆಯೊಂದಿಗೆ ಮುನ್ನಡೆಯುವಂತೆ ಅನುಗ್ರಹಿಸಿರಿ.
ಪ್ರಭು ಯೇಸುಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ, ಆಮೆನ್.
ಪರಿಶುದ್ಧರೂ
ಸರ್ವಶಕ್ತರೂ ಅಮರರೂ ಆಗಿರುವ ದೇವರೇ, ನನ್ನ ಮೇಲೆ ದಯೆ ತೋರಿರಿ.
ನೋಡಿ ಹನ್ನೊಂದನೆಯ ಸ್ಥಳ

No comments:
Post a Comment