ಮಹಾ ಧರ್ಮಾಧಕ್ಷ ಆಸ್ಕರ್ ರೊಮೇರೊರವರೊಂದಿಗೆ ಶಿಲುಬೆ ಹಾದಿ
ಕನ್ನಡ ಭಾಷಾಂತರ : ಜೆ ಬಿ ಕ್ಯಾಸ್ತಲಿನೊ
ಧನ್ಯವಾದಗಳು: ಬಿಷಪ್ ಫ್ರಾನ್ಸಿಸ್ ಸೆರವೋ (ಶಿವಮೊಗ್ಗ ಧರ್ಮಾಧ್ಯಕ್ಷರು)
ಫಾ. ಜೆ ಬಿ ಕ್ಯಾಸ್ತಲಿನೊ
ನಮ್ಮ ಸೃಷ್ಟಿಕರ್ತರೂ, ಪ್ರೀತಿಮಯ ತಂದೆಯೂ ಆದ ದೇವರೇ, ನೀವು ಸೃಷ್ಟಿಸಿದ ನಿಮ್ಮ ಮಕ್ಕಳು ಪಾಪದ ಮೂಲಕ ನಿಮ್ಮಿಂದ ದೂರವಾದಾಗ, ಅವರನ್ನು ನಿಮ್ಮ ಪ್ರೀತಿಯ ಬಂಧನದಲ್ಲಿ ಆಲಂಗಿಸಲು ನಿಮ್ಮ ಏಕಮಾತ್ರ ಪುತ್ರರನ್ನೇ ಭೂಲೋಕಕ್ಕೆ ಕಳುಹಿಸಿದಿರಿ. ಹೀಗೆ ನಾವೆಲ್ಲರೂ ರಕ್ಷಣೆ ಹೊಂದುವಂತಾಯಿತು. ನಿಮ್ಮ ಪ್ರೀತಿಯ ಸಾಕಾರ ಮೂರ್ತಿಯಾಗಿದ್ದ ನಿಮ್ಮ ಪುತ್ರನಿಗೆ ಈ ಜಗತ್ತು ಕೊಡುಗೆ ನೀಡಿದ್ದು ಶಿಲುಬೆ. ಆದರೆ ಈ ಶಿಲುಬೆಯನ್ನು ಪ್ರಭು ಯೇಸು ನಮ್ಮ ರಕ್ಷಣೆಯ ಲಾಂಛನವಾಗಿ ಮಾರ್ಪಡಿಸಿದರು.
ಪ್ರೀತಿಮಯ ತಂದೆಯೇ ಪಾಪಕೂಪದಲ್ಲಿ ಮುಳುಗಿ ಹೋಗಿರುವ ನಮ್ಮ ಜೀವನ ಕಷ್ಟ, ದುಃಖ, ನೋವಿನಿಂದ ಕಂಗಾಲಾಗಿದೆ. ಪ್ರಭು ಯೇಸುಕ್ರಿಸ್ತರು ಹೊತ್ತ ಶಿಲುಬೆ ನಮಗೆ ಸಾಂತ್ವನವನ್ನು ಈಯಲಿ. ಅವರು ನಡೆದ ಶಿಲುಬೆಯ ಹಾದಿ ನಮ್ಮ ಬಾಳಿಗೆ ಅರ್ಥವನ್ನು ನೀಡಲಿ. ಈ ಶಿಲುಬೆಯ ಹಾದಿಯಲ್ಲಿ ನಮ್ಮ ಬಾಳಿನ ಶಿಲುಬೆಯನ್ನು ಹೊತ್ತುಕೊಂಡು ಮುಂದೆ ಸಾಗೋಣ. ಹೀಗೆ ಪ್ರಭುವಿನ ಶಿಲುಬೆ ಯಾತನೆ ನಮ್ಮ ನೋವನ್ನು ಕಡಿಮೆ ಮಾಡಲಿ.
ಪವಿತ್ರಾತ್ಮರೇ ಈ ಶಿಲುಬೆಯ ಹಾದಿಯಲ್ಲಿ ನಮ್ಮನ್ನು ಮುನ್ನಡೆಸುತ್ತಾ ನಮ್ಮ ಜೀವನದ ಬಗ್ಗೆ ನಾವು ಧ್ಯಾನಿಸಿ, ನಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ನೈಜ ಮನಪರಿವರ್ತನೆ ಹೊಂದುವಂತೆ ನಿಮ್ಮ ವರಪ್ರಸಾದಗಳನ್ನು ನಮ್ಮ ಮೇಲೆ ಸುರಿಸಿರಿ.

No comments:
Post a Comment