ಶಿಲುಬೆಯ ಗುರುತು
ಪ್ರಭುವಿನ ಪ್ರಾರ್ಥನೆ
ನಮ್ಮ ಅನುದಿನದ ಅಹಾರವನ್ನು ಇಂದು ನಮಗೆ ಕೊಡಿರಿ; ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸುವ ಪ್ರಕಾರ ನಮ್ಮ ಪಾಪಗಳನ್ನು ಕ್ಷಮಿಸಿರಿ. ನಮ್ಮನ್ನು ಶೋಧನೆಗೆ ಒಳಪಡಿಸದೆ, ಕೇಡಿನಿಂದ ನಮ್ಮನ್ನು ರಕ್ಷಿಸಿರಿ, ಆಮೆನ್.
ಮಂಗಳವಾರ್ತೆ
ನಮೋ ಮರಿಯಾ, ಪ್ರಸಾದ ಪೂರ್ಣೇ, ಪ್ರಭುವು ನಿಮ್ಮೊಡನೆ ಇದ್ದಾರೆ. ಸ್ತ್ರೀಯರಲ್ಲಿ ನೀವು ಧನ್ಯರು ಮತ್ತು ನಿಮ್ಮ ಉದರದ ಫಲವಾದ ಯೇಸು ಧನ್ಯರು.
ಸಂತ ಮರಿಯಾ, ದೇವ ಮಾತೆಯೇ, ಪಾಪಿಗಳಾಗಿರುವ ನಮಗಾಗಿ ಈಗಲೂ ನಮ್ಮ ಮರಣದ ಸಮಯದಲ್ಲಿಯೂ ಪ್ರಾರ್ಥಿಸಿರಿ. ಆಮೆನ್.
ಪರಮ ತ್ರಿತ್ವಕ್ಕೆ ಸ್ತೋತ್ರ
ಪಿತನಿಗೂ ಸುತನಿಗೂ ಮತ್ತು ಪವಿತ್ರಾತ್ಮನಿಗೂ ಮಹಿಮೆಯಾಗಲಿ. ಆದಿಯಲ್ಲಿ ಇದ್ದಹಾಗೆ ಈಗಲೂ, ಯಾವಾಗಲೂ, ಯುಗಯುಗಾಂತರಕ್ಕೂ ಆಮೆನ್.
ಪ್ರಾತಃಕಾಲದ ಅರ್ಪಣೆ
ಓ ಯೇಸುವಿನ ಪವಿತ್ರ ಹೃದಯವೇ, ಸಂತ ಕನ್ಯಾ ಮರಿಯಮ್ಮನವರ ನಿಷ್ಕಳಂಕ ಹೃದಯದ ಮೂಲಕ ನೀವು ಎಡೆಬಿಡದೆ ಪವಿತ್ರ ಪೀಠದ ಮೇಲೆ ದಿನಂಪ್ರತಿಯೂ ಸರ್ವೇಶ್ವರನಿಗೆ ಬಲಿಯಾಗಿ ಅರ್ಪಿಸುವ ಸಕಲ ಅಪೇಕ್ಷೆಗಳಿಗಾಗಿ ನನ್ನ ಈ ದಿನದ ಜಪಗಳನ್ನೂ, ಕ್ರಿಯೆಗಳನ್ನೂ, ನಲಿವುನೋವುಗಳನ್ನೂ , ಎಲ್ಲಾ ಪಾಪಗಳ ಪರಿಹಾರಕ್ಕಾಗಿ ಸಮರ್ಪಿಸುತ್ತೇನೆ. ವಿಶೇಷವಾಗಿ ಈ ತಿಂಗಳಿನಲ್ಲಿ ನೇಮಿಸಲ್ಪಟ್ಟಿರುವ ಅಪೇಕ್ಷೆಗಳು ನೇರವೇರುವಂತೆ ಒಪ್ಪಿಸುತ್ತೇನೆ, ಸ್ವಾಮೀ, ಆಮೆನ್.
ಪಾಪ ನಿವೇದನೆಯ ಪ್ರಾರ್ಥನೆ
ಪಾಪ ನಿವೇದನೆಯ ಪ್ರಾರ್ಥನೆ
ಸರ್ವಶಕ್ತ ದೇವರಿಗೂ, ಸಹೋದರ ಸಹೋದರಿಯರೇ ನಿಮಗೂ, ಯೋಚನೆಯಿಂದಲೂ, ನುಡಿಯಿಂದಲೂ, ನಡತೆಯಿಂದಲೂ, ಕರ್ತವ್ಯ ಲೋಪದಿಂದಲೂ ನಾನು ಅನೇಕ ಪಾಪಗಳನ್ನು ಮಾಡಿದ್ದೇನೆಂದು ನಿವೇದಿಸುತ್ತೇನೆ.
(ಎದೆ ಬಡಿದುಕೊಳ್ಳುತ್ತಾ) *ನನ್ನ ಪಾಪವೇ ನನ್ನ ಪಾಪವೇ ನನ್ನ ಮಹಾ ಪಾಪವೇ*
ಆದುದರಿಂದ ಸದಾಕನ್ನಿಕೆಯಾದ ಸಂತ ಮರಿಯಮ್ಮನವರನ್ನೂ, ಸಕಲ ದೇವದೂತರನ್ನೂ, ಸಂತರನ್ನೂ, ಸಹೋದರ ಸಹೋದರಿಯರೇ ನಿಮ್ಮನ್ನೂ, ನನಗಾಗಿ ನಮ್ಮ ಪ್ರಭು ದೇವರನ್ನು ಪ್ರಾರ್ಥಿಸಬೇಕೆಂದು ಬೇಡಿಕೊಳ್ಳುತ್ತೇನೆ.
ವಿಶ್ವಾಸದ ವಿಧಾನ
ಸರ್ವೆಶ್ವರಾ, ಧರ್ಮಸಭೆಯು ವಿಶ್ವಾಸಿಸಿ ಬೋಧಿಸುವ ಸತ್ಯಗಳನ್ನು ಸತ್ಯವಂತ ದೇವರಾಗಿರುವ ನೀವೇ ತಿಳಿಯಪಡಿಸಿದ್ದೀರಿ. ಆದುದರಿಂದ ನಾನು ಈ ಸತ್ಯಗಳನ್ನು ಪೂರ್ಣ ಮನಸ್ಸಿನಿಂದ ವಿಶ್ವಾಸಿಸುತ್ತೇನೆ, ಸ್ವಾಮಿ.
ಭರವಸೆಯ ವಿಧಾನ
ಸರ್ವೇಶ್ವರಾ, ನೀವು ಸರ್ವಶಕ್ತರೂ ನನ್ನ ಭಾಗ್ಯವನ್ನು ಆಶಿಸುವವರೂ ನಿಮ್ಮ ವಾಗ್ದಾನಗಳನ್ನು ನೆರವೇರಿಸುವವರು ಆಗಿದ್ದೀರಿ. ಆದುದರಿಂದ ನನ್ನ ಪಾಪಗಳನ್ನು ಕ್ಷಮಿಸುವಿರೆಂದೂ ನಿಮ್ಮ ಪ್ರಸಾದವನ್ನೂ ಮೋಕ್ಷಭಾಗ್ಯವನ್ನೂ ನನಗೆ ದಯಪಾಲಿಸುವಿರೆಂದೂ ದೃಢವಾಗಿ ನಂಬುತ್ತೇನೆ, ಸ್ವಾಮಿ.
ಪ್ರೀತಿಯ ವಿಧಾನ
ಪ್ರೀತಿಯ ವಿಧಾನ
ಸರ್ವೇಶ್ವರಾ, ನೀವು ಮಿತಿಯಿಲ್ಲದ ಪ್ರೀತಿಗೆ ಪಾತ್ರರಾಗಿದ್ದೀರಿ. ನೀವು ನನ್ನನ್ನು ಪ್ರೀತಿಯಿಂದ ಸೃಷ್ಟಿಸಿ, ರಕ್ಷಿಸಿ, ನಿಮ್ಮ ದೈವಿಕ ಜೀವವನ್ನು ನನಗೆ ಕರುಣಿಸಿದ್ದೀರಿ.ಆದುದರಿಂದ, ನಾನು ಎಲ್ಲಕ್ಕಿಂತಲೂ ಹೆಚ್ಚಾಗಿ ನಿಮ್ಮನ್ನು ಪ್ರೀತಿಸುತ್ತೇನೆ, ಮತ್ತು ನಿಮಗೋಸ್ಕರ ನನ್ನಂತೆಯೇ ಪರರನ್ನೂ ಪ್ರೀತಿಸುತ್ತೇನೆ, ಸ್ವಾಮಿ.
ತ್ರಿಕಾಲ ಪ್ರಾರ್ಥನೆ
ಮಾರ್ದನಿ: ಇವರು ಪವಿತ್ರಾತ್ಮರಿಂದ ಗರ್ಭ ಧರಿಸಿದರು. (ನಮೋ ಮರಿಯಾ)
ದನಿ: ಇಗೋ ಒಡೆಯನ ಸೇವಕಿ,
ಮಾರ್ದನಿ: ನಿಮ್ಮ ವಚನದ ಪ್ರಕಾರ ನನಗಾಗಲಿ. (ನಮೋ ಮರಿಯಾ)
ದನಿ: ವಾರ್ತೆ ಎಂಬುವರು ಮನುಷ್ಯರಾದರು,
ಮಾರ್ದನಿ: ಮತ್ತು ನಮ್ಮಲ್ಲಿ ವಾಸಮಾಡಿದರು (ನಮೋ ಮರಿಯಾ)
ದನಿ: ಕ್ರಿಸ್ತರ ವಾಗ್ದಾನಗಳಿಗೆ ನಾವು ಪಾತ್ರರಾಗುವಂತೆ,
ಮಾರ್ದನಿ: ಪರಿಶುದ್ಧ ದೇವಮಾತೆಯೇ, ನಮಗಾಗಿ ಪ್ರಾರ್ಥಿಸಿರಿ
ಪ್ರಾರ್ಥಿಸೋಣ: ಸ್ವಾಮಿ, ದೇವದೂತನ ಸಂದೇಶದಿಂದ ನಿಮ್ಮ ಪುತ್ರರಾದ ಯೇಸುಕ್ರಿಸ್ತರು ಮನುಷ್ಯಸ್ವಭಾವ ತಾಳಿದ್ದನ್ನು ಅರಿತಿರುವ ನಾವು, ಅವರ ಪೂಜ್ಯ ಪಾಡುಗಳ ಹಾಗೂ ಶಿಲುಬೆಯ ಮೂಲಕ ಪುನರುತ್ಥಾನದ ಮಹಿಮೆಯನ್ನು ಪಡೆಯುವಂತೆ ನಿಮ್ಮ ಕೃಪಾವರಗಳನ್ನು ನಮ್ಮ ಹೃದಯಗಳಲ್ಲಿ ಸುರಿಸಬೇಕೆಂದು, ನಮ್ಮ ಪ್ರಭು ಯೇಸುಕ್ರಿಸ್ತರ ಮುಖಾಂತರ ಪ್ರಾರ್ಥಿಸುತ್ತೇವೆ. ಆಮೆನ್.
====================
ಪಾಸ್ಖ ಕಾಲದ ತ್ರಿಕಾಲ ಪ್ರಾರ್ಥನೆ
ಏಕೆಂದರೆ ಯಾರನ್ನು ನಿಮ್ಮ ಉದರದಲ್ಲಿ ಧರಿಸಲು ನೀವು ಪಾತ್ರರಾದಿರೋ, ಅಲ್ಲೆಲೂಯ
ಅವರು ತಾವು ಹೇಳಿದ ಪ್ರಕಾರ ಪುನರುತ್ಥಾನಗೊಂಡಿದ್ದಾರೆ, ಅಲ್ಲೆಲೂಯ
ನಮಗಾಗಿ ದೇವರನ್ನು ಪ್ರಾರ್ಥಿಸಿರಿ, ಅಲ್ಲೆಲೂಯ
ಶ್ಲೋಕ: ಕನ್ಯಾಮರಿಯಮ್ಮನವರೇ, ಸಂತೋಷಿಸಿ ಆನಂದಿಸಿರಿ, ಅಲ್ಲೆಲೂಯ
ಪ್ರತಿಶ್ಲೋಕ: ಏಕೆಂದರೆ ಪ್ರಭುವು ನಿಜವಾಗಿ ಪುನರುತ್ಥಾನಗೊಂಡಿದ್ದಾರೆ, ಅಲ್ಲೆಲೂಯ
ಪ್ರಾರ್ಥಿಸೋಣ: ಸ್ವಾಮಿ, ನಿಮ್ಮ ಪುತ್ರರೂ ನಮ್ಮ ಪ್ರಭುವೂ ಆದ ಯೇಸುಕ್ರಿಸ್ತರ ಪುನರುತ್ಥಾನದಿಂದ ಭೂಲೋಕವನ್ನು
ಆನಂದಪಡಿಸಲು ನೀವು ಅನುಗ್ರಹಿಸಿದ್ದಿರಿ. ಅವರ ಕನ್ಯಾಮಾತೆ ಮರಿಯಮ್ಮನವರ ಮೂಲಕ ನಿತ್ಯ ಜೀವದ ಆನಂದವನ್ನು
ನಾವು ಪಡೆಯುವಂತೆ ಕರುಣಿಸಬೇಕೆಂದು ನಮ್ಮ ಪ್ರಭು ಕ್ರಿಸ್ತರ ಮುಖಾಂತರ ಪ್ರಾರ್ಥಿಸುತ್ತೇವೆ. ಆಮೆನ್.
ವಿಶ್ವಾಸ ಪ್ರಕಟಣೆ
(ನೈಸಿನೊ ಕಾನ್ಸ್ಟಾಂಟಿನೊಪಾಲಿಟನ್ ಕ್ರೀದ್)
ಸ್ವರ್ಗವನ್ನೂ ಭುವಿಯನ್ನೂ ಗೋಚರವಾದುದನ್ನೂ ಅಗೋಚರವಾದುದನ್ನೂ ಸರ್ವವನ್ನೂ ಸೃಷ್ಟಿಸಿದ ಸರ್ವಶಕ್ತ ಪಿತನಾದ ಏಕ ದೇವರನ್ನು ವಿಶ್ವಾಸಿಸುತ್ತೇನೆ.
ಸಕಲ ಯುಗಗಳ ಮುನ್ನ ಪಿತನಿಂದ ಜನಿಸಿದ ಏಕಮಾತ್ರ ದೇವಪುತ್ರ ಪ್ರಭು ಯೇಸುಕ್ರಿಸ್ತರನ್ನು ವಿಶ್ವಾಸಿಸುತ್ತೇನೆ.
ಇವರು ದೇವರಿಂದ ದೇವರೂ, ಬೆಳಕಿನಿಂದ ಬೆಳಕೂ, ನಿಜದೇವರಿಂದ ನಿಜದೇವರೂ, ಜನಿಸಿಯೂ ಸೃಷ್ಟಿಯಾಗದೆ ಪಿತನ ಸಹಸ್ವಭಾವಿ ಆಗಿರುವರು.
ಇವರ ಮುಖಾಂತರವೇ ಸಕಲವೂ ಸೃಷ್ಟಿಯಾಯಿತು.
ಇವರು ಮಾನವರಾದ ನಮಗಾಗಿಯೂ, ನಮ್ಮ ರಕ್ಷಣೆಗಾಗಿಯೂ ಸ್ವರ್ಗದಿಂದ ಇಳಿದು ಬಂದರು.
ಮತ್ತು (ತಲೆಬಾಗಿ) *ಪವಿತ್ರಾತ್ಮರಿಂದ ಕನ್ಯಾಮರಿಯಮ್ಮನವರಲ್ಲಿ ಮನುಷ್ಯರಾದರು* .
ಪೋಂತ್ಸಿಯುಸ್ ಪಿಲಾತನ ಅಧಿಕಾರದಲ್ಲಿ ನಮಗಾಗಿ ಶಿಲುಬೆಗೇರಿಸಲ್ಪಟ್ಟು, ಮೃತರಾಗಿ, ಸಮಾಧಿ ಮಾಡಲ್ಪಟ್ಟರು.
ಪವಿತ್ರ ಗ್ರಂಥಗಳ ಪ್ರಕಾರವೇ ಮೂರನೆಯ ದಿನ ಪುನರ್ಜೀವಂತರಾಗಿ ಎದ್ದರು.
ಸ್ವರ್ಗಕ್ಕೇರಿ ಪಿತನ ಬಲಗಡೆಯಲ್ಲಿ ಆಸೀನರಾಗಿರುವರು.
ಅಲ್ಲಿಂದ ಜೀವಂತರಿಗೂ ಮೃತರಿಗೂ ತೀರ್ಪುಕೊಡಲು ಮಹಿಮೆಯೊಂದಿಗೆ ಮರಳಿ ಬರುವರು.
ಅವರ ರಾಜ್ಯಕ್ಕೆ ಅಂತ್ಯವಿರದು.
ಪಿತನಿಂದಲೂ ಸುತನಿಂದಲೂ ಹೊರಡುವ ಪ್ರಭುವೂ ಜೀವದಾತರೂ ಆಗಿರುವ ಪವಿತ್ರಾತ್ಮರನ್ನು ವಿಶ್ವಾಸಿಸುತ್ತೇನೆ.
ಪ್ರವಾದಿಗಳ ಮುಖಾಂತರ ಮಾತನಾಡಿದ ಇವರು, ಪಿತ ಮತ್ತು ಸುತನೊಡನೆ ಒಂದಾಗಿ ಆರಾಧನೆಯನ್ನೂ, ಮಹಿಮೆಯನ್ನೂ ಪಡೆಯುತ್ತಾರೆ.
ಏಕ, ಪವಿತ್ರ, ಕಥೋಲಿಕ ಮತ್ತು ಪ್ರೇಷಿತ ಧರ್ಮಸಭೆಯನ್ನು ವಿಶ್ವಾಸಿಸುತ್ತೇನೆ.
ಪಾಪ ಪರಿಹಾರಕ್ಕಾಗಿ ಒಂದೇ ದೀಕ್ಷಾಸ್ನಾನ ಇರುವುದೆಂದು ನಿವೇದಿಸುತ್ತೇನೆ.
ಮೃತರ ಪುನರುತ್ಥಾನವನ್ನೂ ಬರಲಿರುವ ಮರುಲೋಕ ಜೀವನವನ್ನೂ ನಿರೀಕ್ಷಿಸುತ್ತೇನೆ. ಆಮೆನ್.
ಪ್ರೇಷಿತರ ವಿಶ್ವಾಸ ಸಂಗ್ರಹ
ಸ್ವರ್ಗವನ್ನೂ ಭುವಿಯನ್ನೂ ಸೃಷ್ಟಿಸಿದ
ಸರ್ವಶಕ್ತ ದೇವಪಿತನನ್ನು ವಿಶ್ವಾಸಿಸುತ್ತೇನೆ.
ಅವರ ಏಕಮಾತ್ರ ಪುತ್ರರೂ ನಮ್ಮ ಪ್ರಭುವೂ ಆದ ಯೇಸುಕ್ರಿಸ್ತರನ್ನು ವಿಶ್ವಾಸಿಸುತ್ತೇನೆ.
ಇವರು ಪವಿತ್ರಾತ್ಮರಿಂದ ಗರ್ಭಧರಿಸಿದ ಕನ್ಯಾಮರಿಯಮ್ಮನವರಲ್ಲಿ ಜನಿಸಿದರು.
ಪೋಂತಿಯಸ್ ಪಿಲಾತನ ಅಧಿಕಾರದಲ್ಲಿ ಯಾತನೆಯನ್ನು ಅನುಭವಿಸಿ ಶಿಲುಬೆಗೇರಿಸಲ್ಪಟ್ಟು ಮೃತರಾಗಿ ಸಮಾಧಿ ಮಾಡಲ್ಪಟ್ಟರು.
ಪಾತಾಳಕ್ಕೆ ಇಳಿದು ಮೂರನೆಯ ದಿನ ಮೃತರ ಮಧ್ಯದಿಂದ ಪುನರ್ಜೀವಂತರಾಗಿ ಎದ್ದರು.
ಸ್ವರ್ಗಕ್ಕೇರಿ ಸರ್ವಶಕ್ತ ದೇವಪಿತನ ಬಲಗಡೆಯಲ್ಲಿ ಆಸೀನರಾಗಿದ್ದಾರೆ.
ಅಲ್ಲಿಂದ ಜೀವಂತರಿಗೂ ಮೃತರಿಗೂ ತೀರ್ಪು ಕೊಡಲು ಬರುವರು.
ಪವಿತ್ರಾತ್ಮರನ್ನು ವಿಶ್ವಾಸಿಸುತ್ತೇನೆ.
ಪವಿತ್ರ ಕಥೋಲಿಕ ಧರ್ಮಸಭೆಯನ್ನು ವಿಶ್ವಾಸಿಸುತ್ತೇನೆ.
ಸಂತರ ಅನ್ಯೋನ್ಯತೆಯನ್ನು ವಿಶ್ವಾಸಿಸುತ್ತೇನೆ.
ಪಾಪ ಪರಿಹಾರವನ್ನು ವಿಶ್ವಾಸಿಸುತ್ತೇನೆ.
ಮೃತರ ಪುನರುತ್ಥಾನವನ್ನು ವಿಶ್ವಾಸಿಸುತ್ತೇನೆ,
ನಿತ್ಯ ಜೀವವನ್ನು ವಿಶ್ವಾಸಿಸುತ್ತೇನೆ, ಆಮೆನ್.
ದೇವರ ಹತ್ತು ಆಜ್ಞೆಗಳು
1. ನಿಜವಾದ ಏಕ ದೇವರನ್ನು ಆರಾಧಿಸು.
2. ದೇವರ ನಾಮವನ್ನು ವ್ಯರ್ಥವಾಗಿ ಉಚ್ಚರಿಸಬೇಡ.
3. ದೇವರ ದಿನವನ್ನು ಪವಿತ್ರವಾಗಿ ಆಚರಿಸು
4. ನಿನ್ನ ತಂದೆ ತಾಯಿಯರನ್ನು ಗೌರವಿಸು.
5. ಕೊಲೆ ಮಾಡಬೇಡ.
6. ವ್ಯಭಿಚಾರ ಮಾಡಬೇಡ.
7. ಕದಿಯಬೇಡ.
8. ಸುಳ್ಳು ಸಾಕ್ಷಿ ಹೇಳಬೇಡ.
9. ವ್ಯಭಿಚಾರಕ್ಕೆ ಆಸೆ ಪಡಬೇಡ.
10. ಪರರ ವಸ್ತುಗಳಿಗೆ ಆಸೆ ಪಡಬೇಡ.
ಈ ಹತ್ತು ಆಜ್ಞೆಗಳು ಎರಡು ಮುಖ್ಯ ಆಜ್ಞೆಗಳಲ್ಲಿ ಅಡಗಿವೆ:
1. ಎಲ್ಲಕ್ಕಿಂತ ಹೆಚ್ಚಾಗಿ ದೇವರನ್ನು ಪ್ರೀತಿಸು.
2. ನಿನ್ನಂತೆಯೇ ಪರರನ್ನು ಪ್ರೀತಿಸು.
ಧರ್ಮಸಭೆಯ ಆರು ಕಟ್ಟಳೆಗಳು
2. ವರ್ಷಕ್ಕೆ ಒಮ್ಮೆಯಾದರೂ ಪಾಪ ನಿವೇದನೆ ಮಾಡು.
3. ಪಾಸ್ಖ ಕಾಲದಲ್ಲಿ ಪರಮ ಪ್ರಸಾದವನ್ನು ಸ್ವೀಕರಿಸು.
4. ಉಪವಾಸ ಮತ್ತು ಮಾಂಸ ನಿರೋಧನೆಯ ದಿನಗಳನ್ನು ಆಚರಿಸು.
5. ವಿಘ್ನವಿರುವಾಗ ಮದುವೆಯಾಗಬೇಡ.
6. ಧರ್ಮಸಭೆಗೆ ನಿನ್ನ ಕೈಯಲ್ಲಿ ಆದಷ್ಟು ಸಹಾಯ ಮಾಡು.

ಪಾಪನಿವೇದನೆ
1. ಶಿಲುಬೆಯ ಗುರುತು
2. (ಗುರುಗಳ ಬಳಿಗೆ ಹೋಗಿ) ಸ್ವಾಮಿ, ನಾನು ಪಾಪಿ. ನನಗೆ ನಿಮ್ಮ ಆಶೀರ್ವಾದವನ್ನು ದಯಪಾಲಿಸಿರಿ. ನಾನು ಪಾಪನಿವೇದನೆ ಮಾಡಿ _____ ದಿನವಾಯಿತು. ಕೊಟ್ಟ ಪ್ರಾಯಶ್ಚಿತ್ತವನ್ನು ತೀರಿಸಿದ್ದೇನೆ. (‘ತೀರಿಸಲಿಲ್ಲ’)
3. ಪಾಪಗಳನ್ನು ಹೇಳುವುದು
4. (ಪಾಪಗಳನ್ನು ಹೇಳಿದ ಬಳಿಕ) ಸ್ವಾಮಿ, ನನ್ನ ಜ್ಞಾಪಕಕ್ಕೆ ಬಂದ ಪಾಪಗಳನ್ನು ಹೇಳಿದ್ದೇನೆ. ಈ ಪಾಪಗಳಿಗಾಗಿಯೂ, ಮರೆತುಹೋದ ಪಾಪಗಳಿಗಾಗಿಯೂ ಕ್ಷಮಾಪಣೆಯನ್ನು ಬೇಡಿಕೊಳ್ಳುತ್ತೇನೆ.
=======
ಸಂತ ಇಗ್ನಾಸಿಯವರ ಆತ್ಮಾವಲೋಕನ ಕ್ರಮದ ಐದು ಹಂತಗಳು
2. ವಿನಂತಿ: ದಿನದ ಎಲ್ಲಾ ಆಗು-ಹೋಗುಗಳನ್ನು ಮತ್ತು ಅನುಭವಗಳನ್ನು ದೇವರ ದೃಷ್ಟಿಯಿಂದ ನೋಡಲು ಪವಿತ್ರಾತ್ಮರ ಪ್ರೇರಣೆಗಾಗಿ ದೇವರ ಕೃಪೆಯನ್ನು ವಿನಂತಿಸುವುದು.
3. ವಿಮರ್ಶೆ: ದಿನದಲ್ಲಿ ನಡೆದ ಮಹತ್ವದ ಘಟನೆಗಳನ್ನು ಸ್ಮರಿಸಿ, ಆ ಗಳಿಗೆಗಳಲ್ಲಿ ನನ್ನ ಆಲೋಚನೆ, ಭಾವನೆ, ನುಡಿ ಮತ್ತು ಕ್ರಿಯೆಗಳು ದೇವರ ಇಚ್ಛೆಯ ಪ್ರಕಾರ ನಡೆದಿವೆಯೇ ಎಂದು ವಿಮರ್ಶಿಸುವುದು.
4. ವಿಷಾದ: ಮಾಡಿದಂತಹ ಎಲಾ ತಪ್ಪುಗಳಿಗೆ/ಪಾಪಗಳಿಗೆ ವಿಷಾದಿಸಿ, ದೇವರಿಂದ ಹಾಗೂ ಇತರರಿಂದ ಕ್ಷಮೆ ಯಾಚಿಸುವುದು.
5. ವಿವೇಚನೆ: ದಿನದ ಅನುಭವಗಳಿ0ದ ಮತ್ತು ತಪ್ಪುಗಳಿಂದ ಪಾಠ ಕಲಿತು, ದೇವರ ಅನುಗ್ರಹದಿಂದ ಮು0ದಿನ ದಿನ ಮತ್ತಷ್ಟು ಉತ್ತಮ ರೀತಿಯಲ್ಲಿ ಜೀವಿಸಲು ವಿವೇಚಿಸುವುದು / ನಿರ್ಧರಿಸುವುದು.
ವೈಯಕ್ತಿಕ ಪ್ರಾರ್ಥನೆಯೊಂದಿಗೆ ಕೊನೆಗೊಳಿಸುವುದು.
------------------------------
















Dear admin,
ReplyDeleteKindly look into the Apostolic creed. One line is missing after ಅವರ ಏಕಮಾತ್ರ ಪುತ್ರರೂ ನಮ್ಮ ಪ್ರಭುವೂ ಆದ ಯೇಸುಕ್ರಿಸ್ತರನ್ನು ವಿಶ್ವಾಸಿಸುತ್ತೇನೆ.
please add ಇವರು ಪವಿತ್ರಾತ್ಮರಿಂದ ಗರ್ಭಧರಿಸಿದ ಕನ್ಯಾಮರಿಯಮ್ಮನವರಲ್ಲಿ ಜನಿಸಿದರು.
It is known as ಪ್ರೇಷಿತರ ವಿಶ್ವಾಸ ಸಂಗ್ರಹ not as ತಪಸ್ಸುಕಾಲದ ವಿಶ್ವಾಸ ಪ್ರಕಟನೆ.
Kindly make necessary changes.
Thank you.
Correction Addressed. Thank you
Delete