Saturday, 18 May 2019

22 ಮೇ 2019

ಬಿಳಿ /  ಬುಧ /  ಪಾಸ್ಖ ಕಾಲದಐದನೇ ವಾರ  
ಐಚ್ಛಿಕ  ಸ್ಮರಣೆ  -  ಕಾಸ್ಸಿಯಾದ  ಸಂತ   ರೀತಮ್ಮ  ಧಾರ್ಮಿ.                     
1ವಾಚನಪ್ರೇ.ಕಾ151-6  
1 : ಜುದೇಯದಿಂದ ಕೆಲವು ಜನರು ಅಂತಿಯೋಕ್ಯಕ್ಕೆ ಬಂದು ಅಲ್ಲಿನ ಭಕ್ತವಿಶ್ವಾಸಿಗಳಿಗೆ, “ಮೋಶೆಯ ನಿಯಮದಂತೆ ನೀವು ಸುನ್ನತಿ ಮಾಡಿಸಿಕೊಂಡ ಹೊರತು ಜೀವೋದ್ಧಾರ ಪಡೆಯಲಾರಿರಿ,” ಎಂದು ಬೋಧಿಸತೊಡಗಿದರು.
2 : ವಿಷಯವಾಗಿ ಅವರಿಗೂ ಪೌಲ ಮತ್ತು ಬಾರ್ನಬರಿಗೂ ಭಿನ್ನಾಭಿಪ್ರಾಯ ಉಂಟಾಗಿ ತೀವ್ರ ವಿವಾದವೆದ್ದಿತು. ಆದುದರಿಂದ ಸಮಸ್ಯೆಯ ಬಗ್ಗೆ ಪೌಲ ಮತ್ತು ಬಾರ್ನಬರು ಅಂತಿಯೋಕ್ಯದ ಇನ್ನೂ ಕೆಲವರ ಸಮೇತ ಜೆರುಸಲೇಮಿಗೆ ಹೋಗಿ ಪ್ರೇಷಿತರನ್ನೂ ಪ್ರಮುಖರನ್ನೂ ಕಾಣಬೇಕೆಂದು ತೀರ್ಮಾನಿಸಲಾಯಿತು.
3 : ಅಂತೆಯೇ ಕ್ರೈಸ್ತಸಭೆ ಅವರನ್ನು ಬೀಳ್ಕೊಟ್ಟಿತು. ಅವರು ಫೆನಿಷ್ಯ ಹಾಗೂ ಸಮಾರಿಯದ ಮಾರ್ಗವಾಗಿ ಪ್ರಯಾಣಮಾಡುತ್ತಾ ಅಲ್ಲಿಯ ಭಕ್ತವಿಶ್ವಾಗಳಿಗೆ ಅನ್ಯಧರ್ಮೀಯರು ಹೇಗೆ ಕ್ರೈಸ್ತರಾದರೆಂಬುದನ್ನು ವಿವರಿಸಿದರು. ಇದನ್ನು ಕೇಳಿದ ಭಕ್ತಾದಿಗಳು ಸಂತೋಷಭರಿತರಾದರು.
4 : ಪೌಲ, ಬಾರ್ನಬ ಮತ್ತು ಸಂಗಡಿಗರು ಜೆರುಸಲೇಮಿಗೆ ಆಗಮಿಸಿದಾಗ, ಅಲ್ಲಿಯ ಕ್ರೈಸ್ತಸಭೆ ಪ್ರೇಷಿತರ ಹಾಗೂ ಪ್ರಮುಖರ ಸಮೇತ ಅವರನ್ನು ಸ್ವಾಗತಿಸಿತು. ಆಗ ಅವರು, ದೇವರು ತಮ್ಮೊಡನೆ ಇದ್ದು, ಸಾಧಿಸಿದ ಎಲ್ಲಾ ಕಾರ್ಯಗಳನ್ನು ವರದಿ ಮಾಡಿದರು.
5 ಫರಿಸಾಯ ಪಂಥಕ್ಕೆ ಸೇರಿದ ಕೆಲವು ಭಕ್ತರು ಮಾತ್ರ ಎದ್ದುನಿಂತು, ಅನ್ಯಧರ್ಮೀಯರು ಸುನ್ನತಿಮಾಡಿಸಿಕೊಳ್ಳಲೇಬೇಕು, ಅವರು ಮೋಶೆಯ ನಿಯಮಗಳನ್ನು ಅನುಸರಿಸುವಂತೆ ಆಜ್ಞೆ ಮಾಡಲೇಬೇಕು,” ಎಂದರು.
6 : ಸಮಸ್ಯೆಯನ್ನು ಪರಿಶೀಲಿಸಲು ಪ್ರೇಷಿತರು ಮತ್ತು ಸಭಾಪ್ರಮುಖರು ಸಭೆ ಸೇರಿದರು.
ಕೀರ್ತನೆ  -  1221-5  
ಪ್ರಭುವಿನಾಲಯಕೆ ಹೋಗೋಣ ಬಾ ಎಂದಾಗ / ಆಯಿತೆನಗೆ ಆನಂದಜನರೆನ್ನ ಕರೆದಾಗ  
1 : ಪ್ರಭುವಿನಾಲಯಕೆ ಹೋಗೋಣ ಬಾ ಎಂದಾಗ / ಆಯಿತೆನಗೆ ಆನಂದಜನರೆನ್ನ ಕರೆದಾಗ
2 : ನಮ್ಮ ಕಾಲುಗಳು  ಜೆರುಸಲೇಮೇ / ತಲುಪಿವೆ ನಿನ್ನ ಪುರದ್ವಾರಗಳನೇ
3 : ನೋಡುಜೆರುಸಲೇಮ್ ಪಟ್ಟಣವಿದು / ಗಟ್ಟಿಯಾಗಿಯೆ ಕಟ್ಟಲ್ಪಟ್ಟಿಹುದು
4 : ಕುಲಗಳು ಯಾತ್ರೆಯಾಗಿ ಬರುವುವು ಇಲ್ಲಿಗೆ / ಮಾಡುವರಿಲ್ಲಿಯೆ ಪ್ರಭುವಿನ ನಾಮ ಕೀರ್ತನೆ / 
ಪಾಲಿಪರಿಂತು ಇಸ್ರೇಲರಿಗೆ ವಿಧಿಸಿದಾಜ್ಞೆ
5 : ಸ್ಥಾಪಿತವಾಗಿವೆಯಿಲ್ಲಿ ನ್ಯಾಯಪೀಠಗಳು / ದಾವೀದನ ಮನೆತನದವರ ಸಿಂಹಾಸನಗಳು
ಶುಭಸಂದೇಶ  -  ಯೊವಾನ್ನ  151-8  
1 : “ನಾನೇ ನಿಜವಾದ ದ್ರಾಕ್ಷಾಬಳ್ಳಿನನ್ನ ಪಿತನೇ ತೋಟಗಾರ.
2: ನನ್ನಲ್ಲಿದ್ದೂ ಫಲಕೊಡದ ಕವಲುಬಳ್ಳಿಗಳನ್ನೆಲ್ಲಾ ಅವರು ಕತ್ತರಿಸಿಹಾಕುವರುಫಲಕೊಡುವ ಕವಲುಬಳ್ಳಿಗಳು ಮತ್ತಷ್ಟು ಫಲಕೊಡುವಂತೆ ಅವನ್ನು ಸವರಿ ಶುದ್ಧಗೊಳಿಸುವರು.
3 : ನೀವಾದರೋನಾನು ನಿಮ್ಮೊಡನೆ ಆಡಿದ ಮಾತಿನಿಂದಾಗಿ ಸವರಿದ ಕವಲುಗಳಂತೆ ಶುದ್ಧರಾಗಿದ್ದೀರಿ.
4: ನೀವು ನನ್ನಲ್ಲಿ ನೆಲೆಗೊಂಡಿರಿಆಗ ನಾನು ನಿಮ್ಮಲ್ಲಿ ನೆಲೆಗೊಂಡಿರುವೆನುಕವಲು ಮೂಲಬಳ್ಳಿಯಲ್ಲಿ ಒಂದಾಗಿ ನೆಲಸದಿದ್ದರೆ ತನ್ನಷ್ಟಕ್ಕೆ ತಾನೇ ಫಲಕೊಡಲಾಗದುಹಾಗೆಯೇ ನೀವೂ ಕೂಡ ನನ್ನಲ್ಲಿ ಒಂದಾಗಿ ನೆಲಸದಿದ್ದರೆ ಫಲಕೊಡಲಾರಿರಿ.
5 :“ಹೌದುನಾನೇ ದ್ರಾಕ್ಷಾಬಳ್ಳಿನೀವೇ ಅದರ ಕವಲುಬಳ್ಳಿಗಳುಒಬ್ಬನು ನನ್ನಲ್ಲಿಯೂ ನಾನು ಅವನಲ್ಲಿಯೂ 
ನೆಲೆಗೊಂಡಿದ್ದರೆ ಅಂಥವನು ಸಮೃದ್ಧಿಯಾಗಿ ಫಲಕೊಡುವನುಏಕೆಂದರೆನನ್ನಿಂದ ಬೇರ್ಪಟ್ಟು ನಿಮ್ಮಿಂದ ಏನೂ ಮಾಡಲಾಗದು.
6 : ನನ್ನಲ್ಲಿ ನೆಲಸದವನನ್ನು ಕವಲುಬಳ್ಳಿಯಂತೆ ಕತ್ತರಿಸಿ ಎಸೆಯಲಾಗುವುದುಅವನು ಒಣಗಿಹೋಗುವನು
ಒಣಗಿದ ಕವಲುಗಳನ್ನು ಒಟ್ಟುಗೂಡಿಸಿ ಬೆಂಕಿಯಲ್ಲಿ ಸುಟ್ಟು ಹಾಕಲಾಗುವುದು.
7 :“ನೀವು ನನ್ನಲ್ಲಿಯೂ ನನ್ನ ವಾಕ್ಯವು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ನೀವು ಏನು ಬೇಕಾದರೂ ಕೇಳಬಹುದು
ನಿಮಗದು ಸಿಗುವುದು.
8 : ನೀವು ಸಮೃದ್ಧಿಯಾಗಿ ಫಲಕೊಟ್ಟು ನನ್ನ ಶಿಷ್ಯರಾಗಿ ಬೆಳಗುವುದರಿಂದಲೇ ನನ್ನ ಪಿತನ ಮಹಿಮೆ ಪ್ರಕಟವಾಗುವುದು.                                                   
ಚಿಂತನೆ    
ರೈತ ಬೀಜ ಬಿತ್ತಿ, ಸಸಿ ಬೆಳೆದು ಫಲ ಬರುವ ಸಮಯದಲ್ಲಿ ತುದಿಗಾಲಲ್ಲಿ ನಿಂತು ಅದನ್ನು ನೋಡಲು ಆತುರನಾಗಿರುತ್ತಾನೆ. ಇದೇ ರೀತಿಯ ಮನಸ್ಸು ನಮ್ಮ ಪ್ರಭುವಿನದು. ಅವರು ಕೂಡ ತಮ್ಮ ಶಿಷ್ಯರಿಗೆ ಅನೇಕ ಬೋಧನೆಗಳ ಮೂಲಕ ಅವರನ್ನು ತಯಾರಿ ಮಾಡಿ ಫಲದ ಅಪೇಕ್ಷೆಯಲ್ಲಿದ್ದಾರೆ. ಅದನ್ನು ತಿಳಿಸಲು ಅವರು ಇಂದಿನ ಶುಭಸಂದೇಶದಲ್ಲಿ ಕಾಣುವ ದ್ರಾಕ್ಷಾಬಳ್ಳಿಯ, ಕವಲುಬಳ್ಳಿಯ ಉದಾಹರಣೆಯನ್ನು ನೀಡುತ್ತಿದ್ದಾರೆ. ಮಾಡಿದ ಪ್ರತಿಯೊಂದು ಕೆಲಸದಲ್ಲಿ ಫಲ ಅಪೇಕ್ಷಿಸುವುದು ಪ್ರತಿಯೊಬ್ಬ ಮಾನವನ ಸಹಜ ಗುಣ. ಅದು ಸಿಗದೇ ಇದ್ದಾಗ ಬೇಸರವಾಗುವುದು ಅಷ್ಟೇ ಸಹಜ. ಪ್ರಭುವು ಇಂದು ಬೇಸರದಲ್ಲಿದ್ದಾರೆ ಎನಿಸುತ್ತದೆ. ಫಲ ಕೊಡದ ಕವಲು ಬಳ್ಳಿಗಳನ್ನು ಕತ್ತರಿಸಿ ಹಾಕುವ ಕುರಿತು ಹೇಳುತ್ತಿದ್ದಾರೆ. ಕಾರಣ ಅಷ್ಟೊಂದು ಶ್ರಮ ಮತ್ತು ನಿಗ  ವಹಿಸಿ ಮಾಡಿದ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗದೇ ಇದ್ದಾಗ ಹೀಗೆ ಆಗುತ್ತದೆ. ಬೈಬಲ್ ಶ್ರೀ ಗ್ರಂಥದಲ್ಲಿ ಇನ್ನೊಂದು ಸಾಮತಿಯನ್ನು ನಾವು ಕಾಣುತ್ತೇವೆ: ಫಲ  ಕೊಡದ ಅಂಜೂರ ಮರದ ಸಾಮತಿ. ಪ್ರಭು ಫಲ ಕೊಡದ ಪ್ರತಿಯೊಂದನ್ನು ತನ್ನಿಂದ ದೂರ ಮಾಡುತ್ತಾರೆ. ಪ್ರಭು ನಮ್ಮನ್ನು ದೂರ ಮಾಡದಿರಲಿ. ಅವರು ನಿರೀಕ್ಷಿಸುವ ಫಲ ನಮ್ಮಿಂದ ಅವರಿಗೆ ದೊರಕಲಿ.
ಆತ್ಮಾವಲೋಕನ-
1.  ನಾನು ಫಲಕೊಡುವ ಕವಲುಬಳ್ಳಿಯೇ?       
2. ನನ್ನನ್ನು ಪ್ರಭು ಕತ್ತರಿಸಿ ಹಾಕುವರೇ? ಅಥವಾ ಸವರಿ ಶುದ್ಧ ಮಾಡುವರೇ?  
    
- ಸಹೋ ವಿನಯ್ ಕುಮಾರ್                                                 

No comments:

Post a Comment