ಬಿಳಿ
/ ಭಾನು
/ ಪ್ರಭುವಿ
ಸ್ವರ್ಗಾರೋಹಣ
ಮಹೋತ್ಸವ(3)
1ನೇ
ವಾಚನ
- ಪ್ರೇ.ಕಾ:
1:
1-11
ಕೀರ್ತನೆ
- 47:
1-2,
5-8
2ನೇ ವಾಚನ - ಹಿಬ್ರಿ 9: 24-28, 1೦:19-23 ಅಥವಾ ಎಫೆ 1: 17-23
ಶುಭಸಂದೇಶ
- ಲೂಕ
24:
46-53
ಸಂತ
ಮಾರ್ಸೆಲೀನಸ್
ಮತ್ತು
ಪೀಟರ್
(ರ.ಸಾ)
ಸ್ಮರಣೆ
ಇರುವುದಿಲ್ಲ.
1ನೇ
ವಾಚನ
- ಪ್ರೇ.ಕಾ:
1:
1-11
1 : ಸನ್ಮಾನ್ಯ ಥೆಯೊಫಿಲನೇ, ಯೇಸುಸ್ವಾಮಿ ಸ್ವರ್ಗಕ್ಕೆ
ಆರೋಹಣವಾದ ದಿನದವರೆಗೆ ಮಾಡಿದ ಕಾರ್ಯಗಳನ್ನೂ ನೀಡಿದ ಬೋಧನೆಗಳನ್ನೂ ಕುರಿತು ನನ್ನ ಮೊದಲನೆಯ ಪುಸ್ತಕದಲ್ಲಿ
ಬರೆದಿದ್ದೇನೆ.
2 : ಸ್ವರ್ಗಾರೋಹಣಕ್ಕೆ ಮೊದಲು ಪ್ರೇಷಿತರನ್ನಾಗಿ
ತಾವು ಆರಿಸಿಕೊಂಡಿದ್ದವರಿಗೆ ಪವಿತ್ರಾತ್ಮ ಅವರ ಮುಖಾಂತರ ಉಪದೇಶ ಮಾಡಿದರು.
3 : ತಮ್ಮ ಮರಣದ ನಂತರ ಅವರು ನಲವತ್ತು ದಿನಗಳವರೆಗೆ
ಆ ಪ್ರೇಷಿತರಿಗೆ ಪ್ರತ್ಯಕ್ಷರಾದರು. ತಾವು ಜೀವಂತವಾಗಿರುವುದನ್ನು ವಿವಿಧ ರೀತಿಯಲ್ಲಿ ಸ್ಪಷ್ಟಪಡಿಸಿದರು.
ದೇವರ ಸಾಮ್ರಾಜ್ಯವನ್ನು ಕುರಿತು ಅವರಿಗೆ ಬೋಧಿಸಿದರು.
4 : ಒಮ್ಮೆ ಅವರೆಲ್ಲರೂ ಒಂದುಗೂಡಿದ್ದ ಸಂದರ್ಭದಲ್ಲಿ,
“ನೀವು ಜೆರುಸಲೇಮನ್ನು ಬಿಟ್ಟು ಹೋಗಬೇಡಿ; ನಾನು ನಿಮಗೆ ತಿಳಿಸಿದಂತೆ ನನ್ನ ಪಿತನು ವಾಗ್ದಾನ ಮಾಡಿರುವ
ವರಕ್ಕಾಗಿ ಕಾದುಕೊಂಡಿರಿ.
5 : ಏಕೆಂದರೆ, ಯೊವಾನ್ನನು ನೀರಿನಿಂದ ಸ್ನಾನದೀಕ್ಷೆ
ಕೊಡುತ್ತಿದ್ದನು; ಆದರೆ ಇನ್ನು ಕೆಲವೇ ದಿನಗಳಲ್ಲಿ ನೀವು ಪವಿತ್ರಾತ್ಮ ಅವರಿಂದ ದೀಕ್ಷಾಸ್ನಾನ ಪಡೆಯುವಿರಿ,”
ಎಂದು ಆಜ್ಞಾಪಿಸಿದರು.
6 : ಯೇಸುಸ್ವಾಮಿಯ ಸ್ವರ್ಗಾರೋಹಣ ಮತ್ತೊಮ್ಮೆ ಯೇಸುಸ್ವಾಮಿ
ತಮ್ಮೊಡನೆ ಇದ್ದಾಗ ಪ್ರೇಷಿತರು, “ಪ್ರಭೂ, ನೀವು ಇದೀಗಲೇ ಇಸ್ರಯೇಲ್ ಜನರ ರಾಜ್ಯವನ್ನು ಪುನರ್ ಸ್ಥಾಪಿಸುವಿರೋ?”
ಎಂದು ಕೇಳಿದರು.
7 : ಯೇಸು ಪ್ರತ್ಯುತ್ತರವಾಗಿ, “ಸಮಯ ಸಂದರ್ಭಗಳು
ನನ್ನ ಪಿತನ ಸ್ವಾಧೀನದಲ್ಲಿವೆ. ಅವುಗಳನ್ನು ತಿಳಿಯುವುದು ನಿಮ್ಮ ಕೆಲಸವಲ್ಲ.
8 : ಆದರೆ ಪವಿತ್ರಾತ್ಮ ಅವರು ನಿಮ್ಮ ಮೇಲೆ ಬಂದಾಗ
ನೀವು ಶಕ್ತಿಯುತರಾಗುವಿರಿ. ಆಗ ನೀವು ಜೆರುಸಲೇಮಿನಲ್ಲೂ ಜುದೇಯದಲ್ಲೂ ಸಮಾರಿಯದಲ್ಲೂ ಭೂಲೋಕದ ಕಟ್ಟಕಡೆಯವರೆಗೂ
ನನಗೆ ಸಾಕ್ಷಿಗಳಾಗುವಿರಿ,” ಎಂದರು.
9 : ಇದನ್ನು ಹೇಳಿದ ಮೇಲೆ ಪ್ರೇಷಿತರು ನೋಡುತ್ತಿದ್ದಂತೆಯೇ,
ಯೇಸು ಸ್ವರ್ಗಾರೋಹಣವಾದರು. ಮೇಘವೊಂದು ಕವಿದು ಅವರನ್ನು ಕಣ್ಮರೆಮಾಡಿತು.
10 : ಹೀಗೆ ಮೇಲೇರುತ್ತಿದ್ದ ಯೇಸುಸ್ವಾಮಿಯನ್ನು
ನೋಡುತ್ತಿದ್ದ ಪ್ರೇಷಿತರ ದೃಷ್ಟಿ ಇನ್ನೂ ಆಕಾಶದತ್ತ ನಾಟಿತ್ತು. ಆಗ ಬಿಳಿಯ ವಸ್ತ್ರ ಧರಿಸಿದ್ದ ವ್ಯಕ್ತಿಗಳಿಬ್ಬರು
ಇದ್ದಕ್ಕಿದ್ದಂತೆ ಅವರ ಪಕ್ಕದಲ್ಲಿ ನಿಂತರು.
11 : “ಗಲಿಲೇಯದ ಜನರೇ, ನೀವು ಆಕಾಶವನ್ನು ದಿಟ್ಟಿಸಿ
ನೋಡುತ್ತಾ ನಿಂತಿರುವುದೇಕೆ? ಸ್ವರ್ಗಾರೋಹಣರಾದ ಈ ಯೇಸು ನಿಮ್ಮ ಬಳಿಯಿಂದ ಹೇಗೆ ಸ್ವರ್ಗಕ್ಕೆ ಏರಿ
ಹೋಗುವುದನ್ನು ಕಂಡಿರೋ ಹಾಗೆಯೇ ಅವರು ಹಿಂದಿರುಗಿ ಬರುವರು,” ಎಂದು ಹೇಳಿದರು.
ಕೀರ್ತನೆ
- 47:
1-2,
5-8
5 : ಏರಿದನು ಪ್ರಭು ಜಯಜಯಕಾರದೊಂದಿಗೆ | ಆರೋಹಣವಾದನು ತುತೂರಿನಾದ ಜೊತೆಗೆ ||
1 : ಸರ್ವಸ್ತುತಿಗೆ ಪಾತ್ರ, ಪ್ರಭುವು ಪರಮೋನ್ನತ / ದೇವನಗರದಲಿ ಆತನ ಪವಿತ್ರ ಪರ್ವತ //
2 : ಪರಾತ್ಪರನಾದ ಪ್ರಭುವು ಘನಗಂಭೀರನು | ಪ್ರಪಂಚಕ್ಕೆಲ್ಲ ರಾಜಾಧಿರಾಜನು ||
3 : ಜನಾಂಗಗಳನಾತ ನಮಗಧೀನಪಡಿಸಿಹನು | ರಾಷ್ಟ್ರಗಳನು ನಮಗೆ ಪಾದಪೀಠವಾಗಿಸಿಹನು ||
4 : ಆಯ್ದನಾಡನು ಸೊತ್ತಾಗಿ ನೀಡಿದನೆಮಗೆ | ಪ್ರತಿಷ್ಠಿತರು ನಾವು, ಆತನೊಲಿದ ಯಕೋಬಿಗೆ ||
5 : ಏರಿದನು ಪ್ರಭು ಜಯಜಯಕಾರದೊಂದಿಗೆ | ಆರೋಹಣವಾದನು ತುತೂರಿನಾದ ಜೊತೆಗೆ ||
6 : ಕೀರ್ತಿಸಿರಿ, ನಮ್ಮ ದೇವನನು ಸಂಕೀರ್ತಿಸಿರಿ | ಕೀರ್ತಿಸಿರಿ, ನಮ್ಮ ರಾಜನನು ಸಂಕೀರ್ತಿಸಿರಿ ||
7 : ದೇವನು ಭೂಮಂಡಲಕ್ಕೆಲ್ಲಾ ಒಡೆಯನು | ಕೀರ್ತನೆಯಿಂದ ಕೊಂಡಾಡಿರಿ ಆತನನು ||
8 : ಕಿವಿಯಾರೆ ಕೇಳಿದಂತೆಯೆ ಕಣ್ಣಾರೆ ಕಂಡೆವು / ಸರ್ವಶಕ್ತ ಪ್ರಭುವನು ದೇವನಗರದಲಿ ಕಂಡೆವು //
9 : ನಿನ್ನಚಲ ಪ್ರೀತಿಯನು ದೇವಾ, ಸ್ಮರಿಸುವೆವು / ನಿನ್ನ ಮಹದಾಲಯದೊಳು ಅದನು ಧ್ಯಾನಿಸುವೆವು //
2ನೇ ವಾಚನ - ಹಿಬ್ರಿ 9: 24-28, 1೦:19-23 ಅಥವಾ ಎಫೆ 1: 17-23
17 : ನಮ್ಮ ಪ್ರಭು ಯೇಸುಕ್ರಿಸ್ತರ ದೇವರೂ ಮಹಿಮಾನ್ವಿತ
ತಂದೆಯೂ ಆದವರು, ನಿಮಗೆ ಜ್ಞಾನವನ್ನೂ ವಿವೇಚನೆಯನ್ನೂ ನೀಡುವ ಆತ್ಮವನ್ನು ದಯಪಾಲಿಸಲಿ; ತಮ್ಮನ್ನು
ಸಂಪೂರ್ಣವಾಗಿ ಅರಿತುಕೊಳ್ಳುವ ವರವನ್ನು ಈಯಲಿ, ಎಂದು ಪ್ರಾರ್ಥಿಸುತ್ತೇನೆ.
18 : ದೇವರು ನಿಮ್ಮ ಮನೋನೇತ್ರಗಳನ್ನು ತೆರೆಯಲಿ;
ಅವರ ಬೆಳಕು ನಿಮಗೆ ಕಾಣುವಂತೆ ಆಗಲಿ. ಹೀಗೆ, ಅವರು ಕರೆದಿರುವ ಜನರಿಗೆ ಲಭಿಸುವ ಭರವಸೆಯ ಭಾಗ್ಯ ಎಂಥದ್ದೆಂದೂ
ದೇವಜನರಿಗೆ ಕಾಯ್ದಿರಿಸಿರುವ ಸ್ವಾಸ್ಥ್ಯ ಸಂಪತ್ತು ಎಂಥದ್ದೆಂದೂ ನೀವು ಅರಿತುಕೊಳ್ಳಬೇಕು.
19 : ಕ್ರೈಸ್ತವಿಶ್ವಾಸಿಗಳಾದ ನಮ್ಮಲ್ಲಿ ದೇವರು
ಸಾಧಿಸಿರುವ ಮಹತ್ಕಾರ್ಯಗಳು ಎಷ್ಟು ಶಕ್ತಿಯುತವಾದುವು ಎಂಬುದು ನಿಮಗೆ ಮನದಟ್ಟಾಗಬೇಕು.
20 : ಈ ಮಹಿಮಾಶಕ್ತಿಯಿಂದಲೇ ದೇವರು ಯೇಸುಕ್ರಿಸ್ತರನ್ನು
ಮರಣದಿಂದ ಎಬ್ಬಿಸಿದರು; ಸಕಲ ಅಧಿಕಾರ, ಆಧಿಪತ್ಯ, ಪ್ರಭಾವ ಮತ್ತು ಪ್ರಭುತ್ವ ಇವೆಲ್ಲವುಗಳ ಮೇಲೆ ಯೇಸುಕ್ರಿಸ್ತರೇ
ಆಡಳಿತ ನಡೆಸುವಂತೆ ಸ್ವರ್ಗಲೋಕದಲ್ಲಿ ಅವರನ್ನು ತಮ್ಮ ಬಲಗಡೆಯಲ್ಲಿ ಆಸೀನರಾಗಿಸಿದ್ದಾರೆ.
21 : ಹೀಗೆ ಇಹದಲ್ಲೂ ಪರದಲ್ಲೂ ಕೀರ್ತಿಗಳಿಸಿದವರೆಲ್ಲರಿಗಿಂತಲೂ
ಯೇಸುಕ್ರಿಸ್ತರ ಮಹಿಮೆಯೇ ಸರ್ವಶ್ರೇಷ್ಠವಾದುದು.
22 : ದೇವರು ಸಮಸ್ತವನ್ನು ಯೇಸುಕ್ರಿಸ್ತರ ಪಾದದಡಿಯಲ್ಲಿರಿಸಿ,
ಅವರನ್ನು ಧರ್ಮಸಭೆಯ ಶಿರಸ್ಸನ್ನಾಗಿ ನೇಮಿಸಿದ್ದಾರೆ.
23 : ಧರ್ಮಸಭೆಯೇ ಯೇಸುಕ್ರಿಸ್ತರ ದೇಹ. ಎಲ್ಲವನ್ನೂ
ಎಲ್ಲಾ ವಿಧದಲ್ಲೂ ಪೂರೈಸುವಾತನಿಂದ ಅದು ಪರಿಪೂರ್ಣ ಉಳ್ಳದ್ದಾಗಿದೆ.
ಶುಭಸಂದೇಶ
- ಲೂಕ
24:
46-53
46 : ಅನಂತರ, “ಮೊದಲೇ ಬರೆದಿರುವ ಪ್ರಕಾರ ಕ್ರಿಸ್ತನು
ಯಾತನೆಯನ್ನು ಅನುಭವಿಸಿ ಸತ್ತು ಮೂರನೆಯ ದಿನ ಪುನರುತ್ಥಾನ ಹೊಂದಬೇಕಾಗಿತ್ತು;
47 : ಅಲ್ಲದೆ ಜನರು ಪಾಪಪರಿಹಾರ ಪಡೆಯಬೇಕಾದರೆ,
ಪಶ್ಚಾತ್ತಾಪಪಟ್ಟು, ಪಾಪಕ್ಕೆ ವಿಮುಖರಾಗಿ, ದೈವಾಭಿಮುಖಿಗಳಾಗಬೇಕೆಂತಲೂ ಈ ಸಂದೇಶವನ್ನು ಜೆರುಸಲೇಮಿನಿಂದ
ಮೊದಲ್ಗೊಂಡು ಎಲ್ಲಾ ಜನಾಂಗಗಳಿಗೂ ಆತನ ಹೆಸರಿನಲ್ಲೇ ಪ್ರಕಟಿಸಬೇಕೆಂತಲೂ ಮೊದಲೇ ಲಿಖಿತವಾಗಿತ್ತು.
48 : ಇದಕ್ಕೆಲ್ಲಾ ನೀವೇ ಸಾಕ್ಷಿಗಳು.
49 : ನನ್ನ ಪಿತ ವಾಗ್ದಾನ ಮಾಡಿದ ವ್ಯಕ್ತಿಯನ್ನು
ನಾನೇ ನಿಮಗೆ ಕಳುಹಿಸಿಕೊಡುವೆನು. ಸ್ವರ್ಗದಿಂದ ಬರುವ ಶಕ್ತಿಯಿಂದ ನೀವು ಭೂಷಿತರಾಗುವ ತನಕ ಈ ಪಟ್ಟಣದಲ್ಲೇ
ಕಾದಿರಿ,” ಎಂದು ಹೇಳಿದರು.
50 : ಕಟ್ಟಕಡೆಗೆ ಯೇಸುಸ್ವಾಮಿ ಶಿಷ್ಯರನ್ನು ಬೆಥಾನಿಯ
ಎಂಬ ಊರಿನವರೆಗೆ ಕರೆದುಕೊಂಡು ಹೋದರು. ಅಲ್ಲಿ ತಮ್ಮ ಕರಗಳನ್ನೆತ್ತಿ ಆಶೀರ್ವದಿಸಿದರು.
51 : ಆಶೀರ್ವದಿಸುತ್ತಿದ್ದ ಹಾಗೆಯೇ ಅವರನ್ನು ಬೀಳ್ಕೊಟ್ಟರು.
(ಮತ್ತು ಸ್ವರ್ಗಕ್ಕೆ ಒಯ್ಯಲ್ಪಟ್ಟರು).
52 : ಶಿಷ್ಯರು (ಅವರನ್ನು ಆರಾಧಿಸಿ) ಅತ್ಯಾನಂದದಿಂದ
ಜೆರುಸಲೇಮಿಗೆ ಹಿಂದಿರುಗಿದರು.
53 : ಮಹಾದೇವಾಲಯದಲ್ಲಿ ದೇವರನ್ನು ಸತತವಾಗಿ ಸ್ತುತಿಮಾಡಿಕೊಂಡಿದ್ದರು.
ಚಿಂತನೆ
ಯೇಸುಕ್ರಿಸ್ತರ
ಮಹಿಮೆಯೇ ಸರ್ವ ಶ್ರೇಷ್ಠವಾದದ್ದು
ಪವಿತ್ರ ಧರ್ಮಸಭೆ ಇಂದು ಯೇಸು ಸ್ವರ್ಗಾರೋಹಣರಾದ
ಹಬ್ಬವನ್ನು ಕೊಂಡಾಡುತ್ತಿದೆ. ಯೇಸುವಿನ ಪುನರುತ್ಥಾನವು ಅವರಿಗೆ ತಂದೆಯಿಂದ ಕೊಡಲ್ಪಟ್ಟಿರುವ ಮಹಿಮೆಯನ್ನು
ಸಾರುತ್ತದೆ. ಮರಣದ ಮೇಲಿರುವ ಅಧಿಕಾರವನ್ನು ತೋರುತ್ತದೆ. ಯೇಸುವಿನ ಸ್ವರ್ಗಾರೋಹಣ ಯೇಸು ಲೋಕಕ್ಕೆ
ಸೇರಿದವರಲ್ಲ, ಸ್ವರ್ಗದಿಂದ ಬಂದ ದೇವರ ಪುತ್ರ ಎಂಬುವುದನ್ನು ದೃಢಪಡಿಸುತ್ತದೆ. ಮಾನವ ತನ್ನ ಪಾಪದಿಂದ
ದಿನೇ ದಿನೇ ದೂರದೂರ ಸಾಗುತ್ತಿದ್ದಾಗ ಅವನ ಮೇಲಿನ ಪ್ರೀತಿಯಿಂದ ದೇವರು ತನ್ನ ಮಗನ ಮೂಲಕ ಹೊಸ ನಿಕಟ
ಸಂಪರ್ಕವನ್ನು ಏರ್ಪಡಿಸಿದರು. ಹೀಗೆ ದೇವರಿಂದ ಬಂದ ಯೇಸು ತನ್ನ ತಂದೆಯ ಕಾರ್ಯವನ್ನು ಮುಗಿಸಿದ ಬಳಿಕ
ತನ್ನ ತಂದೆಯ ಬಳಿ ಹಿಂತಿರುಗುತ್ತಾರೆ. ಇದನ್ನೇ ನಾವು ಸ್ವರ್ಗಾರೋಹಣ ಎಂದು ಕರೆಯುತ್ತೇವೆ.
ಯೇಸುವು ನಮ್ಮನ್ನಗಲಿ ದೇವರ ಬಳಿಗೆ ಹೋಗುವುದರಿಂದ
ನಮಗೆ ಪರಮ ತ್ರಿತ್ವದ ಮೂರನೇ ವ್ಯಕ್ತಿಯನ್ನು ಕಳುಹಿಸಿಕೊಟ್ಟರು. ಅವರೇ ಪವಿತ್ರಾತ್ಮರು. ಆ ಆತ್ಮರು
ಯಾವಗಲೂ ನಮ್ಮೊಂದಿಗಿದ್ದು ನಮ್ಮನ್ನು ಕೈಹಿಡಿದು ನಡೆಸುವವರಾಗಿದ್ದಾರೆ. ಹೀಗೆ ನಾವು ಪ್ರಭುಕ್ರಿಸ್ತರ
ಶಕ್ತಿಯುತ ಸಾಕ್ಷಿಗಳಾಗಿ, ಭೂಲೋಕದ ಕಟ್ಟಕಡೆಯ ವರೆಗೆ ಶುಭಸಂದೇಶವನ್ನು ಧೈರ್ಯವಾಗಿ ಸಾರಲು ಸಾಧ್ಯ.
ಇಂದು ನಾವು ನಮ್ಮ ಬಳಿ ಇರುವ ಅಲ್ಪ ಸ್ವಲ್ಪ ವಿಶ್ವಾಸವನ್ನು ಪವಿತ್ರಾತ್ಮರಿಂದ ಬಲಗೊಳಿಸಬೇಕಾಗಿದೆ.
ಇದೇ ವಿಶ್ವಾಸವು ನಮ್ಮನ್ನು ಪ್ರಭುಕ್ರಿಸ್ತರ ಎರಡನೇ ಬರುವಿಕೆಗೆ ಧೈರ್ಯದಿಂದ ಎದುರುಗೊಳ್ಳುವಂತೆ ಸ್ಪೂರ್ತಿ
ತುಂಬುತ್ತದೆ.
(ಕೃಪೆ:
ಜೀವವಾಕ್ಯ)
No comments:
Post a Comment