Thursday, 25 July 2019

ಸಾಧಾರಣ ಕಾಲದ ಹದಿನಾರನೇ ವಾರ ಶುಕ್ರವಾರ

26/   ಬಿಳಿ/  ಶುಕ್ರ /ಸಂತ ಜೊವಾಕಿಂ ಮತ್ತು ಅನ್ನ (ಸ್ಮರಣೆ) 1ನೇ ವಾಚನ -  ಸಿರಾಖ- 44:1, 10-15
ಕೀರ್ತನೆ - 132:11, 13-14, 17-18
ಶುಭಸಂದೇಶ - ಮತ್ತಾಯ 13: 16-17

1ನೇ ವಾಚನ -  ಸಿರಾಖ- 44:1, 10-15
1 : ಪೂರ್ವಜರ ಸ್ತುತಿ ವಂದನೆ ಸಲ್ಲಿಸೋಣ ನಾವೀಗ ಪ್ರಸಿದ್ಧ ಪುರುಷರಿಗೆ ನಮ್ಮನ್ನು ಪಡೆದ ನಮ್ಮ ಕುಲದ ಮೂಲಪಿತೃಗಳಿಗೆ.
10 : ಆದರೆ ಅವರು ದಯಾಳುಗಳಾಗಿದ್ದರು ಮರೆತು ಹೋಗಲಿಲ್ಲ ಅವರ ಸತ್ಕಾರ್ಯಗಳು.
11 : ಒಳ್ಳೆಯ ಸೊತ್ತು ಸದಾ ಉಳಿಯುವುದು ಅವರ ಪೀಳಿಗೆಯಲ್ಲಿ ಅವರ ಮಕ್ಕಳು ಸ್ಥಿರವಾಗಿರುವರು ಒಡಂಬಡಿಕೆಯ ಅನುಸರಣೆಯಲ್ಲಿ.
12 : ಅವರ ಸಂತಾನ ಸ್ಥಿರವಾಗಿರುವುದು ಒಡಂಬಡಿಕೆಯ ಪಾಲನೆಯಲ್ಲಿ ಅವರ ಮಕ್ಕಳೂ ಸಹ ನೆಲೆಯಾಗಿ ನಿಲ್ಲುವರು ಅದರ ಅನ್ವೇಷಣೆಯಲ್ಲಿ.
13 : ಉಳಿಯುವುದು ಅವರ ಸಂತಾನ ಎಂದೆಂದಿಗು ಅವರ ಗೌರವ ಅಳಿಸಿಹೋಗದು.
14 : ಸಮಾಧಾನದಲ್ಲಿ ಅವರ ದೇಹಗಳಿಗೆ ಸಮಾಧಿಯಾಯಿತು ಜೀವಂತವಾಗುವುದು ಅವರ ಹೆಸರು ತಲತಲಾಂತರದವರೆಗೂ.
15 : ಕುಲದವರು ಪ್ರಸಿದ್ಧಪಡಿಸುವರು ಅವರ ಜ್ಞಾನವನು ಸಭೆಯು ಸಾರುವುದು ಅವರ ಕೀರ್ತಿಯನು.

ಕೀರ್ತನೆ - 132:11, 13-14, 17-18
11 : ದಾವೀದನಿಗೆ ಪ್ರಭು ಆಣೆಯಿಟ್ಟು ಇಂತೆಂದ: / ಆಣೆಯಿಟ್ಟು ಕೊಟ್ಟಾ ಮಾತಿಗೆ ತಪ್ಪಲಾರನಾತ: / “ನಿನ್ನ ಸಿಂಹಾಸನದಲಿ ಕೂರಿಸುವೆನು ನಿನ್ನ ತನುಜನೊಬ್ಬನನು”
13 : ಆರಿಸಿಕೊಂಡಿಹನು ಪ್ರಭು ಸಿಯೋನ್ ನಗರವನು / ಅಪೇಕ್ಷಿಸಿಹನು ತನ್ನ ನಿವಾಸಕ್ಕಾಗಿ ಅದನು
14 : “ಎಂದೆಂದಿಗು ಇದೇ ನನ್ನ ನಿವಾಸ / ಇರುವೆನಿಲ್ಲೇ, ಇದು ನನ್ನ ಅಭಿಲಾಶ
17 : ಕೋಡೊಂದು ಮೂಡುವಂತೆ ಮಾಡುವೆ ದಾವೀದನಿಗಿಲ್ಲೆ / ನಂದಾದೀಪ ಬೆಳಗುವಂತೆ ಮಾಡುವೆ ನನ್ನ ಅಭಿಷಿಕ್ತನಿಗಿಲ್ಲೆ
18 : ತೊಡಿಸುವೆನು ಅವನ ವೈರಿಗಳಿಗೆ ಲಜ್ಜಾಕವಚವನು / ಮುಡಿಸುವೆನು ಅವನಿಗಾದರೋ ಪ್ರಜ್ವಲ ಕಿರೀಟವನು” //
ಶುಭಸಂದೇಶ - ಮತ್ತಾಯ 13: 16-17
16 : "ನೀವಾದರೋ ಭಾಗ್ಯವಂತರು. ನಿಮ್ಮ ಕಣ್ಣುಗಳು ಕಾಣುತ್ತವೆ, ಕಿವಿಗಳು ಕೇಳುತ್ತವೆ.
17 : ಎಷ್ಟೋ ಪ್ರವಾದಿಗಳು ಹಾಗೂ ಸತ್ಪುರುಷರು ನೀವು ನೋಡುವುದನ್ನು ನೋಡುವುದಕ್ಕೂ, ಕೇಳುವುದನ್ನು ಕೇಳುವುದಕ್ಕೂ ಅಪೇಕ್ಷಿಸಿದರು. ಆದರೆ ಅವರು ನೋಡಲೂ ಇಲ್ಲ, ಕೇಳಲೂ ಇಲ್ಲ ಎಂಬುದು ನಿಮಗೆ ತಿಳಿದಿರಲಿ.

ಚಿಂತನೆ ( ಕೃಪೆ: ಬೈಬಲ್  ಡೈರಿ)
ಪವಿತ್ರ ಗ್ರಂಥಗಳು ಜೋವಾಕಿಂ ಮತ್ತು ಅನ್ನಳ ಬಗ್ಗೆ ಮೌನವಾಗಿದೆ. ನಮಗೆ ಯಾವ ಮಾಹಿತಿಯೂ ಅಲ್ಲಿಂದ ಸಿಗುವುದಿಲ್ಲ.  ಆದರೆ  proto evangelism of St James (ಯಕೋಬರ ಶುಸಂದೇಶ) ಅನಧಿಕೃತ ಗ್ರಂಥದಲ್ಲಿ ಮಾಹಿತಿ ಇದೆ. ಇವರು ಮರಿಯಳ ತಂದೆ ತಾಯಿಗಳು. ಹಲವು ವರ್ಷ ಮಕ್ಕಳಿಲ್ಲದೆ ಬಂಜೆತನದಿಂದ ಇದ್ದವರು. ಪ್ರಾರ್ಥನೆ ಹಾಗೂ ಉಪವಾಸ ಆಚರಿಸಿ ದೇವರ ಅನುಗ್ರಹಕ್ಕೆ ಪಾತ್ರರಾದರು. ದೇವರು ಇವರಿಗೆ ಹೆಣ್ಣು ಮಗಳನ್ನಿತ್ತರು. ಕ್ರಿ.ಶ 550ರಲ್ಲಿ ಮೊದಲಿಗೆ ಇವರ ಗೌರವಾರ್ಥ ಮೊದಲ ದೇವಾಲವನ್ನು ಕಾನ್‍ಸ್ಟಾಂಟಿನೋಪಲ್‍ನಲ್ಲಿ ನಿರ್ಮಿಸಲಾಯಿತು. ಇವರು ಕ್ರೈಸ್ತ ತಂದೆ ತಾಯಿಗಳಿಗೆ, ಅಜ್ಜ ಅಜ್ಜಿಯರಿಗೆ ಆದರ್ಶವಾಗಿದ್ದಾರೆ. ಮಕ್ಕಳ ಪಾಲನೆ ಪೋಷಣೆ, ದೈವಭಕ್ತಿ ದೈವಭಯದ ಪಾಠ, ಕಲಿಸುವಿಕೆ ಆದರ್ಶವಾಗಿದ್ದಾರೆ.

No comments:

Post a Comment