27/ ಹಸಿರು/ ಶನಿ/ ಸಾಧಾರಣ ಕಾಲದ ಹದಿನಾರನೇ ವಾರ
1ನೇ ವಾಚನ - ವಿಮೊ 24: 3-8
ಕೀರ್ತನೆ - 5೦:1-2,5-6,14-15
ಶುಭಸಂದೇಶ - ಮತ್ತಾಯ 13: 24-3೦ 3
1ನೇ ವಾಚನ - ವಿಮೊ 24: 3-8
ಮೋಶೆ ಜನರ ಬಳಿಗೆ ಬಂದು ಸರ್ವೇಶ್ವರನ ಎಲ್ಲ ಆಜ್ಞೆಗಳನ್ನೂ, ವಿಧಿವಿಧಾನಗಳನ್ನೂ ವಿವರಿಸಿದನು. ಜನರೆಲ್ಲರು, “ಸರ್ವೇಶ್ವರಸ್ವಾಮಿಯ ಆಜ್ಞೆಗಳನ್ನೆಲ್ಲಾ ಅನುಸರಿಸಿ ನಡೆಯುತ್ತೇವೆ,” ಎಂದು ಒಕ್ಕೊರಳಿನಿಂದ ಉತ್ತರ ಕೊಟ್ಟರು4 : ಮೋಶೆ ಸರ್ವೇಶ್ವರನ ಆಜ್ಞೆಗಳನ್ನೆಲ್ಲ ಬರೆದಿಟ್ಟನು. ಬೆಳಿಗ್ಗೆ ಎದ್ದು ಆ ಬೆಟ್ಟದಡಿಯಲ್ಲಿ ಒಂದು ಬಲಿಪೀಠವನ್ನು ಕಟ್ಟಿಸಿದನು. ಇಸ್ರಯೇಲರ ಹನ್ನೆರಡು ಕುಲಗಳಿಗೆ ಹನ್ನೆರಡು ಕಲ್ಲಿನ ಕಂಬಗಳನ್ನು ಸ್ಥಾಪನೆಮಾಡಿಸಿದನು.
5 : ಇಸ್ರಯೇಲರ ಯೌವನಸ್ಥರು ಸರ್ವೇಶ್ವರಸ್ವಾಮಿಗೆ ದಹನ ಬಲಿಗಳನ್ನು ಅರ್ಪಿಸುವಂತೆಯೂ ಸಮಾಧಾನದ ಬಲಿಗಾಗಿ ಹೋರಿಗಳನ್ನು ಅರ್ಪಿಸುವಂತೆಯೂ ಅಪ್ಪಣೆಕೊಟ್ಟನು.
6 : ಆ ಬಲಿಪಶುಗಳ ರಕ್ತದಲ್ಲಿ ಅರ್ಧವನ್ನು ತೆಗೆದು ಬಟ್ಟಲುಗಳಲ್ಲಿ ತುಂಬಿದನು. ಮಿಕ್ಕ ಅರ್ಧವನ್ನು, ಬಲಿಪೀಠದ ಮೇಲೆ ಪ್ರೋಕ್ಷಿಸಿದನು.
7 : ತರುವಾಯ, ನಿಬಂಧನ ಗ್ರಂಥವನ್ನು ತೆಗೆದುಕೊಂಡು ಜನರಿಗೆ ಕೇಳಿಸುವಂತೆ ಓದಿದನು. ಅವರು ಅದನ್ನು ಕೇಳಿದ ಮೇಲೆ, “ಸರ್ವೇಶ್ವರಸ್ವಾಮಿಯ ಆಜ್ಞೆಗಳನ್ನೆಲ್ಲಾ ಅನುಸರಿಸುತ್ತೇವೆ; ಅವುಗಳಿಗೆ ವಿಧೇಯರಾಗಿರುತ್ತೇವೆ,” ಎಂದರು
8 : ಆಗ ಮೋಶೆ ಬಟ್ಟಲುಗಳಲ್ಲಿದ್ದ ರಕ್ತವನ್ನು ತೆಗೆದುಕೊಂಡು ಜನರ ಮೇಲೆ ಚಿಮುಕಿಸಿ, “ಇಗೋ, ಈ ಗ್ರಂಥದಲ್ಲಿ ಹೇಳಿರುವ ಎಲ್ಲ ಆಜ್ಞೆಗಳ ಪ್ರಕಾರ ಸರ್ವೇಶ್ವರ ನಿಮ್ಮ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ಸ್ಥಿರಪಡಿಸುವ ರಕ್ತ ಇದೇ,” ಎಂದನು.
ಕೀರ್ತನೆ - 5೦:1-2,5-6,14-15
1 : ದೇವಾಧಿದೇವನಾದ ಪ್ರಭುವಿನ ನುಡಿ ಇಡೀ ಜಗಕೆ / ಆತನ ಸನ್ನಿಧಿಗೆ ಕರೆ, ಪೂರ್ವದಿಂದ ಪಶ್ಚಿಮದವರೆಗೆ //
2 : ಸುರ ಸುಂದರವಾದ ಸಿಯೋನಿನಿಂದ / ಉದಯಸಿಹನು ದೇವನು ಶೋಭೆಯಿಂದ //
3 : ಬರುತಿಹನು ನಮ್ಮ ದೇವನು, ಇನ್ನು ಸುಮ್ಮನಿರನಾತ / ಆತನ ಮುಂದೆ ಬೆಂಕಿಮಳೆ, ಸುತ್ತಲು ಚಂಡಮಾರುತ //
4 : ಭೂಮ್ಯಾಕಾಶಗಳನು ಕರೆಯುತಿಹನು / ಪ್ರಜೆಗೆ ವಿಧಿಪಾ ತೀರ್ಪನು ನೋಡಲೆಂದು //
5 : “ಬಲಿ ಮೂಲಕ ಒಡಂಬಡಿಕೆ ಗೈದ ಭಕ್ತರನು / ಸಭೆ ಸೇರಿಸಿ ಇಲ್ಲೆನ್ನ ಮುಂದೆ,” ಎನ್ನುತಿಹನು //
6 : ದೇವನೇ ಸತ್ಯಸ್ವರೂಪಿ, ನ್ಯಾಯಾಧಿಪತಿ / ಇದನು ಸಾರಿ ಹೇಳಲಿ ಆಕಾಶ ಪ್ರಕೃತಿ //
7 : “ಎಲೈ ಪ್ರಜೆ ಇಸ್ರಯೇಲ್, ನಾನು ನಿನ್ನ ದೇವರು / ಕಿವಿಗೊಟ್ಟು ಆಲಿಸು ನಾನು ನಿನ್ನ ವಿರುದ್ಧ ವಾದಿಸುವುದನು //
8 : ನಿನ್ನ ಬಲಿಯರ್ಪಣೆಯನು ನಾ ತಪ್ಪೆಣಿಸುತಿಲ್ಲ / ನಿನ್ನ ಮುಂದಿವೆ ಸತತ ನಿನ್ನ ದಹನ ಬಲಿಗಳೆಲ್ಲ //
9 : ನಾ ಕೋರುವುದು ನಿನ್ನ ಮನೆಯ ಹೋರಿಗಳನಲ್ಲ / ನಾ ಬಯಸುವುದು ನಿನ್ನ ಮಂದೆಯ ಹೋತಗಳನಲ್ಲ //
10 : ಕಾಡಿನಲ್ಲಿರುವ ಮೃಗಜಂತುಗಳೆಲ್ಲ ನನ್ನವೆ / ಗುಡ್ಡದಲಿರುವ ಸಹಸ್ರಾರು ಪಶುಗಳು ನನ್ನವೆ //
11ನಾ ಬಲ್ಲೆ ಆಕಾಶದಲ್ಲಿ ಹಾರಾಡುವ ಪಕ್ಷಿಗಳನ್ನೆಲ್ಲ I ನನಗೆ ಸೇರಿವೆ ಅಡವಿಯಲಿ ಓಡಾಡುವ ಜೀವಜಂತುಗಳೆಲ್ಲ II
12 : ನನಗೆ ಹಸಿವಾದರೆ, ನಿಮಗೆ ತಿಳಿಸಬೇಕಿಲ್ಲ / ಜಗವು, ಅದರದೆಲ್ಲವು ನನ್ನವಾಗಿವೆಯಲ್ಲಾ //
13 : ಹೋರಿಗಳ ಮಾಂಸವನು ನಾ ಭುಜಿಸುವುದುಂಟೆ?/ ಹೋತಗಳ ರಕ್ತವನು ನಾ ಕುಡಿಯುವುದುಂಟೇ?//
14 : ದೇವರಿಗೆ ಧನ್ಯವಾದವೆ ನಿನ್ನ ಬಲಿಯರ್ಪಣೆಯಾಗಿರಲಿ / ಪರಾತ್ಪರನಿಗೆ ಮಾಡಿದ ಹರಕೆಗಳು ಸಮರ್ಪಿತವಾಗಲಿ //
15 : ಕಷ್ಟದಲಿ ಮೊರೆಯಿಡೆ, ನೆರವಾಗುವೆ / ಆಗ ನೀ ನನ್ನನು ಕೊಂಡಾಡುವೆ //
ಶುಭಸಂದೇಶ - ಮತ್ತಾಯ 13: 24-3೦ 3
4 : ಯೇಸುಸ್ವಾಮಿ ಜನರಿಗೆ ಮತ್ತೊಂದು ಸಾಮತಿಯನ್ನು ಹೇಳಿದರು: "ಸ್ವರ್ಗಸಾಮ್ರಾಜ್ಯವು ತನ್ನ ಹೊಲದಲ್ಲಿ ಒಳ್ಳೆಯ ಗೋದಿಯನ್ನು ಬಿತ್ತಿದ ರೈತನನ್ನು ಹೋಲುತ್ತದೆ.
25 : ಒಂದು ರಾತ್ರಿ ಎಲ್ಲರೂ ನಿದ್ರಿಸುತ್ತಿರುವಾಗ, ಅವನ ವೈರಿ ಬಂದು, ಗೋದಿಯ ನಡುವೆ ಕಳೆಗಳನ್ನು ಬಿತ್ತಿ ಹೋದ.
26 : ಗೋದಿ ಬೆಳೆದು ತೆನೆಬಿಟ್ಟಾಗ ಕಳೆ ಬೆಳೆದಿರುವುದೂ ಗೋಚರವಾಯಿತು.
27 : ಆಗ ಆಳುಗಳು ತಮ್ಮ ಯಜಮಾನನ ಬಳಿಗೆ ಬಂದು, "ಸ್ವಾವಿೂ, ನಿಮ್ಮ ಹೊಲದಲ್ಲಿ ಬಿತ್ತಿದ್ದು ಉತ್ತಮವಾದ ಗೋದಿ ಅಲ್ಲವೆ? ಜೊತೆಗೆ ಕಳೆಯೂ ಕಾಣಿಸಿಕೊಂಡಿದೆಯಲ್ಲಾ, ಅದೆಲ್ಲಿಂದ ಬಂತು?" ಎಂದರು.
28 : ಯಜಮಾನ, ‘ಇದು ನನ್ನ ವೈರಿ ಮಾಡಿರುವ ಕೆಲಸ,’ ಎಂದ. ‘ಹಾಗಾದರೆ, ಕಳೆಯನ್ನು ಕಿತ್ತು ಹಾಕೋಣವೇ?’ ಎಂದರು ಆಳುಗಳು,
29 : ಅದಕ್ಕೆ ಯಜಮಾನ ‘ಬೇಡ, ಬೇಡ; ಕಳೆಯನ್ನು ಕೀಳುವಾಗ, ಗೋದಿಯನ್ನೂ ಕಿತ್ತು ಬಿಟ್ಟೀರಿ.
30 : ಸುಗ್ಗಿಯವರೆಗೆ ಎರಡೂ ಒಟ್ಟಿಗೆ ಬೆಳೆಯಲಿ; ಸುಗ್ಗಿಯ ಕಾಲದಲ್ಲಿ ಮೊದಲು ಕಳೆ ಕಿತ್ತು, ಸುಟ್ಟು ಹಾಕಲು ಕಟ್ಟಿಡಿ; ಬಳಿಕ ಗೋದಿಯನ್ನು ಒಕ್ಕಣೆಮಾಡಿ ನನ್ನ ಕಣಜಕ್ಕೆ ತುಂಬಿರಿ, ಎಂದು ಕೊಯ್ಲುಗಾರರಿಗೆ ಹೇಳುತ್ತೇನೆ,’ ಎಂದ".

ಚಿಂತನೆ ( ಜೀವವಾಕ್ಯ)
ಕಳೆ-ಬೆಳೆ
ಸೆರೆಯಾಗಿದ್ದ ಇಸ್ರಾಯೇಲರನ್ನು ಅದ್ಭುತಕರವಾಗಿ ಈಜಿಪ್ಟ್‌ನಿಂದ ಬಿಡುಗಡೆಮಾಡಿ ನಂತರ ಸರ್ವೇಶ್ವರ ದೇವರು ತಮ್ಮ ಆಪ್ತ ಪ್ರಜೆಗಳೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಸ್ಥಾಪಿಸುತ್ತಾರೆ. ನೈತಿಕ, ಧಾರ್ಮಿಕ ಹಾಗೂ ಸಾಮಾಜಿಕ ವಿಧಿ ವಿಧಾನಗಳನ್ನು ನೀಡಿ ಇಸ್ರಾಯೇಲ್ ಜನಾಂಗವನ್ನು ಒಂದು ವ್ಯವಸ್ಥಿತ ಸಮಾಜವನ್ನಾಗಿ ರೂಪಿಸಿದ ದೇವರು ಅವರಿಗೆ ಒಂದು ಉಜ್ವಲ ಭವಿಷ್ಯವನ್ನು ತೆರೆದಿಡುತ್ತಾರೆ. ಸರ್ವೇಶ್ವರ ಸ್ವಾಮಿಯ ಆಜ್ಞೆಗಳನ್ನೆಲ್ಲಾ ಅನುಸರಿಸಿ ನಡೆಯುತ್ತೇವೆ ಎಂಬ ಇಸ್ರಾಯೇಲರ ಒಕ್ಕೊರಲಿನ ಉತ್ತರದಲ್ಲಿ ಅವರ ವಿಧೇಯತೆ, ದೈನ್ಯಭಾವದ ಅರಿವಾಗುತ್ತದೆ.
ಇಂದಿನ ಶುಭಸಂದೇಶ ಭೇದಭಾವ ಮಾಡದೆ, ಸಕಲ ಜನರನ್ನೂ ಪ್ರೀತಿಯಿಂದ ಬರಮಾಡಿಕೊಳ್ಳುವ ಯೇಸುಕ್ರಿಸ್ತರ ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲುತ್ತದೆ. ಯೆಹೂದ್ಯ ಬೋಧಕವರ್ಗ ಜನರನ್ನು ಮೂರು ಭಾಗಗಳನ್ನಾಗಿ ವಿಂಗಡಿಸಿತ್ತು. ಮೋಶೆಯ ನಿಯಮ ಮತ್ತು ಭಾಷ್ಯವನ್ನು ಅಕ್ಷರಶಃ ಅನುಸರಿಸುವವರು ಉತ್ತಮರು. ಈ ವರ್ಗದಲ್ಲಿಅವರು ತಮ್ಮನ್ನು ನೋಂದಾಯಿಸಿಕೊಂಡಿದ್ದರು. ಎರಡನೆಯ ವರ್ಗವೆಂದರೆ, ಪಾಪಿಗಳ ಅಧಮ ಗುಂಪು. ಅರಿತೋ ಅರಿಯದೆಯೋ ನಿಯಮವನ್ನು ಆಚರಿಸಲು ಅಶಕ್ತರಾದ ಇವರು ಬೋಧಕರ ದೃಷ್ಟಿಯಲ್ಲಿ ನರಕದ ಅಗ್ನಿಯನ್ನು ನಿರಂತರಗೊಳಿಸಲು ಸೃಷ್ಟಿಸಲಾದವರು. ಮೂರನೆಯದು ಮಧ್ಯಮ ವರ್ಗ. ಇವರನ್ನು ಕೆಟ್ಟವರೆಂದು ಕಡೆಗಣಿಸುವಂತಿಲ್ಲ. ಒಳ್ಳೆಯವರೆಂದು ಹೊಗಳುವಂತೆಯೂ ಇಲ್ಲ.
ನಾವು ನಮ್ಮ ದಿನನಿತ್ಯದ ಜೀವನದಲ್ಲಿ, ನಮ್ಮ ನೆರೆಯವರನ್ನು ವರ್ಗೀಕರಿಸುವುದಿಲ್ಲವೇ? ಅವನು ಜಿಪುಣ, ಇವನು ಹೆಡ್ಡ, ಆತನು ಕಳ್ಳ, ಈತನು ವ್ಯಭಿಚಾರಿ.... ಎಂದು. ಅಂತೆಯೆ ಜನರನ್ನು ನಾವು ದ್ವೇಷಿಸುತ್ತೇವೆ. ಆದರೆ ಪ್ರಭು ಯೇಸುವಿನ ಶಿಷ್ಯರಲ್ಲಿ ಕುಲೀನರು, ಕುಲಗಟ್ಟವರು, ಅಕ್ಷರಿಗಳು, ನಿರಕ್ಷರಿಗಳು, ರೋಗಿಗಳು, ಆರೋಗ್ಯವಂತರು ಹೀಗೆ ಹತ್ತಾರು ವರ್ಗದ ಜನರಿರುತ್ತಿದ್ದರು. ಇವರನ್ನು ಪ್ರಭು ವರ್ಗೀಕರಿಸಲಿಲ್ಲ. ಪರರ ಮೇಲೆ ಬೆರಳು ಹಾಯಿಸುವವರಿಗೆ ಅವರು ನೀವು ಇತರರ ಮೇಲೆ ತೀರ್ಪಿಡಬೇಡಿ, ಹಾಗೆ ಮಾಡಿದರೆ ನೀವೂ ತೀರ್ಪಿಗೆ ಗುರಿಯಾಗುವಿರಿ ಎಂದರು (ಮತ್ತಾಯ ೭:೧). ಕಳೆಯನ್ನು ಕೀಳುವಾಗ ನೀವು ಗೋಧಿಯನ್ನೂ ಕಿತ್ತುಬಿಟ್ಟೀರಿ ಎಂಬುದು ಅವರ ಕಾಳಜಿ. ಕಾಳಿನ ಜೊತೆಯಲ್ಲಿ ಕಳೆಗಳೂ ಬೆಳೆದರೆ ಕೆಟ್ಟವರು ಸನ್ಮಾರ್ಗಿಗಳಾಗಲೂಬಹುದು ಎಂಬುದು ಅವರ ಹಿರಿಯಾಶೆ. ಕೆಟ್ಟವರಿಂದ ಒಳ್ಳೆಯವರನ್ನು ಬೇರ್ಪಡಿಸುವುದು ದೇವರ ಕೆಲಸ, ಅಂತಿಮ ಕಾಲದಲ್ಲಿ ತೀರ್ಪಿಡುವ ಕೆಲಸವನ್ನು ದೇವರೇ ಮಾಡಲಿ. ನೀವು ಸೂಕ್ತಕಾಲಕ್ಕೆ ಮುಂಚೆ ತೀರ್ಪಿಡಬೇಡಿ ಎಂದರು ಸಂತ ಪೌಲರು.
ಎಲ್ಲಾ ಅಂತರಗಳನ್ನೂ, ವ್ಯತ್ಯಾಸಗಳನ್ನೂ ಅಳಿಸಿ ಹಾಕುವುದೇ ಧರ್ಮದ ಉದ್ದೇಶ
No comments:
Post a Comment