ಸಾಧಾರಣ ಕಾಲದ ಇಪ್ಪತ್ತೊಂದನೇ ವಾರ ಶನಿವಾರ
31/ಹಸಿರು/ಶನಿ
1ನೇ ವಾಚನ - 1 ಥೆಸ 4: 9-11
ಕೀರ್ತನೆ - 91: 1, 7-9
ಶುಭಸಂದೇಶ - ಮತ್ತಾಯ 25: 14-3೦
1ನೇ ವಾಚನ - 1 ಥೆಸ 4: 9-11
31/ಹಸಿರು/ಶನಿ
1ನೇ ವಾಚನ - 1 ಥೆಸ 4: 9-11
ಕೀರ್ತನೆ - 91: 1, 7-9
ಶುಭಸಂದೇಶ - ಮತ್ತಾಯ 25: 14-3೦
1ನೇ ವಾಚನ - 1 ಥೆಸ 4: 9-11
ಸೋದರ ಪ್ರೇಮವನ್ನು ಕುರಿತು ನಿಮಗೆ ಬರೆಯುವ ಅವಶ್ಯಕತೆಯಿಲ್ಲ. ನೀವು ಒಬ್ಬರನ್ನೊಬ್ಬರು ಪ್ರೀತಿಸುವುದನ್ನು ದೇವರಿಂದಲೇ ಕಲಿತಿದ್ದೀರಿ. ಮಕೆದೋನಿಯದಲ್ಲಿ ವಾಸಿಸುವ ಎಲ್ಲ ಸಹೋದರರನ್ನೂ ನೀವು ಪ್ರೀತಿಸುತ್ತಿರುವುದೇನೋ ನಿಜ. ಆದರೂ ಸಹೋದರರೇ, ನಿಮ್ಮ ಈ ಪ್ರೀತಿ ಇನ್ನೂ ಅಧಿಕಾಧಿಕವಾಗಬೇಕೆಂಬುದೇ ನಮ್ಮ ಆಶಯ. ಮತ್ತೊಬ್ಬರ ವಿಷಯದಲ್ಲಿ ನೀವು ತಲೆಹಾಕದೆ ನಿಮ್ಮ ಸ್ವಂತಕಾರ್ಯಗಳಲ್ಲೇ ಮಗ್ನರಾಗಿರಿ. ನೆಮ್ಮದಿಯ ಜೀವನವೇ ನಿಮ್ಮ ಗುರಿಯಾಗಿರಲಿ. ನಿಮ್ಮ ಸ್ವಂತ ದುಡಿಮೆಯಿಂದ ಬದುಕನ್ನು ಸಾಗಿಸಿರಿ. ಇದೇ ನಿಮಗೆ ನಮ್ಮ ಆದೇಶ. ಹೀಗೆ ಬಾಳಿದರೆ ಅನ್ಯಜನರು ನಿಮ್ಮನ್ನು ಗೌರವಿಸುವರು; ಇತರರನ್ನು ಅವಲಂಬಿಸುವ ಅವಶ್ಯಕತೆ ನಿಮಗಿರುವುದಿಲ್ಲ.
ಕೀರ್ತನೆ - 91: 1, 7-9
1 : ಹಾಡಿರಿ ಪ್ರಭುವಿಗೆ ಹೊಸಗೀತೆಯೊಂದನು / ಎಸಗಿಹನಾತನು ಪವಾಡಕಾರ್ಯಗಳನು / ಗಳಿಸಿತಾತನ ಕೈ ಪೂತಭುಜ ಗೆಲುವನು //
7 : ಗರ್ಜಿಸಲಿ ಸಮುದ್ರವು ಅದರಲ್ಲಿರುವುದೆಲ್ಲವು / ಕೀರ್ತಿಸಲಿ ಜಗವು, ಅದರೊಳು ವಾಸಿಸುವ ಜನರೆಲ್ಲರು //
8 : ಚಪ್ಪಾಳೆ ಹೊಡೆಯಲಿ ನದಿಗಳು /
ತಟ್ಟಾಡಲಿ ಬೆಟ್ಟಗುಡ್ಡಗಳು //
9 : ಏಕೆನೆ ಬರುವನಾತ ಇಹಲೋಕಕೆ ನ್ಯಾಯತೀರಿಸಲು / ಜಗಕು, ಜನತೆಗು, ನ್ಯಾಯನೀತಿಗನುಸಾರ ತೀರ್ಪುಕೊಡಲು //
ಶುಭಸಂದೇಶ - ಮತ್ತಾಯ 25: 14-3೦
“ಅದೂ ಅಲ್ಲದೆ ಆ ದಿನಗಳಲ್ಲಿ ಸ್ವರ್ಗಸಾಮ್ರಾಜ್ಯ ಇಂತಿರುವುದು: ಒಬ್ಬಾತ ಪ್ರವಾಸ ಹೊರಡಲಿದ್ದ. ತನ್ನ ಸೇವಕರನ್ನು ಕರೆದು ಅವರ ವಶಕ್ಕೆ ತನ್ನ ಆಸ್ತಿಯನ್ನು ಒಪ್ಪಿಸಿದ. ಒಬ್ಬನಿಗೆ ಐದು ತಲೆಂತು, ಇನ್ನೊಬ್ಬನಿಗೆ ಎರಡು, ಮತ್ತೊಬ್ಬನಿಗೆ ಒಂದು - ಹೀಗೆ ಅವರವರ ಸಾಮಥ್ರ್ಯಕ್ಕೆ ತಕ್ಕಂತೆ ವಹಿಸಿಕೊಟ್ಟು ಹೊರಟುಹೋದ. ಐದು ತಲೆಂತು ಪಡೆದ ಸೇವಕ ಒಡನೇ ಹೋಗಿ ಆ ಮೊತ್ತದಿಂದ ವ್ಯಾಪಾರಮಾಡಿ ಇನ್ನೂ ಐದನ್ನು ಸಂಪಾದಿಸಿದ. ಎರಡು ಪಡೆದವನೂ ಹಾಗೆಯೇ ಮಾಡಿ ಇನ್ನೂ ಎರಡನ್ನು ಸಂಪಾದಿಸಿದ. ಒಂದು ತಲೆಂತು ಪಡೆದವನು ಮಾತ್ರ, ಅದನ್ನು ತೆಗೆದುಕೊಂಡು ಹೋಗಿ ಭೂಮಿ ಅಗೆದು, ಅದರಲ್ಲಿ ತನ್ನ ಧಣಿಯ ಆ ಹಣವನ್ನು ಹೂತಿಟ್ಟ. ಬಹಳ ಕಾಲವಾದ ಬಳಿಕ ಆ ಧಣಿ ಹಿಂದಿರುಗಿ ಬಂದ. ಸೇವಕರಿಂದ ಲೆಕ್ಕಾಚಾರ ಕೇಳಿದ. ಐದು ತಲೆಂತು ಪಡೆದವನು ಇನ್ನೂ ಐದು ತಲೆಂತುಗಳನ್ನು ಮುಂದೆ ತಂದು, ‘ಒಡೆಯಾ, ನೀವು ನನ್ನ ವಶಕ್ಕೆ ಐದು ತಲೆಂತು ಒಪ್ಪಿಸಿದಿರಿ. ಇಗೋ ನೋಡಿ, ಮತ್ತೆ ಐದು ತಲೆಂತು ಸಂಪಾದಿಸಿದ್ದೇನೆ,’ ಎಂದ. ಅದಕ್ಕೆ ಆ ಧಣಿ, ‘ಭಲಾ, ನೆಚ್ಚಿನ ಸೇವಕ, ನೀನು ಪ್ರಾಮಾಣಿಕ. ಈ ಚಿಕ್ಕ ಕಾರ್ಯದಲ್ಲಿ ಪ್ರಾಮಾಣಿಕನಾಗಿದ್ದ ನಿನಗೆ ದೊಡ್ಡ ಜವಾಬ್ದಾರಿಯನ್ನೇ ವಹಿಸುತ್ತೇನೆ. ಬಾ, ನಿನ್ನ ಧಣಿಯ ಸೌಭಾಗ್ಯದಲ್ಲಿ ಭಾಗಿಯಾಗು,’ ಎಂದ. ಎರಡು ತಲೆಂತು ಪಡೆದಿದ್ದವನೂ ಮುಂದೆ ಬಂದು, ‘ಒಡೆಯಾ, ನೀವು ನನ್ನ ವಶಕ್ಕೆ ಎರಡು ತಲೆಂತುಗಳನ್ನು ಒಪ್ಪಿಸಿದರಿ. ಇಗೋ ನೋಡಿ, ಇನ್ನೂ ಎರಡು ತಲೆಂತುಗಳನ್ನು ಸಂಪಾದಿಸಿದ್ದೇನೆ,’ ಎಂದ. ಧಣಿ ಅವನಿಗೂ, ‘ಭಲಾ, ನೆಚ್ಚಿನ ಸೇವಕ, ನೀನು ಪ್ರಾಮಾಣಿಕ. ಈ ಚಿಕ್ಕ ಕಾರ್ಯದಲ್ಲಿ ಪ್ರಾಮಾಣಿಕನಾಗಿದ್ದ ನಿನಗೂ ದೊಡ್ಡ ಜವಾಬ್ದಾರಿಯನ್ನೇ ವಹಿಸುತ್ತೇನೆ. ಬಾ, ನಿನ್ನ ಧಣಿಯ ಸೌಭಾಗ್ಯದಲ್ಲಿ ನೀನೂ ಭಾಗಿಯಾಗು,’ ಎಂದ. ತರುವಾಯ ಒಂದು ತಲೆಂತು ಪಡೆದವನೂ ಮುಂದೆ ಬಂದ; ‘ಒಡೆಯಾ, ನಿಮ್ಮ ಮನಸ್ಸು ಕಠಿಣ ಎಂಬುದನ್ನು ನಾನು ಬಲ್ಲೆ. ನೀವು ಬಿತ್ತದ ಎಡೆಯಲ್ಲಿ ಕೊಯ್ಲು ಮಾಡುವವರು; ನೀವು ತೂರದ ಎಡೆಯಲ್ಲಿ ರಾಶಿಮಾಡುವವರು; ಆದ್ದರಿಂದ ನಾನು ಭಯಪಟ್ಟೆ; ಹೋಗಿ ನಿಮ್ಮ ತಲೆಂತನ್ನು ಭೂಮಿಯಲ್ಲಿ ಹೂತಿಟ್ಟೆ. ಇಗೋ, ಸ್ವೀಕರಿಸಿ, ನಿಮ್ಮದು ನಿಮಗೆ ಸಂದಿದೆ,’ ಎಂದ. “ಆಗ ಧಣಿ ಅವನಿಗೆ, ‘ಎಲವೋ ಮೈಗಳ್ಳನಾದ ದುಷ್ಟ ಸೇವಕ, ನಾನು ಬಿತ್ತದ ಎಡೆಯಲ್ಲಿ ಕೊಯ್ಲು ಮಾಡುವವನು; ನಾನು ತೂರದ ಎಡೆಯಲ್ಲಿ ರಾಶಿ ಮಾಡುವವನು ಎಂದು ನಿನಗೆ ಗೊತ್ತಿತ್ತಲ್ಲವೆ? ಹಾಗಾದರೆ ನನ್ನ ಹಣವನ್ನು ನೀನು ಬಡ್ಡಿ ಅಂಗಡಿಯಲ್ಲಿ ಹಾಕಿಡಬೇಕಿತ್ತು; ನಾನು ಬಂದು ಬಡ್ಡಿಸಮೇತ ನನ್ನ ಅಸಲನ್ನು ಪಡೆಯುತಿದ್ದೆ’, ಎಂದ. ಅನಂತರ ಪರಿಚಾರಕರಿಗೆ, ‘ಇವನಿಂದ ಆ ತಲೆಂತು ನಾಣ್ಯವನ್ನು ಕಿತ್ತು ಹತ್ತು ತಲೆಂತು ಇರುವವನಿಗೆ ಕೊಡಿ. ಉಳ್ಳ ಪ್ರತಿಯೊಬ್ಬನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ. ಅವನು ಸಮೃದ್ಧನಾಗುತ್ತಾನೆ. ಇಲ್ಲದವನಿಂದ ಇರುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ. ಅಪ್ರಯೋಜಕನಾದ ಈ ಸೇವಕನನ್ನು ಹೊರಗಿನ ಕಗ್ಗತ್ತಲೆಗೆ ದಬ್ಬಿರಿ. ಅಲ್ಲಿ ಕಟಕಟನೆ ಹಲ್ಲುಕಡಿದುಕೊಂಡು ಗೋಳಾಡಬೇಕಾಗುವುದು,’ ಎಂದು ಹೇಳಿದ.
ಚಿಂತನೆ
ಸತತ ಪ್ರಯತ್ನ-ವಿಜಯದ ಸೋಪಾನ
ಇಂದಿನ ಶುಭಸಂದೇಶದಲ್ಲಿ ಕೇಳಲಾಗುವ ಪ್ರಶ್ನೆಯು ಎಲ್ಲರ ಮನಗಳಲ್ಲಿ ತಲ್ಲಣವನ್ನುಂಟುಮಾಡುವುದು ಸಹಜ. ನಾವು ಹೇಗೆ ತೀರ್ಪಿನ ದಿನವನ್ನು ಎದುರು ನೋಡುವುದು? ನಾವು ಹೇಗೆ ಈ ಜಗದಲ್ಲಿ ಜೀವಿಸಿ ಪ್ರಭು ಯೇಸುವಿನಿಂದ ಭಲಾ, ನೆಚ್ಚಿನ ಸೇವಕ, ನೀನು ಪ್ರಾಮಾಣಿಕ, ನಿನ್ನ ಧನಿಯ ಸೌಭಾಗ್ಯದಲ್ಲಿ ಭಾಗಿಯಾಗು ಎಂಬ ಮಾತುಗಳನ್ನಾಲಿಸುವುದು. ಉತ್ತರವಂತೂ ಸರಳವೂ, ಉನ್ನತವೂ ಆಗಿದೆ. ನಾವು ದೇವರಿಂದ ಪಡೆದ ಎಲ್ಲಾ ವರದಾನಗಳಿಗೆ ಕೃತಜ್ಞರಾಗಿ, ಒಳ್ಳೆಯ ಫಲಗಳನ್ನು ನೀಡಿ ಯೇಸುವಿನ ಸೌಭಾಗ್ಯದಲ್ಲಿ ಭಾಗವಹಿಸಲು ಕಂಕಣಬದ್ಧರಾಗಬೇಕಾಗಿದೆ.
ದೇವರಿಂದ ಅಮೂಲ್ಯ ಜೀವದ ಉಸಿರನ್ನು ಪಡೆದ ನಾವು ದೇವರ ಯೋಜನೆಗೆ ಪ್ರಾಮಾಣಿಕವಾಗಿ ನಡೆಯಬೇಕಾಗಿದೆ. ಪ್ರಾಮಾಣಿಕತೆ ದೇವರ ಕರೆಯನ್ನು ಅನುಸರಿಸುವುದರಲ್ಲಿಯೂ ಮತ್ತು ನಮ್ಮನ್ನೇ ದೇವರ ವಾಕ್ಯಕ್ಕೆ ಸಮರ್ಪಿಸಿಕೊಳ್ಳುವಂತಹದಾಗಿದೆ. ದೇವರು ನಮಗೆ ಅನೇಕ ವರದಾನಗಳನ್ನು ನೀಡಿದ್ದಾರೆ. ಅವುಗಳ ಅಮೂಲ್ಯತೆಯನ್ನು ಅರಿತು ದೇವರ ನಮ್ರ ಸೇವಕರಂತೆಯೇ ದುಡಿದು ಮಾನವನ ಒಳಿತಿಗಾಗಿ ಶ್ರಮಿಸುವುದು ನಮ್ಮ ಆದ್ಯ ಕರ್ತವ್ಯ.
ಇಂದಿನ ಶುಭಸಂದೇಶದಲ್ಲಿ ಖಂಡಿಸಲಾಗಿರುವ ವ್ಯಕ್ತಿ ನಮ್ಮನ್ನು ಎಚ್ಚರಿಸುತ್ತಿರುವಂತಿದೆ. ಮೈಗಳ್ಳತನದಿಂದ ವೃಥಾ ಸಮಯವನ್ನು ಹಾಳುಮಾಡದೆ, ದೇವರು ಕೊಟ್ಟ ವರದಾನಗಳನ್ನು ಸದುಪಯೋಗಪಡಿಸಿಕೊಳ್ಳಲು ನಮ್ಮನ್ನು ವಿನಂತಿಸಿಕೊಳ್ಳುತ್ತಿರುವಂತಿದೆ.
ಇಂದಿನ ಮೊದಲನೆಯ ವಾಚನದಲ್ಲಿ ಆಲಿಸಿದಂತೆಯೇ, ಮತ್ತೊಬ್ಬರ ವಿಷಯದಲ್ಲಿ ತಲೆಹಾಕದೆ ನಿಮ್ಮ ಸ್ವಂತ ಕಾರ್‍ಯಗಳಲ್ಲಿ ಮಗ್ನರಾಗಿರಿ. ನೆಮ್ಮದಿಯ ಜೀವನವು ನಿಮ್ಮ ಗುರಿಯಾಗಿರಲಿ, ನಿಮ್ಮ ಸ್ವಂತ ಕಾರ್‍ಯಗಳಲ್ಲಿ ಮಗ್ನರಾಗಿರಿ. ನೆಮ್ಮದಿಯ ಜೀವನವು ನಿಮ್ಮ ಗುರಿಯಾಗಿರಲಿ, ನಿಮ್ಮ ಸ್ವಂತ ದುಡಿಮೆಯಿಂದ ಬದುಕನ್ನು ಸಾಗಿಸಿರಿ.
ಇಂದಿನ ವಾಚನಗಳನ್ನು ಆಲಿಸಿದ ಕ್ರೈಸ್ತರಾದ ನಾವು, ಪ್ರೀತಿ, ವಿಶ್ವಾಸದಿಂದ ಒಬ್ಬರನ್ನೊಬ್ಬರು ಸೈರಿಸಿಕೊಂಡು ಎಲ್ಲರ ಒಳಿತನ್ನು ಬಯಸಿ ಆ ಮಹಿಮಾ ದೇವನ ಮಹಿಮೆಗಾಗಿ ದುಡಿದು ಆ ಮಹಿಮಾರೂಪನಿಂದ ಭಲಾ, ನೆಚ್ಚಿನ ಸೇವಕ, ನೀನು ಪ್ರಾಮಣಿಕ, ನಿನ್ನ ಧನಿಯ ಸೌಭಾಗ್ಯದಲ್ಲಿ ಭಾಗಿಯಾಗು ಎಂಬ ಸವಿ ಮಾತುಗಳನ್ನಾಲಿಸಲು ಯೋಗ್ಯರಾಗೋಣ.
ಸತತ ಪ್ರಯತ್ನ ಯಶಸ್ಸೆಂಬ ಸೌಧವನ್ನು ತಲುಪುವ ಏಕೈಕ ದಾರಿ

No comments:
Post a Comment