On the first Sunday in Ordinary Time there occurs
the Feast of the Baptism of the Lord.
ಪ್ರವೇಶ ಶ್ಲೋಕ
ಉನ್ನತ ಸಿಂಹಾಸನದಲ್ಲಿ ಆಸನಾರೂಢನಾಗಿರುವ ಮನುಷ್ಯನನ್ನು ದೂತ ಸಮೂಹವು ಏಕಕಂಠದಿಂದ ಸ್ತುತಿಸುತ್ತಾ ಇಗೋ ! ಯುಗಯುಗಾಂತರಕ್ಕೂ ಜೀವಿಸಿ ಆಳುವವನು ಈತನೇ ಎಂದು ಹಾಡುತ್ತಿದ್ದುದನ್ನು ಕಂಡೆನು.
ಸಭಾ ಪ್ರಾರ್ಥನೆ
ಪ್ರಭುವೇ, ನಿಮ್ಮ ಪ್ರಜೆಯ ದೀನ ಕೋರಿಕೆಗಳನ್ನು
ಪ್ರೀತಿಯಿಂದ ಈಡೇರಿಸಿರಿ.
ಅವರು ತಮ್ಮ ಕರ್ತವ್ಯಗಳನ್ನು ಗ್ರಹಿಸುವಂತೆಯೂ
ಅವುಗಳನ್ನು ಸರಿಯಾಗಿ ಈಡೇರಿಸುವಂತೆಯೂ
ಅವರಿಗೆ ಬೇಕಾದ ಶಕ್ತಿಯನ್ನು ಕರುಣಿಸಿರಿ.
ನಿಮ್ಮೊಂದಿಗೆ ಪವಿತ್ರಾತ್ಮರ ಐಕ್ಯದಲ್ಲಿ ದೇವರಾಗಿ
ಯುಗಯುಗಾಂತರಕ್ಕೂ ಜೀವಿಸಿ ಆಳುವ
ನಮ್ಮ ಪ್ರಭುವೂ ನಿಮ್ಮ ಪುತ್ರರೂ ಆಗಿರುವ
ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
ಅರ್ಪಣಾ ಪ್ರಾರ್ಥನೆ
ಪ್ರಭುವೇ, ನಿಮ್ಮೀ ಪ್ರಜೆಯ ಅರ್ಪಣೆಯು
ನಿಮಗೆ ಮೆಚ್ಚುಗೆಯಾಗಲಿ.
ಅದು ನಮ್ಮೆಲ್ಲರನ್ನು ಪಾವನಗೊಳಿಸಿ
ನಾವು ಭಕ್ತಿಯಿಂದ ಬೇಡುವುದನ್ನು ಪಡೆದು ಕೊಡಲಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
ಪರಮ ಪ್ರಸಾದ ಶ್ಲೋಕ ಕೀರ್ತ 35 : 10
ಪ್ರಭೂ, ನಿನ್ನಲ್ಲಿದೆ ಜೀವದ ಬುಗ್ಗೆ, ನಿನ್ನ ಬೆಳಕಿಂದ ಬೆಳಕೆಮಗೆ.
ಅಥವಾ ಯೊವಾ 10 : 10
ಪ್ರಭು ಇಂತೆನ್ನುತ್ತಾರೆ : ನಾನು ಬಂದುದ್ದಾರೋ ಜೀವ ನೀಡಲು, ಯಥೇಚ್ಛವಾಗಿ ನೀಡಲು.
ಕೃತಜ್ಞತಾ ಪ್ರಾರ್ಥನೆ
ಸರ್ವಶಕ್ತ ದೇವರೇ,
ನಿಮ್ಮ ಪರಮ ಪ್ರಸಾದದಿಂದ ಪೋಷಿತರಾದ ನಾವು
ನಿಮಗೆ ಮೆಚ್ಚುಗೆಯಾಗುವಂತೆ ನಡೆದು
ಯೋಗ್ಯ ಸೇವೆ ಸಲ್ಲಿಸುವಂತೆ ಕರುಣಿಸಿರಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
No comments:
Post a Comment