ಸಾಧಾರಣ ಕಾಲದ ಇಪ್ಪತ್ತೈದನೇ ವಾರ ಸೋಮವಾರ
23/ಬಿಳಿ/ಸೋಮ/ಸಂತ ಪಾದ್ರೆ ಪಿಯೋ ಯಾ (ಸ್ಮರಣೆ)
1ನೇ ವಾಚನ - ಎಜ್ರ 1: 1-6
ಕೀರ್ತನೆ 126: 1-3, 5-6
ಶುಭಸಂದೇಶ - ಲೂಕ 8: 16-18
23/ಬಿಳಿ/ಸೋಮ/ಸಂತ ಪಾದ್ರೆ ಪಿಯೋ ಯಾ (ಸ್ಮರಣೆ)
1ನೇ ವಾಚನ - ಎಜ್ರ 1: 1-6
ಕೀರ್ತನೆ 126: 1-3, 5-6
ಶುಭಸಂದೇಶ - ಲೂಕ 8: 16-18
1ನೇ ವಾಚನ - ಎಜ್ರ 1: 1-6
ಸೈರಸನು ಪರ್ಷಿಯ ದೇಶದ ಅರಸ. ಆತನ ಆಳ್ವಿಕೆಯ ಮೊದಲನೆಯ ವರ್ಷದಲ್ಲೆ ಸರ್ವೇಶ್ವರ ಸ್ವಾಮಿ ತಾವು ಯೆರೆಮೀಯನ ಮುಖಾಂತರ ಹೇಳಿಸಿದ ವಾಕ್ಯವನ್ನು ನೆರವೇರಿಸಿದರು. ಅದಕ್ಕಾಗಿಯೆ ಅರಸ ಸೈರಸನನ್ನು ಪ್ರೇರೇಪಿಸಿ ಅವನ ರಾಜ್ಯದಲ್ಲೆಲ್ಲಾ ಡಂಗುರ ಹಾಗು ಪತ್ರಗಳ ಮೂಲಕ ಹೀಗೆ ಪ್ರಕಟಿಸುವಂತೆ ಮಾಡಿದರು: “ಪರ್ಷಿಯ ರಾಜನಾದ ಸೈರಸೆಂಬ ನನ್ನ ಮಾತನ್ನು ಕೇಳಿರಿ: ಪರಲೋಕದ ಎಲ್ಲ ರಾಜ್ಯಗಳನ್ನು ನನಗೆ ಕೊಟ್ಟಿದ್ದಾರೆ; ‘ನನಗಾಗಿ ಜುದೇಯ ನಾಡಿನ ಜೆರುಸಲೇಮಿನಲ್ಲಿ ಒಂದು ಆಲಯವನ್ನು ಕಟ್ಟಿಸಬೇಕು’ ಎಂದು ಅವರು ಆಜ್ಞಾಪಿಸಿದ್ದಾರೆ. ನಿಮ್ಮಲ್ಲಿ ಯಾರು ಅವರ ಪ್ರಜೆಗಳಾಗಿರುತ್ತಾರೋ ಅಂಥವರು ಜುದೇಯ ನಾಡಿನ ಜೆರುಸಲೇಮಿಗೆ ಹೋಗಿ ಅಲ್ಲಿ ವಾಸಿಸುತ್ತಿರುವ
ಇಸ್ರಯೇಲ್ ದೇವರಾದ ಸರ್ವೇಶ್ವರನಿಗೆ, ಒಂದು ದೇವಾಲಯವನ್ನು ಕಟ್ಟಲಿ; ಅವರ ಸಂಗಡ ಅವರ ದೇವರಿರಲಿ! ಯಾಳುಗಳಾಗಿ ಅಳಿದುಳಿದವರು ಯಾವ ಯಾವ ಊರುಗಳಲ್ಲಿ ಪ್ರವಾಸಿಗಳಾಗಿರುತ್ತಾರೋ ಆ ಊರಿನ ಜನರು ಜೆರುಸಲೇಮಿನ ದೇವಾಲಯಕ್ಕಾಗಿ ಕಾಣಿಕೆಗಳನ್ನಲ್ಲದೆ ಬೆಳ್ಳಿಬಂಗಾರ, ಸರಕುಸಾಮಾಗ್ರಿ, ಪ್ರಾಣಿಪಶು, ಇವುಗಳನ್ನು ಕೊಟ್ಟು ಅವರಿಗೆ ಸಹಾಯ ಮಾಡಲಿ,” ಎಂದು ಪ್ರಚುರಪಡಿಸಿದನು. ಈ ಪ್ರಕಟನೆಯನ್ನು ಕೇಳಿ, ಯೆಹೂದ ಮತ್ತು ಬೆನ್ಯಾಮೀನ್ ಗೋತ್ರಕ್ಕೆ ಸೇರಿದ ಮುಖ್ಯಸ್ಥರು, ಯಾಜಕರು, ಲೇವಿಯರು ಹಾಗು ದೈವಪ್ರೇರಿತರಾದ ಎಲ್ಲರು ಜೆರುಸಲೇಮಿನಲ್ಲಿ ಸರ್ವೇಶ್ವರನಿಗೆ ಪುನಃ ಆಲಯಕಟ್ಟುವುದಕ್ಕಾಗಿ ಹೊರಟರು. ಅವರ ನೆರೆಯವರೆಲ್ಲರು ಕೊಡುಗೆಗಳನ್ನು ಕೊಟ್ಟರು; ಬೆಳ್ಳಿ ಸಾಮಾನುಗಳು, ಬಂಗಾರದ ಆಭರಣಗಳು, ಪಶುಪ್ರಾಣಿಗಳು, ಶ್ರೇಷ್ಠವಸ್ತುಗಳು, ಇತ್ಯಾದಿಗಳನ್ನು ನೀಡಿ ಸಹಕರಿಸಿದರು.
ಕೀರ್ತನೆ 126: 1-3, 5-6
1 : ಸೆರೆಯಿಂದೆಮ್ಮನು ಪ್ರಭು ಸಿಯೋನಿಗೆ ಮರಳಿಸಿದಾಗ / ಅದೊಂದು ಕನಸು ಕಂಡಂತಿತ್ತು ನಮಗೆ ಆವಾಗ
2 : ಉಕ್ಕಿತಾಗ ಮುಖತುಂಬ ನಗು, ಬಾಯ್ತುಂಬ ಹರ್ಷಗೀತೆ / “ಎಂಥ ಮಹತ್ಕಾರ್ಯವೆಸಗಿದನಾ ಪ್ರಭು ಇವರ ಪರತೆ” / ಇಂತೆಂದು ಆಡಿಕೊಂಡರು ತಂತಮ್ಮೊಳಗೆ ಅನ್ಯಜನತೆ
3 : ಪ್ರಭು ನಮಗೆ ಮಹತ್ಕಾರ್ಯ ಮಾಡಿದುದು ಖಚಿತ / ಎಂತಲೆ ನಾವಾನಂದಭರಿತರಾಗುವುದು ಉಚಿತ
4 : ಬತ್ತಿದ ನದಿಯಲಿ ನೀರು ಮರಳಿ ಉಕ್ಕಿ ಹರಿವಂತೆ / ನೀಡು ಸಿರಿ ಸೌಭಾಗ್ಯ, ಹೇ ಪ್ರಭೂ, ನಮಗೆ ಮತ್ತೆ
5 : ಅಳುತಳುತಾ ಬಿತ್ತುವವರು / ನಲಿನಲಿಯುತ್ತಾ ಕೊಯ್ಯುವರು
6 : ದುಃಖಿಸುತ್ತಾ ಬೀಜಬಿತ್ತಲು ಹೋದವನು | ಹರ್ಷಿಸುತ್ತಾ ಕೊಯ್ದು ತರುವನು ತೆನೆಗಳನು ||
ಶುಭಸಂದೇಶ - ಲೂಕ 8: 16-18
“ದೀಪವನ್ನು ಹಚ್ಚಿ ಯಾರೂ ಅದನ್ನು ಪಾತ್ರೆಯಿಂದ ಮುಚ್ಚಿಡುವುದಿಲ್ಲ; ಮಂಚದ ಕೆಳಗೆ ಬಚ್ಚಿಡುವುದಿಲ್ಲ. ಮನೆಯೊಳಕ್ಕೆ ಬರುವವರಿಗೆ ಬೆಳಕು ಕಾಣಿಸುವಂತೆ ಅದನ್ನು ದೀಪಸ್ತಂಭದ ಮೇಲಿಡುತ್ತಾರೆ. ಬಟ್ಟಬಯಲಾಗದ ಮುಚ್ಚು ಮರೆಯಿಲ್ಲ; ಬೆಳಕಿಗೆ ಬಾರದ ಹಾಗೂ ರಟ್ಟಾಗದ ಗುಟ್ಟಿಲ್ಲ. “ಆದ್ದರಿಂದ ನೀವು ಕಿವಿಕೊಡುವಾಗ ಎಚ್ಚರಿಕೆಯಿಂದಿರಿ; ಏಕೆಂದರೆ, ಉಳ್ಳವನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ, ಇಲ್ಲದವನಿಂದ ತನಗಿದೆ ಎಂದುಕೊಳ್ಳುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ,” ಎಂದರು.
ಚಿಂತನೆ
ಸಂತ
ಪಾದ್ರೆ ಪಿಯೊ (ಯಾಜಕ)
ದೀಪ ಬೆಳಕನ್ನು
ನೀಡುವ ಸಾಧನ ಬೆಳಕು ಕತ್ತಲನ್ನು ಓಡಿಸುತ್ತದೆ. ಪ್ರಭುಕ್ರಿಸ್ತರು ಬಂದರು ನಮ್ಮ ಪಾಪವೆಂಬ ಕತ್ತಲೆಯನ್ನು
ಹೋಗಲಾಡಿಸಿ ನಮ್ಮ ಆತ್ಮಕ್ಕೆ ಬೆಳಕನ್ನು ತಂದರು. ಇಂದಿನ ಶುಭಸಂದೇಶದಲ್ಲಿ ಕ್ರಿಸ್ತರು ನಿಮ್ಮ ಜ್ಯೋತಿ
ಜನರ ಮುಂದೆ ಬೆಳಗಲಿ. ನೀವು ಜಗತ್ತಿಗೆ ಜ್ಯೋತಿ ಎನ್ನುತ್ತಾರೆ.
ಪ್ರಭುಯೇಸು
ದೀಪದ ಮಹತ್ವವನ್ನು ನಮಗೆ ತಿಳಿಯಪಡಿಸುತ್ತಾರೆ. ಕಷ್ಟದಲ್ಲಿರುವವರ, ರೋಗಿಗಳ, ಅನಾಥರ, ನಿರ್ಗತಿಕರ,
ಬಡವರ, ವೃದ್ಧರ ಸೇವೆ ಮಾಡಿ, ಅವರ ಬಾಳಲ್ಲಿ ಬೆಳಕಾಗಿ ಜೀವಿಸಬೇಕು. ಹೇಗೆ ಯೇಸು ಮಾನವರ ಬಾಳಿನಲ್ಲಿ
ಬೆಳಕಾದರೋ ಹಾಗೆಯೇ ನಾವು ಕಷ್ಟದಲ್ಲಿರುವವರಿಗೆ ನೆರವಾಗಿ ಸಹಾಯಮಾಡಿ, ಬೆಳಕಾಗಬೇಕು. ಹೇಗೆ ಮೇಣದ ಬತ್ತಿಯು
ತನ್ನನ್ನೂ ತಾನೇ ಬರಿದು ಮಾಡಿಕೊಂಡು ಇತರರಿಗೆ ಬೆಳಕುನೀಡುತ್ತದೋ ಅದೇ ರೀತಿ ನಾವು ಸಹ ಇತರರ ಬಾಳನ್ನು
ಬೆಳಗಿಸಬೇಕು.
No comments:
Post a Comment