ಸಾಧಾರಣ ಕಾಲದ ಇಪ್ಪತ್ತಾರನೇ ವಾರ ಮಂಗಳವಾರ
1/ಬಿಳಿ/ಮಂಗಳ/ಯೇಸುವಿನ ಕಿರಿಯ ಪುಷ್ಟ ಸಂತ ತೆರೇಸಾ
(ಕ ಮತ್ತು ಧ.ಪಂ) ಹಬ್ಬ
1ನೇ ವಾಚನ - ಜೆಕಾ 8:2೦-23
ಕೀರ್ತನೆ - 87: 1-7
ಶುಭಸಂದೇಶ - ಲೂಕ 9: 51-56
1ನೇ ವಾಚನ - ಜೆಕಾ 8:2೦-23
1/ಬಿಳಿ/ಮಂಗಳ/ಯೇಸುವಿನ ಕಿರಿಯ ಪುಷ್ಟ ಸಂತ ತೆರೇಸಾ
(ಕ ಮತ್ತು ಧ.ಪಂ) ಹಬ್ಬ
1ನೇ ವಾಚನ - ಜೆಕಾ 8:2೦-23
ಕೀರ್ತನೆ - 87: 1-7
ಶುಭಸಂದೇಶ - ಲೂಕ 9: 51-56
1ನೇ ವಾಚನ - ಜೆಕಾ 8:2೦-23
ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ: “ಇನ್ನು ಮುಂದೆ ಜನಾಂಗಗಳೂ ಹಲವು ನಗರ ನಿವಾಸಿಗಳೂ ಜೆರುಸಲೇಮಿಗೆ ಬರುವರು. ‘ಸೇನಾಧೀಶ್ವರ ಸರ್ವೇಶ್ವರಸ್ವಾಮಿಯನ್ನು ಆರಾಧಿಸಲು, ಅವರ ಆಶೀರ್ವಾದವನ್ನು ಬೇಡಲು ದೇವಾಲಯಕ್ಕೆ ಹೋಗುತ್ತಿದ್ದೇವೆ. ನಮ್ಮೊಡನೆ ಬನ್ನಿ, ಹೋಗೋಣ’ ಎಂದು ಒಂದು ಊರಿನವರು ಮತ್ತೊಂದೂರಿನವರಿಗೆ ಹೇಳುವರು. “ನಾನಾ ದೇಶಗಳಿಂದ, ಪ್ರಬಲ ರಾಷ್ಟ್ರಗಳಿಂದ ಸೇನಾಧೀಶ್ವರ ಸರ್ವೇಶ್ವರಸ್ವಾಮಿಯನ್ನು ಆರಾಧಿಸಿ, ಅವರ ಆಶೀರ್ವಾದವನ್ನು ಕೋರಲು ಜನರು ಜೆರುಸಲೇಮಿಗೆ ಬರುವರು. ಆ ದಿನದಲ್ಲಿ ವಿವಿಧ ಭಾಷೆಗಳನ್ನಾಡುವ ರಾಷ್ಟ್ರಗಳಿಂದ ಹತ್ತು ಹತ್ತು ಮಂದಿ ಬಂದು ಯೆಹೂದ್ಯನೊಬ್ಬನ ಸೆರಗನ್ನು ಹಿಡಿದುಕೊಂಡು, ‘ನಾವೂ ನಿಮ್ಮೊಂದಿಗೆ ಬರುತ್ತೇವೆ. ಏಕೆಂದರೆ ದೇವರು ನಿಮ್ಮೊಡನೆ ಇದ್ದಾರೆ ಎಂಬ ಸುದ್ದಿಯನ್ನು ಕೇಳಿದ್ದೇವೆ’ ಎಂದು ಹೇಳುವರು. ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ.”
ಕೀರ್ತನೆ - 87: 1-7
1 : ಪವಿತ್ರ ಪರ್ವತದಲಿ ಕರ್ತನು / ಸ್ಥಾಪಿಸಿಹನು ತನ್ನ ನಗರವನು //
2 : ಯಕೋಬ ವಂಶದ ಸಕಲ ನಿವಾಸಿಗಳಿಗಿಂತ / ಸಿಯೋನ್ ದ್ವಾರಗಳು ಆತನಿಗೆ ಸುಪ್ರೀತ //
3 : ದೈವ ಶ್ರೀನಗರವೇ, ಕೇಳು ಇವನ್ನು / ನಿನ್ನ ಕುರಿತ ಅತಿಶಯೋಕ್ತಿಗಳನು:
4 : “ನನಗೆ ಮಣಿಯುವ ರಾಷ್ಟ್ರಗಳಲಿ / ಈಜಿಪ್ಟ್, ಬಾಬೆಲ್ ದೇಶಗಳನು ಲೆಕ್ಕಿಸುವೆ // ಜೆರುಸಲೇಮಿನ ನಿವಾಸಿಗಳಲಿ / ಪಿಲಿಷ್ಟಿಯ, ಟೈರ್, ಎಥಿಯೋಪಿಯ ಜನ ಸೇರಿವೆ //
5 : ಸಕಲ ಜನಾಂಗಗಳ ಜನನಿ ಸಿಯೋನ್ ನಗರವೇ / ಅದನು ಸ್ಥಾಪಿಸಿದವ ಪರಾತ್ಪರ ಪ್ರಭುವೇ” //
6 : ಪ್ರಭು ಪಟ್ಟಿಮಾಡುವಾಗ ಸಕಲ ಜಾತಿಜನಾಂಗಗಳನು / ನಿನ್ನ ಜನಾಂಗವೆಂದೇ ಪರಿಗಣಿಸುವನು ಪ್ರತಿಯೊಂದನು //
7 : ಗಾಯಕ ನರ್ತಕರೂ ಹಾಡುವರೀ ಹಾಡ / “ನಮ್ಮೆಲ್ಲರ ಜೀವದೊರೆತೆ ನೀನೇ ನೋಡ” //
ಶುಭಸಂದೇಶ - ಲೂಕ 9: 51-56
ತಾವು ಸ್ವರ್ಗಾರೋಹಣವಾಗುವ ದಿನಗಳು ಸಮೀಪಿಸಲು ಯೇಸುಸ್ವಾಮಿ ಜೆರುಸಲೇಮಿಗೆ ಅಭಿಮುಖವಾಗಿ ಹೊರಡಲು ನಿರ್ಧರಿಸಿದರು. ಅಲ್ಲದೆ ತಮಗೆ ಮುಂದಾಗಿ ದೂತರನ್ನು ಕಳುಹಿಸಿದರು. ಇವರು ಹೊರಟು ಯೇಸುವಿಗೆ ಬೇಕಾದುದನ್ನು ಸಿದ್ಧಮಾಡಲು ಸಮಾರಿಯದ ಒಂದು ಹಳ್ಳಿಗೆ ಬಂದರು. ಯೇಸು ಜೆರುಸಲೇಮಿಗೆ ಹೋಗುತ್ತಿದ್ದ ಕಾರಣ ಅವರನ್ನು ಅಲ್ಲಿಯ ಜನರು ಬರಗೊಳಿಸಲಿಲ್ಲ. ಇದನ್ನು ಕಂಡು ಶಿಷ್ಯರಾದ ಯಕೋಬ ಮತ್ತು ಯೊವಾನ್ನ, “ಪ್ರಭೂ, ಆಕಾಶದಿಂದ ಅಗ್ನಿಮಳೆ ಸುರಿದು ಇವರನ್ನು ನಾಶ ಮಾಡಲಿ ಎಂದು ನಾವು ಆಜ್ಞೆಮಾಡಬಹುದಲ್ಲವೇ?” ಎಂದರು. ಯೇಸು ಅವರ ಕಡೆ ತಿರುಗಿ, “ನೀವು ಎಂಥ ಸ್ವಭಾವಿಗಳೆಂದು ನಿಮಗೇ ತಿಳಿಯದು. ನರಪುತ್ರನು ಬಂದಿರುವುದು ಮಾನವ ಜೀವಿಗಳ ವಿನಾಶಕ್ಕೆ ಅಲ್ಲ, ಉದ್ಧಾರಕ್ಕೆ” ಎಂದು ಅವರನ್ನು ಖಂಡಿಸಿದರು. ಅನಂತರ ಯೇಸು ಮತ್ತು ಶಿಷ್ಯರು ಬೇರೆ ಹಳ್ಳಿಗೆ ಹೋದರು.
ಚಿಂತನೆ
ಯೇಸುವಿನ
ಕಿರಿಯಪುಷ್ಪ ಸಂತ ತೆರೇಸ (ಕನ್ಯೆ ಮತ್ತು ಧರ್ಮಸಭೆಯ ಪಂಡಿತೆ)
ಮರಿಯ ಫ್ರಾರಿಕೋಯಿಸ್
ತೆರೇಸಾ ಹುಟ್ಟಿದ್ದು ೨ನೇ ಜನವರಿ ೧೮೭೩ರಲ್ಲಿ. ಲೂಯಿ ಮತ್ತು ಜೆಲಿ ಮಾರ್ಟಿನ್ ದಂಪತಿಯ ೯ ಮಕ್ಕಳಲ್ಲಿ ಕೊನೆಯವಳಾಗಿ ಹುಟ್ಟಿದಳು. ತೆರೇಸಾಳ
ಬದುಕು ನೋವಿನಿಂದ ಕೂಡಿತ್ತು. ನಾಲ್ಕುವರೆ ವರ್ಷದ ಮಗುವಾಗಿದ್ದಾಗ ತಾಯಿ ಎದೆಯ ಕ್ಯಾನ್ಸರ್‍ನಿಂದ ತೀರಿಕೊಂಡಳು.
೧೬ ವರ್ಷದ ಅಕ್ಕನೇ ತಾಯಿಯಾದಳು. ಆದರೆ ಕೇವಲ ೫ ವರ್ಷಗಳಲ್ಲಿ ಅವಳೂ ಮನೆಬಿಟ್ಟು ಕಾನ್ವೆಂಟ್ ಸೇರಿದಳು.
ತನ್ನ ಏಕೈಕ ಅಕ್ಕ ಸೆಲಿನ್ ಮತ್ತು ತಂದೆ ಜೊತೆ ಬೆಳೆದ ತೆರೇಸಾ ತನ್ನ ೧೪ನೇ ವಯಸ್ಸಿಗೆ ಕಾನ್ವೆಂಟ್
ಸೇರುವ ಬಯಕೆ ವ್ಯಕ್ತಪಡಿಸಿದಳು. ಕಾನ್ವೆಂಟಿನ ಮುಖ್ಯಾಧಿಕಾರಿಗಳು ಮತ್ತು ಸ್ಥಳೀಯ ಧರ್ಮಾಧ್ಯಕ್ಷರು
ಅನುಮತಿ ನೀಡದಿದ್ದಾಗ ಜಗದ್ಗುರುಗಳ ಬಳಿ ಸಾಗಿ ತನ್ನ ಬಯಕೆ ವ್ಯಕ್ತಪಡಿಸುತ್ತಾಳೆ. ೧೮೮೨, ೯ನೇ ಏಪ್ರಿಲ್
ಆಕೆ ಕಾನ್ವೆಂಟ್ ಸೇರಿದಳು.
`ಪ್ರೀತಿಗಾಗಿ ಒಂದು
ಗುಂಡು ಸೂಜಿಯನ್ನು ಹೆಕ್ಕಿದರೂ ಒಂದು ಆತ್ಮವನ್ನು ರಕ್ಷಿಸಬಹುದು ಎಂದು ನಂಬಿದ್ದ ತೆರೇಸಾ ಕಾನ್ವೆಂಟ್‍ನ
ಅಡುಗೆ ಮನೆಯಲ್ಲಿ ಸಹಾಯ ಮಾಡುವುದು, ಬಟ್ಟೆ ಒಗೆಯುವ, ಇಸ್ತ್ರೀ ಮಾಡುವ ಕೆಲಸವನ್ನು ಪ್ರೀತಿಯಿಂದ ಮಾಡುತ್ತಾಳೆ.
ಚಿಕ್ಕ ಕೆಲಸವಾದರೂ ಪ್ರೀತಿಯಿಂದ ಮಾಡಬೇಕೆಂಬುದನ್ನು ಈಕೆಯಿಂದ ಕಲಿಯಬೇಕಿದೆ.
No comments:
Post a Comment