ಶನಿವಾರ/ಹಸಿರು/ಸಾಧಾರಣ ಕಾಲದ ಮೊದಲನೇ ವಾರ
1ನೇ ವಾಚನ - 1 ಸಮುವೇಲ 9:1-4, 17-19; 10:1
ಕೀರ್ತನೆ - 21: 2-3, 4- 5, 6-7
ಶುಭಸಂದೇಶ - ಮಾರ್ಕ 2: 13-17
-----------------------
1ನೇ ವಾಚನ - 1 ಸಮುವೇಲ 9:1-4, 17-19; 10:1
1 : ಬೆನ್ಯಾವಿೂನ ಕುಲದಲ್ಲಿ ಕೀಷನೆಂಬ ಒಬ್ಬ ಐಶ್ವರ್ಯವಂತನಿದ್ದನು. ಇವನು ಚೆರೋರನ ಮಗನೂ ಬೆಕೋರತನ ಮೊಮ್ಮಗನೂ ಆಫೀಹನ ಮರಿಮಗನೂ ಆದ ಅಬೀಯೇಲನ ಮಗ.
2 : ಇವನಿಗೆ ಸೌಲನೆಂಬ ಒಬ್ಬ ಮಗನಿದ್ದನು. ಈ ಸೌಲನು ಉತ್ತಮನೂ ಇಸ್ರಯೇಲರಲ್ಲೆಲ್ಲ ಅತಿಸುಂದರನೂ ಆಗಿದ್ದನು; ಜನರ ಗುಂಪಿನಲ್ಲಿ ಅವನ ಹೆಗಲೂ ತಲೆಯೂ ಕಾಣುವಷ್ಟು ಎತ್ತರ ಆಗಿದ್ದನು.
3 : ಒಂದು ದಿನ ಸೌಲನ ತಂದೆಯಾದ ಕೀಷನ ಕತ್ತೆಗಳು ಕಾಣದೆಹೋದವು. ಅವನು ತನ್ನ ಮಗ ಸೌಲನಿಗೆ, “ನೀನೆದ್ದು ಆಳುಗಳಲ್ಲೊಬ್ಬನನ್ನು ಕರೆದುಕೊಂಡು ಕತ್ತೆಗಳನ್ನು ಹುಡುಕಲು ಹೋಗು,” ಎಂದು ಹೇಳಿದನು.
4 : ಅದರಂತೆಯೇ ಸೌಲನು ಹೊರಟು ಎಫ್ರಯಿಮ್ ಪರ್ವತಪ್ರಾಂತ್ಯ, ಹಾಗು ಶಾಲಿಷಾನಾಡು ಇವುಗಳಲ್ಲಿ ಸುತ್ತಾಡಿದರೂ ಅವು ಸಿಕ್ಕಲಿಲ್ಲ. ಶಾಲೀಮ್, ಬೆನ್ಯಾವಿೂನ ಈ ಪ್ರಾಂತ್ಯಗಳಲ್ಲಿಯೂ ಸಿಕ್ಕಲಿಲ್ಲ.
1ನೇ ವಾಚನ - 1 ಸಮುವೇಲ 9:1-4, 17-19; 10:1
ಕೀರ್ತನೆ - 21: 2-3, 4- 5, 6-7
ಶುಭಸಂದೇಶ - ಮಾರ್ಕ 2: 13-17
-----------------------
1ನೇ ವಾಚನ - 1 ಸಮುವೇಲ 9:1-4, 17-19; 10:1
1 : ಬೆನ್ಯಾವಿೂನ ಕುಲದಲ್ಲಿ ಕೀಷನೆಂಬ ಒಬ್ಬ ಐಶ್ವರ್ಯವಂತನಿದ್ದನು. ಇವನು ಚೆರೋರನ ಮಗನೂ ಬೆಕೋರತನ ಮೊಮ್ಮಗನೂ ಆಫೀಹನ ಮರಿಮಗನೂ ಆದ ಅಬೀಯೇಲನ ಮಗ.
2 : ಇವನಿಗೆ ಸೌಲನೆಂಬ ಒಬ್ಬ ಮಗನಿದ್ದನು. ಈ ಸೌಲನು ಉತ್ತಮನೂ ಇಸ್ರಯೇಲರಲ್ಲೆಲ್ಲ ಅತಿಸುಂದರನೂ ಆಗಿದ್ದನು; ಜನರ ಗುಂಪಿನಲ್ಲಿ ಅವನ ಹೆಗಲೂ ತಲೆಯೂ ಕಾಣುವಷ್ಟು ಎತ್ತರ ಆಗಿದ್ದನು.
3 : ಒಂದು ದಿನ ಸೌಲನ ತಂದೆಯಾದ ಕೀಷನ ಕತ್ತೆಗಳು ಕಾಣದೆಹೋದವು. ಅವನು ತನ್ನ ಮಗ ಸೌಲನಿಗೆ, “ನೀನೆದ್ದು ಆಳುಗಳಲ್ಲೊಬ್ಬನನ್ನು ಕರೆದುಕೊಂಡು ಕತ್ತೆಗಳನ್ನು ಹುಡುಕಲು ಹೋಗು,” ಎಂದು ಹೇಳಿದನು.
4 : ಅದರಂತೆಯೇ ಸೌಲನು ಹೊರಟು ಎಫ್ರಯಿಮ್ ಪರ್ವತಪ್ರಾಂತ್ಯ, ಹಾಗು ಶಾಲಿಷಾನಾಡು ಇವುಗಳಲ್ಲಿ ಸುತ್ತಾಡಿದರೂ ಅವು ಸಿಕ್ಕಲಿಲ್ಲ. ಶಾಲೀಮ್, ಬೆನ್ಯಾವಿೂನ ಈ ಪ್ರಾಂತ್ಯಗಳಲ್ಲಿಯೂ ಸಿಕ್ಕಲಿಲ್ಲ.
17 : ಸಮುವೇಲನು ಸೌಲನನ್ನು ಕಂಡಾಗ ಸರ್ವೇಶ್ವರ ಅವನಿಗೆ, “ನಾನು ತಿಳಿಸಿದ್ದ ವ್ಯಕ್ತಿ ಇವನೇ; ಇವನೇ ನನ್ನ ಪ್ರಜೆಯನ್ನು ಆಳತಕ್ಕವನು,” ಎಂದು ಸೂಚಿಸಿದರು.
18 : ಊರಬಾಗಿಲಿಗೆ ಬಂದ ಸೌಲನು ಎದುರಿಗೆ ಬಂದ ಸಮುವೇಲನನ್ನು ನೋಡಿ, “ದಾರ್ಶನಿಕರ ಮನೆ ಎಲ್ಲಿದೆ ಎಂಬುದನ್ನು ದಯವಿಟ್ಟು ತಿಳಿಸುವಿರಾ?” ಎಂದನು.
19 : ಸಮುವೇಲನು, “ನಾನೇ ಆ ದಾರ್ಶನಿಕ; ನೀನು ನನ್ನ ಜೊತೆ ಗುಡ್ಡಕ್ಕೆ ಬಾ; ನೀನು ಈ ಹೊತ್ತು ನನ್ನ ಸಂಗಡ ಊಟಮಾಡಬೇಕು. ನಿನ್ನ ಚಿಂತೆಯನ್ನೆಲ್ಲಾ ಪರಿಹರಿಸಿ ನಾಳೆ ಬೆಳಿಗ್ಗೆ ನಿನ್ನನ್ನು ಕಳುಹಿಸಿಕೊಡುವೆನು.
10: 1 ಆ ಮೇಲೆ ಸಮುವೇಲನು ಓಲಿವ ಎಣ್ಣೇಕುಪ್ಪಿಯಿಂದ ಅವನ ತಲೆಯ ಮೇಲೆ ತೈಲವನ್ನು ಹೊಯ್ದು, ಅವನನ್ನು ಮುದಿಟ್ಟು ಅವನಿಗೆ, " ಸರ್ವೇಶ್ವರ ತಮ್ಮ ಜನರ ಮೇಲೆ ರಾಜ್ಯವಾಳಲು ನಿಜವಾಗಿ ನಿನ್ನನ್ನು ಅಭಿಷೇಕಿಸಿದ್ದಾರೆ" ಎಂದನು.
---------------------
ಕೀರ್ತನೆ - 21: 2-3, 4- 5, 6-7
2 : ಆತನ ಮನದಾಸೆಯನು ನೀ ಪೂರೈಸಿದೆ / ಆತನಧರ ಬಯಕೆಯನು ಅನುಗ್ರಹಿಸಿದೆ //
3 : ನೀನಾತನನು ಸ್ವಾಗತಿಸಿದೆ ಶುಭಾಶಯ ದೊಂದಿಗೆ / ಚಿನ್ನದ ಕಿರೀಟವನು ಮುಡಿಸಿದೆ ಆತನ ಶಿರಸ್ಸಿಗೆ //
4 : ಕೋರಿದನಾತನು ಜೀವಮಾನಕಾಲವನು / ನೀನಿತ್ತೆ ಯುಗಯುಗಾಂತರ ದಾಯುಷ್ಯವನು //
5 : ನಿನ್ನ ನೆರವಿಂದೇರಿತು ಆತನ ಘನತೆ / ಶೋಭೆ, ಪ್ರಭಾವಗಳ ನೀನವನಿಗಿತ್ತೆ //
6 : ಅಮರ ಭಾಗ್ಯಗಳನು ನೀನನುಗ್ರಹಿಸಿದೆ / ಶ್ರೀಸನ್ನಿಧಿಯಲಾತನನು ತೋಷಗೊಳಿಸಿದೆ //
7 : ಅರಸನಿಗಿದೆ ಭರವಸೆ ಪ್ರಭುವಿನಲಿ / ಅವನಚಲನು, ಪರಾತ್ಪರನ ಕೃಪೆಯಲಿ //
----------------
ಶುಭಸಂದೇಶ - ಮಾರ್ಕ 2: 13-17
13 : ಯೇಸುಸ್ವಾಮಿ ಪುನಃ ಗಲಿಲೇಯ ಸರೋವರದ ತೀರಕ್ಕೆ ಹೋದರು. ಜನರ ಗುಂಪು ಅವರನ್ನು ಸುತ್ತುಗಟ್ಟಿತು. ಯೇಸು ಅವರಿಗೆ ಪ್ರಬೋಧಿಸಿದರು.
14 : ಅಲ್ಲಿಂದ ಹೊರಟುಹೋಗುತ್ತಿರುವಾಗ, ಅಲ್ಫಾಯನ ಮಗನಾದ ಲೇವಿಯು ಸುಂಕ ವಸೂಲಿಗಾಗಿ ಉಕ್ಕಡದಲ್ಲಿ ಕುಳಿತಿರುವುದನ್ನು ಯೇಸು ಕಂಡರು. “ನನ್ನನ್ನು ಹಿಂಬಾಲಿಸು,” ಎಂದು ಹೇಳಿ ಕರೆದರು. ಲೇವಿ ಎದ್ದು ಅವರನ್ನು ಹಿಂಬಾಲಿಸಿದನು.
15 : ತದನಂತರ ಯೇಸು ಲೇವಿಯ ಮನೆಯಲ್ಲಿ ಊಟಕ್ಕೆ ಕುಳಿತಿದ್ದರು. ಬಹುಮಂದಿ ಸುಂಕದವರು, ಪಾಪಿಷ್ಠರು, ಅಲ್ಲಿಗೆ ಬಂದರು. ಇವರೆಲ್ಲರೂ ಯೇಸು ಮತ್ತು ಅವರ ಶಿಷ್ಯರ ಪಂಕ್ತಿಯಲ್ಲೇ ಊಟಕ್ಕೆ ಕುಳಿತರು. ಇಂಥವರು ಬಹುಮಂದಿ ಯೇಸುವನ್ನು ಹಿಂಬಾಲಿಸುತ್ತಿದ್ದರು.
16 : ಫರಿಸಾಯ ಪಂಥಕ್ಕೆ ಸೇರಿದ್ದ ಧರ್ಮಶಾಸ್ತ್ರಿಗಳಲ್ಲಿ ಕೆಲವರು, ಸುಂಕದವರ ಮತ್ತು ಇತರ ಪಾಪಿಗಳ ಪಂಕ್ತಿಯಲ್ಲಿ ಯೇಸು ಊಟ ಮಾಡುವುದನ್ನು ಕಂಡು, “ಈತನು ಇಂಥಾ ಬಹಿಷ್ಕøತ ಜನರ ಜೊತೆಯಲ್ಲಿ ಊಟ ಮಾಡುವುದೇಕೆ?” ಎಂದು ಯೇಸುವಿನ ಶಿಷ್ಯರೊಡನೆ ಆಕ್ಷೇಪಿಸಿದರು.
17 : ಇದನ್ನು ಕೇಳಿಸಿಕೊಂಡ ಯೇಸು ಅವರಿಗೆ, “ವೈದ್ಯನ ಅವಶ್ಯಕತೆ ಇರುವುದು ರೋಗಿಗಳಿಗೆ, ಆರೋಗ್ಯವಂತರಿಗಲ್ಲ; ನಾನು ಕರೆಯಲು ಬಂದಿರುವುದು ಧರ್ಮಿಷ್ಠರನ್ನಲ್ಲ, ಪಾಪಿಷ್ಠರನ್ನು,” ಎಂದರು.
------------------
ಚಿಂತನೆ
ನಾನು ಬಂದಿರುವುದು ಧರ್ಮಿಷ್ಟರಿಗಾಗಿ ಅಲ್ಲ; ಪಾಪಿಗಳಿಗಾಗಿ
ಸುಂಕ ವಸೂಲಿಮಾಡುವುದು ಯೆಹೂದ್ಯರಿಗೆ ಒಂದು ಹೇಯ ಕೃತ್ಯವಾಗಿತ್ತು. ಏಕೆಂದರೆ, ಯೆಹೂದ್ಯರು ದೇವರಿಗಲ್ಲದೆ ಬೇರೆ ಯಾರಿಗೂ ಸಹ ಸುಂಕ ನೀಡುವುದು ತಪ್ಪು ಎಂದು ಭಾವಿಸಿದ್ದರು ಹಾಗೂ ಯೇಸುವಿನ ಕಾಲದಲ್ಲಿ ಯೆಹೂದ್ಯರನ್ನು ರೋಮನ್ನರು ಆಳುತ್ತಿದ್ದರು. ರೋಮನ್ನರ ಆಳ್ವಿಕೆಯಿಂದ ಯೆಹೂದ್ಯರು ನೊಂದಿದ್ದರು, ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದರು, ಗಾಯದ ಮೇಲೆ ಬರೆಯಂತೆ ನಾನಾ ರೀತಿಯ ತೆರಿಗೆ ವಿಧಿಸಿದ್ದರು. ಸುಂಕ ವಸೂಲಿಯವರು ತಮ್ಮ ಜನರಿಂದ ಹೆಚ್ಚಿನ ಸುಂಕ ವಸೂಲಿ ಮಾಡಿ ತಮ್ಮನ್ನು ದಬ್ಬಾಳಿಕೆ ಮಾಡುತ್ತಿದ್ದ ರೋಮನ್ನರಿಗೆ ನೀಡುತ್ತಿದ್ದರು. ಹಾಗಾಗಿ ಜನಸಾಮಾನ್ಯರ ದೃಷ್ಟಿಯಲ್ಲಿ ಸುಂಕದವರು ಪಾಪಿಗಳಾಗಿದ್ದರು. ಲೇವಿಯನ್ನು ಹಿಂಬಾಲಿಸಲು ಕರೆಯುವುದರ ಮೂಲಕ `ನಾನು ಬಂದಿರುವುದು ಧರ್ಮಿಷ್ಟರಿಗಲ್ಲ, ಪಾಪಿಷ್ಟರನ್ನು ಕರೆಯಲು' ಎಂದು ತಿಳಿಸುತ್ತಾರೆ. ಲೇವಿ ತನ್ನ ಹಳೆಯ ಬದುಕನ್ನು ತೊರೆದು ಕ್ರಿಸ್ತನನ್ನು ಹಿಂಬಾಲಿಸಿದಂತೆ ನಾವು ಸಹ ನಮ್ಮ ಪಾಪಮಯ ಬದುಕನ್ನು ತೊರೆದು ಕ್ರಿಸ್ತನನ್ನು ಹಿಂಬಾಲಿಸೋಣ.
------------------
ನಮಗೆ ಸಿಕ್ಕಿರುವ ಕರೆಗೆ ಕೃತಜ್ಞರಾಗಿ ಬಾಳೋಣ.
ಅಲ್ಫಾಯನ ಮಗನಾದ ಲೇವಿಯನ್ನು ಪ್ರಭುಯೇಸು "ನನ್ನನ್ನು
ಹಿಂಬಾಲಿಸು" ಎಂದು ಕರೆದಾಗ ಲೇವಿಯು ಒಂದಿಷ್ಟೂ ಹಿಂಜರಿಯದೆ, ತನ್ನ ಸ್ಥಾನವನ್ನು ಬಿಟ್ಟು ಯೇಸುವನ್ನು ಹಿಂಬಾಲಿಸುತ್ತಾನೆ. ಇದು ಲೇವಿಯು ಯೇಸುವಿನಲ್ಲಿಟ್ಟ ನಂಬಿಕೆಯನ್ನು ತೋರ್ಪಡಿಸುವುದರೊಂದಿಗೆ, ಯೇಸುವು, ಪಾಪಿಷ್ಟರಿಗೆ ಯೇಸುವು ತೋರಿದ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ. ತನ್ನ ಪ್ರೀತಿ ಮತ್ತು ಕ್ಷಮೆಯನ್ನು ಅತೀವ ಹತಾಶೆಯಲ್ಲಿದ್ದವರಿಗೆ ಉಣಬಡಿಸಿದವರು ಯೇಸು. ನಾನು ಪಾಪಿಯಾದರೂ ದೇವರು ನನ್ನನ್ನು ಪ್ರೀತಿಸುತ್ತಾನೆ ಮತ್ತು ನನ್ನನ್ನು ನಿತ್ಯಜೀವದೆಡೆಗೆ ಕರೆದೊಯುತ್ತಾನೆ - ಇದು ನಮ್ಮ ವಿಶ್ವಾಸ ಬಾಳಿನ ಸರಳ ಮತ್ತು ಸುಂದರವಾದ ಸತ್ಯ. ಪ್ರತಿದಿನ-ಪ್ರತಿಕ್ಷಣ ಕ್ರಿಸ್ತ ನಮ್ಮನ್ನು ಕೂಡ ಕರೆಯುತ್ತಾನೆ. ಪ್ರತಿಯೊಂದು ದೈವೀ ಕರೆಯೋಲೆಗೆ ತನ್ನದೇ ಆದ ಅನುಗ್ರಹವಿದೆ ಮತ್ತು ದೇವರ ಸಮ್ರಾಜ್ಯವನ್ನು ಕಟ್ಟುವ ಜವಾಬ್ದಾರಿಯಿದೆ. ಆತನ ಕರೆಗೆ ಕಿವಿಗೊಟ್ಟು, ನಮ್ಮ ಜೀವನದಲ್ಲಿ ಕ್ರಿಸ್ತನ ಅಸ್ತಿತ್ವವನ್ನು ಸಾಕ್ಷಾತ್ಕರಿಸುವ ಸಾಧನಗಳನ್ನಾಗಿ ದೇವರು ನಮ್ಮೆಲ್ಲರನ್ನು ಆಶೀರ್ವದಿಸಲಿ. ನಮಗೆ ಸಿಕ್ಕಿರುವ ಕರೆಗೆ ಕೃತಜ್ಞರಾಗಿ ಬಾಳೋಣ.
---------------
© 'ದನಿ' ಮಾಧ್ಯಮ ಮನೆ
ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ
No comments:
Post a Comment