15 ಫೆಬ್ರವರಿ 2020
ಶನಿವಾರ/ ಹಸಿರು / ಸಾಧಾರಣ ಕಾಲದ ಐದನೇ ವಾರ
1ನೇ ವಾಚನ - 1 ಅರಸುಗಳು 12:26-32; 13:33-34
ಕೀರ್ತನೆ - 106:6-7, 19-20,21-22
ಶುಭಸಂದೇಶ - ಮಾರ್ಕ 8: 1-10
------------------------------
1ನೇ ವಾಚನ - 1 ಅರಸುಗಳು 12:26-32; 13:33-34
26 : ಅವನು ತನ್ನಲ್ಲೇ, “ರಾಜ್ಯವು ಮತ್ತೆ ದಾವೀದನ ಕುಟುಂಬದವರಿಗೆ ಆಗುವುದೋ ಏನೋ;
27 : ಜನರು ಜೆರುಸಲೇಮಿನಲ್ಲಿರುವ ಸರ್ವೇಶ್ವರನ ಆಲಯಕ್ಕೆ ಬಲಿಯರ್ಪಣೆಗಾಗಿ ಹೋದರೆ ಅವರ ಮನಸ್ಸು ಅವರ ಒಡೆಯನೂ ಯೆಹೂದದ ಅರಸನೂ ಆದ ರೆಹಬ್ಬಾಮನ ಕಡೆಗೆ ತಿರುಗಬಹುದು; ಅವರು ನನ್ನನ್ನು ಕೊಂದು ಅವನ ಬಳಿಗೆ ಹೋಗಬಹುದು,” ಎಂದುಕೊಂಡನು.
28 : ಬಹಳವಾಗಿ ಆಲೋಚಿಸಿ, ಕಡೆಗೆ ಬಂಗಾರದ ಎರಡು ಹೋರಿಕರುಗಳ ಮೂರ್ತಿಗಳನ್ನು ಮಾಡಿಸಿ, ಇಸ್ರಯೇಲರಿಗೆ, “ನೀವು ಜಾತ್ರೆಗಾಗಿ ಜೆರುಸಲೇಮಿಗೆ ಹೋದದ್ದು ಇನ್ನು ಸಾಕು. ಇಗೋ, ನಿಮ್ಮನ್ನು ಈಜಿಪ್ಟಿನಿಂದ ಕರೆದು ತಂದ ದೇವರುಗಳು ಇಲ್ಲಿರುತ್ತವೆ,” ಎಂದು ಹೇಳಿ
29 : ಅವುಗಳಲ್ಲಿ ಒಂದನ್ನು ಬೇತೇಲಿನಲ್ಲಿರಿಸಿದನು; ಇನ್ನೊಂದನ್ನು ದಾನಿಗೆ ಕಳುಹಿಸಿದನು.
30 : ಇದು ಪಾಪಕ್ಕೆ ಕಾರಣವಾಯಿತು. ಜನರು ಈ ಎರಡನೆಯ ವಿಗ್ರಹವನ್ನು ಮೆರವಣಿಗೆಯಿಂದ ದಾನಿಗೆ ಒಯ್ದರು.
31 : ಇದಲ್ಲದೆ, ಅವನು ಪೂಜಾಗಿರಿಗಳ ಮೇಲೆ ಗುಡಿಗಳನ್ನು ಕಟ್ಟಿಸಿ, ಲೇವಿಯರಲ್ಲದ ಜನ ಸಾಮಾನ್ಯರನ್ನು ಯಾಜಕರನ್ನಾಗಿ ನೇಮಿಸಿದನು.
32 : ಅವನು ಎಂಟನೆಯ ತಿಂಗಳ ಹದಿನೈದನೆಯ ದಿವಸ, ನಾಡಿನ ಜಾತ್ರೆಗೆ ಸಮನಾದ ಜಾತ್ರೆ ಬೇತೇಲಿನಲ್ಲಿ ನಡೆಯಬೇಕೆಂದು ಅಪ್ಪಣೆ ಮಾಡಿದನು. ತಾನೂ ಅಲ್ಲಿಗೆ ಹೋಗಿ ಅಲ್ಲಿ ನಿಲ್ಲಿಸಿದ್ದ ಹೋರಿಕರುಗಳ ಮೂರ್ತಿಗಳಿಗೆ, ಪೀಠದ ಮೇಲೆ ಬಲಿ ಅರ್ಪಿಸಿದನು. ತಾನು ಏರ್ಪಡಿಸಿದ ಪೂಜಾಸ್ಥಳಗಳ ಯಾಜಕರನ್ನು ಬೇತೇಲಿನ ದೇವಸ್ಥಾನದ ಸೇವೆಗೆ ನೇಮಿಸಿದನು.
33 : ಇಷ್ಟಾದರೂ ಯಾರೊಬ್ಬಾಮನು ತನ್ನ ದುರ್ಮಾರ್ಗವನ್ನು ಬಿಡದೆ ಪದೇ ಪದೇ ಜನ ಸಾಮಾನ್ಯರನ್ನು ಉನ್ನತಸ್ಥಾನಗಳಿಗೆ ನೇಮಿಸಿದನು; ಮನಸ್ಸಿಗೆ ಬಂದವರನ್ನು ಪೂಜಾಸ್ಥಳಗಳ ಯಾಜಕರನ್ನಾಗಿ ಪ್ರತಿಷ್ಠಿಸಿದನು.
34 : ಈ ಕಾರಣ ಯಾರೊಬ್ಬಾಮನ ಕುಟುಂಬದವರು ಪಾಪಿಗಳಾಗಿ ಭೂಲೋಕದಿಂದ ವಿಸರ್ಜಿತರಾಗಿ ನಿರ್ನಾಮವಾದರು.
------------------------------
ಕೀರ್ತನೆ - 106:6-7, 19-20,21-22
6 : ನಮ್ಮ ಪಿತೃಗಳಂತೆಯೆ ಪಾಪಿಗಳು ನಾವು / ಅಕ್ರಮಗೈದೆವು, ಅಪರಾಧಿಗಳಾದೆವು //
7 : ಗ್ರಹಿಸಲಿಲ್ಲಾ ಪಿತೃಗಳು ನಿನ್ನದ್ಭುತಗಳನು ಈಜಿಪ್ಟಿನಲಿ / ಸ್ಮರಿಸಲಿಲ್ಲವರು ನಿನ್ನಚಲ ಪ್ರೇಮಾತಿಶಯಗಳನು ಅಲ್ಲಿ / ಬದಲಿಗೆ ಮಹೋನ್ನತನನೆ ಪ್ರತಿಭಟಿಸಿದರು ಕೆಂಗಡಲಬಳಿ //
19 : ಹೋರೇಬಿನಲಿ ಮಾಡಿದರು ಬಸವನನು / ಆರಾಧಿಸಿದರು ಆ ಎರಕದ ಶಿಲೆಯನು //
20 : ಈಪರಿ ತೊರೆದುಬಿಟ್ಟರು ತಮ್ಮ ಮಹಿಮಾ ದೇವರನು / ಆರಿಸಿಕೊಂಡರು ಹುಲ್ಲುತಿನ್ನುವ ಬಸವನ ವಿಗ್ರಹವನು //
21 : ಮರೆತುಬಿಟ್ಟರವರು ತಮ್ಮ ಮುಕ್ತಿದಾತ ದೇವನನು / ಈಜಿಪ್ಟಿನಲ್ಲಾತ ಎಸಗಿದ ಮಹತ್ಕಾರ್ಯಗಳನು //
22 : ಹಾಮನಾಡಿನಲಿ ಮಾಡಿದ ಅದ್ಭುತಗಳನು / ಕೆಂಗಡಬಳಿ ನಡೆದ ಘೋರ ಕೃತ್ಯಗಳನು //
-------------------------
ಶುಭಸಂದೇಶ - ಮಾರ್ಕ 8: 1-10
1 : ಜನರು ಪುನಃ ದೊಡ್ಡ ಸಂಖ್ಯೆಯಲ್ಲಿ ಬಂದು ನೆರೆದಿದ್ದರು. ಊಟಮಾಡಲು ಅವರಲ್ಲಿ ಆಹಾರವಿರಲಿಲ್ಲ.
2 : ಆಗ ಯೇಸುಸ್ವಾಮಿ ಶಿಷ್ಯರನ್ನು ಕರೆದು, “ಈ ಜನರು ಕಳೆದ ಮೂರು ದಿನಗಳಿಂದಲೂ ನನ್ನ ಬಳಿ ಇದ್ದಾರೆ; ಊಟಕ್ಕೆ ಇವರಲ್ಲಿ ಏನೂ ಇಲ್ಲ.
3 : ಇವರನ್ನು ಕಂಡಾಗ ನನ್ನ ಹೃದಯ ಕರಗುತ್ತದೆ. ಬರೀ ಹೊಟ್ಟೆಯಲ್ಲಿ ಮನೆಗೆ ಕಳುಹಿಸಿದರೆ ದಾರಿಯಲ್ಲಿ ಬಳಲಿ ಬಿದ್ದಾರು. ಕೆಲವರಂತೂ ಬಹುದೂರದಿಂದ ಬಂದಿದ್ದಾರೆ,” ಎಂದರು.
4 : ಅದಕ್ಕೆ ಶಿಷ್ಯರು, “ಇಷ್ಟು ದೊಡ್ಡ ಗುಂಪಿಗೆ ಆಗುವಷ್ಟು ರೊಟ್ಟಿಯನ್ನು ಈ ಅಡವಿಯಲ್ಲಿ ನಾವು ತರುವುದಾದರೂ ಎಲ್ಲಿಂದ?” ಎಂದು ಮರುನುಡಿದರು.
5 : ಯೇಸು, “ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?” ಎಂದು ಕೇಳಲು ಅವರು, “ಏಳು ಇವೆ,” ಎಂದರು.
6 : ಯೇಸು ಜನರ ಗುಂಪಿಗೆ ನೆಲದ ಮೇಲೆ ಕುಳಿತುಕೊಳ್ಳುವಂತೆ ಆಜ್ಞಾಪಿಸಿದರು. ಅನಂತರ ಆ ಏಳು ರೊಟ್ಟಿಗಳನ್ನು ತೆಗೆದುಕೊಂಡು ದೇವರಿಗೆ ಸ್ತೋತ್ರಸಲ್ಲಿಸಿ, ಅವುಗಳನ್ನು ಮುರಿದು, ಜನರ ಗುಂಪಿಗೆ ಬಡಿಸಲು ಶಿಷ್ಯರಿಗೆ ಕೊಟ್ಟರು. ಅವರು ಬಡಿಸಿದರು.
7 : ಅವರಲ್ಲಿ ಕೆಲವು ಸಣ್ಣ ವಿೂನುಗಳಿದ್ದವು. ಯೇಸು ಅವುಗಳಿಗಾಗಿಯೂ ದೇವಸ್ತುತಿಮಾಡಿ ಅವುಗಳನ್ನು ಹಂಚಬೇಕೆಂದು ಆಜ್ಞಾಪಿಸಿದರು. ಜನರೆಲ್ಲರೂ ಉಂಡು ತೃಪ್ತರಾದರು.
8 : ಉಳಿದ ರೊಟ್ಟಿಯ ತುಂಡುಗಳನ್ನು ಒಟ್ಟುಗೂಡಿಸಿದಾಗ ಅವು ಏಳು ಕುಕ್ಕೆಗಳ ತುಂಬ ಆದುವು.
9 : ಊಟಮಾಡಿದವರ ಸಂಖ್ಯೆ ನಾಲ್ಕು ಸಾವಿರ.
10 : ಊಟವಾದ ಬಳಿಕ ಯೇಸು ಜನರನ್ನು ಕಳುಹಿಸಿಕೊಟ್ಟು, ವಿಳಂಬಮಾಡದೆ ದೋಣಿಯನ್ನು ಹತ್ತಿ, ಶಿಷ್ಯರೊಡನೆ ದಲ್ಮನೂಥ ಎಂಬ ಪ್ರದೇಶಕ್ಕೆ ಹೋದರು.
---------------------

ಚಿಂತನೆ
ಸರ್ವೇಶ್ವರನ ವಿರುದ್ಧ ನಡೆದ ಯಾರೊಬ್ಬಾಮ ಮತ್ತು ಅವನ ಕುಟುಂಬದವರು ಪಾಪಿಗಳಾಗಿ ಭೂಲೋಕದಿಂದ ವಿಸರ್ಜಿತರಾಗಿ ನಿರ್ನಾಮವಾದ ಸಂಗತಿಯು ಇಂದಿನ ಮೊದಲನೆಯ ವಾಚನದ ವಿಷಯ. ಸರ್ವೇಶ್ವರನ ಹಾದಿಯಲ್ಲಿ ನಡೆದರೆ ಶಾಶ್ವತ ಜೀವನವನ್ನು ಪಡೆದುಕೊಳ್ಳಬಹುದು. ಆ ನಿಟ್ಟಿನಲ್ಲಿ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು.
ಇಂದಿನ ಶುಭಸಂದೇಶದಲ್ಲಿ ಯೇಸುಕ್ರಿಸ್ತರು ಏಳು ರೊಟ್ಟಿಗಳಿಂದ ನಾಲ್ಕು ಸಾವಿರ ಜನಕ್ಕೆ ಉಣಬಡಿಸುವುದನ್ನು ಗಮನಿಸಬಹುದು. ಜನರು ದೇಹದ ಹಸಿವಿಗಿಂತ ಆತ್ಮದ ಹಸಿವನ್ನು ನೀಗಿಸಿಕೊಳ್ಳಲು ಕ್ರಿಸ್ತನ ಬಳಿ ಬಂದಿದ್ದರು. ಮೂರುದಿನಗಳಿಂದ ಅವರು ಕ್ರಿಸ್ತನ ಬಳಿಯಿದ್ದರು. ದೇವರ ಪ್ರೀತಿಗಾಗಿ, ಅವರ ಕರುಣೆ ದಯೆಗಾಗಿ, ಶಾಂತಿಗಾಗಿ ಹಾತೊರೆದು ಬಂದಿದ್ದ ಆ ಹಸಿವನ್ನು ಯೇಸು ಮಾತ್ರ ನೀಗಿಸಲು ಶಕ್ತರಾದ್ದರಿಂದ ಅವರು ಜನರಿಗೆ ಸ್ವರ್ಗದ ಮನ್ನವನ್ನು ಉಣಬಡಿಸಿದರು. ಈ ದೈಹಿಕ ಹಸಿವನ್ನು ನೀಗಿಸಿಕೊಂಡರೆ ಮಾತ್ರ ನಾವೂ ನಮ್ಮ ಆಧ್ಯಾತ್ಮಿಕ ಹಸಿವನ್ನು ನೀಗಿಸಿಕೊಳ್ಳಬಹುದು. ಯೇಸುಕ್ರಿಸ್ತರು ಇದನ್ನರಿತರು ಮತ್ತು ಆಧ್ಯಾತ್ಮಿಕ ಆಹಾರದ ಜೊತೆಗೆ ದೈಹಿಕ ಆಹಾರವನ್ನು ನೀಡಿದರು. ನಾವು ಯಾವ ಆಹಾರಕ್ಕಾಗಿ ಹಾತೊರೆಯುತ್ತೇವೆ? ಆಧ್ಯಾತ್ಮಿಕ ಆಹಾರಕ್ಕೋ ಅಥವಾ ದೈಹಿಕ ಆಹಾರಕ್ಕೋ?
ಪ್ರತಿ ಬಲಿಪೂಜೆ ನಮಗೆ ಸ್ವರ್ಗೀಯ ಭೋಜನವನ್ನು ನೀಡುತ್ತದೆ. ಅದರಲ್ಲಿ ನಾವು ಒಳ್ಳೆಯ ರೀತಿಯಿಂದ ಪಾಲ್ಗೊಂಡರೆ ಅದು ನಮ್ಮ ಆಧ್ಯಾತ್ಮಿಕ ಹಸಿವನ್ನು ನೀಗಿಸುತ್ತದೆ.
----------------------
ಪಾಪದ ಜವಾಬ್ದಾರಿ
ಪಾಪದ ದುಷ್ಪರಿಣಾಮಗಳನ್ನು ಇಂದಿನ ಮೊದಲನೆಯ ವಾಚನದಲ್ಲಿ ಕಾಣುತ್ತೇವೆ. ಪಾಪದ ಮುನ್ನ ದೇವರೊಂದಿಗೆ ಸಂಭಾಷಿಸುತ್ತಿದ್ದ ಮತ್ತು ಹೆಜ್ಜೆ ಹಾಕುತ್ತಿದ್ದ ಆದಾಮ್ ಮತ್ತು ಏವಳು ಪಾಪದ ನಂತರ ಭಯದಿಂದ ಅವಿತುಕೊಳ್ಳುತ್ತಾರೆ. ದೇವರಿಗೆ ತಮ್ಮ ಮುಖ ತೋರಿಸಲು ಅಂಜುತ್ತಾರೆ. ಪಾಪದಲ್ಲಿ ಬಿದ್ದ ಮನುಷ್ಯ ದೇವರನ್ನು ಮುಖಾಮುಖಿ ನೋಡಲು ಹೆದರುತ್ತಾನೆ, ದೇವರೊಂದಿಗಿನ ಬಾಂಧವ್ಯ ಕಳೆದುಕೊಳ್ಳುತ್ತಾರೆ. ದೇವರು ಆದಾಮನನ್ನು ಪ್ರಶ್ನಿಸಿದಾಗ, ಆತನು ತನ್ನ ತಪ್ಪನ್ನು ಒಪ್ಪಿಕೊಳ್ಳದೆ ಏವಳನ್ನು ದೂರುತ್ತಾನೆ. ಏವಳು ಸರ್ಪವನ್ನು ದೂರುತ್ತಾಳೆ. ಸಹಜವಾಗಿ ಮಾನವ ತನ್ನ ತಪ್ಪನ್ನು ಒಪ್ಪಿಕೊಳ್ಳದೆ ಇತರರನ್ನು ದೂಷಿಸುವುದು ಹಾಗೂ ಇತರರನ್ನು ಪಾಪಕ್ಕೆ ಹೊಣೆಮಾಡುವುದು ಸಾಮಾನ್ಯ. ನಮ್ಮ ಪಾಪದ ಜವಾಬ್ದಾರಿಯನ್ನು ನಾವು ಹೊರಲು ಸಿದ್ಧರಿದ್ದೇವೆಯೇ?
---------------------
ಚಿತ್ರ: ಗೂಗಲ್ ಕೃಪೆ

No comments:
Post a Comment