08 ಫೆಬ್ರವರಿ 2020
ಶನಿವಾರ/ಹಸಿರು/ಸಾಧಾರಣ ಕಾಲದ ನಾಲ್ಕನೆಯ ಶನಿವಾರ
1ನೇ ವಾಚನ - ೧ ಅರಸುಗಳು 3:4-13
ಕೀರ್ತನೆ - 119:9,10,11,12,13,14
ಶುಭಸಂದೇಶ - ಮಾರ್ಕ 6:30-34
---------------
4 : ಒಮ್ಮೆ ಅರಸ ಸೊಲೊಮೋನನು ಬಲಿಯರ್ಪಿಸುವುದಕ್ಕಾಗಿ, ಪೂಜಾಸ್ಥಳಗಳಲ್ಲೇ ಪ್ರಾಮುಖ್ಯವಾದ ಗಿಬ್ಯೋನಿಗೆ ಹೋದನು. ಅಲ್ಲಿನ ಪೀಠದ ಮೇಲೆ ಸಹಸ್ರ ಬಲಿಗಳನ್ನು ಸಮರ್ಪಿಸಿದಾಗ,
5 : ದೇವರಾದ ಸರ್ವೇಶ್ವರ ಆ ರಾತ್ರಿ ಕನಸಿನಲ್ಲಿ ಅವನಿಗೆ ಕಾಣಿಸಿಕೊಂಡರು; “ನಿನಗೆ ಯಾವ ವರಬೇಕು ಕೇಳಿಕೋ,” ಎಂದು ಹೇಳಿದರು.
6 : ಸೊಲೊಮೋನನು, “ನಿಮಗೆ ಪ್ರಾಮಾಣಿಕನಾಗಿ ನೀತಿಯಿಂದಲೂ ಯಥಾರ್ಥ ಚಿತ್ತದಿಂದಲೂ ನಡೆದುಕೊಂಡ ನಿಮ್ಮ ದಾಸನೂ ನನ್ನ ತಂದೆಯೂ ಆದ ದಾವೀದನಿಗೆ ನೀವು ಮಹಾಕೃಪೆಯನ್ನು ತೋರಿಸಿದಿರಿ; ಆ ಕೃಪೆಯನ್ನು ಮುಂದುವರಿಸುತ್ತಾ ಈಗ ಅವರ ಸಿಂಹಾಸನಕ್ಕೆ ಒಬ್ಬ ಮಗನನ್ನು ಅನುಗ್ರಹಿಸಿ ಅದನ್ನು ಸಂಪೂರ್ಣ ಗೊಳಿಸಿದ್ದೀರಿ.
7 : ನನ್ನ ದೇವರಾದ ಸರ್ವೇಶ್ವರಾ, ನನ್ನ ತಂದೆಗೆ ಬದಲಾಗಿ ನಿಮ್ಮಿಂದ ಅರಸನಾಗಿ ನೇಮಕಗೊಂಡಿರುವ ನಿಮ್ಮ ದಾಸನಾದ ನಾನು ಇನ್ನೂ ಚಿಕ್ಕವನು.
8 : ವ್ಯವಹಾರಜ್ಞಾನ ಇಲ್ಲದವನು; ನಿಮ್ಮ ದಾಸನಾದ ನಾನು ಅಸಂಖ್ಯಾತ ಮಹಾ ಜನಾಂಗವಾದ ನಿಮ್ಮ ಸ್ವಕೀಯ ಪ್ರಜೆಯ ಮಧ್ಯೆ ಇದ್ದೇನೆ.
9 : ಆದುದರಿಂದ ಅದನ್ನು ಆಳುವುದಕ್ಕೂ ನ್ಯಾಯಾನ್ಯಾಯಗಳನ್ನು ಕಂಡುಹಿಡಿಯುವುದಕ್ಕೂ ನನಗೆ ವಿವೇಕವನ್ನು ದಯಪಾಲಿಸಿರಿ. ಈ ಮಹಾಜನಾಂಗವನ್ನು ಆಳಲು ಯಾರೂ ಸಮರ್ಥರಲ್ಲ,” ಎಂದು ಬೇಡಿಕೊಂಡನು.
10 : ಸೊಲೊಮೋನನ ಈ ಬಿನ್ನಹವನ್ನು ಸರ್ವೇಶ್ವರನಾದ ದೇವರು ಮೆಚ್ಚಿದರು.
11 : ಅವರು ಆತನಿಗೆ, “ನೀನು ದೀರ್ಘಾಯುಷ್ಯವನ್ನಾಗಲಿ, ಸಿರಿಸಂಪತ್ತನ್ನಾಗಲಿ, ಶತ್ರುವಿನಾಶವನ್ನಾಗಲಿ ಕೇಳಿಕೊಳ್ಳಲಿಲ್ಲ. ನ್ಯಾಯನಿರ್ಣಯಿಸುವುದಕ್ಕೆ ಬೇಕಾದ ವಿವೇಕವನ್ನು ಬೇಡಿಕೊಂಡೆ.
12 : ಆದ್ದರಿಂದ ನಿನ್ನ ಬಿನ್ನಹವನ್ನು ನೆರವೇರಿಸಿದ್ದೇನೆ. ನೋಡು, ನಿನಗೆ ಜ್ಞಾನವನ್ನೂ ವಿವೇಕವನ್ನೂ ಅನುಗ್ರಹಿಸಿದ್ದೇನೆ; ನಿನ್ನಂಥ ಜ್ಞಾನಿಯು ಹಿಂದೆ ಇರಲಿಲ್ಲ, ಮುಂದೆಯೂ ಇರುವುದಿಲ್ಲ.
13 : ಇದಲ್ಲದೆ, ನೀನು ಕೇಳದಂಥದ್ದನ್ನೂ ನಿನಗೆ ಅನುಗ್ರಹಿಸಿದ್ದೇನೆ. ನಿನ್ನ ಜೀವಮಾನದಲ್ಲೆಲ್ಲಾ ಸಿರಿಸಂಪತ್ತಿನಲ್ಲಿಯೂ ಘನತೆ ಗೌರವದಲ್ಲಿಯೂ ನಿನಗೆ ಸಮಾನನಾದ ಅರಸನು ಇನ್ನೊಬ್ಬನಿರುವುದಿಲ್ಲ.
-------------------------------
ಕೀರ್ತನೆ - 119:9,10,11,12,13,14
9 : “ಬೆತ್” ದೈವಾಜ್ಞೆಗೆ ವಿಧೇಯತೆ ನಡತೆಯಲಿ ಶುದ್ಧವಿರಲು ಯುವಜನಕೆ ಹೇಗೆ ಸಾಧ್ಯ? / ನಿನ್ನಯ ವಾಕ್ಯಾನುಸರಣೆಯಿಂದಲೆ ಅವರಿಗದು ಸಾಧ್ಯ //
10 : ತುಂಬುಹೃದಯದಿಂದ ಹಂಬಲಿಸುತ್ತಿರುವೆನಯ್ಯಾ / ನಿನ್ನಾಜ್ಞೆಯಿಂದ ನಾ ತಪ್ಪದಂತೆ ಕಾಯಯ್ಯಾ //
11 : ನಿನಗೆ ವಿರುದ್ಧ ನಾ ಪಾಪಮಾಡದಂತೆ / ನಿನ್ನಾ ನುಡಿಯನು ನನ್ನೆದೆಯಲ್ಲಿರಿಸಿದೆ //
12 : ಸ್ತುತಿ ಸಲ್ಲಲಿ ಪ್ರಭು ನಿನಗೆ / ನಿನ್ನ ಆಜ್ಞೆಗಳನು ಕಲಿಸು ಎನಗೆ //
13 : ಬಂದುವು ಆ ವಿಧಿಗಳು ನಿನ್ನ ಬಾಯಿಂದ / ವರ್ಣಿಸುವೆನು ಅವನ್ನು ನನ್ನ ಬಾಯಿಂದ //
14 : ಸಿರಿಸಂಪತ್ತಿಗಿಂತ ಮಿಗಿಲಾಗಿ / ಆನಂದಿಪೆ ನಿನ್ನ ಮಾರ್ಗಿಯಾಗಿ //
ಸುಜ್ಞಾನಕ್ಕಾಗಿ ಸೊಲೊಮೋನನು ದೇವರಲ್ಲಿ ವಿಜ್ಞಾಪಿಸುವುದನ್ನು ಇಂದಿನ ಮೊದಲನೆಯ ವಾಚನ ತಿಳಿಸುತ್ತದೆ. ದೇವರು ನಮಗೆ ಕನಸಿನಲ್ಲಿ ಕಾಣಿಸಿಕೊಂಡು `ನಿಮಗೆ ಯಾವ ವರಬೇಕು ಕೇಳಿಕೋ’ ಎಂದು ಹೇಳಿದರೆ ನಾವು ಯಾವ ವರವನ್ನು ಕೇಳುತ್ತೇವೆ? ತನ್ನ ಸ್ವಂತ ಪ್ರಜೆಯನ್ನು ಆಳುವುದಕ್ಕೂ ನ್ಯಾಯಾನ್ಯಾಯಗಳನ್ನು ಕಂಡುಹಿಡಿಯುವುದಕ್ಕೂ ನನಗೆ ವ್ಯವಹಾರಜ್ಞಾನ ಹಾಗೂ ವಿವೇಕವನ್ನು ದಯಪಾಲಿಸಿರಿ ಎಂದು ಸಲೊಮೋನನು ಬೇಡಿಕೊಳ್ಳುತ್ತಾನೆ. `ನೀನು ಧೀರ್ಘಾಯುಷ್ಯವನ್ನಾಗಲೀ, ಸಿರಿಸಂಪತ್ತನ್ನಾಗಲೀ, ಶತ್ರುವಿನಾಶವನ್ನಾಗಲೀ ಕೇಳಿಕೊಳ್ಳುಲಿಲ್ಲ, ನ್ಯಾಯ ನಿರ್ಣಯಿಸುವುದಕ್ಕೆ ಬೇಕಾದ ವಿವೇಕವನ್ನು ಬೇಡಿಕೊಂಡೆ’ ಎಂದು ಅವನ ಬಿನ್ನಹವನ್ನು ದೇವರು ನೆರವೇರಿಸುತ್ತಾರೆ. ಹಣಕ್ಕಿಂತ, ಬಲಕ್ಕಿಂತ ಮಹತ್ತರವಾದದ್ದು ಜ್ಞಾನ. ಅದು ಶಾಶ್ವತ, ಮತ್ತು ಆತ್ಮಕ್ಕೆ ಸಂಬಂಧಿಸಿದ್ದು. ನಾವು ಕೂಡ ನಮ್ಮ ಬದುಕನ್ನು ಯೋಗ್ಯವಾಗಿ ನಡೆಸಲು ಮುಖ್ಯವಾಗಿ ಬೇಕಾಗಿರುವುದು ಜ್ಞಾನ. ಜ್ಞಾನವೇ ಶಕ್ತಿ, ಜ್ಞಾನ ಇರುವಲ್ಲಿ ಎಲ್ಲವೂ ಇರುವುದೆಂಬ ಅರಿವು ನಮ್ಮದಾಗಲಿ. ಜ್ಞಾನ ಎಂದರೇನು? ಒಬ್ಬ ಲೇಖಕರು ಹೇಳುವಂತೆ: ಜ್ಞಾನ ಬಹಳ ದೊಡ್ಡದು. ಬಹಳ ತಿಳುವಳಿಕೆ, ತುಂಬ ವಿಷಯ ತಿಳಿದಿರಬೇಕು. ಆ ವಿಷಯದ ಸಮಗ್ರ ಅರ್ಥ ಗೊತ್ತಾಗಿರಬೇಕು. ಅದನ್ನು ಬೇಕಾದಾಗ ಬಳಸಲು ಬರುವಂತಿರಬೇಕು. ಹೌದು ವಿಷಯ ಸಂಗ್ರಹಣೆ ಬುದ್ದಿಮತ್ತೆ, ಜೀವನಾನುಭವ, ಜೀವನೋತ್ಸಾಹ, ಸೃಜನಶೀಲತೆ, ಸಾಮಾನ್ಯಜ್ಞಾನಗಳೊಂದಿಗೆ ಸೊಗಸಾಗಿ ಮಾತನಾಡುವ ಕಲೆ, ಇವೆಲ್ಲವೂ ಹದವಾಗಿ ಬೆರೆತಾಗ ನಮಗೆ ಜ್ಞಾನದ ಅನುಭವವಾಗುತ್ತದೆ. ಸರ್ವಜ್ಞಾನಿಯಾದ ದೇವರನ್ನು ಕೂಡುವ ಮಾರ್ಗಗಳಲ್ಲೇ ಒಂದು ಮಾರ್ಗ ಜ್ಞಾನ ಮಾರ್ಗ. ಆ ಜ್ಞಾನಕ್ಕಾಗಿ ದೇವರಲ್ಲಿ ಪ್ರಾರ್ಥಿಸೋಣ. ನಮ್ಮ ಕಾಯಕದ ಜತೆಗೆ ವಿಶ್ರಾಂತಿಯೂ ತುಂಬ ಮುಖ್ಯ ಎಂದು ಯೇಸು ನಮಗೆ ತಿಳಿಸುತ್ತಾರೆ. ಅಂತಹ ವಿಶ್ರಾಂತಿಯನ್ನು ದೇವರು ಮಾತ್ರ ಕೊಡಬಲ್ಲರು.
---------------------
ಶನಿವಾರ/ಹಸಿರು/ಸಾಧಾರಣ ಕಾಲದ ನಾಲ್ಕನೆಯ ಶನಿವಾರ
1ನೇ ವಾಚನ - ೧ ಅರಸುಗಳು 3:4-13
ಕೀರ್ತನೆ - 119:9,10,11,12,13,14
ಶುಭಸಂದೇಶ - ಮಾರ್ಕ 6:30-34
---------------
4 : ಒಮ್ಮೆ ಅರಸ ಸೊಲೊಮೋನನು ಬಲಿಯರ್ಪಿಸುವುದಕ್ಕಾಗಿ, ಪೂಜಾಸ್ಥಳಗಳಲ್ಲೇ ಪ್ರಾಮುಖ್ಯವಾದ ಗಿಬ್ಯೋನಿಗೆ ಹೋದನು. ಅಲ್ಲಿನ ಪೀಠದ ಮೇಲೆ ಸಹಸ್ರ ಬಲಿಗಳನ್ನು ಸಮರ್ಪಿಸಿದಾಗ,
5 : ದೇವರಾದ ಸರ್ವೇಶ್ವರ ಆ ರಾತ್ರಿ ಕನಸಿನಲ್ಲಿ ಅವನಿಗೆ ಕಾಣಿಸಿಕೊಂಡರು; “ನಿನಗೆ ಯಾವ ವರಬೇಕು ಕೇಳಿಕೋ,” ಎಂದು ಹೇಳಿದರು.
6 : ಸೊಲೊಮೋನನು, “ನಿಮಗೆ ಪ್ರಾಮಾಣಿಕನಾಗಿ ನೀತಿಯಿಂದಲೂ ಯಥಾರ್ಥ ಚಿತ್ತದಿಂದಲೂ ನಡೆದುಕೊಂಡ ನಿಮ್ಮ ದಾಸನೂ ನನ್ನ ತಂದೆಯೂ ಆದ ದಾವೀದನಿಗೆ ನೀವು ಮಹಾಕೃಪೆಯನ್ನು ತೋರಿಸಿದಿರಿ; ಆ ಕೃಪೆಯನ್ನು ಮುಂದುವರಿಸುತ್ತಾ ಈಗ ಅವರ ಸಿಂಹಾಸನಕ್ಕೆ ಒಬ್ಬ ಮಗನನ್ನು ಅನುಗ್ರಹಿಸಿ ಅದನ್ನು ಸಂಪೂರ್ಣ ಗೊಳಿಸಿದ್ದೀರಿ.
7 : ನನ್ನ ದೇವರಾದ ಸರ್ವೇಶ್ವರಾ, ನನ್ನ ತಂದೆಗೆ ಬದಲಾಗಿ ನಿಮ್ಮಿಂದ ಅರಸನಾಗಿ ನೇಮಕಗೊಂಡಿರುವ ನಿಮ್ಮ ದಾಸನಾದ ನಾನು ಇನ್ನೂ ಚಿಕ್ಕವನು.
8 : ವ್ಯವಹಾರಜ್ಞಾನ ಇಲ್ಲದವನು; ನಿಮ್ಮ ದಾಸನಾದ ನಾನು ಅಸಂಖ್ಯಾತ ಮಹಾ ಜನಾಂಗವಾದ ನಿಮ್ಮ ಸ್ವಕೀಯ ಪ್ರಜೆಯ ಮಧ್ಯೆ ಇದ್ದೇನೆ.
9 : ಆದುದರಿಂದ ಅದನ್ನು ಆಳುವುದಕ್ಕೂ ನ್ಯಾಯಾನ್ಯಾಯಗಳನ್ನು ಕಂಡುಹಿಡಿಯುವುದಕ್ಕೂ ನನಗೆ ವಿವೇಕವನ್ನು ದಯಪಾಲಿಸಿರಿ. ಈ ಮಹಾಜನಾಂಗವನ್ನು ಆಳಲು ಯಾರೂ ಸಮರ್ಥರಲ್ಲ,” ಎಂದು ಬೇಡಿಕೊಂಡನು.
10 : ಸೊಲೊಮೋನನ ಈ ಬಿನ್ನಹವನ್ನು ಸರ್ವೇಶ್ವರನಾದ ದೇವರು ಮೆಚ್ಚಿದರು.
11 : ಅವರು ಆತನಿಗೆ, “ನೀನು ದೀರ್ಘಾಯುಷ್ಯವನ್ನಾಗಲಿ, ಸಿರಿಸಂಪತ್ತನ್ನಾಗಲಿ, ಶತ್ರುವಿನಾಶವನ್ನಾಗಲಿ ಕೇಳಿಕೊಳ್ಳಲಿಲ್ಲ. ನ್ಯಾಯನಿರ್ಣಯಿಸುವುದಕ್ಕೆ ಬೇಕಾದ ವಿವೇಕವನ್ನು ಬೇಡಿಕೊಂಡೆ.
12 : ಆದ್ದರಿಂದ ನಿನ್ನ ಬಿನ್ನಹವನ್ನು ನೆರವೇರಿಸಿದ್ದೇನೆ. ನೋಡು, ನಿನಗೆ ಜ್ಞಾನವನ್ನೂ ವಿವೇಕವನ್ನೂ ಅನುಗ್ರಹಿಸಿದ್ದೇನೆ; ನಿನ್ನಂಥ ಜ್ಞಾನಿಯು ಹಿಂದೆ ಇರಲಿಲ್ಲ, ಮುಂದೆಯೂ ಇರುವುದಿಲ್ಲ.
13 : ಇದಲ್ಲದೆ, ನೀನು ಕೇಳದಂಥದ್ದನ್ನೂ ನಿನಗೆ ಅನುಗ್ರಹಿಸಿದ್ದೇನೆ. ನಿನ್ನ ಜೀವಮಾನದಲ್ಲೆಲ್ಲಾ ಸಿರಿಸಂಪತ್ತಿನಲ್ಲಿಯೂ ಘನತೆ ಗೌರವದಲ್ಲಿಯೂ ನಿನಗೆ ಸಮಾನನಾದ ಅರಸನು ಇನ್ನೊಬ್ಬನಿರುವುದಿಲ್ಲ.
-------------------------------
ಕೀರ್ತನೆ - 119:9,10,11,12,13,14
9 : “ಬೆತ್” ದೈವಾಜ್ಞೆಗೆ ವಿಧೇಯತೆ ನಡತೆಯಲಿ ಶುದ್ಧವಿರಲು ಯುವಜನಕೆ ಹೇಗೆ ಸಾಧ್ಯ? / ನಿನ್ನಯ ವಾಕ್ಯಾನುಸರಣೆಯಿಂದಲೆ ಅವರಿಗದು ಸಾಧ್ಯ //
10 : ತುಂಬುಹೃದಯದಿಂದ ಹಂಬಲಿಸುತ್ತಿರುವೆನಯ್ಯಾ / ನಿನ್ನಾಜ್ಞೆಯಿಂದ ನಾ ತಪ್ಪದಂತೆ ಕಾಯಯ್ಯಾ //
11 : ನಿನಗೆ ವಿರುದ್ಧ ನಾ ಪಾಪಮಾಡದಂತೆ / ನಿನ್ನಾ ನುಡಿಯನು ನನ್ನೆದೆಯಲ್ಲಿರಿಸಿದೆ //
12 : ಸ್ತುತಿ ಸಲ್ಲಲಿ ಪ್ರಭು ನಿನಗೆ / ನಿನ್ನ ಆಜ್ಞೆಗಳನು ಕಲಿಸು ಎನಗೆ //
13 : ಬಂದುವು ಆ ವಿಧಿಗಳು ನಿನ್ನ ಬಾಯಿಂದ / ವರ್ಣಿಸುವೆನು ಅವನ್ನು ನನ್ನ ಬಾಯಿಂದ //
14 : ಸಿರಿಸಂಪತ್ತಿಗಿಂತ ಮಿಗಿಲಾಗಿ / ಆನಂದಿಪೆ ನಿನ್ನ ಮಾರ್ಗಿಯಾಗಿ //
ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ
ಮಾರ್ಕ 6: 3೦-34
30ಪ್ರೇಷಿತರು ಯೇಸುಸ್ವಾಮಿಯ ಬಳಿಗೆ ಹಿಂದಿರುಗಿ ಬಂದು ತಾವು ಮಾಡಿದ ಸಕಲ ಕಾರ್ಯಕಲಾಪಗಳ ಹಾಗೂ ನೀಡಿದ ಬೋಧನೆಯ ವರದಿಯನ್ನು ಒಪ್ಪಿಸಿದರು. 31ಜನರು ಗುಂಪು ಗುಂಪಾಗಿ ಎಡೆಬಿಡದೆ ಬರುತ್ತಾ ಹೋಗುತ್ತಾ ಇದ್ದುದರಿಂದ ಯೇಸುವಿಗೆ ಮತ್ತು ಅವರ ಶಿಷ್ಯರಿಗೆ ಊಟಮಾಡಲೂ ಬಿಡುವಿರಲಿಲ್ಲ. 32ಆದುದರಿಂದ ಯೇಸು, ಬನ್ನಿ, ಪ್ರತ್ಯೇಕವಾಗಿ ನಾವು ನಿರ್ಜನ ಪ್ರದೇಶಕ್ಕೆ ಹೋಗಿ ಸ್ವಲ್ಪ ವಿಶ್ರಮಿಸಿಕೊಂಡು ಬರೋಣ, ಎಂದರು. ಅಂತೆಯೇ ಅವರೆಲ್ಲರೂ ಪ್ರತ್ಯೇಕವಾಗಿ ದೋಣಿಯನ್ನು ಹತ್ತಿ ಏಕಾಂತ ಪ್ರದೇಶಕ್ಕೆ ಹೊರಟರು. 33ಆದರೆ ಅವರು ಹೋಗುತ್ತಿರುವುದನ್ನು ಕಂಡು ಗುರುತಿಸಿದ ಅನೇಕರು ಎಲ್ಲಾ ಊರುಗಳಿಂದ ಕಾಲ್ದಾರಿಯಲ್ಲಿ ತ್ವರಿತವಾಗಿ ಸಾಗಿ ಅವರಿಗೆ ಮುಂಚಿತವಾಗಿಯೇ ಆ ಸ್ಥಳವನ್ನು ಸೇರಿದರು. 34ಯೇಸು ದೋಣಿಯಿಂದ ಇಳಿದಾಗ ಅಲ್ಲಿ ದೊಡ್ಡ ಜನಸಮೂಹವೇ ಸೇರಿತ್ತು. ಆ ಜನರು ಕುರುಬನಿಲ್ಲದ ಕುರಿಗಳಂತಿರುವುದನ್ನು ಕಂಡು, ಯೇಸುವಿನ ಮನ ಕರಗಿತು; ಅನೇಕ ವಿಷಯಗಳನ್ನು ಕುರಿತು ಅವರಿಗೆ ಉಪದೇಶವಿತ್ತರು.
ಚಿಂತನೆ
ತಂದೆಯೊಂದಿಗೆ ಸಂಭಾಷಣೆ
ಶಿಷ್ಯರು ಯೇಸುವಿನ ಅಪ್ಪಣೆಯಂತೆ ಶುಭಸಂದೇಶವನ್ನು ಸಾರಲು ಹೊರಟಿದ್ದರು. ಅವರು ಮರಳಿ ಬಂದು ಯೇಸುವಿಗೆ ತಮ್ಮ ಕಾರ್ಯಕಲಾಪಗಳ ವರದಿ ಒಪ್ಪಿಸುತ್ತಾರೆ. ಶಿಷ್ಯರ ಬಳಲಿಕೆಯನ್ನು ಅರಿತಿದ್ದ ಯೇಸು ಅವರನ್ನು ನಿರ್ಜನ ಪ್ರದೇಶಕ್ಕೆ ವಿಶ್ರಾಂತಿಗಾಗಿ ಕರೆದೊಯ್ಯುತ್ತಾರೆ. ಯೇಸು ಅನೇಕ ಬಾರಿ ನಿರ್ಜನ ಪ್ರದೇಶಕ್ಕೆ ಪ್ರಾರ್ಥನೆ ಮಾಡಲು ಹೋಗುವುದನ್ನು ಶುಭಸಂದೇಶದಲ್ಲಿ ಕಾಣುತ್ತೇವೆ. ನಿರ್ಜನ ಪ್ರದೇಶದಲ್ಲಿ ಯೇಸು ತಂದೆಯೊಂದಿಗೆ ಸಂಭಾಷಿಸುತ್ತಿದ್ದರು. ಇಂದು ದೇವರ ಅನುಭವಕ್ಕೆ, ಕೆಲವೊಮ್ಮೆ ಮೌನಕ್ಕೆ, ಏಕಾಂತಕ್ಕೆ ಶರಣಾಗಬೇಕಿದೆ. ಆದರೆ ನಮ್ಮದು ಸದ್ದು ಗದ್ದಲದ ಜಗತ್ತು. ಇಂದು ಗಟ್ಟಿಯಾಗಿ ಅರಚುವವರಿಗೆ ಮಾತ್ರ ಬೆಲೆಯಿದ್ದಂತೆ ಕಾಣುತ್ತದೆ. ಪ್ರಾರ್ಥನಾ ಕೂಟಗಳು ಕೂಡ ಇಂದು ಸದ್ದು, ಗದ್ದಲ, ಅಬ್ಬರದ ಸಂಗೀತದಲ್ಲಿ ಮುಳುಗಿ ಹೋಗಿದೆ. ದೇವರ ಸ್ವರ ಆಲಿಸಲು ನಮಗೆ ಏಕಾಂತದ ಅವಶ್ಯಕತೆಯಿದೆ.
----------------------
“ ಸರ್ವಜ್ಞಾನಿಯಾದ ದೇವರನ್ನು ಸೇರುವ ಮಾರ್ಗಗಳಲ್ಲೊಂದು ಮಾರ್ಗ ಜ್ಞಾನಮಾರ್ಗ. ”ಸುಜ್ಞಾನಕ್ಕಾಗಿ ಸೊಲೊಮೋನನು ದೇವರಲ್ಲಿ ವಿಜ್ಞಾಪಿಸುವುದನ್ನು ಇಂದಿನ ಮೊದಲನೆಯ ವಾಚನ ತಿಳಿಸುತ್ತದೆ. ದೇವರು ನಮಗೆ ಕನಸಿನಲ್ಲಿ ಕಾಣಿಸಿಕೊಂಡು `ನಿಮಗೆ ಯಾವ ವರಬೇಕು ಕೇಳಿಕೋ’ ಎಂದು ಹೇಳಿದರೆ ನಾವು ಯಾವ ವರವನ್ನು ಕೇಳುತ್ತೇವೆ? ತನ್ನ ಸ್ವಂತ ಪ್ರಜೆಯನ್ನು ಆಳುವುದಕ್ಕೂ ನ್ಯಾಯಾನ್ಯಾಯಗಳನ್ನು ಕಂಡುಹಿಡಿಯುವುದಕ್ಕೂ ನನಗೆ ವ್ಯವಹಾರಜ್ಞಾನ ಹಾಗೂ ವಿವೇಕವನ್ನು ದಯಪಾಲಿಸಿರಿ ಎಂದು ಸಲೊಮೋನನು ಬೇಡಿಕೊಳ್ಳುತ್ತಾನೆ. `ನೀನು ಧೀರ್ಘಾಯುಷ್ಯವನ್ನಾಗಲೀ, ಸಿರಿಸಂಪತ್ತನ್ನಾಗಲೀ, ಶತ್ರುವಿನಾಶವನ್ನಾಗಲೀ ಕೇಳಿಕೊಳ್ಳುಲಿಲ್ಲ, ನ್ಯಾಯ ನಿರ್ಣಯಿಸುವುದಕ್ಕೆ ಬೇಕಾದ ವಿವೇಕವನ್ನು ಬೇಡಿಕೊಂಡೆ’ ಎಂದು ಅವನ ಬಿನ್ನಹವನ್ನು ದೇವರು ನೆರವೇರಿಸುತ್ತಾರೆ. ಹಣಕ್ಕಿಂತ, ಬಲಕ್ಕಿಂತ ಮಹತ್ತರವಾದದ್ದು ಜ್ಞಾನ. ಅದು ಶಾಶ್ವತ, ಮತ್ತು ಆತ್ಮಕ್ಕೆ ಸಂಬಂಧಿಸಿದ್ದು. ನಾವು ಕೂಡ ನಮ್ಮ ಬದುಕನ್ನು ಯೋಗ್ಯವಾಗಿ ನಡೆಸಲು ಮುಖ್ಯವಾಗಿ ಬೇಕಾಗಿರುವುದು ಜ್ಞಾನ. ಜ್ಞಾನವೇ ಶಕ್ತಿ, ಜ್ಞಾನ ಇರುವಲ್ಲಿ ಎಲ್ಲವೂ ಇರುವುದೆಂಬ ಅರಿವು ನಮ್ಮದಾಗಲಿ. ಜ್ಞಾನ ಎಂದರೇನು? ಒಬ್ಬ ಲೇಖಕರು ಹೇಳುವಂತೆ: ಜ್ಞಾನ ಬಹಳ ದೊಡ್ಡದು. ಬಹಳ ತಿಳುವಳಿಕೆ, ತುಂಬ ವಿಷಯ ತಿಳಿದಿರಬೇಕು. ಆ ವಿಷಯದ ಸಮಗ್ರ ಅರ್ಥ ಗೊತ್ತಾಗಿರಬೇಕು. ಅದನ್ನು ಬೇಕಾದಾಗ ಬಳಸಲು ಬರುವಂತಿರಬೇಕು. ಹೌದು ವಿಷಯ ಸಂಗ್ರಹಣೆ ಬುದ್ದಿಮತ್ತೆ, ಜೀವನಾನುಭವ, ಜೀವನೋತ್ಸಾಹ, ಸೃಜನಶೀಲತೆ, ಸಾಮಾನ್ಯಜ್ಞಾನಗಳೊಂದಿಗೆ ಸೊಗಸಾಗಿ ಮಾತನಾಡುವ ಕಲೆ, ಇವೆಲ್ಲವೂ ಹದವಾಗಿ ಬೆರೆತಾಗ ನಮಗೆ ಜ್ಞಾನದ ಅನುಭವವಾಗುತ್ತದೆ. ಸರ್ವಜ್ಞಾನಿಯಾದ ದೇವರನ್ನು ಕೂಡುವ ಮಾರ್ಗಗಳಲ್ಲೇ ಒಂದು ಮಾರ್ಗ ಜ್ಞಾನ ಮಾರ್ಗ. ಆ ಜ್ಞಾನಕ್ಕಾಗಿ ದೇವರಲ್ಲಿ ಪ್ರಾರ್ಥಿಸೋಣ. ನಮ್ಮ ಕಾಯಕದ ಜತೆಗೆ ವಿಶ್ರಾಂತಿಯೂ ತುಂಬ ಮುಖ್ಯ ಎಂದು ಯೇಸು ನಮಗೆ ತಿಳಿಸುತ್ತಾರೆ. ಅಂತಹ ವಿಶ್ರಾಂತಿಯನ್ನು ದೇವರು ಮಾತ್ರ ಕೊಡಬಲ್ಲರು.
---------------------
ಇಂದಿನ ಸಂತರು
ಸಂತ ಜೋಸ್ಫಿನ್ ಮಾರ್ಗರೇಟ್ (1869-1947)
ಇವರು ಸುಡಾನ್ ದೇಶದಲ್ಲಿ ಜನಿಸಿದ ಜೀತದಾಳು. ಆದರೆ ತಮ್ಮ ಮುಂದಿನ ಬದುಕಿನಲ್ಲಿ ಒಬ್ಬ ಧಾರ್ಮಿಕ ಸಹೋದರಿಯಾಗಿ ವ್ರತವನ್ನು ಸ್ವೀಕರಿಸಿದರು. ತಮ್ಮ ಹನ್ನೊಂದನೇ ವಯಸ್ಸಿನಲ್ಲಿರುವಾಗಲೇ ಅರಬ್ ದೇಶದ ಮಾನವ ಜೀತದಾಳು ವರ್ತಕರಿಂದ ಅಪಹರಿಸಲ್ಪಟ್ಟರು. ಆದುದರಿಂದಲೇ ಅವರು ಅರಬ್ ಭಾಷೆಯ ಹೆಸರಾದ ’ಬಕಿತಾ’ ಎಂಬ ಹೆಸರನ್ನು ಇಟ್ಟುಕೊಂಡಿದ್ದಾರೆ. ಇದರ ಅರ್ಥ ’ಅದೃಷ್ಟಶಾಲಿ’. ಧಾರ್ಮಿಕ ಜೀವನವನ್ನು ದೇವರ ಕೊಡುಗೆಯಾಗಿ ಸ್ವೀಕರಿಸಿದ ಈ ಮಹಾ ಸಂತರು ಕ್ರಿಸ್ತರು ನಡೆದ ಪರಿಪೂರ್ಣತೆಯ ಹಾದಿಯಲ್ಲಿ ಸಾಗಲು ಉತ್ಸುಕರಾಗಿದ್ದರು. ಪ್ರಾರ್ಥನೆ, ದೇವರ ವಾಕ್ಯ ಮತ್ತು ದಿವ್ಯ ಬಲಿಪೂಜೆಯಲ್ಲಿ ಅವರ ಬದುಕಿನ ಸಾರ್ಥಕತೆಯನ್ನು ಕಂಡುಕೊಳ್ಳಲು ಪ್ರಯತ್ನಿಸಿದರು. ಪ್ರಭುಯೇಸುವಿನ ಸೇವಾಮನೋಭಾವವನ್ನು ಅವರ ಜೀವನದಲ್ಲಿ ಪ್ರೇರಣೆಯಾಗಿಸಿಕೊಂಡು ದೇವರ ಹಾಗೂ ಜನಸಾಮಾನ್ಯರ ಸೇವೆಯಲ್ಲಿ ತಮ್ಮನ್ನೇ ತಾವು ಸಂಪೂರ್ಣವಾಗಿ ತೊಡಗಿಸಿಕೊಂಡರು. ಬಡತನ, ಪಾವಿತ್ರ್ಯತೆ, ಹಾಗೂ ವಿಧೇಯತೆಯ ಮೌಲ್ಯಗಳಿಗೆ ಬದ್ಧರಾಗಿ ಬಾಳಿದ ಈ ಸಂತರ ಆದರ್ಶ ಸದಾಕಾಲಕ್ಕೂ ಅನುಕರಣೀಯ.

ಚಿತ್ರ: ಗೂಗಲ್ ಕೃಪೆ

No comments:
Post a Comment