ಮಾರ್ಚ್ 19, 2020 ಗುರುವಾರ [ಬಿಳಿ]
ಮರಿಯಳ ಪತಿ ಸಂತ ಜೋಸೆಫ್, ಮಹೋತ್ಸವ
ಮೊದಲ ವಾಚನ: 2 ಸಮು 7:4-5, 12-14, 16
ಕೀರ್ತನೆ 89:1-4, 26, 28. ಶ್ಲೋಕ.36
ಚಿರಶಾಶ್ವತವಾಗಿರುವುದು ಅವನ ಸಂತತಿ
ಎರಡನೇ ವಾಚನ: ರೋಮನರಿಗೆ 4.13, 16-18, 22
ಶುಭಸಂದೇಶ: ಮತ್ತಾಯ 1.18-21, 24
[ಅಥವಾ] (ಪರ್ಯಾಯ) ಲೂಕ 2.41-51
---------------------------
ಮೊದಲನೆಯ ವಾಚನ : 2 ಸಮು 7:4-5, 12-14, 16
4 : ಆದರೆ ಅದೇ ರಾತ್ರಿ ಸರ್ವೇಶ್ವರ ನಾತಾನನಿಗೆ ಹೀಗೆಂದು ಆಜ್ಞಾಪಿಸಿದರು:
5 : ನೀನು ಹೋಗಿ ನನ್ನ ದಾಸ ದಾವೀದನಿಗೆ ತಿಳಿಸಬೇಕಾದುದು ಇದು: ‘ನೀನು ನನಗೊಂದು ದೇವಾಲಯವನ್ನು ಕಟ್ಟಬೇಕೆಂದಿರುವೆಯೋ?
6 : ನಾನು ಇಸ್ರಯೇಲರನ್ನು ಈಜಿಪ್ಟ್ ದೇಶದಿಂದ ಬರಮಾಡಿದಂದಿನಿಂದ ಇಂದಿನವರೆಗೆ ದೇವಾಲಯದಲ್ಲಿ ವಾಸಮಾಡಲಿಲ್ಲ; ಗುಡಾರದಲ್ಲೇ ವಾಸಿಸುತ್ತಾ ಅವರೊಡನೆ ಸಂಚರಿಸಿದೆ.
7 : ಹೀಗೆ ಇಸ್ರಯೇಲರ ಮಧ್ಯೆ ಸಂಚರಿಸುತ್ತಿದ್ದಾಗ ನನ್ನ ಜನರಾದ ಅವರನ್ನು ಪಾಲಿಸುವುದಕ್ಕೆ ಕುಲನಾಯಕನನ್ನು ನೇಮಿಸಿದೆ. ಅವರಾರಿಂದಲೂ ‘ನೀವೇಕೆ ನನಗೆ ದೇವದಾರು ಮರದಿಂದ ದೇವಾಲಯವನ್ನು ಕಟ್ಟಿಸಲಿಲ್ಲ?’ ಎಂದು ಕೇಳಿದ್ದಿಲ್ಲ!”
8 : “ಇದಲ್ಲದೆ, ನೀನು ನನ್ನ ದಾಸ ದಾವೀದನಿಗೆ ಹೇಳು, ಸರ್ವಶಕ್ತ ಸರ್ವೇಶ್ವರನಾದ ನಾನೇ ಹೀಗೆ ಹೇಳಿದೆಯೆಂದು ತಿಳಿಸು: ‘ಕುರಿಗಳ ಹಿಂದೆ ತಿರುಗಾಡುತ್ತಿದ್ದ ನಿನ್ನನ್ನು ಅಡವಿಯಿಂದ ಆಯ್ದುಕೊಂಡು ನನ್ನ ಪ್ರಜೆ ಇಸ್ರಯೇಲರ ಮೇಲೆ ನಾಯಕನನ್ನಾಗಿ ನೇಮಿಸಿದೆ.
9 : ನೀನು ಹೋದ ಕಡೆಯೆಲ್ಲಾ ನಿನ್ನ ಸಂಗಡ ಇದ್ದೆ. ನಿನ್ನ ಶತ್ರುಗಳನ್ನೆಲ್ಲ ನಿನ್ನ ಕಣ್ಮುಂದೆಯೆ ಸದೆಬಡಿದೆ. ಜಗದ ಮಹಾತ್ಮರ ಹೆಸರಿನಂತೆ ನಿನ್ನ ಹೆಸರನ್ನು ಪ್ರಸಿದ್ಧಗೊಳಿಸುವೆನು
10 : ನನ್ನ ಪ್ರಜೆ ಇಸ್ರಯೇಲರಿಗೆ ಒಂದು ಸ್ಥಳವನ್ನು ಕೊಟ್ಟು ಅದರಲ್ಲಿ ಅವರನ್ನು ನೆಲೆಗೊಳಿಸುವೆನು. ಇನ್ನು ಮೇಲೆ ಅವರು ಯಾವ ಭಯವೂ ಇಲ್ಲದೆ ವಾಸಿಸುವರು.
11 : ಪೂರ್ವಕಾಲದಲ್ಲಿ ನಾನು ನನ್ನ ಜನರಿಗೆ ನ್ಯಾಯಸ್ಥಾಪಕರನ್ನು ನೇಮಿಸಿದೆ. ಅಲ್ಲಿಂದೀಚಿಗೆ ಇಸ್ರಯೇಲರು ಶೋಷಣೆಗೆ ಗುರಿಯಾದರು. ಆದರೆ ಇನ್ನು ಮೇಲೆ ಆಗದು. ನೀನು ಶತ್ರುಭಯವಿಲ್ಲದೆ ಸುಖದಿಂದಿರುವಂತೆ ಮಾಡುವೆನು. ಅದು ಮಾತ್ರ ಅಲ್ಲ, ಸರ್ವೇಶ್ವರನಾದ ನಾನು ನಿನಗಾಗಿ ಒಂದು ಮನೆತನವನ್ನು ಕಟ್ಟುವೆನೆಂದು ಮಾತು ಕೊಡುತ್ತೇನೆ.
12 : ನಿನ್ನ ಆಯುಷ್ಕಾಲ ಮುಗಿದು ನೀನು ನಿನ್ನ ಪೂರ್ವಜರನ್ನು ಸೇರಿ ವಿಶ್ರಮಿಸುವಾಗ ನಿನ್ನ ಮಕ್ಕಳಲ್ಲಿ ಒಬ್ಬನನ್ನು ನಿನಗೆ ಉತ್ತರಾಧಿಕಾರಿಯನ್ನಾಗಿ ನೇಮಿಸಿ ಅವನ ರಾಜ್ಯವನ್ನು ಸ್ಥಿರಪಡಿಸುವೆನು.
13 : ಅವನು ನನ್ನ ಹೆಸರಿನಲ್ಲಿ ಒಂದು ದೇವಾಲಯವನ್ನು ಕಟ್ಟುವನು. ನಾನು ಅವನ ಸಿಂಹಾಸನವನ್ನು ಸ್ಥಿರಪಡಿಸುವೆನು.
14 : ನಾನು ಅವನಿಗೆ ತಂದೆಯಾಗಿರುವೆನು, ಅವನು ನನಗೆ ಮಗನಾಗಿರುವನು. ಅವನು ತಪ್ಪುಮಾಡಿದಾಗ, ಮಗನಿಗೆ ತಂದೆ ಬೆತ್ತದ ರುಚಿತೋರಿಸುವಂತೆ ನಾನು ಅವನನ್ನು ಶಿಕ್ಷಿಸುವೆನು.
15 : ಆದರೆ ನನ್ನ ಕೃಪೆ, ನಿನ್ನ ಕಣ್ಮುಂದೆಯೇ ಸೌಲನನ್ನು ಬಿಟ್ಟು ಹೋದಹಾಗೆ, ಅವನನ್ನು ಬಿಟ್ಟು ಹೋಗುವುದಿಲ್ಲ.
16 : ನಿನ್ನ ಮನೆತನವೂ ಅರಸುತನವೂ ಸದಾಕಾಲ ಸ್ಥಿರವಾಗಿರುವುವು; ನಿನ್ನ ಸಿಂಹಾಸನ ಶಾಶ್ವತವಾಗಿರುವುದು.”
---------------------------------
2 : ನಿನ್ನಚಲ ಪ್ರೀತಿ ಪ್ರಭು, ನನಗೆ ಶಾಶ್ವತ ಸಿದ್ಧ / ನಿನ್ನ ಸತ್ಯತೆ ಆಗಸದಂತೆ ಸ್ಥಿರ ಸ್ಥಾಪಿತ //
3 : ನೀನೆಂದೆ, “ನಾನರಿಸಿದವನೊಡನೆ ಮಾಡಿರುವೆ ಒಪ್ಪಂದ / ನನ್ನ ದಾಸ ದಾವೀದನಿಗಿತ್ತಿರುವೆ ಈ ತೆರನಾದ ಶಪಥ : //
4 : “ಸ್ಥಾಪಿಸುವೆ ಶಾಶ್ವತವಾಗಿ ನಿನ್ನ ಸಂತತಿಯನು / ಸ್ಥಿರಪಡಿಸುವೆ ಯುಗಯುಗಕು ನಿನ್ನ ಸಿಂಹಾಸನವನು”//
5 : ಪ್ರಸಿದ್ಧಪಡಿಸುವುದು ಪ್ರಭು, ಗಗನವು ನಿನ್ನ ಮಹತ್ತನು / ಸಂಕೀರ್ತಿಸುವುದು ಸ್ವರ್ಗೀಯ ಸಭೆ, ನಿನ್ನ ಸತ್ಯತೆಯನು //
27 : ಮಾಡುವೆನವನನು ಜೇಷ್ಠ ಪುತ್ರನನ್ನಾಗಿ / ಭೂರಾಜರುಗಳೊಳು ಅತ್ಯುನ್ನತನನ್ನಾಗಿ //
28 : ಇರುವುದು ಎನ್ನಚಲ ಪ್ರೀತಿ ಅವನ ಮೇಲೆ ಶಾಶ್ವತವಾಗಿ / ಅವನೊಡನೆ ನಾ ಮಾಡಿದೊಪ್ಪಂದ ಸ್ಥಿರಸ್ಥಾಯಿಯಾಗಿ //
29 : ಉಳಿಸುವೆನು ಅವನ ಸಂತಾನವನು ನಿರಂತರವಾಗಿ / ಅವನ ಸಿಂಹಾಸನವಿರುವುದು ಗಗನದಂತೆ ಸ್ಥಿರವಾಗಿ //
---------------------------
41 : ಯೇಸುಸ್ವಾಮಿಯ ತಂದೆತಾಯಿಗಳು ಪ್ರತಿವರ್ಷವೂ ಪಾಸ್ಕಹಬ್ಬಕ್ಕೆ ಜೆರುಸಲೇಮಿಗೆ ಹೋಗುತ್ತಿದ್ದರು.
42 : ಯೇಸುವಿಗೆ ಹನ್ನೆರಡು ವರ್ಷವಾದಾಗ ವಾಡಿಕೆಯ ಪ್ರಕಾರ ಹಬ್ಬಕ್ಕೆ ಹೋದರು.
43 : ಹಬ್ಬ ಮುಗಿಸಿಕೊಂಡು ಅವರು ಹಿಂದಿರುಗಿ ಬರುವಾಗ ಬಾಲಕಯೇಸು ಜೆರುಸಲೇಮಿನಲ್ಲಿಯೇ ಉಳಿದುಬಿಟ್ಟರು.
44 : ಇದು ತಂದೆತಾಯಿಗಳಿಗೆ ತಿಳಿಯದು. ಮಗನು ಯಾತ್ರಿಕರ ಗುಂಪಿನಲ್ಲಿ ಬರುತ್ತಿರಬಹುದೆಂದು ಭಾವಿಸಿ ಒಂದು ದಿನದ ಪ್ರಯಾಣ ಬಂದುಬಿಟ್ಟಿದ್ದರು. ನಂತರ ಮಗನನ್ನು ಕಾಣದೆ ತಮ್ಮ ಬಂಧುಬಳಗದವರಲ್ಲೂ ಪರಿಚಿತರಲ್ಲೂ ಹುಡುಕಾಡಿದರು.
45 : ಅಲ್ಲೆಲ್ಲೂ ಕಾಣದೆ ಅವರನ್ನು ಹುಡುಕಿಕೊಂಡು ಜೆರುಸಲೇಮಿಗೆ ಮರಳಿ ಬಂದರು.
46 : ಮೂರು ದಿನಗಳ ಮೇಲೆ ಮಹಾದೇವಾಲಯದಲ್ಲಿ ಅವರನ್ನು ಕಂಡಾಗ ಅಲ್ಲಿ ಯೇಸು, ಬೋಧಕರ ಮಧ್ಯೆ ಕುಳಿತುಕೊಂಡು ಅವರ ಉಪದೇಶವನ್ನು ಆಲಿಸುತ್ತಾ ಅವರಿಗೆ ಪ್ರಶ್ನೆಹಾಕುತ್ತಾ ಇದ್ದರು.
47 : ಬಾಲಕನ ಪ್ರಶ್ನೋತ್ತರಗಳನ್ನು ಕೇಳುತ್ತಿದ್ದ ಎಲ್ಲರೂ ಆತನ ಜ್ಞಾನವನ್ನು ಕಂಡು ಬೆರಗಾದರು.
48 : ತಂದೆತಾಯಿಗಳು ಮಗನನ್ನು ಅಲ್ಲಿ ಕಂಡು ವಿಸ್ಮಯಗೊಂಡರು. ಆಗ ತಾಯಿಯು, “ಕಂದಾ, ನಮಗೆ ಏಕೆ ಹೀಗೆ ಮಾಡಿದೆ? ನಿನ್ನ ತಂದೆಯೂ ನಾನೂ ಎಷ್ಟೋ ಕಳವಳಪಟ್ಟು ನಿನ್ನನ್ನು ಹುಡುಕಾಡಿದೆವಲ್ಲಾ,” ಎಂದಳು.
49 : ಅದಕ್ಕೆ ಉತ್ತರವಾಗಿ ಯೇಸು, “ನೀವು ನನ್ನನ್ನು ಹುಡುಕಿದ್ದೇಕೆ? ನಾನು ನನ್ನ ತಂದೆಯ ಆಲಯದಲ್ಲೇ ಇರಬೇಕೆಂದು ನಿಮಗೆ ತಿಳಿಯದೆ ಹೋಯಿತೆ?” ಎಂದರು.
50 : ಆದರೆ ಅವರ ಮಾತು ತಂದೆತಾಯಿಗಳಿಗೆ ಅರ್ಥವಾಗಲಿಲ್ಲ.
51 : ಬಳಿಕ ಯೇಸು ತಂದೆತಾಯಿಗಳೊಡನೆ ನಜರೇತಿಗೆ ಬಂದರು. ಅಲ್ಲಿ ಅವರಿಗೆ ವಿಧೇಯರಾಗಿ ನಡೆದುಕೊಳ್ಳುತ್ತಿದ್ದರು. ಈ ವಿಷಯಗಳನ್ನೆಲ್ಲಾ ತಾಯಿ ಮರಿಯಳು ತನ್ನ ಮನಸ್ಸಿನಲ್ಲಿ ಸಂಗ್ರಹಿಸಿ ಇಟ್ಟುಕೊಂಡಳು.
--------------------------

ಕೀರ್ತನೆ 89:1-4, 27, 29. ಶ್ಲೋಕ.36
ಚಿರಶಾಶ್ವತವಾಗಿರುವುದು ಅವನ ಸಂತತಿ
1 : ಪ್ರಭು, ಕೀರ್ತಿಸುವೆನು ಸದಾ ನಿನ್ನಚಲ ಪ್ರೀತಿಯನು / ಸಾರುವೆನು ತಲತಲಾಂತರಕು ನಿನ್ನ ಸತ್ಯತೆಯನು //2 : ನಿನ್ನಚಲ ಪ್ರೀತಿ ಪ್ರಭು, ನನಗೆ ಶಾಶ್ವತ ಸಿದ್ಧ / ನಿನ್ನ ಸತ್ಯತೆ ಆಗಸದಂತೆ ಸ್ಥಿರ ಸ್ಥಾಪಿತ //
3 : ನೀನೆಂದೆ, “ನಾನರಿಸಿದವನೊಡನೆ ಮಾಡಿರುವೆ ಒಪ್ಪಂದ / ನನ್ನ ದಾಸ ದಾವೀದನಿಗಿತ್ತಿರುವೆ ಈ ತೆರನಾದ ಶಪಥ : //
4 : “ಸ್ಥಾಪಿಸುವೆ ಶಾಶ್ವತವಾಗಿ ನಿನ್ನ ಸಂತತಿಯನು / ಸ್ಥಿರಪಡಿಸುವೆ ಯುಗಯುಗಕು ನಿನ್ನ ಸಿಂಹಾಸನವನು”//
5 : ಪ್ರಸಿದ್ಧಪಡಿಸುವುದು ಪ್ರಭು, ಗಗನವು ನಿನ್ನ ಮಹತ್ತನು / ಸಂಕೀರ್ತಿಸುವುದು ಸ್ವರ್ಗೀಯ ಸಭೆ, ನಿನ್ನ ಸತ್ಯತೆಯನು //
27 : ಮಾಡುವೆನವನನು ಜೇಷ್ಠ ಪುತ್ರನನ್ನಾಗಿ / ಭೂರಾಜರುಗಳೊಳು ಅತ್ಯುನ್ನತನನ್ನಾಗಿ //
28 : ಇರುವುದು ಎನ್ನಚಲ ಪ್ರೀತಿ ಅವನ ಮೇಲೆ ಶಾಶ್ವತವಾಗಿ / ಅವನೊಡನೆ ನಾ ಮಾಡಿದೊಪ್ಪಂದ ಸ್ಥಿರಸ್ಥಾಯಿಯಾಗಿ //
29 : ಉಳಿಸುವೆನು ಅವನ ಸಂತಾನವನು ನಿರಂತರವಾಗಿ / ಅವನ ಸಿಂಹಾಸನವಿರುವುದು ಗಗನದಂತೆ ಸ್ಥಿರವಾಗಿ //
---------------------------
41 : ಯೇಸುಸ್ವಾಮಿಯ ತಂದೆತಾಯಿಗಳು ಪ್ರತಿವರ್ಷವೂ ಪಾಸ್ಕಹಬ್ಬಕ್ಕೆ ಜೆರುಸಲೇಮಿಗೆ ಹೋಗುತ್ತಿದ್ದರು.
42 : ಯೇಸುವಿಗೆ ಹನ್ನೆರಡು ವರ್ಷವಾದಾಗ ವಾಡಿಕೆಯ ಪ್ರಕಾರ ಹಬ್ಬಕ್ಕೆ ಹೋದರು.
43 : ಹಬ್ಬ ಮುಗಿಸಿಕೊಂಡು ಅವರು ಹಿಂದಿರುಗಿ ಬರುವಾಗ ಬಾಲಕಯೇಸು ಜೆರುಸಲೇಮಿನಲ್ಲಿಯೇ ಉಳಿದುಬಿಟ್ಟರು.
44 : ಇದು ತಂದೆತಾಯಿಗಳಿಗೆ ತಿಳಿಯದು. ಮಗನು ಯಾತ್ರಿಕರ ಗುಂಪಿನಲ್ಲಿ ಬರುತ್ತಿರಬಹುದೆಂದು ಭಾವಿಸಿ ಒಂದು ದಿನದ ಪ್ರಯಾಣ ಬಂದುಬಿಟ್ಟಿದ್ದರು. ನಂತರ ಮಗನನ್ನು ಕಾಣದೆ ತಮ್ಮ ಬಂಧುಬಳಗದವರಲ್ಲೂ ಪರಿಚಿತರಲ್ಲೂ ಹುಡುಕಾಡಿದರು.
45 : ಅಲ್ಲೆಲ್ಲೂ ಕಾಣದೆ ಅವರನ್ನು ಹುಡುಕಿಕೊಂಡು ಜೆರುಸಲೇಮಿಗೆ ಮರಳಿ ಬಂದರು.
46 : ಮೂರು ದಿನಗಳ ಮೇಲೆ ಮಹಾದೇವಾಲಯದಲ್ಲಿ ಅವರನ್ನು ಕಂಡಾಗ ಅಲ್ಲಿ ಯೇಸು, ಬೋಧಕರ ಮಧ್ಯೆ ಕುಳಿತುಕೊಂಡು ಅವರ ಉಪದೇಶವನ್ನು ಆಲಿಸುತ್ತಾ ಅವರಿಗೆ ಪ್ರಶ್ನೆಹಾಕುತ್ತಾ ಇದ್ದರು.
47 : ಬಾಲಕನ ಪ್ರಶ್ನೋತ್ತರಗಳನ್ನು ಕೇಳುತ್ತಿದ್ದ ಎಲ್ಲರೂ ಆತನ ಜ್ಞಾನವನ್ನು ಕಂಡು ಬೆರಗಾದರು.
48 : ತಂದೆತಾಯಿಗಳು ಮಗನನ್ನು ಅಲ್ಲಿ ಕಂಡು ವಿಸ್ಮಯಗೊಂಡರು. ಆಗ ತಾಯಿಯು, “ಕಂದಾ, ನಮಗೆ ಏಕೆ ಹೀಗೆ ಮಾಡಿದೆ? ನಿನ್ನ ತಂದೆಯೂ ನಾನೂ ಎಷ್ಟೋ ಕಳವಳಪಟ್ಟು ನಿನ್ನನ್ನು ಹುಡುಕಾಡಿದೆವಲ್ಲಾ,” ಎಂದಳು.
49 : ಅದಕ್ಕೆ ಉತ್ತರವಾಗಿ ಯೇಸು, “ನೀವು ನನ್ನನ್ನು ಹುಡುಕಿದ್ದೇಕೆ? ನಾನು ನನ್ನ ತಂದೆಯ ಆಲಯದಲ್ಲೇ ಇರಬೇಕೆಂದು ನಿಮಗೆ ತಿಳಿಯದೆ ಹೋಯಿತೆ?” ಎಂದರು.
50 : ಆದರೆ ಅವರ ಮಾತು ತಂದೆತಾಯಿಗಳಿಗೆ ಅರ್ಥವಾಗಲಿಲ್ಲ.
51 : ಬಳಿಕ ಯೇಸು ತಂದೆತಾಯಿಗಳೊಡನೆ ನಜರೇತಿಗೆ ಬಂದರು. ಅಲ್ಲಿ ಅವರಿಗೆ ವಿಧೇಯರಾಗಿ ನಡೆದುಕೊಳ್ಳುತ್ತಿದ್ದರು. ಈ ವಿಷಯಗಳನ್ನೆಲ್ಲಾ ತಾಯಿ ಮರಿಯಳು ತನ್ನ ಮನಸ್ಸಿನಲ್ಲಿ ಸಂಗ್ರಹಿಸಿ ಇಟ್ಟುಕೊಂಡಳು.
--------------------------
ಚಿಂತನೆ
ಇಂದು ಧರ್ಮಸಭೆಯು ಮೇರಿಯ ಪತಿ, ಯೇಸುವಿನ ಸಾಕು ತಂದೆ ಸಂತ ಜೋಸೆಫರ ಹಬ್ಬವನ್ನು ಆಚರಿಸುತ್ತಿದೆ. ಶುಭಸಂದೇಶಗಳಲ್ಲಿ ಜೋಸೆಫರ ಬಗ್ಗೆ ಹೆಚ್ಚಿನ ಮಾಹಿತಿಗಳಿಲ್ಲ. ಅವರು `ನೀತಿವಂತರು’ ಎಂಬ ಒಂದೇ ಪದದಲ್ಲಿ ಅವರ ವ್ಯಕ್ತಿತ್ವವನ್ನು ಪ್ರಕಟಪಡಿಸುತ್ತೆ. ಕೇವಲ 14 ವರ್ಷದ ಮೇರಿಯನ್ನು ಮದುವೆಯಾಗುವ ಹೊತ್ತಿಗೆ ಸಂತ ಜೋಸೆಫರಿಗೆ ಬಹಳ ವಯಸಾಗಿತ್ತು. ಗಬ್ರಿಯೇಲ್ ದೂತ ಮೇರಿ ಮಾತೆಗೆ ಸಂದೇಶ ತರುವಾಗ ಮೇರಿ ಮತ್ತು ಜೋಸೆಫರಿಗೆ ಮದುವೆಯ ನಿಶ್ಚಯವಾಗಿತ್ತು. ಜೆರುಸಲೇಮ್ ದೇವಾಲಯದಲ್ಲಿ ಕಳೆದುಹೋಗಿದ್ದ ಯೇಸುವನ್ನು ಮರಳಿಕಂಡ ಘಟನೆಯ ನಂತರ ಜೋಸೆಫರ ಪ್ರಸ್ತಾಪವಿಲ್ಲ. ಯೇಸುಸ್ವಾಮಿ ತಮ್ಮ ಬಹಿರಂಗ ಬದುಕನ್ನು ಪ್ರಾರಂಭಿಸುವ ಮೊದಲೇ ಅವರು ಮೃತವಾಗಿರಬೇಕು. ಜೋಸೆಫರು ಶುಭಸಂದೇಶದಲ್ಲಿ ಮಾತನಾಡಿದ ಉಲ್ಲೇಖವಿಲ್ಲ. ಸದಾ ದೇವರ ಸ್ವರವನ್ನು ಆಲಿಸಿ ಅದರಂತೆ ಜೀವಿಸಿದವರು ಅವರು. ಮೌನವಾಗಿ ದೇವರ ಚಿತ್ತವನ್ನು ಪಾಲಿಸಿದವರು. ಮರಿಯಳ ಗೌರವಕ್ಕೆ ಕುಂದು ಬರದಂತೆ ನೋಡಿಕೊಂಡವರು, ಇವರ ಬದುಕು ನಮಗೆ ಆದರ್ಶ.
---------------------
ಪ್ರತಿ ಸಂತರ ಸ್ಮರಣೆ/ಹಬ್ಬ, ಆಚರಣೆಗಳ ಮೂಲಕ ನಮ್ಮನ್ನೂ ಒಂದಿಷ್ಟು ಬದಲಾವಣೆಗೆ, ಚಿಂತನೆಗೆ, ಸನ್ಮಾರ್ಗದ ಹಾದಿಗೆ ಕೊಂಡೊಯ್ಯಲೆಂದೇ ಕ್ರೈಸ್ತ ಧರ್ಮಸಭೆ ಪ್ರತಿದಿನ ಒಬ್ಬ ಸಂತರ ಸ್ಮರಣೆಗೆ ಅವಕಾಶ ಕಲ್ಪಿಸಿದೆ. ಈ ನಿಟ್ಟಿನಲ್ಲಿ ಇಂದು ತಾಯಿ ಧರ್ಮಸಭೆ ಕನ್ಯಾಮರಿಯಳ ಪತಿ ಸಂತ ಜೋಸೆಫರ ಹಬ್ಬವನ್ನು ಕೊಂಡಾಡಲು ಕರೆ ನೀಡುತ್ತದೆ.
ಸಂತ ಜೋಸೆಫರ ಬದುಕಲ್ಲಿ ಬೆಳಕನ್ನು ಅವಲೋಕಿಸ ಬಯಸುವವರಿಗೆ ಸಿಗುವ ಸನ್ನಿವೇಶಗಳು ವಿರಳ. ಕಾರಣ ಆತನದು ಒಂದು ರೀತಿ ತೆರೆ ಮರೆಯ ಬದುಕು. ಆದರೂ ಇಡೀ ಕ್ರೈಸ್ತ ಸಂಪ್ರದಾಯದ ಸಂತರುಗಳಲ್ಲಿ ಒಬ್ಬ ತಪಸ್ವಿಯಂತೆ ಕಾಣಸಿಗುವವ ಆತ. ಕಾರಣ ಒಬ್ಬ ತಪಸ್ವಿಯಂತೆ ಆತ ಮೌನಿ, ಒಬ್ಬ ವೈರಾಗಿ, ಮತ್ತು ದೈವಸ್ನೇಹಿ. ಶುಭಸಂದೇಶದ ಯಾವ ಮೂಲೆಯಲ್ಲೂ ಆತನ ಮಾತಿನ ಉಲ್ಲೇಖವಿರದ ದೃಶ್ಯ, ದೇವದೂತನ ಮಾತಿನಂತೆ ಮರಿಯಳನ್ನು ತನ್ನ ಮಡದಿಯಾಗಿ ಸ್ವೀಕರಿಸಿದರೂ “ಆಕೆಯೊಂದಿಗೆ ಶರೀರ ಸಂಬಂಧವಿಲ್ಲದೆ ಇದ್ದನು” ಎಂಬ ಶುಭಸಂದೇಶದಲ್ಲಿನ ಉಲ್ಲೇಖ ಆತ ಮೌನಿ, ವೈರಾಗಿ, ದೈವ ಸಂಕಲ್ಪವನ್ನು ಪಾಲಿಸುವವನು ಎಂಬುದನ್ನು ಸೂಚಿಸುತ್ತದೆ. ಜಗದ್ ರಕ್ಷಕನನ್ನು ತರುವ ಕಾರ್ಯದಲ್ಲಿ ಮರಿಯಳಷ್ಟೇ ಪಾತ್ರ ಜೋಸೆಫರದ್ದೂ ಆಗಿದ್ದರೂ, ಕ್ರಿಸ್ತ ಜನಿಸಿ ಬರಬೇಕಾದದ್ದು ತನ್ನ ವಂಶದಲ್ಲೇ ಎಂಬ ಸತ್ಯ ತಿಳಿದು ಬಿಗುಮಾನ ಪಡುವಂತಿದ್ದರೂ, ಮರೆಯಲ್ಲಿ ಬದುಕಿ ಯೇಸು ಮತ್ತು ಮರಿಯಳ ಬದುಕಿನ ಹಾದಿಗೆ ನೆರಳಾದವರು ಆ ತಪಸ್ವಿ ಜೋಸೆಫ್. ಕಂಡರೂ ಕಾಣದಂತೆ, ಇದ್ದರೂ ಇರದಂತೆ ಇದ್ದ ಆ ಮಹಾತ್ಮನ ಈ ಆದರ್ಶಗಳು ಮತ್ತೆ ಮತ್ತೆ ವಿಚಾರಕ್ಕೂ, ಆಲೋಚನೆಗೂ ಎಡೆಮಾಡಿಕೊಟ್ಟರೂ ಮರಿಯಳ ಸಂಭಾವಿತ ತಪ್ಪಿಗೆ ಆಕೆಯನ್ನು ಅವಮಾನಕ್ಕೆ ಗುರಿಮಾಡದೆ ನಿಶ್ಚಿತಾರ್ಥ ಮುರಿಯಬೇಕೆಂಬ ನಿರ್ಧಾರಕ್ಕೆ ಆತ ಬರುವುದರಲ್ಲಿದ್ದನು. ಆತನ ಈ ಮನೋಭಾವವು ಇಂದಿನ ಶುಭಸಂದೇಶದಲ್ಲಿನ ವ್ಯಭಿಚಾರಿಣಿ ಸ್ತ್ರೀಗೆ ಕ್ರಿಸ್ತ ತೋರಿದ ಉದಾರ ಮನೋಭಾವನೆಗೆ ಹತ್ತಿರವಾದದ್ದು ಮಾತ್ರವಲ್ಲ ಪರರ ಸಣ್ಣ ತಪ್ಪಿಗೂ ಬೆರಳುಮಾಡುವ ನಮ್ಮ ಕನಿಷ್ಟತೆಗೆ ನಮ್ಮನ್ನು ನಾಚಿಸುವಂತಹದ್ದು. ಇದು ಜೋಸೆಫರ ಸನ್ನುತ ಸಂತತೆ, ಇದು ಆತನ ನ್ಯಾಯ ತತ್ಪರತೆ. ಆತನ ಈ ಒಳಿತೇ ಮುಂದೆ ಮರಿಯಳಿಗೂ, ಕ್ರಿಸ್ತನಿಗೂ ಆಶ್ರಯದಾತನಾಗುವ ಅಮೋಘ ಆಹ್ವಾನ ನೀಡಿತು. ಜೋಸೆಫರಂತೆ ಬದುಕು ನೀಡುವ ಆಹ್ವಾನಗಳಲ್ಲಿ ಪರರಿಗೆ ನೆರಳಾಗಿ ಬದುಕುತ್ತಾ ಜೀವನವನ್ನು ಸುಂದರವಾಗಿಸೋಣ.

© 'ದನಿ' ಮಾಧ್ಯಮ ಮನೆ

No comments:
Post a Comment