Sunday, 26 April 2020

ಪಾಸ್ಕಕಾಲದ ಅರನೆಯ ಶನಿವಾರ

ಮೇ 23, 2020 ಶನಿವಾರ                                                        [ಬಿಳಿ]
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 18.23-28
ಕೀರ್ತನೆ 47: 1-2, 7-9 ಶ್ಲೋಕ.7
ದೇವನು ಭೂಮಂಡಲಕ್ಕೆಲ್ಲಾ ಒಡೆಯನು
[ಅಥವಾ] ಅಲ್ಲೆಲೂಯ, ಅಲ್ಲೆಲೂಯ, ಅಲ್ಲೆಲೂಯ
ಶುಭಸಂದೇಶ: ಯೊವಾನ್ನ 16.23-28
ಮೊದಲ ವಾಚನಪ್ರೇಷಿತರ ಕಾರ್ಯಕಲಾಪಗಳು 18.23-28
23 : ಅಲ್ಲಿ ಕೆಲಕಾಲವಿದ್ದು ಪುನಃ ಹೊರಟು ಗಲಾತ್ಯ ಮತ್ತು ಫ್ರಿಜಿಯ ಪ್ರದೇಶಗಳಲ್ಲಿ ಸಂಚರಿಸುತ್ತಾ ಭಕ್ತರೆಲ್ಲರನ್ನು ದೃಢಪಡಿಸಿದನು.
24 : ಅಲೆಕ್ಸಾಂಡ್ರಿಯದ ಅಪೊಲ್ಲೋಸ್ ಎಂಬ ಯೆಹೂದ್ಯನು ಎಫೆಸಕ್ಕೆ ಬಂದಿದ್ದನು. ಅವನೊಬ್ಬ ಉತ್ತಮ ಭಾಷಣಕಾರ ಹಾಗೂ ಪವಿತ್ರಗ್ರಂಥದಲ್ಲಿ ಪಾಂಡಿತ್ಯಪಡೆದವನು.
25 : ಪ್ರಭುವಿನ ಮಾರ್ಗದ ಬಗ್ಗೆ ಅವನಿಗೆ ಉಪದೇಶಮಾಡಲಾಗಿತ್ತು. ಸ್ನಾನಿಕ ಯೊವಾನ್ನನ ಸ್ನಾನದೀಕ್ಷೆ ಒಂದನ್ನೇ ಅವನು ಬಲ್ಲವನಾಗಿದ್ದನು. ಆದರೂ ಯೇಸುಸ್ವಾಮಿಯ ಬಗ್ಗೆ ಉತ್ಸಾಹಭರಿತನಾಗಿ ಉಪದೇಶಮಾಡಿ ಚ್ಯುತಿಯಿಲ್ಲದೆ ಬೋಧಿಸುತ್ತಾ ಬಂದನು.
26 : ಇವನು ಪ್ರಾರ್ಥನಾಮಂದಿರದಲ್ಲಿ ಧೈರ್ಯದಿಂದ ಮಾತನಾಡುತ್ತಿದ್ದಾಗ, ಪ್ರಿಸ್ಸಿಲ ಮತ್ತು ಅಕ್ವಿಲರು ಅವನ ಬೋಧನೆಯನ್ನು ಕೇಳಿದರು. ಅವನನ್ನು ಮನೆಗೆ ಕರೆದುಕೊಂಡು ಹೋಗಿ ಪ್ರಭುವಿನ ಮಾರ್ಗವನ್ನು ಇನ್ನೂ ಸೂಕ್ಷ್ಮವಾಗಿ ವಿವರಿಸಿದರು.
27 : ಇವನು ಅಖಾಯಕ್ಕೆ ಹೋಗಲು ಇಷ್ಟಪಟ್ಟಾಗ ಭಕ್ತಾದಿಗಳು ಅವನನ್ನು ಪ್ರೋತ್ಸಾಹಿಸಿ, ಅಖಾಯದ ಭಕ್ತಾದಿಗಳಿಗೆ ಪತ್ರ ಬರೆದು, ಇವನನ್ನು ಸ್ವಾಗತಿಸುವಂತೆ ಬಿನ್ನವಿಸಿದರು. ಇವನು ಅಲ್ಲಿಗೆ ಹೋಗಿ ದೇವರ ಕೃಪೆಯಿಂದ ವಿಶ್ವಾಸಿಗಳಾಗಿದ್ದವರಿಗೆ ಬಹುವಾಗಿ ನೆರವಾದನು.
28 : ಹೇಗೆಂದರೆ, ಪವಿತ್ರ ಗ್ರಂಥಾನುಸಾರ ಯೇಸುವೇ ಲೋಕೋದ್ಧಾರಕನೆಂದು ಖಚಿತಪಡಿಸಿ ಯೆಹೂದ್ಯರನ್ನು ಎಲ್ಲರ ಮುಂದೆ ಬಹಿರಂಗವಾಗಿ ಪ್ರತಿಭಟಿಸಿದನು.
ಕೀರ್ತನೆ 47: 2-3, 8-10 ಶ್ಲೋಕ.7
ದೇವನು ಭೂಮಂಡಲಕ್ಕೆಲ್ಲಾ ಒಡೆಯನು
2 : ಎತ್ತರದಲಿ ಸುಂದರ, ಉತ್ತರದಲಿ ಸಿಯೋನ್ ಶಿಖರ / ಆನಂದದಾಯಕ ರಾಜಾಧಿರಾಜನ ನಗರ //
3 : ಅದರ ಕೋಟೆಕೊತ್ತಲಗಳ ನಡುವೆ ದೇವನು / ತಾನೇ ಸುಭದ್ರ ದುರ್ಗವೆಂದು ತೋರಿಹನು //
8 : ವಹಿಸಿಕೊಂಡನು ದೇವನು ಸರ್ವಾಧಿಪತ್ಯ / ಅಲಂಕರಿಸಿಹನು ತನ್ನ ಪೂಜ್ಯ ಗದ್ದುಗೆಯ //
9 : ಒಟ್ಟುಗೂಡಿ ಬಂದರು ಪ್ರಜೆಯ ಪ್ರಮುಖರು / ಅಬ್ರಹಾಮನ ದೇವಜನರೊಡನೆ ಸೇರಿಕೊಂಡರು // ಭೂಪಾಲರೆಲ್ಲರೂ ದೇವರಿಗೆ ಅಧೀನರು / ಸರ್ವೋನ್ನತನು, ಸಾರ್ವಭೌಮನು ದೇವರು //

ಶುಭಸಂದೇಶ: ಯೊವಾನ್ನ 16.23-28
23 : ದಿನದಂದು ನನ್ನಿಂದ ನೀವೇನನ್ನೂ ಕೇಳುವಂತಿಲ್ಲ. ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನೀವು ಪಿತನಲ್ಲಿ ಏನನ್ನು ಬೇಡಿಕೊಂಡರೂ ನಿಮಗೆ ಅವರು ನನ್ನ ಹೆಸರಿನಲ್ಲಿ ಕೊಟ್ಟೇ ತೀರುವರು.
24 : ತನಕ ನನ್ನ ಹೆಸರಿನಲ್ಲಿ ನೀವೇನನ್ನೂ ಕೇಳಲಿಲ್ಲ. ಕೇಳಿ, ನಿಮಗೆ ದೊರಕುವುದು. ಆಗ ನಿಮ್ಮ ಆನಂದವು ತುಂಬಿ ತುಳುಕುವುದು. ಲೋಕದ ಮೇಲೆ ವಿಜಯ
25 : “ ಸಂಗತಿಗಳನ್ನೆಲ್ಲಾ ನಿಮಗೆ ಸಾಮತಿಗಳ ರೂಪದಲ್ಲಿ ತಿಳಿಸಿರುವೆನು. ಕಾಲವು ಬರಲಿದೆ. ಆಗ ಸಾಮತಿಗಳನ್ನು ಬಳಸದೆ ಸ್ಪಷ್ಟವಾದ ಮಾತಿನಲ್ಲಿ ಪಿತನನ್ನು ಕುರಿತು ನಿಮಗೆ ತಿಳಿಸುವೆನು.
26 : ಕಾಲವು ಬಂದಾಗ ನನ್ನ ಹೆಸರು ಹೇಳಿ ನೀವೇ ಪಿತನಲ್ಲಿ ಬೇಡುವಿರಿ. ನಿಮ್ಮ ಪರವಾಗಿ ನಾನು ಪಿತನಲ್ಲಿ ಬೇಡಿಕೊಳ್ಳುವೆನೆಂದು ನಾನು ಹೇಳುವುದಿಲ್ಲ
27 : ಕಾರಣ, ಪಿತನೇ ನಿಮ್ಮನ್ನು ಪ್ರೀತಿಸುತ್ತಾರೆ. ನೀವು ನನ್ನನ್ನು ಪ್ರೀತಿಸಿ ನಾನು ಅವರಿಂದ ಬಂದವನೆಂದು ವಿಶ್ವಾಸಿಸಿದ್ದರಿಂದ ಪಿತನಿಗೆ ನಿಮ್ಮ ಮೇಲೆ ಅಕ್ಕರೆಯಿದೆ.
28 : ಹೌದು, ನಾನು ಪಿತನಿಂದಲೇ ಹೊರಟು ಲೋಕಕ್ಕೆ ಬಂದಿದ್ದೇನೆ. ಈಗ ಲೋಕವನ್ನು ಬಿಟ್ಟು ಪಿತನಲ್ಲಿಗೆ ಹೋಗುತ್ತಿದ್ದೇನೆ,” ಎಂದರು.
---------------
ಪ್ರತಿಯೊಬ್ಬಒಳ್ಳೆಯ ತಂದೆ ತಾಯಿಗೆ ತನ್ನ ಮಕ್ಕಳ ಅವಶ್ಯಕತೆಗಳು ತಿಳಿದಿರುತ್ತವೆ. ಆ ಅವಶ್ಯಕತೆಗಳನ್ನು ಅವರು ಹೆಗಾದರು ಮಾಡಿ ನೆರೆವೇರುಸುತ್ತಾರೆ. ಏಕೆಂದರೆ ಅವರು ತಮ್ಮಮಕ್ಕಳ ಒಳ್ಳೆಯ ಜೀವನಕ್ಕೆ ಆ ಅವಶ್ಯಕತೆಗಳು ಅವಶ್ಯಕವೆಂದು ಚೆನ್ನಾಗಿ ತಿಳಿದಿರುತ್ತಾರೆ.
ನಾವೆಲ್ಲರು ನಮ್ಮ ತಂದೆ ತಾಯಿಯ ಮೂಲಕ ಬಂದವರು, ನಮ್ಮ ಸ್ರಷ್ಟಿ ಕರ್ತ ಆ ದೇವರು. ಆ ದೇವರಿಗೆ ನಮ್ಮ ಅವಶ್ಯಕತೆಗಳು ಏನೆಂಬುದು ಇನ್ನೂ ಚೆನ್ನಾಗಿ ತಿಳಿದಿರುತ್ತವೆ.
ಇಂದಿನ ಶುಭಸಂದೇಶದಲ್ಲಿಯೇಸುವು ನನ್ನ ನಾಮದಲ್ಲಿ ನೀವು ಪಿತನಲ್ಲಿ ಕೇಳಿದರೆ ಅದನ್ನು ಕೊಡಲಾಗುವುದು ಎಂದು ಹೇಳಿದ್ದಾರೆ. ಅಂದರೆ ನಮ್ಮ ಬೇಡಿಕೆಗಳು ದೇವರ ಸಾಮ್ರಾಜ್ಯವನ್ನು ಕಟ್ಟಲು ಸಹಾಯ ಮಾಡಬೇಕು. ನಮ್ಮ ಬೇಡಿಕೆಗಳು ದೇವರ ಚಿತ್ತವು ಒಂದೇ ಆದಲ್ಲಿ ಅದು ಕಂಡಿತ ನೆರವೇರುವುದು. ಲೌಕಿಕ ಆಸೆ ಆಕಾಂಕ್ಷೆಗಳನ್ನು ತೀರಿಸಿಕೊಳ್ಳಲು ನಮ್ಮ ಬೇಡಿಕೆಗಳನ್ನು ದೇವರ ಮುಂದೆ ಇಟ್ಟರೆ ಅವು ನಮ್ಮ ನಿರಾಶೆಗೆ ಕಾರಣವಾಗುತ್ತವೆ.
ಇಂದಿನ ಶುಭಸಂದೇಶದಲ್ಲಿ ಯೇಸುವು ಎಷ್ಟೋ ಮಾನವರು ತಮ್ಮ ಜೀವನದ ಅರ್ಥವನ್ನು ಹುಡುಕುವವರಿಗೆ ಉತ್ತರವನ್ನು ನೀಡುತ್ತಾರೆ. ಅದೆ ನಾವು ದೇವರಿಂದ ಬಂದವರು. ದೇವರ ಚಿತ್ತವನ್ನು ಅರಿತು ಈ ಭೂಮಿ ಬದುಕಿನ ಶ್ರಮವನ್ನು ಮುಗಿಸಿ ಮತ್ತೆ ದೇವರ ಬಳಿಗೆ ಹೋಗುತ್ತೇವೆ. ಈ ಒಂದು ಉತ್ತರವು ನಮಗೆ ಅರ್ಥಪೂರ್ಣ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ. ನಾವು ಇದರಲ್ಲಿ ವಿಶ್ವಾಸವಿಟ್ಟು ದೇವರ ಚಿತ್ತವನ್ನು ಅರಿಯುವ ಮನಸ್ಸಿಗಾಗಿ ಪ್ರಾರ್ಥಿಸೋಣ.
------------------
© 'ದನಿಮಾಧ್ಯಮ ಮನೆ






ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment