[ಹಸಿರು]
ಧನ್ಯ ನೈಕಿಟಾ ಬುಡ್ಕಾ ಮತ್ತು ವಸೈಲ್ ವೆಲಿಚ್ಕೋವ್ಸ್ಕಿ (ಐಚ್ಛಿಕ ಸ್ಮರಣೆ)
ಅಲೆಕ್ಸಾಂಡ್ರಿಯಾದ ಸಂತ ಸಿರಿಲ್ [ಧರ್ಮಾಧ್ಯಕ್ಷ / ಧರ್ಮಪಂಡಿತ]
(ಐಚ್ಛಿಕ ಸ್ಮರಣೆ)
ಮೊದಲ ವಾಚನ: ಪ್ರಲಾಪ 2.2, 10-14, 18-19
ಕೀರ್ತನೆ 74: 1-2, 3-7, 20-21. ಶ್ಲೋಕ.19
ನೀ ಮರೆತುಬಿಡ ಬೇಡ ನಿನ್ನ ದೀನದಲಿತರನು ಒಮ್ಮೆಗೆ
ಶುಭಸಂದೇಶ: ಮತ್ತಾಯ 8.5-17
ಕೀರ್ತನೆ 74: 1-2, 3-7, 20-21. ಶ್ಲೋಕ.19
ನೀ ಮರೆತುಬಿಡ ಬೇಡ ನಿನ್ನ ದೀನದಲಿತರನು ಒಮ್ಮೆಗೆ
ಧನ್ಯ ನೈಕಿಟಾ ಬುಡ್ಕಾ ಮತ್ತು ವಸೈಲ್ ವೆಲಿಚ್ಕೋವ್ಸ್ಕಿ (ಐಚ್ಛಿಕ ಸ್ಮರಣೆ)
ಅಲೆಕ್ಸಾಂಡ್ರಿಯಾದ ಸಂತ ಸಿರಿಲ್ [ಧರ್ಮಾಧ್ಯಕ್ಷ / ಧರ್ಮಪಂಡಿತ]
(ಐಚ್ಛಿಕ ಸ್ಮರಣೆ)
ಮೊದಲ ವಾಚನ: ಪ್ರಲಾಪ 2.2, 10-14, 18-19
ಕೀರ್ತನೆ 74: 1-2, 3-7, 20-21. ಶ್ಲೋಕ.19
ನೀ ಮರೆತುಬಿಡ ಬೇಡ ನಿನ್ನ ದೀನದಲಿತರನು ಒಮ್ಮೆಗೆ
ಶುಭಸಂದೇಶ: ಮತ್ತಾಯ 8.5-17
ಮೊದಲ ವಾಚನ: ಪ್ರಲಾಪ 2.2, 10-14, 18-19
2 : ಸ್ವಾಮಿ ಯಕೋಬಿನ ನಿವಾಸಗಳನ್ನು ನಾಶಪಡಿಸಿಹನು, ರೌದ್ರದಿಂದ ಯೆಹೂದ ಕೋಟೆಗಳನ್ನು ನೆಲಸಮವಾಗಿಸಿಹನು, ರಾಜ್ಯವನ್ನೂ ಅದರ ಪಾಲಕರನ್ನೂ ನೀಚಸ್ಥಿತಿಗೆ ಇಳಿಸಿಹನು.
10 : ತಲೆಯಮೇಲೆ ದೂಳನ್ನು ತೂರಿಕೊಂಡು ಗೋಣಿತಟ್ಟನ್ನು ಸೊಂಟಕ್ಕೆ ಸುತ್ತಿಕೊಂಡು ಕುಕ್ಕರಿಸಿಹರು ಸಿಯೋನ್ ನಗರಿಯ ಪ್ರಮುಖರು ತಲೆತಗ್ಗಿಸಿಹರು ಜೆರುಸಲೇಮಿನ ಯುವತಿಯರು.
11 : ಕಂಬನಿಗರೆದು ಇಂಗಿಹೋಗಿದೆ ಕಣ್ಣು ಕುದಿಯುತ್ತಿದೆ ನನ್ನೊಳಗೆ ಕರುಳು ! ನನ್ನ ಜನತೆಯೆಂಬ ಯುವತಿ ಹಾಳಾಗಿ ಮಕ್ಕಳು ಹಾದಿಬೀದಿಗಳಲ್ಲಿ ಮೂರ್ಛೆಹೋಗಿ ನನ್ನ ಕರುಳು ಕರಗಿಹೋಗಿದೆ ನೀರಾಗಿ.
12 : ‘ಅಮ್ಮಾ ತಿನ್ನಲಿಕ್ಕಿಲ್ಲವೆ? ಕುಡಿಯಲಿಕ್ಕಿಲ್ಲವೆ?’ ಎನ್ನುತ ಮಕ್ಕಳು ಮೂರ್ಛೆಗೊಂಡಿವೆ. ಗಾಯಗೊಂಡವರಂತೆ ನಗರದ ಚೌಕಗಳೊಳು ಪ್ರಾಣಬಿಡುತ್ತಿವೆಯಲ್ಲಾ ತಾಯಿಯ ಎದೆಯಮೇಲೆ ಆ ಹಸುಳೆಗಳು.
13 : ಎಲೌ ಜೆರುಸಲೇಮ್ ಯುವತಿಯೇ, ನಿನಗೆ ಏನು ಹೇಳಲಿ? ನಿನ್ನನ್ನು ಯಾವುದಕ್ಕೆ ಹೋಲಿಸಲಿ? ಸಿಯೋನ್ ಕನ್ಯೆಯೇ, ನಿನ್ನನ್ನು ಹೇಗೆ ಸಂತೈಸಲಿ? ಸಂತೈಸುವ ಸಾಮತಿಯನ್ನು ಎಲ್ಲಿಂದ ತರಲಿ? ನಿನಗೊದಗಿರುವ ನಾಶ ಸಾಗರದಂತೆ ಅಪಾರ ನಿನ್ನನ್ನು ಸ್ವಸ್ಥಗೊಳಿಸಲು ಯಾರಿಂದ ತಾನೆ ಸಾಧ್ಯ?
14 : ನಿನ್ನ ಪ್ರವಾದಿಗಳು ಕಂಡ ದರ್ಶನದಲ್ಲಿ ಸಾರವಿಲ್ಲ, ಅರ್ಥವಿಲ್ಲ. ನಿನ್ನ ದೋಷಗಳನ್ನು ಬೈಲಿಗಳೆಯಲು ಅವರಿಂದಾಗಲಿಲ್ಲ. ಈ ಕಾರಣ, ನಿನ್ನ ದುರವಸ್ಥೆಯನ್ನು ತಡೆಗಟ್ಟಲಾಗಲಿಲ್ಲ. ನಿನ್ನ ಬಗ್ಗೆ ಅವರು ನುಡಿದ ದೈವೋಕ್ತಿಗಳು ವ್ಯರ್ಥವಾದುವು. ನೀನು ಗಡಿಪಾರಾಗಿ ಹೋಗಲು ಅವು ಆಸ್ಪದವಾದುವು.
18 : ನಿನ್ನ ಜನರು ಮೊರೆಯಿಡಲಿ ಮನಃಪೂರ್ವಕವಾಗಿ ಸಿಯೋನ್ ನಗರದ ಕೋಟೆಗೆ ಕೋಟೆಯೇ ಕಣ್ಣೀರಿಡಲಿ. ಹಗಲಿರುಳು ಕಂಬನಿ ಹರಿಯಲಿ ತೊರೆಯಂತೆ ನಿಮ್ಮ ನೇತ್ರಗಳಿಂದ ಸುರಿಯಲಿ ಒಂದೇ ಸಮನೆ.
19 : ರಾತ್ರಿಯ ಒಂದೊಂದು ಜಾವದಲ್ಲೂ ಎದ್ದುಗೋಳಾಡಿರಿ. ನಿಮ್ಮ ಹೃದಯ ಕರಗಿ, ನೀರಾಗಿ ಸ್ವಾಮಿಯ ಮುಂದೆ ಹರಿಯಲಿ. ನಿಮ್ಮ ಮಕ್ಕಳ ಪ್ರಾಣವನ್ನು ಉಳಿಸಬೇಕೆಂದು ಕೈ ಮುಗಿದು ಪ್ರಾರ್ಥನೆಮಾಡಿ. ಹಸಿವಿನಿಂದ ಅವು ಮೂರ್ಛೆಹೋಗಿವೆ, ಬೀದಿಯ ಮೂಲೆಮೂಲೆಗಳಲ್ಲಿ.
ಕೀರ್ತನೆ 74: 1-2, 3-7, 20-21. ಶ್ಲೋಕ.19
ನೀ ಮರೆತುಬಿಡ ಬೇಡ ನಿನ್ನ ದೀನದಲಿತರನು ಒಮ್ಮೆಗೆ
1 : ಹೇ ದೇವಾ, ನಮ್ಮನೀಪರಿ ವರ್ಜಿಸಿಬಿಟ್ಟೆ ಏಕೆ? / ನೀ ಪಾಲಿಪ ಮಂದೆಯ ಮೇಲೀಗ ಉರಿಗೋಪವೇಕೆ? //
2 : ನೆನಸಿಕೊ ಆದಿಯಲೆ ನೀ ಸಂಪಾದಿಸಿಕೊಂಡ ಸಭೆಯನು / ಸ್ಮರಿಸಿಕೊ ಸೊತ್ತಾಗ ನೀ ರಕ್ಷಿಸಿಕೊಂಡ ಗೋತ್ರವನು / ಜ್ಞಾಪಿಸಿಕೊ ನಿನ್ನ ಸದನವಾಗಿದ್ದ ಸಿಯೋನ್ ಶಿಖರವನು //
3 : ಬಿಜಯಮಾಡು ಪಾಳುಬಿದ್ದಿರುವ ಹಳೆಯ ಆಲಯಕೆ / ಶತ್ರು ಕೆಡವಿಹನು ನೋಡು ಗರ್ಭಗುಡಿಯನೇ ಕೆಳಕೆ //
4 : ವೈರಿಗಳಾರ್ಭಟ ನಿನ್ನ ದರ್ಶನಾಲಯದ ಮಧ್ಯೆಯಲಿ / ಅವರ ಜಯ ಬಾವುಟ ಪವಿತ್ರ ಚಿಹ್ನೆಗಳಿಗೆ ಪ್ರತಿಯಾಗಿ //
5 : ಕಾಡಿನಲೋ ಎಂಬಂತೆ ಕೊಡಲಿಯನೆತ್ತಿ ಹಿಡಿದು / ದೇಗುಲದಲಿ ಕೈಗೊಡಲಿ, ಚಮಟಿಗಳ ಪಿಡಿದು /
6 : ನಾಶಮಾಡುತಿಹರು ನೋಡು ಕೆತ್ತನೆಗಳ ಕಡಿದು //
7 : ಅಗ್ನಿಗಾಹುತಿ ಮಾಡಿಹರು ನಿನ್ನ ನಾಮದ ಮಂದಿರವನು / ಹೊಲಸುಮಾಡಿ, ನೆಲಸಮಮಾಡಿಹರಿದೊ ನಿನ್ನ ದೇಗುಲವನು //
20 : ನಿನ್ನೊಡಂಬಡಿಕೆಯನು ಗಮನವಿಟ್ಟು ಮಾನ್ಯಮಾಡು / ಕಗ್ಗತ್ತಲಿಗು, ಬಾಧಕರಿಗು ಬೀಡಾಗಿದೆ ನಾಡು //
21 : ಕುಗ್ಗಿದವರು ಹಿಂದಿರುಗದಿರಲಿ ಅವಮಾನದಿಂದ / ಬಡವರು ಕೀರ್ತಿಸಲಿ ನಿನ್ನ ನಾಮವನು ಭಕ್ತಿಯಿಂದ //
ಶುಭಸಂದೇಶ: ಮತ್ತಾಯ 8.5-17
5 : ಯೇಸುಸ್ವಾಮಿ ಕಫೆರ್ನವುಮ್ ಊರಿಗೆ ಬಂದಾಗ ಶತಾಧಿಪತಿಯೊಬ್ಬನು ಅವರನ್ನು ಎದುರುಗೊಂಡನು.
6 : “ಪ್ರಭೂ, ನನ್ನ ಸೇವಕ ಮನೆಯಲ್ಲಿ ಪಾಶ್ರ್ವವಾಯು ರೋಗದಿಂದ ಹಾಸಿಗೆ ಹಿಡಿದಿದ್ದಾನೆ. ಬಹಳವಾಗಿ ನರಳುತ್ತಿದ್ದಾನೆ,” ಎಂದು ವಿನಂತಿಸಿದನು.
7 : ಯೇಸು, “ನಾನೇ ಬಂದು ಅವನನ್ನು ಗುಣಪಡಿಸುತ್ತೇನೆ,” ಎಂದರು
8 : ಅದಕ್ಕೆ ಆ ಶತಾಧಿಪತಿ, “ಪ್ರಭುವೇ, ತಾವು ನನ್ನ ಮನೆಗೆ ಬರುವಷ್ಟು ಯೋಗ್ಯತೆ ನನಗಿಲ್ಲ. ತಾವು ಒಂದೇ ಒಂದು ಮಾತು ಹೇಳಿದರೆ ಸಾಕು, ನನ್ನ ಸೇವಕ ಸ್ವಸ್ಥನಾಗುವನು.
9 : ಏಕೆಂದರೆ, ನಾನೂ ಮತ್ತೊಬ್ಬರ ಕೈಕೆಳಗಿರುವವನು. ನನ್ನ ಅಧೀನದಲ್ಲೂ ಸೈನಿಕರಿದ್ದಾರೆ. ಅವರಲ್ಲಿ ಒಬ್ಬನಿಗೆ ನಾನು, ‘ಬಾ’ ಎಂದರೆ ಬರುತ್ತಾನೆ. ಇನ್ನೊಬ್ಬನಿಗೆ, ‘ಹೋಗು’ ಎಂದರೆ ಹೋಗುತ್ತಾನೆ. ಸೇವಕನಿಗೆ, ‘ಇಂಥದ್ದನ್ನು ಮಾಡು’ ಎಂದರೆ ಮಾಡುತ್ತಾನೆ," ಎಂದನು.
10 : ಈ ಮಾತನ್ನು ಕೇಳಿದ್ದೇ ಯೇಸುವಿಗೆ ಅತ್ಯಾಶ್ಚರ್ಯವಾಯಿತು. ತಮ್ಮನ್ನು ಹಿಂಬಾಲಿಸಿ ಬರುತ್ತಿದ್ದ ಜನರನ್ನು ನೋಡಿ ಹೀಗೆಂದರು: "ಇಂಥ ಗಾಢ ವಿಶ್ವಾಸವನ್ನು ನಾನು ಇಸ್ರಯೇಲ್ ಜನರಲ್ಲಿ ಕೂಡ ಕಾಣಲಿಲ್ಲವೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ.
11 : ಪೂರ್ವ ಪಶ್ಚಿಮ ದಿಕ್ಕುಗಳಿಂದ ಅನೇಕ ಜನರು ಬಂದು ಅಬ್ರಹಾಮ, ಇಸಾಕ, ಯಕೋಬರ ಸಮೇತ ಸ್ವರ್ಗಸಾಮ್ರಾಜ್ಯದ ಹಬ್ಬದೂಟದಲ್ಲಿ ಭಾಗಿಗಳಾಗುವರು.
12 : ಆದರೆ ಯಾರು ಈ ಸಾಮ್ರಾಜ್ಯಕ್ಕೆ ಬಾಧ್ಯಸ್ಥರೋ ಅವರನ್ನೇ ಹೊರಗೆ ದಬ್ಬಲಾಗುವುದು; ಅಲ್ಲಿ, ಆ ಕಾರ್ಗತ್ತಲಲ್ಲಿ, ಅವರ ಗೋಳಾಟವೇನು! ಹಲ್ಲು ಕಡಿತವೇನು!"
13 : ಅನಂತರ ಯೇಸು ಆ ಶತಾಧಿಪತಿಗೆ, "ಇನ್ನು ಮನೆಗೆ ಹೋಗು, ನೀನು ವಿಶ್ವಾಸಿಸಿದಂತೆಯೇ ಆಗುವುದು," ಎಂದರು. ಅದೇ ಕ್ಷಣದಲ್ಲಿ ಅವನ ಸೇವಕನು ಸ್ವಸ್ಥನಾದನು.
14 : ತರುವಾಯ ಯೇಸುಸ್ವಾಮಿ ಪೇತ್ರನ ಮನೆಗೆ ಬಂದರು. ಅಲ್ಲಿ ಪೇತ್ರನ ಅತ್ತೆ ಜ್ವರದಿಂದ ಮಲಗಿರುವುದನ್ನು ಕಂಡರು.
15 : ಯೇಸು ಆಕೆಯ ಕೈ ಮುಟ್ಟಿದುದೇ ಜ್ವರ ಬಿಟ್ಟುಹೋಯಿತು, ಆಕೆ ಎದ್ದು ಅವರನ್ನು ಸತ್ಕರಿಸಿದಳು.
16 : ಸಂಜೆಯಾಯಿತು. ದೆವ್ವ ಹಿಡಿದಿದ್ದ ಅನೇಕರನ್ನು ಯೇಸುವಿನ ಬಳಿಗೆ ಕರೆತರಲಾಯಿತು. ಯೇಸು ತಮ್ಮ ಒಂದು ಮಾತಿನಿಂದಲೇ ದೆವ್ವಗಳನ್ನು ಬಿಡಿಸಿದರು. ಮಾತ್ರವಲ್ಲ, ರೋಗಪೀಡಿತರೆಲ್ಲರನ್ನೂ ಗುಣಪಡಿಸಿದರು.
17 : ಹೀಗೆ, "ನಮ್ಮ ದುರ್ಬಲತೆಗಳನ್ನು ವಹಿಸಿಕೊಂಡನು; ನಮ್ಮ ರೋಗರುಜಿನಗಳನ್ನು ಆತನೇ ಪರಿಹರಿಸಿದನು," ಎಂಬ ಯೆಶಾಯನ ಪ್ರವಾದನೆ ಈಡೇರಿತು.
----------------------
ಯೇಸು ಸ್ವಾಮಿಯು ಶತಾಧಿಪತಿಯ ಸೇವಕನನ್ನು ಮತ್ತು ಪೇತ್ರನ ಅತ್ತೆಯನ್ನು ಗುಣಪಡಿಸುವುದನ್ನು ಇಂದಿನ ಶುಭಸಂದೇಶದ ವಾಚನದಿಂದ ಕೇಳುತ್ತೇವೆ. ಶತಾಧಿಪತಿಯ ವಿಶ್ವಾಸವನ್ನು ಅವನ ಆಡುವ ಮಾತುಗಳೇ ಬಹಿರಂಗಪಡಿಸುತ್ತಿವೆ: “ಪ್ರಭುವೇ, ತಾವು ನನ್ನ ಮನೆಗೆ ಬರುವಷ್ಟು ಯೋಗ್ಯತೆ ನನಗಿಲ್ಲ. ತಾವು ಒಂದೇ ಒಂದು ಮಾತು ಹೇಳಿದರೆ ಸಾಕು, ನನ್ನ ಸೇವಕ ಸ್ವಸ್ಥನಾಗುವನು.” ಅವನದು ಗಾಢವಾದ ವಿಶ್ವಾಸ. ಶತಾಧಿಪತಿ ನುಡಿಯುವ ಮಾತನ್ನೇ ನಾವು ಪರಮ ಪ್ರಸಾದವನ್ನು ಸ್ವೀಕರಿಸುವ ಮನ್ನ ಹೇಳಿ ನಮ್ಮ ಅಯೋಗ್ಯತೆಯನ್ನು ಪ್ರಭುವಿಗೆ ನಿವೇದಿಸುತ್ತೇವೆ. ಶತಾಧಿಪತಿಯ ಬೇಡಿಕೆಯನ್ನು ಈಡೇರಿಸಿದಂತೆ ಕ್ರಿಸ್ತರು ನಮ್ಮ ಬೇಡಿಕೆಗಳನ್ನು ಸಹ ಈಡೇರಿಸುತ್ತಾರೆ. ಆದರೆ ಒಂದು ಷರತ್ತಿನೊಂದಿಗೆ; ಅದೇನೆಂದರೆ ನಮ್ಮಲ್ಲಿ ವಿಶ್ವಾಸವಿರಬೇಕು, ನಮ್ಮ ವಿಶ್ವಾಸ ನಮ್ಮ ಬದುಕಿನಲ್ಲಿ ಅದ್ಭುತಗಳಾಗುವಂತೆ ಮಾಡುವುದರಲ್ಲಿ ಅನುಮಾನವೇ ಇಲ್ಲ. ಎರಡನೆಯದಾಗಿ ಶತಾಧಿಪತಿಯಲ್ಲಿದ್ದ ನಮ್ರತೆ. ಅದೇ ನಮ್ರತೆಯಿಂದ ನಾವು ಕ್ರಿಸ್ತನನ್ನು ಸ್ವೀಕರಿಸಬೇಕು. ಸಂತ ಜಾನ್ ಕ್ರಿಸೊಸ್ಟೊಮ್ ಹೇಳುವಂತೆ ನಮ್ರತೆ ಎಂಬುವುದು ಎಲ್ಲಾ ಸದ್ಗುಣಗಳ ಮೂಲ, ಅಡಿಪಾಯ ಮತ್ತು ತಾಯಿಬೇರು. ಹೌದು ವಿಶ್ವಾಸದಿಂದ ಕ್ರಿಸ್ತನಲ್ಲಿ ನಮ್ಮ ಬೇಡಿಕೆಗಳನ್ನು ಇಡೋಣ ಮತ್ತು ನಮ್ರತೆಯಿಂದ ಕ್ರಿಸ್ತನನ್ನು ನಮ್ಮ ಹೃದಯಕ್ಕೆ ಬರಮಾಡಿಕೊಳೋಣ.
-------------------------
ಇಂದಿನ ಶುಭಸಂದೇಶವು ಒಬ್ಬ ಶತಾಧಿಪತಿಯೊಬ್ಬನ ಅತಿಶಯ ವಿಶ್ವಾಸ ಪ್ರಕಟಣೆಯ ಬಗ್ಗೆ ತಿಳಿಸುತ್ತದೆ. “ನನ್ನ ಮನೆಗೆ ಬರಮಾಡಿಕೊಳ್ಳುವ ಯೋಗ್ಯತೆ ನನಗಿಲ್ಲ” ಯೇಸುವಿಗೆ ಹೇಳುವ ಶತಾಧಿಪತಿಯ ಈ ಮಾತು ಆತನ ವಿನಯತೆ, ದೀನತೆಯನ್ನು ತೋರಿಸುತ್ತದೆ. ಇನ್ನೊಂದು ಕಡೆ “ಒಂದೇ ಮಾತು ಸಾಕು, ನನ್ನ ಸೇವಕನ್ನು ಗುಣಹೊಂದುವನು” ಎಂಬ ಮಾತು ಯೇಸುವಿನ ಸಾಮರ್ಥ್ಯ ಬಗ್ಗೆ ಆತನ ವಿಶ್ವಾಸವನ್ನು ತೋರ್ಪಡಿಸುತ್ತದೆ. ಶತಾಧಿಪತಿಯಲ್ಲಿದ್ದ ವಿಶ್ವಾಸ, ದೀನತೆ ನಮಗೂ ದೇವರು ನೀಡಲಿ. ನಮಗೋಸ್ಕರ ಮಾತ್ರ ಪ್ರಾರ್ಥಿಸದೆ ಪರರಿಗೋಸ್ಕರವು ಪ್ರಾರ್ಥಿಸುವವರಾಗಲು ದೇವರು ವರ ನೀಡಲೆಂದು ಪ್ರಾರ್ಥಿಸೋಣ.
-------------------------------------
No comments:
Post a Comment